ಭಾರತಕ್ಕೆ 9 ಬ್ರಿಟಿಷ್‌ ವಿವಿ | ದಾಸ್ಯ ವಿಮೋಚನೆಯ ಭ್ರಮೆ; ಮೆಕಾಲೆಗೆ ಬೈದು, ಬ್ರಿಟಿಷರಿಗೆ ರೆಡ್ ಕಾರ್ಪೆಟ್ ಹಾಸಿದ ಮೋದಿ

Date:

ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರನ್ನು ಉದ್ದೇಶಿಸಿ ಮಾತನಾಡುವಾಗ, “2035ರ ವೇಳೆಗೆ ಮೆಕಾಲೆ ದಾಸ್ಯದಿಂದ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬಿಡಿಸಿಕೊಳ್ಳಬೇಕು” ಎಂದು ಘಂಟಾಘೋಷವಾಗಿ ಆಹ್ವಾನ ನೀಡುತ್ತಾರೆ. ಇನ್ನೊಂದೆಡೆ, ಅದೇ ಕೇಂದ್ರ ಸರ್ಕಾರದ ಆಡಳಿತಾವಧಿಯಲ್ಲಿ ಬ್ರಿಟನ್‌ನ ಒಂಬತ್ತು ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಭಾರತದಲ್ಲಿ ತಮ್ಮ ಕ್ಯಾಂಪಸ್‌ಗಳನ್ನು ಸ್ಥಾಪಿಸಲು ರೆಡ್ ಕಾರ್ಪೆಟ್ ಸ್ವಾಗತ ಪಡೆದಿವೆ. ಇವುಗಳಲ್ಲಿ ಮೂರು ವಿವಿಗಳಿಗೆ ಸ್ವತಃ ಪ್ರಧಾನಿಯವರ ತವರು ರಾಜ್ಯವಾದ ಗುಜರಾತ್‌ನಲ್ಲಿ ನೆಲೆಯಾಗುತ್ತಿವೆ.

​ಇದೇನಾ ಪ್ರಧಾನಿಯವರ ‘ದಾಸ್ಯಮುಕ್ತಿ’ಯ ಪರಿಕಲ್ಪನೆ? ಮೆಕಾಲೆ ರೂಪಿಸಿದ ಶಿಕ್ಷಣ ಪದ್ಧತಿಯ ವಿರುದ್ಧದ ‘ಯುದ್ಧ’ ಘೋಷಣೆಯ ನಡುವೆಯೇ, ಅದೇ ಮೆಕಾಲೆಯ ಮೂಲ ನೆಲೆಯಾದ ಬ್ರಿಟನ್‌ನ ವಿಶ್ವವಿದ್ಯಾಲಯಗಳಿಗೆ ದೇಶದ ಶೈಕ್ಷಣಿಕ ಕ್ಷೇತ್ರವನ್ನು ಸಂಪೂರ್ಣವಾಗಿ ತೆರೆದಿರುವುದು ಕೇಂದ್ರ ಸರ್ಕಾರದ ಇಬ್ಬಗೆತನವನ್ನು ಸ್ಪಷ್ಟಪಡಿಸುತ್ತದೆ. ಇದು ಕೇವಲ ಒಂದು ನೀತಿ ವೈರುಧ್ಯವೇ ಅಥವಾ ಹುಸಿ ರಾಷ್ಟ್ರೀಯತೆಯ ಮುಖವಾಡವನ್ನು ಧರಿಸಿ ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಬಹುರಾಷ್ಟ್ರೀಯ ಬಂಡವಾಳಶಾಹಿ ಹಿತಾಸಕ್ತಿಗಳಿಗೆ ಅಡ ಇಡುವ ಹುನ್ನಾರವೇ ಎಂಬ ಪ್ರಶ್ನೆ ಈಗ ದೇಶದ ಪ್ರತಿಯೊಬ್ಬರನ್ನೂ ಕಾಡುತ್ತಿದೆ.

ಘೋಷಣೆಗೆ ಸೀಮಿತವಾದ ‘ಮೆಕಾಲೆ’ ವಿರೋಧ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

​1835ರಲ್ಲಿ ಥಾಮಸ್ ಬಾಬಿಂಗ್ಟನ್ ಮೆಕಾಲೆ ಅವರು ಭಾರತದಲ್ಲಿ ಇಂಗ್ಲಿಷ್ ಭಾಷೆಯ ಶಿಕ್ಷಣ ಪದ್ಧತಿಯನ್ನು ಜಾರಿಗೊಳಿಸಿದ್ದರು. ​ಪ್ರಧಾನಿ ಮೋದಿ ಅವರು ಮೆಕಾಲೆ ದಾಸ್ಯದ ಕುರಿತು ಮಾತನಾಡುವುದು, ವಿಶೇಷವಾಗಿ ಬಿಜೆಪಿ ಬೆಂಬಲಿತ ಪ್ರಬಲ ರಾಷ್ಟ್ರೀಯತೆಯ ಭಾವನೆಗಳಿಗೆ ಸದಾ ಇಂಧನ ಒದಗಿಸಿದೆ. ಆದರೆ, ಈ ಘೋಷಣೆ ಕೇವಲ ಮಾತಿಗೆ ಮತ್ತು ಚುನಾವಣಾ ರಾಜಕಾರಣಕ್ಕೆ ಸೀಮಿತವೇ ಎಂಬ ಅನುಮಾನಗಳು ಈಗ ಬಲವಾಗಿವೆ. ಮೆಕಾಲೆ ದಾಸ್ಯದಿಂದ ಮುಕ್ತಿ ಎಂದರೆ ದೇಶೀಯ ಶಿಕ್ಷಣ ಪದ್ಧತಿ, ಭಾರತೀಯ ಭಾಷೆಗಳಿಗೆ ಪ್ರಾಮುಖ್ಯತೆ ಮತ್ತು ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವ ಸಂಶೋಧನೆಗಳಿಗೆ ಒತ್ತು ನೀಡುವುದಾಗಿರಬೇಕು. ಆದರೆ, ಇಲ್ಲಿ ಆಗುತ್ತಿರುವುದು ವಿದೇಶಿ ವಿಶ್ವವಿದ್ಯಾಲಯಗಳಿಗೆ ಅತಿ ಸುಲಭವಾಗಿ ಭಾರತದ ಮಾರುಕಟ್ಟೆಯನ್ನು ತೆರೆದುಕೊಡುವುದು.

ಶಿಕ್ಷಣ ವ್ಯವಸ್ಥೆಯ ಕಾರ್ಪೊರೇಟೀಕರಣ

​ಬ್ರಿಟಿಷ್ ವಿವಿಗಳ ಆಗಮನದ ಹಿಂದೆ ಅಡಗಿರುವ ದೊಡ್ಡ ಅಪಾಯವೆಂದರೆ ಭಾರತದ ಶಿಕ್ಷಣ ವ್ಯವಸ್ಥೆಯ ಸಂಪೂರ್ಣ ‘ಕಾರ್ಪೊರೇಟೀಕರಣ’. ಈ ವಿದೇಶಿ ವಿವಿಗಳು ಮೂಲಭೂತವಾಗಿ ಲಾಭದಾಯಕ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತವೆ. ಅವು ತರುವ ‘ಉತ್ತಮ ಗುಣಮಟ್ಟ’ದ ಶಿಕ್ಷಣವು ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಕೈಗೆಟುಕುವುದಿಲ್ಲ. ಲಕ್ಷಾಂತರ ರೂಪಾಯಿಗಳ ದುಬಾರಿ ಶುಲ್ಕವನ್ನು ಭರಿಸುವ ಸಾಮರ್ಥ್ಯ ಇರುವ ಶ್ರೀಮಂತ ವರ್ಗದ ಮಕ್ಕಳಿಗೆ ಮಾತ್ರ ಇವು ಸೀಮಿತವಾಗುತ್ತವೆ.

Modi Uk 1

​ಇದು ದೇಶದಲ್ಲಿ ಮತ್ತೊಂದು ‘ದ್ವಿಮುಖ’ ಶಿಕ್ಷಣ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ. ಒಂದೆಡೆ ದುಬಾರಿ ಮತ್ತು ವಿದೇಶಿ ಬ್ರಾಂಡ್‌ಗಳ ಶಿಕ್ಷಣ, ಇನ್ನೊಂದೆಡೆ ಸರ್ಕಾರಿ ಮತ್ತು ಸಾಮಾನ್ಯ ಖಾಸಗಿ ಕಾಲೇಜುಗಳಲ್ಲಿ ಲಭ್ಯವಿರುವ ಕಳಪೆ ಮಟ್ಟದ ಶಿಕ್ಷಣ. ಈಗಾಗಲೇ ಖಾಸಗೀಕರಣದ ಸುಳಿಯಲ್ಲಿ ಸಿಲುಕಿರುವ ನಮ್ಮ ಉನ್ನತ ಶಿಕ್ಷಣ ಕ್ಷೇತ್ರದ ಮೇಲೆ ಇದು ಮಾರಕ ಪರಿಣಾಮ ಬೀರಲಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರಗಳು ಬದಲಾದರೂ ಉತ್ತರ ಕರ್ನಾಟಕದ ಜನರ ಬದುಕು ಬದಲಾಗಲಿಲ್ಲವೇಕೆ?

​ಪ್ರಧಾನಿ ಮೋದಿ ‘ದಾಸ್ಯಮುಕ್ತಿ’ಯ ಬಗ್ಗೆ ಮಾತನಾಡಿದಾಗ, ನಮ್ಮ ದೇಶದ ಪ್ರತಿಭಾವಂತ ಪ್ರಾಧ್ಯಾಪಕರು, ಸಂಶೋಧಕರು ಮತ್ತು ವಿಶ್ವವಿದ್ಯಾಲಯಗಳನ್ನು ಬಲಪಡಿಸುವ ಕಾರ್ಯ ನಡೆಯಬೇಕಿತ್ತು. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕೇವಲ ‘ವಿದೇಶಿ ಗುಣಮಟ್ಟ’ವನ್ನು ಆಮದು ಮಾಡಿಕೊಳ್ಳುವತ್ತ ಗಮನ ಹರಿಸಿದೆ. ಇದು ದೇಶೀಯ ಸಂಸ್ಥೆಗಳ ಆತ್ಮವಿಶ್ವಾಸವನ್ನು ಕುಗ್ಗಿಸಿ, ವಿದೇಶಿ ಬ್ರಾಂಡ್‌ಗಳ ಮೇಲಿನ ಅವಲಂಬನೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಗುಜರಾತ್‌ಗೆ ವಿಶೇಷ ಮಮಕಾರ ಏಕೆ?

​ಒಂಬತ್ತು ಬ್ರಿಟಿಷ್ ವಿಶ್ವವಿದ್ಯಾಲಯಗಳಲ್ಲಿ ಮೂರು ವಿಶ್ವವಿದ್ಯಾಲಯಗಳು ಪ್ರಧಾನಿ ಮೋದಿಯವರ ತವರು ರಾಜ್ಯವಾದ ಗುಜರಾತ್‌ನಲ್ಲಿ ತಮ್ಮ ಕೇಂದ್ರಗಳನ್ನು ತೆರೆಯಲು ನಿರ್ಧರಿಸಿವೆ. ಇದರಲ್ಲಿ ‘ಗಿಫ್ಟ್ ಸಿಟಿ’ ಪ್ರಮುಖ ಕೇಂದ್ರವಾಗಬಹುದು. ಗುಜರಾತ್‌ಗೆ ಈ ವಿಶೇಷ ಮಮಕಾರ ಏಕೆ? ಇದು ರಾಜ್ಯಕ್ಕೆ ವಿದೇಶಿ ಹೂಡಿಕೆ ತರುವ ಆರ್ಥಿಕತೆಯ ವಿಚಾರವೇ ಅಥವಾ ಕೇವಲ ರಾಜಕೀಯ ಮತ್ತು ವೈಯಕ್ತಿಕ ಪ್ರತಿಷ್ಠೆಯ ವಿಚಾರವೇ?

Modi Uk

ಒಂದು ವೇಳೆ ನಿಜವಾಗಿಯೂ ಮೆಕಾಲೆ ದಾಸ್ಯದಿಂದ ಮುಕ್ತಿ ಬಯಸುವುದಾದರೆ, ಈ ಪ್ರತಿಷ್ಠಿತ ವಿವಿಗಳು ದೇಶದ ಶೈಕ್ಷಣಿಕವಾಗಿ ಹಿಂದುಳಿದ ರಾಜ್ಯಗಳಿಗೆ, ಈಶಾನ್ಯ ರಾಜ್ಯಗಳಿಗೆ ಅಥವಾ ಗ್ರಾಮೀಣ ಪ್ರದೇಶಗಳಿಗೆ ಪ್ರೋತ್ಸಾಹದೊಂದಿಗೆ ಹೋಗಬೇಕಿತ್ತು. ಆದರೆ, ಅವುಗಳು ಸುಲಭವಾಗಿ ಹಣ ಮತ್ತು ಉದ್ಯಮ ಸ್ನೇಹಿ ನೀತಿಗಳು ಇರುವ ಗುಜರಾತ್‌ನಂತಹ ನಗರ ಕೇಂದ್ರಗಳಿಗೆ ಹೋಗುತ್ತಿರುವುದು, ಈ ಯೋಜನೆಯ ಹಿಂದಿನ ಲಾಭದಾಸೆ ಮತ್ತು ರಾಜಕೀಯ ಉದ್ದೇಶಗಳನ್ನು ಜಾಹೀರು ಮಾಡುತ್ತದೆ.

ಆತ್ಮನಿರ್ಭರತೆಯಲ್ಲ ವಿದೇಶಿ ನಿರ್ಭರತೆ

ಕೇಂದ್ರ ಸರ್ಕಾರವು ‘ಆತ್ಮನಿರ್ಭರ ಭಾರತ್’ ಘೋಷಣೆಯಡಿ ದೇಶೀಯ ಉತ್ಪಾದನೆ ಮತ್ತು ಶಕ್ತಿಯನ್ನು ಹೆಚ್ಚಿಸುವ ಕುರಿತು ಮಾತನಾಡುತ್ತದೆ. ಆದರೆ, ಶಿಕ್ಷಣದ ವಿಚಾರದಲ್ಲಿ ‘ಆತ್ಮನಿರ್ಭರತೆ’ಯ ಬದಲಿಗೆ ‘ವಿದೇಶಿ ನಿರ್ಭರತೆ’ಯನ್ನು ಉತ್ತೇಜಿಸುತ್ತಿದೆ. ಬ್ರಿಟಿಷ್ ವಿವಿಗಳ ಆಮದು ಎಂದರೆ ಬ್ರಿಟಿಷ್ ಪಠ್ಯಕ್ರಮ, ಬ್ರಿಟಿಷ್ ದೃಷ್ಟಿಕೋನ ಮತ್ತು ಬ್ರಿಟಿಷ್ ಶಿಕ್ಷಣದ ಮಾದರಿಯನ್ನು ಭಾರತದಲ್ಲಿ ಸ್ಥಾಪಿಸುವುದು ಎಂದರ್ಥ. ಇದು ಮೆಕಾಲೆ ಪದ್ಧತಿಯ ವಿಸ್ತರಣೆಯೇ ಹೊರತು, ವಿಮೋಚನೆಯಲ್ಲ.

​ನರೇಂದ್ರ ಮೋದಿ ಅವರ ಸರ್ಕಾರವು ಮೆಕಾಲೆ ದಾಸ್ಯದಿಂದ ಮುಕ್ತಿ ಪಡೆಯುವ ಬಗ್ಗೆ ದೊಡ್ಡ ಮಟ್ಟದ ಪ್ರಚಾರ ಗಿಟ್ಟಿಸುತ್ತಿದ್ದರೂ, ವಾಸ್ತವದಲ್ಲಿ, ವಿದೇಶಿ ಶಿಕ್ಷಣದ ದಾಸ್ಯಕ್ಕೆ ದೇಶವನ್ನು ಮತ್ತಷ್ಟು ತಳ್ಳುತ್ತಿದೆ. ಬ್ರಿಟಿಷ್ ವಿವಿಗಳ ಪ್ರವೇಶಕ್ಕೆ ನೀಡಿರುವ ಈ ಅನುಮತಿ, ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಬಂಡವಾಳಶಾಹಿಯ ಹಿಡಿತಕ್ಕೆ ಸಿಲುಕಿಸಿ, ಶಿಕ್ಷಣವನ್ನು ಕೇವಲ ವ್ಯಾಪಾರ ಸರಕನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಇಟ್ಟಿರುವ ಒಂದು ದೊಡ್ಡ ಹೆಜ್ಜೆಯಾಗಿದೆ. ‘ರಾಷ್ಟ್ರೀಯತೆ’ಯ ಮಾತು ಕೇವಲ ರಾಜಕೀಯಕ್ಕೆ ಸೀಮಿತವಾಗಿದ್ದರೆ, ‘ಲಾಭ’ ಮತ್ತು ‘ಕಾರ್ಪೊರೇಟ್ ಹಿತಾಸಕ್ತಿ’ಗಳೇ ಸರ್ಕಾರದ ನಿಜವಾದ ಮಾರ್ಗದರ್ಶಿ ಸೂತ್ರಗಳಾಗಿವೆ ಎಂಬುದನ್ನು ಈ ಬೆಳವಣಿಗೆ ಸ್ಪಷ್ಟಪಡಿಸುತ್ತದೆ. ​

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...