ಕೇರಳ ಚುನಾವಣೆ | ಕ್ರೈಸ್ತ ಸಮುದಾಯದ ಮತಗಳು ‘ಗೇಮ್‌ ಚೇಂಜರ್’ ಆಗಬಹುದೇ?

Date:

ಕಾಂಗ್ರೆಸ್ ಮೈತ್ರಿಯಲ್ಲಿ ಮುಸ್ಲಿಂ ಲೀಗ್‌ನ ಪ್ರಭಾವ ಹೆಚ್ಚಾಗುತ್ತಿದೆ ಎಂಬ ಆರೋಪಗಳೂ ಇವೆ. ಇದರಿಂದ ಕ್ರೈಸ್ತ ಸಮುದಾಯ ಯುಡಿಎಫ್‌ ಮೇಲೆ ಅಸಮಾಧಾನ ಹೊಂದಿದೆ. ಇದನ್ನು ಎಡಪಕ್ಷಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿವೆ. ಇನ್ನೊಂದೆಡೆ ಬಿಜೆಪಿ ಕೋಮು ಆಧಾರದಲ್ಲಿಯೇ ರಾಜಕೀಯದಾಟ ಮುಂದುವರೆಸಿದೆ.

ಕೇರಳದಲ್ಲಿ ಏಪ್ರಿಲ್-ಮೇ ತಿಂಗಳ ಅವಧಿಯಲ್ಲಿ 140 ಸದಸ್ಯ ಬಲದ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈಗಾಗಲೇ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಮತ್ತು ಸಿಪಿಐಎಂ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗದ (LDF) ಪ್ರಚಾರದಲ್ಲಿ ತೊಡಗಿದೆ. ಈ ಬಾರಿ ಬಿಜೆಪಿ ತನ್ನ ಕೋಮುದ್ವೇಷದ ವಿಷ ಬೀಜವನ್ನು ಹರಡುವಲ್ಲಿ ಬಹುತೇಕ ಯಶಸ್ವಿಕಂಡು ಅಲ್ಲಲ್ಲಿ ಮತ ಕಬಳಿಸುವ ಯತ್ನದಲ್ಲಿದೆ. ಏನೇ ಆದರೂ ಕೇರಳದಲ್ಲಿ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುವುದು ಕ್ರೈಸ್ತ ಸಮುದಾಯದ ಮತಗಳು.

ಕೇರಳದ ರಾಜಕೀಯ ಮತ್ತು ಸಾಮಾಜಿಕ ಭೂಪಟದಲ್ಲಿ ಕ್ರೈಸ್ತ ಸಮುದಾಯವು ಯಾವಾಗಲೂ ನಿರ್ಣಾಯಕ ಪಾತ್ರವನ್ನು ವಹಿಸುತ್ತಾ ಬಂದಿದೆ. ಪ್ರಸ್ತುತ ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಯಲ್ಲಿಯೂ ಕ್ರೈಸ್ತ ಸಮುದಾಯದ ಮತಗಳೇ ‘ಗೇಮ್‌ ಚೇಂಜರ್’ ಆಗುವ ಸಾಧ್ಯತೆಗಳು ಹೆಚ್ಚು. ಕೇರಳದ ಒಟ್ಟು 140 ವಿಧಾನಸಭಾ ಕ್ಷೇತ್ರಗಳ ಪೈಕಿ ಸುಮಾರು 45-50 ಕ್ಷೇತ್ರಗಳಲ್ಲಿ ಕ್ರೈಸ್ತ ಸಮುದಾಯದ ಬೆಂಬಲವಿಲ್ಲದೆ ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಆದ್ದರಿಂದಾಗಿ ವಿವಿಧ ಪಕ್ಷಗಳು ಕ್ರೈಸ್ತ ಸಮುದಾಯದ ಓಲೈಕೆಗಾಗಿ ಶ್ರಮಿಸುತ್ತಿದ್ದಾರೆ. ಯಾರಿಗೆ ಮತಗಿಟ್ಟಲಿದೆ ಎಂಬುದು ಸದ್ಯ ಪ್ರಶ್ನೆಯಷ್ಟೆ.

ಇದನ್ನು ಓದಿದ್ದೀರಾ? ಎನ್‌ಡಿಎ ಸೇರಿದರೆ ಕೇರಳಕ್ಕೆ ಹೆಚ್ಚಿನ ಅನುದಾನ: ಕೇಂದ್ರ ಸಚಿವ ರಾಮದಾಸ್‌ ಅಠಾವಳೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕೇರಳದಲ್ಲಿ ಪ್ರಧಾನ ವಿಪಕ್ಷವಾಗಿರುವ ಕಾಂಗ್ರೆಸ್ ಜತೆಗಿನ ಸಮುದಾಯದ ದೀರ್ಘಕಾಲದ ಬಾಂಧವ್ಯ ಇತ್ತೀಚೆಗೆ ಕೊಂಚ ಹದಗೆಟ್ಟಂತಿದೆ. ಕಾಂಗ್ರೆಸ್ ಮುಸ್ಲಿಮರ ಪರ ಎಂಬ ರಾಜಕೀಯ ಆರೋಪಗಳೇ ಇದಕ್ಕೆ ಕಾರಣ. ಇವೆಲ್ಲವೂ ಕೇರಳದಲ್ಲಿ ಸಾಂಪ್ರದಾಯಿಕ ರಾಜಕೀಯ ವ್ಯವಸ್ಥೆಯನ್ನೇ ಬದಲಾಯಿಸಿದೆ. ಕ್ರೈಸ್ತರ ಮತವನ್ನು ಸೆಳೆಯುವ ಸತತ ಪ್ರಯತ್ನವನ್ನು ಎಲ್‌ಡಿಎಫ್ ಮಾಡುತ್ತಲೇ ಇದೆ. 2021ರಲ್ಲಿ ಕೊಂಚ ಸಫಲವೂ ಆಗಿದೆ. ಇವೆಲ್ಲವುದರ ನಡುವೆ ಇತರೆ ರಾಜ್ಯಗಳಲ್ಲಿ ಕ್ರೈಸ್ತ ಸಮುದಾಯದ ಮೇಲೆ ದಾಳಿ, ದಬ್ಬಾಳಿಕೆ ನಡೆಸುವ ಬಿಜೆಪಿ ಕ್ರೈಸ್ತ ಮತಗಳನ್ನು ಬಾಚಿಕೊಳ್ಳಲು ತಂತ್ರ ರೂಪಿಸುತ್ತಿದೆ.

2011ರ ಜನಗಣತಿಯ ಪ್ರಕಾರ ಕೇರಳದ ಒಟ್ಟು ಜನಸಂಖ್ಯೆಯಲ್ಲಿ ಕ್ರೈಸ್ತರ ಪಾಲು ಸುಮಾರು 18.4%. ಪ್ರಸ್ತುತ ಇದು ಸುಮಾರು 17-18% ಇರಬಹುದು ಎಂದು ಅಂದಾಜಿಸಲಾಗಿದೆ. ಕೇರಳದಲ್ಲಿ ಹಿಂದೂಗಳು 54.7%, ಮುಸ್ಲಿಮರು 26.6% ಇದ್ದಾರೆ. ಕೆಲವು ಜಿಲ್ಲೆಗಳಲ್ಲಿ ಕ್ರೈಸ್ತ ಸಮುದಾಯವೇ ಅಧಿಕವಾಗಿದೆ. ಕೊಟ್ಟಾಯಂನಲ್ಲಿ 45%, ಪತ್ತನಂತಿಟ್ಟ, ಎರ್ನಾಕುಲಂನಲ್ಲಿ 38%, ಇಡುಕ್ಕಿಯಲ್ಲಿ 33%, ತ್ರಿಶೂರ್ ಮತ್ತು ವಯನಾಡಿನಲ್ಲಿ 20-25% ಪ್ರಮಾಣದಲ್ಲಿ ಕ್ರೈಸ್ತ ಮತದಾರರು ಇದ್ದಾರೆ.

ಹಿಂದಿನ ಚುನಾವಣೆಗಳತ್ತ ನಾವು ಕಣ್ಣಾಯಿಸಿದರೆ ಸಾಂಪ್ರದಾಯಿಕವಾಗಿ 2016ಕ್ಕಿಂತಲೂ ಮೊದಲು ಸುಮಾರು 70-80% ಮತಗಳು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪಾಲಾಗುತ್ತಿದ್ದವು. 2021ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. ಸುಮಾರು 35-40% ಕ್ರೈಸ್ತ ಮತಗಳು ಎಲ್‌ಡಿಎಫ್‌ ಕಡೆಗೆ ವಾಲಿದೆ ಎನ್ನುತ್ತಾರೆ ವಿಶ್ಲೇಷಕರು. ಇದಕ್ಕೆ ಪ್ರಮುಖ ಕಾರಣ ‘ಕೇರಳ ಕಾಂಗ್ರೆಸ್ (ಮಣಿ)’ ಎಡರಂಗಕ್ಕೆ ಸೇರಿದ್ದು ಎಂದರೆ ತಪ್ಪಾಗದು. ಇದೀಗ ಎಡ ಸರ್ಕಾರವು ಕಲ್ಯಾಣ ಯೋಜನೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಹೆಸರಿನಲ್ಲಿ ಕ್ರೈಸ್ತ ಸಮುದಾಯದ ವಿಶ್ವಾಸ ಗಳಿಸಲು ಪ್ರಯತ್ನಿಸುತ್ತಿವೆ. ಇತ್ತೀಚೆಗೆ ನಡೆದ ಚುನಾವಣೆ ವೇಳೆ ಕ್ರೈಸ್ತ ಬಾಹುಳ್ಯವಿರುವ ಕೆಲವು ಬೂತ್‌ಗಳಲ್ಲಿ ಬಿಜೆಪಿಯ ಮತ ಗಳಿಕೆ ಏರಿಕೆ ಕಂಡಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಬಿಜೆಪಿಯು ಕ್ರೈಸ್ತ ಸಮುದಾಯದಲ್ಲಿ ಸುಮಾರು 10-12% ಮತಗಳನ್ನು ಪಡೆಯುವ ಗುರಿಯನ್ನಿಟ್ಟುಕೊಂಡಿದೆ.

ಇದನ್ನು ಓದಿದ್ದೀರಾ? ಕೇರಳ ಚುನಾವಣೆ | ಪ್ರಚಾರ ಸಮಿತಿಯಲ್ಲಿ ಶಶಿ ತರೂರ್‌ಗೆ ಪ್ರಮುಖ ಸ್ಥಾನ; ಭಿನ್ನಮತ ಬದಿಗೊತ್ತಿದ ಕಾಂಗ್ರೆಸ್ ತಂತ್ರವೇನು?

ಈ ಹಿಂದೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಮಧ್ಯ ಕೇರಳದ ಕೊಟ್ಟಾಯಂ, ಇಡುಕ್ಕಿ, ಪತ್ತನಂತಿಟ್ಟನ ಕ್ರೈಸ್ತ ಮತದಾರರು ಈಗ ಪರ್ಯಾಯಗಳನ್ನು ಹುಡುಕುತ್ತಿರುವುದು ವಾಸ್ತವ. ಇದಕ್ಕೆ ಮುಖ್ಯ ಕಾರಣ ಪ್ರಾದೇಶಿಕ ಪಕ್ಷ ಕೇರಳ ಕಾಂಗ್ರೆಸ್ (ಮಣಿ) ಬಣವು ಎಡರಂಗದ ಜತೆ ಸೇರಿರುವುದು ಮತ್ತು ನಾಯಕತ್ವದ ಕೊರತೆ. ಸಮುದಾಯದ ಹಿತಾಸಕ್ತಿಗಳನ್ನು ಕಾಪಾಡುವ ಪ್ರಬಲ ನಾಯಕತ್ವದ ಕೊರತೆ ಕಾಂಗ್ರೆಸ್‌ನಲ್ಲಿ ಕಾಣುತ್ತಿದೆ ಎಂಬ ಅಭಿಪ್ರಾಯಗಳೂ ಇವೆ. ಇವೆಲ್ಲವುದರ ನಡುವೆ ಕಾಂಗ್ರೆಸ್ ತನ್ನ ಮತ ಬ್ಯಾಂಕ್ ಅನ್ನು ಮರಳಿ ಪಡೆಯುವ ಸತತ ಪ್ರಯತ್ನದಲ್ಲಿದೆ. ಕ್ರೈಸ್ತ ಸಮುದಾಯವನ್ನು ಓಲೈಸಲು ಕಾಂಗ್ರೆಸ್ ಕಳೆದ ವರ್ಷ ತನ್ನ ರಾಜ್ಯ ಘಟಕದ ಮುಖ್ಯಸ್ಥರನ್ನಾಗಿ ಮೂರು ಬಾರಿ ಶಾಸಕರಾಗಿರುವ ಸನ್ನಿ ಜೋಸೆಫ್ ಅವರನ್ನು ನೇಮಿಸಿದೆ.

ಕಾಂಗ್ರೆಸ್ ಮೈತ್ರಿಯಲ್ಲಿ ಮುಸ್ಲಿಂ ಲೀಗ್‌ನ ಪ್ರಭಾವ ಹೆಚ್ಚಾಗುತ್ತಿದೆ ಎಂಬ ಆರೋಪಗಳೂ ಇವೆ. ಇದರಿಂದ ಕ್ರೈಸ್ತ ಸಮುದಾಯ ಯುಡಿಎಫ್‌ ಮೇಲೆ ಅಸಮಾಧಾನ ಹೊಂದಿದೆ. ಇದನ್ನು ಎಡಪಕ್ಷಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿವೆ. ಇನ್ನೊಂದೆಡೆ ಬಿಜೆಪಿ ಕೋಮು ಆಧಾರದಲ್ಲಿಯೇ ರಾಜಕೀಯದಾಟ ಮುಂದುವರೆಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರುಗಳು ಚರ್ಚ್‌ಗಳ ಮುಖ್ಯಸ್ಥರನ್ನು ಭೇಟಿಯಾಗುತ್ತಿದ್ದಾರೆ. ಇತರೆ ರಾಜ್ಯಗಳಲ್ಲಿ ಕ್ರೈಸ್ತರು ಮತಾಂತರ ಮಾಡುವವರು, ಹಿಂದೂ ವಿರೋಧಿಗಳೆಂದು ಕರೆಯುವ ಬಿಜೆಪಿ ಕೇರಳದಲ್ಲಿ ಕ್ರೈಸ್ತರ ಮತಕ್ಕೆ ಬಲೆ ಬೀಸುತ್ತಲೇ ಇದೆ.

ಇಷ್ಟು ಮಾತ್ರವಲ್ಲದೆ ಪ್ಯಾಲೇಸ್ತೀನ್-ಇಸ್ರೇಲ್ ಸಂಘರ್ಷ, ಕೆಲವು ಆಫ್ರಿಕನ್ ದೇಶಗಳಲ್ಲಿನ ಜನಾಂಗೀಯ ಗುಂಪುಗಳ ನಡುವಿನ ಘರ್ಷಣೆಯು ಕೇರಳದಲ್ಲಿ ಮುಸ್ಲಿಮರ ವಿರುದ್ಧ ಕ್ರೈಸ್ತರ ಒಂದು ವಿಭಾಗದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಭಜನೆಗೆ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವ ಬಿಜೆಪಿ ಪರ ಕ್ರಿಶ್ಚಿಯನ್ ಅಸೋಸಿಯೇಷನ್ ​​ಮತ್ತು ಅಲೈಯನ್ಸ್ ಫಾರ್ ಸೋಶಿಯಲ್ ಆಕ್ಷನ್ (CASA) ಕಾರಣವೆಂದರೆ ತಪ್ಪಾಗದು. ಒಟ್ಟಿನಲ್ಲಿ ‘ಲವ್‌ ಜಿಹಾದ್’ ಎಂಬ ಕಪೋಲಕಲ್ಪಿತ ವಿಷಯ ಮತ್ತು ಮುಸ್ಲಿಂ ಜನಸಂಖ್ಯೆ ಹೆಚ್ಚಳ ಎಂಬ ಹುಸಿ ಸುಳ್ಳುಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಕ್ರೈಸ್ತರನ್ನು ತನ್ನತ್ತ ಸೆಳೆಯುವ ಯತ್ನ ಮಾಡುತ್ತಲಿದೆ. ಕ್ರೈಸ್ತ ಸಮುದಾಯ ಬಿಜೆಪಿಯ ಕೋಮು ಆಟಕ್ಕೆ ಬಲಿಯಾಗುತ್ತದೆಯೇ, ಇಲ್ಲವೇ ಎಂಬುದರ ಮೇಲೆ ಕೇರಳದ ಚುನಾವಣಾ ಫಲಿತಾಂಶ ನಿಂತಿದೆ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...