ಅಂಕಿ ಅಂಶಗಳ ಮೆರಗು, ನೀತಿಯಲ್ಲಿ ಮೌನ; ನಿರ್ಮಲಾ ಅವರ 9ನೇ ಬಜೆಟ್ ಹೇಳಿದ್ದೇನು? ಮರೆಮಾಚಿದ್ದೇನು?

Date:

ಬಜೆಟ್ ದಿನವೇ ಷೇರು ಮಾರುಕಟ್ಟೆ ಕುಸಿತ ಕಂಡಿತು. ಫ್ಯೂಚರ್ಸ್ ಮತ್ತು ಆಪ್ಷನ್ಸ್ ಮೇಲಿನ ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (STT) ಹೆಚ್ಚಳ ಹೂಡಿಕೆದಾರರಲ್ಲಿ ಆತಂಕ ಹುಟ್ಟಿಸಿತು. ಡೆರಿವೇಟಿವ್ಸ್ ವ್ಯಾಪಾರದಲ್ಲಿ ಭಾಗವಹಿಸುವ ಚಿಲ್ಲರೆ ಹೂಡಿಕೆದಾರರಲ್ಲಿ 93% ಜನರು ಹಣ ಕಳೆದುಕೊಳ್ಳುತ್ತಾರೆ ಎಂಬ ಸರ್ಕಾರದ ವಾದ ಸತ್ಯವಾಗಿರಬಹುದು. ಆದರೆ ಜೂಜನ್ನು ತೆರಿಗೆ ಹೆಚ್ಚಿಸುವ ಮೂಲಕ ನಿಯಂತ್ರಿಸಬಹುದು ಎಂಬ ನಂಬಿಕೆ ಅನುಮಾನಾಸ್ಪದ.

ಭಾರತದ ಕೇಂದ್ರ ಬಜೆಟ್ ಎಂದರೆ ಕೇವಲ ವಾರ್ಷಿಕ ಆದಾಯ–ವೆಚ್ಚಗಳ ಲೆಕ್ಕಾಚಾರವಲ್ಲ. ಅದು ಸರ್ಕಾರದ ರಾಜಕೀಯ ಮನೋಭಾವ, ಆರ್ಥಿಕ ದಿಕ್ಕು ಮತ್ತು ಭವಿಷ್ಯದ ಆದ್ಯತೆಗಳ ಪ್ರತಿಬಿಂಬ. ಈ ಹಿನ್ನೆಲೆಯಲ್ಲೇ ನೋಡಿದರೆ, ನಿರ್ಮಲಾ ಸೀತಾರಾಮನ್ ಮಂಡಿಸಿದ ಒಂಬತ್ತನೇ ಬಜೆಟ್ ದೇಶದ ಆರ್ಥಿಕತೆಗೆ ಹೊಸ ತಿರುವು ನೀಡುವ ಬದಲು, “ಎಲ್ಲವೂ ಸರಿಯಾಗಿಯೇ ಸಾಗುತ್ತಿದೆ” ಎಂಬ ಆತ್ಮತೃಪ್ತ ಭಾವನೆಯ ಘೋಷಣೆಯಂತಿತ್ತು.

ಹಣಕಾಸು ಸಚಿವೆ ತಮ್ಮ ಭಾಷಣದಲ್ಲಿ ಭಾರತದ ಆರ್ಥಿಕತೆ ಬಲಿಷ್ಠವಾಗಿದೆ ಎಂದು ಘೋಷಿಸಿದರು. 2026ನೇ ಸಾಲಿನಲ್ಲಿ 10% ನಾಮಮಾತ್ರ ಜಿಡಿಪಿ ಬೆಳವಣಿಗೆಯ ನಿರೀಕ್ಷೆ, 7%ಕ್ಕಿಂತ ಹೆಚ್ಚು ನೈಜ ಬೆಳವಣಿಗೆ ಇವೆಲ್ಲವೂ ಕೇಳಲು ಆಕರ್ಷಕವಾಗಿದ್ದವು. ಆದರೆ ಈ ಅಂಕಿ-ಅಂಶಗಳ ಹಿಂದೆ ಅಡಗಿರುವ ಸಂಕೀರ್ಣ ವಾಸ್ತವಗಳನ್ನು ಬಜೆಟ್ ಸ್ಪಷ್ಟವಾಗಿ ತೋರ್ಪಡಿಸಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಂಕಿ-ಸಂಖ್ಯೆಗಳ ಮಿಂಚಿನಲ್ಲಿ ಮಂಕಾದ ಉದ್ಯೋಗದ ಹಸ್ತ

ಭಾರತದ ಐದು ದೊಡ್ಡ ಐಟಿ ಕಂಪನಿಗಳು 2025ರ ಮೊದಲ ಒಂಬತ್ತು ತಿಂಗಳಲ್ಲಿ ಕೇವಲ 17 ಉದ್ಯೋಗಗಳನ್ನು ಸೇರಿಸಿದ್ದವೆಂಬ ಅಂಕಿಯು ಅತ್ಯಂತ ದೊಡ್ಡ ಆಘಾತಕಾರಿ ವಿಷಯ. ಸರ್ಕಾರ ನಿರುದ್ಯೋಗ ಪ್ರಮಾಣ ಇಳಿಯುತ್ತಿದೆ ಎಂದು ಹೇಳುತ್ತಾ, ಉದ್ಯೋಗದ ಗುಣಮಟ್ಟವೇನು ಎಂಬ ಪ್ರಶ್ನೆಗೆ ಉತ್ತರ ಕೊಡದೇ ಮಾತು ಜಾರಿತು. ಕೃತಕ ಬುದ್ಧಿಮತ್ತೆ (AI) ಭಾರತದ ಬ್ಯಾಕ್‌ಆಫೀಸ್ ಆರ್ಥಿಕತೆಯನ್ನು ನಿಧಾನವಾಗಿ ಆದರೆ ದೃಢವಾಗಿ ಕದಡುತ್ತಿರುವಾಗ, ಈ ಬಜೆಟ್ ಆ ಬದಲಾವಣೆಗೆ ಸಿದ್ಧತೆ ತೋರಲಿಲ್ಲ ಎಂಬುದು ನಿಚ್ಚಳವಾಗಿತ್ತು.

ಷೇರು ಮಾರುಕಟ್ಟೆಯ ಎಚ್ಚರಿಕೆಯ ಸಂದೇಶ

ಬಜೆಟ್ ದಿನವೇ ಷೇರು ಮಾರುಕಟ್ಟೆ ಕುಸಿತ ಕಂಡಿತು. ಫ್ಯೂಚರ್ಸ್ ಮತ್ತು ಆಪ್ಷನ್ಸ್ ಮೇಲಿನ ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (STT) ಹೆಚ್ಚಳ ಹೂಡಿಕೆದಾರರಲ್ಲಿ ಆತಂಕ ಹುಟ್ಟಿಸಿತು. ಡೆರಿವೇಟಿವ್ಸ್ ವ್ಯಾಪಾರದಲ್ಲಿ ಭಾಗವಹಿಸುವ ಚಿಲ್ಲರೆ ಹೂಡಿಕೆದಾರರಲ್ಲಿ 93% ಜನರು ಹಣ ಕಳೆದುಕೊಳ್ಳುತ್ತಾರೆ ಎಂಬ ಸರ್ಕಾರದ ವಾದ ಸತ್ಯವಾಗಿರಬಹುದು. ಆದರೆ ಜೂಜನ್ನು ತೆರಿಗೆ ಹೆಚ್ಚಿಸುವ ಮೂಲಕ ನಿಯಂತ್ರಿಸಬಹುದು ಎಂಬ ನಂಬಿಕೆ ಅನುಮಾನಾಸ್ಪದ. ತೆರಿಗೆ ಹೆಚ್ಚಿದಂತೆ ಅಪಾಯ ಕಡಿಮೆಯಾಗುವುದಿಲ್ಲ; ಬದಲಾಗಿ ವೆಚ್ಚ ಹೆಚ್ಚುತ್ತದೆ ಎಂಬುದನ್ನಷ್ಟೇ ಹೇಳಬಹುದು.

ಯೂರಿಯಾ ಸಬ್ಸಿಡಿ: ರಾಜಕೀಯ ಭೀತಿ, ಆರ್ಥಿಕ ಮೌನ

ಈ ಬಜೆಟ್‌ನ ಅತಿದೊಡ್ಡ ಮೌನ ಯೂರಿಯಾ ಸಬ್ಸಿಡಿಯ ಕುರಿತು. ಯೂರಿಯಾ ಸಬ್ಸಿಡಿ ಮಣ್ಣಿನ ಆರೋಗ್ಯ ಹಾಳುಮಾಡುತ್ತದೆ, ಅಸಮತೋಲನ ಗೊಬ್ಬರ ಬಳಕೆಯನ್ನು ಉತ್ತೇಜಿಸುತ್ತದೆ, ಕೈಗಾರಿಕೆ ಮತ್ತು ಕಳ್ಳಸಾಗಣೆಗೆ ಲಾಭ ಮಾಡಿಕೊಡುತ್ತದೆ -ಇವೆಲ್ಲವೂ ಬಹುಕಾಲದಿಂದಲೇ ತಿಳಿದಿರುವ ಸಂಗತಿಗಳು.

ಹಿಂದೆ ಯೂರಿಯಾ ಸಬ್ಸಿಡಿ ಕಡಿತದ ಪ್ರಯತ್ನಗಳು ರೈತರ ವಿರೋಧದಿಂದ ವಿಫಲವಾಗಿವೆ. ಆದರೆ ಪಿ. ಚಿದಂಬರಂ ಡೀಸೆಲ್ ಸಬ್ಸಿಡಿಯನ್ನು ಕಡಿತ ಮಾಡಿದ ವಿಧಾನ ರಾಜಕೀಯ ಧೈರ್ಯದ ಉತ್ತಮ ಉದಾಹರಣೆ. ಪ್ರತಿ ಬಾರಿ ಕೆಲವು ಪೈಸೆಗಳಷ್ಟು ಮಾತ್ರ ಬೆಲೆ ಹೆಚ್ಚಿಸಿ, ಎರಡು–ಮೂರು ವರ್ಷಗಳಲ್ಲಿ ಸಮಸ್ಯೆಯನ್ನು ನಿವಾರಿಸಿದರು. ಇದೇ ವಿಧಾನವನ್ನು ಯೂರಿಯಾ ಸಬ್ಸಿಡಿಗೂ ಅನ್ವಯಿಸಬಹುದಿತ್ತು. ಆದರೆ, ಈ ಬಜೆಟ್ ಆ ದಾರಿಯನ್ನು ಹಿಡಿದಿಲ್ಲ. ಆದರೂ ಚುನಾವಣೆಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ಸರ್ಕಾರ ಆ ಧೈರ್ಯವನ್ನೂ ತೋರಿಸಲಿಲ್ಲ.

ಹಣಕಾಸು ಶಿಸ್ತು ಮತ್ತು ಆಮೆ ವೇಗದ ಅಭಿವೃದ್ದಿ

ಹಣಕಾಸು ಕೊರತೆಯನ್ನು 4.3%ಕ್ಕೆ ಇಳಿಸುವ ಗುರಿ, ಸಾಲ–ಜಿಡಿಪಿ ಅನುಪಾತವನ್ನು ನಿಧಾನವಾಗಿ ಕಡಿತಗೊಳಿಸುವ ಯೋಜನೆ—ಇವೆಲ್ಲವೂ ಶ್ಲಾಘನೀಯ. ಆದರೆ ಈ ವೇಗದಲ್ಲಿ 40% ಗುರಿ ತಲುಪಲು ಇನ್ನೂ ದಶಕಗಳೇ ಬೇಕಾಗುತ್ತವೆ. ಆರ್ಥಿಕ ಶಿಸ್ತು ಎಂಬುದು ಘೋಷಣೆಯಿಂದಲ್ಲ, ಧೈರ್ಯಶಾಲಿ ನಿರ್ಧಾರಗಳಿಂದ ಸಾಧ್ಯ ಎಂಬುದನ್ನು ತಿಳಿಯಬೇಕಿತ್ತು.

ಖಾಸಗಿ ಹೂಡಿಕೆ ಮತ್ತು ವಿದೇಶಿ ಬಂಡವಾಳ

ಸರ್ಕಾರಿ ಮೂಲಸೌಕರ್ಯ ವೆಚ್ಚ ₹12.2 ಲಕ್ಷ ಕೋಟಿಗೆ ಏರಿದರೂ, ಖಾಸಗಿ ಹೂಡಿಕೆ ಜಿಡಿಪಿಯ ಸುಮಾರು 12%ರಲ್ಲೇ ಅಂಟಿಕೊಂಡಿದೆ. ವಿದೇಶಿ ನೇರ ಹೂಡಿಕೆ (FDI) ಕೂಡ ಜಿಡಿಪಿಯ 0.1%ರಷ್ಟಿಗೆ ಕುಸಿದಿದೆ. ಭೂಸ್ವಾಧೀನ, ಕಾರ್ಮಿಕ ನಿಯಮಗಳು, ನಿಯಂತ್ರಣಾತ್ಮಕ ಅಡೆತಡೆಗಳ ಪ್ರಶ್ನೆಗಳಿಗೆ ಈ ಬಜೆಟ್ ಸ್ಪಷ್ಟ ಉತ್ತರ ಕೊಟ್ಟಿಲ್ಲ.

ಇದನ್ನೂ ಓದಿ ಯುಗಧರ್ಮ | ಭಾರತ-ಅಮೆರಿಕ ಒಪ್ಪಂದವು ರೈತರ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸುತ್ತದೆ

ಈ ಎಲ್ಲಾ ಬೆಳವಣಿಗೆಗಳ ನೋಟವು ಹಳೆಯ ಕೌಶಲ್ಯ ಭಾರತ ಮಿಷನ್, ಮೇಕ್‌ ಇನ್‌ ಇಂಡಿಯಾ, ಸ್ವಚ್ಚ ಭಾರತ್ ಅಭಿಯಾನದ ರೀತಿ ನೆನಪಿಗೆ ಮಾತ್ರ- ಕೃತಿಗಲ್ಲ ಎಂಬ ತತ್ವವನ್ನು ಸಾರದಿದ್ದರಷ್ಟೇ ಸಾಕು. ಚಲಿಸುತ್ತಿರುವ ದೋಣಿಗೂ ಸರಿಯಾದ ಮಾರ್ಗದ ಅಗತ್ಯವಿದೆ, ಇಲ್ಲದಿದ್ದರೆ ನೀರೆಲ್ಲಾ ದಾರಿಯಂತೆ ಎಂಬಂತೆ ಆರ್ಥಿಕತೆಯೂ ದಿಕ್ಕಾಪಾಲಾಗುತ್ತದೆ ಎಂಬುದನ್ನು ಅರಿಯಬೇಕಿದೆ.

Rajanilkanth
ರಜನಿಕಾಂತ್‌ ಸಿ ಎಸ್‌
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...