ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

Date:

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು ಗೌರವಿಸುವ ಮತ್ತು ಸಮಾನತೆ ನೀಡುವ ನಗರಗಳು ಮತ್ತು ದೇಶಗಳು ಹೆಚ್ಚಿನ ಆರ್ಥಿಕ ಬೆಳವಣಿಗೆಗಳನ್ನು ಕಾಣುತ್ತವೆ. ಜಾಗತಿಕವಾಗಿ ಸಮುದಾಯದ ಗ್ರಾಹಕರ ಖರೀದಿ ಸಾಮರ್ಥ್ಯ (Purchasing Power) ಸುಮಾರು $3.9 ಟ್ರಿಲಿಯನ್ (323.7 ಲಕ್ಷ ಕೋಟಿ ರೂಪಾಯಿ) ಎಂದು ಅಂದಾಜಿಸಲಾಗಿದೆ. ಇದು ಭಾರತದ ಒಟ್ಟು GDPಗಿಂತಲೂ ಹೆಚ್ಚು!

LGBTQA+ (ಲೆಸ್ಬಿಯನ್, ಗೇ, ಬೈಸೆಕ್ಷುವಲ್, ಟ್ರಾನ್ಸ್‌ಜೆಂಡರ್, ಕ್ವೀರ್, ಎಸೆಕ್ಷುವಲ್+) – ಹೀಗೆ ತಮ್ಮ ಲೈಂಗಿಕ ಗುರುತನ್ನು ತೆರೆದಿಡುವುದು ಸದ್ಯ ಸಾಹಸ. ಇವೆಲ್ಲವೂ ಇತ್ತೀಚೆಗೆ ಮೂಡಿಕೊಂಡಿದ್ದು, ಈ ಹಿಂದೆ ಇರಲಿಲ್ಲ ಎಂಬ ಗುಂಪೂ ಇದೆ. ಆದರೆ ಕೆಲ ವರ್ಷಗಳ ಹಿಂದಿನವರೆಗೂ ಲೈಂಗಿಕ ಗುರುತನ್ನು ಬಹಿರಂಗವಾಗಿ ಹೇಳಿಕೊಳ್ಳುವಷ್ಟು ಮುಕ್ತ ವಾತಾವರಣ ಇರಲಿಲ್ಲ. ಅಂತಹ ಧೈರ್ಯವನ್ನು ಈ ಸಮಾಜ ನಮಗೆ ತುಂಬಲಿಲ್ಲ. ಆದರೆ ಅಂದೂ, ಇಂದೂ ಈ ಸಮುದಾಯ ಜೀವಂತವಾಗಿದೆ. ಮುಂದೆಯೂ ಇರುತ್ತದೆ. ಅನಾದಿ ಕಾಲದಿಂದ ಸಮುದಾಯವು ಜಗತ್ತಿಗೆ ಅಗಾಧವಾದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಆದರೆ ಅದನ್ನು ಈ ಸಮಾಜ ಗುರುತಿಸಿಲ್ಲವಷ್ಟೇ.

ಶತಮಾನಗಳಿಂದಲೂ ವಿಜ್ಞಾನ, ಕಲೆ, ರಾಜಕೀಯ ಮತ್ತು ಮಾನವ ಹಕ್ಕುಗಳ ಕ್ಷೇತ್ರದಲ್ಲಿ ಜಾಗತಿಕವಾಗಿ ಸಮುದಾಯದ ಕೊಡುಗೆ ಅಪಾರ. ಸಮಾಜದ ಮುಖ್ಯವಾಹಿನಿಯಿಂದ ದೂರವಿದ್ದರೂ, ತಮ್ಮ ಅದ್ಭುತ ಸಾಧನೆಗಳ ಮೂಲಕ ಇತಿಹಾಸವನ್ನೇ ಬದಲಾಯಿಸಿದ್ದಾರೆ ಈ ಸಮುದಾಯದ ಜನರು. ಈ ಸಾಧನೆಗಳೆಲ್ಲವೂ ಇಂದಿಗೂ ಇತಿಹಾಸದ ಪುಟಗಳಲ್ಲಿ ಮರೆಯಾಗಿದೆ. ಅವುಗಳನ್ನು ಕೆದಕಿ ಹೊರತೆಗೆಯುವ ಪ್ರಯತ್ನವನ್ನು ಮಾಡುವ ಉದಾತ್ತ ಕೆಲಸಕ್ಕೆ ಇತ್ತೀಚೆಗೆ ಕೆಲವು ಸಂಶೋಧಕರು ಕೈಹಾಕಿರುವುದು ಪ್ರಶಂಸನೀಯ. ಇತ್ತೀಚಿನ ಸಂಶೋಧನೆಗಳು ಮತ್ತು ದಾಖಲೆಗಳು LGBTQA+ ಸಮುದಾಯದ ಮಹತ್ವದ ಪಾತ್ರವನ್ನು ಎತ್ತಿ ತೋರಿಸುತ್ತಿವೆ.

ಇದನ್ನು ಓದಿದ್ದೀರಾ? ಪ್ರೀಮಿಯಂ ಲೇಖನ | ಲೈಂಗಿಕ ಗುರುತು ಪಾಶ್ಚಾತ್ಯವಲ್ಲ, ವಾಸ್ತವ; ಇದಕ್ಕೆ ಪುರಾಣಗಳೇ ಸಾಕ್ಷಿ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆಧುನಿಕ ಜಗತ್ತನ್ನು ರೂಪಿಸಿದ ಅನೇಕ ಪ್ರಮುಖ ಆವಿಷ್ಕಾರಗಳ ಹಿಂದೆ LGBTQA+ ಸಮುದಾಯದ ವ್ಯಕ್ತಿಗಳ ಶ್ರಮವೂ ಇದೆ. ಕಂಪ್ಯೂಟರ್ ವಿಜ್ಞಾನದ ಪಿತಾಮಹ ಅಲನ್ ಟ್ಯೂರಿಂಗ್‌ನಿಂದ ಹಿಡಿದು ಸ್ಯಾಲಿ ರೈಡ್‌ವರೆಗೂ ಸಮುದಾಯ ತಮ್ಮ ಲೈಂಗಿಕ ಗುರುತನ್ನು ಮೀರಿ ಸಮಾಜಕ್ಕೆ ಕೊಡುಗೆ ನೀಡಿದೆ. ಆರ್ಥಿಕ ಕ್ಷೇತ್ರದಲ್ಲಿ LGBTQA+ ನೀಡುವ ಕೊಡುಗೆಗಳನ್ನು ‘ಪಿಂಕ್ ಇಕಾನಮಿ’ ಎಂದು ಕರೆಯಲಾಗುತ್ತದೆ. ‘Open For Business’ ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು ಗೌರವಿಸುವ ಮತ್ತು ಸಮಾನತೆ ನೀಡುವ ನಗರಗಳು ಮತ್ತು ದೇಶಗಳು ಹೆಚ್ಚಿನ ಆರ್ಥಿಕ ಬೆಳವಣಿಗೆಗಳನ್ನು ಕಾಣುತ್ತವೆ. ಜಾಗತಿಕವಾಗಿ LGBTQA+ ಗ್ರಾಹಕರ ಖರೀದಿ ಸಾಮರ್ಥ್ಯ (Purchasing Power) ಸುಮಾರು $3.9 ಟ್ರಿಲಿಯನ್ (323.7 ಲಕ್ಷ ಕೋಟಿ ರೂಪಾಯಿ) ಎಂದು ಅಂದಾಜಿಸಲಾಗಿದೆ. ಇದು ಭಾರತದ ಒಟ್ಟು GDPಗಿಂತಲೂ ಹೆಚ್ಚು! ಇನ್ನು ಸಾಹಿತ್ಯ, ಕಲೆ, ಗಾಯನ ಕ್ಷೇತ್ರದಲ್ಲೂ ಸಮುದಾಯವು ತಮ್ಮದೇ ಆದ ಛಾಪು ಮೂಡಿಸಿದೆ.

ಬಿ. ಮಂಜಮ್ಮ ಜೋಗತಿ (Manjamma Jogathi)

ಉತ್ತರ ಕರ್ನಾಟಕದ ವಿಶಿಷ್ಟ ಜಾನಪದ ಕಲೆಯಾದ ಜೋಗತಿ ನೃತ್ಯ ಮತ್ತು ಚೌಡಕಿ ಪದಗಳನ್ನು ದೇಶಾದ್ಯಂತ ಜನಪ್ರಿಯಗೊಳಿಸಿದವರು ಮಂಜಮ್ಮ ಜೋಗತಿ. ಬೀದಿಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಈ ಕಲೆಯನ್ನು ರಾಷ್ಟ್ರೀಯ ವೇದಿಕೆಗಳವರೆಗೆ ಕೊಂಡೊಯ್ದ ಕೀರ್ತಿ ಸಲ್ಲುವುದು ಮಂಜಮ್ಮ ಅವರಿಗೆ. ಲಿಂಗತ್ವ ಅಲ್ಪಸಂಖ್ಯಾತರ ಏಳಿಗೆಗಾಗಿ ಜೋಗತಿ ಪ್ರತಿಷ್ಠಾನ ಎಂಬ ಟ್ರಸ್ಟ್ ಅನ್ನು ಸ್ಥಾಪಿಸಿ, ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಮತ್ತು ಶಿಕ್ಷಣಕ್ಕಾಗಿ ಶ್ರಮಿಸುತ್ತಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿ ನೇಮಕಗೊಂಡ ಮೊದಲ ಲಿಂಗತ್ವ ಸಂಖ್ಯಾತರು ಎಂಬ ಹೆಗ್ಗಳಿಕೆಯೂ ಇವರಿಗೆ ಸಲ್ಲುತ್ತದೆ. ಮಂಜಮ್ಮರ ಜೀವನದ ಹೋರಾಟ ಮತ್ತು ಕಲಾ ಸಾಧನೆಯನ್ನು ಗುರುತಿಸಿ, ಜೀವನಗಾಥೆಯನ್ನು ಕರ್ನಾಟಕದ ಹಲವು ವಿಶ್ವವಿದ್ಯಾಲಯಗಳ ಪಠ್ಯಕ್ರಮದಲ್ಲಿ ಸೇರಿಸಲಾಗಿದೆ. ಭಾರತ ಸರ್ಕಾರ 2021ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೆ, ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ (2010) ನೀಡಿದೆ.

jogathi
ಮಂಜಮ್ಮ ಜೋಗತಿ

ಡಾ. ಅಕ್ಕೈ ಪದ್ಮಶಾಲಿ (Akkai Padmashali)

ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ದಶಕಗಳಿಂದ ಹೋರಾಡುತ್ತಿರುವವರು ಡಾ. ಅಕ್ಕೈ ಪದ್ಮಶಾಲಿ. ಮಕ್ಕಳ, ಮಹಿಳೆಯರ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಧ್ವನಿ ಎತ್ತಿರುವ ಅಕ್ಕೈ ಒಂಡೆಡೆ ಎಂಬ ಮಾನವ ಹಕ್ಕುಗಳ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಗಂಡು ಹೆಣ್ಣು ಹೊರತುಪಡಿಸಿ ಇತರೆ ಲೈಂಗಿಕ ಸಂಪರ್ಕಗಳನ್ನು ‘ಅಸ್ವಾಭಾವಿಕ ಲೈಂಗಿಕ ಅಪರಾಧ’ ಎಂದು ಗುರುತಿಸುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ರ ವಿರುದ್ಧವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಸಲಿಂಗಪ್ರೇಮವನ್ನು ಅಪರಾಧ ಮುಕ್ತಗೊಳಿಸುವ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಕ್ಕೈ ಸಮಾಜಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು 2015ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

akkai 1
ಡಾ. ಅಕ್ಕೈ ಪದ್ಮಶಾಲಿ

ಅಲನ್ ಟ್ಯೂರಿಂಗ್ (Alan Turing)

ಲೈಂಗಿಕ ಗುರುತು ಬಹಿರಂಗಗೊಂಡ ಕುರಿತಾದ ಇತಿಹಾಸವು ಅತ್ಯಂತ ಸ್ಪೂರ್ತಿದಾಯಕ ಮತ್ತು ಅಷ್ಟೇ ದುಃಖಕರವಾದುದ್ದು. ಅಲನ್ ಟ್ಯೂರಿಂಗ್ ಸಲಿಂಗಪ್ರೇಮಿ (Gay). ಅಂದಿನ ಬ್ರಿಟಿಷ್ ಸಮಾಜದಲ್ಲಿ ಗೇ ಆಗಿರುವುದು ಕಾನೂನುಬಾಹಿರವಾಗಿತ್ತು. ಇದು ಅವರ ಜೀವನದ ಮೇಲೆ ಭೀಕರವಾದ ಪರಿಣಾಮ ಬೀರಿದೆ. ಟ್ಯೂರಿಂಗ್ ಲೈಂಗಿಕ ಗುರುತಿನ ಕಾರಣಕ್ಕಾಗಿ ಅಪರಾಧಿ ಎಂದು ಪರಿಗಣಿಸಲಾಗಿತ್ತು. ದಶಕಗಳ ಕಾಲ ಅವರಿಗೆ ಶಿಕ್ಷೆಯನ್ನು ನೀಡಲಾಗಿತ್ತು. ಜೈಲು ಶಿಕ್ಷೆ ಅಥವಾ ಹಾರ್ಮೋನ್ ಚಿಕಿತ್ಸೆ ಪಡೆಯುವ ಆಯ್ಕೆಯನ್ನು ನೀಡಲಾಗಿತ್ತು. ಸಂಶೋಧನೆಯನ್ನು ಮುಂದುವರಿಸುವ ಹಂಬಲದಿಂದ ಟ್ಯೂರಿಂಗ್ ಹಾರ್ಮೋನ್ ಚಿಕಿತ್ಸೆಗೆ ಒಪ್ಪಿಕೊಂಡಿದ್ದರು. ಈ ಚಿಕಿತ್ಸೆ ಅವರ ದೇಹ ಮತ್ತು ಮನಸ್ಸಿನ ಮೇಲೆ ತೀವ್ರ ಪರಿಣಾಮವನ್ನು ಬೀರಿತು. ಆದರೆ ಅಲನ್ ಕೊಡುಗೆಗಳು ಇಂದಿನ ಆಧುನಿಕ ಯುಗಕ್ಕೆ ಬುನಾದಿ ಹಾಕಿವೆ.

alan
ಅಲನ್ ಟ್ಯೂರಿಂಗ್ (Alan Turing)

ಆಧುನಿಕ ಕಂಪ್ಯೂಟರ್ ವಿಜ್ಞಾನದ ಪಿತಾಮಹ ಎಂದು ಕರೆಯಲಾಗುವ ಟ್ಯೂರಿಂಗ್ 1936ರಲ್ಲಿ ಯಾವುದೇ ಗಣಿತದ ಲೆಕ್ಕಾಚಾರಗಳನ್ನು ಮಾಡಬಲ್ಲಂತಹ ಕಾಲ್ಪನಿಕ ಯಂತ್ರದ ಮಾದರಿಯನ್ನು ಪರಿಚಯಿಸಿದ್ದು, ಅದು ಇಂದಿನ ಆಧುನಿಕ ಕಂಪ್ಯೂಟರ್‌ಗಳ ಮೂಲ ತಳಹದಿಯಾಗಿದೆ. ಎರಡನೇ ಮಹಾಯುದ್ಧದ ಸಮಯದಲ್ಲಿ, ಜರ್ಮನ್‌ ಜನರು ಸಂದೇಶಗಳನ್ನು ರಹಸ್ಯವಾಗಿ ಕಳುಹಿಸಲು ಬಳಸುತ್ತಿದ್ದ ‘ಎನಿಗ್ಮಾ’ (Enigma) ಎಂಬ ಸಂಕೀರ್ಣ ಯಂತ್ರದ ಸಂಕೇತಗಳನ್ನು ಕಂಡುಹಿಡಿಯಲು ಟ್ಯೂರಿಂಗ್ ‘ಬಾಂಬೆ’ (Bombe) ಎಂಬ ಯಂತ್ರವನ್ನು ಅಭಿವೃದ್ಧಿಪಡಿಸಿದ್ದರು. ಇದರಿಂದಾಗಿ ಯುದ್ಧ ಕನಿಷ್ಠ ಎರಡು ವರ್ಷಗಳಷ್ಟು ಬೇಗ ಮುಕ್ತಾಯವಾಯಿತು. ಲಕ್ಷಾಂತರ ಜೀವಗಳು ಉಳಿಯಲು ಸಾಧ್ಯವಾಯಿತು ಎನ್ನುತ್ತಾರೆ ಇತಿಹಾಸಕಾರರು.

ಲಕ್ಷ್ಮಿ ನಾರಾಯಣ ತ್ರಿಪಾಠಿ (Laxmi Narayan Tripathi)

ಭಾರತದ ಪ್ರಮುಖ ಟ್ರಾನ್ಸ್‌ಜೆಂಡರ್ ಹಕ್ಕುಗಳ ಕಾರ್ಯಕರ್ತೆ, ಭರತನಾಟ್ಯ ನೃತ್ಯಗಾರ್ತಿ ಮತ್ತು ಕಿನ್ನರ ಅಖಾಡದ ಆಚಾರ್ಯ ಮಹಾಮಂಡಲೇಶ್ವರರಾಗಿರುವವರು ಲಕ್ಷ್ಮಿ ನಾರಾಯಣ ತ್ರಿಪಾಠಿ. 2014ರ ಐತಿಹಾಸಿಕ NALSA vs Union of India ಪ್ರಕರಣದಲ್ಲಿ ಇವರು ಪ್ರಮುಖ ಅರ್ಜಿದಾರರು ತ್ರಿಪಾಠಿ. ಈ ತೀರ್ಪಿನ ಮೂಲಕ ಭಾರತದ ಸರ್ವೋಚ್ಚ ನ್ಯಾಯಾಲಯವು ಲಿಂಗತ್ವ ಅಲ್ಪಸಂಖ್ಯಾತರನ್ನು ಅಧಿಕೃತವಾಗಿ ಗುರುತಿಸಿದೆ. 2008ರಲ್ಲಿ ವಿಶ್ವಸಂಸ್ಥೆಯಲ್ಲಿ ಏಷ್ಯಾ-ಪೆಸಿಫಿಕ್ ವಲಯವನ್ನು ಪ್ರತಿನಿಧಿಸಿದ ಮೊದಲ ಟ್ರಾನ್ಸ್‌ಜೆಂಡರ್ ಎಂಬ ಹೆಗ್ಗಳಿಕೆಗೆ ತ್ರಿಪಾಠಿ ಪಾತ್ರರಾಗಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 2007ರಲ್ಲಿ ‘ಆಸ್ತಿತ್ವ’ (Astitva Trust) ಎಂಬ ಸ್ವಯಂ ಸೇವಾ ಸಂಸ್ಥೆಯನ್ನು ಸ್ಥಾಪಿಸಿದರು. ಇಂಡಿಯನ್ ಆಫ್ ದಿ ಇಯರ್ (2017), ರೈನ್ಬೋ ವಾರಿಯರ್ ಅವಾರ್ಡ್ (Rainbow Warrior Award) ಮತ್ತು ಸಾಮಾಜಿಕ ಸೇವೆಗಾಗಿ ಶ್ರೀ ನಾರಾಯಣ ಗುರು ಪ್ರಶಸ್ತಿ ಪಡೆದಿದ್ದಾರೆ.

Laxmi Narayan Tripathi
ಲಕ್ಷ್ಮಿ ನಾರಾಯಣ ತ್ರಿಪಾಠಿ

ಟಿಮ್ ಕುಕ್ (Tim Cook)

ಆಪಲ್ ಸಿಇಒ ಟಿಮ್ ಕುಕ್ ಅವರು 2014ರ ಅಕ್ಟೋಬರ್‌ನಲ್ಲಿ ಬ್ಲೂಮ್‌ಬರ್ಗ್ ಬಿಸಿನೆಸ್‌ವೀಕ್ ಪತ್ರಿಕೆಯಲ್ಲಿ ಬರೆದ ಲೇಖನದ ಮೂಲಕ ತಾವು ಸಲಿಂಗಪ್ರೇಮಿ ಎಂದು ಘೋಷಿಸಿಕೊಂಡರು. ತಾರತಮ್ಯ ಮತ್ತು ಹಿಂಸೆ ಎದುರಿಸುತ್ತಿರುವ ಯುವಕರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಮತ್ತು LGBTQA+ ಸಮುದಾಯಕ್ಕೆ ಸೇರಿದ್ದರೂ ದೊಡ್ಡ ಸಾಧನೆ ಮಾಡಬಹುದು ಎಂದು ತೋರಿಸಿಕೊಡುವ ನಿಟ್ಟಿನಲ್ಲಿ ಟಿಮ್ ಕುಕ್ ಈ ನಿರ್ಧಾರವನ್ನು ಕೈಗೊಂಡರು. ಕುಕ್ ಅಮೆರಿಕದ ಅನೇಕ ರಾಜ್ಯಗಳಲ್ಲಿ LGBTQA+ ವಿರೋಧಿ ಕಾನೂನುಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ಅವರು LGBTQA+ ಸಮುದಾಯಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ 2015ರಲ್ಲಿ ಹ್ಯೂಮನ್ ರೈಟ್ಸ್ ಕ್ಯಾಂಪೇನ್ (HRC) ವಿಸಿಬಿಲಿಟಿ ಪ್ರಶಸ್ತಿ ಮತ್ತು ರಿಪ್ಪಲ್ ಆಫ್ ಹೋಪ್ ಪ್ರಶಸ್ತಿಗಳನ್ನು ನೀಡಲಾಗಿದೆ.

tim cook
ಆಪಲ್ ಸಿಇಒ ಟಿಮ್ ಕುಕ್

2011ರಲ್ಲಿ ಸ್ಟೀವ್ ಜಾಬ್ಸ್ ನಂತರ ಆಪಲ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಕುಕ್, ಕಂಪನಿಯ ಮಾರುಕಟ್ಟೆ ಮೌಲ್ಯವನ್ನು $348 ಬಿಲಿಯನ್‌ನಿಂದ $3 ಟ್ರಿಲಿಯನ್‌ಗೂ ಅಧಿಕ ಮೊತ್ತಕ್ಕೆ ಏರಿಸಿದ್ದಾರೆ. ಕುಕ್ ನೇತೃತ್ವದಲ್ಲಿ ಆಪಲ್ ವಾಚ್ (Apple Watch), ಏರ್‌ಪಾಡ್ಸ್ (AirPods) ಮತ್ತು ಆಪಲ್ ಸಿಲಿಕಾನ್ ಚಿಪ್‌ಗಳಂತಹ ಉತ್ಪನ್ನಗಳು ಬಿಡುಗಡೆಯಾಗಿದೆ. ಈಗಾಗಲೇ ಮಾನವ ಹಕ್ಕುಗಳ ಸಂಸ್ಥೆಗಳಿಗೆ ಮಿಲಿಯನ್ ಗಟ್ಟಲೆ ಹಣವನ್ನು ದೇಣಿಗೆಯಾಗಿ ನೀಡಿರುವ ಕುಕ್ ತಮ್ಮ ಸಂಪೂರ್ಣ ಆಸ್ತಿಯನ್ನು ದಾನ ಮಾಡುವುದಾಗಿ ಘೋಷಿಸಿದ್ದಾರೆ.

ಲಿನ್ ಕಾನ್ವೇ (Lynn Conway)

ಅಮೆರಿಕದ ಪ್ರಸಿದ್ಧ ಕಂಪ್ಯೂಟರ್ ವಿಜ್ಞಾನಿ, ಎಲೆಕ್ಟ್ರಿಕಲ್ ಎಂಜಿನಿಯರ್ ಮತ್ತು Transgender ಹಕ್ಕುಗಳ ಹೋರಾಟಗಾರ್ತಿ ಲಿನ್ ಕಾನ್ವೇ. ಆಧುನಿಕ ಕಂಪ್ಯೂಟಿಂಗ್ ಮತ್ತು ಮೈಕ್ರೋಚಿಪ್ ವಿನ್ಯಾಸದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಇವರನ್ನು ಮೈಕ್ರೋಚಿಪ್ ವಿನ್ಯಾಸದ ‘ಹಿಡನ್ ಹ್ಯಾಂಡ್’ (Hidden Hand) ಎಂದು ಕರೆಯಲಾಗುತ್ತದೆ. 1968ರಲ್ಲಿ ಲಿನ್ ಕಾನ್ವೇ ಲಿಂಗಪರಿವರ್ತನೆಯ ನಿರ್ಧಾರ ಮಾಡಿದಾಗ IBM ಸಂಸ್ಥೆ ಇವರನ್ನು ಕೆಲಸದಿಂದ ತೆಗೆದುಹಾಕಿತ್ತು. ಅದಾದ ನಂತರ ಕಾನ್ವೇ ತಮ್ಮದೇ ಹೊಸ ಅಸ್ಮಿತೆಯೊಂದಿಗೆ ಯಶಸ್ವಿ ವೃತ್ತಿಜೀವನ ಕಟ್ಟಿಕೊಂಡರು. ಲಿಂಗಪರಿವರ್ತನೆ ಮಾಡಿಕೊಂಡವರ ಹಕ್ಕುಗಳಿಗಾಗಿ ಸತತವಾಗಿ ಹೋರಾಟ ನಡೆಸಿದರು.

Lynn Conway
ಕಂಪ್ಯೂಟರ್ ವಿಜ್ಞಾನಿ ಲಿನ್ ಕಾನ್ವೇ

ಕಾರ್ವರ್ ಮೀಡ್ ಜತೆ ಸೇರಿ ಲಿನ್ ಕಾನ್ವೇ Very Large Scale Integration (VLSI) ಎಂಬ ಹೊಸ ಮೈಕ್ರೋಚಿಪ್ ವಿನ್ಯಾಸ ಪದ್ಧತಿಯನ್ನು ಅಭಿವೃದ್ಧಿಪಡಿಸಿದರು. ಇದು ಸಾವಿರಾರು ಟ್ರಾನ್ಸಿಸ್ಟರ್‌ಗಳನ್ನು ಒಂದೇ ಚಿಪ್‌ನಲ್ಲಿ ಜೋಡಿಸಲು ಸಾಧ್ಯವಾಗುವಂತೆ ಮಾಡಿತು. ಹಾಗೆಯೇ ಇದರಿಂದಾಗಿಯೇ ಇಂದಿನ ಸ್ಮಾರ್ಟ್‌ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ಸಾಧನಗಳು ಅಸ್ತಿತ್ವಕ್ಕೆ ಬಂದಿವೆ. ಇವರ ಸಂಶೋಧನೆಯಿಲ್ಲದೆ ಇಂದಿನ ಸ್ಮಾರ್ಟ್‌ಫೋನ್‌ಗಳು ಸಾಧ್ಯವಿರುತ್ತಿರಲಿಲ್ಲ. ಇವರ ಸಾಧನೆಯನ್ನು ಗುರುತಿಸಿ 2020ರಲ್ಲಿ IBM ಅಧಿಕೃತವಾಗಿ ಕ್ಷಮೆಯಾಚಿಸಿತು.

ಆಸ್ಕರ್ ವೈಲ್ಡ್ (Oscar Wilde)

ಐರಿಶ್ ಮೂಲದ ಖ್ಯಾತ ನಾಟಕಕಾರ, ಕವಿ ಮತ್ತು ಕಾದಂಬರಿಕಾರ ಆಸ್ಕರ್ ವೈಲ್ಡ್. ತಮ್ಮ ಅದ್ಭುತ ಹಾಸ್ಯ ಪ್ರಜ್ಞೆ ಮತ್ತು ಸಾಹಿತ್ಯ ಸಾಧನೆಗಳಿಗಾಗಿ ಜಗತ್ಪ್ರಸಿದ್ಧರು. ವಿಕ್ಟೋರಿಯನ್ ಕಾಲದ ಇಂಗ್ಲೆಂಡ್‌ನಲ್ಲಿ ಸಾಹಿತ್ಯಿಕ ದಿಗ್ಗಜರು. ‘ಸೌಂದರ್ಯ ಪ್ರಜ್ಞೆ’ (Aesthetic Movement) ಚಳವಳಿಯ ಪ್ರಮುಖ ವಕ್ತಾರರು. The Importance of Being Earnest (1895) ಇಂಗ್ಲಿಷ್ ಸಾಹಿತ್ಯದ ಅತ್ಯಂತ ಜನಪ್ರಿಯ ಕಾಮಿಡಿ ನಾಟಕಗಳಲ್ಲಿ ಒಂದಾಗಿದೆ. ಸಲಿಂಗಪ್ರೇಮಿ (ಗೇ) ಎಂಬುದೇ ಅಪರಾಧ ಎಂದು ಪರಿಗಣಿಸಿದ್ದ ಅಂದಿನ ಇಂಗ್ಲೆಂಡ್ ಸರ್ಕಾರವು ಆಸ್ಕರ್ ವೈಲ್ಡ್ ಅವರಿಗೆ 1895ರಲ್ಲಿ ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತು. ತಮ್ಮ ವಿಚಾರಣೆಯ ಸಂದರ್ಭದಲ್ಲಿ ಲಾರ್ಡ್ ಆಲ್ಫ್ರೆಡ್ ಡೌಗ್ಲಾಸ್ ಜತೆಗಿನ ತಮ್ಮ ಪ್ರೀತಿಯನ್ನು ‘ಹೆಸರಿಸಲಾಗದ ಪ್ರೀತಿ’ ಎಂದು ಬಣ್ಣಿಸಿದ್ದರು. ಈ ಸಂಬಂಧ ಅತ್ಯಂತ ಪವಿತ್ರವಾದುದು ಎಂದು ಸಮರ್ಥಿಸಿಕೊಂಡಿದ್ದರು. ಇಂದು ಆಸ್ಕರ್ ಅವರನ್ನು ಸಲಿಂಗಕಾಮ ವಿಮೋಚನಾ ಚಳವಳಿಯ ‘ಹುತಾತ್ಮ’ ಎಂದು ಕರೆಯಲಾಗುತ್ತದೆ. ಬ್ರಿಟಿಷ್ ಸರ್ಕಾರವು 2017ರಲ್ಲಿ ಅವರಿಗೆ ಮರಣೋತ್ತರ ಕ್ಷಮಾದಾನ ನೀಡಿದೆ.

Oscar Wilde
ಆಸ್ಕರ್ ವೈಲ್ಡ್

ಸ್ಯಾಲಿ ರೈಡ್ (Sally Ride)

ಅಮೆರಿಕದ ಬಾಹ್ಯಾಕಾಶ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಸ್ಯಾಲಿ ರೈಡ್ ಒಬ್ಬರಾಗಿದ್ದು, ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಅಮೆರಿಕನ್ ಮಹಿಳೆ ಎಂಬ ಖ್ಯಾತಿ ಪಡೆದಿದ್ದಾರೆ. ಹಾಗೆಯೇ ಅತ್ಯಂತ ಕಿರಿಯ (32 ವರ್ಷ) ಅಮೆರಿಕನ್ ಗಗನಯಾತ್ರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 2012ರಲ್ಲಿ ಸ್ಯಾಲಿ ಮರಣ ನಂತರ ಅವರು LGBTQA+ ಸಮುದಾಯಕ್ಕೆ ಸೇರಿದವರು, 27 ವರ್ಷಗಳಿಂದ ಟ್ಯಾಮ್ ಒ’ಶಾನಸಿ ಎಂಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದರು ಎಂಬುದು ಜಗತ್ತಿಗೆ ತಿಳಿಯಿತು. ಈ ಮೂಲಕ ಸ್ಯಾಲಿ ರೈಡ್ ಬಾಹ್ಯಾಕಾಶಕ್ಕೆ ಹೋದ ವಿಶ್ವದ ಮೊದಲ Lesbian ಮತ್ತು LGBTQA+ ಗಗನಯಾತ್ರಿ ಎಂದು ಗುರುತಿಸಲ್ಪಟ್ಟರು. ಇಂದು ಸ್ಯಾಲಿ ಸಮುದಾಯದ ಪ್ರಮುಖ ಐಕಾನ್ ಆಗಿ ಗುರುತಿಸಿಕೊಂಡಿದ್ದಾರೆ.

Sally Ride
ಸ್ಯಾಲಿ ರೈಡ್

ಬಾಹ್ಯಾಕಾಶ ನೌಕೆಯ ರೋಬೋಟಿಕ್ ಆರ್ಮ್ (Shuttle’s robotic arm) ಅನ್ನು ವಿನ್ಯಾಸಗೊಳಿಸಲು ಸಹಾಯ ಮಾಡಿದ ಸ್ಯಾಲಿ ಒಟ್ಟು 343 ಗಂಟೆಗಳಿಗೂ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ. ನಾಸಾ ತೊರೆದ ಬಳಿಕ ಭೌತಶಾಸ್ತ್ರದ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದರು. ಸ್ಯಾಲಿ ರೈಡ್ ಸೈನ್ಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಹೆಣ್ಣುಮಕ್ಕಳು ವಿಜ್ಞಾನ, ತಂತ್ರಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಪ್ರೇರೇಪಿಸಿದರು.

ಡಾ. ಮನಬಿ ಬಂದೋಪಾಧ್ಯಾಯ (Dr. Manabi Bandyopadhyay)

ಭಾರತದ ಶೈಕ್ಷಣಿಕ ಮತ್ತು LGBTQA+ ಸಮುದಾಯದ ಇತಿಹಾಸದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿ ಡಾ.ಮನಬಿ ಬಂದೋಪಾಧ್ಯಾಯ. ಮನಬಿ 2015ರಲ್ಲಿ ಪಶ್ಚಿಮ ಬಂಗಾಳದ ಕೃಷ್ಣನಗರ ಮಹಿಳಾ ಕಾಲೇಜಿನ ಪ್ರಾಂಶುಪಾಲರಾಗುವ ಮೂಲಕ ಭಾರತದ ಮೊದಲ ಟ್ರಾನ್ಸ್‌ಜೆಂಡರ್ ಕಾಲೇಜು ಪ್ರಾಂಶುಪಾಲರು ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. ಹಾಗೆಯೇ ಪಶ್ಚಿಮ ಬಂಗಾಳದಲ್ಲಿ ಪಿಎಚ್.ಡಿ ಪೂರ್ಣಗೊಳಿಸಿದ ಮೊದಲ ಟ್ರಾನ್ಸ್‌ಜೆಂಡರ್ ಆಗಿದ್ದಾರೆ. 1995ರಲ್ಲಿ ಟ್ರಾನ್ಸ್‌ಜೆಂಡರ್‌ಗಳಿಗಾಗಿಯೇ ಮೀಸಲಾದ ‘ಅಬೋ-ಮಾನಬ್’ (Ob-Manab) ಎಂಬ ನಿಯತಕಾಲಿಕವನ್ನು ಪ್ರಾರಂಭಿಸಿದ್ದಾರೆ. ಶೈಕ್ಷಣಿಕ ರಂಗದಲ್ಲಿ ತಮಗಾದ ಅವಮಾನ ಮತ್ತು ತಾರತಮ್ಯಗಳ ವಿರುದ್ಧ ಹೋರಾಡಿ, ಸಾಧಿಸಿ ಇಡೀ ಸಮುದಾಯಕ್ಕೆ ಸ್ಫೂರ್ತಿಯಾಗಿದ್ದಾರೆ.

Manabi Bandyopadhyay
ಡಾ.ಮನಬಿ ಬಂದೋಪಾಧ್ಯಾಯ

ರಾಚೆಲ್ ಕಾರ್ಸನ್ (Rachel Carson)

ಆಧುನಿಕ ಪರಿಸರ ಚಳುವಳಿಯ ಜನನಿ ಎಂದು ಪ್ರಸಿದ್ಧರಾದ ಅಮೆರಿಕನ್ ಜೀವಶಾಸ್ತ್ರಜ್ಞೆ ಮತ್ತು ಲೇಖಕಿ ರಾಚೆಲ್ ಕಾರ್ಸನ್ (1907–1964) ಅವರು ಲೆಸ್ಬಿಯನ್. ಡೊರೊತಿ ಫ್ರೀಮನ್ ಎಂಬ ಮಹಿಳೆಯೊಂದಿಗೆ 12 ವರ್ಷಗಳ ಕಾಲ ಗಾಢವಾದ ಪ್ರೇಮ ಸಂಬಂಧವನ್ನು ಹೊಂದಿದ್ದವರು ರಾಚೆಲ್. ಆದರೆ ಆ ಕಾಲದಲ್ಲಿ ಸಾಮಾಜಿಕ ಪರಿಸ್ಥಿತಿಯಿಂದಾಗಿ, ರಾಚೆಲ್ ತಮ್ಮ ಸಂಬಂಧವನ್ನು ಬಹಿರಂಗಪಡಿಸಿರಲಿಲ್ಲ. ಇಂದು ಕಾರ್ಸನ್ ಅವರನ್ನು LGBTQA+ ಸಮುದಾಯದ ಐಕಾನ್ ಆಗಿ ನೋಡಲಾಗುತ್ತದೆ. 1962ರಲ್ಲಿ ಪ್ರಕಟವಾದ ಸೈಲೆಂಟ್ ಸ್ಪ್ರಿಂಗ್ (Silent Spring) ಎಂಬ ಅವರ ಕೃತಿಯು ಕೀಟನಾಶಕಗಳ (ವಿಶೇಷವಾಗಿ DDT) ಹಾನಿಕಾರಕ ಪರಿಣಾಮಗಳ ಬಗ್ಗೆ ಜಗತ್ತನ್ನು ಎಚ್ಚರಿಸಿದೆ. ಅದರಿಂದಾಗಿಯೇ ಅಮೆರಿಕದಲ್ಲಿ DDT ನಿಷೇಧಿಸಲಾಗಿದೆ. ಹಾಗೆಯೇ ಅಮೆರಿಕನ್ ಪರಿಸರ ಸಂರಕ್ಷಣಾ ಸಂಸ್ಥೆ (EPA) ಸ್ಥಾಪನೆಗೂ ರಾಚೆಲ್ ಕೃತಿ ನಾಂದಿಯಾಗಿದೆ. ಇನ್ನು ರಾಚೆಲ್ ತಮ್ಮ ‘ದ ಸೀ ಅರೌಂಡ್ ಅಸ್ (The Sea Around Us’ನಂತಹ ಜನಪ್ರಿಯ ಪುಸ್ತಕಗಳ ಮೂಲಕ ಸಮುದ್ರ ಜೀವನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

Rachel Carson
ಲೇಖಕಿ ರಾಚೆಲ್ ಕಾರ್ಸನ್

ಜೇಮ್ಸ್ ಬಾಲ್ಡ್ವಿನ್ (James Baldwin)

ಆಫ್ರಿಕನ್-ಅಮೆರಿಕನ್ ಲೇಖಕ, ಪ್ರಬಂಧಕಾರ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಜೇಮ್ಸ್ ಬಾಲ್ಡ್ವಿನ್, ಅಮೆರಿಕದ ನಾಗರಿಕ ಹಕ್ಕುಗಳ ಚಳವಳಿ ಮತ್ತು ಸಲಿಂಗಪ್ರೇಮಿ ವಿಮೋಚನಾ ಚಳವಳಿಗಳಲ್ಲಿ (Gay Liberation Movement) ಅತ್ಯಂತ ಪ್ರಮುಖ ಧ್ವನಿಯಾಗಿದ್ದರು. ತಮ್ಮ ಲೈಂಗಿಕ ಗುರುತನ್ನು ಎಂದಿಗೂ ಮುಚ್ಚಿಡದ ಜೇಮ್ಸ್ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಧ್ವನಿ ಎತ್ತಿದವರು. 1956ರಲ್ಲಿ ಜೇಮ್ಸ್ ಅವರ ‘ಜಿಯೋವಾನಿಸ್ ರೂಮ್’ ಎಂಬ ಕಾದಂಬರಿ ಪ್ರಕಟವಾಗಿದ್ದು ಇದು ಸಲಿಂಗಪ್ರೇಮದ ವಿಷಯವನ್ನು ಬಹಿರಂಗವಾಗಿ ಚರ್ಚಿಸಿದ ಮೊದಲ ಅಮೆರಿಕದ ಕಾದಂಬರಿಗಳಲ್ಲಿ ಒಂದಾಗಿದೆ. ಈ ಕಾದಂಬರಿಯು 1957ರ ‘ನ್ಯಾಷನಲ್ ಬುಕ್ ಅವಾರ್ಡ್’ ಅಂತಿಮ ಸುತ್ತಿಗೆ ಆಯ್ಕೆಯಾಗಿತ್ತು. ಜೇಮ್ಸ್‌ ವರ್ಣಭೇದ ನೀತಿ ಮತ್ತು ಲೈಂಗಿಕ ದೌರ್ಜನ್ಯದ ವಿರುದ್ಧವೂ ಹೋರಾಡಿದವರು.

James Baldwin
ಜೇಮ್ಸ್ ಬಾಲ್ಡ್ವಿನ್

ಇವರಿಷ್ಟೇ ಅಲ್ಲ ಇನ್ನೂ ಹಲವು ಸಾಧಕರಿದ್ದಾರೆ. ಬೆಂಗಳೂರು ಮೂಲದ ಡಾ. ತ್ರಿನೇತ್ರ ಹಲ್ದಾರ್ ಗುಮ್ಮರಾಜು ಕರ್ನಾಟಕದ ಮೊದಲ ಟ್ರಾನ್ಸ್‌ಜೆಂಡರ್ ವೈದ್ಯೆಯಾಗಿದ್ದಾರೆ. ತಮಿಳುನಾಡು ಮೂಲದ ಸತ್ಯಶ್ರೀ ಶರ್ಮಿಳಾ ಭಾರತದ ಮೊದಲ ಲಿಂಗತ್ವ ಅಲ್ಪಸಂಖ್ಯಾತ ವಕೀಲೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಮಾಜದ ನಿಂದನೆ ಮತ್ತು ತಾರತಮ್ಯದಿಂದಾಗಿ 18ನೇ ವಯಸ್ಸಿನಲ್ಲಿಯೇ ಮನೆಯಿಂದ ಹೊರಬಂದ ಶರ್ಮಿಳಾ ಇಂದು ವಕೀಲರಾಗಿದ್ದಾರೆ. ಇನ್ನು ಪಶ್ಚಿಮ ಬಂಗಾಳದ ಸಾಮಾಜಿಕ ಕಾರ್ಯಕರ್ತೆ ಜೊಯಿತಾ ಮಂಡಲ್ ಮೊದಲ ಲಿಂಗತ್ವ ಅಲ್ಪಸಂಖ್ಯಾತ ನ್ಯಾಯಾಧೀಶೆ ಎನಿಸಿಕೊಂಡಿದ್ದಾರೆ. ಭಾರತದ ವೇಗದ ಓಟಗಾರ್ತಿ ದತ್ತಿ ಚಂದ್ 2019ರಲ್ಲಿ ತಾವು ಸಲಿಂಗ ಸಂಬಂಧ ಹೊಂದಿರುವುದಾಗಿ ಘೋಷಿಸಿಕೊಂಡಿದ್ದು, ಈ ಮೂಲಕ ದೇಶದಲ್ಲಿ ಮೊಟ್ಟಮೊದಲನೆಯದಾಗಿ ಬಹಿರಂಗವಾಗಿ ತಮ್ಮ ಲೈಂಗಿಕ ಗುರುತನ್ನು ಘೋಷಿಸಿಕೊಂಡ ಅಥ್ಲೀಟ್ ಎನಿಸಿಕೊಂಡಿದ್ದಾರೆ.

ಏನೇ ಆದರೂ ಗಂಡು-ಹೆಣ್ಣೆಂಬ ಎರಡಷ್ಟೇ ಲಿಂಗ, ಈ ಎರಡು ಲಿಂಗಗಳ ನಡುವಷ್ಟೇ ಪ್ರೀತಿ, ಪ್ರೇಮ, ಪ್ರಣಯ, ಉಳಿದುದೆಲ್ಲವೂ ಅನೈಸರ್ಗಿಕ ಎಂಬ ಅಪನಂಬಿಕೆಯಿಂದ ಇಂದಿಗೂ ಜಗತ್ತು ದೂರವಾಗಿಲ್ಲ. ಸಾಂಪ್ರಾದಾಯಿಕ ಸಮಾಜದಿಂದ ಆಧುನೀಕರಣದತ್ತ ಮುಖ ಮಾಡಿರುವ ನಾವುಗಳು ವಿಜ್ಞಾನ, ನಗರೀಕರಣ, ಮೂಲಸೌಕರ್ಯ ಅಭಿವೃದ್ಧಿ- ಹೀಗೆ ನಮ್ಮ ಜೀವನಶೈಲಿಯಲ್ಲಿ ಬದಲಾವಣೆಗೆ ಒಗ್ಗಿಕೊಂಡಿದ್ದೇವೆಯೇ ಹೊರತು ನಮ್ಮ ಮನಸ್ಥಿತಿ ಮಾತ್ರ ಪಲ್ಲಟವಾಗಲಾಗದೆ ತಡಕಾಡುತ್ತಿದೆ. ಸದ್ಯ LGBTQA+ ಸಮುದಾಯವನ್ನು ಸಮಾಜ ನೋಡುವ ರೀತಿ ಬದಲಾಗುತ್ತಿದೆಯಾದರೂ, ಇಂದಿಗೂ ಸವಾಲುಗಳು, ತಾರತಮ್ಯಗಳು ಮುಂದುವರೆದಿದೆ. ಅದರಲ್ಲೂ ಗರಿಮೆ-ಹಿರಿಮೆ ವಿಚಾರಕ್ಕೆ ಬಂದಾಗ ನಮ್ಮ ಕಣ್ಣ ಮುಂದೆ ಬರುವುದು ಜಗತ್ತಿಗೆ ಹೆಣ್ಣು, ಗಂಡು ನೀಡಿದ ಕೊಡುಗೆಗಳಷ್ಟೇ. LGBTQA+ ಸಮುದಾಯವೂ ನಮ್ಮ ಸಮಾಜದ ಭಾಗ ಎಂದು ಪರಿಗಣಿಸಿದರಷ್ಟೇ ಸಮುದಾಯ ಜಗತ್ತಿನಲ್ಲಿ ಮೂಡಿಸಿದ ಛಾಪನ್ನು ಗುರುತಿಸಲು ಸಾಧ್ಯವಾಗುವುದು? ನಾವು ನಮ್ಮ ಕಣ್ಣು ತೆರೆದು ಜಗತ್ತನ್ನು ಜತೆಯಾಗಿ ನೋಡಣವಲ್ಲವೇ?

ಲಿಂಗತ್ವ ಅಲ್ಪಸಂಖ್ಯಾತರನ್ನು ಒಳಗೊಂಡ ಈ ಸಮುದಾಯದ ಸಾಧನೆಗಳು ಲಿಂಗ ಅಥವಾ ಲೈಂಗಿಕತೆ ಎಂದಿಗೂ ಸಾಧನೆಗೆ ಅಡ್ಡಿಯಲ್ಲ ಎಂಬುದನ್ನು ಸಾಬೀತುಪಡಿಸಿವೆ. ಆದರೆ ಈ ಸಾಧನೆಗೆ ನಾವು ಮುಕ್ತ ಅವಕಾಶವನ್ನು ನೀಡುವುದು ಮುಖ್ಯ. ಲೈಂಗಿಕ ಗುರುತು ಆಧಾರದಲ್ಲಿಯೇ ಭಿನ್ನವಾದ ವ್ಯಕ್ತಿ ಎಂಬಂತೆ ಕಂಡು ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಬದಲಾಗಿ ನೀವೂ ನಮ್ಮೊಂದಿಗೆ ನಿಲ್ಲಿ. ನಾವು ನೀವು ಸೇರಿ ಸಮಾಜವನ್ನು ಕಟ್ಟಿ ಬೆಳೆಸೋಣ. ರಾಜಕೀಯ, ಸಾಮಾಜಿಕವಾದ ನೈಜ ಸಮಸ್ಯೆಗಳ ವಿರುದ್ಧವಾಗಿ ಕೈಜೋಡಿಸಿ ಹೋರಾಡೋಣ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ | ಗಾಂಧಿ ಹತ್ಯೆಗೆ ನಿಜವಾದ ಕಾರಣವೇ ಬೇರೆ: ‘ಮುಸ್ಲಿಮರ ಪರ’ ಆರೋಪದಾಚೆಗಿನ ಸತ್ಯ ಏನು?

ಗಾಂಧಿಯವರ ಮೇಲೆ ದ್ವೇಷದ ಬೇರುಗಳನ್ನು ಅರಿಯಲು ಅವರ ರಾಜಕೀಯದ ಸ್ವರೂಪವನ್ನು ಅರಿಯಬೇಕು....