ನಮ್ಮನ್ನ ಹಿಂಗ್ಯಾಕ ನೋಡತಾರಪ ಬೆಂಗ್ಳೂರ ಮಂದಿ? (ಭಾಗ-2)

Date:

(ಮುಂದುವರಿದ ಭಾಗ..) ಆರ್ಥರ್ ಕೊನನ್ನ್ ಡಾಯ್ಲ ಅವರ ಮೊದಲ ಕಾದಂಬರಿ ‘ಎ ಸ್ಟಡೀ ಇನ್ ಸ್ಕಾರಲೆಟ್’ ಶುರು ಆಗುವುದು ಬ್ರಿಟನ್ ಸೈನ್ಯದ ಮಾಜಿ ಸೈನ್ಯಾಧಿಕಾರಿ ಡಾ. ಜಾನ್ ವಾಟ್ಸನ್‌ನ ಪರಿಚಯದ ಮೂಲಕ. ಅವಿಭಜಿತ ಭಾರತದಲ್ಲಿ ಕೆಲಸ ಮಾಡಿದ್ದ ಈತ ಯುದ್ಧಭೂಮಿಯಲ್ಲಿ ಗಾಯಗೊಂಡಿರುತ್ತಾನೆ.

ಸರಕಾರದ ಅಂಗವೈಕಲ್ಯ ನಿವೃತ್ತಿ ವೇತನ ಪಡೆದು ತನ್ನವರಾರೂ ಇಲ್ಲದ ಲಂಡನ್‌ನಲ್ಲಿ ದಿನದೂಡಬೇಕಾದ ಅನಿವಾರ್ಯತೆ ಅವನಿಗೆ ಒದಗಿ ಬರುತ್ತದೆ. ಇದು ಅವನು ಶರ್ಲಾಕ್ ಹೋಮ್ಸ್‌ನನ್ನು ಭೇಟಿ ಆಗುವ ಮುಂಚೆ. ಹೋಟೆಲ್‌ನ ಕೋಣೆಯೊಂದರಲ್ಲಿ, ತನ್ನ ಅದೃಷ್ಟವನ್ನು ಹಳಿಯುತ್ತಾ ವಿಷಣ್ಣನಾಗಿ ಕೂಡುವ ಡಾ. ವಾಟ್ಸನ್, ಎಲ್ಲರನ್ನೂ ಅಪರಿಚಿತರನ್ನಾಗಿಸಿ ಬಿಡುವ ಲಂಡನ್ ನಗರವನ್ನು ಹೀಗೆ ಬಣ್ಣಿಸುತ್ತಾನೆ.

‘ಈ ಸಾಮ್ರಾಜ್ಯದ ಎಲ್ಲಾ ಸೋಮಾರಿ-ಮೈಗಳ್ಳರು ಹಾಗೂ ಬೇಜವಾಬ್ದಾರಿ ಗಿರಾಕಿಗಳನ್ನು ಸಮ್ಮೋಹಿಸಿ ಯಾವುದು ತನ್ನ ಕಡೆಗೆ ಸೆಳೆದುಕೊಳ್ಳುತ್ತದೋ – ಆ ಮಹಾನ್ ಕೊಚ್ಚೆ ಗುಂಡಿ ಲಂಡನ್.’

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

‘ಡಾಯ್ಲ್ ಅವರ ಕಥನ ಶಕ್ತಿ ಕಾಣುವುದು ಇಂತಹ ಸಾಲುಗಳಲ್ಲಿ, ಈ ಸಾಲು ಕೇವಲ ಸಾಹಿತ್ಯಿಕವಾಗಿ ಅಷ್ಟೇ ಮುಖ್ಯವಾದದ್ದು ಅಲ್ಲ, ಅದು ಆ ಕಾಲದ ರಾಜಕೀಯ – ಸಾಮಾಜಿಕ ಸ್ಥಿತಿಯನ್ನು ಎತ್ತಿ ತೋರಿಸುವಂಥದು’ ಎಂದು ವಿಮರ್ಶಕರು ಹೊಗಳುತ್ತಾರೆ. ಮೊದಲ ನೋಟಕ್ಕೆ ಇದು ಅತಿಯಾಯಿತು ಅಂತ ಅನ್ನಿಸಿದರೂ, ನನಗೆ ಇಂಥದೇ ಮಾತುಗಳನ್ನು ಬೆಂಗಳೂರು ಬಗ್ಗೆಯೂ ಹೇಳಬಹುದೇನೋ ಅನ್ನಿಸುತ್ತದೆ.

ರಾಜ್ಯದ ಕಾಳಜಿ ಬಿಟ್ಟು ಕೇವಲ ತನ್ನ ಕಾಳಜಿ ಮಾಡಿಕೊಳ್ಳುವ ನಮ್ಮ ರಾಜಧಾನಿಯನ್ನು ನೋಡಿದಾಗ ನನಗೆ ಸಂಕಟವಾಗುತ್ತದೆ. ಸುತ್ತೆಲ್ಲಾ ಉಪವಾಸ ಬಿದ್ದ ಕೂಸುಗಳ ಹಾಲು ಕಸಿದುಕೊಂಡು ಅದನ್ನು ತನ್ನ ಮುಖದ ತೇವ ಆರದಂತೆ ಕಾಂತಿವರ್ಧಕವಾಗಿ ಬಳಸುವ ಕ್ರೂರಿಯಂತೆ, ಏಕಚಕ್ರಪುರದ ಬೆಟ್ಟದ ಮೇಲೆ ಮಲಗಿ ದಿನಕ್ಕೊಬ್ಬ ನಾಗರಿಕನನ್ನು ತಿಂದು ತೇಗುವ ಬಕಾಸುರನಂತೆ ಕಾಣುತ್ತದೆ.

ಇದನ್ನೂ ಓದಿರಿ: ನಮ್ಮನ್ನ ಹಿಂಗ್ಯಾಕ ನೋಡತಾರಪ ಬೆಂಗ್ಳೂರ್ ಮಂದಿ? (ಭಾಗ-1)

ಒಬ್ಬ ‘ಆವೆರೇಜ್ ಬೆಂಗಳೂರಿಯನ್’, ‘ಬೆಂಗಳೂರಿನ ಶ್ರೀಸಾಮಾನ್ಯ’ ಅಂತ ಇದ್ದಾನಾ ಅಂತ ಕೇಳಿದರೆ ಇದ್ದಾನೆ/ಇದ್ದಾಳೆ ಅಂತ ಅನ್ನಿಸುತ್ತದೆ. ಅವನ್ನು ಕಂಡುಹಿಡಿಯುವುದು ತುಂಬ ಸುಲಭ. ಅವನ ಹತ್ತಿರ ಅವನ ಊರಿನ ಹವಾಗುಣದ ಬಗ್ಗೆ ಮಾತಾಡಬೇಕು. (ಇದು ದೊಡ್ಡ ಮೀಮು ಕೂಡ ಆಗಿದೆ).

ಪ್ರತಿಬಾರಿ ಬೆಂಗಳೂರಿನ ಶ್ರೀಸಾಮಾನ್ಯನ ಜೊತೆ ಮಾತಾಡಿದಾಗ ಆತ/ ಆಕೆ ತನ್ನ ಊರಿನ ಹವಾಗುಣದ ಬಗ್ಗೆ ತುಂಬ ಮೇಲುರಿಮೆಯಿಂದ ಮಾತಾಡುತ್ತಾನೆ/ಮಾತಾಡುತ್ತಾಳೆ. ಅನೇಕ ಬಾರಿ ಹವಾಗುಣದ ಸುದ್ದಿ ನೀವು ತೆಗೆಯದೇ ಇದ್ದರೂ ಕೂಡ ಆತ/ಆಕೆ ಅದರ ಬಗ್ಗೆ ಮಾತಾಡಲು ಶುರು ಮಾತಾಡುತ್ತಾನೆ/ಮಾತಾಡುತ್ತಾಳೆ. ಈ ರಾಜ್ಯದ ಜನಪ್ರಿಯ ಪ್ರದೇಶಗಳಾದ ಶಿರಸಿ / ಸಿದ್ದಾಪುರ/ ಶೃಂಗೇರಿ / ತೀರ್ಥಹಳ್ಳಿ/ ಮಡಿಕೇರಿ/ ದಾಂಡೇಲಿ ಇಂತಹ ಊರುಗಳು ಅಲ್ಲದೇ, ಇನ್ನೂ ಜನಜನಿತವಾಗದ ಖಾನಾಪೂರ/ ಜೋಯಿಡಾ/ ಬೀದರ್/ ಹುಮ್ನಾಬಾದ್/ ಚಿಂಚೋಳಿ/ ಕಾರಪಾಕಪಲ್ಲಿ/ ಸೊಂಡೂರು/ ಕುಷ್ಟಗಿ ಇತ್ಯಾದಿ ಊರುಗಳ ಹವಾಗುಣದ ಬಗ್ಗೆ ಅವರಿಗೆ ತಿಳಿದೇ ಇಲ್ಲ.

ತಾವು ಮಾತ್ರ ತಂಪಾದ, ಹಚ್ಚಹಸಿರಿನ ಓಯಸಿಸ್‌ನಲ್ಲಿ ಇದ್ದೇವೆ, ರಾಜ್ಯದ ಇನ್ನುಳಿದ ಪ್ರದೇಶಗಳೆಲ್ಲ ಮರುಭೂಮಿ, ಅಂತ ಅವರು ತಿಳಿದುಕೊಂಡಿರುತ್ತಾರೆ ಅಂತ ನನಗೆ ಅನ್ನಿಸುತ್ತದೆ. ಇಡೀ ವಿಶ್ವದಲ್ಲಿ ಇರುವ ಅತಿ ದೊಡ್ಡ ಓಯಸಿಸ್ ಸೌದಿ ಅರೇಬಿಯಾದ ‘ಅಲ್ ಅಹಸಾ’. ಅರೇಬಿಕ್ ಭಾಷೆಯಲಿ ಇದರ ಅರ್ಥ ‘ಅಂತರ್ಜಲದ ದನಿ’. ಆದರೆ ನಮ್ಮ ಬೆಂಗಳೂರು ನಮ್ಮ ದನಿ ಆಗಲೇ ಇಲ್ಲ. ಅದು ಚಂಪಾ ಅವರ ಗುಪ್ತಗಾಮಿನಿ ಶಾಲ್ಮಲೆಯಾಗಿ ಹೋಯಿತು.

ಇದನ್ನೂ ಓದಿರಿ: ವಿಶ್ಲೇಷಣೆ | ಕರ್ನಾಟಕದಲ್ಲಿ ಒಬಿಸಿ ಮೀಸಲಾತಿ ಸಾಗಿಬಂದ ದಾರಿ

ಆ ಕವನದಲ್ಲಿ ಬರುವ ಕವಿಯ ಸಂಕಟ ಎಲ್ಲಾರದ್ದು ಅಂತ ನನಗೆ ಅನ್ನಿಸುತ್ತದೆ.

ಅದರಲ್ಲಿ ಕೆಲ ಸಾಲುಗಳು ಹೀಗಿವೆ- ‘ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಒಳಗೊಳಗೇ ಹರಿಯುವವಳು, ಜೀವ ಹಿಂಡಿ ಹಿಪ್ಪೆ ಮಾಡಿ ಒಳಗೊಳಗೇ ಕೊರೆಯುವವಳು. ಸದಾ?. ಗುಪ್ತಗಾಮಿನಿ, ನನ್ನ ಶಾಲ್ಮಲಾ.’

ಕೊನೆಯ ಮಾತು

ಹಾಗಾದರೆ ಕಳೆದ ಅರ್ಧ ಶತಮಾನದಲ್ಲಿ ಏನಾದರೂ ಬದಲಾಗಿದೆಯೇ ಅಥವಾ ಏನೂ ಇಲ್ಲವೇ? ಬಹಳ ಬದಲಾಗಿದೆ. ಆದರೆ ಬಯಸಿದಷ್ಟು ಆಗಿಲ್ಲ ಅಂತ ನನಗೆ ಅನ್ನಿಸುತ್ತದೆ.

ಅತಿ ದೊಡ್ಡ, ಧನಾತ್ಮಕ ಬದಲಾವಣೆ ಎಂದರೆ ಅಧಿಕಾರ ವಿಕೇಂದ್ರೀಕರಣದ ಪ್ರಯತ್ನ. ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಪ್ರತಿನಿಧಿಗಳು ಇರಬೇಕು, ಅವರಿಗೆ ತಮ್ಮ ಪ್ರದೇಶದ ಅಭಿವೃದ್ಧಿಗಾಗಿ ಏನು ಬೇಕೋ ಅದರ ಬಗ್ಗೆ ಯೋಜನೆ ರೂಪಿಸುವ, ಅವುಗಳ ಜಾರಿಗೆ ಬೇಕಾದ ಹಣಕಾಸು ಹೊಂದಿಸುವ ಅಧಿಕಾರ ಇರಬೇಕು, ಅವನ್ನು ರಾಜ್ಯ ಹಾಗೂ ಕೇಂದ್ರ ಸರಕಾರ ಮಾನ್ಯ ಮಾಡಬೇಕು. ಸ್ಥಳೀಯರು ತಮ್ಮ ಅನುಕೂಲಕ್ಕೆ ತಕ್ಕಂತೆ ರೂಪಿಸಿಕೊಂಡ ಯೋಜನೆಗಳಿಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕಡ್ಡಾಯವಾಗಿ ಧನಸಹಾಯ ಮಾಡಬೇಕು ಎನ್ನುವ ನೀತಿಯ ಮೇಲೆ ಇದು ಕರ್ನಾಟಕ, ರಾಜಸ್ಥಾನ ಹಾಗೂ ಇತರ ರಾಜ್ಯಗಳಲ್ಲಿ ಜಾರಿಗೆ ಬಂತು. ಇದನ್ನು ನೋಡಿದ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ಇದನ್ನು ದೇಶವ್ಯಾಪಿ ಜಾರಿಗೆ ತರಲು ಸಂವಿಧಾನದ ತಿದ್ದುಪಡಿ ಮಾಡಿದರು. ಆದರೆ ವಿವಿಧ ರಾಜ್ಯಗಳಲ್ಲಿ ವಿವಿಧ ರೂಪಗಳಲ್ಲಿ ಜಾರಿಯಲ್ಲಿ ಇದ್ದ ವಿಕೇಂದ್ರೀಕರಣದ ಮಾದರಿಗಳನ್ನು ಏಕರೂಪಗೊಳಿಸುವ ಯತ್ನದಲ್ಲಿ ಕೆಲವು ತಪ್ಪುಗಳು ಆದವು. ಅವು ಇಂದಿಗೂ ಉಳಿದುಕೊಂಡಿವೆ. ದೋಣಿಯ ತಳದ ತೂತಿನಂತೆ ವಿಕೇಂದ್ರೀಕರಣದ ಕನಸನ್ನು ಛಿದ್ರಗೊಳಿಸುತ್ತಿವೆ. ಕೇಂದ್ರದಲ್ಲಿ ಆಡಳಿತ ನಡೆಸಿದ ‘ಉಪಾಂಡಾ’ (ಯುಪಿಎ/ಎನ್‌ಡಿಎ) ಮೈತ್ರಿಕೂಟಗಳ ಸರಕಾರಗಳು ಸ್ಥಳೀಯ ಸಂಸ್ಥೆಗಳನ್ನು ಸಾಲಗಾರರನ್ನಾಗಿ ಮಾಡಿವೆ.

ಅವರು ತಮ್ಮ ತಿಜೋರಿಯಲ್ಲಿನ ಹಣದ ಹಂಚಿಕೆ ಮಾಡದೇ, ವಿಶ್ವ ಬ್ಯಾಂಕು ಹಾಗೂ ಇತರ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಮುಂದೆ ಕೈಯೊಡ್ಡಿ ಸಾಲ ತಂದು, ಆ ದುಡ್ಡನ್ನು ಉಡಾಯಿಸಿವೆ. ಆ ಸಾಲದ ಮರು ಪಾವತಿ ಮಾಡುವುದನ್ನು ಮಾತ್ರ ಸ್ಥಳೀಯ ಸಂಸ್ಥೆಗಳ ತಲೆಗೆ ಕಟ್ಟಿವೆ.

ಇದನ್ನೂ ಓದಿರಿ: ಮೋದಿಯ ಟೀಕಿಸುತ್ತಿದ್ದ ರಾಣೆ, ಮುಸ್ಲಿಂ ದ್ವೇಷಿಯಾಗಿದ್ದು ಹೇಗೆ?

ವಿಕೇಂದ್ರೀಕೃತ ಸಂಸ್ಥೆಗಳ ಆಡಳಿತಕ್ಕಾಗಿ ಕೇಂದ್ರದಿಂದ ಜಗಳ ಮಾಡಿ ಧನಸಹಾಯ ಪಡೆಯುವ ರಾಜ್ಯ ಸರಕಾರಗಳು ಅದೇ ಉದಾರವಾದೀ ಮನೋಭಾವವನ್ನು ರಾಜ್ಯದ ಇತರ ಜಿಲ್ಲೆಗಳಿಗೆ ಹಣ ಹಂಚುವಾಗ ತೋರುವುದಿಲ್ಲ.

ನಮ್ಮ ರಾಜ್ಯದಲ್ಲಿ 10 ಮಹಾ ನಗರ ಪಾಲಿಕೆಗಳು, 59 ನಗರ ಪಾಲಿಕೆ, 116 ನಗರ ಸಭೆ ಹಾಗೂ 97 ಪಟ್ಟಣ ಪಂಚಾಯಿತಿಗಳು ಇವೆ. ಇವೆಲ್ಲವುಗಳ ಜನಸಂಖ್ಯೆ ಸೇರಿದರೆ ಬೆಂಗಳೂರು ಮಹಾನಗರಕ್ಕಿಂತ ಸ್ವಲ್ಪ ಹೆಚ್ಚು ಆಗುತ್ತದೆ. ಆದರೆ ರಾಜ್ಯದ ರಾಜಧಾನಿ ನಮ್ಮ ಆಯವ್ಯಯದಲ್ಲಿ ಶೇಕಡಾ ಮೂವತ್ತು ಭಾಗ ಪಡೆಯುತ್ತದೆ. ಇತರ ಎಲ್ಲಾ ಸಂಸ್ಥೆಗಳು ಪುಡಿ ಕಾಸಿಗೆ ಖುಷಿ ಪಡಬೇಕಾಗುತ್ತದೆ. ಘೋರಾರಣ್ಯದಲ್ಲಿ ಬೇಟೆಗೆ ಹೋದ ಸಿಂಹ ತಿಂದು ಬಿಟ್ಟದ್ದನ್ನು ಕತ್ತೆ – ಕಿರುಬಗಳು ಕಚ್ಚಾಡಿಕೊಂಡು ತಿಂದು ಹೊಟ್ಟೆ ಹೊರೆಯುತ್ತವೆ.

ರಾಜ್ಯದ ವಿವಿಧ ಪ್ರದೇಶಗಳಲ್ಲಿ ನಾಲ್ಕು ಜನ ಪ್ರಾದೇಶಿಕ ಆಯುಕ್ತರು ಹಾಗೂ 13 ಜನ ಪೊಲೀಸ್ ಮೇಲ್ವಿಚಾರಕರ ಹುದ್ದೆಗಳು ಇವೆ. ಇವುಗಳಿಗೆ ಕಾರ್ಯದರ್ಶಿ ಮಟ್ಟದ ಐಎಎಸ್ ಅಧಿಕಾರಿ ಹಾಗೂ ಐಜಿಪಿ ಮಟ್ಟದ ಐಪಿಎಸ್ ಅಧಿಕಾರಿಗಳನ್ನು ನೇಮಕ ಮಾಡಬೇಕು ಎನ್ನುವ ನಿಯಮ ಇದೆ. ಅನೇಕ ಬಾರಿ ಕೆಳಗಿನ ಮಟ್ಟದ ಅಧಿಕಾರಿಗಳನ್ನು ನೇಮಿಸಿ ಅವರಿಗೆ ಹೆಚ್ಚುವರಿ ಜವಾಬುದಾರಿ ಕೊಡುತ್ತಾರೆ. ಅಲ್ಲದೇ, ಒಬ್ಬರಾದ ಮೇಲೆ ಒಬ್ಬರಂತೆ ಬಂದ ವಿಕೇಂದ್ರೀಕರಣ ವಿರೋಧಿ ಸರಕಾರಗಳು ಆಡಳಿತ ಸುಧಾರಣೆ ನೆವದಲ್ಲಿ ಈ ಅಧಿಕಾರಿಗಳ ಅಧಿಕಾರ ವ್ಯಾಪ್ತಿಯನ್ನು ಕಮ್ಮಿ ಮಾಡಿವೆ.

ಇನ್ನೂ ಕೆಲ ಅಭಿನಂದನೆಗೆ ಅರ್ಹ ಬದಲಾವಣೆಗಳು ಎಂದರೆ ವಿವಿಧ ಇಲಾಖೆ, ನಿಗಮಗಳ ಕಚೇರಿಗಳನ್ನು, ವಿಶ್ವ ವಿದ್ಯಾಲಯ, ಇತರ ಸಂಸ್ಥೆಗಳನ್ನು ಬೆಂಗಳೂರಿನಿಂದ ಹೊರಗೆ ಕಳಿಸಿದ್ದು. ಈ ಕೆಲಸ ಆರಂಭವಾಗಿದೆ, ಆದರೆ ಅಪೂರ್ಣವಾಗಿದೆ.

ಹುಬ್ಬಳ್ಳಿಯ ನೇಕಾರ ಅಭಿವೃದ್ಧಿ ಮಂಡಳಿ, ವಿಜಯಪುರದ ಲಿಂಬೆ ಅಭಿವೃದ್ಧಿ ಮಂಡಳಿ, ಕಲಬುರ್ಗಿಯ ತೊಗರಿ ಅಭಿವೃದ್ಧಿ ಮಂಡಳಿಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಆಗುತ್ತಿಲ್ಲ. ಕಚೇರಿಗಳಾದರೂ ಇಲ್ಲಿಯೇ ಇವೆ ಎನ್ನುವ ನೆಮ್ಮದಿ ಇದೆ. ಸಾಗುವ ಹಾದಿ ಇನ್ನೂ ದೂರ ಇದೆ. ರಾಜಧಾನಿಗೆ ಏನೂ ಸಂಬಂಧ ಪಡದ ಕಾಫಿ ಬೋರ್ಡು, ಮೀನುಗಾರಿಕೆ ನಿರ್ದೇಶನಾಲಯ, ಪಶ್ಚಿಮ ಘಟ್ಟ ರಕ್ಷಣೆ ಸಮಿತಿ ಇತ್ಯಾದಿ ಇನ್ನೂ ಬೆಂಗಳೂರಿನಲ್ಲಿಯೇ ಇದೆ.

ಬೀದರ್‌ನಲ್ಲಿ ಇರುವ ಪಶು ವಿವಿಯಲ್ಲಿ ನಿರ್ದೇಶಕರ ಸ್ಥಾನ ಖಾಲಿ ಇತ್ತು. ಅದಕ್ಕೆ ಅರ್ಹತೆ ಇದ್ದ ನಮ್ಮ ಸಂಬಂಧಿಕರೊಬ್ಬರು ಬೆಂಗಳೂರಿನ ಕಾಲೇಜಿನಲ್ಲಿ ಇಲಾಖಾ ಮುಖ್ಯಸ್ಥರಾಗಿ ಉಳಿದುಕೊಂಡಿದ್ದರು. ಅವರನ್ನು ‘ನೀವು ಯಾವಾಗ ಬೀದರ್‌ಗೆ ಬರೋದು?’ ಅಂತ ಕೇಳಿದೆ. “ಏ ಅಲ್ಲೆಯಲ್ಲಾ ಬರೋ ವಿಚಾರ ಇಲ್ಲರೆಪಾ. ಇಲ್ಲೇ ಆರಾಮ ಅದೇವಿ” ಅಂತ ಅಂದ್ರು. “ಯಾಕೆ, ಇದು ಇಡೀ ವಿವಿಯ ಆಡಳಿತ ನಡೆಸೋ ಹುದ್ದೆ ಅಲ್ಲವೇ? ಅಲ್ಲಿ ಕೆಳಗಿನ ಹುದ್ದೆಯಲ್ಲಿ ಯಾಕೆ ಮುಂದುವರೆಯುತ್ತೀರಿ” ಅಂತ ಕೇಳಿದೆ. ಅವರು “ಹೋಗರಿ ಮಾರಾಯರ, ನಿಮ್ಮ, ಬೀದರ್- ಗುಲ್ಬರ್ಗಾ ಎಲ್ಲಾ ಇದ್ದು ಬಾಳೆ ಮಾಡೋ ಅಂಥಾ ಊರು ಅಲ್ಲರಿ, ಯಾವಾಗರೆ ಮೀಟಿಂಗ್‌ಗೆ ಬಂದು ಹೋಗೋ ಊರು. ಅಲ್ಲೆ ಯಾವಾನ ಇರಾಕ ಬರ್ತಾನ,” ಅಂತ ಹೇಳಿದರು. ಅವರು ಉತ್ತರ ಕರ್ನಾಟಕದ ಹಳ್ಳಿಯಲ್ಲಿ ಹುಟ್ಟಿ, ಧಾರವಾಡದಲ್ಲಿ ಓದಿದವರು.

ಇದನ್ನೂ ಓದಿರಿ: ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆ ಟ್ರಂಪ್ ಪದತಲಕ್ಕೆ ಜಾರಿದ್ದು ಹೇಗೆ?

ಪಂಜಾಬ್‌ನಲ್ಲಿ ಒಂದು ಗಾದೆ ಮಾತು ಇದೆ. ‘ಕೇವಲ ಒಂದು ವಾರಾಂತ್ಯಕ್ಕೆ ಮಾತ್ರ ಕೆನಡಾಗೆ ಹೋಗಿ ಬಂದವರು, ಪಂಜಾಬಿ ಬಿಟ್ಟು ಇಂಗ್ಲಿಷು ಮಾತಾಡಲಿಕ್ಕೆ ಶುರು ಮಾಡುತ್ತಾರೆ’ ಅಂತ. ಹಾಗೆಯೇ ಕೆಲವರು ಇಲ್ಲಿಯ ಎರಿ-ಮಸಾರಿ ಮಣ್ಣಿನಲ್ಲಿ ಹುಟ್ಟಿದ್ದರೂ, ‘24 ಹವರ್ ಕಾವೇರಿ ವಾಟರ್’ ಕುಡಿದ ಮೇಲೆ ತಮ್ಮೂರನ್ನು ಥೂಕರಿಸುತ್ತಾರೆ. ‘ಅಲ್ಪವಯಿ ಮೋತಿ ಬಿಂದು’ ಕಾಯಿಲೆಗೆ ಒಳಗಾಗುತ್ತಾರೆ.

ಹಿಂದೊಮ್ಮೆ ರಾಜ್ಯ ಸರಕಾರದವರು ದೊಡ್ಡ ಮನಸ್ಸು ಮಾಡಿ ಮುಧೋಳ ಬೇಟೆ ನಾಯಿ ಸಂಶೋಧನೆ ಕೇಂದ್ರ ಮಾಡಬೇಕು ಅಂತ ಠರಾವು ಮಾಡಿದರು. ಅದಕ್ಕೆ ಸಂಬಂಧಪಟ್ಟ ಜೆನೆಟಿಕ್ ವಿಜ್ಞಾನಿ ಕರಾವಳಿ ಭಾಗದವರು. ಬೆಂಗಳೂರಿನಲ್ಲಿ ಇದ್ದರು. ಅವರು ಬಾಗಲಕೋಟೆಗೆ ಬರಲು ಒಪ್ಪದ ಕಾರಣದಿಂದ ಆ ಕೇಂದ್ರವನ್ನು ಬೆಂಗಳೂರಿನಲ್ಲಿಯೇ ನಡೆಸಿದರು. ಆದರೆ ಅದು ಕಾಟಾಚಾರದ ಕೆಲಸ ಆಗಿತ್ತು. ಈಗ ಅದು ಮುಧೋಳದ ಹತ್ತಿರ ಇದೆ. ತಕ್ಕಮಟ್ಟಿಗೆ ಕೆಲಸ ಮಾಡುತ್ತಿದೆ.

suvarna soda
ಸುವರ್ಣ ಸೌಧ

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಬೆಳಗಾವಿಯಲ್ಲಿ ಸಕ್ಕರೆ ಆಯುಕ್ತರ ಕಚೇರಿ ಆರಂಭಿಸಿದರು. ಈ 25 ವರ್ಷಗಳಲ್ಲಿ ಯಾವ ಒಬ್ಬ ಪುಣ್ಯಾತ್ಮನೂ ಅಲ್ಲಿ ಕಾಯಂ ಆಗಿ ಕೆಲಸ ಮಾಡಲಿಲ್ಲ. ಬಿ.ಎಸ್.ಯಡಿಯೂರಪ್ಪ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ಬೆಳಗಾವಿಯಲ್ಲಿ ಐದು ನೂರು ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಸುವರ್ಣ ಸೌಧ ಕಟ್ಟಿದರು. ‘ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಪಟ್ಟ ಎಲ್ಲ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗುತ್ತದೆ,’ ಎಂದು ಎಲ್ಲರೂ ನಮ್ಮ ಬೆನ್ನಿಗೆ ಕಟ್ಟಿದ ಗಜ್ಜರಿ ತೋರಿಸಿದರು. ಒಂದು ರಾಜ್ಯ ಮಟ್ಟದ ಕಚೇರಿ ಹಾಗೂ ಕೆಲವು ಜಿಲ್ಲಾ ಮಟ್ಟದ ಕಚೇರಿ ಬಿಟ್ಟರೆ ಇಲ್ಲಿಗೆ ಯಾವುದೇ ಪ್ರಮುಖ ಕಚೇರಿ ಇಲ್ಲಿಯವರೆಗೂ ಬಂದಿಲ್ಲ.

ಇದನ್ನೂ ಓದಿರಿ: ಮಸ್ಕ್-ಮಿತ್ತಲ್-ಮುಖೇಶ್ ಕೂಡಾವಳಿ: ಯಾರಿಗೆ ಲಾಭ, ಮೋದಿ ಪಾತ್ರವೇನು?

ವರ್ಷಗಳ ಹಿಂದೆ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲು ಕೃಷ್ಣಾ ಜಲ ಭಾಗ್ಯ ನಿಗಮ ಸ್ಥಾಪನೆ ಮಾಡಲಾಯಿತು. ಅದರ ಮುಖ್ಯ ಕಚೇರಿ ಅಲಮಟ್ಟಿಯಲ್ಲಿ ಆರಂಭಿಸಲಾಯಿತು. ಈಗ ಕಚೇರಿ ಇದೆ. ಅಧಿಕಾರಿಗಳು ಇಲ್ಲ. ಯಾಕೆ ಅಂತ ಕೇಳಿದರೆ, “ಇಲ್ಲಿ ಕೂತರೆ ಕೆಲಸ ಆಗೋದಿಲ್ಲ. ವಿಧಾನಸೌಧಕ್ಕೆ ಹೋಗಲೇಬೇಕು,’’ ಅಂತ ಅಧಿಕಾರಿಗಳು ಅವಲತ್ತುಕೊಳ್ಳುತ್ತಾರೆ.

ನಾನು ಮೈಸೂರಿನಲ್ಲಿ ಇದ್ದಾಗ ಕಣ್ಣು ವೈದ್ಯರ ಸಮಾವೇಶಕ್ಕ ಹೋಗಿದ್ದೆ. ಅಲ್ಲಿ ಒಬ್ಬರು “ರಾಜ್ಯದಲ್ಲಿ ಸುಮಾರು 4,000 ಕಣ್ಣಿನ ವೈದ್ಯರು ಇದ್ದಾರೆ. ಅವರಲ್ಲಿ ಮೂರು ಸಾವಿರಕ್ಕೂ ಹೆಚ್ಚು ತಜ್ಞ ವೈದ್ಯರು ಬೆಂಗಳೂರಿನಲ್ಲಿ ಇದ್ದರೆ, ಉಳಿದವರು ರಾಜ್ಯದ ಎಲ್ಲೆಡೆ ಇದ್ದಾರೆ” ಅಂತ ಹೇಳಿದರು. ನಾನು “ಅಯ್ಯೋ ಪಾಪ. ಬೆಂಗಳೂರಿನವರಿಗೆ ಅಷ್ಟೊಂದು ಜೋರಾದ ಕುರುಡೇ?” ಅಂತ ಕೇಳಿದೆ. ಅದನ್ನು ಜೋಕು ಅಂತ ತಿಳಿದ ಅವರೆಲ್ಲ ಕಣ್ಣಿನಿಂದ ನೀರು ಬರುವಷ್ಟು ನಕ್ಕರು. ಇದು ದಶಕಗಳ ಹಿಂದಿನ ಮಾತು. ಈಗ ತಜ್ಞ ವೈದ್ಯರ ಸಂಖ್ಯೆ ಅನೇಕ ಪ್ರಮಾಣದಲ್ಲಿ ಹೆಚ್ಚಾಗಿರಬಹುದು. ಆದರೆ ಪರಿಮಾಣ ಬದಲಾಗಿರಲಿಕ್ಕಿಲ್ಲ.

(ಮೇಲೆ ಹೇಳಿದ ಎಲ್ಲ ಘಟನೆಗಳು ಸತ್ಯ. ಇಲ್ಲಿ ಬರುವ ಎಲ್ಲ ನಟ- ನಟಿಯರ ಹೆಸರು ನಾನು ಹೇಳಬಹುದು. ನನಗೆ ಅಂಜಿಕೆ ಇಲ್ಲ. ಆದರೆ ಅದು ನನ್ನ ಘನತೆಗೆ ತಕ್ಕುದಲ್ಲ ಅಂತ ನಾನು ಭಾವಿಸುತ್ತೇನೆ).

(‘ಈದಿನ.ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

WhatsApp Image 2025 11 17 at 5.28.02 PM
ಹೃಷಿಕೇಶ ಬಹದ್ದೂರ ದೇಸಾಯಿ
+ posts

ಪತ್ರಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...