AIನಿಂದ AGIವರೆಗೆ: ಮಾನವ ಬುದ್ಧಿವಂತಿಕೆಯ ಹೊಸ ಕ್ರಾಂತಿ; ಏನಾಗಬಹುದು ಭವಿಷ್ಯದ ಬದುಕು?

Date:

ಇತ್ತೀಚೆಗಿನ ತಂತ್ರಜ್ಞಾನದಲ್ಲಿ ಎಲ್ಲೆಲ್ಲೂ AI ನದ್ದೇ (ಕೃತಕ ಬುದ್ಧಿಮತ್ತೆ) ಸದ್ದು-ಗದ್ದಲ. ಈಗಾಗಲೇ AI ನಮ್ಮ ದಿನನಿತ್ಯದ ಬದುಕಿನಲ್ಲಿ ಜಾಗ ಹಿಡಿದಿದೆ. ಮಾಧ್ಯಮ ಮತ್ತು ಮನರಂಜನೆ, ಆರೋಗ್ಯ ಕ್ಷೇತ್ರ, ಮೆಸೇಜಿಂಗ್‌, ಭಾಷಾನುವಾದ, ಬ್ಯಾಂಕಿಂಗ್‌ ಕ್ಷೇತ್ರ, ಟ್ರ್ಯಾಫಿಕ್ ನಿಯಂತ್ರಣ, ಕೃಷಿ ಕ್ಷೇತ್ರ ಹೀಗೆ ಎಲ್ಲಿಂದೆಲ್ಲಿಗೆ ಹೋದರೂ ಎಲ್ಲವೂ AI ಮಯ.. ಸದ್ಯಕ್ಕಂತೂ ಅಯೋಮಯ!

AI ಇಂದು ತಂತ್ರಜ್ಞಾನದ ಮಟ್ಟದಾಚೆಗೆ ಬದುಕಿನ ಭಾಗವಾಗುತ್ತಿದೆ. ಇದು ಸಮಯದ ಉಳಿತಾಯದಲ್ಲಿ, ಕಠಿಣ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ, ಅತ್ಯಂತ ಸ್ಪಷ್ಟ, ನಿಖರ ನಿಲುವುಗಳನ್ನು ತಲುಪಿಸುವುದರಲ್ಲಿ ಗಣನೀಯ ಪಾತ್ರ ವಹಿಸತೊಡಗಿದೆ.

ʼಯಂತ್ರಗಳಿಗೆ ಮಾನವರಂತೆ ಮನಸ್ಸಿದ್ದರೆ ಹೇಗಿರುತ್ತೆ?ʼ ಎಂದು ಎಂದಾದರೂ ಖಂಡಿತ ಅನ್ನಿಸಿರಲೇಬೇಕು. ಇದು ಸೈನ್ಸ್ ಫಿಕ್ಷನ್ ಆಗಿದ್ದರೂ, ಇತ್ತೀಚಿನ ತಂತ್ರಜ್ಞಾನ ಆ ದಿಕ್ಕಿನೆಡೆಗೇ ಹೋಗುತ್ತಿದೆ. ಅದನ್ನೇ ನಾವು AGI ಎಂದು ಸರಳೀಕರಿಸಬಹುದು. AIನ ಮುಂದಿನ ಹಂತವೇ AGI ಎಂದರೂ ತಪ್ಪಾಗಲಾರದು. ಇದನ್ನು “ಮನುಷ್ಯರಂತೆ ಯೋಚಿಸಬಲ್ಲ ಯಂತ್ರ” ಅಂತಲೂ ಕರೆದುಕೊಳ್ಳಬಹುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇಂದು ಯಂತ್ರಗಳು ನಾವು ಹೇಳಿದ್ದನ್ನೇನೋ ಮಾಡುತ್ತವೆ. ನಾಳೆ ಅವು ನಮ್ಮಂತೆಯೇ ಯೋಚಿಸಬಹುದಾ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವೇ ʼಕೃತಕ ಸಾಮಾನ್ಯ ಬುದ್ಧಿಮತ್ತೆ (AGI)ʼ. ಇದು ನಮ್ಮ ಜೊತೆ ಮಾತನಾಡಬಲ್ಲ, ಕಲಿಯಬಲ್ಲ, ಸಮಸ್ಯೆ ಪರಿಹರಿಸಬಲ್ಲ ಯಂತ್ರವೊಂದರ ಅನ್ವೇಷಣೆ. ಜಾಗತಿಕ ಮಟ್ಟದಲ್ಲಿ ಸ್ಫರ್ಧಿಸಲು ತಂತ್ರಜ್ಞಾನದ ಬೆಳವಣಿಗೆಯೇನೋ ಸರಿ.. ಆದರೆ, ಅದರಿಂದ ಮಾನವ ಕುಲಕ್ಕೆ ಹಿತವೆಷ್ಟು, ಅಹಿತವೆಷ್ಟು ಎಂಬ ಅಂಶವನ್ನೂ ಪರಿಗಣಿಸಬೇಕಿದೆ.

WhatsApp Image 2025 04 28 at 16.56.53

ಕೃತಕ ಬುದ್ಧಿಮತ್ತೆ ಮತ್ತು ಕೃತಕ ಸಾಮಾನ್ಯ ಬುದ್ಧಿಮತ್ತೆಯನ್ನು ಸರಳವಾಗಿ ಭಿನ್ನೀಕರಿಸುವುದಾದರೆ..

ಕೃತಕ ಬುದ್ಧಿಮತ್ತೆಕೃತಕ ಸಾಮಾನ್ಯ ಬುದ್ಧಿಮತ್ತೆ
ನಿರ್ದಿಷ್ಟ ಕಾರ್ಯಗಳನ್ನು ಮಾಡಲು ವಿನ್ಯಾಸಗೊಳಿಸಿದ ಸಿಸ್ಟಮ್ಮನುಷ್ಯರಂತೆ ಯೋಚಿಸಬಲ್ಲ, ಎಲ್ಲ ಕ್ಷೇತ್ರದಲ್ಲೂ ಬುದ್ಧಿವಂತ ಯಂತ್ರ.
ಉದಾಹರಣೆಗೆ: Google Maps, Siri, Chat GPT, Amazon Recommendations.ಮನುಷ್ಯನಂತೆ ಎಲ್ಲ ವಿಷಯಗಳಲ್ಲಿ ತೀರ್ಮಾನ ಕೈಗೊಳ್ಳಬಹುದಾದ ಯಂತ್ರ.
ನಿರ್ದಿಷ್ಟ ಕಾರ್ಯಗಳಲ್ಲಿ ಮಾತ್ರ ಪರಿಣತಿ (ನ್ಯಾರೋ AI)ಎಲ್ಲ ರೀತಿಯ ಕೆಲಸಗಳಲ್ಲಿ ಸಮರ್ಥ
ಸೀಮಿತ ಬುದ್ಧಿವಂತಿಕೆ – ಏನು ಕಲಿಸುತ್ತೀವೋ ಅದನ್ನೇ ಮಾಡುತ್ತದೆ.ಮಾನವರ ಬುದ್ಧಿಶಕ್ತಿಗೆ ಸಮನಾದ ಬುದ್ಧಿವಂತಿಕೆ
ವ್ಯಕ್ತಿಯ ಕೆಲಸದ ಹೊರೆ ತಗ್ಗಿಸುವುದು ಅಥವಾ ಸುಲಭಗೊಳಿಸುವುದು.ಹಲವಾರು ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವುದು, ಹೊಸದನ್ನು ಕಲಿಯುವ & ತಾತ್ವಿಕ, ನೈತಿಕ ನಿರ್ಣಯ ಕೈಗೊಳ್ಳುವ ಸಾಮರ್ಥ್ಯ
ಪ್ರಸ್ತುತ ಬಳಕೆಯಲ್ಲಿ ಇದೆ.ಅಭಿವೃದ್ಧಿಯ ಹಂತದಲ್ಲಿದೆ. ಇದನ್ನೂ ಭವಿಷ್ಯದ ಎಐ ಎಂತಲೂ ಕರೆಯಬಹುದು.

AGI ಮತ್ತು AI (ನ್ಯಾರೋ) ನಡುವಿನ ಲಕ್ಷಣ ಅಥವಾ ವ್ಯತ್ಯಾಸಗಳನ್ನು ಸರಳೀಕರಿಸಿ ಹೇಳುವುದಾದರೆ..
ನಮ್ಮ ಪ್ರಪಂಚದಲ್ಲಿ ಇಂದು ನಾವು ಕಾಣುತ್ತಿರುವ AIಗಳು ನ್ಯಾರೋ ಅಥವಾ ಸ್ಪೆಷಲೈಸ್ಡ್ AI ಆಗಿವೆ. ಈ ತಂತ್ರಜ್ಞಾನಗಳು ನಿಖರವಾಗಿ ಒಂದು ಕಾರ್ಯವನ್ನು ನಿರ್ವಹಿಸಲು ವಿನ್ಯಾಸಗೊಳ್ಳುತ್ತವೆ. ಉದಾಹರಣೆಗೆ, AI ಆಧಾರಿತ ಚಾಟ್‌ಬಾಕ್ಸ್‌ಗಳು, ಚಿತ್ರ ಗುರುತುಹಾಕುವ ತಂತ್ರಗಳು, ನಾವಿಗೇಶನ್ ವ್ಯವಸ್ಥೆ ಅಥವಾ ಭಾಷಾಂತರ AIಗಳು. ಈ ಎಲ್ಲಾ ತಂತ್ರಜ್ಞಾನಗಳು ನಿರ್ದಿಷ್ಟ ಕಾರ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಆದರೆ, ಸೀಮಿತವಾಗಿ ಎಂಬುದನ್ನು ಗಮನದಲ್ಲಿಟ್ಟಕೊಳ್ಳಬೇಕು.

ಇದನ್ನೂ ಓದಿರಿ: ಸಿಂಧೂ ಜಲ ವಿವಾದ; ಪಾಕಿಸ್ತಾನ ಹೆದರುತ್ತಿಲ್ಲ ಯಾಕೆ?

ಆದರೆ AGI, ನಾವೆಲ್ಲಾ ಬುದ್ಧಿವಂತಿಕೆ ಪಡೆದಿರುವ ರೀತಿಯಂತೆ, ಬೌದ್ಧಿಕವಾಗಿ ಪ್ರಪಂಚದ ಎಲ್ಲ ಜ್ಞಾನದ ಮಟ್ಟವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. AGI ಪ್ರಕಾರ, ತಂತ್ರಜ್ಞಾನವು ಯಾವುದೇ ಸಮಸ್ಯೆಗಳನ್ನು ಪರಿಹರಿಸಲು, ಕಲಿಯಲು ಮತ್ತು ಹೊಸ ಜ್ಞಾನವನ್ನು ಸಹ ಸಂಗ್ರಹಿಸಲು ಹಾಗೂ ಅದರ ಬೆಳವಣಿಗೆಗೆ ಪೂರಕತೆ ಒದಗಿಸುವಲ್ಲಿ ಬೇಕಾದ ಸಾಮರ್ಥ್ಯವನ್ನು ಹೊಂದಿದೆ.

AGI–ಯು ಮಾನವನ ಮಟ್ಟಕ್ಕೆ ತಲುಪಲು ಎಷ್ಟು ದೂರ ಹಿಡಿದೀತು?
AGI ಸಾಧಿಸಲು ಮಾನವ ಸಮುದಾಯಕ್ಕೆ ಸದ್ಯದ ಮಟ್ಟಿಗೆ ಸಾಕಷ್ಟು ಸವಾಲುಗಳಿವೆ. ಈಗಿರುವ AI ನಿರ್ದಿಷ್ಟ, ವಿಶೇಷ ಕಾರ್ಯಗಳಲ್ಲಿ ಪರಿಣಿತಿ ಹೊಂದಿದ್ದರೂ, ಅವು ಎಲ್ಲಾ ಸಂವೇದನಾತ್ಮಕ ಅಥವಾ ನಿರ್ಣಯಗಳನ್ನು ಮಾನವನ ಬುದ್ಧಿವಂತಿಕೆಯಂತೆಯೇ ನಿರ್ವಹಿಸಲು ಸಾಧ್ಯವಿಲ್ಲ.

AGI– ನಮ್ಮನ್ನು ತಲುಪಲು ಬೇಕಾದ ಪ್ರಮುಖ ಸ್ಥಿತಿಗಳು:

ಸಮಗ್ರ ಭಾಷೆ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ: AGIನಲ್ಲಿ ಸಮಗ್ರ ಭಾಷೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವು ಅಗತ್ಯವಿರುತ್ತದೆ. ಇದು ಕೇವಲ ಭಾಷೆಗಳನ್ನು ಅನುವಾದಿಸುವುದಕ್ಕಿಂತ ಬೇರೆಯದ್ದೇ ಆಗಿದೆ. AGI ಬಗೆಗಿನ ಬುದ್ಧಿಮತ್ತೆಯು ಸ್ಪಷ್ಟವಾಗಿ ಸಂವಾದದ ಉದ್ದೇಶವನ್ನು, ಭಾವನೆಗಳನ್ನು, ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಬೇಕು.

ಹೆಚ್ಚುವರಿ ಕಲಿಕೆ: AGI, ಯಾವುದಾದರೂ ಹೊಸ ಪರಿಸ್ಥಿತಿಯ ಮೇಲೆ ಕಲಿಯುವ, ಅದನ್ನು ಹಳೆ ಜ್ಞಾನದೊಂದಿಗೆ ಸಂಯೋಜಿಸಿ ಪೂರಕ ಪರಿಹಾರಗಳನ್ನು ಕಂಡುಹಿಡಿಯುವ ಸಾಮರ್ಥ್ಯವನ್ನು ಹೊಂದಿರಬೇಕಾಗುತ್ತದೆ.

ಸಹಜ ಮನೋಭಾವನೆ: ಮಾನವನ ತರ್ಕವನ್ನು ಪ್ರತಿಬಿಂಬಿಸುವ AGI, ಎಲ್ಲಾ ದೈಹಿಕ ಮತ್ತು ಸಾಂಸ್ಕೃತಿಕ ವ್ಯತ್ಯಾಸಗಳೊಂದಿಗೆ ಸಮರ್ಥವಾಗಿ ಕಾರ್ಯನಿರ್ವಹಿಸಲು ಸಮರ್ಥವಾಗಿರಬೇಕಾಗುತ್ತದೆ.

ಇದನ್ನೂ ಓದಿರಿ: ನಕಲಿ ಎನ್‌ಕೌಂಟರ್ ಪ್ರಕರಣಗಳು: ಕಾನೂನು ಹೇಳುವುದೇನು?

ಈ ಎಲ್ಲಾ ಹಂತಗಳನ್ನು ದಾಟಿ AGI ಸಂಪೂರ್ಣವಾಗಿ ಅಭಿವೃದ್ಧಿಯಾದರೆ ಮಾನವನಿಗೆ ಪರ್ಯಾಯವಾಗಬಹುದು. ಕಚೇರಿಗಳಲ್ಲಿ ಒಬ್ಬ ಉದ್ಯೋಗಿಯ ಬದಲಾಗಿ AGI ಆಧಾರಿತ ಯಂತ್ರವನ್ನೇ ಬಳಕೆ ಮಾಡಿಕೊಳ್ಳಬಹುದಾದ ತಂತ್ರಜ್ಞಾನ ಬರಲಿದೆ ಎನ್ನುವುದು ಅತಿಶಯೋಕ್ತಿಯಲ್ಲ.

AGI

AGIನ ಪ್ರಯೋಜನಗಳು:

AGI ಆವಿಷ್ಕಾರವು ಮಾನವನ ಬುದ್ಧಿವಂತಿಕೆಯನ್ನು ಪ್ರೌಢೀಕರಿಸಲು ಮತ್ತು ಅದರ ಪರಿಣಾಮಗಳನ್ನು ಹೆಚ್ಚು ಸಾಮಾನ್ಯವಾಗಿ ಅನುಭವಿಸಲು ಅನೇಕ ಅವಕಾಶಗಳನ್ನು ಒದಗಿಸುತ್ತದೆ. ಅದರಿಂದಾಗುವ ಕೆಲವು ಪ್ರಮುಖ ಪ್ರಯೋಜನಗಳನ್ನು ಪಟ್ಟಿಮಾಡುವುದಾದರೆ..

  • ಆರ್ಥಿಕ ಸುಧಾರಣೆ: AGI ಉದ್ಯಮಗಳಲ್ಲಿ ಹೆಚ್ಚಿನ ಉತ್ಪಾದಕತೆ, ಸೃಜನಾತ್ಮಕತೆ ಮತ್ತು ಕಾರ್ಯಕ್ಷಮತೆಯನ್ನು ಸಾಧಿಸಬಹುದು.
  • ಸಾಮಾಜಿಕ ಅಭಿವೃದ್ಧಿ: AGI ಸಾಮರ್ಥ್ಯವನ್ನು ಆರೋಗ್ಯ, ಶಿಕ್ಷಣ, ವಿಜ್ಞಾನ ಮತ್ತು ಇತರ ಮಹತ್ವದ ಕ್ಷೇತ್ರಗಳಲ್ಲಿ ಉಪಯೋಗಿಸುವ ಮೂಲಕ, ಮಾನವನ ಜೀವನದ ಗುಣಮಟ್ಟವನ್ನು ಹೆಚ್ಚಿಸಬಹುದು.
  • ಮಿತಿ ಇಲ್ಲದ ಆವಿಷ್ಕಾರಗಳಿಗೆ ನಾಂದಿ: AGI-ಯಿಂದ ನವೀನ ಸಂಶೋಧನೆಗಳು, ತಂತ್ರಜ್ಞಾನಗಳು ಮತ್ತು ವೈಜ್ಞಾನಿಕ ಆವಿಷ್ಕಾರಗಳು ಸಾಧ್ಯವಾಗಬಹುದು.

AGI ನಿಂದ ಮುಂದಿನ ಹಂತಗಳಲ್ಲಿ ಎದುರಿಸಬೇಕಾದ ಸವಾಲುಗಳು: ಕೃತಕ ಸಾಮಾನ್ಯ ಬುದ್ಧಿಮತ್ತೆಯ ಆವಿಷ್ಕಾರವು ಮಾನವ ಜೀವನ ಶೈಲಿಯನ್ನು ಸರಳೀಕರಿಸಿಕೊಳ್ಳಲು ಎಷ್ಟು ಸಹಕಾರಿಯಾಗಲಿದೆಯೋ ಅಷ್ಟೇ ಪ್ರಮಾಣದ ಅಪಾಯಗಳನ್ನು ತಂದೊಡ್ಡುವುದರೊಡನೆ ಸಾಮಾಜಿಕ, ಆರ್ಥಿಕ ಮತ್ತು ಭದ್ರತೆ ಸಮಸ್ಯೆಗಳಿಗೂ ಕಾರಣವಾಗಬಹುದು. ಸಂವೇದನಾತ್ಮಕತೆಯ ಕೊರತೆ, ಭವಿಷ್ಯವನ್ನು ಪ್ರತ್ಯೇಕವಾಗಿ ಊಹಿಸುವ ಸಮಸ್ಯೆಗಳು ಮತ್ತು ಹೆಚ್ಚು ಅವಿಭಜಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಪಾಯಗಳು ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ.

AGI‌ನೊಂದಿಗೆ ಭವಿಷ್ಯದಲ್ಲಿ ಎದುರಾಗಬಹುದಾದ ಸವಾಲುಗಳು:

1. ನಿಯಂತ್ರಣ ಸಮಸ್ಯೆ: AGI ತುಂಬಾ ಶಕ್ತಿಶಾಲಿಯಾದ ಮೇಲೆ ಮಾನವರು ಅದನ್ನು ಹೇಗೆ ನಿಯಂತ್ರಿಸಬಲ್ಲರು ಎನ್ನುವುದು ಅತಿದೊಡ್ಡ ಪ್ರಶ್ನೆ. ಉದಾಹರಣೆಗೆ: ಅದು ತನ್ನದೇ ಆದ ನಿರ್ಧಾರಗಳನ್ನು ತಾಳ್ಮೆಯಿಲ್ಲದೆ ತೆಗೆದುಕೊಳ್ಳುತ್ತಿದ್ದರೆ ಅಥವಾ ಮಾನವ ಹಿತಕ್ಕಷ್ಟೇ ಅಲ್ಲದ ನಿಯಮಗಳನ್ನೂ ತನ್ನಷ್ಟಕ್ಕೆ ತಾನು ಅನುಸರಿಸಿದರೆ?… ಇವು ಕೇವಲ ಕಲ್ಪಿತ ಪ್ರಶ್ನೆಗಳಲ್ಲ.. ಅಪ್ಪಟ ವಾಸ್ತವ. ಮಾನವ ತನ್ನ ಸರಿಸಮನಾದ ಅಥವಾ ಅದಕ್ಕಿಂತ ಹೆಚ್ಚಿನದೇ ಬುದ್ಧಿಶಕ್ತಿ ಪಡೆಯಲು ಸಾಮರ್ಥ್ಯವಿರುವ ತಂತ್ರಜ್ಞಾನವನ್ನು ರೂಪಿಸುವುದಕ್ಕಿಂತ ಅದನ್ನು ನಿಯಂತ್ರಿಸುವುದೇ ಒಂದು ದೊಡ್ಡ ಸವಾಲು.

2. ನೈತಿಕ ಮತ್ತು ಮಾನವೀಯ ಅಂಶಗಳು: AGI ಮನುಷ್ಯತ್ವವನ್ನು ಅರ್ಥಮಾಡಿಕೊಳ್ಳಬಹುದೇ? ಒಂದು “ನೈತಿಕ ರೇಖೆಯನ್ನು” ಎಲ್ಲಿ ಎಳೆಯಬೇಕು ಎಂಬುದು ಸವಾಲಾಗಿ ಪರಿಣಮಿಸುತ್ತದೆ. ಕೊಲೆ, ದಂಡನೆ ಅಥವಾ ನೈತಿಕ ನಿರ್ಧಾರಗಳನ್ನು ತಾಳ್ಮೆಯಿಂದ ತೆಗೆದುಕೊಳ್ಳಬಹುದೇ? ಎಂಬುದರಲ್ಲಿ ಸಮಸ್ಯೆ ಎದುರಾಗಬಹುದು.

3. ಬುದ್ಧಿ ಸುಧಾರಿಸಿಕೊಳ್ಳುವ ಸಾಮರ್ಥ್ಯ: AGI ಸ್ವತಃ ತನ್ನ ಬುದ್ಧಿಮತ್ತೆಯನ್ನು ಸುಧಾರಿಸಿಕೊಳ್ಳುತ್ತ ಮುಂದುವರಿದರೆ ಅದು ತಕ್ಷಣವೇ “Super intelligence” ಆಗಬಹುದೆಂಬ ಆತಂಕವಿದೆ. ಇಂಥ ಪರಿಸ್ಥಿತಿಯಲ್ಲಿ ನಾವು ಅದರ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಬಹುದು.

4. ಉದ್ಯೋಗ ಅತಂತ್ರದ ಆತಂಕ: ತಂತ್ರಜ್ಞಾನ ಪ್ರತಿಯೊಬ್ಬರಿಗೂ ಒಂದೇ ಮಟ್ಟದಲ್ಲಿ ತಲುಪುವುದಿಲ್ಲ. ಎಲ್ಲರಿಗೂ ಹಂಚಿಕೆಯಾಗದೆ ಕೆಲವರ ಕೈಗೆ ಮಾತ್ರ ಸೀಮಿತವಾದರೆ ಸಾಮಾಜಿಕ ಅಸಮಾನತೆ ಹೆಚ್ಚಬಹುದು. ಭವಿಷ್ಯದ ಉದ್ಯೋಗಗಳು ಯಾವುವು? ಯಾರಿಗೆ ಉದ್ಯೋಗ ಸಿಗುತ್ತದೆ? ಎಂಬುದಕ್ಕೆ ಉತ್ತರಿಸುವುದು ಮತ್ತೂ ಜಟಿಲ.

ಇದನ್ನೂ ಓದಿರಿ: ಉರ್ದು ಈ ನೆಲದ ಭಾಷೆ ಎಂದು ಸಾರಿದ ಸುಪ್ರೀಮ್ ಕೋರ್ಟ್ ತೀರ್ಪಿನ ಮುಖ್ಯಾಂಶಗಳೇನು?

5. ಹ್ಯಾಕಿಂಗ್ ಮತ್ತು ದುರುಪಯೋಗ:

AGIನ್ನು ಒಳ್ಳೆಯ ಕೆಲಸಗಳಿಗಿಂತ ನಕಾರಾತ್ಮಕ ಉದ್ದೇಶಗಳಿಗೆ ಉಪಯೋಗಿಸುವ ಸಾಧ್ಯತೆಯೇ ಹೆಚ್ಚು ಗೋಚರಿಸುತ್ತಿದೆ. ಯುದ್ಧ, ಕಳ್ಳತನ, ರಾಜಕೀಯ ಪ್ರಭಾವ ಇತ್ಯಾದಿಗಳಲ್ಲಿ ಸಲೀಸಾಗಿ ದುರ್ಬಳಕೆ ಮಾಡಿಕೊಳ್ಳಬಹುದು.

AGI ಆವಿಷ್ಕಾರದಿಂದ ಆತಂಕಕ್ಕೀಡಾಗಬಹುದಾದ ಕ್ಷೇತ್ರಗಳು ಮತ್ತು ಜನರು:

1. ದೈನಂದಿನ, ಮಾರುಕಟ್ಟೆ ಕೆಲಸಗಳು: ಡೇಟಾ ಎಂಟ್ರಿ, ಲೆಕ್ಕಪತ್ರ, ಗ್ರಾಹಕ ಸೇವೆ, ಟೈಪಿಂಗ್ ಅಥವಾ ನಿರ್ದಿಷ್ಟ ಪ್ರೋಟೋಕಾಲ್‌ಗಳಿಗೆ ಬದ್ಧವಾದ ಕಾರ್ಯಗಳನ್ನು ನಿರ್ವಹಿಸುವವರು ಉದ್ಯೋಗದ ಅತಂತ್ರತೆ ಎದುರಿಸಬಹುದು. ಬ್ಯಾಂಕ್ ಕ್ಲರ್ಕ್, ಟೆಲಿ-ಕಾಲ್ ಏಜೆಂಟ್, ಕೆಳ ಮಟ್ಟದ ಲೆಕ್ಕಪತ್ರ ನಿರ್ವಾಹಕರು ಇದಕ್ಕೆ ಹೊರತಾಗಿಲ್ಲ.

2. ಮಧ್ಯಮ ಮಟ್ಟದ ಪೌರಾಡಳಿತ ಅಥವಾ ಬ್ಯೂರೋಕ್ರಸಿ: ಕಡತ ಪರಿಶೀಲನೆ, ಅನುದಾನ ವಿತರಣೆ, ಪ್ರಕ್ರಿಯಾ ನಿಗಾ.. ಇವುಗಳನ್ನು AGI automation ಮೂಲಕ ಸುಲಭವಾಗಿ ಮಾಡಬಹುದು. ಹಾಗಾಗಿ ಈ ಕ್ಷೇತ್ರಗಳಲ್ಲಿ ಮಾನವ ಶಕ್ತಿ ಅನಿವಾರ್ಯ ಎನ್ನುವ ಸಂಭವವಿಲ್ಲ.

3. ಡ್ರೈವಿಂಗ್/ಲಾಜಿಸ್ಟಿಕ್ಸ್ ಉದ್ಯೋಗಗಳು: ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿರುವಂತೆ ನಮ್ಮ AGI-ಆಧಾರಿತ ಸ್ವಯಂಚಾಲಿತ ವಾಹನಗಳು ನಮ್ಮ ದೇಶಕ್ಕೂ ಕಾಲಿಡುವುದು ಸನ್ನಿಹಿತವಾಗಿದೆ. ಇದರಿಂದ ಟ್ರಕ್ ಚಾಲಕರು, ಕ್ಯಾಬ್ ಚಾಲಕರು ಆತಂಕ ಅನುಭವಿಸಬಹುದು.

4. ಮಾಧ್ಯಮ & ಕಂಟೆಂಟ್ ರಚನೆ: ತಾತ್ಕಾಲಿಕ ವಿಷಯ ಬರವಣಿಗೆ, ಸುದ್ದಿ ರಚನೆ, ಟ್ರೆಂಡಿಂಗ್ ಕಂಟೆಂಟ್ ನಿರ್ಮಾಣಗಳನ್ನು AGI ತ್ವರಿತವಾಗಿ ಮಾಡಬಲ್ಲದು. ಇದನ್ನು ಈಗಾಗಲೇ ಕೆಲ AI ತಂತ್ರಜ್ಞಾನಗಳು ಸಾಬೀತು ಮಾಡಿವೆ.

5. ಹೆಚ್ಚು ಆಟೋಮೇಶನ್‌ ಆಧಾರಿತ ಉತ್ಪಾದನಾ ಉದ್ಯೋಗಗಳು: ಕಾರ್ಖಾನೆಗಳಲ್ಲಿ ಮನುಷ್ಯರಿಂದ ಮಾಡಿಸಲಾಗುತ್ತಿದ್ದ ನಿಖರ ಕಾರ್ಯಗಳನ್ನು AGI + robotics ಮಾಡಿದರೆ, ಕೈಮಗ್ಗದ ಕೆಲಸಗಳು ಕ್ರಮೇಣ ಕಳೆದುಹೋಗಬಹುದು.

ಹೊಸ ಅವಕಾಶಗಳಿರುವ ಕ್ಷೇತ್ರಗಳು

ನಾಟ್ಯ, ಸಂಗೀತ, ಬರವಣಿಗೆ, ಚಲನಚಿತ್ರ ನಿರ್ದೇಶನ ಕ್ಷೇತ್ರಗಳಲ್ಲಿ ಮಾನವನಷ್ಟು AGI ಇನ್ನೂ expressive ಆಗಿಲ್ಲ ಎನ್ನುತ್ತಾರೆ ತಜ್ಞರು. ಭಾವನಾತ್ಮಕ ಬಾಂಧವ್ಯ ಮುಖ್ಯವಾಗಿರುವ ಮಾನಸಿಕ ಆರೋಗ್ಯ, ಶಿಕ್ಷಣ (ಶಿಕ್ಷಕರು), ಸಾಮಾಜಿಕ ಕಾರ್ಯ, ನರ್ಸಿಂಗ್ ಕ್ಷೇತ್ರಗಳಲ್ಲಿ AGI ಆವರಿಸಿಕೊಳ್ಳಬಹುದಾದ ಸಾಧ್ಯತೆ ಕಡಿಮೆ ಅಥವಾ ಇನ್ನೂ ಸಾಕಷ್ಟು ಸಮಯ ತೆಗೆದುಕೊಳ್ಳಬಹುದು. ನಿಯಂತ್ರಣ ಪ್ರಣಾಳಿಕೆ, ಎಥಿಕ್ಸ್ ನಿಯಂತ್ರಣದಲ್ಲಿ ಮಾನವನಷ್ಟು ಪರಿಣಾಮಕಾರಿಯಾಗಿ AGI ಕೆಲಸ ಮಾಡಲು ಸಾಧ್ಯವಾಗದೆ ಇರಬಹುದು.

AGI ಆಗಲೀ AI ಆಗಲೀ ನಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಇನ್ನೂ ಸೂಕ್ತವೆನಿಸಿಕೊಂಡಿಲ್ಲ. ನಿತ್ಯ ಫಾಸ್ಟ್‌ ಫುಡ್‌ ಏನೋ ತಯಾರಿಸಿಕೊಡಬಹುದು. ಆದರೆ ಮನೆ ಊಟ, ಮನೆ ಊಟನೇ. ಅದನ್ನು ತಯಾರಿಸಲು ತಂತ್ರಜ್ಞಾನಕ್ಕೆ ಇನ್ನೂ ಹೆಚ್ಚು ಸಮಯ ಹಿಡಿಯಬಹುದು.

ಅದಲ್ಲದೆ, ‘Nose for News’ (ಸುದ್ದಿ ಏನೆಂಬುದನ್ನು ಗುರುತಿಸುವ & ಅರ್ಥಮಾಡಿಕೊಳ್ಳುವ ಜ್ಞಾನ) ಎನ್ನುವ ಗುಣಲಕ್ಷಣವು ಮಾನವರಿಗೆ ಮಾತ್ರ ಸೀಮಿತವಾದ್ದು ಎಂದು ಈ ಹಿಂದೆ ಭಾವಿಸಲಾಗುತ್ತಿತ್ತು. ಆದರೆ ಕೆಲ ಉತ್ತರ ಯುರೋಪ್ ಮಾಧ್ಯಮ ಸಂಸ್ಥೆಗಳು ಈಗಾಗಲೇ ತಮ್ಮದೇ ಆದ ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳನ್ನು (AI) ಸರಳ ವಿಧಾನದಿಂದ ತರಬೇತುಗೊಳಿಸುತ್ತಿವೆ. ಅವು ತಮಗೆ ಸಿಗುವ ಸುದ್ದಿಗಳಿಗೆ ತಮ್ಮ ಡೆಸ್ಕ್ ಸಿಬ್ಬಂದಿಯಿಂದ ಥಂಬ್ಸ್ ಅಪ್ ಅಥವಾ ಥಂಬ್ಸ್ ಡೌನ್ ಕೊಡಿಸಿ (ಸಿಬ್ಬಂದಿಯಿಂದ ನಿರ್ದಿಷ್ಟ ವಿಷಯ, ವಿವರಣೆಗೆ ಅನುಮತಿ ಪಡೆದು), ಆ AIಗೆ ಸುದ್ದಿ ಸಂಪಾದಕನಂತೆ ಕಾರ್ಯನಿರ್ವಹಿಸಲು ಕಲಿಸುತ್ತಿವೆ. ಮುಂದಿನ ತಂತ್ರಜ್ಞಾನ ಕ್ರಾಂತಿಗೆ ಅಣಿಗೊಳಿಸುತ್ತಿವೆ.

ಆತಂಕದ ನಡುವೆ AGI ಒದಗಿಸಬಹುದಾದ ಅವಕಾಶಗಳು: AGI ಕಾನ್ಸರ್ ಅಥವಾ ಅಲ್ಜೈಮರ್ಸ್ ನಂತಹ ರೋಗಗಳಿಗೆ ತಕ್ಷಣದ ಪರಿಹಾರ ಕಂಡುಹಿಡಿಯಬಹುದು. ನಿಖರ ಡಯಾಗ್ನೋಸಿಸ್, ವೈಯಕ್ತಿಕ ಚಿಕಿತ್ಸೆ, ಜನರ ಆಯುಷ್ಯ ಹೆಚ್ಚಿಸಲು ನೆರವು ನೀಡಬಹುದು. ಪ್ರತಿಯೊಬ್ಬ ವಿದ್ಯಾರ್ಥಿಗೆ ವೈಯಕ್ತಿಕ ಟ್ಯೂಟರ್‌ನಂತೆ ಕೆಲಸಮಾಡಬಲ್ಲ AGI ಒಬ್ಬ ವಿದ್ಯಾರ್ಥಿ ಕಲಿಯುವ ಕ್ರಮವನ್ನೇ ಬದಲಾಯಿಸಬಹುದು. AGI ಹೊಸ ತತ್ವಗಳು, ಗಣಿತ ಮಾದರಿಗಳು, ಯಾಂತ್ರಿಕ ಆವಿಷ್ಕಾರಗಳ ಸೃಷ್ಟಿಯಲ್ಲಿ ಸಹಾಯಕವಾಗಬಹುದು. ನಿಖರ ಮುನ್ಸೂಚನೆಗಳ ಮೂಲಕ ಭೂಕಂಪ, ಪ್ರವಾಹ, ಜ್ವರ Pandemicಗಳನ್ನು ಮೊದಲು ಗುರುತಿಸಿ ಪರಿಹಾರ ಕ್ರಮ ಸೂಚಿಸಬಹುದು. ತಾರತಮ್ಯರಹಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಸಮಾಜದ ಅತ್ಯಂತ ಹಿಂದುಳಿದ ವರ್ಗಗಳ ಬಾಳಿನಲ್ಲಿ ಪರಿವರ್ತನೆ ತರಬಹುದು… ಇನ್ನು ಅನೇಕಾನೇಕ..

ಇಂದಿಗೆ AGI ದಾರಿಯಲ್ಲಿ ನಾವು ಹೇಗೆ ನಡೆಯಬೇಕೆಂಬುದರ ಕುರಿತು ಸಹಜ ಮತ್ತು ತಾತ್ವಿಕ ರೀತಿಯಲ್ಲಿ ಚಿಂತನೆ ನಡೆಸುವ ಅಗತ್ಯವಿದೆ. ಪ್ರಸ್ತುತ AI ನಿರ್ವಹಣೆ, ವೈಜ್ಞಾನಿಕ ಪರಿಹಾರಗಳು ಮತ್ತು ಸಾಮಾಜಿಕ ವ್ಯವಸ್ಥೆಗಳು AGI-ಯ ನವೀನತೆಗೆ ಕಾನೂನು, ನಿಯಂತ್ರಣ ಮತ್ತು ನೈತಿಕ ಮುನ್ನೋಟಗಳ ಅಗತ್ಯವಿದೆ. ಹೇಗೆ ನಾವು ಈ ನವೀನ, ನಿರ್ಧಾರ ಮಾಡುವ, ಮಾನವನ ಬುದ್ಧಿವಂತಿಕೆಯ ಸಮಾನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕು ಎಂಬ ಪ್ರಶ್ನೆಗೆ ಸ್ಪಷ್ಟ ಮತ್ತು ಸೂಕ್ತ ಉತ್ತರಗಳನ್ನು ಕಂಡುಕೊಳ್ಳುವ ಅವಶ್ಯಕತೆ ಇದೆ.

AGI2

ಭವಿಷ್ಯದ AGI; ಭೀತಿ ಅಲ್ಲ, ಬದಲಾವಣೆಗೆ ಸಿದ್ಧತೆ‘ ಎಂಬ ಅಂಶವನ್ನು ಸದಾ ಗಮನದಲ್ಲಿಟ್ಟುಕೊಂಡು ಇಂದಿನಿಂದ ಅದರೊಟ್ಟಿಗೆ ಬೆಳೆಯಲು ಕಾರ್ಯಪ್ರವೃತ್ತರಾಗಬೇಕು. AGI ಎಂಬ ತಂತ್ರಜ್ಞಾನ ಭವಿಷ್ಯಕ್ಕೊಂದು ಆಕಾರ ಕೊಡುವ ಮಹಾಸಾಧನ. ಅದು ಮಾನವ ಬುದ್ಧಿಮತ್ತೆಗೆ ಸಮಾನವಾಗಿ ಆಲೋಚಿಸಬಲ್ಲ ಶಕ್ತಿಯನ್ನೊಳಗೊಂಡಿರುವುದರಿಂದ, ನಮ್ಮ ಜೀವನದ ಪ್ರತಿಯೊಂದು ಕ್ಷೇತ್ರಕ್ಕೂ ತನ್ನ ಪ್ರಭಾವ ಬೀರುವುದು ನಿಶ್ಚಿತ. ಉದ್ಯೋಗದ ಹೀನಾಯ ಭೀತಿಯ ನಡುವೆ, ಹೊಸ ಅವಕಾಶಗಳ ಬಾಗಿಲು ಕೂಡ ತೆರೆದುಕೊಳ್ಳುತ್ತದೆ.

ಇದನ್ನೂ ಓದಿರಿ: ‘ಪಂಜಾಬ್ 95’ ಸಿನಿಮಾಕ್ಕೆ 120 ಕಡೆ ಕತ್ತರಿ: ಜಸ್ವಂತ್ ಸಿಂಗ್ ಖಲ್ರಾ ಬಗ್ಗೆ ಸರ್ಕಾರ ಹೆದರುತ್ತಿರುವುದೇಕೆ?

ಆದರೆ ಈ ಬದಲಾವಣೆಯ ಧ್ವನಿಯಲ್ಲಿ ಹೆದರದೆ ಅದರ ಜೊತೆಗೆ ನಾವು ಕೂಡ ಬೆಳೆಯಬೇಕಾಗಿದೆ. ವ್ಯಕ್ತಿಗತ ಹಂತದಲ್ಲಿ ಕೌಶಲ್ಯಾಭಿವೃದ್ಧಿ, ಸಮಾಜದ ಮಟ್ಟದಲ್ಲಿ ನೈತಿಕ ಮಾರ್ಗದರ್ಶನ ಹಾಗೂ ನವೋದ್ಯಮದ ಹಾದಿಯಲ್ಲಿ ಹೊಸ ಚಿಂತನೆ ಎಂಬ ಮೂರು ಅಸ್ತ್ರಗಳೊಂದಿಗೆ ನಾವು AGIನ ಭವಿಷ್ಯವನ್ನು ಆತ್ಮವಿಶ್ವಾಸದಿಂದ ಸ್ವಾಗತಿಸಬಹುದು.

AGI ಖಂಡಿತ ನಮ್ಮ ಶತ್ರುವಂತೂ ಅಲ್ಲ. ಅದನ್ನು ಹೇಗೆ ರೂಪಿಸುತ್ತೇವೆ ಎಂಬುದೇ ನಿಜವಾದ ಪ್ರಶ್ನೆ. ಪ್ರಜ್ಞೆಯಿರುವ, ಜವಾಬ್ದಾರಿಯುತ, ಮೌಲ್ಯಪೂರ್ಣ ಬಳಕೆಯ ಮೂಲಕ ನಾವು ಇದನ್ನು ಮಾನವತೆಯ ಹಿತಕ್ಕೆ ಮಾರ್ಗಸೂಚಿ ಮಾಡುವ ಶಕ್ತಿ ಅದರ ನಿರ್ಮಾತೃ ಮಾನವನ ಕೈಯಲ್ಲೇ ಇದೆ. ಇತಿಹಾಸದಲ್ಲಿಯೇ ಈ ಮಹಾಪರಿವರ್ತನೆಗೆ ನಾವು ಸಾಕ್ಷಿಯಾಗುತ್ತಿದ್ದೇವೆ. ಇದನ್ನು ಭಯದಿಂದಲ್ಲ, ಬುದ್ದಿಮತ್ತೆಯಿಂದ ಎದುರಿಸಬೇಕಾಗಿದೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...