5 ರಾಜ್ಯಗಳ ಚುನಾವಣೆಯನ್ನು ಪ್ರಭಾವಿಸುವುದೇ ಬಿಎಂಸಿ ಫಲಿತಾಂಶ?

Date:

ಬೃಹನ್‌ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಸೇರಿದಂತೆ ಮಹಾರಾಷ್ಟ್ರದ 28 ನಗರ ಸ್ಥಳೀಯ ಸಂಸ್ಥೆಗಳ ಫಲಿತಾಂಶ ಪ್ರಕಟವಾಗಿದೆ. ಒಟ್ಟು 2,869 ಸ್ಥಾನಗಳಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು 1,786 ಸ್ಥಾನಗಳನ್ನು ಗೆದ್ದಿದೆ. ಅದರಲ್ಲೂ ಬಿಜೆಪಿಯೇ 1,471 ಸ್ಥಾನಗಳನ್ನು ಗೆದ್ದುಕೊಂಡಿದೆ. ಮುಖ್ಯವಾಗಿ ಬಿಎಂಸಿಯ 227 ಸ್ಥಾನಗಳ ಪೈಕಿ ಬಿಜೆಪಿ 87, ಶಿವಸೇನೆ (ಶಿಂಧೆ ಬಣ) 27, ಎನ್‌ಸಿಪಿ (ಅಜಿತ್ ಬಣ) 3 ಒಟ್ಟು 117 ಸ್ಥಾನಗಳನ್ನು ಗೆದ್ದಿವೆ. ಬಿಎಂಸಿ ಆಡಳಿತ ರಚಿಸಲು ಸಜ್ಜಾಗಿದೆ. ಇದು, ಮುಂಬೈನಲ್ಲಿ ಠಾಕ್ರೆ ಕುಟುಂಬದ ಅಧಿಪತ್ಯಕ್ಕೆ ಅಂತ್ಯ ಹಾಡಲಿದೆ.

ದೇಶದ ವಾಣಿಜ್ಯ ರಾಜಧಾನಿಯಾಗಿರುವ ಮುಂಬೈ ಪಾಲಿಕೆಯಲ್ಲಿ ಬಿಜೆಪಿ ಗೆಲುವಿನ ಈ ಚುನಾವಣಾ ಫಲಿತಾಂಶವು ಇದೇ ವರ್ಷ ನಡೆಯಲಿರುವ ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಹಾಗೂ ಪುದುಚೇರಿ ವಿಧಾನಸಭಾ ಚುನಾವಣೆಗಳ ಮೇಲೂ ಪರಿಣಾಮ ಬೀರಬಹುದೇ ಎಂಬ ಚರ್ಚೆಗಳು ನಡೆಯುತ್ತಿವೆ. ನೇರವಾಗಿ ಅಲ್ಲದಿದ್ದರೂ, ಭಾಗಶಃ ಪ್ರಭಾವ ಬೀರಬಹುದು ಎಂಬ ಅಭಿಪ್ರಾಯಗಳುವ ವ್ಯಕ್ತವಾಗುತ್ತಿವೆ. ರಾಜಕೀಯ ಚಲನೆ, ಪ್ರಚಾರ, ಪಕ್ಷಗಳ ಆತ್ಮವಿಶ್ವಾಸ, ಮತದಾರರ ಮನೋಭಾವ ಹಾಗೂ ರಾಷ್ಟ್ರೀಯ ಮಟ್ಟದ ರಾಜಕೀಯ ಚರ್ಚೆಗಳನ್ನು ಈ ಫಲಿತಾಂಶ ಪ್ರಭಾವಿಸುತ್ತದೆ ಎಂದೇ ಭಾವಿಸಲಾಗಿದೆ.

ಮಹಾರಾಷ್ಟ್ರ ಸ್ಥಳೀಯ ಚುನಾವಣೆಗಳಲ್ಲಿ ಮಹಾಯುತಿ ಗೆಲುವು ಸಾಧಿಸಿದ್ದರೂ, ಪ್ರಧಾನ ಪಾಲು/ಪಾತ್ರ ಬಿಜೆಪಿಯದ್ದೇ ಆಗಿದೆ. ಪುಣೆ, ಥಾಣೆ, ನಾಗಪುರ್, ನಾಸಿಕ್ ಸೇರಿದಂತೆ ಹಲವು ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದು ಬಿಜೆಪಿ ತನ್ನನ್ನು ತಾನು ‘ಅಜೇಯ’ನೆಂದು ಬಣ್ಣಿಸಿಕೊಳ್ಳಲು ಎಡೆ ಮಾಡಿಕೊಡುತ್ತದೆ. ಜೊತೆಗೆ, ‘ಟ್ರಿಪಲ್ ಇಂಜಿನ್ ಸರ್ಕಾರ’ ಕೇಂದ್ರ-ರಾಜ್ಯ-ಸ್ಥಳೀಯ) ಮಾದರಿಯನ್ನು ರೂಪಿಸಲು ಬಿಜೆಪಿಗೆ ನೆರವಾಗುತ್ತದೆ. ಈ ಗೆಲುವನ್ನೇ ಮುಂದಿಟ್ಟುಕೊಂಡು ಬಿಜೆಪಿ ಐದು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಗಮನ ಸೆಳೆಯುವ ಸಾಧ್ಯತೆಗಳಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಗಮನಾರ್ಹವಾಗಿ, ಬಿಎಂಸಿ ಗೆಲುವು ಅಸ್ಸಾಂನಲ್ಲಿ ಬಿಜೆಪಿಗೆ ಹೆಚ್ಚು ಅನುಕೂಲ ಮಾಡಿಕೊಡುತ್ತದೆ. ಈಗಾಗಲೇ, ಅಸ್ಸಾಂನಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಹಿಂದುತ್ವ ಪ್ರತಿಪಾದನೆಯೊಂದಿಗೆ ಅಸ್ಸಾಂಅನ್ನು ಹಿಡಿತದಲ್ಲಿಟ್ಟುಕೊಳ್ಳಲು ನಿರಂತರವಾಗಿ ಶ್ರಮಿಸುತ್ತಿದೆ. ಜೊತೆಗೆ, ಪೌರತ್ವ, ಗಡಿ ಸಮಸ್ಯೆಗಳ ವಿಷಯವನ್ನು ಬಿಜೆಪಿ ಭಾವನಾತ್ಮಕವಾಗಿ ಹೆಣೆದಿದೆ. ಜೊತೆಗೆ, ಕೇಂದ್ರದಿಂದಲೂ ಅನುಕೂಲಗಳನ್ನು ಪಡೆಯುತ್ತಲೇ ಇದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿರುವ ಬಾಹ್ಯ ಸಮಸ್ಯೆಗಳಿಂದ ದೇಶವನ್ನು ರಕ್ಷಿಸುತ್ತದೆ ಎಂಬ ನಿರೂಪಣೆಯ ಜೊತೆಗೆ, ಆಂತರಿಕ ಅಭಿವೃದ್ಧಿಗೆ ಡಬಲ್/ಟ್ರಿಪಲ್ ಎಂಜಿನ್ ಸರ್ಕಾರದ ನಿರೂಪಣೆ ಕಟ್ಟಲು ಮತ್ತು ವಿಪಕ್ಷಗಳ ಮೈತ್ರಿಕೂಟದ ದುರ್ಬಲತೆಯನ್ನು ಪ್ರಚಾರ ಮಾಡಲು ಈ ಫಲಿಶಾಂತವು ಬಿಜೆಪಿಗೆ ದೊಡ್ಡ ಆತ್ಮವಿಶ್ವಾಸ ನೀಡುತ್ತದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ಇನ್ನು, ಪಶ್ಚಿಮ ಬಂಗಾಳದಲ್ಲಿ ಸದ್ಯದ ಪರಿಸ್ಥಿತಿಗೆ ಟಿಎಂಸಿ ನಂತರದ ಹೆಚ್ಚು ಪ್ರಬಲ ಪಕ್ಷವಾಗಿ ಬಿಜೆಪಿ ಬೆಳೆದಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸರ್ಕಾರವು ಕೇಂದ್ರ ಸರ್ಕಾರದ ಜೊತೆ ನಿರಂತರ ಸೆಣೆಸಾಟ ನಡೆಸುತ್ತಿದ್ದಾರೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ, ಕೇಂದ್ರದಿಂದ ನಿಧಿ ನಿರ್ಬಂಧ, ಕೇಂದ್ರೀಯ ತನಿಖಾ ಸಂಸ್ಥೆಗಳ ದುರ್ಬಳಕೆ ವಿಚಾರದಲ್ಲಿ ಮೋದಿ ಸರ್ಕಾರದ ವಿರುದ್ಧ ಮಮತಾ ಹೋರಾಡುತ್ತಿದ್ದಾರೆ. ಈ ಎಲ್ಲ ವಿಚಾರಗಳು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿಯ ಪ್ರಚಾರದ ಸರಕುಗಳು ಆಗಿರಲಿವೆ. ಆದರೆ, ಇದೇ ಸಂದರ್ಭದಲ್ಲಿ ಬಿಜೆಪಿ ತನ್ನ ವಾಟ್ಸ್‌ಆ್ಯಪ್ ಯೂನಿವರ್ಸಿಟಿ ಬಳಸಿಕೊಂಡು ಟಿಎಂಸಿ ವಿರುದ್ಧ ‘ಆಡಳಿತ ವಿರೋಧಿ ಅಲೆ’ ಸೃಷ್ಟಿಸಲು ಮತ್ತು ಹಿಂದುತ್ವವನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದೆ. ನಿರುದ್ಯೋಗ, ಬಡತನ, ಆರ್‌ಜಿ ಕರ್ ಕಾಲೇಜಿ ಅತ್ಯಾಚಾರ ಪ್ರಕರಣಗಳು ಸೇರಿದಂತೆ ಕೆಲವು ಅಂಶಗಳು ಮಮತಾ ಸರ್ಕಾರದ ವಿರುದ್ಧ ಜನರಲ್ಲಿ ಅಸಹನೆಯನ್ನೂ ಮೂಡಿಸಿವೆ. ಹಿಂದುತ್ವವೂ ಬೇರೂರುತ್ತಿದೆ. ಇದೆಲ್ಲವೂ ಚುನಾವಣೆಯಲ್ಲಿ ಬಿಜೆಪಿಗೆ ಹಕ್ಕು ಅವಕಾಶ ಒದಸುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಇದರ ಜೊತೆಗೆ, ಮಹಾರಾಷ್ಟ್ರದಲ್ಲಿ ಬಿಜೆಪಿಯ ನಿರಂತರ ಗೆಲುವು ಕೂಡ ಬಂಗಾಳ ಚುನಾವಣೆಯಲ್ಲಿ ಬಿಜೆಪಿಯ ಓಟಕ್ಕೆ ಮತ್ತಷ್ಟು ಪುಷ್ಠಿಕೊಡುವ ಸಾಧ್ಯತೆಗಳಿವೆ.

ಈ ಲೇಖನ ಓದಿದ್ದೀರಾ?: ಭಾರತದಲ್ಲಿ ದ್ವೇಷವೆಂಬುದು ಹೇಗೆಲ್ಲ ಅಧಿಕಾರಸ್ಥರ ವ್ಯಾಕರಣ ಆಗಿ ಹೋಯಿತು!

ಅದಾಗ್ಯೂ, ಮುಂಬೈ ಮತ್ತು ಮಹಾರಾಷ್ಟ್ರದ ಚುನಾವಣಾ ಫಲಿತಾಂಶವು ದಕ್ಷಿಣ ಭಾರತದ ರಾಜ್ಯಗಳಾದ ಕೇರಳ, ತಮಿಳುನಾಡು ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ಚುನಾವಣೆಗಳ ಮೇಲೆ ಹೆಚ್ಚು ಪ್ರಭಾವ ಬೀರುವ ಯಾವುದೇ ನಿರೀಕ್ಷೆಗಳಿಲ್ಲ. ಕೇರಳದಲ್ಲಿ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮೈತ್ರಿಕೂಟಗಳ ನಡುವೆ ನೇರ ಹಣಾಹಣಿ ನಡೆಯಲಿದೆ. ಇಲ್ಲಿ, ಬಿಜೆಪಿ ಮೂರನೇ ಆಟಗಾರ. ಕಳೆದ ವಿಧಾನಸಭಾ ಚುನಾವಣೆಗಿಂತ ಈ ಬಾರಿ ಎಲ್‌ಡಿಎಫ್‌ ಮತ್ತು ಯುಡಿಎಫ್‌ ನಡುವಿನ ಹೋರಾಟದಲ್ಲಿ ಬಿಜೆಪಿ ಒಂದಷ್ಟು ಲಾಭ ಮಾಡಿಸುವ ಸಾಧ್ಯತೆಗಳಂತೂ ಇವೆ. ಇತ್ತೀಚೆಗೆ ನಡೆದ ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಿರುವನಂತಪುರಂ ಪಾಲಿಕೆಯಲ್ಲಿ ಬಿಜೆಪಿ ಗೆಲುವು ಈ ಸಾಧ್ಯತೆಗಳನ್ನು ಹೆಚ್ಚಿಸಿದೆ. ಆದರೆ, ಮಹಾರಾಷ್ಟ್ರದ ಫಲಿತಾಂಶವು ಯಾವುದೇ ರೀತಿಯಲ್ಲಿ ಪ್ರಭಾವ ನೀರುವ ನಿರೀಕ್ಷೆಯಿಲ್ಲ.

ಅಂತೆಯೇ, ತಮಿಳುನಾಡಿನಲ್ಲಿಯೂ ಮಹಾರಾಷ್ಟ್ರದ ಫಲಿತಾಂಶದ ಪ್ರಭಾವವನ್ನು ಊಹಿಸಲಾಗದು. ತಮಿಳುನಾಡು ಪ್ರಾದೇಶಿಕತೆ ಮತ್ತು ದ್ರಾವಿಡ ಸಂಸ್ಕೃತಿ ಮೇಲೆ ಚುನಾವಣೆಗಳನ್ನು ನೋಡುತ್ತದೆ. ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿದೆ. ಹೀಗಾಗಿ, ಬಿಜೆಪಿಗೆ ತಮಿಳುನಾಡಿನಲ್ಲಿ ಹೆಚ್ಚಿನ ಆಸ್ಪದವಿಲ್ಲ. ಅಲ್ಲಿ, ಡಿಎಂಕೆ+ಕಾಂಗ್ರೆಸ್‌, ಎಐಎಡಿಎಂಕೆ ಹಾಗೂ ನಟ ವಿಜಯ್ ಅವರ ಹೊಸ ಪಕ್ಷ ಟಿವಿಕೆ ನಡುವೆ ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆಗಳು ಹೆಚ್ಚಿವೆ. ಎಐಎಡಿಎಂಕೆ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದರೂ, ಮೈತ್ರಿಯಲ್ಲಿಯೂ ಹೆಚ್ಚಿನ ಪಾಲು ಅಥವಾ ಗೆಲುವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯಗಳಿವೆ.

ಇನ್ನು, ಕೇಂದ್ರಾಡಳಿತ ಪ್ರದೇಶವಾಗಿರುವ ಪುದುಚೇರಿಯಲ್ಲಿ ಪ್ರಸ್ತುತ, ಎನ್‌ಆರ್‌ ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ. ಆದಾಗ್ಯೂ, ಪುದುಚೇರಿಯೂ ತಮಿಳುನಾಡಿನ ರಾಜಕೀಯ ಪ್ರಭಾವವನ್ನು ಹೊಂದಿರುವುದರಿಂದ, ಮಹಾರಾಷ್ಟ್ರ ಚುನಾವಣೆಗಳ ಫಲಿತಾಂಶಗಳು ಪುದುಚೇರಿ ಚುನಾವಣೆಯನ್ನು ಪ್ರಭಾವಿಸುವ ಸಾಧ್ಯತೆಗಳಿಲ್ಲ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಏನೇ ಇದ್ದರೂ, ಬಿಜೆಪಿಯಲ್ಲಿ ಗೆಲುವಿನ ಆತ್ಮವಿಶ್ವಾಸ ಹೆಚ್ಚುತ್ತಲೇ ಇದೆ. ಇದಕ್ಕೆ, ವಿಪಕ್ಷಗಳ ದುರ್ಬಲತೆಯೇ ಮೂಲ ಕಾರಣವೆಂದೂ ಹೇಳಲಾಗುತ್ತದೆ. ಆದರೆ, ಚುನಾವಣಾ ಅಕ್ರಮ, ಎಸ್‌ಐಆರ್, ಮತದಾರರ ಅಳಿಸುವಿಕೆ, ನಕಲಿ ಮತದಾನ, ಇವಿಎಂ ತಿರುಚುವಿಕೆ ಸೇರಿದಂತೆ ನಾನಾ ರೀತಿಯ ಕುತಂತ್ರಗಳಿಂದಲೇ ಬಿಜೆಪಿ ಚುನಾವಣೆಗಳನ್ನು ಗೆಲ್ಲುತ್ತಿದೆ ಎಂದು ವಿಪಕ್ಷಗಳು ದೂರುತ್ತಿವೆ!

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...