ಎಡ್ವಿನ್ ಲುಟ್ಯನ್ ಪ್ರತಿಮೆ ಕಿತ್ತೊಗೆದು ರಾಜಾಜಿ ಪ್ರತಿಮೆ ಸ್ಥಾಪನೆಯ ಹಿಂದೆ ಮೋದಿ ಚುನಾವಣಾ ಗಿಮಿಕ್?

Date:

ಸಿ. ರಾಜಗೋಪಾಲಾಚಾರಿ (ರಾಜಾಜಿ) ತಮಿಳುನಾಡಿನವರು. ಇನ್ನು ಕೆಲವೇ ತಿಂಗಳುಗಳಲ್ಲಿ ತಮಿಳುನಾಡು ಚುನಾವಣೆಯೂ ಇರಲಿದೆ. ಹಾಗಿರುವಾಗ ಎಡ್ವಿನ್ ಲುಟ್ಯನ್ ಪ್ರತಿಮೆ ತೆಗೆದು ರಾಜಾಜಿ ಪ್ರತಿಮೆ ಸ್ಥಾಪಿಸುವುದು ದಕ್ಷಿಣ ಭಾರತದ ಜನರಿಗೆ ಗೌರವ ನೀಡಿದಂತೆ ಎಂಬ ರಾಜಕೀಯ ಲೆಕ್ಕಾಚಾರವೂ ಇದೆ.

ಬ್ರಿಟಿಷ್ ಕಾಲದ ಪ್ರಸಿದ್ಧ ವಾಸ್ತುಶಿಲ್ಪಿ, ನವದೆಹಲಿಯ ಬಹುತೇಕ ಭಾಗದ ವಿನ್ಯಾಸದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಡ್ವಿನ್ ಲೂಟ್ಯನ್ಸ್ (Edwin Lutyens) ಪ್ರತಿಮೆಯನ್ನು ತೆರವುಗೊಳಿಸಿ ಸ್ವತಂತ್ರ ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್ ಸಿ. ರಾಜಗೋಪಾಲಾಚಾರಿ ಅವರ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆ. ವಿವಿಧ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವುದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಡೆಸುತ್ತಿರುವ ಈ ರಾಜಕೀಯ ತಂತ್ರ ಸದ್ಯ ತೀವ್ರ ಚರ್ಚೆಗೆ ಒಳಗಾಗುತ್ತಿದೆ. ರಾಜಾಜಿ ಪ್ರತಿಮೆ ಸ್ಥಾಪನೆಗೆ ವಿರೋಧವಿಲ್ಲದಿದ್ದರೂ ಎಡ್ವಿನ್ ಲುಟ್ಯನ್ ಪ್ರತಿಮೆ ಕಿತ್ತೊಗೆಯುವುದಕ್ಕೆ ವಿಪಕ್ಷಗಳಿಂದ ವಿರೋಧ ವ್ಯಕ್ತವಾಗಿದೆ.

ಕೇಂದ್ರ ಸರ್ಕಾರವು ಭಾರತವು ಬ್ರಿಟಿಷರ ಗುಲಾಮಗಿರಿಯ ಸಂಕೇತಗಳಿಂದ ಮುಕ್ತವಾಗಬೇಕು ಎಂದು ಹೇಳಿಕೊಂಡು ‘ಡಿ-ಕಲೋನೈಸೇಶನ್’ (De-colonization) ಅಭಿಯಾನವನ್ನು ನಡೆಸುತ್ತಿದೆ. ಇದರ ಭಾಗವಾಗಿಯೇ ರಾಜಪಥ್‌ ಅನ್ನು ‘ಕರ್ತವ್ಯ ಪಥ’ ಎಂದು ಬದಲಾಯಿಸಿ, ಅಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಸ್ಥಾಪಿಸಿದೆ. ಲುಟ್ಯನ್ ವಿನ್ಯಾಸಗೊಳಿಸಿದ ಹಳೆಯ ಸಂಸತ್ ಭವನದ ಬದಲಿಗೆ ಹೊಸ ‘ಸೆಂಟ್ರಲ್ ವಿಸ್ಟಾ’ ನಿರ್ಮಿಸುವ ಮೂಲಕ ಬ್ರಿಟಿಷ್ ವಾಸ್ತುಶಿಲ್ಪದ ಮೇಲಿನ ಅವಲಂಬನೆಯನ್ನು ತೊರೆಯುವುದೇ ನಮ್ಮ ಉದ್ದೇಶ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ಆದರೆ ಇಲ್ಲಿರುವ ರಾಜಕೀಯವನ್ನು, ಚುನಾವಣಾ ಗಿಮಿಕ್ ಅನ್ನು ವಿಪಕ್ಷಗಳು ಪ್ರಶ್ನಿಸುತ್ತಿದ್ದಂತೆ ರಾಷ್ಟ್ರವ್ಯಾಪ್ತಿಯಲ್ಲಿ ಈ ವಿಚಾರ ಹೆಚ್ಚು ಪ್ರಚಲಿತವಾಗುತ್ತಿದೆ.

ಇದನ್ನು ಓದಿದ್ದೀರಾ? ಅಂಬೇಡ್ಕರ್ ಪ್ರತಿಮೆ ಧ್ವಂಸ : ಪರಿಸ್ಥಿತಿ ಉದ್ವಿಗ್ನ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಷ್ಟಕ್ಕೂ ಎಡ್ವಿನ್ ಲುಟ್ಯನ್ ಯಾರು?

ಎಡ್ವಿನ್ ಲುಟ್ಯನ್ ಇಪ್ಪತ್ತನೇ ಶತಮಾನದ ಬ್ರಿಟಿಷ್ ವಾಸ್ತುಶಿಲ್ಪಿ. ದೇಶದ ಇಂದಿನ ರಾಜಧಾನಿ ನವದೆಹಲಿಯ ವಿನ್ಯಾಸ ಮತ್ತು ನಿರ್ಮಾಣದಲ್ಲಿ ಲುಟ್ಯನ್ ಪಾತ್ರ ಅಗಾಧವಾಗಿದೆ. ಈ ಕಾರಣಕ್ಕಾಗಿಯೇ ದೆಹಲಿಯ ಕೇಂದ್ರ ಭಾಗವನ್ನು ಇಂದಿಗೂ ‘ಲುಟ್ಯನ್ ದೆಹಲಿ’ ಎಂದೇ ಕರೆಯಲಾಗುತ್ತದೆ. 1911ರಲ್ಲಿ ಬ್ರಿಟಿಷ್ ಸರ್ಕಾರವು ಭಾರತದ ರಾಜಧಾನಿಯನ್ನು ಕೋಲ್ಕತ್ತಾದಿಂದ ದೆಹಲಿಗೆ ಬದಲಾಯಿಸಲು ನಿರ್ಧರಿಸಿದಾಗ, ಹೊಸ ನಗರವನ್ನು ವಿನ್ಯಾಸಗೊಳಿಸುವ ಜವಾಬ್ದಾರಿಯನ್ನು ಲುಟ್ಯನ್ ಅವರಿಗೆ ನೀಡಲಾಗಿತ್ತು.
ಯುರೋಪಿಯನ್ ಶಾಸ್ತ್ರೀಯ ಶೈಲಿಯನ್ನು ಭಾರತೀಯ ಶೈಲಿಯೊಂದಿಗೆ ಅದ್ಭುತವಾಗಿ ಬೆರೆಸಿದವರು ಲುಟ್ಯನ್. ಕಟ್ಟಡದ ಮೇಲೆ ಸಾಂಚಿ ಸ್ತೂಪದ ಮಾದರಿಯಲ್ಲಿ ‘ಗುಮ್ಮಟ’, ಜೈಪುರ ಸ್ತಂಭ, ಜಾಲರಿಗಳನ್ನು ಬಳಸುವ ಮೂಲಕ ಭಾರತೀಯ ಸೌಂದರ್ಯವನ್ನೂ ತುಂಬಿದವರು. ರಾಷ್ಟ್ರಪತಿ ಭವನದ ಹಿಂಭಾಗದಲ್ಲಿರುವ ಈ ಹಿಂದಿನ ‘ಮೊಘಲ್ ಗಾರ್ಡನ್’ ಸದ್ಯ ‘ಅಮೃತ್ ಉದ್ಯಾನ್’ ಎಂದು ಮರುನಾಮಕರಣ ಮಾಡಲಾಗಿರುವ ಸುಂದರ ಉದ್ಯಾನವನವನ್ನು ಅವರೇ ವಿನ್ಯಾಸಗೊಳಿಸಿದರು.

ಮೊದಲ ಮಹಾಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಸೈನಿಕರ ನೆನಪಿಗಾಗಿ ನಿರ್ಮಿಸಲಾದ ಇಂಡಿಯಾ ಗೇಟ್ ಸ್ಮಾರಕದ ವಿನ್ಯಾಸವೂ ಲುಟ್ಯನ್ ಮಾಡಿರುವುದು. ಇದರ ಶೈಲಿಯು ಪ್ಯಾರಿಸ್‌ನ ‘ಆರ್ಕ್ ಡಿ ಟ್ರಯಂಫ್’ ನಿಂದ ಪ್ರೇರಿತವಾಗಿದೆ. ಸದ್ಯ ಸಂಸದೀಯ ವಸ್ತುಸಂಗ್ರಹಾಲಯವಾಗಿರುವಹಳೆಯ ಸಂಸತ್ ಭವನವನ್ನು ವಿನ್ಯಾಸಗೊಳಿಸಿದ್ದು ಲುಟ್ಯನ್ ಸಹೋದ್ಯೋಗಿ ಹರ್ಬರ್ಟ್ ಬೇಕರ್. ಆದರೆ ಇಡೀ ಪ್ರದೇಶದ ಲೇಔಟ್ ಮತ್ತು ಯೋಜನೆಯಲ್ಲಿ ಲುಟ್ಯನ್ ನಿರ್ದೇಶನ ಮತ್ತು ಮಾರ್ಗದರ್ಶನ ಪ್ರಮುಖವಾಗಿತ್ತು. ಹೀಗೆ ಭಾರತದ ವಾಸ್ತುಶಿಲ್ಪಕ್ಕೆ ಲುಟ್ಯನ್ ಕೊಡುಗೆಯೂ ಇದೆ.

ಆದರೆ ಸದ್ಯ ನಡೆಯುತ್ತಿರುವುದು ಇತಿಹಾಸ ತಿರುಚುವ ಯತ್ನದ್ದಂತಿದೆ. ಈಗಾಗಲೇ ಹಲವು ಪ್ರದೇಶಗಳಲ್ಲಿ ಐತಿಹಾಸಿಕ ಸ್ಮಾರಕಗಳ ಹೆಸರನ್ನು ಬದಲಾಯಿಸಲಾಗಿದೆ. ಇದೀಗ ಲುಟ್ಯನ್ ಪ್ರತಿಮೆ ವಿಚಾರದಲ್ಲಿಯೂ ನಡೆಯುತ್ತಿರುವುದು ಅದೇ. ‘ಲುಟ್ಯನ್ ದೆಹಲಿ’ ಎಂಬುದು ಒಂದು ಬ್ರಿಟಿಷ್ ಹೆಸರಾಗಿರಬಹುದು. ಆದರೆ ಅದು ಭಾರತದ ಇತಿಹಾಸದ ಭಾಗ. ಆದರೆ ಈ ಇತಿಹಾಸವನ್ನು ಮರೆಮಾಚುವ ಪ್ರಯತ್ನ ಬಿಜೆಪಿ ಸರ್ಕಾರದ್ದು ಎಂಬುದು ವಿರೋಧ ಪಕ್ಷಗಳ ವಾದ. ಈ ವಾದವೂ ಸಮರ್ಥನೀಯ. ಮೋದಿ ಸರ್ಕಾರದ ಇತಿಹಾಸವೇ ಇದ್ದಕ್ಕೆ ಸಾಕ್ಷಿ. ಜತೆ ಜೆತೆಗೆ ತಮ್ಮ ನಿರಂಕುಶವಾದಿ ಆಡಳಿತವನ್ನೂ ಅಘೋಷಿತವಾಗಿ ನಡೆಸುತ್ತಿದೆ. 2023ರಲ್ಲಿ ಹೊಸ ಸಂಸತ್ ಭವನದ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಲೋಕಸಭೆಯ ಸ್ಪೀಕರ್ ಆಸನದ ಪಕ್ಕದಲ್ಲಿ ‘ಸೆಂಗೋಲ್’ (ರಾಜದಂಡ) ಸ್ಥಾಪಿಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಇದು ಪ್ರಜಾಪ್ರಭುತ್ವದ ಸಂಕೇತವಲ್ಲ, ಬದಲಿಗೆ ರಾಜಪ್ರಭುತ್ವದ ಸಂಕೇತ ಎಂಬುದನ್ನು ನಾವು ಅಲ್ಲಗಳೆಯಲಾಗದು.

ಈ ಹಿಂದೆ ಉತ್ತರ ಪ್ರದೇಶ ಅಲಹಾಬಾದ್ ನಗರವನ್ನು 2018ರಲ್ಲಿ ‘ಪ್ರಯಾಗ್‌ರಾಜ್’ ಎಂದು ಮರುನಾಮಕರಣ ಮಾಡಲಾಗಿದೆ. ಯುಪಿಯ ಫೈಜಾಬಾದ್ ಜಿಲ್ಲೆಯನ್ನು ‘ಅಯೋಧ್ಯಾ’ ಎಂದು ಬದಲಾಯಿಸಲಾಗಿದೆ. ಹರಿಯಾಣದ ಗುರ್ಗಾಂವ್ ನಗರವನ್ನು 2016ರಲ್ಲಿ ‘ಗುರುಗ್ರಾಮ್’ ಎಂದು ಮರುನಾಮಕರಣ ಮಾಡಲಾಗಿದೆ. ಮಹಾರಾಷ್ಟ್ರದ ಔರಂಗಾಬಾದ್ ನಗರದ ಹೆಸರನ್ನು 2023ರಲ್ಲಿ ಛತ್ರಪತಿ ಸಂಭಾಜಿನಗರ ಎಂದು ಬದಲಾಯಿಸಲಾಗಿದೆ. ಮಹಾರಾಷ್ಟ್ರದ ಉಸ್ಮಾನಾಬಾದ್ ನಗರವನ್ನು ‘ಧಾರಾಶಿವ’ ಎಂದು ಹೆಸರಿಸಲಾಗಿದೆ. ಮಧ್ಯಪ್ರದೇಶದ ಹೋಶಂಗಾಬಾದ್ ನಗರವನ್ನು ‘ನರ್ಮದಾಪುರಂ’ ಎಂದು ಬದಲಾಯಿಸಲಾಗಿದೆ. ಇಷ್ಟು ಮಾತ್ರವಲ್ಲದೆ ಅಂಡಮಾನ್‌ನ ಮೂರು ದ್ವೀಪಗಳ ಹೆಸರನ್ನೂ ಬದಲಾಯಿಸಲಾಗಿದೆ. ರೊಸ್ ದ್ವೀಪವನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ, ನೀಲ್ ದ್ವೀಪವನ್ನು ಶಹೀದ್ ದ್ವೀಪ, ಹ್ಯಾವ್ಲಾಕ್ ದ್ವೀಪವನ್ನು ಸ್ವರಾಜ್ ದ್ವೀಪ ಎಂದು ಮರುನಾಮಕರಣ ಮಾಡಲಾಗಿದೆ. ಇದೇ ರೀತಿ ಹಲವು ಐತಿಹಾಸಿಕ ಪ್ರತಿಮೆಗಳನ್ನು ತೆಗೆದುಹಾಕಿ ತಮಗೆ ಬೇಕಾದಂತಹ ಇತಿಹಾಸವನ್ನು ಮಾತ್ರ ಉಳಿಸಿಕೊಳ್ಳುವ ಪ್ರತಿಮೆಗಳನ್ನು ನಿರ್ಮಿಸುವ ಕಾರ್ಯವನ್ನು ಮಾಡುತ್ತಲೇ ಬಂದಿದೆ.

ಇದನ್ನು ಓದಿದ್ದೀರಾ? ಕ್ರಿಸ್ಮಸ್ ದಾಂಧಲೆ: 6 ಬಜರಂಗಿಗಳಿಗೆ ಜಾಮೀನು; ಕೋಮುವಾದಿಗಳ ಸಂಭ್ರಮದ ಸ್ವಾಗತ

ಇದೀಗ ಲುಟ್ಯನ್ ಪ್ರತಿಮೆ ತೆಗೆಯುವ ಮೂಲಕ ವಾಸ್ತುಶಿಲ್ಪದ ಪರಂಪರೆಯನ್ನು ಅವಮಾನಿಸಿದೆ. ಅಷ್ಟು ಮಾತ್ರವಲ್ಲದೆ ಜನರ ಗಮನವನ್ನು ನೈಜ ಸಮಸ್ಯೆಗಳಿಂದ ಬೇರೆಡೆ ಸೆಳೆಯುವ ಯತ್ನವೂ ಇದಾಗಿದೆ. ಅಷ್ಟಕ್ಕೂ ಸಿ. ರಾಜಗೋಪಾಲಾಚಾರಿ (ರಾಜಾಜಿ) ಅವರಂತಹ ವ್ಯಕ್ತಿತ್ವಗಳಿಗೆ ಗೌರವ ನೀಡುವ ಕ್ರಮದ ಹಿಂದೆ ಆಳವಾದ ರಾಜಕೀಯ ಕಾರಣವೂ ಇದೆ. ಸಿ. ರಾಜಗೋಪಾಲಾಚಾರಿ ತಮಿಳುನಾಡಿನವರು. ಇನ್ನು ಕೆಲವೇ ತಿಂಗಳುಗಳಲ್ಲಿ ತಮಿಳುನಾಡು ಚುನಾವಣೆಯೂ ಇರಲಿದೆ. ಹಾಗಿರುವಾಗ ರಾಜಾಜಿ ಪ್ರತಿಮೆ ಸ್ಥಾಪಿಸುವುದು ದಕ್ಷಿಣ ಭಾರತದ ಜನರಿಗೆ ಗೌರವ ನೀಡಿದಂತೆ ಎಂಬ ರಾಜಕೀಯ ಲೆಕ್ಕಾಚಾರವೂ ಇದೆ. ಕೇಂದ್ರ ಸರ್ಕಾರವು ಕೇವಲ ಉತ್ತರ ಭಾರತಕ್ಕೆ ಸೀಮಿತವಾಗಿಲ್ಲ ಎಂಬಂತೆ ಈ ನೆಪ ಮಾತ್ರಕ್ಕೆ ತೋರಿಸುವ ಕಾರ್ಯವನ್ನು ಈ ಚುನಾವಣೆಯ ಸಂದರ್ಭದಲ್ಲಿ ಮಾಡುತ್ತಿದೆ ಎಂಬುದು ಸ್ಪಷ್ಟ.

ಇಲ್ಲಿ ಬರೀ ಹೆಸರು, ಪ್ರತಿಮೆ ಬದಲಾವಣೆ ಎಂಬ ರಾಜಕೀಯ ಮಾತ್ರ ಉಳಿದಲ್ಲ. ಅಷ್ಟಕ್ಕೂ ಈ ರಾಜಕೀಯ ಬರೀ ತಮಿಳುನಾಡಿಗೆ ಸೀಮಿತವಾಗಿಲ್ಲ. ಕಳೆದ ಕೆಲವು ತಿಂಗಳುಗಳಿಂದ ಕೇಂದ್ರದಲ್ಲಿರುವ ಬಿಜೆಪಿ ತಮ್ಮ ಬತ್ತಳಿಕೆಯಲ್ಲಿರುವ ಚುನಾವಣಾ ತಂತ್ರವನ್ನು ಒಂದಾದ ಬಳಿಕ ಒಂದರಂತೆ ಪ್ರಯೋಗಿಸುತ್ತಲೇ ಇದೆ. ಈ ಹಿಂದೆ ವಂದೇ ಮಾತರಂ ಚರ್ಚೆಯಿಂದ ಹಿಡಿದು ಇತ್ತೀಚೆಗೆ ಪದ್ಮ ಪ್ರಶಸ್ತಿ, ಭಾರತ ರತ್ನದವರೆಗೆ- ಮುಂದೆ ಚುನಾವಣೆ ನಡೆಯಲಿರುವ ರಾಜ್ಯಗಳ ಜನರನ್ನು ಓಲೈಸಲು ಸತತ ಪ್ರಯತ್ನವನ್ನು ಮಾಡುತ್ತಲೇ ಬಂದಿದೆ. ಬಲಪಂಥೀಯ ಬಂಕಿಮಚಂದ್ರ ಚಟರ್ಜಿ ಅವರ ವಂದೇ ಮಾತರಂ ಗೀತೆಯನ್ನು ಲೋಕಸಭೆಯಲ್ಲೇ ಚರ್ಚೆಗೆ ಎಳೆಯುವ ಮೂಲಕ ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರಕ್ಕೆ ನಾಂದಿ ಹಾಡಿತು. ಜತೆಗೆ ಈ ಗೀತೆ ವಿಚಾರದಲ್ಲಿ ಅರ್ಧ ಸತ್ಯ ಚರಿತ್ರೆಯನ್ನು ಮುಂದೆ ತಂದು ಕಾಂಗ್ರೆಸ್ ಅನ್ನು ಟೀಕಿಸಿತು. ರಾಷ್ಟ್ರೀಯತೆಯನ್ನು ವಂದೇ ಮಾತರಂ ಗೀತೆಯೊಂದಿಗೆ ಜೋಡಿಸುವ ಮೂಲಕ ದೇಶಭಕ್ತಿಯ ಹೊಸ ಮಾಪನವನ್ನು ಸೃಷ್ಟಿಸುವ ಯತ್ನ ಬಿಜೆಪಿ ಮಾಡಿತು. ಗೀತೆಯನ್ನು ಹಾಡಲು ನಿರಾಕರಿಸುವವರನ್ನು ರಾಷ್ಟ್ರವಿರೋಧಿಗಳಂತೆ ಬಿಂಬಿಸುವ ಮೂಲಕ ಮತಗಳನ್ನು ಧ್ರುವೀಕರಿಸುವ ತಂತ್ರವೂ ಇದರಲ್ಲಿದೆ.

ಇನ್ನು ಕೇರಳದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ರಾಜಧಾನಿ ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಸ್ಪಷ್ಟ ಬಹುಮತ ಎನ್‌ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದೆ.  45 ವರ್ಷಗಳಿಂದ ಇದ್ದ ಎಡರಂಗದ (LDF) ಆಡಳಿತವನ್ನು ಅಂತ್ಯಗೊಳಿಸಿದೆ. ಇದಾದ ಬಳಿಕ ಕೇರಳದಲ್ಲಿ 10 ವಿಧಾನಸಭೆ ಕ್ಷೇತ್ರಗಳಲ್ಲಾದರೂ ಗೆಲ್ಲುತ್ತೇವೆ ಎಂಬ ವಿಶ್ವಾಸ ಬಿಜೆಪಿಯದ್ದು. ಅದಕ್ಕಾಗಿ ಮತದಾರರನ್ನು ಸೆಳೆಯುವ ಸತತ ಯತ್ನ ಮಾಡುತ್ತಿದೆ. ಅದರ ಭಾಗವೇ ಪದ್ಮ ಪ್ರಶಸ್ತಿ.

ಮೋದಿ ಸರ್ಕಾರ ಘೋಷಿಸಿದ ಪದ್ಮ ಪ್ರಶಸ್ತಿಯ ಪಟ್ಟಿಯಲ್ಲಿ ಕೇರಳದ ಎಂಟು ಮಂದಿ ಹೆಸರು ಸೇರಿಕೊಂಡಿದೆ. ಇದರಲ್ಲಿ ಮೂರು ಪದ್ಮವಿಭೂಷಣ ಪ್ರಶಸ್ತಿಗಳೂ ಸೇರಿವೆ. ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ (ಮರಣೋತ್ತರ), ಬರಹಗಾರ/ಪತ್ರಕರ್ತ ಪಿ. ನಾರಾಯಣನ್ ಮತ್ತು ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಕೆ.ಟಿ. ಥಾಮಸ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. ಎಡಪಂಥೀಯ ಬೆಂಬಲಿಗ ನಟ ಮಮ್ಮುಟ್ಟಿ ಮತ್ತು ಎಸ್‌ಎನ್‌ಡಿಪಿ ಯೋಗಂ ನಾಯಕ ವೆಲ್ಲಪ್ಪಳ್ಳಿ ನಟೇಶನ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. ನೃತ್ಯ ಪ್ರತಿಭಾನ್ವಿತ ಕಲಾಮಂಡಲಂ ವಿಮಲಾ ಮೆನನ್, ಅರಣ್ಯ ಸಂರಕ್ಷಣಾವಾದಿ ಕೊಲ್ಲಕಯಿಲ್ ದೇವಕಿ ಅಮ್ಮ ಮತ್ತು ಇಸ್ರೋ ವಿಜ್ಞಾನಿ ಎ.ಇ. ಮುತ್ತುನಾಯಗಮ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.

ಇಲ್ಲಿ ಕೇರಳದ ಮುಸ್ಲಿಮರನ್ನು ಸೆಳೆಯಲು ಮಮುಟ್ಟಿಗೆ ಪದ್ಮ ಪ್ರಶಸ್ತಿ ನೀಡಿದರೆ, ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್‌ಗೆ ಪ್ರಶಸ್ತಿ ನೀಡಿ ಪಿಣರಾಯಿ ವಿಜಯನ್ ಅವರ ಆಡಳಿತದಿಂದ ಮನಸ್ತಾಪಕ್ಕೆ ಒಳಗಾಗಿರುವ ಅಚ್ಯುತಾನಂದನ್‌ ಬೆಂಬಲಿಗರನ್ನು ಸೆಳೆಯುವ ಯತ್ನ ಮೋದಿ ಸರ್ಕಾರದ್ದು. ಇದರ ಜತೆಗೆ ತಮ್ಮ ಬಲಪಂಥೀಯ ನಾಯಕರುಗಳನ್ನೂ ಗುರುತಿಸಿ, ಮತ ಬ್ಯಾಂಕ್ ಹೆಚ್ಚಿಸುವ ಉಪಾಯವನ್ನೂ ಮಾಡಿದೆ.

ಬಿಹಾರ ವಿಧಾನಸಭೆ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ನಡೆಸಿದ್ದು ಇದೇ ತಂತ್ರ. 2024ರಲ್ಲಿ ಸಮಾಜವಾದಿ ನಾಯಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನವನ್ನು ಘೋಷಿಸಿದೆ. ಈ ಮೂಲಕ 2025ರ ಚುನಾವಣೆಯಲ್ಲಿ ಒಬಿಸಿ ಮತವನ್ನು ಸೆಳೆಯುವ ಯತ್ನವನ್ನು ಮಾಡಿದೆ. ಹೀಗೆ ಕೇಂದ್ರದ ಚುನಾವಣಾ ಗಿಮಿಕ್ ಬರೀ ಒಂದೆರಡು ತಂತ್ರಗಳ ಮಿತಿ ಹೊಂದಿಲ್ಲ. ಇಲ್ಲಿ ಕೋಮು ವಿಭಜನೆ ಎಂಬ ಕೀಳುಮಟ್ಟದ ಆಟದೊಂದಿಗೆ ಜನರ ಮತಗಿಟ್ಟಿಸಿಕೊಳ್ಳಲು ಪ್ರಶಸ್ತಿಗಳನ್ನೂ ರಾಜಕೀಯಗೊಳಿಸುತ್ತಿದೆ. ಇದು ಖಂಡಿತವಾಗಿಯೂ ಅಪಾಯಕಾರಿ ಬೆಳವಣಿಗೆ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...