ದುಷ್ಟ ಅಮೆರಿಕ ಪುಟ್ಟ ವೆನೆಜುವೆಲಾ ಮೇಲೆ ಬಿದ್ದಿರುವುದೇಕೆ?

Date:

ಪುಟ್ಟ ದೇಶ ವೆನೆಜುವೆಲಾದ ಮೇಲೆ ದೈತ್ಯ-ದುಷ್ಟ ಅಮೆರಿಕ ಯುದ್ಧ ಸಾರಿದೆ. ಅದು ತನ್ನ ಹಿಡಿತದಲ್ಲಿರಬೇಕು, ಹೇಳಿದಂತೆ ಕೇಳಬೇಕು, ಕಚ್ಚಾ ತೈಲವನ್ನು ತನಗಲ್ಲದೆ ಯಾರಿಗೂ ಮಾರಬಾರದು ಎಂಬ ಕೆಟ್ಟ ಹಟ ಅಮೆರಿಕದ್ದು. 

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುಟ್ಟ ವೆನೆಜುವೆಲಾ ದೇಶದ ಮೇಲೆ ಯುದ್ಧ ಸಾರಿದ್ದಾರೆ. ಆ ಪುಟ್ಟ ದೇಶದ ಸುತ್ತ ಅಮೆರಿಕ ನೌಕಾಪಡೆಯ ಶಸ್ತ್ರಸಜ್ಜಿತ ಯುದ್ಧನೌಕೆಗಳನ್ನು ನಿಲ್ಲಿಸಿ ವೆನೆಜುವೆಲಾ ಜನರಲ್ಲಿ ಭಯ, ಆತಂಕ ಮೂಡಿಸಿದ್ದಾರೆ. ಏಕೆ ಎಂದು ಕೇಳಿದರೆ, ‘ವೆನೆಜುವೆಲಾ ಈಗ ಡ್ರಗ್ ಕ್ಯಾಪಿಟಲ್ ಆಗಿದೆ, ಅದನ್ನು ಹದ್ದುಬಸ್ತಿನಲ್ಲಿಡಬೇಕು’ ಎಂದು ಹೇಳುತ್ತಿದ್ದಾರೆ. ಆ ಪ್ರೊಪಗ್ಯಾಂಡವನ್ನೇ ಅಮೆರಿಕದ ಮಾಧ್ಯಮಗಳು ಪ್ರಪಂಚಕ್ಕೆ ಹಂಚುತ್ತಿವೆ. 

ದಕ್ಷಿಣ ಅಮೆರಿಕದ ಉತ್ತರ ಭಾಗದಲ್ಲಿರುವ ವೆನೆಜುವೆಲಾ ಪುಟ್ಟ ಸ್ವತಂತ್ರ ರಾಷ್ಟ್ರ. ಉತ್ತರಕ್ಕೆ ಕೆರಿಬಿಯನ್ ಸಮುದ್ರ, ದಕ್ಷಿಣಕ್ಕೆ ಬ್ರೆಜಿಲ್, ಪೂರ್ವಕ್ಕೆ ಗಯಾನ, ಮತ್ತು ಪಶ್ಚಿಮಕ್ಕೆ ಕೊಲಂಬಿಯಾ ದೇಶಗಳಿರುವ ವೆನೆಜುವೆಲಾ, ಕೇವಲ 9 ಸಾವಿರ ಚದರ ಕಿಲೋಮೀಟರ್ ವಿಸ್ತ್ರೀರ್ಣವುಳ್ಳ, ಮೂರು ಕೋಟಿ ಜನರನ್ನು ಹೊಂದಿರುವ ಪುಟ್ಟ ದೇಶ.

ಈ ಮೊದಲು ಸ್ಪೇನ್ ವಸಾಹತು ಕಾಲನಿಯಾಗಿದ್ದ ವೆನೆಜುವೆಲಾ, ಈಗ ಸ್ವತಂತ್ರ ರಾಷ್ಟ್ರವಾಗಿದೆ. ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿದೆ. ಜನರಿಂದ ಆಯ್ಕೆಯಾದ ಜನನಾಯಕರು ಎಡಪಂಥೀಯ ವಿಚಾರಧಾರೆ ಮತ್ತು ಸಮಾಜವಾದಿ ಸಿದ್ಧಾಂತವನ್ನು ಅಳವಡಿಸಿಕೊಂಡಿದ್ದು, ಇಡೀ ಪ್ರಪಂಚದಲ್ಲಿಯೇ ಅತ್ಯುತ್ತಮ ಪಾರದರ್ಶಕ ಚುನಾವಣಾ ಪ್ರಕ್ರಿಯೆಗೆ ಒಳಪಡುವ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಸರು ತಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ಗಾಜಾದಲ್ಲಿ ಮುಂದುವರೆದ ಇಸ್ರೇಲ್‌ ಕ್ರೌರ್ಯ; ಪ್ಯಾಲೆಸ್ಟೀನ್‌ ಸಮಾಜದ ಅಸ್ತಿತ್ವ ನಾಶ

ನಿಸರ್ಗದತ್ತ ಅತಿ ಹೆಚ್ಚು ತೈಲ ನಿಕ್ಷೇಪಗಳನ್ನು ಹೊಂದಿರುವ ವೆನೆಜುವೆಲಾ, ಶೇ. 80ರಷ್ಟು ಹೊರದೇಶಗಳಿಗೆ ರಫ್ತು ಮಾಡುವ ಮೂಲಕ ಅರ್ಥವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ಸಂಪದ್ಭರಿತ ದೇಶವೆನಿಸಿಕೊಂಡಿದೆ. ಆದರೆ ವೆನೆಜುವೆಲಾ ಕಚ್ಚಾ ತೈಲವನ್ನಷ್ಟೇ ರಫ್ತು ಮಾಡುತ್ತಿದ್ದು, ಅದರ ಸಂಸ್ಕರಿತ ತೈಲದ ಒಡೆತನ ಅಮೆರಿಕದ ತೈಲ ಕಂಪನಿಗಳ ಕೈಯಲ್ಲಿದೆ. ಅಮೆರಿಕದ ಅಧೀನದಲ್ಲಿರುವ ದ್ವೀಪರಾಷ್ಟ್ರಗಳಲ್ಲಿ ಸಂಸ್ಕರಿತ ಘಟಕಗಳಿದ್ದು, ಅಲ್ಲಿಂದ ಅಮೆರಿಕ ಬೇರೆ ಬೇರೆ ದೇಶಗಳಿಗೆ ರಫ್ತು ಮಾಡಿ, ಭಾರೀ ಲಾಭ ಮಾಡಿಕೊಳ್ಳುತ್ತಿದೆ. ತೈಲ ಉತ್ಪನ್ನ ಮತ್ತು ಮಾರಾಟದ ಮೇಲೆ ಹಿಡಿತ ಸಾಧಿಸಿದೆ.

ಹಲವಾರು ವರ್ಷಗಳ ಹೋರಾಟದ ಫಲವಾಗಿ ವೆನೆಜುವೆಲಾ ಸ್ಪೇನ್ ವಸಾಹುತುವಿನಿಂದ ಮುಕ್ತಿ ಪಡೆದು ಸ್ವತಂತ್ರ ರಾಷ್ಟ್ರವಾದರೂ, ಅಮೆರಿಕದ ಕಪಿಮುಷ್ಟಿಯಿಂದ ಹೊರಬರಲಾಗಿಲ್ಲ. ಕಚ್ಚಾ ತೈಲವನ್ನು ಅಮೆರಿಕಕ್ಕಷ್ಟೇ ಮಾರಾಟ ಮಾಡುವ ಒಪ್ಪಂದವನ್ನು ಮುರಿಯಲಾಗಿಲ್ಲ. ವೆನೆಜುವೆಲಾದ ಚುನಾಯಿತ ಸರ್ಕಾರಗಳು ಈ ಹಾದಿಯಲ್ಲಿ ನಿರಂತರ ಪ್ರಯತ್ನದಲ್ಲಿವೆ. ಆದರೆ, ಅಲ್ಲಿನ ಸೇನಾ ವ್ಯವಸ್ಥೆ ಅದಕ್ಕೆ ಆಸ್ಪದ ಕೊಡದೆ; ಸರ್ಕಾರಗಳನ್ನೇ ಅಸ್ಥಿರಗೊಳಿಸುವ, ತಾವೇ ಅಧಿಕಾರಕ್ಕೇರುವ ಕ್ಷಿಪ್ರ ಕ್ರಾಂತಿಗಳೂ ನಡೆಯುತ್ತಿವೆ.

ಕುತೂಹಲಕರ ಸಂಗತಿ ಎಂದರೆ, ದಕ್ಷಿಣ ಅಮೆರಿಕ ಮತ್ತು ವೆನೆಜುವೆಲಾದ ಹೆಚ್ಚಿನ ಪಾಲು ಮಿಲಿಟರಿ ತರಬೇತುದಾರರು, ಸೇನಾ ಮುಖ್ಯಸ್ಥರು ಅಮೆರಿಕದಿಂದ ತರಬೇತಿ ಪಡೆವವರೇ ಆಗಿದ್ದರೆ. ಅವರಿಗೆ ಅಮೆರಿಕದ ಸಂಪೂರ್ಣ ಬೆಂಬಲವಿದೆ. ಹಣಕಾಸಿನ ನೆರವಿದೆ. ಚುನಾಯಿತ ಸರ್ಕಾರಗಳನ್ನು ಕೆಡವಿ ಅಧಿಕಾರಕ್ಕೇರಲು ಹವಣಿಸುತ್ತಿರುತ್ತವೆ. ಸರ್ಕಾರ ಮತ್ತು ಮಿಲಿಟರಿ ನಡುವಿನ ಈ ಆಂತರಿಕ ಕಿತ್ತಾಟದ ಲಾಭವನ್ನು ಅಮೆರಿಕ ಪಡೆಯುತ್ತಿದೆ. ಆ ದೇಶ ಅತಂತ್ರ ಸ್ಥಿತಿಯಲ್ಲಿರುವಂತೆ ನೋಡಿಕೊಂಡಿದೆ. 

ಅಮೆರಿಕದ ಈ ಸಾಮ್ರಾಜ್ಯ ವಿಸ್ತರಣೆಯ ದುಷ್ಟತನ ಇವತ್ತಿನದಲ್ಲ. ಬಹಳ ಹಿಂದಿನಿಂದಲೂ ಇದು ನಡೆದುಕೊಂಡು ಬಂದಿದೆ. ಇದನ್ನು ಮೊದಲ ಬಾರಿಗೆ ಖಂಡಿಸಿ, ಅಮೆರಿಕ ಪ್ರೇರಿತ ಸರ್ಕಾರದ ವಿರುದ್ಧ ಬಂಡಾಯವೆದ್ದವರು ಮಾಜಿ ಅಧ್ಯಕ್ಷ ಹ್ಯೂಗೋ ಚಾವೆಜ್. 1992ರಲ್ಲಿ ಅಲ್ಲಿನ ಪ್ರಭುತ್ವ ಚಾವೆಜ್‌ರನ್ನು ಬಂಧಿಸಿ, 2 ವರ್ಷಗಳ ಕಾಲ ಜೈಲಿಗೆ ಹಾಕಿತು.

ಆದರೆ ಚಾವೆಜ್ ಧೃತಿಗೆಡಲಿಲ್ಲ. ಅಮೆರಿಕದ ವಿರುದ್ಧದ ಹೋರಾಟವನ್ನು ನಿಲ್ಲಿಸಲಿಲ್ಲ. ವೆನೆಜುವೆಲಾದ ಇತಿಹಾಸದತ್ತ ಹೊರಳಿ ನೋಡಿದ ಚಾವೆಜ್, ಸ್ಪೇನ್‌ರ ಹಿಡಿತದಿಂದ ಬಿಡಿಸಿದ, ಸ್ವತಂತ್ರ ರಾಷ್ಟ್ರವನ್ನಾಗಿಸಿದ ಸೈಮನ್ ಬೊಲೇವಾರ್ ಅವರನ್ನು ಆದರ್ಶವನ್ನಾಗಿಟ್ಟುಕೊಂಡರು. ಆತನ ಸಂವಿಧಾನ ಮತ್ತು ತತ್ವ-ಸಿದ್ಧಾಂತಗಳನ್ನು ಅಳವಡಿಸಿಕೊಂಡರು. ಜೈಲಿನಿಂದಲೇ ಹೋರಾಟ ಕಟ್ಟಿದರು. ಇದು ನಮ್ಮದೇ ನೆಲಕ್ಕಾಗಿ ನಾವು ಹೋರಾಡುತ್ತಿರುವ ಮತ್ತೊಂದು ಸ್ವಾತಂತ್ರ್ಯ ಹೋರಾಟವೆಂದು ವೆನೆಜುವೆಲಾ ಜನರನ್ನು ಜಾಗೃತಗೊಳಿಸಿದರು. ಆ ಹೋರಾಟಕ್ಕೆ ‘ಬೊಲೇವಾರಿಯನ್ ರೆವಲ್ಯೂಷನ್’ ಎಂದು ಹೆಸರಿಟ್ಟು ಅಮೆರಿಕದ ದುಷ್ಟತನವನ್ನು, ಷಡ್ಯಂತ್ರವನ್ನು ಬಯಲು ಮಾಡಿದರು.

Venezuela

ತೊಂಬತ್ತರ ದಶಕದ ಕೊನೆಯ ವರ್ಷಗಳಲ್ಲಿ ಎಡಪಂಥೀಯ ಅಲೆ ಲ್ಯಾಟಿನ್ ಅಮೆರಿಕದಾದ್ಯಂತ ಬೀಸತೊಡಗಿತು. 1998ರಲ್ಲಿ ಪ್ರಜಾತಾಂತ್ರಿಕ ಚುನಾವಣೆ ಮೂಲಕ ವೆನೆಜುವೆಲಾದ ಜನ ಹ್ಯೂಗೋ ಚಾವೆಜ್ ಪರ ಗಟ್ಟಿಯಾಗಿ ನಿಂತರು. ಕುತಂತ್ರಿ ಆಳುವ ವರ್ಗ ಮತ್ತು ಅದರ ಹಿಂದಿದ್ದ ಅಮೆರಿಕವನ್ನು ಸೋಲಿಸಿದರು. ಚಾವೆಜ್ ಮತ್ತೆ ವೆನೆಜುವೆಲಾದ ಅಧ್ಯಕ್ಷರಾಗಿ ಅಧಿಕಾರಕ್ಕೇರಿದರು. ಅದು ದೈತ್ಯ ಅಮೆರಿಕಕ್ಕಾದ ಭಾರೀ ಮುಖಭಂಗವೆಂದು ಬಣ್ಣಿಸಲಾಯಿತು.

ಆದರೆ ಅವಮಾನಕ್ಕೊಳಗಾದ ಅಮೆರಿಕ ಸುಮ್ಮನಿರಲಿಲ್ಲ. 2002ರಲ್ಲಿ ಮತ್ತೊಮ್ಮೆ ತನ್ನ ಹಿಡಿತದಲ್ಲಿದ್ದ ಮಿಲಿಟರಿಯನ್ನು ಬಳಸಿಕೊಂಡು ಸರ್ಕಾರದ ವಿರುದ್ಧ ಜನ ದಂಗೆ ಏಳುವಂತೆ ನೋಡಿಕೊಂಡಿತು. ಅದಕ್ಕಾಗಿ ಒಂದಷ್ಟು ಪೊಲೀಸರನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಆ ಹತ್ಯೆಯನ್ನು ಸರ್ಕಾರದ ತಲೆಗೆ ಕಟ್ಟಲಾಯಿತು. ಅದರ ವಿರುದ್ಧ ತಾವೇ ತರಬೇತುಗೊಳಿಸಿದ್ದ ಜನ ದಂಗೆ ಏಳುವಂತೆ ನೋಡಿಕೊಳ್ಳಲಾಯಿತು.

ಮುಂದುವರೆದು, ಅಧ್ಯಕ್ಷ ಚಾವೆಜ್ ಆಡಳಿತ ಹಳಿ ತಪ್ಪಿದೆ, ಜನ ಆತನ ವಿರುದ್ಧ ದಂಗೆ ಎದ್ದಿದ್ದಾರೆ ಎಂದು ಪ್ರೊಪಗ್ಯಾಂಡ ಹಬ್ಬಿಸಲಾಯಿತು. ಮಿಲಿಟರಿ ಮುಖ್ಯಸ್ಥನನ್ನು ಬಿಟ್ಟು ಚಾವೆಜ್ ಹತ್ಯೆ ಮಾಡಲೂ ಮುಂದಾಯಿತು. ಆದರೆ ವೆನೆಜುವೆಲಾ ಜನತೆ ದೊಡ್ಡ ಪ್ರಮಾಣದಲ್ಲಿ ರಾಜಧಾನಿ ಕ್ಯಾರಕಾಸ್‌ಗೆ ಸಾಗರದಂತೆ ಹರಿದುಬಂದು ಈ ಕ್ಷಿಪ್ರ ಕ್ರಾಂತಿಯನ್ನು ವಿಫಲಗೊಳಿಸಿತು. ಒತ್ತೆಯಾಳುವಾಗಿ ಇಟ್ಟುಕೊಂಡಿದ್ದ ಚಾವೆಜ್‌ರನ್ನು ಬಿಡುಗಡೆಗೊಳಿಸಲು ಸಫಲವಾಯಿತು. ಇದರ ಬಗ್ಗೆ ಬ್ರಿಟನ್ ಪತ್ರಕರ್ತರೊಬ್ಬರು, ಅಮೆರಿಕದ ಈ ಷಡ್ಯಂತ್ರವನ್ನು ‘ರೆವಲ್ಯೂಷನ್ ವಿಲ್ ನಾಟ್ ಬಿ ಟೆಲಿವೈಸ್ಡ್’ ಎಂಬ ಸಾಕ್ಷ್ಯಚಿತ್ರದ ಮೂಲಕ ಎಳೆ ಎಳೆಯಾಗಿ ಬಿಚ್ಚಿಟ್ಟು, ಬಯಲುಗೊಳಿಸಿದರು. ಅಮೆರಿಕದ ಷಡ್ಯಂತ್ರಕ್ಕೆ ಮತ್ತೊಮ್ಮೆ ಸೋಲಾಯಿತು.

ಏತನ್ಮಧ್ಯೆ, 2013ರಲ್ಲಿ ಹ್ಯೂಗೋ ಚಾವೆಜ್ ತೀರಿಹೋದರು. ಆತನ ನಂತರ ನಿಕಲೋ ಮದುರೋ ಅಧ್ಯಕ್ಷರಾದರು. ಈತ ಚಾವೆಜ್ ನಂತೆ ಜನನಾಯಕನಾಗಿಲ್ಲದಿದ್ದರು, ವೆನೆಜುವೆಲಾದ ಸಾರ್ವಭೌಮತ್ವ ಮತ್ತು ಸ್ವತಂತ್ರ ರಾಷ್ಟ್ರವಾಗಿರಬೇಕು ಎಂಬುದರಲ್ಲಿ ಯಾವುದೇ ರಾಜಿ ಮಾಡಿಕೊಂಡವರಲ್ಲ. ಹಾಗಾಗಿ ಜನ ಈತನ ಪರವಿದ್ದಾರೆ.

ಆದರೆ, ಈತನ ಅಧಿಕಾರಾವಧಿಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರುಪೇರಾಗಿದೆ. ಅದನ್ನೇ ಅಮೆರಿಕ ಮುಂದು ಮಾಡಿ, ಈತನನ್ನು ಹತ್ಯೆ ಮಾಡಲು 2-3 ಬಾರಿ ಪ್ರಯತ್ನಿಸಿದೆ. ಆಗದಿದ್ದಾಗ ವೆನೆಜುವೆಲಾದಲ್ಲಿಯೇ ಗಾಯ್ ಡೋ ಎಂಬುವನನ್ನು ಹುಟ್ಟುಹಾಕಿ, ಆತನಿಗೆ ಮಿಲಿಟರಿ ನೆರವು ನೀಡಿ, ದೇಶದ ಅಧ್ಯಕ್ಷ ಎಂದು ಘೋಷಿಸಿದೆ. 2019ರಲ್ಲಿ ಗಾಯ್ ಡೋ, ತನಗೆ ತಾನೇ ವೆನೆಜುವೆಲಾದ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದೂ ಆಗಿಹೋಯಿತು. ಲ್ಯಾಟಿನ್ ಅಮೆರಿಕದ ಜನ ಆತನನ್ನು ಅಧ್ಯಕ್ಷ ಎಂದು ಒಪ್ಪಿ, ಕೂಗಲಿಕ್ಕೆ ಶುರುಮಾಡಿದರು. ಆದರೆ ಆ ಷಡ್ಯಂತ್ರವೂ ಸೋಲಾಯಿತು.

ಅದರ ನಂತರ, 2020ರಲ್ಲಿ, ಅಮೆರಿಕದಲ್ಲಿ ಬೈಡನ್ ಅಧ್ಯಕ್ಷರಾಗಿದ್ದಾಗ, ಮತ್ತೊಮ್ಮೆ ಅದೇ ಪ್ರಯತ್ನಕ್ಕೆ ಕೈಹಾಕಲಾಯಿತು. ಅಮೆರಿಕದಲ್ಲಿ ತರಬೇತಿ ಪಡೆದು ವೆನೆಜುವೆಲಾದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸೇನಾ ಮುಖ್ಯಸ್ಥರ ತಂಡ ಕಟ್ಟಿ, ಅವರಿಂದ ಚುನಾಯಿತ ಸರ್ಕಾರವನ್ನು ಉರುಳಿಸಲು ಯತ್ನಿಸಲಾಯಿತು. ಆದರೆ ಅದು ಕೂಡ ಸೋಲಾಯಿತು.

ಆ ನಂತರ 2024ರ ಚುನಾವಣೆ ನಡೆಯಿತು. ಮದುರೋ ವಿರುದ್ಧ ಅಮೆರಿಕ ಬೆಂಬಲಿತ ಸೈನಿಕರು ಸ್ಪರ್ಧಿಸಿದರು. ಅದು ಹೊರಗಿನ ಜಗತ್ತಿಗೆ ವೆನೆಜುವೆಲಾದ ಸ್ಥಳೀಯರೇ ಸ್ಪರ್ಧಿಸಿದಂತೆ ಕಂಡರೂ, ಅಲ್ಲಿ ಅಮೆರಿಕ ಷಡ್ಯಂತ್ರ ಅಡಗಿತ್ತು. ಆದರೆ ಅದಕ್ಕೂ ಸೋಲಾಯಿತು.

ಹೀಗೆ ದುಷ್ಟ ಅಮೆರಿಕ ಪುಟ್ಟ ದೇಶವಾದ ವೆನೆಜುವೆಲಾದ ಮೇಲೆ ಸುಮಾರು 27 ವರ್ಷಗಳಿಂದ ನಿರಂತರವಾಗಿ ಒಂದರ ಮೇಲೊಂದು ಷಡ್ಯಂತ್ರ ಹೆಣೆಯುತ್ತಲೇ ಇದೆ. ಸೋಲುತ್ತಲೂ ಇದೆ. ಆದರೆ ಈಗ ಅಮೆರಿಕ ಟ್ರಂಪ್ ಕೈವಶವಾಗಿರುವುದರಿಂದ, ಆತ ಈ ಹಿಂದಿನ ಅಮೆರಿಕದ ಅಧ್ಯಕ್ಷರಂತಲ್ಲದಿರುವುದರಿಂದ, ನೇರವಾಗಿಯೇ ದಾಳಿಗೆ ಇಳಿದಿದ್ದಾರೆ.

ಅಮೆರಿಕದ ಸುದ್ದಿ ಮಾಧ್ಯಮಗಳನ್ನು ಬಳಸಿಕೊಂಡು ವೆನೆಜುವೆಲಾ ಎಂದರೆ, ಡ್ರಗ್ ಕ್ಯಾಪಿಟಲ್ ಎಂದು ಬ್ರಾಂಡ್ ಮಾಡಲು, ಅದನ್ನು ಪ್ರಪಂಚದಾದ್ಯಂತ ಬಿತ್ತರಿಸಲು ಮುಂದಾಗಿದ್ದಾರೆ. ಅಷ್ಟೇ ಅಲ್ಲ, ವೆನೆಜುವೆಲಾದ ಕೆರಬಿಯನ್ ಸಮುದ್ರದಲ್ಲಿ ಅಮೆರಿಕದ ಬಲಶಾಲಿ ನೌಕಾಪಡೆಗಳನ್ನು ಸಜ್ಜುಗೊಳಿಸಲಾಗಿದೆ. ಯಾವ ಕ್ಷಣದಲ್ಲಾದರೂ ವೆನೆಜುವೆಲಾದ ಮೇಲೆ ದಾಳಿ ಮಾಡಬಹುದೆಂಬ ಆತಂಕ ಭಯ ಆವರಿಸಿದೆ.

ಇದನ್ನು ಓದಿದ್ದೀರಾ?: ರಷ್ಯಾದಿಂದ ಕಚ್ಚಾ ತೈಲ ಆಮದು: ಕನಿಷ್ಠ ಬೆಲೆಗೆ ಸಿಕ್ಕರೂ ಪೆಟ್ರೋಲ್-ಡೀಸೆಲ್ ಬೆಲೆ ಏಕೆ ಕಡಿಮೆಯಾಗಿಲ್ಲ?

Venezuela1

ವೆನೆಜುವೆಲಾ ಪುಟ್ಟ ದೇಶವಾದರೂ, ಕಡಿಮೆ ಜನಸಂಖ್ಯೆ ಹೊಂದಿದ್ದರೂ ಅಧ್ಯಕ್ಷ ಮದುರೋ, ದೇಶದ ಒಳಿತಿಗಾಗಿ ಒಂದಾಗಿ ಎಂದು ಜನತೆಗೆ ಕರೆ ಕೊಟ್ಟಿದ್ದಾರೆ. 10ರಿಂದ 60ರ ವಯಸ್ಸಿನ ಎಲ್ಲರೂ ದೇಶಕ್ಕಾಗಿ ಹೋರಾಡಲು ಮುಂದೆ ಬನ್ನಿ ಎಂದಿದ್ದಾರೆ. ಅವರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದಾರೆ. ಅಮೆರಿಕಕ್ಕೆ ಪ್ರತಿರೋಧ ಒಡ್ಡಲು ಸಜ್ಜಾಗಿದ್ದಾರೆ.

ಒಟ್ಟಿನಲ್ಲಿ ಪುಟ್ಟ ದೇಶ ವೆನೆಜುವೆಲಾದ ಮೇಲೆ ದೈತ್ಯ-ದುಷ್ಟ ಅಮೆರಿಕ ಯುದ್ಧ ಸಾರಿದೆ. ಅದು ತನ್ನ ಹಿಡಿತದಲ್ಲಿರಬೇಕು, ಹೇಳಿದಂತೆ ಕೇಳಬೇಕು, ಕಚ್ಚಾ ತೈಲವನ್ನು ತನಗಲ್ಲದೆ ಯಾರಿಗೂ ಮಾರಬಾರದು ಎಂಬ ಕೆಟ್ಟ ಹಟ ಅಮೆರಿಕದ್ದು. ಅಮೆರಿಕದ ಈ ಸಾಮ್ರಾಜ್ಯಶಾಹಿ ದಬ್ಬಾಳಿಕೆಯನ್ನು ಕಂಡಿರುವ ಪ್ರಪಂಚದ ಜನ ಪುಟ್ಟ ವೆನೆಜುವೆಲಾದ ಪರ ನಿಲ್ಲಬೇಕಾಗಿದೆ. ದಮನಕಾರಿ ಅಮೆರಿಕವನ್ನು ಸೋಲಿಸಬೇಕಾಗಿದೆ.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...