ವೆನೆಜುವೆಲಾ ದಾಳಿ | ಜಗತ್ತಿನೆದುರು ಬೆತ್ತಲಾದ ಅಮೆರಿಕ ದುಷ್ಟತನ ಮತ್ತು ಟ್ರಂಪ್ ಕಿಡಿಗೇಡಿತನ

Date:

ಬಲಿಷ್ಠ ಅಮೆರಿಕದ ಸಾಮ್ರಾಜ್ಯಶಾಹಿ ದಾಹ, ಆರ್ಥಿಕ ಹಿತಾಸಕ್ತಿಯನ್ನು ಉಗ್ರವಾಗಿ ಖಂಡಿಸಿ, ವೆನೆಜುವೆಲಾ ಜನತೆಯ ಸಾರ್ವಭೌಮತೆಯ ಜೊತೆಗೆ ನಿಲ್ಲದಿದ್ದರೆ- ಇವತ್ತು ವೆನೆಜುವೆಲಾಗೆ ಆಗಿದ್ದು, ನಾಳೆ ನಮಗೂ ಆಗಬಹುದು. 

ಮಾದಕವಸ್ತು ಕಳ್ಳಸಾಗಾಣಿಕೆ ಮತ್ತು ಭಯೋತ್ಪಾದನೆ ಆರೋಪಕ್ಕೆ ಸಂಬಂಧಿಸಿದಂತೆ, ವೆನೆಜುವೆಲಾ ಅಧ್ಯಕ್ಷ ನಿಕೊಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಅಮೆರಿಕ ಬಂಧಿಸಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್ ಜೈಲಿನಲ್ಲಿಟ್ಟಿದೆ. ಇಂದು ಮ್ಯಾನ್‌ಹಟನ್‌ನ ಫೆಡರಲ್ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

ಇದೇ ಸಂದರ್ಭದಲ್ಲಿ ಅತ್ತ ಪುಟ್ಟ, ಸ್ವತಂತ್ರ ರಾಷ್ಟ್ರ ವೆನೆಜುವೆಲಾದಲ್ಲಿ ಅಧಿಕಾರ ವರ್ಗಾವಣೆ ಕಗ್ಗಂಟಾಗಿದೆ. ಅರಾಜಕತೆ ಸೃಷ್ಟಿಯಾಗಿದೆ. ಉಪಾಧ್ಯಕ್ಷ ಡೆಲ್ಸಿ ರಾಡ್ರಿಗಸ್ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವಂತೆ ವೆನೆಜುವೆಲಾ ನ್ಯಾಯಾಲಯ ಆದೇಶಿಸಿದೆ. ಆದರೆ ಅವರಿಗೆ ಅಮೆರಿಕ ಸೇನೆಯ ಭಯವಿದೆ. ಅಮೆರಿಕ ಸೇನೆಗೆ ವೆನೆಜುವೆಲಾ ಮೇಲೆ ಯಾವುದೇ ನಿಯಂತ್ರಣ ಇಲ್ಲದಿರುವ ಕಾರಣ, ಅಲ್ಲಿನ ಆಡಳಿತವನ್ನು ಹೇಗೆ ನಿರ್ವಹಿಸಬೇಕೆಂಬುದು ಸ್ಪಷ್ಟವಾಗಿಲ್ಲ. ಅಧಿಕಾರ ವರ್ಗಾವಣೆ ಕುರಿತ ಅನಿಶ್ಚಿತತೆ ಮುಂದುವರೆದಿದೆ.  

ಇದನ್ನು ಓದಿದ್ದೀರಾ?: ‘ಯುದ್ಧದ ಕೃತ್ಯ’: ಮಡುರೊ ಸೆರೆಗೆ ಮಮ್ದಾನಿ ಖಂಡನೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ವೆನೆಜುವೆಲಾದಲ್ಲಿ ಅಧಿಕಾರವು ನಾವು ಬಯಸಿದ ರೀತಿಯಲ್ಲಿ ವರ್ಗಾವಣೆಯಾಗುವವರೆಗೂ ಆ ದೇಶದ ಆಡಳಿತವನ್ನು ನೋಡಿಕೊಳ್ಳಲಿದ್ದೇವೆ’ ಎಂದು ಘೋಷಿಸಿದ್ದಾರೆ. ಒಟ್ಟಿನಲ್ಲಿ ಸ್ವತಂತ್ರ ರಾಷ್ಟ್ರ ವೆನೆಜುವೆಲಾದ ಮೇಲೆ ಸಾಮ್ರಾಜ್ಯಶಾಹಿ ಅಮೆರಿಕದ ಕೆಂಗಣ್ಣು ಬಿದ್ದಿದೆ. ಬಂಡವಾಳಶಾಹಿ ಹಿತಾಸಕ್ತಿಗಳ ಟ್ರಂಪ್, ಅದನ್ನು ಕಾರ್ಯರೂಪಕ್ಕಿಳಿಸುತ್ತಿದ್ದಾರೆ.

ವೆನೆಜುವೆಲಾ ಈ ಮೊದಲು ಸ್ಪೇನ್ ವಸಾಹತು ಕಾಲನಿಯಾಗಿದ್ದು, ಈಗ ಸ್ವತಂತ್ರ ರಾಷ್ಟ್ರವಾಗಿತ್ತು. ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿತ್ತು. ಜನರಿಂದ ಆಯ್ಕೆಯಾದ ಜನನಾಯಕರು ಎಡಪಂಥೀಯ ವಿಚಾರಧಾರೆ ಮತ್ತು ಸಮಾಜವಾದಿ ಸಿದ್ಧಾಂತವನ್ನು ಅಳವಡಿಸಿಕೊಂಡಿದ್ದು, ಇಡೀ ಪ್ರಪಂಚದಲ್ಲಿಯೇ ಅತ್ಯುತ್ತಮ ಪಾರದರ್ಶಕ ಚುನಾವಣಾ ಪ್ರಕ್ರಿಯೆಗೆ ಒಳಪಡುವ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಸರು ಗಳಿಸಿತ್ತು.

trump maduro

ನಿಸರ್ಗದತ್ತ ಅತಿ ಹೆಚ್ಚು ತೈಲ ನಿಕ್ಷೇಪಗಳನ್ನು ಹೊಂದಿರುವ ವೆನೆಜುವೆಲಾ, ಶೇ. 80ರಷ್ಟು ಕಚ್ಚಾ ತೈಲವನ್ನು ಹೊರದೇಶಗಳಿಗೆ ರಫ್ತು ಮಾಡುವ ಮೂಲಕ ಅರ್ಥವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿತ್ತು. ಇದಷ್ಟೆ ಅಲ್ಲದೆ, ಅನಿಲ, ಚಿನ್ನ, ಬಾಕ್ಸೈಟ್, ನಿಕ್ಕಲ್, ಕಾಪರ್, ಕೋಲ್ಟೇನ್ ನಿಕ್ಷೇಪಗಳನ್ನು ಹೊಂದಿದ್ದು ಸಂಪದ್ಭರಿತ ದೇಶವೆನಿಸಿಕೊಂಡಿತ್ತು. ಆದರೆ ವೆನೆಜುವೆಲಾ ಕಚ್ಚಾ ತೈಲವನ್ನಷ್ಟೇ ರಫ್ತು ಮಾಡುತ್ತಿದ್ದು, ಅದರ ಸಂಸ್ಕರಿತ ತೈಲದ ಒಡೆತನ ಅಮೆರಿಕದ ಕೈಯಲ್ಲಿತ್ತು. ಹಲವಾರು ವರ್ಷಗಳ ಹೋರಾಟದ ಫಲವಾಗಿ ವೆನೆಜುವೆಲಾ ಸ್ಪೇನ್ ವಸಾಹುತುವಿನಿಂದ ಮುಕ್ತಿ ಪಡೆದು ಸ್ವತಂತ್ರ ರಾಷ್ಟ್ರವಾದರೂ, ದೈತ್ಯ ಅಮೆರಿಕದ ಕಪಿಮುಷ್ಟಿಯಿಂದ ಹೊರಬರಲು ಆಗಿರಲಿಲ್ಲ. ಕಚ್ಚಾ ತೈಲವನ್ನು ಅಮೆರಿಕಕ್ಕಷ್ಟೇ ಮಾರಾಟ ಮಾಡುವ ಒಪ್ಪಂದ ಮಾಡಿಕೊಂಡರೂ, ದುಷ್ಟ ಅಮೆರಿಕದ ಕುತಂತ್ರ-ಕಿರುಕುಳಗಳಿಂದ ಪಾರಾಗಲು ಸಾಧ್ಯವಾಗಿರಲಿಲ್ಲ.

ಇಲ್ಲಿಯವರೆಗೆ ದುಷ್ಟ ಅಮೆರಿಕ ಪುಟ್ಟ ದೇಶವಾದ ವೆನೆಜುವೆಲಾದ ಮೇಲೆ ಸುಮಾರು 27 ವರ್ಷಗಳಿಂದ ಎಂಟು ಬಾರಿ ಕ್ರಿಪ್ರ ಕ್ರಾಂತಿಗಳನ್ನು ಹುಟ್ಟುಹಾಕಿದೆ, ಸೋತಿದೆ. ಆದರೆ ಈಗ ಅಮೆರಿಕ ಟ್ರಂಪ್ ಕೈವಶವಾಗಿರುವುದರಿಂದ, ಆತ ಈ ಹಿಂದಿನ ಅಮೆರಿಕದ ಅಧ್ಯಕ್ಷರಂತಲ್ಲದಿರುವುದರಿಂದ, ನೇರವಾಗಿಯೇ ದಾಳಿಗೆ ಇಳಿದಿದ್ದಾರೆ. ವೆನೆಜುವೆಲಾದ ಚುನಾಯಿತ ಅಧ್ಯಕ್ಷ ಮತ್ತವರ ಪತ್ನಿಯನ್ನು ಬಂಧಿಸಿದ್ದಾರೆ.

ಅಮೆರಿಕದ ಈ ಕ್ರಮವನ್ನು ಜಗತ್ತಿನ ಹಲವು ರಾಷ್ಟ್ರಗಳು ಮತ್ತವುಗಳ ನಾಯಕರು ನೇರವಾಗಿ ಖಂಡಿಸಿದರೂ ವಲಸೆ, ಮಾದಕದ್ರವ್ಯ ಕಳ್ಳಸಾಗಾಣಿಕೆ ಮತ್ತು ಭಯೋತ್ಪಾದನೆಯನ್ನು ಹತ್ತಿಕ್ಕಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕ ಹೇಳಿಕೊಂಡಿದೆ. ಮೇಲ್ನೋಟಕ್ಕೆ ಇದು ಕಾರಣ ಎಂದು ಕಂಡರೂ ಈ ಕಾರ್ಯಾಚರಣೆಯ ಹಿಂದೆ ತಂತ್ರವಿದೆ, ಹಲವು ಉದ್ದೇಶಗಳಿವೆ. ಅವುಗಳಲ್ಲಿ ಮುಖ್ಯವಾದುದು ವೆನೆಜುವೆಲಾದ ತೈಲ ನಿಕ್ಷೇಪಗಳು. ಅದರ ಮೇಲೆ ಕಣ್ಣಿಟ್ಟಿರುವ ಅಮೆರಿಕ ಅಲ್ಲಿನ ಸರ್ಕಾರದ ಮೇಲೆ ಹಿಡಿತ ಸಾಧಿಸಲು ಕಳೆದ 27 ವರ್ಷಗಳಿಂದ ಯತ್ನಿಸುತ್ತಲೇ ಇತ್ತು. ಚೀನಾ, ರಷ್ಯಾಗಳಿಗೆ ಹತ್ತಿರವಾಗಿ ತನ್ನ ವಿರುದ್ಧ ತೊಡೆ ತಟ್ಟಿರುವ ವೆನೆಜುವೆಲಾ ಸರ್ಕಾರವನ್ನು ಕಿತ್ತು ಒಗೆದು, ಅಲ್ಲಿ ತನ್ನನ್ನು ಬೆಂಬಲಿಸುವ ಸರ್ಕಾರವನ್ನು ಸ್ಥಾಪಿಸಲು ಹವಣಿಸುತ್ತಿತ್ತು. ಅದನ್ನು ಈಗ ಸಾಧಿಸಿಕೊಂಡಿದೆ.

ಅಮೆರಿಕಾ ಸಂಯುಕ್ತ ಸಂಸ್ಥಾನದ, ವೆನೆಜುವೆಲಾ ಮೇಲಿನ ದಾಳಿ ಮತ್ತು ಅಧ್ಯಕ್ಷ ಮಡುರೊ ಬಂಧನ, ಯಾವ ಕಾರಣದಿಂದಲೂ ನ್ಯಾಯಸಮ್ಮತವಾದುದಲ್ಲ. ಅಮೆರಿಕ ಜಗತ್ತಿನ ಮುಂದೆ ಇಡುತ್ತಿರುವ ನಾರ್ಕೋ-ಭಯೋತ್ಪಾದನೆ ಮತ್ತು ಸರ್ವಾಧಿಕಾರದ ವಿರುದ್ಧದ ಹೋರಾಟವು ಅಂತಾರಾಷ್ಟ್ರೀಯ ನಿಯಮಗಳನ್ನು ಮತ್ತು ನಾಗರಿಕ ನಡವಳಿಕೆಗಳನ್ನು ಬಹಿರಂಗವಾಗಿಯೇ ಉಲ್ಲಂಘಿಸಿದಂತಾಗುತ್ತದೆ. ಈ ಹಸ್ತಕ್ಷೇಪವು ಪ್ರಜಾಪ್ರಭುತ್ವದ ಜಾಗತಿಕ ಕಾವಲುಗಾರ ಎಂದು ಎದೆಯುಬ್ಬಿಸಿ ಹೇಳಿಕೊಳ್ಳುವ ರಾಷ್ಟ್ರವನ್ನು ಅನುಮಾನದಿಂದ ನೋಡುವಂತೆ ಮಾಡುತ್ತದೆ.  

ಅಸಲಿಗೆ, ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಸಾರ್ವಭೌಮ ರಾಷ್ಟ್ರಗಳ ರಾಜಕಾರಣದಲ್ಲಿ, ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿದ ದೀರ್ಘ ಇತಿಹಾಸವೇ ಇದೆ. ಅದೆಲ್ಲವೂ ಆ ದೇಶಕ್ಕೆ ಅಪಖ್ಯಾತಿ ತಂದಿದೆ. ಈ ಹಿಂದೆ ಮೆಕ್ಸಿಕೋದಿಂದ ಕ್ಯೂಬಾ, ಹೈಟಿ, ಬ್ರೆಜಿಲ್, ಚಿಲಿ, ಪನಾಮಾಗಳಂತಹ ದೇಶಗಳು ಅಮೆರಿಕಾದ ಹಸ್ತಕ್ಷೇಪಕ್ಕೆ ಭಾರೀ ಬೆಲೆ ತೆತ್ತಿವೆ. ನೆಪಗಳು ಬದಲಾಗಬಹುದು, ಆದರೆ ಮೂಲ ಮಂತ್ರ ಒಂದೇ ಆಗಿದೆ. ಈ ಮಂತ್ರ-ತಂತ್ರಗಳು: ಕಮ್ಯುನಿಸಂನಿಂದ ಪ್ರಜಾಪ್ರಭುತ್ವವನ್ನು ಉಳಿಸುವುದು; ಭಯೋತ್ಪಾದನೆ ನಿಗ್ರಹಿಸುವುದು; ಮಾದಕವಸ್ತು ಕಳ್ಳಸಾಗಾಣಿಕೆಯನ್ನು ತಡೆಗಟ್ಟುವುದು; ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಪರಿಹರಿಸುವುದು; ರಾಷ್ಟ್ರಗಳನ್ನು ಸ್ಥಿರಗೊಳಿಸುವುದಾಗಿದೆ. ಅಂತಿಮವಾಗಿ ಬಳಲುವುದು ಯಾವಾಗಲೂ ಉಲ್ಲಂಘಿತ ರಾಷ್ಟ್ರಗಳೇ ಆಗಿವೆ.

ಪ್ರಜಾಪ್ರಭುತ್ವವನ್ನು ರಕ್ಷಿಸುವ ಅಥವಾ ಪ್ರಾದೇಶಿಕ ಸ್ಥಿರತೆಯನ್ನು ಕಾಪಾಡುವ ನೆಪದಲ್ಲಿ ನಡೆಸುವ ಹಸ್ತಕ್ಷೇಪವು ತತ್ವಕ್ಕಿಂತ ಹೆಚ್ಚಾಗಿ ತಂತ್ರಗಳಿಂದ ಕೂಡಿದ್ದಾಗಿದೆ. ಆರ್ಥಿಕ ಆಸಕ್ತಿಗಳಿಂದ ಪ್ರೇರಿತವಾಗಿದೆ. ಅದರಲ್ಲೂ ವಿಶೇಷವಾಗಿ ವೆನೆಜುವೆಲಾದ ವಿಶಾಲ ತೈಲ ನಿಕ್ಷೇಪಗಳ ಮೇಲಿನ ಹಿಡಿತ ಸಾಧಿಸುವ ಷಡ್ಯಂತ್ರವಿದೆ. ಹಾಗೆಯೇ ಅಮೆರಿಕಾದ ಹಸ್ತಕ್ಷೇಪದ ನಂತರ ಆ ರಾಷ್ಟ್ರಗಳ ಸಾಂವಿಧಾನಿಕ ಸಂಸ್ಥೆಗಳು ದುರ್ಬಲಗೊಂಡಿವೆ, ಅಸ್ಥಿರತೆ ದೀರ್ಘಕಾಲೀನವಾಗಿದೆ, ನಾಗರಿಕರು ಕಷ್ಟಕ್ಕೆ ಒಳಗಾಗಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಅಮೆರಿಕಾದಿಂದ ನಿಯೋಜನೆಗೊಂಡ ಸರ್ಕಾರಗಳು, ಸ್ಥಳೀಯ ಜನರ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡಿವೆ. ಅಮೆರಿಕಾದ ಇಂತಹ ವಿಸ್ತರಣಾವಾದವು, ರಾಷ್ಟ್ರಗಳಿಗೆ ತಮ್ಮ ಸ್ವಂತ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಮೂಲಭೂತ ಹಕ್ಕನ್ನು ನಿರಾಕರಿಸುತ್ತದೆ.  

ವೆನೆಜುವೆಲಾದ ನಿಕೊಲಸ್ ಮಡುರೊ ಅವರ ಬಂಧನವು 1989ರ ಪನಾಮಾ ಆಕ್ರಮಣವನ್ನು ಹಾಗೂ ಮ್ಯಾನುಯೆಲ್ ನೊರಿಗಾ ಅವರ ಬಂಧನವನ್ನು ನೆನಪಿಸುತ್ತಿದೆ. ಇದು ಕೂಡ ಮಾದಕ ದ್ರವ್ಯ ಕಳ್ಳಸಾಗಣೆ ಆರೋಪಗಳ ಮೇಲೆ ನ್ಯಾಯಸಮ್ಮತಗೊಳಿಸಲಾದ ಮತ್ತೊಂದು ಘಟನೆ. ಆ ಹಸ್ತಕ್ಷೇಪವು ನೂರಾರು ನಾಗರಿಕರ ಮಾರಣಹೋಮಕ್ಕೆ ಕಾರಣವಾಯಿತು. ನಂತರ ಅಮೆರಿಕಾ ಬೆಂಬಲಿತ ಸರ್ಕಾರವನ್ನು ಸ್ಥಾಪಿಸಿತು. ಇದರ ಫಲವಾಗಿ ಪನಾಮಾ ದ್ವೀಪರಾಷ್ಟ್ರ ದೀರ್ಘಕಾಲೀನ ರಾಜಕೀಯ ಅಸ್ಥಿರತೆಯನ್ನು ಎದುರಿಸಬೇಕಾಯಿತು. ಮತ್ತು ಸಾಮಾಜಿಕ ಪರಿಣಾಮಗಳನ್ನು ಅನುಭವಿಸಬೇಕಾಯಿತು.

trump maduro1

ಈಗ ಅದೇ ಮಂತ್ರ-ತಂತ್ರಗಳನ್ನು ವೆನೆಜುವೆಲಾದ ಮೇಲೂ ಪ್ರಯೋಗಿಸಲಾಗುತ್ತಿದೆ. ಅಮೆರಿಕದ ಅಧ್ಯಕ್ಷ ಟ್ರಂಪ್, ‘ನಾವು ಬಯಸಿದ ರೀತಿಯಲ್ಲಿ ವರ್ಗಾವಣೆಯಾಗುವವರೆಗೂ ಆ ದೇಶದ ಆಡಳಿತವನ್ನು ನೋಡಿಕೊಳ್ಳಲಿದ್ದೇವೆ’ ಎಂದಿದ್ದಾರೆ. ಅಂದರೆ ಅಮೆರಿಕ ಬಯಸುವ ರೀತಿಯ ಆಡಳಿತ ಎಂಬುದು ಸ್ಪಷ್ಟ. ಈ ಹೇಳಿಕೆ ಲ್ಯಾಟಿನ್ ಅಮೆರಿಕ ರಾಷ್ಟ್ರಗಳಲ್ಲಿ ಆತಂಕವನ್ನು ಹೆಚ್ಚಿಸಿದೆ. ವೆನೆಜುವೆಲಾ ಜನತೆ ಮುಂದೆ ದೀರ್ಘಕಾಲೀನ ಅಸ್ಥಿರತೆ, ಅಧಿಕಾರದ ಛಿದ್ರತೆ ಮತ್ತು ವಿದೇಶಿ ಆಸಕ್ತಿಗಳಿಂದ ರೂಪಿಸಲ್ಪಟ್ಟ ಭವಿಷ್ಯವನ್ನು ಕಣ್ಣೆದುರು ತಂದು ನಿಲ್ಲಿಸುತ್ತಿದೆ.

ಏತನ್ಮಧ್ಯೆ, ಯುದ್ಧ ಮಾಡಬಾರದು ಎಂದು ಜಗತ್ತಿಗೆ ಉಪದೇಶ ಮಾಡುತ್ತಲೇ ಅಧಿಕಾರಕ್ಕೆ ಬಂದ ಟ್ರಂಪ್, ಇರಾನ್ ಮೇಲೆ ಯುದ್ಧ ಸಾರಿದರು. ಹದಿನೈದು ದಿನಗಳ ಹಿಂದೆ ಇದೇ ನಿಕ್ಷೇಪಗಳಿಗಾಗಿ ನೈಜೀರಿಯಾ ಮೇಲೆ ಬಾಂಬ್ ಹಾಕಿದರು. ಈಗ ವೆನೆಜುವೆಲಾ ಮೇಲೆ ದಾಳಿ ಮಾಡಿದ್ದಾರೆ. ಭಾರತ-ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸಿದ್ದು ನಾನೆ ಎಂದು ಹೇಳಿಕೊಳ್ಳುವ ಟ್ರಂಪ್, ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಹಪಾಹಪಿಸಿದ್ದೂ ಇದೆ.

ಇತ್ತೀಚೆಗೆ, ಎಪ್‌ಸ್ಟೀನ್ ಫೈಲ್‌ಗಳಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಹೆಸರು ಬಯಲಾದ ನಂತರ, ಅಮೆರಿಕದ ಜನತೆಗೆ ಅವರ ಮೇಲಿನ ವಿಶ್ವಾಸ ಹೋಗಿದೆ. ಅದು ಅವರ ಸ್ಥಾನಮಾನ ಮತ್ತು ಪ್ರತಿಷ್ಠೆಗೆ ಧಕ್ಕೆ ತಂದು ವ್ಯಕ್ತಿತ್ವಕ್ಕೆ ಹಾನಿಯುಂಟುಮಾಡಿದೆ. ಇದರಿಂದ ಅಮೆರಿಕನ್ನರ ಗಮನವನ್ನು ಬೇರೆಡೆಗೆ ಸೆಳೆಯುವ ಸಲುವಾಗಿ ಟ್ರಂಪ್, ವೆನೆಜುವೆಲಾ ಮೇಲೆ ದಾಳಿ ಮಾಡಿ, ಅಧ್ಯಕ್ಷ ಮಡುರೊ ಬಂಧಿಸುವ ನಾಟಕಕ್ಕೆ ಕೈ ಹಾಕಿದ್ದಾರೆಂಬ ವಿಶ್ಲೇಷಣೆಗಳೂ ಇವೆ.  

ಇದನ್ನು ಓದಿದ್ದೀರಾ?: ಪುಟ್ಟಪರ್ತಿ ಸಾಯಿಬಾಬಾ ಭಕ್ತರಾಗಿದ್ದ ವೆನೆಜುವೆಲಾ ಮಾಜಿ ಅಧ್ಯಕ್ಷ ನಿಕೋಲಸ್‌ ಮಡುರೊ

ಅಮೆರಿಕದ ಸಾಮ್ರಾಜ್ಯಶಾಹಿ ದುಷ್ಟತನವನ್ನು ಹಾಗೂ ಅಧ್ಯಕ್ಷ ಟ್ರಂಪ್ ಅವರ ಬಂಡವಾಳಶಾಹಿ ಕಿಡಿಗೇಡಿ ಕೃತ್ಯವನ್ನು ಬಲಿಷ್ಠ ರಾಷ್ಟ್ರಗಳೆನಿಸಿಕೊಂಡ ಚೀನಾ, ರಷ್ಯಾ ಖಂಡಿಸಿವೆ. ಆದರೆ ಭಾರತದ ಪ್ರಧಾನಿ ಮೋದಿಯವರು ಯಥಾಪ್ರಕಾರ, ಟ್ರಂಪ್ ಪರ ಮೃದುಧೋರಣೆ ತಳೆದು, ನೆಪಮಾತ್ರದ ಹೇಳಿಕೆ ನೀಡಿ ಕೈ ತೊಳೆದುಕೊಂಡಿದ್ದಾರೆ. ವಿಶ್ವಸಂಸ್ಥೆ ಕೂಡ ಪಕ್ಷಪಾತಿಯಾಗಿಯೇ ವರ್ತಿಸಿದೆ. ಬಲಿಷ್ಠ ಅಮೆರಿಕದ ಸ್ವಾರ್ಥ, ವಿಸ್ತರಣಾದಾಹವನ್ನು ಉಗ್ರವಾಗಿ ಖಂಡಿಸಿ, ವೆನೆಜುವೆಲಾ ಜನತೆಯ ಸಾರ್ವಭೌಮತೆಯ ಜೊತೆಗೆ ನಿಲ್ಲದಿದ್ದರೆ- ಇವತ್ತು ವೆನೆಜುವೆಲಾಗೆ ಆಗಿದ್ದು, ನಾಳೆ ನಮಗೂ ಆಗಬಹುದು. 

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...