ಬಿಜೆಪಿಯ ಸುವೆಂದು ಅಧಿಕಾರಿ ವಿರುದ್ಧದ ಸಿಬಿಐ ಪ್ರಕರಣವು ಬಿಜೆಪಿಯ ವಾಷಿಂಗ್ ಮಷೀನ್‌ನಲ್ಲಿ ಸ್ವಚ್ಛ ಮಾಡಲಾಗಿದೆಯೇ ಎಂದು ಕಾಂಗ್ರೆಸ್ ಬುಧವಾರ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯನ್ನು ಪ್ರಶ್ನಿಸಿದೆ.
ಈ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಟ್ವೀಟ್ ಮಾಡಿದ್ದು, “ನಿರ್ಗಮಿಸುತ್ತಿರುವ ಪ್ರಧಾನಿ ಪಡಿತರ ಅಂಗಡಿಯಲ್ಲಿ ತನ್ನ ಪೋಸ್ಟರ್‌ಗಳನ್ನ ಅಂಟಿಸಲೆಂದೇ 7,000 ಕೋಟಿ ಪಡಿತರ ಹಣವನ್ನು ತಡೆಹಿಡಿದಿದ್ದಾರೆಯೇ. ಸುವೇಂದು ಅಧಿಕಾರಿ ಸಿಬಿಐ ಕೇಸ್ ಬಿಜೆಪಿಯ ವಾಷಿಂಗ್ ಮಷೀನ್‌ನಲ್ಲಿ ಕೊಚ್ಚಿಕೊಂಡು ಹೋಗಿದೆಯೇ? ಭಾರತದ ಮಕ್ಕಳಿಗಾಗಿ ಲಸಿಕೆಗಳಿಗಿಂತ ಪ್ರಧಾನಮಂತ್ರಿಯವರು ತನ್ನ ಪ್ರಚಾರಕ್ಕೆ ಆದ್ಯತೆ ನೀಡುತ್ತಾರೆಯೇ” ಎಂದು ಪ್ರಶ್ನಿಸಿದ್ದಾರೆ.
Today’s questions for the outgoing PM’s West Bengal visit:
1. Is the outgoing PM withholding Rs 7,000 crore of ration funds so that his face is plastered on ration shops?
2. Did Suvendu Adhikari’s CBI case get washed away in BJP’s washing machine?
3. Does the PM prioritise his…
— Jairam Ramesh (@Jairam_Ramesh) May 29, 2024
“ಪಡಿತರ ಅಂಗಡಿಯಲ್ಲಿ ಪ್ರಧಾನಿ ಮುಖವನ್ನು ಪ್ರದರ್ಶಿಸಿಲ್ಲ ಎಂಬ ನಾವು ನಂಬಲಾಗದಷ್ಟು ಕ್ಷುಲ್ಲಕ ಕಾರಣಕ್ಕೆ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಹಣವನ್ನು ತಡೆಹಿಡಿಯುತ್ತಿದೆ. ಪ್ರಧಾನಿ ಚಿತ್ರವನ್ನು ಫ್ಲೆಕ್ಸ್‌ಗಳಲ್ಲಿ, ಫಲಕಗಳಲ್ಲಿ ಹಾಕಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇಳಲು ಕೇಂದ್ರವು 7,000 ಕೋಟಿ ಭತ್ತ ಸಂಗ್ರಹಣೆ ಹಣವನ್ನು ತಡೆಹಿಡಿದಿದೆ” ಎಂದು ದೂರಿದ್ದಾರೆ.
ಇದನ್ನು ಓದಿದ್ದೀರಾ? ಅದಾನಿ, ಅಂಬಾನಿಗೆ ಸಹಾಯ ಮಾಡಲು ಮೋದಿಯವರನ್ನು ಆ ಪರಮಾತ್ಮನೇ ಕಳುಹಿಸಿದ್ದು: ರಾಹುಲ್ ಲೇವಡಿ
“ಇದು ರಾಜ್ಯದ ಭತ್ತದ ಸಂಗ್ರಹಣೆ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಅಕ್ಕಿಯ ಲಭ್ಯತೆಗೆ ಗಂಭೀರವಾಗಿ ಅಡ್ಡಿಯಾಗಬಹುದು. ನಿರ್ಗಮಿಸುವ ಪ್ರಧಾನಿಯವರು ಪಶ್ಚಿಮ ಬಂಗಾಳದ ಜನರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಏಕೆ ನಿರ್ಲಕ್ಷಿಸಿದ್ದಾರೆ? ಜನರ ದಿನನಿತ್ಯದ ಆಹಾರಕ್ಕಿಂತ ಅವರ ಪ್ರಚಾರ ಮುಖ್ಯವೇ” ಎಂದು ಪ್ರಶ್ನಿಸಿದ್ದಾರೆ.
“ಏಪ್ರಿಲ್ 2017ರಲ್ಲಿ, ನಾರದ ಹಗರಣಕ್ಕೆ ಸಂಬಂಧಿಸಿದಂತೆ ಆಗಿನ ಟಿಎಂಸಿ ಸಂಸದ ಸುವೇಂದು ಅಧಿಕಾರಿ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಏಪ್ರಿಲ್ 2019ರಲ್ಲಿ, ಸಿಬಿಐ ಸುವೇಂದು ಅಧಿಕಾರಿ ವಿಚಾರಣೆಗೆ ಲೋಕಸಭೆಯ ಸ್ಪೀಕರ್ ಅನುಮತಿ ಕೋರಿತು. ಡಿಸೆಂಬರ್ 2020 ರಲ್ಲಿ, ಅಧಿಕಾರಿ ಬಿಜೆಪಿಗೆ ಸೇರಿದ್ದು ಸಿಬಿಐ ಎಂದಿಗೂ ಲೋಕಸಭೆಯ ಸ್ಪೀಕರ್ ಅನುಮತಿ ಪಡೆದಿಲ್ಲ” ಎಂದು ಜೈರಾಮ್ ರಮೇಶ್ ಹೇಳಿದರು.
ಇದನ್ನು ಓದಿದ್ದೀರಾ? 272 ಸ್ಥಾನಗಳನ್ನು ಗೆಲ್ಲುವ ‘ಇಂಡಿಯಾ’ ಒಕ್ಕೂಟ: ಜೈರಾಮ್ ರಮೇಶ್
“ಅದೇ ರೀತಿ, ಟಿಎಂಸಿ ನಾಯಕ ತಪಸ್ ರಾಯ್ ಅವರು ಈ ವರ್ಷದ ಜನವರಿಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ದಾಳಿಗೆ ಒಳಗಾಗಿದ್ದರು. ಮಾರ್ಚ್ ವೇಳೆಗೆ ಅವರು ಬಿಜೆಪಿಗೆ ಸೇರಿದ್ದರು. ಬಿಜೆಪಿಗೆ ಸೇರುವ ಮುನ್ನ ಸುವೆಂದು ಅಧಿಕಾರಿ ಅವರು ತಪಸ್ ರಾಯ್ ಅವರು ಪುರಸಭೆಯ ನೇಮಕಾತಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು. ಆದರೆ ತಪಸ್ ರಾಯ್ ಬಿಜೆಪಿಗೆ ಸೇರಿದ ನಂತರ ಓ ಆರೋಪ ಮಾಡುತ್ತಿಲ್ಲ” ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.





