ನಾಗರಿಕ ಸೇವೆ: ಕನ್ನಡಿಗರಿಗಿರುವ ಸವಾಲುಗಳೇನು?

Date:

ಭರತಖಂಡದ ಅತ್ಯಂತ ಕಷ್ಟಕರವಾದ ಪರೀಕ್ಷೆಗಳಲ್ಲಿ ಭಾರತೀಯ ನಾಗರಿಕ ಸೇವಾ ಪರೀಕ್ಷೆಯು ಒಂದು. ಹಲವಾರು ಅಭ್ಯರ್ಥಿಗಳಿಗೆ ಇದು ಕಬ್ಬಿಣದ ಕಡಲೆಯಂತಾಗಿದೆ. ಅದರಲ್ಲೂ ಕರ್ನಾಟಕದ ಅಭ್ಯರ್ಥಿಗಳಿಗೆ ಇದು ಗಗನ ಕುಸುಮವಾಗಿದೆಯೆಂದರೆ ಅತಿಶಯೋಕ್ತಿಯಾಗಲಾರದು. ಕಳೆದ 50 ವರ್ಷಗಳಲ್ಲಿ ಆಯ್ಕೆಯಾದ ಅಧಿಕಾರಿಗಳ ಸಂಖ್ಯೆಯಲ್ಲಿ ಉತ್ತರ ಭಾರತದ ಅಭ್ಯರ್ಥಿಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯದವರ ಪಾಲ್ಗೊಳ್ಳುವಿಕೆ ಕೇವಲ ಬೆರಳೆಣಿಕೆಯಷ್ಟಿದೆ, ವಿಶೇಷವಾಗಿ ಕರ್ನಾಟಕದ ಅಭ್ಯರ್ಥಿಗಳಿಗೆ ಈ ಪರೀಕ್ಷೆಯನ್ನು ಎದುರಿಸಲು ಇರುವ ಸವಾಲುಗಳೇನೆಂದರೆ, ಸೂಕ್ತ ಮಾಹಿತಿಯ ಕೊರತೆ, ವಯಸ್ಸು, ವರ್ಗ, ವಿದ್ಯಾಭ್ಯಾಸ ಇತ್ಯಾದಿಗಳ ವಿವರದ ಪ್ರಶ್ನೆ ಪತ್ರಿಕೆ ಆಂಗ್ಲ ಭಾಷೆಯಲ್ಲಿರುವುದು, ಪರೀಕ್ಷೆಯ ಕುರಿತು ತಿಳಿವಳಿಕೆ ಕೊರತೆ, ಕನ್ನಡದಲ್ಲಿ ಅಧ್ಯಯನ ಸಾಮಗ್ರಿಯ ಕೊರತೆ, ಸೂಕ್ತ ತರಬೇತಿಯ ಕುರಿತು ಮಾಹಿತಿ ಇಲ್ಲದಿರುವಿಕೆ.

ಉನ್ನತ ಗುಣಮಟ್ಟದ ಈ ಪರೀಕ್ಷೆಗೆ ಸೂಕ್ತವಾದ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ. ಮೊದಲೆಲ್ಲ ಕೇವಲ ದೆಹಲಿಯಲ್ಲಿ ಮಾತ್ರ ದೊರೆಯುತ್ತಿದ್ದ ತರಬೇತಿಯು ಇಂದು ಬೆಂಗಳೂರಿನಲ್ಲಿಯೂ ದೊರೆಯುವಂತಾಗಿದೆ. ತರಬೇತಿಗಾಗಿಯೇ ಅನೇಕ ಉನ್ನತ ಗುಣಮಟ್ಟದ ತರಬೇತಿ ಕೇಂದ್ರಗಳು ಬೆಂಗಳೂರಿನಲ್ಲಿವೆ. ಆದರೆ ಉತ್ತರ ಕರ್ನಾಟಕದ ಭಾಗದಲ್ಲಿರುವ ವಿದ್ಯಾರ್ಥಿಗಳಿಗೆ ಬೆಂಗಳೂರು ಸಮೀಪವೇನಲ್ಲ; ಹಾಗಾಗಿ ಹುಬ್ಬಳ್ಳಿ ಧಾರವಾಡ ಬೆಳಗಾವಿ ಕಲ್ಬುರ್ಗಿಗಳಂತಹ ನಗರಗಳಲ್ಲಿ ತರಬೇತಿ ಕೇಂದ್ರಗಳ ಅವಶ್ಯಕತೆ ಇದೆ, ಇತ್ತೀಚಿಗೆ ತರಬೇತಿ ಸಂಸ್ಥೆಗಳು ಕಾಲೇಜುಗಳಲ್ಲಿಯೇ ಪದವಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪಠ್ಯಕ್ರಮದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡುತ್ತಿವೆ, ಇದು ಉತ್ತರ ಕರ್ನಾಟಕದ ಭಾಗಗಳಲ್ಲಿಯೂ ಆರಂಭವಾಗುವುದು ಅವಶ್ಯಕವಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಆರ್ಥಿಕವಾಗಿ ಸಾಕಷ್ಟು ಬೆಂಬಲದ ಅವಶ್ಯಕತೆ ಇದೆ. ಕರ್ನಾಟಕ ಸರ್ಕಾರವು ಪ್ರತಿಭಾವಂತ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಧನಸಹಾಯವನ್ನು ಮಾಡುತ್ತಿದೆ. ಪರೀಕ್ಷೆಯ ಮುಖೇನ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ವಿವಿಧ ತರಬೇತಿ ಕೇಂದ್ರಗಳಲ್ಲಿ ಉಚಿತವಾಗಿ ತರಬೇತಿಯನ್ನು ನೀಡುತ್ತಿದೆ. ಇದರೊಂದಿಗೆ ಅನೇಕ ತರಬೇತಿ ಸಂಸ್ಥೆಗಳು ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಶುಲ್ಕದಲ್ಲಿ ರಿಯಾಯಿತಿ ಹಾಗೂ ಅನೇಕ ವಿದ್ಯಾರ್ಥಿಪರ ಕೆಲಸಗಳನ್ನು ಮಾಡುತ್ತಿವೆ. ಇದು ಎಲ್ಲ ವಿದ್ಯಾರ್ಥಿಗಳನ್ನು ತಲುಪುವುದು ಅವಶ್ಯಕವಾಗಿದೆ ಹಾಗೂ ಇತ್ತೀಚಿಗೆ ಆನ್‌ಲೈನ್‌ನಲ್ಲಿಯೇ ವಿದ್ಯಾರ್ಥಿಗಳಿಗೆ ಗುಣಮಟ್ಟದ ಮಾರ್ಗದರ್ಶನ ದೊರೆಯುತ್ತದೆ. ಆದರೂ ಉತ್ತಮ ಮಾರ್ಗದರ್ಶನದ ಅವಶ್ಯಕತೆಯಿದೆ. ಆದರೆ ಇಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು, ಯಾವುದನ್ನು ಆಯ್ಕೆ ಮಾಡಿಕೊಳ್ಳಬಾರದು ಎಂಬುದರ ಕೊರತೆಯೂ ಎದ್ದು ಕಾಣುತ್ತಿದೆ. ಆಯ್ಕೆಯಾದ ನಂತರ ಆ ಕ್ಷೇತ್ರಕ್ಕೆ ತಕ್ಕ ಪರಾಮರ್ಶನ ಗ್ರಂಥಗಳ ಪೂರೈಕೆ ಗ್ರಂಥಾಲಯಗಳ ಮೂಲಕ ಒದಗಿಸಬಹುದಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿರಿ: ಕನ್ನಡ ಪತ್ತೇದಾರಿ ಪ್ರಕಾರ ನಾಪತ್ತೆಯಾಯಿತೇ?

ಪರೀಕ್ಷೆ ಹೆಬ್ಬಾಗಿಲಾದ ಪೂರ್ವಭಾವಿ ಪರೀಕ್ಷೆ ಕೇವಲ ಆಂಗ್ಲ ಭಾಷೆ ಹಾಗೂ ಹಿಂದಿ ಭಾಷೆಯ ಪ್ರಶ್ನೆ ಪತ್ರಿಕೆಗಳು ಮುದ್ರಿತವಾಗುವುದರಿಂದ, ಕನ್ನಡ ಮಾಧ್ಯಮದ ಬಹುತೇಕ ವಿದ್ಯಾರ್ಥಿಗಳಿಗೆ ಪೂರ್ವಭಾವಿ ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳುವುದು ಕಠಿಣವಾಗುತ್ತದೆ ಹಾಗೂ ನಿಗದಿತ ಸಮಯದಲ್ಲಿ ಉತ್ತರಿಸುವುದು ಕಷ್ಟವಾಗುತ್ತದೆ. ಹಾಗಾಗಿ ಪ್ರಶ್ನೆಗಳು ಕನ್ನಡದಲ್ಲಿ ಮುದ್ರಿತವಾಗಬೇಕು. ಕರ್ನಾಟಕ ಎಂದು ಹೆಸರಾಗಿ ಐವತ್ತು ವರ್ಷವಾದ ಈ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಕನ್ನಡ ಉಸಿರಾಗುವ ಅವಶ್ಯಕತೆ ಇದೆ. ಹಾಗಾಗಿ ಕನ್ನಡಿಗರು ಭಾಷೆಯ ಅಡೆತಡೆಯನ್ನು ಮೀರಿ ಬೆಳೆಯಬೇಕಾಗಿದೆ. ಹಾಗಾಗಿ ಕನ್ನಡದಲ್ಲಿ ಪ್ರಶ್ನೆ ಪತ್ರಿಕೆಗಳು ದೊರೆಯುವಂತಾಗಿ, ಕನ್ನಡದ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಅಭ್ಯರ್ಥಿಗಳು ಸಹ ಸುಲಭವಾಗಿ ಪರೀಕ್ಷೆಯನ್ನು ಎದುರಿಸುವಂತಾಗುವುದು ಅವಶ್ಯಕವಾಗಿದೆ.

ಪರೀಕ್ಷೆಗೆ ಬೇಕಾಗುವಂತಹ ಅಧ್ಯಯನ ಸಾಮಗ್ರಿಗಳು ಬಹುತೇಕವಾಗಿ ಆಂಗ್ಲ ಮಾಧ್ಯಮದಲ್ಲಿಯೇ ಇದೆ. ಕನ್ನಡ ಮಾಧ್ಯಮದಲ್ಲಿ ಮುಖ್ಯ ಪರೀಕ್ಷೆಯನ್ನು ಬರೆಯುವ ಅವಕಾಶವಿದ್ದರೂ ಅಧ್ಯಯನ ಸಾಮಗ್ರಿಯ ಕೊರತೆಯಿಂದಾಗಿ ಅನೇಕ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಹರಸಾಹಸ ಪಡುವಂತಾಗಿದೆ. ಹಾಗಾಗಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆಯನ್ನು ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಮುಖ್ಯ ಪರೀಕ್ಷೆಯಲ್ಲಿ ಉತ್ತರಗಳನ್ನು ಬರೆಯಲು ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ. ಹಲವಾರು ತರಬೇತಿ ಸಂಸ್ಥೆಗಳು ಈ ನಿಟ್ಟಿನಲ್ಲಿ ಮುಂದಡಿ ಇಟ್ಟಿವೆ. ಸರ್ಕಾರದ ಮಟ್ಟದಲ್ಲಿ ಸೂಕ್ತವಾದ ತರ್ಜುಮೆ ಹಾಗೂ ಅಧ್ಯಯನ ಸಾಮಗ್ರಿಗಳನ್ನು ಒದಗಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.

ಕನ್ನಡದಲ್ಲಿ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಒಂದೆಡೆ ಸೇರಿ ತಯಾರಿ ನಡೆಸಿ ಸಹಕಾರ ಮನೋಭಾವದಿಂದ ಯಶಸ್ಸನ್ನು ಗಳಿಸಬಹುದು. ಅನೇಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಕುರಿತು ಅರಿವು ಕಡಿಮೆ. ಅವರಿಗೆ ಶಾಲಾ ಮಟ್ಟದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಲವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾದ ಅವಶ್ಯಕತೆ ಇದೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಆಸಕ್ತಿಯು ಹೆಚ್ಚುತ್ತದೆ. ಏಕೆಂದರೆ ಸ್ಪರ್ಧಾತ್ಮಕ ಪರೀಕ್ಷೆಯ ಹಾದಿಯು ಸುಲಭವಲ್ಲ ಯು.ಪಿ.ಎಸ್.ಸಿ, ಕೆ.ಪಿ.ಎಎಸ್.ಸಿ ಅಂತಹ ಪರೀಕ್ಷೆಗಳು ಮೂರು ಹಂತದ ಪರೀಕ್ಷೆಗಳನ್ನು ಒಳಗೊಂಡಿದ್ದು ಇದು ಒಂದು ವರ್ಷದ ಅವಧಿಯದ್ದಾಗಿರುತ್ತದೆ ಹಾಗೂ ತಯಾರಿ ಮತ್ತು ಅನುಭವವನ್ನು ಅಪೇಕ್ಷಿಸುತ್ತದೆ. ಇಲ್ಲಿ ಅನೇಕ ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಸಮಯವನ್ನು ಪರೀಕ್ಷೆಯ ಕುರಿತು ಅರ್ಥಮಾಡಿಕೊಳ್ಳುವಲ್ಲಿಯೇ ಕಳೆದುಬಿಡುತ್ತಾರೆ.

ಸವಾಲುಗಳನ್ನೆದುರಿಸಲು ಶ್ರದ್ಧೆ ಮತ್ತು ಆತ್ಮ ವಿಶ್ವಾಸಗಳನ್ನು ಪದವಿ ಹಂತದಲ್ಲಿಯೇ ತುಂಬಬೇಕು. ಪದವಿಯನ್ನು ಪಡೆದವರಿಗೆ ಸ್ಪರ್ಧಾತ್ಮಕ ಪರೀಕ್ಷೆಯ ರೂಪುರೇಷೆಗಳನ್ನು ನೀಡುವುದರ ಜೊತೆಗೆ ಆಸಕ್ತರಿಗಾಗಿಯೇ ಸಾಮಾನ್ಯ ಆಯ್ಕೆಯ ಪರೀಕ್ಷೆಗಳ ವ್ಯವಸ್ಥೆಯಾಗಬೇಕು. ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಮ್ಮನ್ನು ತಾವು ಮಾನಸಿಕವಾಗಿ ತೊಡಗಿಸಿಕೊಳ್ಳುವ ವ್ಯವಸ್ಥೆ ಮಾಡಬೇಕು. ತದನಂತರ ಅವರ ಆಯ್ಕೆಗೆ ತಕ್ಕಂತಹ ಕ್ಷೇತ್ರಗಳನ್ನು ಆರಿಸಿಕೊಳ್ಳುವ ಅವಕಾಶಗಳ ಅರಿವು ಅವರಿಗೇ ಬರುತ್ತದೆ. ಹಾಗಾಗಿ ಅವರಿಗೆ ವಿದ್ಯಾರ್ಥಿ ದೆಸೆಯಲ್ಲಿಯೇ ಪರೀಕ್ಷೆಯ ಕುರಿತು ಮಾರ್ಗದರ್ಶನ ದೊರೆತರೆ ಅವರು ಬೇಗನೆ ಯಶಸ್ಸನ್ನು ಗಳಿಸಬಹುದು. ಮೂರ್ನಾಲ್ಕು ವರ್ಷ ಓದಿದರೂ ಸಿವಿಲ್ ಸರ್ವೀಸ್ ಪರೀಕ್ಷೆಗಳಲ್ಲಿ ಯಶಸ್ವಿಯಾಗದಿದ್ದರೆ ಮುಂದೇನು ಎಂಬ ಭಯ ಕಾಡುವುದುಂಟು, ಪಾಲಕರಲ್ಲಿ ಈ ಭಯ ತುಸು ಹೆಚ್ಚೇ ಇರುತ್ತದೆ ಯು.ಪಿ.ಎಸ್.ಸಿ ಪರೀಕ್ಷೆಗೆ ಹಿಂದೇಟು ಹಾಕಲು ಇದೂ ಒಂದು ಕಾರಣ. ಆದರೆ, ಯು.ಪಿ.ಎಸ್.ಸಿ ಪರೀಕ್ಷೆಗೆ ಉತ್ತಮ ತಯಾರಿ ನಡೆಸಿದ್ದೀರೆಂದರೆ, ರಾಜ್ಯ ಸೇವಾ ಆಯೋಗಗಳು, ಸ್ಟಾಫ್ ಸೆಲೆಕ್ಷನ್ ಬೋರ್ಡ್, ರೈಲ್ವೆ ನೇಮಕಾತಿ, ಬ್ಯಾಂಕಿಂಗ್ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು. ಒಂದು ವೇಳೆ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ವಿಫಲವಾದರೆ ಮುಂದೇನು ಮಾಡಬಹುದೆಂಬ ಮತ್ತೊಂದು ಯೋಜನೆಯನ್ನೂ ಹಾಕಿಕೊಳ್ಳುವುದರಿಂದ ಇಂತಹ ಭಯದಿಂದ ದೂರ ಉಳಿಯಬಹುದು. ಅಲ್ಲದೆ, ಮತ್ತಷ್ಟು ವಿಶ್ವಾಸದಿಂದ ತಯಾರಿಯಲ್ಲಿ ತೊಡಗಬಹುದು.

ಕನ್ನಡ ಮಾಧ್ಯಮದಲ್ಲಿ ಬರೆದು ಪ್ರಪ್ರಥಮವಾಗಿ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಐ.ಎ.ಎಸ್ ಹುದ್ದೆಗೆ ಆಯ್ಕೆಯಾದ ಪ್ರಪ್ರಥಮ ಕನ್ನಡಿಗನೆಂದರೆ 1986ನೇ ಬ್ಯಾಚಿನ ಐ.ಎ.ಎಸ್ ಅಧಿಕಾರಿಯಾದ ಶಿವರಾಂರವರು. ಐಚ್ಛಿಕ ವಿಷಯವನ್ನಾಗಿ ಕನ್ನಡ ಸಾಹಿತ್ಯವನ್ನು ಮಾಡಿಕೊಂಡು ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ಓದಿ ವ್ಯಾಸಂಗ ಮಾಡಿದರೂ ಭಾರತ ಸರ್ಕಾರದ ಉನ್ನತ ಹುದ್ದೆಯನ್ನು ಅಲಂಕರಿಸಬಹುದೆಂದು ಶಿವರಾಂ ರವರು ಸಾಬೀತು ಪಡಿಸಿದರು.

ಇದನ್ನೂ ಓದಿರಿ: ವಿಜಯ ಮಲ್ಯ ಮಾತುಗಳಿಗೆ ಮರುಗುವ ಅಗತ್ಯವಿದೆಯೇ?

1990ರ ದಶಕದಲ್ಲಿ ದೆಹಲಿ ಪೊಲೀಸ್‌ನಲ್ಲಿ ಹಲವಾರು ಕನ್ನಡಿಗರು ವಿವಿಧ ಹುದ್ದೆಗಳನ್ನು ಅಲಂಕರಿಸಿ ರಾಷ್ಟ್ರ ರಾಜಧಾನಿಯಲ್ಲಿ ನೆಲೆಸಿದರು. ನಂತರದ ದಿನಗಳಲ್ಲಿ ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣದ ಕಾರಣಗಳಿಂದಾಗಿ ಹಲವಾರು ಬಹುರಾಷ್ಟ್ರೀಯ ಕಂಪನಿಗಳಲ್ಲಿಯ ಕನ್ನಡಿಗರ ಪ್ರಾತಿನಿಧ್ಯ ಹೆಚ್ಚಿತು ಮತ್ತು ವಿಜ್ಞಾನ, ತಂತ್ರಜ್ಞಾನದ ಪ್ರಭಾವದಿಂದಾಗಿ ನಾಗರಿಕ ಸೇವಾ ಆಕಾಂಕ್ಷಿಗಳು ನಮ್ಮ ಕರ್ನಾಟಕದಂತಹ ನೆಲೆಯಿಂದ ರಾಷ್ಟ್ರ ರಾಜಧಾನಿಯಾದಂತಹ ನವದೆಹಲಿ ಹಾಗೂ 1990ರ ದಶಕದ ದಕ್ಷಿಣ ಭಾರತದ ಪ್ರಮುಖ ನಗರಗಳಾದ ಹೈದರಾಬಾದ್ ಮತ್ತಿತರ ಮಹಾನಗರಗಳಿಗೆ ವಲಸೆ ಹೋಗಲು ಹಾಗೂ ಅಲ್ಲಿಯೇ ನೆಲೆಸಿ ತರಬೇತಿಗಳನ್ನು ಪಡೆಯಲು ಪ್ರಾರಂಭಿಸಿದರು.

ಕರ್ನಾಟಕದವರಾದ ವಿಜಯಲಕ್ಷ್ಮಿ ಬಿದರಿ ಅವರು 2000ರಲ್ಲಿ  ಕೇಂದ್ರ ಲೋಕ ಸೇವಾ ಆಯೋಗ ಪರೀಕ್ಷೆಯಲ್ಲಿ ಇಡೀ ಭಾರತಕ್ಕೇ ಪ್ರಥಮ ರ್ಯಾಂಕ್ ಪಡೆದು ಕರ್ನಾಟಕದ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಅಲ್ಲದೇ ಸ್ಥಳೀಯವಾಗಿಯೂ ಮತ್ತು ಒಟ್ಟಾರೆ ಕರ್ನಾಟಕದ ಯುವ ಜನತೆಯಲ್ಲಿ ಒಂದು ಸಂಚಲನವನ್ನು ಹುಟ್ಟು ಹಾಕಿದರು.

ಮುಂದಿನ ದಿನಗಳಲ್ಲಿ 2002ರಲ್ಲಿ ಸತ್ಯಪ್ರಕಾಶ್ ರವರು ದ್ವಿತೀಯ ರ್ಯಾಂಕ್ ಪಡೆಯುವುದರ ಮುಖಾಂತರ ಯುವ ಜನತೆಯಲ್ಲಿ ನಾಗರಿಕ ಸೇವೆಗಳ ಬಗ್ಗೆ ಮತ್ತಷ್ಟು ಒಲವನ್ನು ಹೆಚ್ಚಿಸಿದರು.

ತದನಂತರ 2004ರ ಬ್ಯಾಚಿನಲ್ಲಿ ಮಂಡ್ಯದ ಪ್ರಸ್ತುತ ಯು.ಪಿ ಕೇಡರಿನ ಎನ್.ಜಿ.ರವಿಕುಮಾರ್ ಹಾಗೂ ಒರಿಸ್ಸಾ ಕೇಡರಿನ ಲೋಕೇಶ್ ಐ.ಆರ್.ಎಸ್ ಆದ ಸಿದ್ದಲಿಂಗ ತೇಲಿರವರೆಲ್ಲರೂ ಕನ್ನಡ ಸಾಹಿತ್ಯವನ್ನು ತೆಗೆದುಕೊಂಡು ಐ.ಎ.ಎಸ್/ಐ.ಆರ್.ಎಸ್ ಪರೀಕ್ಷೆಯನ್ನು ಪಾಸು ಮಾಡಿ ಇಡೀ ಕರ್ನಾಟಕದ ಯುವ ಜನತೆಗೆ ಮಾದರಿಯಾದರು.

2016ರಲ್ಲಿ ಕನ್ನಡ ಸಾಹಿತ್ಯವನ್ನು ತೆಗೆದುಕೊಂಡು ಇಡೀ ಭಾರತಕ್ಕೆ ಪ್ರಥಮ ರ್ಯಾಂಕ್ ಅನ್ನು ಗಳಿಸಿದ ನಂದಿನಿ ಅವರು ಮತ್ತೊಮ್ಮೆ ಒಂದೂವರೆ ದಶಕದ ನಂತರ ಕರ್ನಾಟಕದ ಯುವಜನರಲ್ಲಿ ಹುರುಪನ್ನು ಮತ್ತು ಹೊಸ ಚಾಪನ್ನು ಮೂಡಿಸಿದರು. ತದನಂತರ ಹೈದರಾಬಾದ್ ನವದೆಹಲಿ ಚೆನ್ನೈ ಮತ್ತಿತರ ಮಹಾನಗರಗಳಲ್ಲಿ ಇರುವಂತೆ ಉತ್ಕೃಷ್ಟವಾದಂಥ ಮತ್ತು ಅತ್ಯುನ್ನತ ಮಟ್ಟದ ತರಬೇತಿಯುಳ್ಳಂತಹ ಹಾಗೂ ಅಖಿಲ ಭಾರತ ಮಟ್ಟದಲ್ಲಿ ನಿಪುಣರಾಗಿರುವಂತಹ ಎಲ್ಲ ಬೋಧಗಳನ್ನು ಒಳಗೊಂಡಂತಹ ಹಲವಾರು ಕೇಂದ್ರ ಲೋಕಸೇವಾ ಆಯೋಗ ತರಬೇತಿಯನ್ನು ಕೊಡುವ ಪರೀಕ್ಷೆಯಲ್ಲಿ ಸಫಲತೆಯನ್ನು ಕಂಡುಕೊಳ್ಳಲು ಮಾರ್ಗದರ್ಶನವನ್ನು ನೀಡುವ ತರಬೇತಿ ಸಂಸ್ಥೆಗಳು ಬೆಂಗಳೂರಿನಲ್ಲಿ ಹುಟ್ಟಿಕೊಂಡವು. ಹೀಗಾಗಿ 2016ರ ನಂತರ ಕರ್ನಾಟಕದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಳ್ಳುವಂತಹ ವಿದ್ಯಾರ್ಥಿಗಳ ಸಂಖ್ಯೆ ಬಹಳ ಗಣನೀಯವಾಗಿ ಹೆಚ್ಚಿದೆ. ಕೇವಲ ಬೆಂಗಳೂರಿನಲ್ಲಿಯೇ ಸುಮಾರು ಎಂಟರಿಂದ ಹತ್ತು ಸಾವಿರ ಪರೀಕ್ಷಾರ್ಥಿಗಳು ಅಥವಾ ಪದವೀಧರರು ಹಗಲು ರಾತ್ರಿ ಪರೀಕ್ಷೆಗಾಗಿ ತಯಾರಿ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಇದು ಬಹಳ ಅತ್ಯುತ್ತಮವಾದ ಬೆಳವಣಿಗೆಯಾಗಿ ಕಂಡು ಬಂದಿದೆ ಮತ್ತು ನಮ್ಮ ರಾಜ್ಯದ ಪದವೀಧರರು ಹಾಗೂ ವೃತ್ತಿಪರ ಶಿಕ್ಷಣ ಪದವೀಧರರು ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿರುವುದು ಬಹಳ ಗಣನೀಯ ಸಂಖ್ಯೆಯಲ್ಲಿ ಹೆಚ್ಚಳವನ್ನು ಕಾಣುತ್ತಿದೆ.

ಇದನ್ನೂ ಓದಿರಿ: ಮಣಿಪುರದಲ್ಲಿ ಹಿಂಸಾಚಾರ ಸೃಷ್ಟಿಸುತ್ತಿರುವ ‘ಆರಂಬೈ ತೆಂಗೋಲ್’ ಹುಟ್ಟಿದ್ದು ಹೇಗೆ?

2023ರ ಬ್ಯಾಚಿನಲ್ಲಿ ಕರ್ನಾಟಕದವರಾದ ವಿಜೇತ ಹೊಸಮನಿ ಐ.ಆರ್.ಎಸ್ ಅವರು 100ನೇ ರ್ಯಾಂಕ್, ಸೌಭಾಗ್ಯ ಬಿಲಗಿಮಠ್ ಐ.ಪಿ.ಎಸ್ ಅವರು 101ನೇ ರ್ಯಾಂಕ್ ಹಾಗೂ ಕೇವಲ 22 ವರ್ಷ ವಯಸ್ಸಿನ ಯಶಸ್ವಿನಿ ದೇಶಕ್ಕೆ 339ನೇ ರ್ಯಾಂಕ್‌ ಅನ್ನು ಪಡೆದಿದ್ದಾರೆ ಹಾಗೂ ಅತಿ ಕಿರಿಯ ವಯಸ್ಸಿನಲ್ಲಿ ಐ.ಆರ್.ಎಸ್ ಆದವರು ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಹೀಗೆ ವರ್ಷದಿಂದ ವರ್ಷಕ್ಕೆ ಹಲವಾರು ಮಹಿಳೆಯರು, ಪುರುಷರು ಅಧಿಕ ಸಂಖ್ಯೆಯಲ್ಲಿ ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುತ್ತಿರುವುದು ಬಹಳ ಆಶಾದಾಯಕವಾಗಿದೆ. ಸುಮಾರು ಸರಾಸರಿಯಾಗಿ 50ರ ಆಸುಪಾಸಿನಲ್ಲಿ ಕರ್ನಾಟಕದಿಂದ ತೇರ್ಗಡೆ ಹೊಂದಿದ್ದಾರೆಂದು ನಾವು ಭಾವಿಸಬಹುದು ಮತ್ತು ಈ ಸಂಖ್ಯೆ 100ನ್ನು ದಾಟಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ.

ದೆಹಲಿ, ಹೈದರಾಬಾದ್ ಮತ್ತು ಚೆನ್ನೈ ಮತ್ತಿತರ ನಗರಗಳಂತೆ ಇಂದು ಕರ್ನಾಟಕದಲ್ಲಿಯೂ ಹುಬ್ಬಳ್ಳಿ, ಬೆಳಗಾವಿ, ಗುಲ್ಬರ್ಗ, ಮಂಗಳೂರು, ಮೈಸೂರು ಮತ್ತು ಬೆಂಗಳೂರಿನಲ್ಲಿ ಹತ್ತು ಹಲವಾರು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳು ತಲೆಯೆತ್ತಿ ನಿಂತಿವೆ. ಘನವೆತ್ತ ಕರ್ನಾಟಕ ಸರ್ಕಾರದಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಆರ್ಥಿಕವಾಗಿ ಮತ್ತು ದುರ್ಬಲವಾಗಿರುವಂತರ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಗಳಿಂದ ಪ್ರೋತ್ಸಾಹಧನ ಹಾಗೂ ಶಿಶ್ಯವೇತನಗಳನ್ನು ನೀಡಿ 8-10 ತಿಂಗಳುಗಳ ಕಾಲ ವಿಶಿಷ್ಟವಾದ ತರಬೇತಿಗಳನ್ನು ನೀಡುವುದರ ಮೂಲಕ ಹೆಚ್ಚುಹೆಚ್ಚು ಪದವೀಧರ ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಲು ಮಾತ್ತು ಸರ್ಕಾರಿ ಉದ್ಯೋಗಗಳನ್ನು ಪಡೆದುಕೊಳ್ಳಲು ಸರ್ಕಾರ ಸಕಲ ಪ್ರಯತ್ನಗಳನ್ನು ಮಾಡುತ್ತಿದೆ. ಇದು ಬಹಳ ಶ್ಲಾಘನೀಯವಾದ ಬೆಳವಣಿಗೆಯಾಗಿದೆ.

rafi phasha
ಮೊಹಮ್ಮದ್ ರಫೀ ಪಾಷ
+ posts

ಮೊಹಮ್ಮದ್ ರಫೀ ಪಾಷ ಅವರು ಐಎಎಸ್ ಮತ್ತು ಕೆಎಎಸ್ ಪರೀಕ್ಷೆ ತೆಗೆದುಕೊಳ್ಳುವ ಯುವ ಅಭ್ಯರ್ಥಿಗಳಿಗೆ ನಿರಂತರವಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಸದ್ಯ ಪ್ರಸ್ತುತ ಕರ್ನಾಟಕ ಸರ್ಕಾರದ ಸರಕು ಮತ್ತು ಸೇವಾ ತೆರಿಗೆಗಳ ಇಲಾಖೆಯಲ್ಲಿ ಉಪ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಮೊಹಮ್ಮದ್ ರಫೀ ಪಾಷ
ಮೊಹಮ್ಮದ್ ರಫೀ ಪಾಷ
ಮೊಹಮ್ಮದ್ ರಫೀ ಪಾಷ ಅವರು ಐಎಎಸ್ ಮತ್ತು ಕೆಎಎಸ್ ಪರೀಕ್ಷೆ ತೆಗೆದುಕೊಳ್ಳುವ ಯುವ ಅಭ್ಯರ್ಥಿಗಳಿಗೆ ನಿರಂತರವಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಸದ್ಯ ಪ್ರಸ್ತುತ ಕರ್ನಾಟಕ ಸರ್ಕಾರದ ಸರಕು ಮತ್ತು ಸೇವಾ ತೆರಿಗೆಗಳ ಇಲಾಖೆಯಲ್ಲಿ ಉಪ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...