ಕೇರಳ ಚುನಾವಣೆ | ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕೆ ನಾಲ್ವರ ಪೈಪೋಟಿ; ಹಿಂದೆ ಸರಿಯುವ ಮಾತೇ ಇಲ್ಲ!

Date:

ಕಾಂಗ್ರೆಸ್‌ನ ನಾಲ್ವರು ನಾಯಕರು ಒಳಗೆಷ್ಟು ಅಸಮಾಧಾನ, ಪೈಪೋಟಿ ಹೊಂದಿದ್ದರೂ ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರಿಗೆ ಬಹಿರಂಗವಾದ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಆದರೆ ನಿಜವಾದ ಕಾದಾಟ ಶುರುವಾಗುವುದು ಚುನಾವಣೆಯ ನಂತರ. ಚುನಾವಣೆಯಲ್ಲಿ ಯುಡಿಎಫ್ ಗೆದ್ದರೆ ಈ ನಾಲ್ವರ ಒಗ್ಗಟ್ಟಿನ ನೈಜ ಸ್ಥಿತಿ ಬಹಿರಂಗವಾಗುವುದು ಖಚಿತ.

ಚುನಾವಣಾ ಆಯೋಗವು ಇತ್ತೀಚೆಗೆ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣಾ ದಿನಾಂಕಗಳನ್ನು ಘೋಷಿಸಿದೆ. ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯ ಈಗಾಗಲೇ ಎಲ್ಲ ಕಡೆ ಆರಂಭವಾಗಿದೆ. ಕೇರಳದಲ್ಲಿ ಎಲ್‌ಡಿಎಫ್‌ ಸತತವಾಗಿ ಮೂರನೇ ಬಾರಿಗೆ ಅಧಿಕಾರ ಪಡೆಯಲು ಯತ್ನಿಸುತ್ತಿದ್ದರೆ, ಯುಡಿಎಫ್‌ ಗದ್ದುಗೆಯನ್ನು ಮರಳಿ ಪಡೆಯುವ ತಂತ್ರ ರೂಪಿಸುತ್ತಿದೆ. ಆದರೆ, ನಾಯಕರುಗಳ ಬಂಡಾಯ, ವೈಮನಸ್ಸು, ಅಸಮಾಧಾನಗಳು ಕಾಂಗ್ರೆಸ್‌ಗೆ ತುಟ್ಟಿಯಾಗುವ ಸಾಧ್ಯತೆಯಿದೆ. ಯುಡಿಎಫ್‌ ನೇತೃತ್ವ ವಹಿಸಿರುವ ಕಾಂಗ್ರೆಸ್‌ನಲ್ಲಿ ಒಂದೇ ಸ್ಥಾನಕ್ಕಾಗಿ ಹಿಂದೆ ಸರಿಯುವ ಮಾತೇ ಇಲ್ಲ ಎನ್ನುತ್ತಾ ನಾಲ್ವರು ಪೈಪೋಟಿ ನಡೆಸುತ್ತಿದ್ದಾರೆ.

ಕೇರಳ ಕಾಂಗ್ರೆಸ್‌ನ ಪ್ರಬಲ ನಾಯಕರುಗಳಾದ ವಿಡಿ ಸತೀಸನ್, ರಮೇಶ್ ಚೆನ್ನಿತ್ತಲ ಮತ್ತು ಕೆ ಸಿ ವೇಣುಗೋಪಾಲ್ ಈಗಾಗಲೇ ಯುಡಿಎಫ್ ಗೆದ್ದರೆ ಕೇರಳ ಮುಖ್ಯಮಂತ್ರಿ ಸ್ಥಾನ ತಮ್ಮದಾಗಬೇಕು ಎಂಬ ಸ್ಪರ್ಧೆಗಿಳಿದಿದ್ದಾರೆ. ಇವರೆಲ್ಲರೂ ಈ ಹಿಂದಿನಿಂದಲೂ ಈ ಪೈಪೋಟಿಯಲ್ಲಿದ್ದರೆ, ಇದೀಗ ಶಶಿ ತರೂರ್ ಕೂಡಾ ಈ ಕಣದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನು ಓದಿದ್ದೀರಾ?: ಕೇರಳ | ಚುನಾವಣೆ ಬಳಿಕ ನೂತನ ಸಿಎಂ ನಿರ್ಧಾರ: ಸಿಪಿಐ ನಾಯಕ ಬಿನೋಯ್ ವಿಶ್ವಂ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪ್ರಧಾನ ಸ್ಥಾನದಲ್ಲಿದ್ದಾರೆ ಸತೀಸನ್

ವಿಧಾನಸಭೆ ವಿರೋಧ ಪಕ್ಷದ ನಾಯಕ ವಿ.ಡಿ ಸತೀಸನ್ ಸಿಎಂ ಸ್ಥಾನದ ಸ್ಫರ್ಧೆಯಲ್ಲಿ ಮೊದಲಿಗರು. ಎರಡು ಬಾರಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಆಡಳಿತ ವಿರೋಧಿ ಅಲೆ ಎಬ್ಬಿಸಿದವರು ಸತೀಸನ್. 2021ರಲ್ಲಿ ಸತೀಸನ್ ಅವರನ್ನು ವಿಪಕ್ಷ ನಾಯಕರಾಗಿ ನೇಮಿಸಿದಾಗ ತೀವ್ರ ವಿವಾದ ಸೃಷ್ಟಿಯಾಗಿತ್ತು. ಕೇರಳ ಕಾಂಗ್ರೆಸ್‌ನಲ್ಲಿ ದಶಕಗಳಿಂದ ನಡೆದುಕೊಂಡು ಬಂದಿದ್ದ ‘ಎ’ (ಉಮ್ಮನ್ ಚಾಂಡಿ ಬಣ) ಮತ್ತು ‘ಐ’ (ಚೆನ್ನಿತ್ತಲ ಬಣ) ಗುಂಪುಗಾರಿಕೆಗೆ ನೀಡಿದ ದೊಡ್ಡ ಹೊಡೆತ ಇದಾಗಿತ್ತು.

ಬಹುಪಾಲು ಯುವ ಶಾಸಕರು ಬದಲಾವಣೆಯನ್ನು ಬಯಸಿ ಸತೀಸನ್ ಪರವಾಗಿ ನಿಂತಿದ್ದು ಹಿರಿಯ ನಾಯಕರಿಗೆ ತಮ್ಮ ಹಿಡಿತ ಸಡಿಲವಾಗುತ್ತಿದೆ ಎಂಬ ಆತಂಕ ಸೃಷ್ಟಿಯಾಗುವಂತೆ ಮಾಡಿತ್ತು. ಇದಲ್ಲದೆ, ನಾಯರ್ ಸರ್ವಿಸ್ ಸೊಸೈಟಿ (ಎನ್‌ಎಸ್‌ಎಸ್) ಮತ್ತು ಶ್ರೀ ನಾರಾಯಣ ಧರ್ಮ ಪರಿಪಾಲನ (ಎಸ್‌ಎನ್‌ಡಿಪಿ) ಯೋಗಮ್‌ನಂತಹ ಹಿಂದೂ ಸಮುದಾಯ ಸಂಘಟನೆಗಳಿಂದ ಸತೀಸನ್ ನಾಯಕತ್ವಕ್ಕೆ ವಿರೋಧ ವ್ಯಕ್ತವಾಗಿತ್ತು. ಈ ಸವಾಲುಗಳನ್ನೆಲ್ಲ ಎದುರಿಸಿ ಮುನ್ನಡೆದವರು ಸತೀಸನ್.

2011ರಲ್ಲಿ ಉಮ್ಮನ್ ಚಾಂಡಿ ಸರ್ಕಾರ ರಚಿಸಿದಾಗ ಎನ್‌ಎಸ್‌ಎಸ್ ಸತೀಸನ್ ಅವರ ಹೆಸರನ್ನು ತಳ್ಳಿಹಾಕಿ ವಿಎಸ್ ಶಿವಕುಮಾರ್ ಅವರನ್ನು ಸಂಪುಟದಲ್ಲಿ ನಾಯರ್ ಅಭ್ಯರ್ಥಿಯನ್ನಾಗಿ ಮಾಡಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಎನ್ಎಸ್ಎಸ್ ಜೊತೆಗಿನ ತಮ್ಮ ಸಂಬಂಧವನ್ನು ಸರಿಪಡಿಸಿಕೊಳ್ಳುವ ಪ್ರಯತ್ನವನ್ನು ಸತೀಸನ್ ಮಾಡುತ್ತಿದ್ದಾರೆ. ಆದರೆ, ಫಲ ಇಂದಿಗೂ ಸಿಕ್ಕಿಲ್ಲ. ಇನ್ನೊಂದೆಡೆ ಈಳವ ಸಮುದಾಯದ ಎಸ್ಎನ್‌ಡಿಪಿ ಯೋಗಂ ಕಾಂಗ್ರೆಸ್‌ಗೆ ವಿರೋಧ ವ್ಯಕ್ತಪಡಿಸುತ್ತಿದೆ. ಸತೀಸನ್ ಜತೆ ಅದರ ನಾಯಕ ವೆಲ್ಲಪ್ಪಳ್ಳಿ ನಟೇಶನ್ ಮಾತಿನ ಚಕಮಕಿಯಲ್ಲಿ ತೊಡಗಿದ್ದಾರೆ.

ಕೇರಳದ ಜನಸಂಖ್ಯೆಯ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ನಾಯರ್ ಮತ್ತು ಈಳವ ಸಮುದಾಯಗಳು ಇವೆ. ಈ ಸಮುದಾಯ ಸಂಘಟನೆಗಳೊಂದಿಗಿನ ಸತೀಸನ್ ದುರ್ಬಲ ಸಂಬಂಧ ಹೊಂದಿರುವಾಗ ಇವರನ್ನೇ ಕಾಂಗ್ರೆಸ್ ತನ್ನ ಸಿಎಂ ಅಭ್ಯರ್ಥಿಯನ್ನಾಗಿಸುವುದು ಅಪಾಯಕಾರಿ. ಸತೀಸನ್‌ಗೂ ಇದರ ಅರಿವಿರುವ ಕಾರಣ ಅಲ್ಪಸಂಖ್ಯಾತ ಸಮುದಾಯಗಳು ಮತ್ತು ಇತರೆ ಸಮುದಾಯದತ್ತ ಗುರಿಯಿಟ್ಟಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ನ ಅಧ್ಯಕ್ಷರಾಗಿ, ಸತೀಸನ್ ಜಮಾತೆ-ಇ-ಇಸ್ಲಾಮಿ ಜತೆ ಮೈತ್ರಿಗೆ ಮುಂದಾಗುತ್ತಾರೆ ಎಂಬ ಸುದ್ದಿಯು ಮಿತ್ರಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಅಸಮಾಧಾನಕ್ಕೆ ಕಾರಣವಾಗಿದೆ. ಐಯುಎಂಎಲ್ ಮತ್ತು ಜಮಾತ್-ಎ-ಇಸ್ಲಾಮಿ ನಡುವೆ ದಶಕಗಳಿಂದ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ.

ಇವೆಲ್ಲವುದರ ನಡುವೆ ಚರ್ಚ್ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸತೀಸನ್ ವಿವಿಧ ಕ್ರಿಶ್ಚಿಯನ್ ಪಂಗಡಗಳ ಬೆಂಬಲವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಸತೀಸನ್ ಅವರಿಗೆ ಇರುವ ಹಾಸ್ಯಪ್ರಜ್ಞೆ ಮತ್ತು ಬೈಬಲ್ ಶ್ಲೋಕಗಳ ಜ್ಞಾನವು ಕ್ರೈಸ್ತ ಸಮುದಾಯದ ನಡುವೆ ಸತೀಸನ್ ಅವರಿಗೆ ಉತ್ತಮ ಸ್ಥಾನ ನೀಡಿದೆ. ಆದರೆ ಶಶಿ ತರೂರ್ ಅವರಂತೆ ಸತೀಸನ್ ಇನ್ನೂ ಕ್ರೈಸ್ತ ಸಮುದಾಯದ ಅಗಾಧ ಬೆಂಬಲವನ್ನು ಹೊಂದಿಲ್ಲ.

ರಮೇಶ್ ಚೆನ್ನಿತ್ತಲ ಸಿಎಂ ಕಣದಲ್ಲಿ

ರಮೇಶ್ ಚೆನ್ನಿತ್ತಲ ಅವರ 2016-21ರವರೆಗೆ ವಿಧಾನಸಭೆ ವಿಪಕ್ಷ ನಾಯಕರಾಗಿದ್ದವರು. ಇವರನ್ನೇ ವಿಪಕ್ಷ ನಾಯಕರನ್ನಾಗಿ ಮುಂದುವರೆಸಬೇಕು ಎಂಬ ಆಗ್ರಹಗಳಿದ್ದವು. ಆದರೆ ಯುವಕರಿಗೆ ಮಣೆ ಹಾಕಲು ಮುಂದಾದ ಯುಡಿಎಫ್ ಸತೀಸನ್ ಅವರಿಗೆ ಸ್ಥಾನ ನೀಡಿತು. ಅಂದಿನಿಂದ ರಮೇಶ್ ಮತ್ತು ಸತೀಸನ್ ನಡುವೆ ಮನಸ್ತಾಪಗಳಿವೆ. ಚೆನ್ನಿತ್ತಲ ವಿಪಕ್ಷ ನಾಯಕರಾಗಿದ್ದಾಗಲೂ ಉಮ್ಮನ್ ಚಾಂಡಿ ಅವರ ನೆರಳಿನಲ್ಲಿಯೇ ಇದ್ದರು, ಅವರ ಕೈಗೊಂಬೆಯಾಗಿದ್ದರು ಎಂಬ ಆರೋಪಗಳೂ ಇವೆ. ಇನ್ನೊಂದೆಡೆ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಚೆನ್ನಿತ್ತಲ ಚುನಾವಣಾ ಆಯೋಗ ನಿಗದಿಪಡಿಸಿದ ಮಿತಿಗಿಂತ ಹೆಚ್ಚಿನ ಹಣವನ್ನು ಚೆನ್ನಿತ್ತಲ ಬಳಸಿದ್ದಾರೆ ಎಂಬ ಆರೋಪಗಳೂ ಇವೆ.

ಏನೇ ಆದರೂ, ಚೆನ್ನಿತ್ತಲ ಅವರ ಹಿರಿತನವನ್ನು ಸುಲಭವಾಗಿ ಕಡೆಗಣಿಸಲಾಗದು. ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ಮುನ್ನಡೆಸಿದ್ದ ಮಮತಾ ಬ್ಯಾನರ್ಜಿ ಮತ್ತು ಚೆನ್ನಿತ್ತಲ ಸಮಕಾಲೀನರು. ಕರುಣಾಕರನ್ ಅವರ ನೀಲಿ ಕಣ್ಣಿನ ಹುಡುಗನಾಗಿದ್ದ ಚೆನ್ನಿತ್ತಲ ಮೊದಲ ಬಾರಿಗೆ 40 ವರ್ಷಗಳ ಹಿಂದೆ 1986ರಲ್ಲಿ ಸಂಪುಟ ಸಚಿವರಾಗಿದ್ದರು. ಇದೀಗ 70 ವರ್ಷವಾಗುತ್ತಿದ್ದು ಮುಖ್ಯಮಂತ್ರಿ ಹುದ್ದೆಯನ್ನು ಹೊರತುಪಡಿಸಿ ಬೇರೆ ಹುದ್ದೆಯನ್ನು ಪಡೆಯಲು ಚೆನ್ನಿತ್ತಲ ಸಿದ್ದರಿಲ್ಲ. ಈಗಾಗಲೇ ತಮ್ಮ ವಿಪಕ್ಷ ನಾಯಕ ಸ್ಥಾನವನ್ನು ಕಳೆದುಕೊಂಡ ಆಘಾತದಿಂದ ಹೊರಬರುತ್ತಿರುವ ಚೆನ್ನಿತ್ತಲ ಸಿಎಂ ಸ್ಥಾನದ ಭರವಸೆಯಲ್ಲಿದ್ದಾರೆ.

ಹಿರಿತನವನ್ನು ಬದಿಗಿಟ್ಟರೆ ಚೆನ್ನಿತ್ತಲ ಯುಡಿಎಫ್‌ನಲ್ಲಿ ಉತ್ತಮ ಸಂಬಂಧ ಹೊಂದಿದ್ದಾರೆ. ಎನ್‌ಎಸ್‌ಎಸ್‌ ಮತ್ತು ಎಸ್‌ಎನ್‌ಡಿಪಿ ಯೋಗಮ್‌ಗೂ ಅತ್ಯಂತ ಸ್ವೀಕಾರಾರ್ಹ ವ್ಯಕ್ತಿ ಚೆನ್ನಿತ್ತಲ. ಹಾಗಿದ್ದಾಗ ಚೆನ್ನಿತ್ತಲ ಯಾವುದೇ ಕಾರಣಕ್ಕೂ ಸಿಎಂ ಸ್ಥಾನ ಬಿಟ್ಟುಕೊಡುವ ಸಾಧ್ಯತೆಯಿಲ್ಲ. ಸತೀಸನ್ ಮತ್ತು ಚೆನ್ನಿತ್ತಲ ನಡುವೆ ಸಿಎಂ ಸ್ಥಾನದ ಸಂಘರ್ಷ ನಡೆಯುವಾಗ ಇಬ್ಬರ ಜಗಳದಲ್ಲಿ ಮೂರನೇ ವ್ಯಕ್ತಿ ಲಾಭ ಪಡೆಯಬಹುದೇನೋ ಎಂಬಂತೆ ಕೆ ಸಿ ವೇಣುಗೋಪಾಲ್ ಸ್ಪರ್ಧೆಯಲ್ಲಿ ಕಾಣಿಸಿಕೊಳ್ಳುತ್ತಾರೆ.

ರಾಹುಲ್ ಗಾಂಧಿಯ ವಿಶ್ವಾಸಾರ್ಹ ವ್ಯಕ್ತಿ ವೇಣುಗೋಪಾಲ್

ಕೆ.ಸಿ ವೇಣುಗೋಪಾಲ್ ಮತ್ತು ಸತೀಸನ್ ಇಬ್ಬರೂ ಸಮಕಾಲೀನರು. ವೇಣುಗೋಪಾಲ್ ಮೊದಲು ಉಮ್ಮನ್ ಚಾಂಡಿ (2004-06) ಅವರ ಅಡಿಯಲ್ಲಿ ಸಚಿವರಾಗಿದ್ದವರು. ಲೋಕಸಭೆಯಲ್ಲಿ (2009-14) ತಮ್ಮ ಮೊದಲ ಅವಧಿಯಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದರು. ರಾಹುಲ್ ಗಾಂಧಿಯವರ ವಿಶ್ವಾಸವನ್ನು ಗಳಿಸುವ ವೇಣುಗೋಪಾಲ್ ಅವರ ಸಾಮರ್ಥ್ಯವೇ ಅವರನ್ನು ರಾತ್ರೋರಾತ್ರಿ ಕೇರಳದಲ್ಲಿ ಪಕ್ಷದ ‘ಹೈಕಮಾಂಡ್’ ಆಗುವಂತೆ ಮಾಡಿತು. ಏನೇ ಆದರೂ ಪ್ರತಿ ಭಾನುವಾರ ತಮ್ಮ ಕ್ಷೇತ್ರವಾದ ಆಲಪ್ಪುಳಕ್ಕೆ ಮೀಸಲಿಡುತ್ತಾ ಬಂದಿದ್ದಾರೆ. ಇತ್ತೀಚೆಗೆ, ಕೇರಳದಲ್ಲೇ ಹೆಚ್ಚುವರಿ ಸಮಯವನ್ನು ಕಳೆಯುತ್ತಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಕೆಲಸಕ್ಕೆ ಇಳಿದಿದ್ದಾರೆ. ಸಿಎಂ ಸ್ಥಾನಕ್ಕೆ ಸಿದ್ಧತೆ ನಡೆಸಲೆಂದೇ ಈ ತಯಾರಿ ಎಂಬ ಮಾತುಗಳೂ ಇವೆ.

ಕಳೆದ ಐದು ವರ್ಷಗಳಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಬಣಗಳ ಸಂಬಂಧ ಬಿಗಡಾಯಿಸಿದ್ದಾಗ ವೇಣುಗೋಪಾಲ್, ಚೆನ್ನಿತ್ತಲ ಅವರ ನಿಷ್ಠಾವಂತರನ್ನು ತಮ್ಮ ಪಾಳಯಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಸತೀಸನ್ ಮತ್ತು ಚೆನ್ನಿತ್ತಲ ಅಧಿಕಾರ ಹಂಚಿಕೆಯ ಬಗ್ಗೆ ಒಪ್ಪಂದಕ್ಕೆ ಬರಲು ಸಾಧ್ಯವಾಗದಿದ್ದಾಗ ಮಾತ್ರ ವೇಣುಗೋಪಾಲ್ ಮಧ್ಯ ಬರುವ ಸಾಧ್ಯತೆಯಿದೆ. ಆದರೆ ವೇಣುಗೋಪಾಲ್ ರಾಜ್ಯಕ್ಕೆ ಸೀಮಿತರಾದರೆ ರಾಷ್ಟ್ರೀಯ ರಾಜಕೀಯದಲ್ಲಿ ಕಷ್ಟವಾಗಬಹುದೆಂಬ ಕಾರಣಕ್ಕೆ ಸಿಎಂ ಸ್ಥಾನ ನೀಡಲು ರಾಷ್ಟ್ರೀಯ ಹೈಕಮಾಂಡ್ ಹಿಂಜರಿಯುವ ಸಾಧ್ಯತೆಯೂ ಇದೆ. ಹಾಗಿರುವಾಗ ಸತೀಸನ್ ಮತ್ತು ಚೆನ್ನಿತ್ತಲ ಒಪ್ಪಂದಕ್ಕೆ ಬರಲು ವಿಫಲವಾದರೆ ಕಾಂಗ್ರೆಸ್‌ಗೆ ಇರುವ ನಾಲ್ಕನೇ ಆಕಾಂಕ್ಷಿ ಶಶಿ ತರೂರ್.

ಶಶಿ ತರೂರ್ ಕಾಂಗ್ರೆಸ್‌ಗೆ ದುಬಾರಿ

ಪಿಣರಾಯಿ ವಿಜಯನ್ ಅವರ ಅಧಿಕಾರಾವಧಿಯ ಅರ್ಧಭಾಗದಲ್ಲಿ ಕಾಂಗ್ರೆಸ್ ಬಹುತೇಕ ಕೇರಳದಲ್ಲಿ ಹತೋಟಿ ಕಳೆದುಕೊಳ್ಳುತ್ತಿದೆ ಎಂಬ ಹಂತಕ್ಕೆ ಬಂದಿದ್ದಾಗ ಕೇರಳದಲ್ಲಿ ಕಾಂಗ್ರೆಸ್ ಅನ್ನು ಶಶಿ ತರೂರ್ ಮಾತ್ರ ಉಳಿಸಬಲ್ಲರು ಎಂದು ಭಾವಿಸಲಾಗಿತ್ತು. ಆ ಹಂತದಲ್ಲಿ, ಐಯುಎಂಎಲ್, ಎನ್‌ಎಸ್‌ಎಸ್ ಶಶಿ ತರೂರ್ ಅವರನ್ನು ಬೆಂಬಲಿಸುತ್ತಿತ್ತು. ಆದರೆ ಇಸ್ರೇಲ್ ಮೇಲೆ ಹಮಾಸ್ ದಾಳಿ ಮತ್ತು ಕೇರಳ ರಾಜಕೀಯದ ಮೇಲೆ ಅದರ ಪ್ರಭಾವ ಸೇರಿದಂತೆ ಹಲವು ವಿಚಾರಗಳ ಬಗ್ಗೆ ತರೂರ್ ಹೇಳಿಕೆ ಕೊಂಚ ಕಾಂಗ್ರೆಸ್‌ಗೆ ದುಬಾರಿಯಾದಂತಿದೆ.

ಕೇರಳ ಮತ್ತು ರಾಷ್ಟ್ರೀಯ ರಾಜಕೀಯ ಎರಡನ್ನೂ ದಾಟಿ ಸಾಗುವ ಪ್ರಯತ್ನ ಮಾಡಿದವರು ಶಶಿ ತರೂರ್. ಆಪರೇಷನ್ ಸಿಂಧೂರ ವಿಚಾರದಲ್ಲಿ ತರೂರ್ ನಿಲುವು ಕಾಂಗ್ರೆಸ್‌ಗೆ ತದ್ವಿರುದ್ಧವಾದುದ್ದು. ಈ ವೇಳೆ ಕಾಂಗ್ರೆಸ್‌ನಿಂದ ತರೂರ್ ದೂರವಾಗುತ್ತಾರೆ ಎಂಬ ಊಹಾಪೋಹಗಳೂ ಹುಟ್ಟಿಕೊಂಡವು. ರಾಹುಲ್ ಮತ್ತು ತರೂರ್ ನಡುವಿನ ವಾಗ್ವಾದಗಳು, ಯುಡಿಎಫ್ ಪ್ರಚಾರವು ಕೊನೆಯ ಹಂತಕ್ಕೆ ಪ್ರವೇಶಿಸುತ್ತಿದ್ದಂತೆ ಕೊಂಚ ತಗ್ಗಿತ್ತು. ಆದರೆ ಇಂದಿಗೂ ಸಿಎಂ ಆಕಾಂಕ್ಷಿಯಾಗಿಯೇ ಶಶಿ ತರೂರ್ ಉಳಿದಿದ್ದಾರೆ.

ಸಿಎಂ ಆಗುವ ನಿರೀಕ್ಷೆ ಹೊಂದಿರುವ ನಾಲ್ವರೂ ವಯನಾಡಿನಲ್ಲಿ ನಡೆದ ಕಾಂಗ್ರೆಸ್ ಶಿಬಿರದಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ನಾಲ್ವರು ಒಳಗೆಷ್ಟು ಅಸಮಾಧಾನ, ಪೈಪೋಟಿ ಹೊಂದಿದ್ದರೂ ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರಿಗೆ ಬಹಿರಂಗವಾದ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಆದರೆ ನಿಜವಾದ ಕಾದಾಟ ಶುರುವಾಗುವುದು ಚುನಾವಣೆಯ ನಂತರ. ಚುನಾವಣೆಯಲ್ಲಿ ಯುಡಿಎಫ್ ಗೆದ್ದರೆ ಈ ನಾಲ್ವರ ಒಗ್ಗಟ್ಟಿನ ನೈಜ ಸ್ಥಿತಿ ಬಹಿರಂಗವಾಗುವುದು ಖಚಿತ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಧ್ಯಪ್ರಾಚ್ಯ ಸಂಘರ್ಷ | ಕದನ ವಿರಾಮ ಎಂದ ಟ್ರಂಪ್; ಮಾತುಕತೆ ನಡೆದಿಲ್ಲವೆಂದ ಇರಾನ್

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಾನಾ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...