ಆರ್‌ಬಿಐ ಸ್ಥಾಪನೆ; ಅಂಬೇಡ್ಕರ್ ಮಹತ್ವದ ಪಾತ್ರ ಅಳಿಸಿ ಹೋಯಿತೇಕೆ?

Date:

ಸ್ವಾತಂತ್ರ್ಯೋತ್ತರ ಭಾರತದ ನವನಿರ್ಮಾಣಕ್ಕೆ ಅಂಬೇಡ್ಕರ್‌ ಕೊಡುಗೆ ಅಗಾಧ. ʼಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ʼ ಎಂಬ ಬಣ್ಣನೆಯ ಹೊರತಾಗಿಯೂ ಅಂಬೇಡ್ಕರ್‌ ಹಾಗೂ ಅವರ ವಿಚಾರಗಳ ಬಗ್ಗೆ ತಿಳಿಯಬೇಕಾದದ್ದು ಅಪಾರ. ಬ್ರಿಟಿಷರ ಕಾಲದಲ್ಲಿ ಆರಂಭಗೊಂಡ ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ಜೊತೆಗೆ ಡಾ. ಬಿ ಆರ್‌. ಅಂಬೇಡ್ಕರ್‌ ಅವರಿಗೆ ಇರುವ ಸಂಬಂಧದ ಕುರಿತು ಹೆಚ್ಚು ಬೆಳಕು ಬಿದ್ದಿಲ್ಲ.

ಅರ್ಥಶಾಸ್ತ್ರ ಅವರ ನೆಚ್ಚಿನ ವಿಷಯವಾಗಿತ್ತು ಮತ್ತು ಅವರು ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಈ ಕ್ಷೇತ್ರ ಕುರಿತು ಸಂಶೋಧನೆ ನಡೆಸಿದರು. ಅವರ ಸಾಧನೆಗಳ ಹೊರತಾಗಿಯೂ, ಡಾ. ಅಂಬೇಡ್ಕರ್ ಅವರನ್ನು ದಲಿತರು ಮತ್ತು ಹಿಂದುಳಿದ ವರ್ಗಗಳ ಉದ್ಧಾರಕ ಹಾಗೂ ಭಾರತೀಯ ಸಂವಿಧಾನದ ಶಿಲ್ಪಿ ಎಂದಷ್ಟೇ ಪ್ರಸ್ತುತಪಡಿಸಲಾಗುತ್ತದೆ.

‌ಅರ್ಥಶಾಸ್ತ್ರ ಸಂಶೋಧನೆಗೆ ಡಾ.ಅಂಬೇಡ್ಕರ್ ಅವರ ಕೊಡುಗೆಗಳ ಹೊರತಾಗಿಯೂ, ಈ ಕ್ಷೇತ್ರದಲ್ಲಿ ಡಾ.ಅಂಬೇಡ್ಕರ್ ಅವರ ಸಾಧನೆಗಳನ್ನು ಕಡೆಗಣಿಸಿರುವುದು ವಿಷಾದನೀಯ. ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮಾರ್ತ್ಯಸೇನ್ ಅವರು ಅಂಬೇಡ್ಕರ್ ಅವರನ್ನು ‘ನನ್ನ ಅರ್ಥಶಾಸ್ತ್ರದ ಪಿತಾಮಹ’ (Father of My Economics) ಎಂದು ಕರೆದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

‘ದಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ʼನಲ್ಲಿ ಅಂಬೇಡ್ಕರ್‌ ಓದಿರುವುದರ ನೆನಪಿಗಾಗಿ ಲಂಡನ್‌ನ ಕಿಂಗ್ ಹೆನ್ರಿ ರಸ್ತೆಯಲ್ಲಿ ನಾಲ್ಕು ಅಂತಸ್ತಿನ ಅಂಬೇಡ್ಕರ್ ಹೌಸ್ ಇರುವುದನ್ನು ಕಾಣಬಹುದು. ಈ ಕಟ್ಟಡವು ನೆಲಮಾಳಿಗೆ, ಸಭಾಂಗಣ, ಅಧ್ಯಯನ ಕೊಠಡಿ ಮತ್ತು ಹಿಂಭಾಗದಲ್ಲಿ ಉದ್ಯಾನ, ವಾಚನಾಲಯ ಹೊಂದಿದೆ; ಕಂಚಿನ ಅಂಬೇಡ್ಕರ್ ಪ್ರತಿಮೆ ಮತ್ತು ಹೂದೋಟಗಳಿಂದ ಕೂಡಿದೆ. ಜತೆಗೆ ಬಾಬಾಸಾಹೇಬರ ಭಾವಚಿತ್ರಗಳು ಮತ್ತು ಅವರ ಜೀವನದ ವಿವಿಧ ಘಟನೆಗಳ ಚಿತ್ರಗಳನ್ನೂ ಹಾಕಲಾಗಿದೆ.

1935ರ ಏಪ್ರಿಲ್‌ 1ರಂದು ಆರಂಭಗೊಂಡ ಆರ್‌ಬಿಐಗೆ ಅಂಬೇಡ್ಕರ್‌ ಅವರ ಆರ್ಥಿಕ ಪರಿಕಲ್ಪನೆಯೇ ಅಡಿಪಾಯ. ಭಾರತಕ್ಕೆ ಸ್ವಾತಂತ್ರ್ಯ ಬರುವ 12 ವರ್ಷಗಳ ಹಿಂದೆಯೇ ಅಂಬೇಡ್ಕರ್‌ ಅವರ ದೃಷ್ಟಿಕೋನವನ್ನು ಆಧರಿಸಿ ಆರ್‌ಬಿಐಯನ್ನು ʼಬ್ರಿಟಿಷ್‌ ರಾಜ್‌ʼ ಸ್ಥಾಪಿಸಿತ್ತು. ಭಾರತದಲ್ಲಿ ರಿಸರ್ವ್ ಬ್ಯಾಂಕ್ ಸ್ಥಾಪನೆಯ ನೀಲನಕ್ಷೆಯನ್ನು ಸಿದ್ಧಪಡಿಸಿದರು. ಆರ್‌ಬಿಐ ಅವರ ಕೊಡುಗೆಯನ್ನು ಗುರುತಿಸಿತು ಮತ್ತು ತನಗೆ 81 ವರ್ಷ ತುಂಬಿದ ಸಂದರ್ಭದಲ್ಲಿ, ಕೇಂದ್ರ ಬ್ಯಾಂಕ್ ಅವರ ಹೆಸರಿನಲ್ಲಿ ನಾಣ್ಯಗಳನ್ನು ಬಿಡುಗಡೆ ಮಾಡಿತು.

ವಿದೇಶದಲ್ಲಿ ಅರ್ಥಶಾಸ್ತ್ರದ ಡಾಕ್ಟರೇಟ್ ಪದವಿಯನ್ನು ಪಡೆದ ಮೊದಲ ಭಾರತೀಯನೆಂಬ ಅಗ್ಗಳಿಕೆ ಬಾಬಾಸಾಹೇಬರದು. ಅವರು ಆಧುನಿಕ ಜಗತ್ತಿನ ಮಹತ್ವದ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರು. 1923ರಲ್ಲಿ ‘ದಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ʼನಲ್ಲಿ ʼದಿ ಪ್ರಾಬ್ಲಂ ಆಫ್ ರುಪೀ: ಇಟ್ಸ್ ಆರಿಜನ್ ಆಂಡ್ ಸಲ್ಯೂಷನ್ʼ (The Problem of Rupee: Its Origin and Solution) ಎಂಬ ಪ್ರೌಢಪ್ರಬಂಧವನ್ನು ಅಂಬೇಡ್ಕರ್‌ ಮಂಡಿಸುತ್ತಾರೆ. ‘ರೂಪಾಯಿ ಸಮಸ್ಯೆ ಮತ್ತು ಪರಿಹಾರ’ಗಳ ಬಗ್ಗೆ ಮಾತನಾಡಿದ ಮೊಟ್ಟ ಮೊದಲ ವ್ಯಕ್ತಿ ಎಂಬ ಪ್ರಶಂಸೆಗೂ ಪಾತ್ರರಾಗುತ್ತಾರೆ.

ಇದನ್ನೂ ಓದಿರಿ: ಭಾರತ ‘ಮುಸ್ಲಿಂ ರಾಷ್ಟ್ರ’ವಾಗಲು ಸಾಧ್ಯವೇ? ಅಸಲಿ ಸಂಗತಿಗಳೇನು?

ಹೀಗಾಗಿಯೇ ಭಾರತದ ಹಣ ವ್ಯವಸ್ಥೆಯ ಪರಿಶೀಲನೆಗಾಗಿ ಮತ್ತು ಹಣ ಚಲಾವಣೆಯ ಸುಧಾರಣೋಪಾಯಗಳನ್ನು ಸೂಚಿಸಲು ಭಾರತಕ್ಕೆ ಬಂದ ʼಹಿಲ್ಟನ್ ಯಂಗ್ ಕಮಿಷನ್‌ʼ(Hilton Young Commission) ಅಥವಾ ʼದಿ ರಾಯಲ್ ಕಮಿಷನ್ ಆನ್ ಇಂಡಿಯನ್ ಕರೆನ್ಸಿ ಅಂಡ್ ಫೈನಾನ್ಸ್’(The Royal Commission on Indian currency and Finance) ಆಯೋಗವು ಅಂಬೇಡ್ಕರ್‌ ಅವರ ಕೆಲಸಗಳ ಮೊರೆ ಹೋಗುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆಯ ಕುರಿತ ಕರಡು ಯೋಜನೆಯನ್ನು ಬಾಬಾಸಾಹೇಬರು 1926ರಲ್ಲಿ ಹಿಲ್ಟನ್ ಯಂಗ್ ಕಮಿಷನ್ ಗೆ ನೀಡುತ್ತಾರೆ.

‘ದಿ ರಾಯಲ್ ಕಮಿಷನ್ ಆನ್ ಇಂಡಿಯನ್ ಕರೆನ್ಸಿ ಅಂಡ್ ಫೈನಾನ್ಸ್ ಆಯೋಗ’ (The Royal Commission on Indian currency and Finance)’ ಒಳಗೊಂಡಿದ್ದ ಸದಸ್ಯರು 1924-25ರಲ್ಲಿ ಭಾರತಕ್ಕೆ ಭೇಟಿ ನೀಡುತ್ತಾರೆ. ಅಂಬೇಡ್ಕರ್‌ ಮಹಾಪ್ರಬಂಧ ‘ದಿ ಪ್ರಾಬ್ಲಂ ಆಫ್ ರುಪೀ: ಇಟ್ಸ್ ಒರಿಜನ್ ಅಂಡ್ ಇಟ್ಸ್ ಸಲ್ಯೂಷನ್’ ಪುಸ್ತಕವನ್ನು ಬಲವಾಗಿ ಬ್ರಿಟಿಷ್ ಸರ್ಕಾರಕ್ಕೆ ಶಿಫಾರಸು ಮಾಡುತ್ತಾರೆ. ಸಂವಿಧಾನದ ಕರ್ತೃ ಅಂಬೇಡ್ಕರ್‌ ಅವರ ಆರ್ಥಿಕ ಚಿಂತನೆಗಳು 1920-30ರ ದಶಕದಲ್ಲೇ ಪಾಶ್ಚಾತ್ಯ ದೇಶಗಳಲ್ಲಿ ಪ್ರಭಾವಶಾಲಿಯಾಗಿದ್ದವು ಎಂಬುದಕ್ಕೆ ಇದು ಪ್ರಬಲ ಪುರಾವೆ.

ಹಿಲ್ಟನ್ ಯಂಗ್ ಕಮಿಷನ್ 1926ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು ಮತ್ತು ವರದಿಯ ಶಿಫಾರಸುಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ 1935ರ ಏಪ್ರಿಲ್ 1ರಂದು ಅಸ್ತಿತ್ವಕ್ಕೆ ಬಂದಿತು. ಹಿಲ್ಟನ್ ಯಂಗ್ ಆಯೋಗದ ಮುಂದೆ ಡಾ.ಅಂಬೇಡ್ಕರ್ ಅವರು ಪ್ರಸ್ತುತಪಡಿಸಿದ ಮಾರ್ಗಸೂಚಿಗಳು, ಕಾರ್ಯಶೈಲಿ ಮತ್ತು ದೃಷ್ಟಿಕೋನದ ಪ್ರಕಾರ ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ರೂಪಿಸಲಾಗಿದೆ. . ಅಂಬೇಡ್ಕರ್‌ ಅವರ ಆರ್ಥಿಕ ವಿಚಾರಗಳನ್ನು ಆಧರಿಸಿಯೇ ಆರ್‌ಬಿಐ ರೂಪಿತಗೊಂಡಿದೆ ಎಂಬುದು ನಿಚ್ಚಳ.

ಆರಂಭದಲ್ಲಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಕೇಂದ್ರ ಕಚೇರಿಯನ್ನು ಕೋಲ್ಕತ್ತಾದಲ್ಲಿ ಹೊಂದಿತ್ತು ಮತ್ತು ನಂತರ 1937ರಲ್ಲಿ ಮುಂಬೈಗೆ ಸ್ಥಳಾಂತರಿಸಲಾಯಿತು. 1949ರಲ್ಲಿ ಸಾರ್ವಜನಿಕ ವಲಯದ ಘಟಕವಾಗುವ ಮೊದಲು ಇದು ಖಾಸಗಿ ವಲಯದಲ್ಲಿತ್ತು.

1923ರಲ್ಲಿ ಭಾರತಕ್ಕೆ ಮರಳಿದ ನಂತರ ಡಾ. ಅಂಬೇಡ್ಕರ್ ಅವರ ಸಾಮಾಜಿಕ ಮತ್ತು ರಾಜಕೀಯ ಕೆಲಸಗಳಿಂದಾಗಿ ಅರ್ಥಶಾಸ್ತ್ರಕ್ಕೆ ಅವರ ಕೊಡುಗೆಯನ್ನು ಕಡೆಗಣಿಸಲಾಗುತ್ತದೆ. ಆದಾಗ್ಯೂ, ಆರ್ಥಿಕ ಉನ್ನತಿಯ ಬಗ್ಗೆ ಡಾ. ಅಂಬೇಡ್ಕರ್ ಅವರ ದೃಷ್ಟಿಕೋನಗಳು ಅವರ ಸಾಮಾಜಿಕ ಮತ್ತು ರಾಜಕೀಯ ಕಾರಣದ ಮಹತ್ವದ ಅಂಶವಾಗಿದೆ. ʼಆರ್ಥಿಕ ಉನ್ನತಿ ಇಲ್ಲದೆ ಸಾಮಾಜಿಕ ಮತ್ತು ರಾಜಕೀಯ ಭಾಗವಹಿಸುವಿಕೆ ಸಾಧ್ಯವಿಲ್ಲʼ ಎಂದು ಅವರು ಬಲವಾಗಿ ನಂಬಿದ್ದರು. ಡಾ. ಅಂಬೇಡ್ಕರ್ ಅವರು ಭಾರತೀಯ ಕರೆನ್ಸಿ, ಹಣದುಬ್ಬರ ಮತ್ತು ವಿನಿಮಯ ದರಗಳು, ಭಾರತದ ರಾಷ್ಟ್ರೀಯ ಲಾಭಾಂಶ, ಬ್ರಿಟಿಷ್ ಭಾರತದಲ್ಲಿ ಪ್ರಾಂತೀಯ ಹಣಕಾಸು ಅಭಿವೃದ್ಧಿ, ಪ್ರಾಚೀನ ಭಾರತೀಯ ವಾಣಿಜ್ಯ ಮತ್ತು ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಹಾಗೂ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿದರು. ಅವರು ಈ ವಿಷಯಗಳ ಬಗ್ಗೆ ಸಂಶೋಧನೆ ಮಾಡಿದ್ದಲ್ಲದೆ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರಗಳನ್ನೂ ಒದಗಿಸಿದರು.

ಇದನ್ನೂ ಓದಿರಿ: ಕರ್ನಾಟಕ 50 | ಎಡಪಂಥೀಯರು ಅಂಬೇಡ್ಕರರಿಂದ ದೂರಾದರೆಂಬುದು ಸುಳ್ಳು- ಜಿ.ಆರ್

ಅರ್ಥಶಾಸ್ತ್ರಕ್ಕೆ ಡಾ. ಅಂಬೇಡ್ಕರ್ ಅವರ ತಿಳಿವಳಿಕೆ ಮತ್ತು ಕೊಡುಗೆಯನ್ನು ವಿಶ್ವದಾದ್ಯಂತದ ಪ್ರಸಿದ್ಧ ಅರ್ಥಶಾಸ್ತ್ರಜ್ಞರು ಶ್ಲಾಘಿಸಿದ್ದರು. ಅವರು 1927ರಲ್ಲಿ ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದರು. ‘ಪ್ರಾಚೀನ ಭಾರತೀಯ ವಾಣಿಜ್ಯ’ ಕುರಿತು ತಮ್ಮ ಪ್ರಬಂಧವನ್ನು ಬರೆದರು. ಇದು ಪ್ರಾಚೀನ ಭಾರತೀಯ ವಾಣಿಜ್ಯದ ಬಗ್ಗೆ ಒಳನೋಟವನ್ನು ನೀಡಿತು. ತಮ್ಮ ಪ್ರಬಂಧದಲ್ಲಿ ಅವರು, ಪ್ರಾಚೀನ ಭಾರತೀಯ ವ್ಯಾಪಾರ ವ್ಯವಸ್ಥೆಯನ್ನು ಬಾಧಿಸುತ್ತಿದ್ದ ಸಮಸ್ಯೆಗಳನ್ನು ಪರಿಶೀಲಿಸಿದರು. ಜತೆಗೆ ಅವುಗಳ ಸಂಭಾವ್ಯ ಪರಿಹಾರಗಳನ್ನೂ ಪ್ರಸ್ತುತಪಡಿಸಿದರು.

ಆರ್ಥಿಕ ಸಮಸ್ಯೆಗಳ ಬಗ್ಗೆ ಡಾ. ಅಂಬೇಡ್ಕರ್ ಅವರ ವಿಧಾನವು ಪ್ರಾಯೋಗಿಕವಾಗಿತ್ತು. ಭಾರತ ಹಿಂದುಳಿಯಲು ಭೂ ವ್ಯವಸ್ಥೆಯಲ್ಲಿನ ಅಸಮಾನ ಹಂಚಿಕೆ, ಸುಧಾರಣೆಗಳ ವಿಳಂಬವೇ ಕಾರಣವೆಂದು ಹೇಳಿದರು. ಆರ್ಥಿಕ ದಕ್ಷತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಪ್ರಜಾಪ್ರಭುತ್ವ ಸಮಾಜವಾದವು ಪರಿಹಾರವಾಗಿದೆ ಎಂಬುದನ್ನು ಪ್ರತಿಪಾದಿಸಿದರು. ಅವರು ಲೈಸೆಜ್-ಫೇರ್ ಮತ್ತು ವೈಜ್ಞಾನಿಕ ಸಮಾಜವಾದವನ್ನು ವಿರೋಧಿಸಿದರು. ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಗ್ರಾಮೀಣ ಆರ್ಥಿಕತೆಯ ಪರಿವರ್ತನೆಯಿಂದ ಸಾಧ್ಯವೆಂದು ನಂಬಿದ್ದರು.

ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯನ್ನು ಸೃಷ್ಟಿಸಿದ ಬಂಡವಾಳಶಾಹಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕೆಂದು ಡಾ. ಅಂಬೇಡ್ಕರ್ ಬಲವಾಗಿ ಪ್ರತಿಪಾದಿಸಿದರು. ಅವರ ಪ್ರಬಂಧವು ಆ ಕಾಲದ ಅತ್ಯಂತ ನಿರ್ಣಾಯಕ ಆರ್ಥಿಕ ಸಮಸ್ಯೆಯಾಗಿದ್ದ ರೂಪಾಯಿಯ ಅಪಮೌಲ್ಯೀಕರಣ ಕುರಿತದ್ದಾಗಿತ್ತು. ಹಣಕಾಸು ಆಯೋಗದ ವರದಿಯನ್ನು ಪ್ರತಿ 5 ವರ್ಷಗಳ ಅಂತರದಲ್ಲಿ ಮಂಡಿಸಬೇಕೆಂಬುದು ಅವರೇ ನೀಡಿದ ಮಾರ್ಗಸೂಚಿ.

ಬಾಬಾ ಸಾಹೇಬರು ದೊಡ್ಡ ಕೈಗಾರಿಕೆಗಳ ಸ್ಥಾಪನೆಯನ್ನು ಪ್ರತಿಪಾದಿಸಿದರು. ಜೊತೆ ಜೊತೆಗೆ ಕೃಷಿ ಸಮಾಜದ ಬೆನ್ನೆಲುಬು ಎಂದು ಗುರುತಿಸಿದರು. ದೇಶದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗೆ ಆಹಾರವನ್ನು ಒದಗಿಸುವುದರಿಂದ ಕೃಷಿಯನ್ನು ನಿರ್ಲಕ್ಷಿಸಬಾರದು. ಕೈಗಾರಿಕೆಗಳು ಕಚ್ಚಾ ವಸ್ತುಗಳಿಗಾಗಿ ಕೃಷಿಯನ್ನೇ ಅವಲಂಬಿಸಿವೆ ಎಂಬುದನ್ನು ಒತ್ತಿ ಹೇಳಿದರು.

ಕೃಷಿಯ ಆಧಾರದ ಮೇಲೆ ಆಧುನಿಕ ಭಾರತದ ಅಡಿಪಾಯ ಹಾಕಲಾಗುವುದು ಎಂದ ಅಂಬೇಡ್ಕರ್‌ ಅವರು, ಕೃಷಿ ಕ್ಷೇತ್ರದ ಮರುಸಂಘಟನೆ ಮತ್ತು ಕೃಷಿ ಭೂಮಿಯ ರಾಷ್ಟ್ರೀಕರಣಕ್ಕಾಗಿ ಕ್ರಾಂತಿಕಾರಿ ಕ್ರಮಗಳನ್ನು ಪ್ರತಿಪಾದಿಸಿದರು. ಅಲ್ಲದೆ, “ಅತ್ಯುನ್ನತ ಉತ್ಪಾದಕತೆಯನ್ನು ಸಾಧಿಸುವ ಮತ್ತು ಖಾಸಗಿ ಉದ್ಯಮಕ್ಕೆ ಯಾವುದೇ ಬೇಡಿಕೆಯಿಲ್ಲದೆ ಸಂಪತ್ತನ್ನು ಸಮಾನವಾಗಿ ವಿತರಿಸುವಂತೆ ಜನತೆಯ ಆರ್ಥಿಕ ಬದುಕನ್ನು ಸರ್ಕಾರವು ಯೋಜಿಸಬೇಕು” ಎಂದು ಶಿಫಾರಸು ಮಾಡಿದರು.

ಡಾ. ಅಂಬೇಡ್ಕರ್ ಅವರು ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಯೋಜಿತ ರೀತಿಯಲ್ಲಿ ಪ್ರಭುತ್ವದ ಮಾಲೀಕತ್ವವನ್ನು ಪ್ರಸ್ತಾಪಿಸಿದರು. ಕೃಷಿಯಲ್ಲಿ ಸಾಮೂಹಿಕ ಕೃಷಿ ಮತ್ತು ಕೈಗಾರಿಕಾ ವಲಯದಲ್ಲಿ ಪ್ರಭುತ್ವ ಸಮಾಜವಾದವನ್ನು ಶಿಫಾರಸು ಮಾಡಿದರು. ಕೃಷಿ ಮತ್ತು ಕೈಗಾರಿಕೆಗೆ ಅಗತ್ಯವಾದ ಬಂಡವಾಳವನ್ನು ಒದಗಿಸುವ ಜವಾಬ್ದಾರಿಯನ್ನು ರಾಜ್ಯವು ಹೊಂದಿತ್ತು. ಬಡತನ, ನಿರುದ್ಯೋಗ, ಹಣದುಬ್ಬರ, ಹಿಂದುಳಿದಿರುವಿಕೆ, ಅಸಮಾನತೆ ಮತ್ತು ವಿದೇಶಿ ಕರೆನ್ಸಿಗೆ ಸಂಬಂಧಿಸಿದಂತೆ ಭಾರತೀಯ ರೂಪಾಯಿಯ ಅಪಮೌಲ್ಯದಂತಹ ರಾಷ್ಟ್ರವನ್ನು ಬಾಧಿಸುತ್ತಿರುವ ಸಮಸ್ಯೆಗಳಿಗೆ ಸಂಭಾವ್ಯ ಪರಿಹಾರಗಳನ್ನು ಒದಗಿಸುವುದರಿಂದ ಡಾ. ಅಂಬೇಡ್ಕರ್ ಅವರ ಸಂಶೋಧನೆ ಇಂದಿಗೂ ಪ್ರಸ್ತುತವಾಗಿದೆ.

ಇದನ್ನೂ ಓದಿರಿ: ವಿಶ್ಲೇಷಣೆ | ಕರ್ನಾಟಕದಲ್ಲಿ ಒಬಿಸಿ ಮೀಸಲಾತಿ ಸಾಗಿಬಂದ ದಾರಿ

ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಭಾರತದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಣಕಾಸು ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆಯ ಸೆಕ್ಷನ್ 20ರ ಪ್ರಕಾರ, ವಿನಿಮಯ, ಹಣ ರವಾನೆ ಮತ್ತು ಇತರ ಬ್ಯಾಂಕಿಂಗ್ ಕಾರ್ಯಾಚರಣೆಗಳು ಸೇರಿದಂತೆ ಕೇಂದ್ರ ಸರ್ಕಾರದ ರಶೀದಿಗಳು ಹಾಗೂ ಪಾವತಿಗಳನ್ನು ನಿರ್ವಹಿಸಲು ಆರ್‌ಬಿಐಗೆ ಅಧಿಕಾರ ನೀಡಲಾಗಿದೆ. ಹೆಚ್ಚುವರಿಯಾಗಿ, ಭಾರತದಲ್ಲಿ ಸರ್ಕಾರಿ ವ್ಯವಹಾರವನ್ನು ನಡೆಸಲು ಕಾಯ್ದೆಯ ಸೆಕ್ಷನ್ 21 ಆರ್‌ಬಿಐಗೆ ಅನುಮತಿಸುತ್ತದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆಯ ಸೆಕ್ಷನ್ 21ಎ ರಾಜ್ಯ ಸರ್ಕಾರಗಳೊಂದಿಗೆ ವಹಿವಾಟು ನಡೆಸಲು ಆರ್‌ಬಿಐಗೆ ಅಧಿಕಾರ ನೀಡುತ್ತದೆ. ಸಿಕ್ಕಿಂ ಹೊರತುಪಡಿಸಿ ಭಾರತದ ಎಲ್ಲ ರಾಜ್ಯಗಳೊಂದಿಗೆ ಆರ್‌ಬಿಐ ಒಪ್ಪಂದ ಮಾಡಿಕೊಂಡಿದೆ. ಯಾಕೆಂದರೆ 1975ರಲ್ಲಿ ಭಾರತದೊಂದಿಗೆ ವಿಲೀನಗೊಳ್ಳುವ ಮೊದಲು ಸಿಕ್ಕಿಂ ಸ್ವತಂತ್ರ ರಾಜ್ಯವಾಗಿತ್ತು. ವಿಲೀನ ಒಪ್ಪಂದದ ಭಾಗವಾಗಿ, ಸಿಕ್ಕಿಂನ ಮೂಲ ನಿವಾಸಿಗಳ ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಹಕ್ಕುಗಳನ್ನು ರಕ್ಷಿಸಲು ವಿಶೇಷ ನಿಬಂಧನೆಗಳನ್ನು ರಚಿಸಲಾಯಿತು. ಈ ಸವಲತ್ತುಗಳಲ್ಲಿ ಆದಾಯ ತೆರಿಗೆಯಿಂದ ಸಂಪೂರ್ಣ ವಿನಾಯಿತಿಯ ಜತೆಗೆ ರಾಜ್ಯದ ಜನರಿಗೆ ಆರ್ಥಿಕ ಭದ್ರತೆಯನ್ನು ಖಚಿತಗೊಳಿಸುವುದೂ ಸೇರಿದೆ.

ನಾಗ್ಪುರದಲ್ಲಿರುವ ಆರ್‌ಬಿಐ ಕೇಂದ್ರ ಲೆಕ್ಕಪತ್ರ ವಿಭಾಗವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಾಥಮಿಕ ಖಾತೆಗಳನ್ನು ನಿರ್ವಹಿಸುತ್ತದೆ. ಆದಾಯ ಸಂಗ್ರಹಣೆ ಮತ್ತು ಪಾವತಿ ನಿರ್ವಹಣೆಗಾಗಿ ಆರ್‌ಬಿಐ ಉತ್ತಮವಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆಯನ್ನು ಹೊಂದಿದೆ. ಸರ್ಕಾರಿ ವಹಿವಾಟುಗಳು ಆರ್‌ಬಿಐನ ಸಾರ್ವಜನಿಕ ಲೆಕ್ಕಪತ್ರ ಇಲಾಖೆ ಮತ್ತು ಆರ್‌ಬಿಐ ಕಾಯ್ದೆಯ ಸೆಕ್ಷನ್ 45ರ ಅಡಿ ನೇಮಕಗೊಂಡ ಏಜೆನ್ಸಿ ಬ್ಯಾಂಕ್‌ಗಳ ಶಾಖೆಯು ಜಾಲಗಳ ಮೂಲಕ ನಡೆಯುತ್ತವೆ.

ಇದನ್ನೂ ಓದಿರಿ: ಮೋದಿಯ ಟೀಕಿಸುತ್ತಿದ್ದ ರಾಣೆ, ಮುಸ್ಲಿಂ ದ್ವೇಷಿಯಾಗಿದ್ದು ಹೇಗೆ?

ಪ್ರಸ್ತುತ, ಎಲ್ಲ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಮೂರು ಖಾಸಗಿ ವಲಯದ ಬ್ಯಾಂಕುಗಳಾದ ಐಸಿಐಸಿಐ ಬ್ಯಾಂಕ್ ಲಿಮಿಟೆಡ್, ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್ ಮತ್ತು ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಏಜೆಂಟರಾಗಿ ಕಾರ್ಯನಿರ್ವಹಿಸುತ್ತವೆ. ಏಜೆನ್ಸಿ ಬ್ಯಾಂಕುಗಳ ಅಧಿಕೃತ ಶಾಖೆಗಳು ಮಾತ್ರ ಸರ್ಕಾರಿ ವಹಿವಾಟುಗಳನ್ನು ಕೈಗೊಳ್ಳಬಹುದು. ಈ ವ್ಯವಸ್ಥೆಯು ದೇಶಾದ್ಯಂತ ಹಲವು ಶಾಖೆಗಳು ವ್ಯಾಪಿಸುವ ಜಾಲವನ್ನು ಅನುಮತಿಸುತ್ತದೆ, ಸರ್ಕಾರಿ ವಹಿವಾಟುಗಳನ್ನು ಸಮರ್ಥವಾಗಿ ನಿರ್ವಹಿಸುತ್ತದೆ.‌ ಬಾಬಾಸಾಹೇಬರ ಚಿಂತನೆಯ ಫಲವಾಗಿ ಹುಟ್ಟಿದ ಆರ್‌ಬಿಐ, ತನ್ನ ನೋಟುಗಳ ಮೇಲೆ ಅಂಬೇಡ್ಕರ್ ಅವರ ಭಾವಚಿತ್ರವನ್ನು ಮುದ್ರಿಸಬೇಕೆಂಬ ಆಗ್ರಹ ನ್ಯಾಯೋಚಿತವಾದದ್ದು. ಇಂತಹ ಕ್ರಮವು ಅಂಬೇಡ್ಕರ್ ಅವರಿಗೆ ಸಲ್ಲುವ ನಿಜವಾದ ಗೌರವವೂ ಆಗುತ್ತದೆ.

ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ಅನದಿನದ ದುಡಿಮೆಯ ಅವಧಿಯನ್ನು 12 ತಾಸುಗಳಿಂದ 8 ತಾಸುಗಳಿಗೆ ಕಡಿತಗೊಳಿಸಿದ್ದು, ತುಟ್ಟಿಭತ್ಯೆ, ರಜೆ ಪ್ರಯೋಜನ, ಉದ್ಯೋಗಿ ವಿಮೆ, ವೈದ್ಯಕೀಯ ರಜೆ, ಸಮಾನ ಕೆಲಸಕ್ಕೆ ಸಮಾನ ವೇತನ, ಕನಿಷ್ಠ ವೇತನ ಮತ್ತು ವೇತನ ಶ್ರೇಣಿಯ ಸಮಯೋಚಿತ ಪರಿಷ್ಕರಣೆ, ಕಾರ್ಮಿಕ ಕಾನೂನು ಹಕ್ಕುಗಳು, ಮಹಿಳಾ ಹಕ್ಕುಗಳು, ಶಿಕ್ಷಣ ಅವರದೇ ಕೊಡುಗೆ. ಶೋಷಿತರಿಗೆ ರಾಜಕೀಯ ಪ್ರಾತಿನಿಧ್ಯ ಮತ್ತು ಆರ್ಥಿಕತೆಯ ಕುರಿತು ಅಂಬೇಡ್ಕರ್ ಅವರ ಚಿಂತನೆಗಳು ಅಪಾರ. ಇವುಗಳಿಗೆ ಅಂತಾರಾಷ್ಟ್ರೀಯ ಪ್ರಾಮುಖ್ಯತೆ ಇದೆ. ಆದರೂ ಅಂಬೇಡ್ಕರ್‌ ಅವರ ಕಾರ್ಯಗಳು ಮತ್ತು ಅವರ ಅರ್ಥಜ್ಞಾನ ಸಾಕಷ್ಟು ಪ್ರಚಲಿತವಾಗದಿರುವುದು, ಜನಪ್ರಿಯಗೊಳ್ಳದಿರುವುದು ಯಾಕಾಗಿ?

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...