ಪ್ರೀಮಿಯಂ ಲೇಖನ | ಇಂಡಿಯಾ vs ಜಪಾನ್‌- ವರ್ಕ್‌ ಕಲ್ಚರ್‌ಗಳು ಮುಖಾಮುಖಿಯಾದಾಗ…

Date:

ಭಾರತದ ಕೆಲಸದ ಸಂಸ್ಕೃತಿ ಅದರ ಬಹುಭಾಷಾ, ಬಹುಸಂಸ್ಕೃತಿಯ ಸಮಾಜದಿಂದ ರೂಪುಗೊಂಡಿದೆ. ವಿಭಿನ್ನ ಹಿನ್ನೆಲೆಯ ಜನರು ಒಟ್ಟಿಗೆ ಕೆಲಸ ಮಾಡುವುದರಿಂದ ಇಲ್ಲಿ ಕೆಲಸ ಮಾಡುವ ಶೈಲಿ ಹೆಚ್ಚು ಜಿಜ್ಞಾಸೆ, ಹೊಂದಾಣಿಕೆ ಮತ್ತು ಪರಿಸ್ಥಿತಿಗೆ ತಕ್ಕಂತೆ ಬದಲಾಗುವ ಸಾಮರ್ಥ್ಯ ಹೊಂದಿದೆ. ಹೊಸ ಸವಾಲುಗಳಿಗೆ ತಕ್ಷಣ ಪ್ರತಿಕ್ರಿಯಿಸುವ ಗುಣ ಭಾರತೀಯ ಉದ್ಯೋಗಿಗಳ ಪ್ರಮುಖ ಬಲವೂ ಆಗಿದೆ.

ಜಾಗತಿಕ ಆರ್ಥಿಕತೆಯಲ್ಲಿ ಪ್ರತಿ ದೇಶದ ಕೆಲಸದ ಸಂಸ್ಕೃತಿ (Work Culture) ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ. ವರ್ಕ್‌ ನೇಚರ್ ಆ ದೇಶದ ಉತ್ಪಾದಕತೆಯ ಜತೆಗೆ ಮಾನವೀಯ ಮೌಲ್ಯಗಳನ್ನೂ ಜಗತ್ತಿನ ಮುಂದೆ ಪ್ರತಿಬಿಂಬಿಸುತ್ತದೆ. ಏಷ್ಯಾದ ಪ್ರಮುಖ ರಾಷ್ಟ್ರಗಳಾದ ಭಾರತ ಮತ್ತು ಜಪಾನ್ ಈ ಕೆಲಸದ ನಿಷ್ಠೆ ಮತ್ತು ಶಿಸ್ತಿನಲ್ಲಿ ಹೆಚ್ಚು ಸುದ್ದಿಯಲ್ಲಿರುತ್ತವೆ. ಕೆಲಸದ ಸಂಸ್ಕೃತಿಯ ವ್ಯಾಖ್ಯಾನದಲ್ಲಿ ಎರಡೂ ದೇಶಗಳು ವಿಭಿನ್ನ ಮಾರ್ಗಗಳನ್ನು ಅನುಸರಿಸುತ್ತಿವೆ. ಜಪಾನ್‌ನಲ್ಲಿ ಕೆಲಸವೇ ಜೀವನದ ಕೇಂದ್ರಬಿಂದುವಾಗಿರುವ ಸಂಸ್ಕೃತಿ ಕಂಡುಬಂದರೆ, ಭಾರತದಲ್ಲಿ ಕೆಲಸ ಹಾಗೂ ವೈಯಕ್ತಿಕ ಬದುಕಿನ ಸಮತೋಲನದ ಹೋರಾಟ ಒಂದೆಳೆ ದಾರದ ಮೇಲೆ ತೂಗಾಡುತ್ತಿದೆ.

ಈ work cultureಗಳು ದೇಶಗಳ ಐತಿಹಾಸಿಕ ಹಿನ್ನೆಲೆ, ಆರ್ಥಿಕ ಬೆಳವಣಿಗೆ, ವೈಯಕ್ತಿಕ ಜೀವನದ ಆದ್ಯತೆ ಮತ್ತು ಉದ್ಯೋಗ ಕ್ಷೇತ್ರದ ನಿರೀಕ್ಷೆಗಳ ಮೇಲೆ ಆಧಾರಿತವಾಗಿವೆ. ಜಪಾನಿ ಕೆಲಸದ ಸಂಸ್ಕೃತಿ ಶಿಸ್ತಿನ ಮತ್ತು ನಿರಂತರ ಸುಧಾರಣೆಯ ಪ್ರತಿರೂಪ ಎನಿಸಿಕೊಂಡರೆ, ಇತ್ತ ಭಾರತೀಯ ಕೆಲಸದ ಸಂಸ್ಕೃತಿ ವೈವಿಧ್ಯ ಮತ್ತು ಹೊಂದಾಣಿಕೆ ಶಕ್ತಿಯಿಂದ ಗುರುತಿಸಿಕೊಳ್ಳುತ್ತದೆ. ಆದರೆ ಭಾರತ, ಜಪಾನ್‌ ಮಾತ್ರವಲ್ಲ ಎಲ್ಲಾ ದೇಶಗಳಲ್ಲಿ ಅತಿಯಾದ ಕೆಲಸದ ಒತ್ತಡ ಉದ್ಯೋಗಿಗಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ. ಭಾರತ ಮತ್ತು ಜಪಾನ್ ದೇಶಗಳನ್ನು ಹೋಲಿಕೆ ಮಾಡಿ ನೋಡುವುದು ತಪ್ಪಾದೀತು. ಎರಡೂ ದೇಶಗಳ ಇತಿಹಾಸ, ಸಂಸ್ಕೃತಿ, ಜೀವನಶೈಲಿ, ಆರ್ಥಿಕ ಸ್ಥಿತಿಗತಿ, ವಹಿವಾಟು ಎಲ್ಲವೂ ವಿಭಿನ್ನ, ಕೆಲವೊಮ್ಮೆ ಅಜಗಜಾಂತರ. ಯಾವುದೇ ದೇಶದ ಆರ್ಥಿಕ ಕೀಲಿಗೆ ದುಡಿಯುವ ವರ್ಗವೇ ಕೀಲೆಣ್ಣೆ. ಅದನ್ನು ವಿಶ್ಲೇಷಣೆಯ ಮೂಲಕ ಅರ್ಥಮಾಡಿಕೊಳ್ಳುವ ಸಣ್ಣ ಪ್ರಯತ್ನವಿದು!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಜಪಾನಿಗಳ ವರ್ಕ್‌ ಕಲ್ಚರ್‌ ಹೇಗಿದೆ?

ಜಪಾನ್‌ನ ಕೆಲಸದ ಸಂಸ್ಕೃತಿ ʼwork firstʼ ಎಂಬ ತತ್ವದ ಮೇಲೆ ನಿಂತಿದೆ. ಕೆಲಸವನ್ನು ಕೇವಲ ಉದ್ಯೋಗವಾಗಿ ಮಾತ್ರವಲ್ಲ, ಜೀವನದ ಪ್ರಮುಖ ಹೊಣೆಗಾರಿಕೆಯಂತೆ ನೋಡಲಾಗುತ್ತದೆ. ಇಲ್ಲಿ “ಗಂಬರು” (Do one’s best, or tenaciously tough it out through difficult tasks- ಒಬ್ಬ ಮನುಷ್ಯನಿಂದ ಎಷ್ಟು ಸಾಧ್ಯವೋ ಅಷ್ಟು ಬೆಸ್ಟ್‌ ತೆಗೆಯುವುದು) ಎಂಬ ಮೌಲ್ಯ ಬಹಳ ಪ್ರಮುಖವಾಗಿದ್ದು, ಶ್ರಮ ಮತ್ತು ಸಮರ್ಪಣೆಯಿಂದ ಕೆಲಸ ಮಾಡುವುದನ್ನು ಉದ್ಯೋಗಿಯ ಗುಣವಾಗಿ ಪರಿಗಣಿಸಲಾಗುತ್ತದೆ. ಕಂಪನಿಯ ಬೆಳವಣಿಗೆಗೆ ತಾವು ಬದ್ಧರಾಗಿರಬೇಕು ಎಂಬ ಭಾವನೆ ಇತರೆ ದೇಶಗಳ ಉದ್ಯೋಗಿಗಳಿಗಿಂತ ಜಪಾನಿಗಳಲ್ಲಿ ಗಟ್ಟಿಯಾಗಿ ನೆಲೆಗೊಂಡಿದೆ.

Japanese WorkCulture

ಜಪಾನ್‌ನಲ್ಲಿ ಸಮಯ ಪಾಲನೆಯನ್ನು ಅತ್ಯಂತ ಕಠಿಣವಾಗಿ ಪಾಲಿಸಲಾಗುತ್ತದೆ. ಸಮಯ ಪಾಲನೆ ಎಂದರೆ ಅವರಿಗೆ ಭಂಗವಿರದ ತಪಸ್ಸು. ಅನೇಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಗಂಟೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ; ಕೆಲಸದ ಫಲಿತಾಂಶಕ್ಕಿಂತಲೂ ಕಚೇರಿಯಲ್ಲಿ ಕಳೆಯುವ ಸಮಯವನ್ನೇ ನಿಷ್ಠೆಯ ಅಳತೆಯಂತೆ ಪರಿಗಣಿಸುವ ಮನೋಭಾವ ಇನ್ನೂ ಇದೆ. ಉದ್ಯೋಗಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಬಂದು, ಶಿಸ್ತಿನಿಂದ ಕೆಲಸ ಮಾಡುವುದನ್ನು ಸಹಜವೆಂದೂ, ಅವರನ್ನು ನಿಷ್ಠಾವಂತರೆಂದೂ ನಿರ್ಧರಿಸಲಾಗುತ್ತದೆ. ತಡವಾಗಿ ಬರುವವರನ್ನು ಅಥವಾ ಕೆಲಸದಲ್ಲಿ ನಿರ್ಲಕ್ಷ್ಯ ತೋರುವವರನ್ನು ನೋಡುವ ದೃಷ್ಟಿ ಬೇರೆಯಾಗುತ್ತದೆ.

ಜಪಾನಿ ಕೆಲಸದ ಸಂಸ್ಕೃತಿಯಲ್ಲಿ Kaizen, Omotenashi ಮತ್ತು Wa ಎಂಬ ಮೌಲ್ಯಗಳು ಪ್ರಮುಖ ಸ್ಥಾನ ಹೊಂದಿವೆ. Kaizen ಅಂದರೆ, ದಿನದಿಂದ ದಿನಕ್ಕೆ ಸಣ್ಣ-ಸಣ್ಣ ಸುಧಾರಣೆಗಳನ್ನು ಮಾಡಿಕೊಳ್ಳುತ್ತಾ ಕೆಲಸದ ಗುಣಮಟ್ಟವನ್ನು ಹೆಚ್ಚಿಸುವುದು. Omotenashi ಅಂದರೆ, ಗ್ರಾಹಕರನ್ನೂ ಸಹೋದ್ಯೋಗಿಗಳನ್ನೂ ಗೌರವದಿಂದ, ಆತ್ಮೀಯವಾಗಿ ಕಾಣುವುದು. Wa ಅಂದರೆ, ತಂಡದ ಒಗ್ಗಟ್ಟು ಮತ್ತು ಸಾಮರಸ್ಯ; ಇಲ್ಲಿ ವೈಯಕ್ತಿಕ ಅಭಿಪ್ರಾಯಕ್ಕಿಂತ ಗುಂಪಿನ ಹಿತಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಈ ಶಿಸ್ತು ಮತ್ತು ಸಮರ್ಪಣೆಗೆ ತಕ್ಕ ಬೆಲೆಯನ್ನೂ ಕೊಡಲಾಗುತ್ತದೆ.

ಜಪಾನ್‌ನಲ್ಲಿ ಕೆಲ ಉದ್ಯೋಗಿಗಳು ವಾರಕ್ಕೆ 60 ರಿಂದ 80 ಗಂಟೆಗಳಿಗೂ ಹೆಚ್ಚು ಕೆಲಸ ಮಾಡುತ್ತಾರೆ. ಇದೇ ಕಾರಣಕ್ಕೆ ಅವರು ʼಕರೋಷಿʼ (ಅತಿಯಾದ ಕೆಲಸದಿಂದ, ಕಾರ್ಮಿಕರಲ್ಲಿ ಉಂಟಾಗುವ ಸಾವು) ಎಂಬ ಗಂಭೀರ ಸಮಸ್ಯೆಯನ್ನೂ ಎದುರಿಸುತ್ತಾರೆ. ಇದರಿಂದ ಕೆಲಸ–ಜೀವನ ಸಮತೋಲನಕ್ಕೆ ದೊಡ್ಡ ಹೊಡೆತ ಬೀಳುತ್ತದೆ. ಇದಲ್ಲದೆ, ಜಪಾನಿ ಕಚೇರಿಗಳಲ್ಲಿ ಹಿರಿಯ-ಕಿರಿಯ (Senpai-Kohai) ಪದ್ಧತಿ ಇದೆ. ಹಿರಿಯರಿಗೆ ಹೆಚ್ಚು ಗೌರವ ನೀಡಲಾಗುತ್ತದೆ ಮತ್ತು ಹೆಚ್ಚಿನ ನಿರ್ಧಾರಗಳನ್ನು ಎಲ್ಲರ ಒಪ್ಪಿಗೆಯೊಂದಿಗೆ ತೆಗೆದುಕೊಳ್ಳಲಾಗುತ್ತದೆ. ಇದು ತಂಡದ ಒಗ್ಗಟ್ಟಿಗೆ ಸಹಾಯ ಮಾಡಿದರೂ, ಕೆಲವೊಮ್ಮೆ ನಿರ್ಧಾರ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಜಪಾನ್‌ನ ಕೆಲಸದ ಸಂಸ್ಕೃತಿ ಶಿಸ್ತಿನಿಂದ ಕಾರ್ಯಕ್ಷಮತೆವರೆಗೆ ಬಲಿಷ್ಠವಾದರೂ, ಮಾನಸಿಕ ಒತ್ತಡ ಮತ್ತು work-life balance ವಿಷಯದಲ್ಲಿ ಸುಧಾರಣೆ ಬೇಡುತ್ತದೆ.

ಭಾರತೀಯ ಕೆಲಸದ ಸಂಸ್ಕೃತಿ ಹೇಗಿದೆ?

ಭಾರತದ ಕೆಲಸದ ಸಂಸ್ಕೃತಿ ಅದರ ಬಹುಭಾಷಾ, ಬಹುಸಂಸ್ಕೃತಿಯ ಸಮಾಜದಿಂದ ರೂಪುಗೊಂಡಿದೆ. ವಿಭಿನ್ನ ಹಿನ್ನೆಲೆಯ ಜನರು ಒಟ್ಟಿಗೆ ಕೆಲಸ ಮಾಡುವುದರಿಂದ ಇಲ್ಲಿ ಕೆಲಸ ಮಾಡುವ ಶೈಲಿ ಹೆಚ್ಚು ಜಿಜ್ಞಾಸೆ, ಹೊಂದಾಣಿಕೆ ಮತ್ತು ಪರಿಸ್ಥಿತಿಗೆ ತಕ್ಕಂತೆ ಬದಲಾಗುವ ಸಾಮರ್ಥ್ಯ ಹೊಂದಿದೆ. ಹೊಸ ಸವಾಲುಗಳಿಗೆ ತಕ್ಷಣ ಪ್ರತಿಕ್ರಿಯಿಸುವ ಗುಣ ಭಾರತೀಯ ಉದ್ಯೋಗಿಗಳ ಪ್ರಮುಖ ಬಲವೂ ಆಗಿದೆ.

image 2026 02 10T122650.043

ಪಾರಂಪರಿಕ ಕಾರ್ಪೊರೇಟ್ ವ್ಯವಸ್ಥೆಗಳಲ್ಲಿ ಭಾರತದಲ್ಲಿ ಇನ್ನೂ hierarchy (ಶ್ರೇಣಿ ವ್ಯವಸ್ಥೆ)ಸ್ಪಷ್ಟವಾಗಿ ಕಾಣುತ್ತದೆ. ಬಾಸ್ ಅಥವಾ ಸರ್ ಸಂಸ್ಕೃತಿ, ಹಿರಿಯರ ಮಾತಿಗೆ ಹೆಚ್ಚಿನ ಮಹತ್ವ ನೀಡುವುದು ಮತ್ತು ಅಧಿಕಾರಕ್ಕೆ ಹೆಚ್ಚು ಒತ್ತು ನೀಡುವುದು ಇಲ್ಲಿ ಸಾಮಾನ್ಯವಾಗಿದೆ. ಆದರೆ ನಗರ ಕೇಂದ್ರಿತ ಸ್ಟಾರ್ಟ್‌ಅಪ್‌ಗಳು ಮತ್ತು ಆಧುನಿಕತೆ ಬೆಳೆದಂತೆ ತಲೆ ಎತ್ತಿದ ಸಂಸ್ಥೆಗಳಲ್ಲಿ ಈ ಪ್ರವೃತ್ತಿ ನಿಧಾನವಾಗಿ ಬದಲಾಗುತ್ತಿದೆ. ಇಲ್ಲಿ flat management structure, ಮುಕ್ತ ಸಂವಹನ ಮತ್ತು ತಂಡದ ಸಹಕಾರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ.

ಕೆಲಸದ ಸಮಯವನ್ನು ಅಧಿಕೃತವಾಗಿ ವಾರಕ್ಕೆ 48 ರಿಂದ 54 ಗಂಟೆಗಳೆಂದು ನಿಗದಿಪಡಿಸಿದರೂ, ವಾಸ್ತವದಲ್ಲಿ ಬಹುತೇಕ ಉದ್ಯೋಗಿಗಳು ಹೆಚ್ಚುವರಿ ಸಮಯ ಕೆಲಸ ಮಾಡಬೇಕಾಗುತ್ತದೆ. ಕಚೇರಿ ಕೆಲಸ ಮುಗಿದ ಮೇಲೂ ಕರೆ, ಮೆಸೇಜ್‌ ಮತ್ತು ಇಮೇಲ್‌ಗಳಿಗೆ ಪ್ರತಿಕ್ರಿಯಿಸಬೇಕಾಗುತ್ತದೆ. ಇನ್ನೊಂದೆಡೆ, ಭಾರತದಲ್ಲಿ ಉದ್ಯೋಗ ಬದಲಾವಣೆ ಮತ್ತು ಬೆಳವಣಿಗೆಗೆ ಹೆಚ್ಚಿನ ಅವಕಾಶಗಳಿವೆ. ಹೊಸ ತಲೆಮಾರಿನ Gen Z ಉದ್ಯೋಗಿಗಳು flexible working hours, remote work ಮತ್ತು ಮುಕ್ತ ಚರ್ಚೆಯಂತಹ ಕಲ್ಪನೆಗಳನ್ನು ಕೆಲಸದ ಸಂಸ್ಕೃತಿಗೆ ತರುತ್ತಿದ್ದಾರೆ. ಇದರ ಪರಿಣಾಮವಾಗಿ ಭಾರತೀಯ work culture ನಿಧಾನವಾಗಿ ಹೆಚ್ಚು ಸ್ವತಂತ್ರ, ಆಧುನಿಕ ಮತ್ತು ಉದ್ಯೋಗಿ ಕೇಂದ್ರಿತ ದಿಕ್ಕಿನಲ್ಲಿ ರೂಪಾಂತರಗೊಳ್ಳುತ್ತಿದೆ.

ಗಹ
ಕೆಲಸದ ಸಂಸ್ಕೃತಿಯಲ್ಲಿ ಜಪಾನ್ vs ಭಾರತ
ಪ್ರಮುಖ ಅಂಶಜಪಾನ್‌ಭಾರತ
Working Hoursವಾಸ್ತವದಲ್ಲಿ ಕೆಲಸದ ಗಂಟೆಗಳು ಹೆಚ್ಚು, ಹೆಚ್ಚುವರಿ ಕೆಲಸ (overtime) ಸಾಮಾನ್ಯಅಧಿಕೃತವಾಗಿ 48–54 ಗಂಟೆಗಳು, ಹೆಚ್ಚುವರಿ ಕೆಲಸ ಸಾಮಾನ್ಯ
Work-Life Balanceಸಮತೋಲನ ಕಷ್ಟಕರ; ಇದನ್ನು ಸುಧಾರಿಸಲು ಸರ್ಕಾರ ಮತ್ತು ಕಂಪನಿಗಳು ಸುಧಾರಣೆಗಳಿಗೆ ಮುಂದಾಗಿವೆಪಾರಂಪರಿಕ
ಕೆಲಸದ ಸಂಸ್ಕೃತಿಯಿಂದ ಸಮತೋಲನ ಸಾಧಿಸುವುದು ಇನ್ನೂ ಸವಾಲಾಗಿದೆ
Hierarchy (ಅಧಿಕಾರದ ರಚನೆ)ಬಹಳ ಗಟ್ಟಿಯಾದ ಹಿರಿಯ–ಕಿರಿಯ (ಸೆಂಪೈ–ಕೊಹೈ) ವ್ಯವಸ್ಥೆಅಧಿಕಾರದ ವ್ಯವಸ್ಥೆ ಇನ್ನೂ ಇದೆ, ಆದರೆ ನಿಧಾನವಾಗಿ ಬದಲಾಗುತ್ತಿದೆ
Process vs Innovationಪ್ರಕ್ರಿಯೆ ಮತ್ತು ನಿಯಮಗಳಿಗೆ ಹೆಚ್ಚಿನ ಒತ್ತು, ಲವಚಿಕತೆ ಕಡಿಮೆಹೊಂದಾಣಿಕೆ ಶಕ್ತಿ ಮತ್ತು ಸೃಜನಾತ್ಮಕ ಪರಿಹಾರಗಳಿಗೆ ಹೆಚ್ಚಿನ ಅವಕಾಶ
Employee welfare  ಅತಿಯಾದ ಕೆಲಸದಿಂದ ಉಂಟಾಗುವ “ಕರೋಷಿ” ಸಮಸ್ಯೆ; ಸುಧಾರಣಾ ಕ್ರಮಗಳು ಜಾರಿಯಲ್ಲಿವೆಕೆಲಸದ ಒತ್ತಡದಿಂದ burnout ಅಪಾಯ; ಜಾಗೃತಿ ಮತ್ತು ಚರ್ಚೆ ಹೆಚ್ಚುತ್ತಿದೆ

ಉದ್ಯೋಗಿಗಳಿಗಾಗುವ ಲಾಭ-ನಷ್ಟ ನೋಡುವುದಾದರೆ

ಜಪಾನ್‌ನ ಕೆಲಸದ ಸಂಸ್ಕೃತಿಯಲ್ಲಿ ಉದ್ಯೋಗಿಗಳಿಗೆ ದೊರಕುವ ಪ್ರಮುಖ ಲಾಭವೆಂದರೆ ಸ್ಥಿರತೆ ಮತ್ತು ಶಿಸ್ತು. ಬಹುತೇಕ ಕಂಪನಿಗಳಲ್ಲಿ ಉದ್ಯೋಗ ಭದ್ರತೆ ಹೆಚ್ಚಿರುವುದರಿಂದ ದೀರ್ಘಕಾಲದ ಕೆಲಸದ ಯೋಜನೆ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಕೆಲಸದ ಕ್ರಮಗಳು ಸ್ಪಷ್ಟವಾಗಿ ದಾಖಲಿತವಾಗಿದ್ದು, ಹಂತ ಹಂತವಾಗಿ ಬೆಳೆಯುವ career path ಇರುವುದರಿಂದ ಉದ್ಯೋಗಿಗಳಿಗೆ ತಮ್ಮ ಭವಿಷ್ಯದ ಬಗ್ಗೆ ನಂಬಿಕೆ ಹೆಚ್ಚಾಗುತ್ತದೆ. ನಿರಂತರ ಸುಧಾರಣೆಯ ತತ್ವದ ಪರಿಣಾಮವಾಗಿ ಕೆಲಸದ ಗುಣಮಟ್ಟ ಉನ್ನತ ಮಟ್ಟದಲ್ಲಿರುತ್ತದೆ ಮತ್ತು ಉದ್ಯೋಗಿಗಳ ವೃತ್ತಿಪರ ಕೌಶಲ್ಯವೂ ಕ್ರಮೇಣ ಅಭಿವೃದ್ಧಿಯಾಗುತ್ತದೆ.

ಆದರೆ ಇದೇ ವ್ಯವಸ್ಥೆಯಲ್ಲಿ ಆಗುವ ನಷ್ಟಗಳನ್ನೂ ಕಡೆಗಣಿಸುವಂತಿಲ್ಲ. ಅತಿಯಾದ ಕೆಲಸದ ಗಂಟೆಗಳು ಉದ್ಯೋಗಿಗಳ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ವೈಯಕ್ತಿಕ ಜೀವನಕ್ಕೆ ಬೇಕಾದ ಸಮಯ ಸೀಮಿತವಾಗುತ್ತದೆ ಮತ್ತು ಕೆಲಸದ ಮೇಲಿನ ಅತಿಯಾದ ಅವಲಂಬನೆ ಕೆಲಸದ ವ್ಯಸನಕ್ಕೆ (work addiction) ಕಾರಣವಾಗುತ್ತದೆ. ಇದರಿಂದ ಒತ್ತಡ, ದಣಿವು ಕೆಲವೊಮ್ಮೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

image 2026 02 10T122817.695

ಭಾರತದ ಕೆಲಸದ ಸಂಸ್ಕೃತಿಯಲ್ಲಿ ಉದ್ಯೋಗಿಗಳಿಗೆ ಲಭ್ಯವಿರುವ ಪ್ರಮುಖ ಲಾಭವೆಂದರೆ ವಿಭಿನ್ನ ಕ್ಷೇತ್ರಗಳಲ್ಲಿ ಅಪಾರ ಅವಕಾಶಗಳು. ಹೊಸ ಆಲೋಚನೆಗಳನ್ನು ಅಳವಡಿಸಿಕೊಳ್ಳುವ ಮತ್ತು ಸೃಜನಾತ್ಮಕವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅವಕಾಶ ಇಲ್ಲಿ ಹೆಚ್ಚಿದೆ. ವಿಶೇಷವಾಗಿ ಸ್ಟಾರ್ಟ್‌ಅಪ್‌ಗಳು ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕೆಲಸದ ಸಮಯ ಮತ್ತು ವಿಧಾನದಲ್ಲಿ ಲವಚಿಕತೆ (Flexibility) ಕಂಡುಬರುತ್ತಿದ್ದು, ಯುವ ಉದ್ಯೋಗಿಗಳಿಗೆ ತಮ್ಮ ಆಸಕ್ತಿಗೆ ತಕ್ಕಂತೆ ಬೆಳೆಯುವ ಅವಕಾಶ ಸಿಗುತ್ತದೆ.

ಜೊತೆಗೆ ನಷ್ಟಗಳೂ ಇದ್ದು, ಉದ್ಯೋಗಿಗಳ ಹಕ್ಕುಗಳ ಅನುಷ್ಠಾನ ಎಲ್ಲೆಡೆ ಸಮಾನವಾಗಿ ಜಾರಿಯಾಗುತ್ತಿಲ್ಲ. ಅನೇಕ ಕಡೆಗಳಲ್ಲಿ ʼಹಸಲ್ ಕಲ್ಚರ್ʼ ಹೆಸರಿನಲ್ಲಿ ಹೆಚ್ಚುವರಿ ಕೆಲಸವನ್ನು ಸಹಜವೆಂದು ಪರಿಗಣಿಸಲಾಗುತ್ತದೆ. ಇದರ ಪರಿಣಾಮವಾಗಿ ಒತ್ತಡ, ದಣಿವು ಮತ್ತು burnout ಸಮಸ್ಯೆಗಳು ಹೆಚ್ಚುತ್ತಿದ್ದು, ಕೆಲಸ-ಜೀವನ ಸಮತೋಲನ ಸಾಧಿಸುವುದು ಹಲವರಿಗೆ ಸವಾಲಾಗುತ್ತಿದೆ.

ಇದನ್ನೂ ಓದಿ: ಪಬ್‌ಜಿ, ಬ್ಲೂ ವೇಲ್, ಕೊರಿಯನ್‌ ಲವ್‌ ಗೇಮ್:‌ ʼಆನ್‌ಲೈನ್‌ʼ ಇಂದ್ರಜಾಲಕ್ಕೆ ಸಿಲುಕೀರಿ ಜೋಕೆ!

ಜಪಾನ್ ಮತ್ತು ಭಾರತದ ಕೆಲಸದ ಸಂಸ್ಕೃತಿಗಳು ತಮ್ಮದೇ ಆದ ಇತಿಹಾಸ, ಸಾಮಾಜಿಕ ಮೌಲ್ಯಗಳು ಮತ್ತು ಆರ್ಥಿಕ ಅಗತ್ಯಗಳಿಂದ ರೂಪುಗೊಂಡಿರುವ ವಿಭಿನ್ನ ವ್ಯವಸ್ಥೆಗಳಾಗಿವೆ. ಜಪಾನ್ ಶಿಸ್ತು, ಸಮರ್ಪಣೆ ಮತ್ತು ನಿರಂತರ ಸುಧಾರಣೆಯ ಮೂಲಕ ಉನ್ನತ ಕಾರ್ಯಕ್ಷಮತೆಯನ್ನು ಸಾಧಿಸಿದರೆ, ಭಾರತ ವೈವಿಧ್ಯ, ಹೊಂದಾಣಿಕೆ ಶಕ್ತಿ ಮತ್ತು ಸೃಜನಶೀಲತೆಯ ಮೂಲಕ ತನ್ನ ಶಕ್ತಿ ಪ್ರದರ್ಶಿಸುತ್ತದೆ. ಆದರೆ ಎರಡೂ ದೇಶಗಳಲ್ಲಿ ಅತಿಯಾದ ಕೆಲಸದ ಒತ್ತಡ, work–life balance ಕೊರತೆ ಮತ್ತು ಉದ್ಯೋಗಿಗಳ ಮಾನಸಿಕ ಆರೋಗ್ಯದ ಪ್ರಶ್ನೆಗಳು ಗಂಭೀರ ಸವಾಲಾಗಿಯೇ ಉಳಿದಿವೆ. ದುಡಿಯುವ ವರ್ಗವೇ ದೇಶದ ನಿಜ ಸಂಪತ್ತು ಎಂಬ ಸತ್ಯವನ್ನು ಮರೆತರೆ ಯಾವುದೇ ದೇಶದ work culture ದೀರ್ಘಕಾಲ ಜೀವಿಸುವುದಿಲ್ಲ. ಉತ್ಪಾದಕತೆ ಮತ್ತು ಲಾಭದ ಜೊತೆಗೆ ಮಾನವೀಯ ಮೌಲ್ಯಗಳು, ಆರೋಗ್ಯಕರ ಕೆಲಸ, ವೈಯಕ್ತಿಕ ಜೀವನಕ್ಕೆ ಮೌಲ್ಯ, ಮತ್ತು ಉದ್ಯೋಗಿಗಳ ಕಲ್ಯಾಣಕ್ಕೆ ಸಮಾನ ಮಹತ್ವ ನೀಡಿದಾಗ ಮಾತ್ರ ಕೆಲಸದ ಸಂಸ್ಕೃತಿ ನಿಜಾರ್ಥದಲ್ಲಿ ಪ್ರಗತಿಶೀಲವಾಗುತ್ತದೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...