ಅಚ್ಛೇ ದಿನಗಳ ಅಸಲಿ ಕಥೆ (ಭಾಗ- 2)

Date:

ನಿರುದ್ಯೋಗ ಬಡತನ ಹೆಚ್ಚಿದೆ.. ಹಾಗಿದ್ದರೆ ಬಿಜೆಪಿ ಹೇಳುವ ಅಭಿವೃದ್ಧಿಯ ಅರ್ಥವೇನು?

ಏರಿಕೆಯಾದ ನಿರುದ್ಯೋಗದ ಸ್ಥಿತಿಯು ಯುವಜನಾಂಗವನ್ನು ಕಂಗೆಡಿಸಿದೆ. ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆ ಹಾಗೂ ಭಾಷಣಗಳಲ್ಲಿ ಹತ್ತು ವರ್ಷದಲ್ಲಿ ಒಟ್ಟು 25 ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿತ್ತು.

ಔಪಚಾರಿಕ ವಲಯಗಳ (EPFO ಇತ್ಯಾದಿ) ಸಮೀಕ್ಷೆ ಮೂಲದ ಅಂಕಿಗಳನ್ನು ಬಳಸಿಕೊಂಡು ಸರ್ಕಾರವು ಪ್ರತಿ ವರ್ಷ 1.5 ಕೋಟಿ ಉದ್ಯೋಗಗಳನ್ನು ಒದಗಿಸಿದೆ ಎಂದಿದೆ 2019ರ ಬಿಜೆಪಿಯ ಪ್ರಗತಿ ವರದಿ. ಅಂತೆಯೇ, ಕೇಂದ್ರ ಕಾರ್ಮಿಕ ಸಚಿವರಾದ ಮನ್‌ಸುಖ್ ಮಾಂಡವೀಯ ಅವರು ಹಿಂದಿನ ಯುಪಿಎ ಸರ್ಕಾರದ ಹತ್ತು ವರ್ಷಗಳ ಅವಧಿಯ ಸಾಧನೆಗಿಂತ ಬಿಜೆಪಿಯ ತನ್ನ ಅವಧಿಯಲ್ಲಿ ಹೆಚ್ಚಿಗೆ 36% (17.19ಕೋಟಿ) ಉದ್ಯೋಗಗಳನ್ನು ಸೃಷ್ಟಿಸಿದೆ ಎಂದಿರುವುದನ್ನು ಇತ್ತೀಚೆಗೆ ಅನೇಕ ಮಾಧ್ಯಮಗಳು ಬಿತ್ತರಿಸಿವೆ. ಜೊತೆಗೆ, ನಿರುದ್ಯೋಗ ದರವು 3.2%ಗೆ ಇಳಿಕೆಯಾಗಿದೆ ಎಂದೂ ಸರ್ಕಾರ ಹೇಳಿಕೊಂಡಿದೆ. ಆದರೆ, ಸರ್ಕಾರಿ ಮೂಲದ ಅಂಕಿ ಅಂಶಗಳನ್ನೇ ಬಳಸಿಕೊಂಡು ಹೇಳಿರುವ ಅನೇಕ ಖಾಸಗಿ ವಲಯಗಳ ಅಂಕಿ ಅಂಶಗಳು ಇದಕ್ಕೆ ವ್ಯತಿರಿಕ್ತವಾಗಿವೆ.

ರಾಷ್ಟೀಯ ಸ್ಯಾಂಪಲ್ ಸರ್ವೆ ಕಚೇರಿಯು (NSSO) 2017-18ರಲ್ಲಿ ನಡೆಸಿದ ನಿರುದ್ಯೋಗ ಸಮೀಕ್ಷೆಯ ವರದಿಯನ್ನು ಸರ್ಕಾರವು ಬಿಡುಗಡೆ ಮಾಡುವುದಿಲ್ಲ. ವರದಿಯನ್ನು ಪರಿಶೀಲಿಸಿ ಅನುಮೋದನೆ ನೀಡಿದ್ದ ಅನುಮೋದನಾ ಸಮಿತಿಯ ಇಬ್ಬರು ಸದಸ್ಯರು ಈ ಕಾರಣದಿಂದ ರಾಜೀನಾಮೆ ನೀಡುತ್ತಾರೆ. ಈ ನಡುವೆ ಈ ವರದಿಯು ಸೋರಿಕೆಯಾಗಿ, 45 ವರ್ಷಗಳಲ್ಲಿ ಅತಿಹೆಚ್ಚು ಉದ್ಯೋಗಗಳು ಕಡಿತವಾಗಿರುವುದನ್ನು ಬಹಿರಂಗಗೊಳಿಸುತ್ತದೆ. ಭಾರತದ 11 ರಾಜ್ಯಗಳಲ್ಲಿ (ತನ್ನ ಮಾದರಿಗೆ ಹೆಸರಾಗಿದ್ದ ಗುಜರಾತ್ ಕೂಡ ಸೇರಿದಂತೆ) 2017-18ರಲ್ಲಿ ರಾಷ್ಟ್ರೀಯ ಸರಾಸರಿಗಿಂತ ನಿರುದ್ಯೋಗ ದರಗಳು ಒಟ್ಟಾರೆ ಶೇಕಡಾ 6.1ರಷ್ಟು ಏರಿದ್ದು, ಇದು 2011-12ರಲ್ಲಿದ್ದ ಶೇಕಡಾ 2.2ಕ್ಕಿಂತ ಅತಿ ಹೆಚ್ಚಿರುತ್ತದೆ. ಸರ್ಕಾರವು ಬಿಡುಗಡೆ ಮಾಡದ ಈ ವರದಿಯ ಕಥೆಯನ್ನು ‘ಬಿಸಿನೆಸ್ ಸ್ಯಾಂಡರ್ಡ್’ ಬಹಿರಂಗ ಮಾಡಿರುವುದಾಗಿ 13, ಎಪ್ರಿಲ್ 2019 ರಂದು ‘ದಿ ಎಕನಾಮಿಕ್ ಟೈಮ್ಸ್’ ವರದಿ ಮಾಡುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1 27
ನಿರುದ್ಯೋಗ ಹೆಚ್ಚಳ ಸೂಚಿಸುವ ವರದಿ

ಇದನ್ನೂ ಓದಿರಿ: ಅಚ್ಛೇ ದಿನಗಳ ಅಸಲಿ ಕಥೆ (ಭಾಗ-1)

108 ಆರ್ಥಿಕ ತಜ್ಞರು ಮತ್ತು ಸಾಮಾಜಿಕ ವಿಜ್ಞಾನಿಗಳು ಜೊತೆಯಾಗಿ ಬಿಜೆಪಿ ಸರ್ಕಾರವು ತನಗೆ ಅನಾನುಕೂಲವಾದ ಅಂಕಿಅಂಶಗಳನ್ನು ತಡೆಯುವ ಅಥವಾ ಪರಿಷ್ಕರಿಸುವ ಪರಿಪಾಠವನ್ನು ಮಾರ್ಚ್ 2019ರಲ್ಲಿ ಖಂಡಿಸುತ್ತಾರೆ.

‘ಫೋರ್ಬ್ಸ್‌ ಇಂಡಿಯಾ’ವು ‘ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ’ಯ (CMIE), ಅಂಕಿಗಳನ್ನು ಉಲ್ಲೇಖಿಸುತ್ತಾ, ಜುಲೈ 2023ರಲ್ಲಿ ಭಾರತದ ಒಟ್ಟಾರೆ ನಿರುದ್ಯೋಗ ದರವು 7.95% ಇದ್ದು, ಅದು ಅತ್ಯಂತ ಕಾಳಜಿಯ ವಿಷಯವಾಗಿ ಉಳಿದಿದೆ ಎಂದು ವರದಿ ಮಾಡಿದೆ.

ಸರ್ಕಾರದ ಅತಿ ಮುಖ್ಯ ಮಾಹಿತಿ ಸಂಸ್ಥೆ NSSO, ಕುಟುಂಬಗಳ ಮೂಲಕ ಅಂದರೆ ಔಪಚಾರಿಕ ಮತ್ತು ಅನೌಪಚಾರಿಕ ಈ ಎರಡರ ಪೂರೈಕೆ (ಸಪ್ಲೈ) ಮೂಲದಿಂದ ಸಮೀಕ್ಷೆ ಮಾಡುತ್ತದೆ. ಖಾಸಗಿ ಸಂಸ್ಥೆ CMIEಯೂ ಅದೇ ವಿಧಾನ ಬಳಸಿ ಸಮೀಕ್ಷೆ ನಡೆಸುತ್ತದೆ. ಉದ್ಯೋಗಗಳು ಔಪಚಾರಿಕ ವಲಯದಲ್ಲಿ ಇರುವ/ಇಲ್ಲದಿರುವ ಮತ್ತು ಅನೌಪಚಾರಿಕ ವಲಯದಲ್ಲಿ ಅಡಚಣೆ ಉಂಟಾಗಿದ್ದರೆ, ಈ ವಿಧಾನದ ಮೂಲಕ ಸಂಗ್ರಹಿಸಲಾದ ದತ್ತಾಂಶವು ಕಡಿಮೆ ಉದ್ಯೋಗಗಳನ್ನು ತೋರಿಸುವ ಸಾಧ್ಯತೆ ಇರಬಹುದು. ಅದರಂತೆಯೇ, ಸರ್ಕಾರವು ಹೇಳಿರುವ ಪ್ರತಿ ವರ್ಷದ ಸಾಧನೆ 1.5 ಕೋಟಿ ಉದ್ಯೋಗಗಳನ್ನು ಗುರುತಿಸಲು ಬಳಸಿರುವ ಔಪಚಾರಿಕ ವಲಯದ ಬೇಡಿಕೆ ಮೂಲದ ವಿಧಾನದಲ್ಲಿಯೂ ನಿಖರ ಮಾಹಿತಿ ಸಿಗದೆ, ಅಂಕಿ ಅಂಶಗಳು ಜಿಗಿತ ಹೊಂದಬಹುದು ಎನ್ನಲಾಗಿದೆ. ಉದಾಹರಣೆಗೆ, ಇಪ್ಪತ್ತು ವರ್ಷದಿಂದಲೂ 19 ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಯು 20 ಸಿಬ್ಬಂದಿಗಳಾಗುವ ತನಕ EPFOನಲ್ಲಿ ನೋಂದಣಿ ಆಗಬೇಕಾಗಿಲ್ಲದ ಕಾರಣ ಅದರ 19 ಸಿಬ್ಬಂದಿಗಳ ದಾಖಲೆ ಮಾಡಿರುವುದಿಲ್ಲ. ಆದರೆ, ಅದು 2019ರಲ್ಲಿ ಒಂದು ಹೊಸ ಸಿಬ್ಬಂದಿ ನೇಮಕ ಮಾಡಿಕೊಂಡಾಗ EPFOನಲ್ಲಿ ನೋಂದಣಿಯಾಗಿ ತನ್ನ ಸಿಬ್ಬಂದಿಯನ್ನು 20 ಎಂದು ಅನೇಕ ವರ್ಷಗಳ ಹಿಂದಿನ ಸಿಬ್ಬಂದಿಯನ್ನೂ ಸೇರಿಸಿ ತೋರಿಸುತ್ತದೆ. ಆಗ, 2019ರಲ್ಲಿ ಇರುವ ಸರ್ಕಾರವು ತನ್ನ ಮಾಹಿತಿಗಾಗಿ EPFO ಕಾರ್ಮಿಕರ ಪೂಲ್‌ನಿಂದ 20 ಕಾರ್ಮಿಕರನ್ನು ಆ ವರ್ಷದ ಮಾಹಿತಿಗೆ ಸೇರಿಕೆ ಮಾಡಿಕೊಳ್ಳುವ ಸಂಭವವಿರುತ್ತದೆ ಎಂದು ‘ದಿ ಪ್ರಿಂಟ್’  ವರದಿ ಮಾಡಿದೆ.

ಇದಲ್ಲದೆ, ಬೇಡಿಕೆ ಕಡೆಯಿಂದ ನಡೆಸುವ ಈ ಸಮೀಕ್ಷೆಗಳು ಸಾಮಾನ್ಯವಾಗಿ 10ಕ್ಕೂ ಹೆಚ್ಚು ಕೆಲಸಗಾರರಿರುವ ಸಂಸ್ಥೆಯನ್ನು ಮಾತ್ರ ಪರಿಗಣಿಸುತ್ತದೆ. ಆದರೆ ಭಾರತದಲ್ಲಿ 98% ಉದ್ಯಮಗಳು ಸ್ವಯಂ ಉದ್ಯೋಗಿ ಅಥವಾ ಸಣ್ಣ ಅನೌಪಚಾರಿಕವಾದ ಉದ್ಯೋಗಗಳು 10ಕ್ಕಿಂತ ಕಡಿಮೆ ಜನರನ್ನು ಹೊಂದಿದೆ ಎನ್ನುತ್ತದೆ ಮೇಲಿನ ವರದಿಯು. ಅಂದರೆ ಈ 98% ವಲಯಗಳಲ್ಲಿ ಕೆಲಸ ಕಡಿಮೆ ಅಥವಾ ಹೆಚ್ಚಾಗಿರುವುದು ಲೆಕ್ಕಕ್ಕೆ ಸಿಗುವುದಿಲ್ಲ ಎಂದಾಯಿತು.

ಇದನ್ನೂ ಓದಿರಿ: ಐದು ದಶಕಗಳ ಕರ್ನಾಟಕ ರಾಜಕಾರಣ: ಗಳಿಸಿದ್ದನ್ನು ಕಳೆದುಕೊಂಡ ಕಾಲ!

ಸರ್ಕಾರ ಹೇಳಿಕೊಂಡಂತೆ 3.2% ನಿರುದ್ಯೋಗ ತಲುಪಿರುವ ಕುರಿತು ಆಕಾಶ್ ಬ್ಯಾನರ್ಜಿಯವರು ತಮ್ಮ ದೇಶ್‌ಭಕ್ತ್ ಯೂಟ್ಯೂಬ್ ಚಾನಲ್‌ನಲ್ಲಿ ಹೇಳಿರುವ ಸಾರಂಶ ಇದಾಗಿದೆ: ‘ಕೆಲಸಗಳ ಹೆಚ್ಚಳ ಫ್ಯಾಕ್ಟರಿ, ಖಾಸಗಿ ಅಥವಾ ಸರ್ಕಾರಿ ವಲಯಗಳಲ್ಲಿ ಆಗಿರದೆ, ಕೃಷಿ ಕ್ಷೇತ್ರದಲ್ಲಿ ಆಗಿರುವುದಾಗಿದೆ. ಯುವಜನರು ನಗರಗಳಲ್ಲಿ ಕೆಲಸವಿಲ್ಲದೆ, ಗ್ರಾಮಗಳಿಗೆ ಹಿಂದಿರುಗಿ ತಮ್ಮ ಹೊಲದಲ್ಲಿಯೇ ಕೆಲಸ ಮಾಡುತ್ತಿರುವ ಕಾರಣ ಕೃಷಿ ಆದಾಯವೇನೂ ಹೆಚ್ಚಾಗಿಲ್ಲ. 2004ರಿಂದ 2017ರತನಕ ಹೆಚ್ಚು ಜನರು ನಗರಕ್ಕೆ ವಲಸೆ ಬಂದ ಕಾರಣ, ಆಗ 66 ಮಿಲಿಯನ್ ಕೃಷಿ ಉದ್ಯೋಗಗಳು ಕಡಿಮೆಯಾಗಿತ್ತು. ಆದರೆ, 2017-2024ರಲ್ಲಿ ಈ ದಿಸೆ ಬದಲಾಗಿ ಕೃಷಿಯಲ್ಲಿ 68 ಮಿಲಿಯನ್ ಉದ್ಯೋಗಗಳು ಹೆಚ್ಚಿದ್ದು, ಹಿಂದುಳಿದ ಔದ್ಯೋಗೀಕರಣ ಮತ್ತು  ಮೇಕ್ ಇನ್ ಇಂಡಿಯಾ ಯೋಜನೆಯ ಸೋಲನ್ನು ತೋರಿಸುತ್ತದೆ. CMIE ಪ್ರಕಾರ, ಕೃಷಿ ಕುಟುಂಬಗಳಲ್ಲಿ ಆದಾಯವಿಲ್ಲದೆ ದುಡಿಯುತ್ತಿರುವ ಜನರ ಲೆಕ್ಕವನ್ನು ಬಿಟ್ಟರೆ, ದೇಶದ ನಿರುದ್ಯೋಗ ದರವು ಇನ್ನೂ 8% ಇದೆ’ ಎಂದಿದ್ದಾರೆ.

ಮಾರ್ಚ್ 2023ಕ್ಕೆ ಸರ್ಕಾರದ ನೌಕರಿಗಳು 9,64,359 (ಸುಮಾರು 10 ಲಕ್ಷ) ಭರ್ತಿಯಾಗದೆ ಖಾಲಿ ಇರುವುದಾಗಿ ಜುಲೈ 2023ರ ಪಾರ್ಲಿಮೆಂಟ್ ಅಧಿವೇಶನದಲ್ಲಿ ಸರ್ಕಾರವು ತಿಳಿಸಿರುವುದಾಗಿಯೂ ಮತ್ತು ಖಾಸಗಿ ನೇಮಕಾತಿ ಸಂಸ್ಥೆ ‘ಫೌಂಡ್ ಇಟ್’ ಪ್ರಕಾರ 18% ನೌಕರಿಗಳು ಐಟಿ ವಲಯದಲ್ಲಿ ಕಡಿಮೆಯಾಗಿದೆ ಎಂದೂ, 2022ರಲ್ಲಿ ಭಾರತದ ಯುವ ನಿರುದ್ಯೋಗಿಗಳು ಬಾಂಗ್ಲಾದೇಶ, ಭೂತಾನ್ ಹಾಗೂ ಪಾಕಿಸ್ತಾನಗಳಿಗಿಂತ ಅತಿ ಹೆಚ್ಚಿರುವುದಾಗಿ (23.22%) ವರ್ಲ್ಡ್ ಬ್ಯಾಂಕ್ ವರದಿ ತಿಳಿಸಿದೆಯೆಂದು 21, ಮೇ 2024ರಂದು ‘ದಿ ವೈರ್’ ಪತ್ರಿಕೆ ವರದಿ ಮಾಡಿದೆ.

2 20

2004ರಿಂದ 2014ರಲ್ಲಿನ UPA ಸರ್ಕಾರದಲ್ಲಿ GDP ಹೆಚ್ಚು ಏರಿಕೆ ವೇಗವನ್ನು ಪಡೆದುಕೊಂಡು 8% ತಲುಪಿ ಆರ್ಥಿಕ ವಹಿವಾಟು ಹೆಚ್ಚಾದರೂ, ಅದು ತಲಾದಾಯ ಮತ್ತು ಉದ್ಯೋಗಗಳನ್ನು ಹೆಚ್ಚಿಸಲಿಲ್ಲ. ಆದ ಕಾರಣ ಅದು ಉದ್ಯೋಗವಿಹೀನ ಅಭಿವೃದ್ಧಿಯಾಗಿತ್ತು.  ಆದರೆ, ಬಿಜೆಪಿ ಸರ್ಕಾರದ ಅಭಿವೃದ್ಧಿ ಮಾದರಿಯು ಹೊಸ ಉದ್ಯೋಗಗಳನ್ನು ಸೃಷ್ಟಿಸುವುದಿರಲಿ, ಇದ್ದ ಉದ್ಯೋಗಗಳನ್ನೂ ನಾಶ ಪಡಿಸಿದೆ ಎನ್ನುತ್ತಾರೆ ಉದಿತ್ ಮಿಶ್ರಾರವರು.  ಒಟ್ಟಾರೆ, ಕಳೆದ ಹತ್ತು ವರ್ಷಗಳಲ್ಲಿ ಉದ್ಯೋಗಗಳು ಸೃಷ್ಟಿಯಾದವೇ ಅಥವಾ ಕಡಿಮೆಯಾದವೇ ಎಂಬ ನಿಜ ಸಂಗತಿಯನ್ನು ಸೂಕ್ತ ಅಂಕಿ ಅಂಶಗಳೊಂದಿಗೆ ಜನರಿಗೆ ಖಾತ್ರಿಪಡಿಸುವುದು ಬಿಜೆಪಿಯ ಜವಾಬ್ದಾರಿಯಾಗಿದೆ.

2016ರಲ್ಲಿ ಮೋದಿಯವರು ರೈತರ ಆದಾಯವನ್ನು 2022ರೊಳಗೆ ದ್ವಿಗುಣ ಮಾಡುವುದಾಗಿ ಘೋಷಿಸುತ್ತಾರೆ. ಇದಕ್ಕಾಗಿ ಅನೇಕ ಯೋಜನೆಗಳನ್ನು ಸರ್ಕಾರವು ಘೋಷಿಸುತ್ತದೆ. ಇದರಲ್ಲಿ ಬಹುಮುಖ್ಯ ಪ್ರಧಾನಮಂತ್ರಿ ಆಶಾ ಯೋಜನೆಯು (PM AASHA)  2018ರಲ್ಲಿ ಘೋಷಿತವಾಗುತ್ತದೆ. ಇದರಡಿ 2019 ಮತ್ತು 2024ರ ಲೋಕಸಭಾ ಚುನಾವಣೆಗಳ ಆಸುಪಾಸಿನ ತಿಂಗಳಲ್ಲಿ ಮಾತ್ರ ಹಣ ಖರ್ಚು ಮಾಡಲಾಗಿದ್ದು, ಈ ನಡುವಿನ ಮೂರು ವರ್ಷಗಳ ಕಾಲ ಒಂದು ರೂಪಾಯಿ ಸಹ ಖರ್ಚು ಮಾಡಿಲ್ಲವೆಂದು ‘ದಿ ರಿಪೋಟರ್ಸ್ ಕಲೆಕ್ಟಿವ್’ ವರದಿ ಮಾಡಿದೆ.

ವ್ಯವಸಾಯ ಕ್ಷೇತ್ರದ ವೆಚ್ಚವು 5 ಪಟ್ಟು ಹೆಚ್ಚಿದೆ ಎಂದು ಹೇಳಿಕೊಂಡ ಕೇಂದ್ರ ಸರ್ಕಾರದ ಮಾಹಿತಿಯನ್ನು ಪರೀಶಿಲಿಸಿ, ವಾಸ್ತವದಲ್ಲಿ  ಕೇಂದ್ರ ಮತ್ತು ರಾಜ್ಯ ಸರ್ಕಾರದ ವ್ಯವಸಾಯ ಕ್ಷೇತ್ರದ ವೆಚ್ಚಗಳು 2010-11ಕ್ಕೆ  (11% ವೆಚ್ಚ) ಹೋಲಿಸಿದರೆ 2019-20ರಲ್ಲಿ 9.5%ಗೆ ಇಳಿಕೆಯಾಗಿದೆ ಎಂದಿರುವ ವ್ಯವಸಾಯ ಕ್ಷೇತ್ರದ ಅಧ್ಯಯನ ಸಂಸ್ಥೆಯ ಮಾಹಿತಿಯನ್ನು ಉಲ್ಲೇಖಿಸಿ ‘ದಿ ಸ್ಕ್ರಾಲ್’ ಪತ್ರಿಕೆಯಲ್ಲಿ ದಿವ್ಯಾನಿ ದುಬೆಯವರು ಬರೆದಿದ್ದರು.

ಇದನ್ನೂ ಓದಿರಿ: ‘ದಲಿತ’ ಪದದ ಅಪಾರ್ಥ: ದಲಿತ ಚಳವಳಿಗೇ ಅಪಾಯ

2012-13ರಲ್ಲಿ ನಡೆದ NSS 70ನೇ ಸುತ್ತಿನ ಸಮೀಕ್ಷೆ ಪ್ರಕಾರ ಗ್ರಾಮೀಣ ಕೃಷಿ ಕುಟುಂಬಗಳ ಆದಾಯವು ರೂ.6420 ಇದ್ದು, ಅದು NSS 77ನೇ ಸುತ್ತಿನ (2018-19) ಸಮೀಕ್ಷೆಯಲ್ಲಿ ರೂ.10,218 ಆಗಿ, ಕೃಷಿ ಆದಾಯವು 57% ಹೆಚ್ಚಿದೆ ಎಂದು ತಿಳಿಸುತ್ತದೆ. ಆದರೆ, ಇದರಲ್ಲಿ ಹಣದುಬ್ಬರದಿಂದಾಗಿ ಹೆಚ್ಚಾದ 35% ಕೃಷಿ ಖರ್ಚುಗಳನ್ನು ಪರಿಗಣಿಸಿಲ್ಲವೆಂದೂ, ಜೊತೆಗೆ ರೈತರ ಆದಾಯದಲ್ಲಿ  ಕೃಷಿಯಿಂದಾದ ಆದಾಯವು 48% ನಿಂದ 37% ಇಳಿಕೆಯಾಗಿದ್ದು, ರೈತರು ತಮ್ಮ ಆದಾಯವನ್ನು ಬೆಳೆ ಹೆಚ್ಚಳದಿಂದ ಪಡೆಯದೆ, ಕೃಷಿ ಮಜೂರಿಯಿಂದ ಪಡೆದಿರುತ್ತಾರೆ ಎಂದು ಮೇಲಿನ ಲೇಖನವು ತಿಳಿಸುತ್ತದೆ. ಬಿಜೆಪಿ ಆಡಳಿತವಿದ್ದ ಕೆಲವು ರಾಜ್ಯಗಳು (ಕರ್ನಾಟಕದ ಹತ್ತಿ ಮತ್ತು ಮಹಾರಾಷ್ಟ್ರದ ಸೊಯಾಬಿನ್ ಬೆಳೆಗಾರರು) 2020-21ರಲ್ಲಿ ರೈತರು ದ್ವಿಗುಣ ಆದಾಯ ಪಡೆದಿರುವುದಾಗಿ ಹೇಳಿರುತ್ತಾರೆ. ಆದಾಯವು ಡಬಲ್ ಆಗಿದೆ ಎಂದು ಸರ್ಕಾರವು ಹೇಳಲಾದ ಕೆಲ ರೈತರನ್ನು ‘ನ್ಯೂಸ್ ಲಾಂಡ್ರಿ’ಯು ಸಂದರ್ಶನ ಮಾಡಿದಾಗ, ಅದರಲ್ಲಿ ಕೆಲವರು ರೈತರೇ ಆಗಿರಲಿಲ್ಲ ಮತ್ತು ರೈತರಾಗಿದ್ದ ಕೆಲವರು ತಮ್ಮ ಆದಾಯ ಡಬಲ್ ಆಗಿದೆಯೆಂದು ಹೇಳಿಲ್ಲವೆನ್ನುತ್ತಾರೆ.

NFHS-5 ಸಮೀಕ್ಷೆಯ ಪ್ರಕಾರ ಲಕ್ಷದ್ವೀಪವನ್ನು ಹೊರತುಪಡಿಸಿ, ಇಡೀ ದೇಶದಲ್ಲಿ ಎಲ್ಲಿಯೂ ಶೇ.100ರಷ್ಟು ಜನರು ಶೌಚಾಲಯವನ್ನು ಹೊಂದಿಲ್ಲವೆಂದೂ, ಗ್ರಾಮೀಣ ಪ್ರದೇಶದಲ್ಲಿ ಶೇ. 40ಕ್ಕೂ ಹೆಚ್ಚು ಕುಟುಂಬಗಳಿಗೆ ಅಡುಗೆ ಗ್ಯಾಸ್ ಇಲ್ಲವಾಗಿ ಹಾಗೂ ಗರ್ಭಿಣಿ ಮಹಿಳೆಯರು ಮತ್ತು ಐದು ವರ್ಷದೊಳಗಿನ ಮಕ್ಕಳಲ್ಲಿ ರಕ್ತಹೀನತೆ ಹೆಚ್ಚಾಗಿರುವ ಅಂಶಗಳು ವರದಿಯಾಗಿರುವುದನ್ನು ‘ದಿ ವೈರ್‌’ನಲ್ಲಿ ಬನ್ಜೋತ್ ಕೌರ್ ವರದಿ ಮಾಡಿರುತ್ತಾರೆ.

ಜನರು ಮಾಡುವ ಉಳಿತಾಯವೂ ದೇಶದ ಆರ್ಥಿಕ ಬೆಳವಣಿಗೆಯ ಸೂಚಕವಾಗಿದೆ. 2011-12ರಲ್ಲಿ 7.4% ಇದ್ದ ಉಳಿತಾಯ ದರವು 2022-23ಕ್ಕೆ ಒಟ್ಟು ಜಿಡಿಪಿಯ 5.3%ಕ್ಕೆ ಇಳಿದಿದೆ ಎಂದಿದೆ ‘ದಿ ಲೈವ್ ಮಿಂಟ್’ ಪತ್ರಿಕೆ. ಕಡಿಮೆಯಾದ ವೈಯಕ್ತಿಕ ಬಳಕೆ (ಕನ್ಸಮ್ಷನ್)ಯಿಂದಾಗಿ ದೇಶದ ಜಿಡಿಪಿಯು ಇಳಿಕೆಯಾಗುವಂತೆ ಮಾಡಿದೆ  ಎಂದು ವರದಿಗಳು ಹೇಳುತ್ತವೆ. 2024 ಅಂತ್ಯದಲ್ಲಿ 26,533 ಕೋಟಿ ವಿದೇಶಿ ಬಂಡವಾಳವನ್ನು ಭಾರತದ ಷೇರು ಮಾರುಕಟ್ಟೆಯಿಂದ ಹಿಂದೆಗೆಯಲಾಗಿದ್ದರೆ, ಚೀನಾ ಮಾರುಕಟ್ಟೆಯಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಿರುವುದು ಕಂಡುಬರುತ್ತದೆ ಎಂದು ‘ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ.

3 21
ಜನರಲ್ ಬೋಗಿಯ ದೃಶ್ಯ

ಲಕ್ಷಾಂತರ ವಲಸಿಗ ಕೂಲಿ ಕಾರ್ಮಿಕರ ಸಾಮಾನ್ಯ ಅಥವಾ ಸ್ಲೀಪರ್ ದರ್ಜೆ ಡಬ್ಬಿಯಲ್ಲಿನ  24-72 ಗಂಟೆ ಕಾಲದ ರೈಲು ಪ್ರಯಾಣವು ಊಹಿಸಲು ಸಾಧ್ಯವಿರದ ಕೆಟ್ಟ ಪರಿಸ್ಥಿತಿಯಲ್ಲಿ ಸಾಗುತ್ತದೆ. 72 ಜನರ ಬೋಗಿಯಲ್ಲಿ 400 ಜನರು ಪ್ರವಾಸ ಮಾಡಿದ ಬಗ್ಗೆ ‘ದೈನಿಕ್ ಭಾಸ್ಕರ್’ ಪತ್ರಿಕೆಯು ವರದಿ ಮಾಡುತ್ತದೆ. ರೈಲ್ವೆ ನಿಲ್ದಾಣಗಳಲ್ಲಿ ಚಹಾ ಮಾರಿದ ಪ್ರಧಾನಿಯವರಿಗೆ ಪ್ಯಾಸೆಂಜರ್ ಡಬ್ಬಿಯಲ್ಲಿ ಪ್ರಯಾಣಿಸುವವರ ಕಷ್ಟವು ತಿಳಿದಿದೆಯಾದರೂ, ದೇಶದ ಸಿರಿವಂತರ ಸಮಯ ಅಮೂಲ್ಯವೆನಿಸಿದ ಕಾರಣ ಅವರಿಗೆ ‘ವಂದೇ ಭಾರತ್‌’ನಂತಹ ಸೂಪರ್ ಫಾಸ್ಟ್ ರೈಲು ಬಹು ಮುಖ್ಯವೆನಿಸುತ್ತದೆ. ಅದು ಮುಖ್ಯವೇ ಸರಿ, ಅದಕ್ಕೆರಡು ಗರೀಬಿ ಡಬ್ಬಿಗಳನ್ನು ಜೋಡಿಸಿದ್ದರೆ ಈ ಬಡ ಕಾರ್ಮಿರಕರೂ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದರಲ್ಲವೇ? ಆದರೆ, ದುರದೃಷ್ಟವಶಾತ್ ಉಳಿದ ರೈಲುಗಳಲ್ಲಿಯೂ ಹೆಚ್ಚು ಹವಾ ನಿಯಂತ್ರಿತ ಬೋಗಿಗಳ ಸೇರ್ಪಡೆಯಿಂದಾಗಿ ಪ್ಯಾಸೆಂಜೆರ್ ಹಾಗೂ ಸ್ಲೀಪರ್ ಡಬ್ಬಿಗಳು ಕಡಿಮೆಯಾಗುತ್ತಿರುವ ಬಗ್ಗೆ ವರದಿಯಾಗುತ್ತಿದೆ.

“ಭಾರತದ ಆರ್ಥಿಕ ಪುನರುತ್ಥಾನದ ದಶಕ’ ಎಂಬ ವರ್ಣನೀಯ ಲೇಖನವನ್ನು ಪಬ್ಲಿಕ್ ಫೈನಾನ್‌ಶಿಯಲ್ ಮೆನೆಜ್‌ಮೆಂಟ್ ಬ್ಲಾಗ್‌ನಲ್ಲಿ ಬರೆದಿರುವ ರಮೇಶ್ ಕುಮಾರ್ ನಂಜುಂಡಯ್ಯ (ಮೇ 20, 2024) ತಮ್ಮ ಲೇಖನದ ಮೊದಲಿಗೆ 2014-2024ರ ಭಾರತದ ಆರ್ಥಿಕ ಚರಿತ್ರೆಯಲ್ಲಿ ಗಣನೀಯ ಬೆಳವಣಿಗೆ ಮತ್ತು ಅಭಿವೃದ್ಧಿಯು ಹಲವು ಕ್ಷೇತ್ರಗಳಲ್ಲಿ ಆಗಿದ್ದರೂ ಕೆಲವು ಸವಾಲುಗಳು ಹಾಗೆಯೇ ಉಳಿದಿವೆ; ಉದಾಹರಣೆಗೆ ನಿರುದ್ಯೋಗ ಮತ್ತು ಬಡತನದ ಮಟ್ಟವು ಹೆಚ್ಚಿದೆ ಎಂದಿದ್ದಾರೆ. ನಿರುದ್ಯೋಗ ಮತ್ತು ಬಡತನ ಹೆಚ್ಚಿರುವಾಗ, ಬೇರೆಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗಿದ್ದರೂ, ಅದರಿಂದಾಗುವ ಪ್ರಯೋಜನವೇನು? ದೇಶದ ಸುಮಾರು 50% ಜನರನ್ನು ಅಭಿವೃದ್ಧಿಯ ಹೊರಗಿಟ್ಟಂತೆ ಅಲ್ಲವೇ?

ತಮ್ಮ ಮೂರನೇ ಅವಧಿಯಲ್ಲಾದರೂ ಪ್ರಸ್ತುತದ ಕೇಂದ್ರ ಸರ್ಕಾರವು ಈ ಬಗ್ಗೆ ಹೆಚ್ಚಿನ ಗಮನ ಹರಿಸಲಿ ಎಂದು ಆಶಿಸೋಣ.

WhatsApp Image 2025 11 17 at 5.18.52 PM
ಲತಾಮಾಲ
+ posts

ಲತಾಮಾಲ ಅವರು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸ್ವಯಂಸೇವಾ ಸಂಸ್ಥೆಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿರುತ್ತಾರೆ. ಇದರೊಂದಿಗೆ, ಸ್ವತಂತ್ರ ಸಮಾಲೋಚಕರಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮೌಲ್ಯಮಾಪನ, ಅಧ್ಯಯನ ಮತ್ತು ತರಬೇತಿಗಳನ್ನು ನಡೆಸಿಕೊಟ್ಟಿರುತ್ತಾರೆ. ಬರವಣಿಗೆಯನ್ನು ತಮ್ಮ ವೃತ್ತಿಗೆ ಮಾತ್ರ ಸಿಮೀತಗೊಳಿಸಿದ್ದ ಇವರು, ಇತ್ತಿಚೆಗೆ ಪ್ರಸ್ತುತದ ರಾಜಕೀಯ ಆಗುಹೋಗುಗಳ ಕುರಿತಾಗಿ ಪುಸ್ತಕವನ್ನು ಹೊರತಂದಿದ್ದು, 'ಈದಿನ ಡಾಟ್‌ ಕಾಮ್‌'ಗೆ ರಾಜಕೀಯ ಹಾಗೂ ಅಭಿವೃದ್ಧಿ ಸಂಬಂಧಿತ ಲೇಖನಗಳನ್ನು ಬರೆಯುತ್ತಿರುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

ಲತಾಮಾಲ
ಲತಾಮಾಲ
ಲತಾಮಾಲ ಅವರು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸ್ವಯಂಸೇವಾ ಸಂಸ್ಥೆಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿರುತ್ತಾರೆ. ಇದರೊಂದಿಗೆ, ಸ್ವತಂತ್ರ ಸಮಾಲೋಚಕರಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮೌಲ್ಯಮಾಪನ, ಅಧ್ಯಯನ ಮತ್ತು ತರಬೇತಿಗಳನ್ನು ನಡೆಸಿಕೊಟ್ಟಿರುತ್ತಾರೆ. ಬರವಣಿಗೆಯನ್ನು ತಮ್ಮ ವೃತ್ತಿಗೆ ಮಾತ್ರ ಸಿಮೀತಗೊಳಿಸಿದ್ದ ಇವರು, ಇತ್ತಿಚೆಗೆ ಪ್ರಸ್ತುತದ ರಾಜಕೀಯ ಆಗುಹೋಗುಗಳ ಕುರಿತಾಗಿ ಪುಸ್ತಕವನ್ನು ಹೊರತಂದಿದ್ದು, 'ಈದಿನ ಡಾಟ್‌ ಕಾಮ್‌'ಗೆ ರಾಜಕೀಯ ಹಾಗೂ ಅಭಿವೃದ್ಧಿ ಸಂಬಂಧಿತ ಲೇಖನಗಳನ್ನು ಬರೆಯುತ್ತಿರುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...