ಲಂಡನ್ ಪ್ರೊಫೆಸರ್ ಕಣ್ಣಲ್ಲಿ ಅರಸು ಕಾಲ ಮತ್ತು ಭವಿಷ್ಯದ ಕರ್ನಾಟಕ ರಾಜಕಾರಣ

Date:

ಕಳೆದ ಐವತ್ತು ವರ್ಷಗಳ ಅವಧಿಯಲ್ಲಿ ಕರ್ನಾಟಕದಲ್ಲಾದ ಪ್ರಮುಖ ಬದಲಾವಣೆಗಳು ಯಾವುವು? ಈ ಪ್ರಶ್ನೆಗೆ ಓರ್ವ ವ್ಯಕ್ತಿ ಮಾತ್ರ ನೀಡುವ ಉತ್ತರ ಈ ಲೇಖನದಲ್ಲಿದೆ. ನನ್ನ ಈ ಅಭಿಪ್ರಾಯವನ್ನು ನೀವು ಒಪ್ಪದಿರಬಹುದು. ನಾನು ಗಮನಿಸಿದಂತೆ ಕರ್ನಾಟಕದಲ್ಲಿ ಐವತ್ತು ವರ್ಷಗಳ ಅವಧಿಯಲ್ಲಿ ಪ್ರಮುಖ ಮೂರು ಬದಲಾವಣೆಗಳಾಗಿವೆ, ಅವುಗಳಲ್ಲಿ ಎರಡು ರಾಜಕೀಯ, ಮತ್ತೊಂದು ಸಾಮಾಜಿಕ ಬದಲಾವಣೆ.

1970ರ ಮಧ್ಯದಲ್ಲಿ ಒಂದು ವರ್ಷಗಳ ಕಾಲ ಭಾರತದಲ್ಲಿ ಅಧ್ಯಯನ ಮಾಡಲು ನನಗೆ ವಿದ್ಯಾರ್ಥಿವೇತನ ನೀಡಿ ಅವಕಾಶ ಕಲ್ಪಿಸಲಾಗಿತ್ತು. ಕೊಲ್ಕತ್ತಾ ಮತ್ತು ಬೆಂಗಳೂರು ಪೈಕಿ ಒಂದು ನಗರವನ್ನು ಆಯ್ಕೆ ಮಾಡಬೇಕಾಗಿತ್ತು. ಮೈಸೂರು/ ಕರ್ನಾಟಕದ ಬಗ್ಗೆ ಅತೀ ಕಡಿಮೆ ಮಾಹಿತಿಗಳು ಇದ್ದ ಕಾರಣ ನಾನು ಬೆಂಗಳೂರನ್ನು ಆಯ್ಕೆ ಮಾಡಿಕೊಂಡೆ. ಆ ಸಂದರ್ಭದಲ್ಲಿ ಬೆಂಗಳೂರು ನಗರವಾಗಲಿ, ಅಲ್ಲಿನ ಪ್ರದೇಶದ ಕುರಿತಾಗಲಿ ನನಗೇನೂ ತಿಳಿದಿದ್ದಿಲ್ಲ. ಆದರೆ ದಿನಕಳೆದಂತೆ ಬೆಂಗಳೂರು ನನ್ನ ಕುತೂಹಲವನ್ನು ಕೆರಳಿಸಿತು, ನಾನು ತೆಗೆದುಕೊಂಡ ತೀರ್ಮಾನ ಸರಿ ಎನಿಸಿತು.

ನಾನು ಬೆಂಗಳೂರಿನಲ್ಲಿದ್ದ ಮೊದಲ ವರ್ಷವೇ 1971- ಇಂದಿರಾ ಗಾಂಧಿ ಅವರು ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಕಂಡ ವರ್ಷ. ನಾನು ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಮತ್ತು ರಾಜಕೀಯದ ಬಗ್ಗೆ ಅಧ್ಯಯನ ಮಾಡುತ್ತ, ಅದರಲ್ಲೇ ಸಂಪೂರ್ಣವಾಗಿ ತಲ್ಲೀನನಾದೆ. ಸಮಾಜಶಾಸ್ತ್ರ ಎಂ ಎನ್ ಶ್ರೀನಿವಾಸ್ ಅವರು ಹೇಳಿದ ವಿಷಯಗಳಿಂದ ಭಾರತೀಯ ರಾಜಕೀಯದ ಸಾಮಾಜಿಕ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಲು ತುಂಬ ಸಹಾಯವಾಯಿತು. ಬಳಿಕ ನಾನು ಇಂಗ್ಲೆಂಡ್‌ನಲ್ಲಿ ಕರ್ನಾಟಕದ ಕುರಿತಾಗಿ ಸಂಶೋಧನೆ ಮಾಡಿದೆ. ದೇವರಾಜ ಅರಸು ಅವರು ರಾಜ್ಯದ ರಾಜಕೀಯವನ್ನು ಗಮನಾರ್ಹವಾಗಿ ಬದಲಾಯಿಸಿದ ಕಾಲಘಟ್ಟದಲ್ಲಿ ನಾನು ಕರ್ನಾಟಕದ ರಾಜಕೀಯವನ್ನು ಅಧ್ಯಯನ ಮಾಡಿದೆ. ಇವೆಲ್ಲವೂ ನನ್ನನ್ನು ತುಂಬಾ ಆಕರ್ಷಿಸಿದವು ಹಾಗೂ ಈ ಬೆಳವಣಿಗೆಗಳು ಇಂದಿಗೂ ಅಚ್ಚಳಿಯದಂತೆ ನನ್ನ ಮನಸ್ಸಲ್ಲಿ ಉಳಿದಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನನ್ನ ಪ್ರಕಾರ ಕರ್ನಾಟಕದಲ್ಲಿ ಕಳೆದ ಐವತ್ತು ವರ್ಷಗಳ ಅವಧಿಯಲ್ಲಿ ಮೂರು ಅತಿ ಪ್ರಮುಖ ಬದಲಾವಣೆಗಳಾಗಿವೆ. ಆ ಮೂರು ಬದಲಾವಣೆಗಳು ಏಕೆ ಅತ್ಯಂತ ಪ್ರಮುಖ ಬದಲಾವಣೆಗಳು ಎಂಬುದಕ್ಕೆ ಕಾರಣಗಳನ್ನು ಹೇಳಲು ಪ್ರಯತ್ನಿಸುವೆ.

ಕರ್ನಾಟಕದ ರಾಜಕಾರಣ ಅತ್ಯಂತ ಆಕರ್ಷಕವಾಗಿ ಕಾಣಲು ಒಂದು ಕಾರಣವೆಂದರೆ, 1972 ಮತ್ತು 1980ರ ನಡುವೆ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಈ ಕಾಲದಲ್ಲಿ, ಅವರು ಮೊದಲ ಬಾರಿಗೆ ಹೊಸ ರೀತಿಯ ರಾಜಕೀಯವನ್ನು ರಾಜ್ಯಕ್ಕೆ ಪರಿಚಯಿಸಿದರು. 1972ರಲ್ಲಿ ದೇವರಾಜ ಅರಸು ಅವರು ಅಧಿಕಾರ ಪಡೆಯುವವರೆಗೂ ಕರ್ನಾಟಕದ ರಾಜಕೀಯವು ಲಿಂಗಾಯತರು ಮತ್ತು ಒಕ್ಕಲಿಗರ ನಿಯಂತ್ರಣದಲ್ಲಿತ್ತು. ಆ ಕಾಲಘಟ್ಟದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರು ಗ್ರಾಮೀಣ ಸಮಾಜದಲ್ಲಿಯೂ ತಮ್ಮ ಪ್ರಭಾವವನ್ನು ಹೊಂದಿದ್ದರು (ನಾನು ಇಲ್ಲಿ ವಿವರಿಸಿರುವಂತೆ ಅದು ಕ್ರಮೇಣವಾಗಿ ಬದಲಾಗಿದೆ). ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಸೇರದ ಮೊದಲ ಮುಖ್ಯಮಂತ್ರಿ ಅರಸು. 1972ರಲ್ಲಿ ಪ್ರಬಲ ಜಾತಿಗಳು ಅರಸು ಅವರನ್ನು ಹತ್ತಿಕ್ಕಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದವು. ವೇಳೆ ಚುನಾವಣೆ ಗೆಲ್ಲಲು ಮತ್ತು ಅಧಿಕಾರದಲ್ಲಿ ಉಳಿಯಲು ಅರಸು ಅವರು ಹಿಂದುಳಿದ ಸಮುದಾಯಗಳಾದ ಒಬಿಸಿ, ದಲಿತರು, ಆದಿವಾಸಿಗಳು ಮತ್ತು ಮುಸ್ಲಿಮರ ಬೆಂಬಲವನ್ನು ಪಡೆಯಬೇಕಾಯಿತು. ಅರಸು ಅವರೇ ನನಗೆ ತಿಳಿಸಿದಂತೆ ಅವರು ಕೆಲ ಬಡ ಒಕ್ಕಲಿಗರ ಬೆಂಬಲವನ್ನು ಪಡೆಯಲೂ ಪ್ರಯತ್ನಿಸಿದರು. ಅವರಲ್ಲಿ ಅನೇಕರು ಅರಸು ಅವರಿಗೆ ಬೆಂಬಲವನ್ನು ನೀಡಿದರು.

ಅವರು ಆ ಸಮುದಾಯಗಳ ನಾಯಕರನ್ನು ಸರಕಾರದಲ್ಲಿ ಸೇರಿಸಿಕೊಳ್ಳುವ ಮೂಲಕ, ಆಯಾ ಸಮುದಾಯಗಳನ್ನು ಮತ್ತು ಅವರ ಸಂಘಸಂಸ್ಥೆಗಳನ್ನು ಸಂಘಟಿಸುವ ಮೂಲಕ ಹಾಗೂ ಬಡವರ ಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅದನ್ನು ಮಾಡಿದರು. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ಇಂದಿರಾ ಗಾಂಧಿಯವರ ಬಡವರಿಗಾಗಿ ಮಾಡಿದ ಆಶ್ವಾಸನೆಗಳನ್ನು, ಇತರ ಮುಖ್ಯಮಂತ್ರಿಗಳು ಕಡೆಗಣಿಸುತ್ತಿದ್ದಾಗ, ಅರಸು ಅವರು ಅದನ್ನು ಪೂರ್ಣಗೊಳಿಸುವ ಕೆಲಸ ಮಾಡುತ್ತಿದ್ದರು. ತುರ್ತುಪರಿಸ್ಥಿತಿಯ ಕೆಟ್ಟ ಆಯಾಮಗಳಿಂದಲೂ ಅರಸು ಅವರು ರಾಜ್ಯವನ್ನು ರಕ್ಷಿಸಿದರು. ಹಾಗಾಗಿಯೇ ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಾರ್ಟಿಯು 1977ರ ಲೋಕಸಭೆಯಲ್ಲಿ ಸೋಲುಂಡಾಗ ಕರ್ನಾಟಕ ರಾಜ್ಯದಲ್ಲಿ ಜಯಭೇರಿ ಸಾಧಿಸಿತ್ತು, ಅರಸು ಅವರು ಮರುಆಯ್ಕೆ ಆಗಿದ್ದರು.

ಮುಂದೆ ಓದಿರಿ: ಕನ್ನಡ ನೆಲದಲ್ಲಿ ಧರ್ಮ & ಅಧ್ಯಾತ್ಯ: ನಡೆದ ದಾರಿ ಮರೆತಿದೆಯೇ ಕರ್ನಾಟಕ?

ಅರಸು ಅವರು ಒಗ್ಗೂಡಿಸಿದ್ದ ಹಿಂದುಳಿದ ವರ್ಗಗಳ ಸಂಘಟನಾತ್ಮಕ ಶಕ್ತಿ ಇಂದು ಉಳಿದಿಲ್ಲ. ಹಾಗಂತ ಅದು ಸಂಪೂರ್ಣವಾಗಿ ಅಳಿದು ಹೋಗಿದೆ ಎನ್ನುವಂತೆಯೂ ಇಲ್ಲ. ಅದಕ್ಕೆ ಕಳೆದುಹೋದ ತನ್ನ ಸಂಘಟನಾ ಬಲವನ್ನು ಮರಳಿ ಪಡೆಯಲು ಈತನಕ ಸಾಧ್ಯವಾಗದೆ ಹೋದರೂ ಅದು ಆಗಾಗ ಸ್ವಲ್ಪಮಟ್ಟಿಗೆ ತಲೆದೋರುತ್ತದೆ. ಈಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನಾಯಕತ್ವದಲ್ಲಿ ಅಹಿಂದ ವರ್ಗಗಳೆಲ್ಲ ಆಗಾಗ ತಮ್ಮ ರಾಜಕೀಯ ಶಕ್ತಿಯನ್ನು ಸ್ವಲ್ಪಮಟ್ಟಿಗೆ ತೋರಿಸುತ್ತಿರುವುದು ಇದಕ್ಕೊಂದು ನಿದರ್ಶನ. ಆದ್ದರಿಂದ ಕಳೆದ ಐವತ್ತು ವರ್ಷಗಳಲ್ಲಿ ಸಂಭವಿಸಿದ ಪ್ರಮುಖ ಬದಲಾವಣೆಗಳಲ್ಲಿ ಇದು ಮೊದಲನೆಯದು.

ಹಿಂದುಳಿದವರು ಹೀಗೆ ಒಂದು ಮಟ್ಟಿಗೆ ಸಂಘಟಿತರಾಗಿ ಉಳಿದಿರುವ ಹಿನ್ನೆಲೆಯಲ್ಲಿ ಪ್ರಬಲ ಜಾತಿಗಳೂ ಕರ್ನಾಟಕದಲ್ಲಿ ಈಗ ಹೆಚ್ಚು ರಾಜಕೀಯ ಎಚ್ಚರಿಕೆಯಿಂದ ಪ್ರವರ್ತಿಸುತ್ತಿವೆ. ಪ್ರಮುಖವಾಗಿ ಲಿಂಗಾಯತರು ಮತ್ತು ಒಕ್ಕಲಿಗರು ಅಹಿಂದ ವರ್ಗಗಳಿಗೆ ಪ್ರತಿಸ್ಪರ್ಧಿ ಒಕ್ಕೂಟವನ್ನು ಕಟ್ಟುತ್ತಿದ್ದಾರೆ. ಇವರು ಕೆಲವು ಒ.ಬಿ.ಸಿ. ಗುಂಪುಗಳ ಬೆಂಬಲವನ್ನು ಸೆಳೆಯಲು ಪ್ರಯತ್ನಿಸಿದ್ದು ಮಾತ್ರವಲ್ಲದೆ, ಎಡಗೈ ಗುಂಪಿಗೆ ಬೆಂಬಲ ನೀಡುವ ಮೂಲಕ ದಲಿತರಲ್ಲಿನ ಎಡಗೈ-ಬಲಗೈ ಗುಂಪುಗಳ ನಡುವಿನ ವಿಭಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ. ಬಲಗೈ ಗುಂಪು ಸದಾ ಕಾಂಗ್ರೆಸ್ ಬೆಂಬಲವಾಗಿ ನಿಂತಿದೆ. 1990ರ ದಶಕದಿಂದಲೂ ಅವರು (ಸಾಮಾನ್ಯವಾಗಿ ಮಧ್ಯಮ) ಹಿಂದೂ ರಾಷ್ಟ್ರೀಯತೆ ಮತ್ತು ಬಿಜೆಪಿಯೊಂದಿಗಿನ ಅವರ ಸಂಬಂಧಗಳನ್ನು ಬಲಪಡಿಸಲು ಬಳಸಿಕೊಂಡಿದ್ದಾರೆ.

ಈ ರೀತಿ ಪ್ರಬಲ ಜಾತಿಗಳು ಅಹಿಂದ ವರ್ಗಗಳ ರಾಜಕೀಯಕ್ಕೆ ಪ್ರತಿಸ್ಪರ್ಧಿಯಾಗಿ ತಮ್ಮ ರಾಜಕೀಯವನ್ನು, ಸ್ವಲ್ಪ ಮಟ್ಟಿಗೆ ಅಹಿಂದ ವರ್ಗಗಳ ಬೆಂಬಲವನ್ನೂ ಪಡೆದುಕೊಂಡು, ರೂಪಿಸುತ್ತಿರುವುದು ಕಳೆದ ಐದು ದಶಕಗಳಲ್ಲಿ ಕರ್ನಾಟಕದ ರಾಜಕೀಯವು ಕಂಡಿರುವ ಇನ್ನೊಂದು ಮುಖ್ಯ ಬೆಳವಣಿಗೆ. ಇದರಿಂದಾಗಿ ಕರ್ನಾಟಕದಲ್ಲಿ ವಿವಿಧ ಜಾತಿಗಳು ಎರಡು ರಾಜಕೀಯ ಧ್ರುವಗಳ ಸುತ್ತ ಒಟ್ಟುಗೂಡುವುದನ್ನು ಕಾಣುತ್ತಿದ್ದೇವೆ. ಜಾತ್ಯತೀತ ಜನತಾ ದಳವು ಒಂದು ಸಂಕೀರ್ಣ ಸಂಗತಿಯಾಗಿದೆ.

ಈ ಎರಡನೆಯ ಬಲಾಢ್ಯ ಗುಂಪು ವೀರಶೈವ ಲಿಂಗಾಯತರಾದ ಬಿ.ಎಸ್. ಯಡಿಯೂರಪ್ಪ ಅವರಿಗೆ ನಿರ್ಣಾಯಕ ಬೆಂಬಲ ನೀಡಿತು. ಜತೆಗೆ ಒಕ್ಕಲಿಗರ, ಒಬಿಸಿಗಳ ಮತ್ತು ದಲಿತ ಎಡ ವರ್ಗಗಳ ಬೆಂಬಲವನ್ನು ಕೂಡಾ ಪಡೆಯಿತು. ಮುಸ್ಲಿಮರನ್ನು ರಕ್ಷಿಸುವುದಾಗಿ ಯಡಿಯೂರಪ್ಪ ಆಶ್ವಾಸನೆ ನೀಡಿದ್ದರು ಎಂಬುದನ್ನು ನಾನಿಲ್ಲಿ ಒತ್ತಿ ಹೇಳಲೇಬೇಕು. ಮೃದುಹಿಂದುತ್ವವನ್ನೇ ಮುಂದಿಟ್ಟುಕೊಂಡು ಈ ಗುಂಪನ್ನು ಕಟ್ಟಿ ಬೆಳೆಸಿದವರು ಯಡಿಯೂರಪ್ಪ. ಈ ಎರಡು ರಾಜಕೀಯ ಬಣ ಅಥವಾ ಗುಂಪುಗಳ ದೀರ್ಘವಾದ ಉಳಿವು ಕರ್ನಾಟಕದ ರಾಜಕೀಯದ ಪ್ರಬಲವಾದ ಬೆಳವಣಿಗೆಗೆ ಸಾಕ್ಷಿಯಾಗಿವೆ. 1970ರ ದಶಕದಿಂದ ರಾಜಕೀಯದಲ್ಲಿ ಯಾವುದೇ ತಡೆ, ಬಿರುಕು, ಮೂಲಭೂತ ಬದಲಾವಣೆ ಕೂಡಾ ಆಗಿಲ್ಲ.

ಆದರೆ 2019ರಿಂದ 2023ರವರೆಗೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಟು ಹಿಂದುತ್ವವಾದಿಗಳು ಈ ರಾಜಕೀಯ ಗುಂಪಿನಲ್ಲಿ ಬಿರುಕನ್ನು ಸೃಷ್ಟಿಸುವ, ಪ್ರಚೋದಿಸುವ ಪ್ರಯತ್ನವನ್ನು ಮಾಡಿದರು. ಹಿಂದೂಗಳು ಮತ್ತು ಮುಸ್ಲಿಮರ ನಡುವೆ ವೈರುಧ್ಯ ಸೃಷ್ಟಿಸುವ, ಹಾಗೆಯೇ ಗುಜರಾತ್ ಮತ್ತು ಉತ್ತರ ಪ್ರದೇಶದಂತೆ ಹೊಸ ಮಾದರಿಯ ರಾಜಕೀಯವನ್ನು ಪರಿಚಯಿಸುವ ವಿಷಕಾರಿಯಾದ ವ್ಯವಸ್ಥಿತ ಪ್ರಯತ್ನ ನಡೆಸಿದರು. ಬಿಜೆಪಿ ರಾಷ್ಟ್ರೀಯ ನಾಯಕರ ಬೆಂಬಲದಿಂದ ಹಿಂದುತ್ವ ತೀವ್ರವಾದಿಗಳು ಈ ವ್ಯವಸ್ಥಿತ ಯತ್ನ ಮಾಡಿದ್ದಾರೆ. ಕೋಮುದ್ವೇಷವನ್ನೇ ಕರ್ನಾಟಕದ ರಾಜಕೀಯವನ್ನಾಗಿಸುವುದು ಈ ತೀವ್ರವಾದಿಗಳ ಗುರಿಯಾಗಿತ್ತು. ಇದು ದೀರ್ಘಕಾಲದಿಂದ ಅಸ್ತಿತ್ವದಲ್ಲಿದ್ದ ರಾಜಕೀಯದಲ್ಲಿ ಒಡಕು ಸೃಷ್ಟಿಸಿತು.

ಆದರೆ ಬಿಜೆಪಿಯ ಈ ಪ್ರಯತ್ನ ವಿಫಲವಾಯಿತು. ಕೆಲವು ಪ್ರದೇಶಗಳನ್ನು ಹೊರತುಪಡಿಸಿ ಬಹುತೇಕ ಕಡೆ ಈ ಕೋಮು ಧ್ರುವೀಕರಣವು ಹೆಚ್ಚಿನ ಪ್ರಭಾವ ಬೀರಿಲ್ಲ. ಬಿಜೆಪಿ ಸರ್ಕಾರದ ಅಸಮರ್ಥತೆ ಮತ್ತು ಭ್ರಷ್ಟಾಚಾರವು ಕೋಮುವಾದದ ಜನಪ್ರಿಯತೆಯನ್ನು ಬದಿಗೊತ್ತಿತು. 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಹಿಂದ ಅಜೆಂಡಾ ಹೊಂದಿರುವ ಸಿದ್ದರಾಮಯ್ಯ ಅವರು, ಒಕ್ಕಲಿಗರ ನಡುವೆ ದುಡಿದ ಡಿ.ಕೆ. ಶಿವಕುಮಾರ್ ಅವರ ಪ್ರಮುಖ ಬೆಂಬಲದೊಂದಿಗೆ ಕಾಂಗ್ರೆಸ್ ನೇತೃತ್ವ ವಹಿಸಿದರು. ಕಾಂಗ್ರೆಸ್ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆದು ವಿಜಯಪತಾಕೆ ಹಾರಿಸಿತು. ಈ ಗೆಲುವು 1970ರ ರಾಜಕೀಯವು ಇನ್ನೂ ಜೀವಂತವಾಗಿಯೇ ಉಳಿಯಲಿದೆ ಎಂಬ ಭರವಸೆ ಮೂಡಿಸಿತು.

ಇದನ್ನೂ ಓದಿರಿ: ಅಂಬೇಡ್ಕರರ ಮಹತ್ವದ ಕೃತಿಗಳು ಹೇಳುತ್ತಿರುವುದೇನು?: ಇಲ್ಲಿದೆ ಸಾರಸಂಗ್ರಹ

ಮತದಾರರು ಸೂಕ್ಷ್ಮ ಅಭಿರುಚಿಯ, ದೃಢವಾದ ಮತ್ತು ಅಸಹನೆ ಹೊಂದಿರುವವರಾದ ಕಾರಣ ಕಳೆದ ಐದು ದಶಕಗಳ ಕರ್ನಾಟಕದ ರಾಜಕೀಯವು ಸ್ವಾರಸ್ಯಮಯವಾಗಿಯೇ ಉಳಿದಿದೆ. 1983ರಿಂದ ಈವರೆಗೂ ಕರ್ನಾಟಕದಲ್ಲಿ ಯಾವುದೇ ಸರ್ಕಾರ ಮರು ಆಯ್ಕೆಯಾಗಿಲ್ಲ ಎಂಬುದು ಆಶ್ಚರ್ಯಕರ ಸಂಗತಿ. ಮತದಾರರು ದುರಾಡಳಿತ ನಡೆಸಿದ ಸರ್ಕಾರವನ್ನು ಮಾತ್ರವಲ್ಲ, ಉತ್ತಮ ಆಡಳಿತ ನಡೆಸಿದ ಸರ್ಕಾರವನ್ನೂ ಕಿತ್ತೆಸೆದಿದ್ದಾರೆ. ಉತ್ತರದ ಬಹುಭಾಗದ ರಾಜಕಾರಣಿಗಳಂತೆ ಕರ್ನಾಟಕದ ರಾಜಕಾರಣಿಗಳು ಬೆದರಿಸುವವರಲ್ಲ, ಅಧಿಕಾರಶಾಹಿಗಳ ತೇಜೋವಧೆ ಮಾಡುವವರಲ್ಲ ಮತ್ತು ಅವರನ್ನು ಹತಾಶೆಗೊಳಿಸಿಲ್ಲ. ಆದ್ದರಿಂದಾಗಿ ಕರ್ನಾಟಕದಲ್ಲಿ ಯಾವುದೇ ಸರ್ಕಾರ ಬರಲಿ ಸಾಮಾನ್ಯವಾಗಿ ಉತ್ತರ ಭಾರತದ ಇತರೆ ರಾಜ್ಯಗಳಿಗಿಂತ ಉತ್ತಮ ಆಡಳಿತವನ್ನು ನಡೆಸುತ್ತದೆ. ಆದರೂ ಕಳೆದ 40 ವರ್ಷಗಳಲ್ಲಿ ರಾಜ್ಯದಲ್ಲಿ ಯಾವುದೇ ಸರ್ಕಾರ ಮರು ಆಯ್ಕೆಯಾಗಿಲ್ಲ. ಕಾರಣ ರಾಜ್ಯದ ಮತದಾರರು ಸಂಕೀರ್ಣ ಪ್ರಭಾವಕ್ಕೆ ಒಳಗಾಗುವವರು.

ಕರ್ನಾಟಕದಲ್ಲಿ 50 ವರ್ಷಗಳಲ್ಲಾದ ಮೂರನೇ ಪ್ರಮುಖ ಬದಲಾವಣೆಯನ್ನು ನಾವು ಅರ್ಥಮಾಡಿಕೊಳ್ಳಬೇಕಾದರೆ ರಾಜಕೀಯವನ್ನು ಮೀರಿ ನಮ್ಮ ದೃಷ್ಟಿಕೋನವಿರಬೇಕಾಗುತ್ತದೆ. ನಾವು ಈ ಮೇಲೆ ಚರ್ಚಿಸಿದ ಎರಡು ರಾಜಕೀಯ ಬದಲಾವಣೆಗಿಂತ ಈ ಪರಿವರ್ತನೆ ವಿಭಿನ್ನವಾಗಿದೆ. ಆದರೆ ಇತ್ತೀಚೆಗೆ ಇವೆಲ್ಲವೂ ಒಂದಕ್ಕೊಂದು ಕೊಂಡಿ ಹೊಂದಿರುವಂತೆ ಮೇಲ್ನೋಟಕ್ಕೆ ಗೋಚರಿಸುತ್ತದೆ.

1990ನೇ ದಶಕದ ಮಧ್ಯದಲ್ಲಿ ಭಾರತದ ಗ್ರಾಮೀಣ ಸಮಾಜದ ಬಗ್ಗೆ ಅಧ್ಯಯನ ಮಾಡಿದ ವಿದ್ವಾಂಸರು ಅಸಾಧಾರಣವಾದ ಬೆಳವಣಿಗೆಯನ್ನು ಕಂಡರು. ದಲಿತರು ಮತ್ತು ಕೆಳಜಾತಿಗಳಿಗೆ ಸೇರಿದವರು ಎಂದು ಕರೆಯಲ್ಪಡುವವರು ಜಾತಿ ಶ್ರೇಣೀಕರಣವನ್ನು ಮತ್ತು ಮೇಲ್ಜಾತಿಗಳ ಪ್ರಾಬಲ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸುವ ಘಟನೆಗಳು ಹೆಚ್ಚಾಗಿ ಕಾಣಿಸಿದವು. ಕ್ರಮೇಣ ಈ ಜಾತಿ ಶ್ರೇಣೀಕರಣವನ್ನು ಪ್ರಬಲವಾಗಿ ಮತ್ತು ಬಹಿರಂಗವಾಗಿ ವಿರೋಧಿಸುವ ದಲಿತರ ಸಂಖ್ಯೆ ಹೆಚ್ಚಾಯಿತು. ಇದೊಂದು ಮೂಲಭೂತ ಬದಲಾವಣೆ. ಏಕೆಂದರೆ ಜಾತಿ ಶ್ರೇಣೀಕರಣವು ಹಲವು ತಲೆಮಾರುಗಳಿಂದ ಕೇಂದ್ರ ಅಂಶವಾಗಿದ್ದು, ಸಂಪ್ರದಾಯ ಎಂಬ ಹೆಸರಲ್ಲಿ ಗ್ರಾಮೀಣ ಸಮಾಜವನ್ನು ತಲತಲಾಂತರದಿಂದ ಆಳುತ್ತಿದ್ದುದು ಇದೇ ಅಂಶವಾಗಿತ್ತು.

ಈ ಪರಿವರ್ತನೆಯ ವಿಸ್ತಾರವನ್ನು ಅರಿಯುವ ನಿಟ್ಟಿನಲ್ಲಿ ಸಮಾಜಶಾಸ್ತ್ರಜ್ಞ ಎಂ.ಎನ್. ಶ್ರೀನಿವಾಸ್ ಅವರ ಶಿಷ್ಯನಾದ ನಾನು, ಹೆಚ್ಚು ಜನರು ವಾಸವಿದ್ದ ಗ್ರಾಮೀಣ ಪ್ರದೇಶದಲ್ಲಿ ಈ ಸಾಮಾಜಿಕ ಬದಲಾವಣೆಯ ಬಗ್ಗೆ ಅಧ್ಯಯನ ಮಾಡಲು ಆರಂಭಿಸಿದೆ. ಕರ್ನಾಟಕ ಸೇರಿದಂತೆ ಒಂಬತ್ತು ಭಾರತೀಯ ಪ್ರದೇಶಗಳು ಈ ಬದಲಾವಣೆಯ ಸಂಕೀರ್ಣ ಪರಿಣಾಮವನ್ನು ಅನುಭವಿಸಿವೆ. ಆದರೆ ಸ್ಥಳೀಯ ಮಟ್ಟದ ವಿಚಾರಗಳನ್ನು ನಾವು ಉನ್ನತ ಮಟ್ಟದ ಅಥವಾ ರಾಷ್ಟ್ರ ರಾಜಕೀಯಕ್ಕೆ ನಂಟು ಕಲ್ಪಿಸುವುದು ಅಸಾಧ್ಯವೆಂದು ನಾನು ಕಂಡುಕೊಂಡೆ. ನಾನು ಅಧ್ಯಯನ ಮಾಡಿದ ಎರಡು ರಾಜಕೀಯ ಬದಲಾವಣೆಗಳು ಮತ್ತು ಸಾಮಾಜಿಕ ಬದಲಾವಣೆಯು ನನಗೆ ಸಂಪೂರ್ಣವಾಗಿ ಪ್ರತ್ಯೇಕವಾಗಿಯೇ ಕಂಡಿತು.

ಆದರೆ 2024ರ ಸಾರ್ವತ್ರಿಕ ಚುನಾವಣೆ ವೇಳೆಗೆ ಇವೆಲ್ಲವೂ ಬದಲಾಯಿತು. ಬಿಜೆಪಿಗೆ ಬಹುಮತ ಬಂದರೆ ಸಂವಿಧಾನ ಬದಲಾಗಬಹುದು, ಅದರಿಂದಾಗಿ ಮೀಸಲಾತಿ ರದ್ದಾಗಬಹುದು ಎಂಬ ಆತಂಕ ದಲಿತರು ಮತ್ತು ಇತರೆ ಹಿಂದುಳಿದ ವರ್ಗಗಳ ನಡುವೆ ಮೂಡಿತು. ಬಿಜೆಪಿಗೆ ಬಹುಮತ ಬಂದರೆ ಸಂವಿಧಾನ ಬದಲಾಯಿಸಲಾಗುವುದು ಎಂಬ ಕರ್ನಾಟಕದ ಬಿಜೆಪಿ ನಾಯಕನ ಅವಿವೇಕದ ಹೇಳಿಕೆಯು ದೇಶದಾದ್ಯಂತ ಬಿಜೆಪಿಗೆ ಏಟು ನೀಡಿತು. ಬಿಜೆಪಿ ಅಧಿಕಾರಕ್ಕೇರಿದರೆ ಸಂವಿಧಾನ ಬದಲಾಗಬಹುದು ಎಂಬ ಭೀತಿಗೆ ಒಳಗಾದ ಹಲವು ಮತದಾರರು ಇತರೆ ಪಕ್ಷಗಳನ್ನು ಬೆಂಬಲಿಸಿದರು. ಕರ್ನಾಟಕದಲ್ಲಿ ಇತರೆ ಪಕ್ಷ ಎಂದರೆ ಕಾಂಗ್ರೆಸ್ ಎಂದರ್ಥ. ಬಿಜೆಪಿ ಭಾರತದಲ್ಲಿ ತನ್ನ ಲೋಕಸಭೆ ಚುನಾವಣೆಯಲ್ಲಿ ಬಹುಮತವನ್ನು ಕಳೆದುಕೊಳ್ಳಲು ಇದು ಪ್ರಮುಖ ಕಾರಣ ಎನ್ನಬಹುದು.

ಮುಂದೆ ಓದಿರಿ: AIನಿಂದ AGIವರೆಗೆ: ಮಾನವ ಬುದ್ಧಿವಂತಿಕೆಯ ಹೊಸ ಕ್ರಾಂತಿ; ಏನಾಗಬಹುದು ಭವಿಷ್ಯದ ಬದುಕು?

ದಲಿತರು ಮತ್ತು ಹಿಂದುಳಿದ ವರ್ಗಗಳಲ್ಲಿನ ಸಾಮಾಜಿಕ ಬದಲಾವಣೆ ಬಗ್ಗೆ ಅಧ್ಯಯನ ಮಾಡುವಾಗ ಅವರಲ್ಲಿ ಹೆಚ್ಚುತ್ತಿರುವ ಸಾಮಾಜಿಕ ಜಾಗರೂಕತೆ, ದೃಢತೆ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಅವರ ಕೌಶಲ್ಯದ ಬಗ್ಗೆಯು ಅಧ್ಯಯನ ಮಾಡಿರುವೆ. 2024ರ ಚುನಾವಣೆಗೂ ಮುನ್ನ ಅವೆಲ್ಲವೂ ಸ್ಥಳೀಯ, ಗ್ರಾಮೀಣ ಆಗುಹೋಗುಗಳಿಗೆ ಮಾತ್ರ ಪ್ರಭಾವ ಬೀರುತ್ತಿತ್ತು. ಆದರೆ ಬಿಜೆಪಿ ಗೆದ್ದರೆ ಮೀಸಲಾತಿಗೆ ಅಪಾಯ ಎಂಬ ಆಂತಕವು ರಾಷ್ಟ್ರೀಯ ರಾಜಕಾರಣಕ್ಕೂ ಪ್ರಭಾವ ಬೀರುವಂತೆ ಮಾಡಿತು. ಕರ್ನಾಟಕದಲ್ಲಿ ದಲಿತ, ಎಡ ವರ್ಗದ ಹಲವು ಮಂದಿ ಬಿಜೆಪಿ ಬದಲಾಗಿ ಕಾಂಗ್ರೆಸ್ ಬೆಂಬಲಕ್ಕೆ ನಿಂತರು. ಆಂಧ್ರಪ್ರದೇಶದಲ್ಲಿಯೂ ಇದೇ ರೀತಿಯ ಬೆಳವಣಿಗೆ ನಡೆದಿದೆ. ಆದ್ದರಿಂದ ಈ ಮೂರು ಪ್ರಮುಖ ಬದಲಾವಣೆಗಳು ಪ್ರಸ್ತುತ ಪ್ರತ್ಯೇಕವಾಗಿ ನಿಲ್ಲದು.

ಇಂಗ್ಲೆಂಡ್ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿರುವ ಜೇಮ್ಸ್ ಮೇನರ್ ಅವರು ಐದು ದಶಕಗಳಿಂದ ಕರ್ನಾಟಕದ ಕುರಿತು ಅಧ್ಯಯನ ನಡೆಸುತ್ತಿರುವ ವಿದ್ವಾಂಸ. ದೇವರಾಜ ಅರಸು ಅವರು ಕರ್ನಾಟಕದಲ್ಲಿ ಮಾಡಿದ ರಾಜಕೀಯ ಮತ್ತು ಸಾಮಾಜಿಕ ಪರಿವರ್ತನೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದವರು. ಕರ್ನಾಟಕ ನನ್ನ ಎರಡನೆಯ ತವರೂರು ಎಂದು ಹೇಳುವ ಈ ಅಮೆರಿಕನ್ ರಾಜಕೀಯ ಶಾಸ್ತ್ರಜ್ಞರ ಸಂಶೋಧನಾ ಪ್ರಬಂಧಗಳು ಕರ್ನಾಟಕದ ರಾಜಕೀಯವನ್ನು ಅಕಾಡೆಮಿಕ್ ಆಗಿ ಅರ್ಥ ಮಾಡಿಕೊಳ್ಳಲು ಬಯಸುವರಿಗೆ ಬಹುಮುಖ್ಯ ಆಕರಗಳಾಗಿವೆ.

james
ಜೇಮ್ಸ್ ಮೇನರ್
+ posts

ಇಂಗ್ಲೆಂಡ್ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿರುವ ಜೇಮ್ಸ್ ಮೇನರ್ ಅವರು ಐದು ದಶಕಗಳಿಂದ ಕರ್ನಾಟಕದ ಕುರಿತು ಅಧ್ಯಯನ ನಡೆಸುತ್ತಿರುವ ವಿದ್ವಾಂಸರು. ದೇವರಾಜ ಅರಸು ಅವರು ಕರ್ನಾಟಕದಲ್ಲಿ ಮಾಡಿದ ರಾಜಕೀಯ ಮತ್ತು ಸಾಮಾಜಿಕ ಪರಿವರ್ತನೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದವರು. ಕರ್ನಾಟಕ ನನ್ನ ಎರಡನೆಯ ತವರೂರು ಎಂದು ಹೇಳುವ ಈ ಅಮೆರಿಕನ್ ರಾಜಕೀಯ ಶಾಸ್ತ್ರಜ್ಞರ ಸಂಶೋಧನಾ ಪ್ರಬಂಧಗಳು ಕರ್ನಾಟಕದ ರಾಜಕೀಯವನ್ನು ಅಕಾಡೆಮಿಕ್ ಆಗಿ ಅರ್ಥ ಮಾಡಿಕೊಳ್ಳಲು ಬಯಸುವರಿಗೆ ಬಹುಮುಖ್ಯ ಆಕರಗಳಾಗಿವೆ.

ಪೋಸ್ಟ್ ಹಂಚಿಕೊಳ್ಳಿ:

ಜೇಮ್ಸ್ ಮೇನರ್
ಜೇಮ್ಸ್ ಮೇನರ್
ಇಂಗ್ಲೆಂಡ್ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿರುವ ಜೇಮ್ಸ್ ಮೇನರ್ ಅವರು ಐದು ದಶಕಗಳಿಂದ ಕರ್ನಾಟಕದ ಕುರಿತು ಅಧ್ಯಯನ ನಡೆಸುತ್ತಿರುವ ವಿದ್ವಾಂಸರು. ದೇವರಾಜ ಅರಸು ಅವರು ಕರ್ನಾಟಕದಲ್ಲಿ ಮಾಡಿದ ರಾಜಕೀಯ ಮತ್ತು ಸಾಮಾಜಿಕ ಪರಿವರ್ತನೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದವರು. ಕರ್ನಾಟಕ ನನ್ನ ಎರಡನೆಯ ತವರೂರು ಎಂದು ಹೇಳುವ ಈ ಅಮೆರಿಕನ್ ರಾಜಕೀಯ ಶಾಸ್ತ್ರಜ್ಞರ ಸಂಶೋಧನಾ ಪ್ರಬಂಧಗಳು ಕರ್ನಾಟಕದ ರಾಜಕೀಯವನ್ನು ಅಕಾಡೆಮಿಕ್ ಆಗಿ ಅರ್ಥ ಮಾಡಿಕೊಳ್ಳಲು ಬಯಸುವರಿಗೆ ಬಹುಮುಖ್ಯ ಆಕರಗಳಾಗಿವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...