ಅಣು ವಿದ್ಯುತ್ ಸ್ಥಾವರ ಈ ಕಾಲಘಟ್ಟದ ಪ್ರಸ್ತುತತೆಯೆ?

Date:

ಕಾಂಗ್ರೆಸ್ ಸರಕಾರ, ನೂತನ ಅಣು ವಿದ್ಯುತ್ ಸ್ಥಾಪನೆಗಾಗಿ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮಕ್ಕೆ ನೀಡಿರುವ ತಾತ್ವಿಕ ಅನುಮತಿಯನ್ನು ತಕ್ಷಣವೇ ಹಿಂಪಡೆದು, ಪರಿಸರ ಸ್ನೇಹಿ ಇಂಧನ ಉತ್ಪಾದನಾ ಸಾಧ್ಯತೆಗಳತ್ತ ಮುಖ ಮಾಡಲಿ. ಅದು ನಿಜಕ್ಕೂ ಜನಮುಖಿ ನಿರ್ಧಾರ...

ಕರ್ನಾಟಕ ಸರಕಾರ ರಾಜ್ಯದಲ್ಲಿ ನೂತನ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗಾಗಿ ರಾಜ್ಯಾದ್ಯಂತ ಸ್ಥಳ ಸಮೀಕ್ಷೆ ನಡೆಸಲು ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ(NTPC)ಕ್ಕೆ ತಾತ್ವಿಕ ಒಪ್ಪಿಗೆ ನೀಡಿದೆ. ಇದರ ಬೆನ್ನಿಗೇ ಅಣು ವಿದ್ಯುತ್ ಪ್ರಸ್ತುತತೆ ಕುರಿತ ಚರ್ಚೆಗಳು ಮತ್ತೆ ಸಾರ್ವತ್ರಿಕ ವಲಯದಲ್ಲಿ ಮುನ್ನೆಲೆಗೆ ಬಂದಿವೆ. ಅಣು ವಿದ್ಯುತ್ ಉತ್ಪಾದನೆಯ ಸಾಧಕ-ಬಾಧಕಗಳ ಕುರಿತು ಚರ್ಚಿಸುವುದಕ್ಕೂ ಮುನ್ನ, ಅಣು ವಿದ್ಯುತ್ ಸ್ಥಾವರಗಳ ಸ್ಥಾಪನೆಯತ್ತ ಒಂದು ಹಿನ್ನೋಟ:

ಅದು ವಿಶ್ವದ ದೊಡ್ಡಣ್ಣನ ಪಟ್ಟಕ್ಕಾಗಿ ಅಮೆರಿಕ ಹಾಗೂ ಅವಿಭಜಿತ ಸೋವಿಯತ್ ಒಕ್ಕೂಟದ ನಡುವೆ ಶೀತಲ ಸಮರ ನಡೆಯುತ್ತಿದ್ದ ಕಾಲಘಟ್ಟ. ವಿಜ್ಞಾನ, ತಂತ್ರಜ್ಞಾನ, ಶಸ್ತ್ರಾಸ್ತ್ರ ಎಲ್ಲ ವಲಯಗಳಲ್ಲೂ ಈ ಎರಡು ದೇಶಗಳ ನಡುವೆ ತೀವ್ರ ಪೈಪೋಟಿಯೇ ಏರ್ಪಟ್ಟಿತ್ತು. ಈ ಪೈಕಿ ಪರಮಾಣು ಇಂಧನ ಹಾಗೂ ಪರಮಾಣು ಶಸ್ತ್ರಾಸ್ತ್ರ ತಯಾರಿಕೆ ತಂತ್ರಜ್ಞಾನ ವಲಯ ಕೂಡ ಸೇರಿತ್ತು. ಪರಮಾಣ ಇಂಧನ ಉತ್ಪಾದನೆ ತಂತ್ರಜ್ಞಾನದ ಸಂಶೋಧನೆ ಹಾಗೂ ಬಳಕೆಯಲ್ಲಿ ಆರಂಭಿಕ ಮೇಲುಗೈ ಸಾಧಿಸಿದ್ದ ಸೋವಿಯತ್ ಒಕ್ಕೂಟ, ಜೂನ್ 27, 1954ರಲ್ಲಿ ಒಬಿನ್ಸ್ಕ್‌ನಲ್ಲಿ ವಿಶ್ವದ ಪ್ರಪ್ರಥಮ ಪರಮಾಣು ಇಂಧನ ಸ್ಥಾವರ ಸ್ಥಾಪನೆ ಮಾಡಿತ್ತು. ಅಂದಿನಿಂದ ಇಲ್ಲಿಯವರೆಗೆ ವಿಶ್ವಾದ್ಯಂತ ಒಟ್ಟು 32 ದೇಶಗಳಲ್ಲಿ 410 ಪರಮಾಣು ವಿದ್ಯುತ್ ಸ್ಥಾವರಗಳು ಕಾರ್ಯನಿರ್ವಹಿಸುತ್ತಿದ್ದರೆ, 57 ಪರಮಾಣು ವಿದ್ಯುತ್ ಸ್ಥಾವರಗಳು ನಿರ್ಮಾಣ ಹಂತದಲ್ಲಿವೆ. ಈ ಒಟ್ಟು ಪರಮಾಣು ಇಂಧನ ಸ್ಥಾವರಗಳ ಪೈಕಿ ಅಮೆರಿಕದಲ್ಲಿ 54 ಹಾಗೂ ರಷ್ಯಾದಲ್ಲಿ 36 ಪರಮಾಣು ಇಂಧನ ಸ್ಥಾವರಗಳು ಇಂದಿಗೂ ಕಾರ್ಯನಿರ್ವಹಿಸುತ್ತಿವೆ.

ಇದನ್ನು ಓದಿದ್ದೀರಾ?: ಪದೇ ಪದೆ ಚರ್ಚೆಗೆ ಬರುವ ಕೊರೋನ ಸಾವುಗಳು: ನಿಜ ದತ್ತಾಂಶ ತಿಳಿಯುವುದು ಯಾವಾಗ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪರಮಾಣು ಇಂಧನ ಉತ್ಪಾದನೆ ತಂತ್ರಜ್ಞಾನಕ್ಕೆ ವಿಶ್ವವ್ಯಾಪಿ ಮನ್ನಣೆ ದೊರೆಯುತ್ತಿದ್ದಂತೆಯೇ, ಭಾರತ ಕೂಡ ಈ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿತು. ಇದರ ಭಾಗವಾಗಿ ಅಕ್ಟೋಬರ್ 28, 1969ರಲ್ಲಿ ಮಹಾರಾಷ್ಟ್ರದ ಪಾಲ್ಘರ್‍‌ನ ತಾರಾಪುರ್‍‌ನಲ್ಲಿ ಭಾರತದ ಪ್ರಪ್ರಥಮ ಪರಮಾಣು ಇಂಧನ ಸ್ಥಾವರ ತಾರಾಪುರ್ ಅಣು ವಿದ್ಯುತ್ ಸ್ಥಾವರ ಸ್ಥಾಪನೆಯಾಯಿತು. ಈ ಪರಮಾಣು ಇಂಧನ ಸ್ಥಾವರದೊಂದಿಗೆ ಭಾರತದಲ್ಲಿ ಒಟ್ಟು 8 ಪರಮಾಣು ಇಂಧನ ಸ್ಥಾವರಗಳು ಕಾರ್ಯಾಚರಿಸುತ್ತಿವೆ. ಈ ಪೈಕಿ ಕರ್ನಾಟಕದ ಕಾರವಾರದ ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟ ಪ್ರದೇಶವಾದ ಕೈಗಾದಲ್ಲಿರುವ ಕೈಗಾ ಅಣು ವಿದ್ಯುತ್ ಸ್ಥಾವರ ಕೂಡ ಒಂದಾಗಿದೆ. ಇಡೀ ದೇಶದಲ್ಲೇ ಕೇವಲ ಒಟ್ಟು 8 ಪರಮಾಣು ಇಂಧನ ಸ್ಥಾವರಗಳಿದ್ದರೂ, ಕರ್ನಾಟಕದಲ್ಲೇ ಎರಡನೆಯ ಪರಮಾಣು ಇಂಧನ ಸ್ಥಾವರ ಸ್ಥಾಪನೆಗಾಗಿ ಸ್ಥಳ ಸಮೀಕ್ಷೆ ನಡೆಸಲು ರಾಜ್ಯ ಸರಕಾರ ಅನುಮತಿ ನೀಡಿರುವುದು ತೀವ್ರ ಸಾರ್ವಜನಿಕ ಕಳವಳಕ್ಕೆ ಕಾರಣವಾಗಿದೆ.

prajavani import sites pv files article images 2023 01 22 file79vtr28z6kg14brhb7rv1674411698

ಕೈಗಾ ಅಣು ವಿದ್ಯುತ್ ಸ್ಥಾವರ ವಿರುದ್ಧದ ಚಾರಿತ್ರಿಕ ಹೋರಾಟ

ನವೆಂಬರ್, 27, 2010ರಲ್ಲಿ ತಲಾ 220 ಮೆಗಾ ವ್ಯಾಟ್ ಸಾಮರ್ಥ್ಯದ ನಾಲ್ಕು ಘಟಕಗಳನ್ನೊಳಗೊಂಡ ಕೈಗಾ ಅಣು ವಿದ್ಯುತ್ ಸ್ಥಾವರ ಕಾರ್ಯಾಚರಣೆ ಪ್ರಾರಂಭಿಸಿತು. ಈ ಸ್ಥಾವರ ತನ್ನ ಕಾರ್ಯಾಚರಣೆ ಪ್ರಾರಂಭಿಸುವುದಕ್ಕೂ ಮುನ್ನ, ಕಾರವಾರ ಪರಿಸರವಾದಿಗಳ ತೀವ್ರ ಪ್ರತಿಭಟನೆಗೆ ಸಾಕ್ಷಿಯಾಯಿತು. ಈ ಯೋಜನೆಯನ್ನು ವಿರೋಧಿಸಿ, ಪರಿಸರವಾದಿಗಳೊಂದಿಗೆ ಕನ್ನಡದ ಖ್ಯಾತ ಸಾಹಿತಿ ಡಾ. ಶಿವರಾಮ ಕಾರಂತ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸುಮಾರು 65 ದಿನಗಳ ಕಾಲ ನಡೆದ ಈ ಹೋರಾಟದಲ್ಲಿ ಈ ಯೋಜನೆಯ ರೂವಾರಿಯಾಗಿದ್ದ ಕೈಗಾ ಅಣು ವಿದ್ಯುತ್ ಸ್ಥಾವರದ ಯೋಜನಾ ನಿರ್ದೇಶಕ ಪರಮಹಂಸ ತಿವಾರಿ ಕೂಡ ಭಾಗಿಯಾಗಿದ್ದದ್ದು ವಿಶೇಷವಾಗಿತ್ತು.

2018ರಲ್ಲಿ ತಲಾ 700 ಮೆಗಾ ವ್ಯಾಟ್ ಸಾಮರ್ಥ್ಯದ ಐದು ಮತ್ತು ಆರನೆ ಘಟಕ ಸ್ಥಾಪನೆಯ ಮೂಲಕ ಕೈಗಾ ಅಣು ವಿದ್ಯುತ್ ಸ್ಥಾವರದ ವಿಸ್ತರಣೆಗೆ ಭಾರತೀಯ ಪರಮಾಣು ಇಂಧನ ನಿಗಮ ನಿಯಮಿತ (NPCIL) ಮುಂದಾದಾಗಲೂ ಹೆಸರಾಂತ ಪರಿಸರವಾದಿ, ವೃಕ್ಷಾಂದೋಲನ ಖ್ಯಾತಿಯ ಅನಂತ ಹೆಗಡೆ ಆಶೀಸರ ನೇತೃತ್ವದಲ್ಲಿ ಬೃಹತ್ ಜನಾಂದೋಲನವೇ ನಡೆದಿತ್ತು.

ಉತ್ತರ ಕನ್ನಡ ಜಿಲ್ಲೆಯ ಜೀವನದಿಯಾದ ಕಾಳಿಯ ಪಕ್ಕವೇ ಕೈಗಾ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಿರುವುದರಿಂದ ಭುಗಿಲೆದ್ದಿದ್ದ ಜನಾಂದೋಲನ ಇದಾಗಿತ್ತು. ಆದರೆ, ಆಳುವ ಸರಕಾರಗಳು ಈ ಪ್ರತಿಭಟನೆಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ ಪರಿಣಾಮ, ಕೈಗಾದಲ್ಲಿ ಈಗಲೂ ತಲಾ 200 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿರುವ ನಾಲ್ಕು ಅಣು ವಿದ್ಯುತ್ ಘಟಕಗಳು ಕಾರ್ಯಾಚರಣೆ ನಡೆಸುತ್ತಿವೆ. ಇದೀಗ ತಲಾ 700 ಮೆಗಾ ವ್ಯಾಟ್ ಉತ್ಪಾದನೆ ಸಾಮರ್ಥ್ಯದ ಎರಡು ಘಟಕಗಳ ಸ್ಥಾಪನೆಯೊಂದಿಗೆ ಕೈಗಾ ಅಣು ವಿದ್ಯುತ್ ಸ್ಥಾವರವನ್ನು ವಿಸ್ತರಿಸುವ ಪ್ರಸ್ತಾವವೂ ಸರಕಾರದ ಮುಂದಿದೆ. ಈ ನಡುವೆಯೇ, ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ ರಾಜ್ಯದಲ್ಲಿ ಗುರುತಿಸಿರುವ ಸಂಭಾವ್ಯ ಪ್ರದೇಶಗಳಲ್ಲಿ ನೂತನ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಲು ಪೂರ್ವಭಾವಿಯಾಗಿ ಸ್ಥಳ ಸಮೀಕ್ಷೆ ನಡೆಸಲು ರಾಜ್ಯ ಸರಕಾರ ಅನುಮೋದನೆ ನೀಡಿದೆ.

ಪರಮಾಣು ಇಂಧನ ಉತ್ಪಾದನೆಯಲ್ಲಿ ಬಳಕೆಯಾಗುವ ತಂತ್ರಜ್ಞಾನ ಯಾವುದು?

ಪರಮಾಣು ಇಂಧನ ಉತ್ಪಾದನೆಗಾಗಿ ಸದಳನ (Fusion) ಹಾಗೂ ವಿದಳನ (Fission) ತಂತ್ರಜ್ಞಾನಗಳೆರಡನ್ನೂ ಬಳಸಲಾಗುತ್ತದೆ. ಆದರೆ, ವಿದಳನ ತಂತ್ರಜ್ಞಾನದಲ್ಲಿ ಅಣು ವಿದಳನ ನಿರಂತರ ಪ್ರಕ್ರಿಯೆಯಾಗಿರುವುದರಿಂದ, ವಿದ್ಯುತ್ ಉತ್ಪಾದನೆಯ ದಕ್ಷತೆ ಹೆಚ್ಚಿ, ವೆಚ್ಚದ ಪ್ರಮಾಣವು ಗಮನಾರ್ಹವಾಗಿ ತಗ್ಗುತ್ತದೆ ಎಂಬ ಕಾರಣಕ್ಕೆ ಬಹುತೇಕ ಪರಮಾಣು ರಿಯಾಕ್ಟರ್‍‌ಗಳಲ್ಲಿ ಅಣು ವಿದಳನ ತಂತ್ರಜ್ಞಾನವನ್ನೇ ಬಳಸಲಾಗುತ್ತಿದೆ. ಪರಮಾಣು ಬಾಂಬ್ ತಯಾರಿಕೆಯಲ್ಲೂ ಅಣು ವಿದಳನ ತಂತ್ರಜ್ಞಾನವನ್ನೇ ಬಳಸಲಾಗುತ್ತದೆ ಎಂಬುದಿಲ್ಲಿ ಗಮನಾರ್ಹ ಸಂಗತಿ.

ಪರಮಾಣು ಇಂಧನ ಸ್ಥಾವರಗಳೇಕೆ ಪ್ರಸ್ತುತವಲ್ಲ?

ಪರಮಾಣು ಇಂಧನ ಸ್ಥಾವರಗಳ ನಿರ್ಮಾಣಕ್ಕೆ ದುಬಾರಿ ಮೊತ್ತ ವ್ಯಯವಾಗಲಿದ್ದು, ಪರಿಸರಾತ್ಮಕವಾಗಿಯೂ ಅಪಾಯಕಾರಿ ಎಂದೇ ದೃಢಪಟ್ಟಿದೆ. ಈ ಸ್ಥಾವರಗಳನ್ನು ಅದೆಷ್ಟೇ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಿ ನಿರ್ಮಿಸಿದರೂ ಕೂಡ, ಈ ಪರಮಾಣು ಇಂಧನ ಸ್ಥಾವರಗಳಿಂದ ಸಣ್ಣ ಪ್ರಮಾಣದ ಬೂದಿ ವಾತಾವರಣಕ್ಕೆ ಬಿಡುಗಡೆಯಾಗಿಯೇ ಆಗುತ್ತದೆ. ಈ ಬೂದಿಯಲ್ಲಿ ಅಪಾಯಕಾರಿ ವಿಕಿರಣಕಾರಿ ತ್ಯಾಜ್ಯಗಳಿರುವುದರಿಂದ, ಸುತ್ತಮುತ್ತಲಿನ ಹಳ್ಳಿಗಳಲ್ಲಿ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಸೃಷ್ಟಿಸಿ, ಬಂಜೆತನ, ಷಂಡತನ, ವಿಕಲಾಂಗ ಮಕ್ಕಳ ಜನನ ಇನ್ನಿತರ ಹಲವು ಬಗೆಯ ಮಾರಣಾಂತಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಹೀಗಾಗಿಯೇ ವಿಶ್ವದಾದ್ಯಂತ ಪರಮಾಣು ಇಂಧನ ತಂತ್ರಜ್ಞಾನದ ವಿರುದ್ಧ ಬೃಹತ್ ಪ್ರಮಾಣದ ಆಕ್ಷೇಪ ವ್ಯಕ್ತವಾಗುತ್ತಿದ್ದು, ಇಡೀ ವಿಶ್ವದಲ್ಲೇ ಅತ್ಯಧಿಕ 54 ಪರಮಾಣ ಇಂಧನ ಘಟಕಗಳನ್ನು ಹೊಂದಿರುವ ಅಮೆರಿಕ, 2012ರಿಂದ ಎಪ್ರಿಲ್ 3, 2021ರವರೆಗೆ ಒಟ್ಟು 12 ಪರಮಾಣು ಇಂಧನ ರಿಯಾಕ್ಟರ್ ಗಳನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದೆ.

2 1665759063

ಇದಲ್ಲದೆ, ಪರಮಾಣು ಇಂಧನವನ್ನು ದೊಡ್ಡ ಪ್ರಮಾಣದಲ್ಲಿ ಅವಲಂಬಿಸಿರುವ ಬ್ರಿಟನ್ (18), ಜರ್ಮನಿ (17), ಸ್ಪೇನ್ (8), ಬೆಲ್ಜಿಯಂ (5), ಫ್ರಾನ್ಸ್ (2), ಸ್ವಿಝರ್‍‌ಲೆಂಡ್ (1) ದೇಶಗಳು ಪರಮಾಣು ರಿಯಾಕ್ಟರ್‍‌fಗಳನ್ನು ಶಾಶ್ವತವಾಗಿ ಸ್ಥಗಿತಗೊಳಿಸಿವೆ. ಅಮೆರಿಕ ಕೂಡ 2024ರಾಚೆಗೆ ಯಾವುದೇ ನೂತನ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಮುಂದಾಗಿಲ್ಲ. ಇಂತಹ ಹೊತ್ತಿನಲ್ಲಿ, ಓಬಿರಾಯನ ತಂತ್ರಜ್ಞಾನವನ್ನು ಆಧರಿಸಿ ಕಾರ್ಯಾಚರಣೆ ನಡೆಸುತ್ತಿರುವ ಭಾರತದಲ್ಲಿನ ಯಾವುದೇ ಪರಮಾಣು ಇಂಧನ ಸ್ಥಾವರಗಳನ್ನು ಸ್ಥಗಿತಗೊಳಿಸದೆ, ನೂತನ ಪರಮಾಣು ಇಂಧನ ಸ್ಥಾವರ ಸ್ಥಾಪನೆಗೆ ಮುಂದಾಗಿರುವುದು ಅಪಾಯಕಾರಿ ನಡೆ ಎಂಬುದು ತಜ್ಞರ ಅಭಿಮತ.

ಪರಿಶುದ್ಧ ಇಂಧನ!

ಇಡೀ ವಿಶ್ವದಾದ್ಯಂತ ಬಳಕೆಯಲ್ಲಿರುವ ವಿದ್ಯುತ್ ಮೂಲಗಳಿಗೆ ಹೋಲಿಸಿದರೆ, ಪರಮಾಣು ವಿದ್ಯುತ್ ಅತ್ಯಂತ ಪರಿಶುದ್ಧ ಇಂಧನ ಎಂದೇ ಹೆಸರುವಾಸಿಯಾಗಿದೆ. ನವೀಕೃತ ಇಂಧನ ಮೂಲಗಳಾದ ಸೌರ ವಿದ್ಯುತ್ ಹಾಗೂ ಪವನ ವಿದ್ಯುತ್‌ಗಳಿಗಿಂತಲೂ ಪರಮಾಣು ವಿದ್ಯುತ್ತೇ ಅತ್ಯಂತ ಪರಿಶುದ್ಧ ಇಂಧನ ಎಂಬುದು ಅಣು ವಿಜ್ಞಾನಿಗಳ ವಾದ. ಸೌರ ವಿದ್ಯುತ್ ಫಲಕಗಳ ವ್ಯಾಪಕ ಅಳವಡಿಕೆಯಿಂದ ಬೆಳಕಿನ ಮಾಲಿನ್ಯ ಹಾಗೂ ತಾಪಮಾನ ಮಾಲಿನ್ಯ ಹೆಚ್ಚಿದರೆ, ಪವನ ವಿದ್ಯುತ್ ಸ್ಥಾವರಗಳಿಂದ ಪ್ರಕೃತಿಯ ಸಮತೋಲನದ ಮೇಲೆ ದುಷ್ಪರಿಣಾಮವುಂಟಾಗುತ್ತದೆ ಎಂಬುದು ಇಂಥವರ ಪ್ರತಿಪಾದನೆ. ಆದರೆ, ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ಒಂದೊಮ್ಮೆ ಸೋರಿಕೆಯಾದರೆ, ಅದೆಂಥ ಅವಘಡ ಸಂಭವಿಸುತ್ತದೆ ಎಂಬುದಕ್ಕೆ ಸೋವಿಯತ್ ಒಕ್ಕೂಟದಲ್ಲಿ ಸಂಭವಿಸಿದ ಚರ್ನೋಬಿಲ್ ಅಣು ವಿದ್ಯುತ್ ಸ್ಥಾವರ ಸೋರಿಕೆಯಿಂದಾದ ಸಾವು-ನೋವುಗಳ ಬೀಭತ್ಸತೆಯೇ ಪ್ರತ್ಯಕ್ಷ ಉದಾಹರಣೆ.

ಪರ್ಯಾಯ ಇಂಧನ ಮೂಲಗಳೇನು?

ಸಾಂಪ್ರದಾಯಿಕ ಇಂಧನ ಮೂಲಗಳಾದ ಜಲ ವಿದ್ಯುತ್ ಹಾಗೂ ಉಷ್ಣ ವಿದ್ಯುತ್ ಸ್ಥಾವರಗಳು ತಮ್ಮ ಮಿತಿಯಿಂದಾಗಿಯೇ ಸೀಮಿತ ಪ್ರಮಾಣದ ವಿದ್ಯುತ್ ಉತ್ಪಾದನೆ ಮಾಡಲು ಮಾತ್ರ ಸಾಧ್ಯವಾಗುತ್ತಿವೆ. ಆದರೆ, ವಿದ್ಯುತ್ ಬೇಡಿಕೆ ಮಾತ್ರ ಬ್ರಹ್ಮ ರಾಕ್ಷಸನ ಸ್ವರೂಪಕ್ಕೆ ತಿರುಗಿದೆ. ಹೀಗಾಗಿ, ಆಳುವ ಸರಕಾರಗಳು ಸಾರ್ವಜನಿಕರು ಹಾಗೂ ಉದ್ಯಮಗಳ ವಿದ್ಯುತ್ ಬೇಡಿಕೆಯನ್ನು ಸರಿದೂಗಿಸಲು ಅಪಾಯಕಾರಿ ಎಂದು ತಿಳಿದಿದ್ದರೂ, ಅಣು ವಿದ್ಯುತ್ ಉತ್ಪಾದನೆಯಂಥ ಮಾರ್ಗಗಳ ಮೊರೆ ಹೋಗುತ್ತಿವೆ. ಇದರಿಂದಾಗಿ ಪರಿಸರಾತ್ಮಕ ಹಾಗೂ ಸಾಮಾಜಿಕ ಕಳವಳವಳೂ ತೀವ್ರಗೊಂಡಿವೆ. ಇದರ ಬದಲಿಗೆ, ಆಳುವ ಸರಕಾರಗಳು ನವೀಕೃತ ಇಂಧನ ಉತ್ಪಾದನೆ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರೆ, ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಸರಿದೂಗಿಸುವುದರೊಂದಿಗೆ, ಪರಿಸರ ಸಮತೋಲನವನ್ನೂ ಕಾಪಾಡಿಕೊಳ್ಳಬಹುದಾಗಿದೆ.

ಸೌರ ವಿದ್ಯುತ್

ಸೌರ ವಿದ್ಯುತ್ ಸ್ಥಾವರಗಳಿಂದ ಬೆಳಕಿನ ಮಾಲಿನ್ಯ ಹಾಗೂ ತಾಪಮಾನ ಏರಿಕೆಯಾಗುತ್ತಿದೆ ಎಂಬ ಪ್ರಬಲವಾದ ಆರೋಪಗಳು ಕೇಳಿ ಬರುತ್ತಿವೆ. ಹೀಗಿದ್ದೂ, ಏಕೈಕ ಪ್ರಾಕೃತಿಕ ಇಂಧನ ಮೂಲವಾಗಿರುವುದು ಸೌರ ವಿದ್ಯುತ್ ಮಾತ್ರ. ಹೀಗಾಗಿ, ಅಗತ್ಯಕ್ಕೆ ತಕ್ಕಷ್ಟು ಹಾಗೂ ಸೀಮಿತ ಪ್ರಮಾಣದಲ್ಲಿ ಮಾತ್ರ ಸೌರ ವಿದ್ಯುತ್ ಸ್ಥಾವರಗಳ ಸ್ಥಾಪನೆ ಮಾಡುವುದರಿಂದ, ಅಗ್ಗದ ದರದಲ್ಲಿ ವಿದ್ಯುತ್ ಬೇಡಿಕೆಯನ್ನು ಪೂರೈಸಬಹುದಾಗಿದೆ. ಈ ಉಪಕ್ರಮದ ಭಾಗವಾಗಿ, ಆಳುವ ಸರಕಾರಗಳು ಎಲ್ಲ ಸರಕಾರಿ ಕಚೇರಿಗಳ ಮೇಲೆ ಸೌರ ವಿದ್ಯುತ್ ಫಲಕಗಳ ಅಳವಡಿಕೆಯನ್ನು ಕಡ್ಡಾಯಗೊಳಿಸಿದರೂ ಸಾಕು; ಹತ್ತಾರು ಮೆಗಾ ವ್ಯಾಟ್ ವಿದ್ಯುತ್ ಉಳಿತಾಯದೊಂದಿಗೆ, ಸಾವಿರಾರು ಕೋಟಿ ರೂಪಾಯಿ ಸರಕಾರದ ಬೊಕ್ಕಸಕ್ಕೆ ಉಳಿತಾಯವಾಗುತ್ತದೆ. ಆದರೆ, ಇದಕ್ಕೆ ಬೇಕಿರುವುದು ರಾಜಕೀಯ ಇಚ್ಛಾಶಕ್ತಿ ಮಾತ್ರ.

ಅಣು ಸ್ಥಾವರ1

ಘನ ತ್ಯಾಜ್ಯ ಸಂಸ್ಕರಣೆ

ನವೀಕೃತ ಇಂಧನ ಉತ್ಪಾದನೆ ತಂತ್ರಜ್ಞಾನದ ಭಾಗವಾಗಿ ಘನ ತ್ಯಾಜ್ಯಗಳನ್ನು ಉರುವಲಾಗಿ ಬಳಸಿಕೊಂಡು, ವಿದ್ಯುತ್ ಮಾಡುವ ನೂತನ ತಂತ್ರಜ್ಞಾನ ಅಸ್ತಿತ್ವಕ್ಕೆ ಬಂದಿದೆ. ಇಂದು ಬಹುತೇಕ ನಗರ ಮತ್ತು ಹಳ್ಳಿಗಳಲ್ಲಿ ಭಾರಿ ಪ್ರಮಾಣದ ಘನ ತ್ಯಾಜ್ಯ ಉತ್ಪಾದನೆಯಾಗುತ್ತಿರುವುದರಿಂದ, ಹಸಿ ಮತ್ತು ಒಣ ಕಸ ವಿಂಗಡಣೆಯನ್ನು ಕಡ್ಡಾಯಗೊಳಿಸಿ, ಒಣ ಕಸವಾದ ಘನ ತ್ಯಾಜ್ಯವನ್ನು ವಿದ್ಯುತ್ ಉತ್ಪಾದನೆಗೆ ಬಳಸಬಹುದಾಗಿದ್ದು, ಹಸಿ ಕಸವನ್ನು ಜೈವಿಕ ಅನಿಲ ಉತ್ಪಾದನೆಗೆ ಬಳಸಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಮುಂದುವರಿದ ದೇಶಗಳಲ್ಲಿ ಈ ತಂತ್ರಜ್ಞಾನ ಬಳಕೆ ವ್ಯಾಪಕ ಜನಮನ್ನಣೆಗೆ ಪಾತ್ರವಾಗುತ್ತಿದ್ದು, ಅಗ್ಗದ ದರದಲ್ಲಿ ವಿದ್ಯುತ್ ಉತ್ಪಾದನೆ ಹಾಗೂ ಜೈವಿಕ ಅನಿಲಗಳೆರಡನ್ನೂ ಉತ್ಪಾದಿಸಬಹುದಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿದ್ದೀರಾ?: ಆಪರೇಷನ್ ಸಿಂಧೂರ್‌ ಚರ್ಚೆಗೆ ಕೇಂದ್ರ ಸರ್ಕಾರ ಒಪ್ಪಿಗೆ; ಪ್ರತಿಪಕ್ಷಗಳು ಸಜ್ಜು

ಹೀಗಾಗಿ, ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್ ಸರಕಾರ, ನೂತನ ಅಣು ವಿದ್ಯುತ್ ಸ್ಥಾಪನೆಗಾಗಿ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮಕ್ಕೆ ನೀಡಿರುವ ತಾತ್ವಿಕ ಅನುಮತಿಯನ್ನು ತಕ್ಷಣವೇ ಹಿಂಪಡೆದು, ಇಂತಹ ಪರಿಸರ ಸ್ನೇಹಿ ಇಂಧನ ಉತ್ಪಾದನಾ ಸಾಧ್ಯತೆಗಳತ್ತ ಮುಖ ಮಾಡಿದರೆ, ಅದು ನಿಜಕ್ಕೂ ಜನಮುಖಿ ನಿರ್ಧಾರವಾಗಲಿದೆ.

ಸದಾನಂದ ಗಂಗನಬೀಡು
ಸದಾನಂದ ಗಂಗನಬೀಡು
+ posts

ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಸದಾನಂದ ಗಂಗನಬೀಡು
ಸದಾನಂದ ಗಂಗನಬೀಡು
ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...