80 ವರ್ಷ ಕಳೆದರೂ ಭಾರತಕ್ಕೆ ತಲುಪಿಲ್ಲ ನೇತಾಜಿ ಚಿತಾಭಸ್ಮ

Date:

2016ರಲ್ಲಿ ಬಿಡುಗಡೆಯಾದ ಡಿಕ್ಲಾಸಿಫೈಡ್ (ರಹಸ್ಯ ಮುಕ್ತ) ಕಡತಗಳ ಪ್ರಕಾರ, ಭಾರತ ಸರ್ಕಾರವು ಚಿತಾಭಸ್ಮವನ್ನು ಇಟ್ಟಿರುವ ಕಲಶದ ಸುರಕ್ಷತೆ, ಪೂಜೆ ಹಾಗೂ ದೇವಾಲಯದ ನಿರ್ವಹಣಾ ವೆಚ್ಚಕ್ಕಾಗಿ ಪ್ರತಿವರ್ಷ ಸುಮಾರು 10 ಲಕ್ಷ ಜಪಾನಿ ಯೆನ್ (Yen) ಹಣವನ್ನು ದೇವಾಲಯಕ್ಕೆ ನೀಡುತ್ತಿದೆ. ಇದು ಭಾರತೀಯ ರೂಪಾಯಿಗಳಲ್ಲಿ ಸರಿಸುಮಾರು 4 ರಿಂದ 5 ಲಕ್ಷ ರೂ.ಗಳಾಗುತ್ತದೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು 1945ರ ಆಗಸ್ಟ್ 18ರಂದು ತೈವಾನ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟರು. ಅವರು ಸಾವನ್ನಪ್ಪಿ ಬರೋಬ್ಬರಿ 80 ವರ್ಷಗಳು ಕಳೆದರೂ ಅವರ ಚಿತಾಭಸ್ಮ ಇನ್ನೂ ಭಾರತಕ್ಕೆ ತಲುಪಿಲ್ಲ. ಇಂದಿಗೂ ವಿದೇಶಿ ನೆಲ್ಲದಲ್ಲಿಯೇ ಇದೆ ಎನ್ನಲಾಗಿದೆ. ನೇತಾಜಿಯವರ ಪುತ್ರಿ ಅನಿತಾ ಬೋಸ್ ಫಾಫ್ ಮತ್ತು ಇತರ ಕುಟುಂಬ ಸದಸ್ಯರು ಚಿತಾಭಸ್ಮವನ್ನು ಭಾರತಕ್ಕೆ ಮರಳಿ ತರಬೇಕೆಂದು ದಶಕಗಳಿಂದ ಒತ್ತಾಯಿಸುತ್ತಿದ್ದಾರೆ. ಈಗ ಮತ್ತೆ ಹೊಸದಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಚಿತಾಭಸ್ಮವು ಪ್ರಸ್ತುತ ಜಪಾನ್‌ನ ಟೋಕಿಯೊದಲ್ಲಿರುವ ರೆಂಕೋಜಿ ಬೌದ್ಧ ದೇವಾಲಯದಲ್ಲಿ (Renko-ji Temple) ಇದೆ ಎಂದು ನಂಬಲಾಗಿದೆ. 1945ರ ಸೆಪ್ಟೆಂಬರ್ 14ರಿಂದ ಅಲ್ಲಿರುವ ಚಿತಾಭಸ್ಮದ ನಿರ್ವಹಣೆಯ ವೆಚ್ಚವನ್ನು ಭಾರತ ಸರ್ಕಾರವೇ ಭರಿಸುತ್ತಿದೆ. ಅಧಿಕೃತ ದಾಖಲೆಗಳ ಪ್ರಕಾರ, 1967ರಿಂದ ನಿರಂತರವಾಗಿ ನಿರ್ವಹಣಾ ವೆಚ್ಚವನ್ನು ಭಾರತ ಸರ್ಕಾರ ಪಾವತಿಸುತ್ತಿದೆ. ಇವೆಲ್ಲವುದರ ನಡುವೆ ಬೋಸ್ ಕುಟುಂಬ ದಶಕಗಳಿಂದ ಚಿತಾಭಸ್ಮ ಭಾರತಕ್ಕೆ ತರಬೇಕು ಎಂದು ಕಾನೂನು ಹೋರಾಟ ನಡೆಸುತ್ತಿದೆ.

ಇದನ್ನು ಓದಿದ್ದೀರಾ? ಕೊಪ್ಪಳ | ನೇತಾಜಿ ಕನಸಿನ ಭಾರತ ನಿರ್ಮಾಣ ಇಂದಿನ ವಿದ್ಯಾರ್ಥಿಗಳ ಜವಾಬ್ದಾರಿ; ಗಂಗರಾಜ್ ಅಳ್ಳಳಿ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಾರ್ಚ್ 12ರಂದು ನೇತಾಜಿಯವರ ಮೊಮ್ಮಗ ಆಶೀಶ್ ರಾಯ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ತೆಗೆದುಕೊಳ್ಳಲು ನಿರಾಕರಿಸಿದ್ದು, ಅರ್ಜಿದಾರರು ಅರ್ಜಿಯನ್ನು ಪಡೆದಿದ್ದಾರೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಾಂಚೋಲಿ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ನೇತಾಜಿಯವರ ಉತ್ತರಾಧಿಕಾರಿಯಾದ ಅವರ ಪುತ್ರಿ ಅನಿತಾ ಬೋಸ್ ಫಾಫ್ ಅವರೇ ನೇರವಾಗಿ ಅರ್ಜಿ ಸಲ್ಲಿಸುವುದು ಸೂಕ್ತ ಎಂದು ಅಭಿಪ್ರಾಯಿಸಿದ್ದಾರೆ.

ಜತೆಗೆ “ಈ ಅರ್ಜಿಯ ಎಷ್ಟು ಬಾರಿ ಕೋರ್ಟ್‌ನಲ್ಲಿ ವಿಚಾರಣೆಗೆ ಒಳಪಟ್ಟಿದೆ, ನಿಜವಾಗಿಯೂ ಚಿತಾಭಸ್ಮ ಎಲ್ಲಿದೆ? ಅದು ಬೋಸ್ ಅವರದ್ದೇ ಎನ್ನುವುದಕ್ಕೆ ಸಾಕ್ಷಿಯೇನಿದೆ?” ಎಂಬ ಮೊದಲಾದ ಪ್ರಶ್ನೆಗಳನ್ನು ಕೋರ್ಟ್‌ ಎತ್ತಿದೆ. ಹಾಗೆಯೇ ಕುಟುಂಬ ಸದಸ್ಯರಲ್ಲೇ ಈ ವಿಷಯದಲ್ಲಿ ಭಿನ್ನಾಭಿಪ್ರಾಯ ಇರುವುದನ್ನು ಕೋರ್ಟ್ ಗಮನಿಸಿದೆ. ಅರ್ಜಿದಾರರ ಪರ ವಾದಿಸಿರುವ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ನೇತಾಜಿಯವರ ಪುತ್ರಿ ಅನಿತಾ ಬೋಸ್ ಅವರು ಈ ಅರ್ಜಿಗೆ ಬೆಂಬಲ ಸೂಚಿಸಿದ್ದಾರೆ, ಶೀಘ್ರದಲ್ಲೇ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ಸದ್ಯ ತೈವಾನ್ ವಿಮಾನ ಅಪಘಾತದಲ್ಲಿ ನೇತಾಜಿ ಮೃತಪಟ್ಟರು ಎಂಬ ವಾದದಲ್ಲೇ ಭಿನ್ನಾಭಿಪ್ರಾಯಗಳಿವೆ. ಅಭಿಮಾನಿಗಳು ಮತ್ತು ಕುಟುಂಬದ ಒಂದು ವರ್ಗ ಇಂದಿಗೂ ಈ ವಾದವನ್ನು ಒಪ್ಪುತ್ತಿಲ್ಲ. ಆ ಚಿತಾಭಸ್ಮ ನೇತಾಜಿಯವರದ್ದೇ ಎಂಬ ಬಗ್ಗೆಯೂ ಅನುಮಾನಗಳಿವೆ. ಚಿತಾಭಸ್ಮದ ಡಿಎನ್ಎ ಪರೀಕ್ಷೆ ನಡೆಸಿ ಅದು ನೇತಾಜಿಯವರದ್ದೇ ಎಂದು ಖಚಿತಪಡಿಸಿಕೊಳ್ಳಬೇಕು ಎಂಬ ಒತ್ತಾಯವೂ ಇದೆ. ಆದರೆ, ಅದರಿಂದ ಡಿಎನ್ಎ ಹೊರತೆಗೆಯುವುದು ತಾಂತ್ರಿಕವಾಗಿ ಸವಾಲಿನ ಕೆಲಸ.

ಇದನ್ನು ಓದಿದ್ದೀರಾ? ನೇತಾಜಿ ದೇಶವನ್ನು ಸ್ವತಂತ್ರಗೊಳಿಸಲು ಹೋರಾಡಿದ ಅಪ್ರತಿಮ ದೇಶಭಕ್ತ: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತ ಸರ್ಕಾರ ಈಗಾಗಲೇ ನೇತಾಜಿ ಸಾವಿನ ಬಗ್ಗೆ ತನಿಖೆಗೆ ಮೂರು ಆಯೋಗಗಳನ್ನು ರಚಿಸಿತ್ತು. ಶಾನವಾಜ್ ಖಾನ್ ಸಮಿತಿ (1956) ವಿಮಾನ ಅಪಘಾತದಲ್ಲಿ ಸಾವು ಸಂಭವಿಸಿದೆ ಎಂದು ವರದಿ ನೀಡಿತ್ತು. ಜಿ.ಡಿ. ಖೋಸ್ಲಾ ಆಯೋಗ (1970) ಸಮಿತಿ ಕೂಡಾ ಇದೇ ವಾದವನ್ನು ಎತ್ತಿ ಹಿಡಿಯಿತು. ಮುಖರ್ಜಿ ಆಯೋಗ (1999) ಮಾತ್ರ ವಿಮಾನ ಅಪಘಾತದಲ್ಲಿ ನೇತಾಜಿ ಸಾಯಲಿಲ್ಲ, ರೆಂಕೋಜಿ ದೇವಾಲಯದಲ್ಲಿರುವ ಚಿತಾಭಸ್ಮ ಅವರದ್ದಲ್ಲ ಎಂದು ಭಿನ್ನವಾದ ವರದಿ ನೀಡಿತು. ಆದರೆ ಸರ್ಕಾರ ಅದನ್ನು ತಿರಸ್ಕರಿಸಿತು.

ಇವೆಲ್ಲವುದರ ನಡುವೆ ನೇತಾಜಿಯವರ ಮಗಳು ಅನಿತಾ ಬೋಸ್ ಫಾಫ್ ಅವರು ರೆಂಕೋಜಿ ದೇವಾಲಯದಲ್ಲಿರುವುದು ತನ್ನ ತಂದೆಯ ಚಿತಾಭಸ್ಮವೇ ಎಂದು ನಂಬಿದ್ದಾರೆ. “ನನ್ನ ತಂದೆ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು, ಅವರ ಚಿತಾಭಸ್ಮವು ಕೊನೆಯ ಪಕ್ಷ ಸ್ವತಂತ್ರ ಭಾರತದ ಮಣ್ಣನ್ನು ಸೇರಬೇಕು” ಎಂದು ವಿನಂತಿಸುತ್ತಿದ್ದಾರೆ. ಇನ್ನು ಭಾರತ ಸರ್ಕಾರವು 1950ರ ದಶಕದಿಂದಲೂ ಅಂದರೆ ಜವಾಹರಲಾಲ್ ನೆಹರು ಪ್ರಧಾನಿ ಆಗಿದ್ದ ಕಾಲದಿಂದಲೂ ಚಿತಾಭಸ್ಮ ನಿರ್ವಹಣೆಯ ವೆಚ್ಚ ಭರಿಸುತ್ತಿದೆ. 2016ರಲ್ಲಿ ಬಿಡುಗಡೆಯಾದ ಡಿಕ್ಲಾಸಿಫೈಡ್ (ರಹಸ್ಯ ಮುಕ್ತ) ಕಡತಗಳ ಪ್ರಕಾರ, ಭಾರತ ಸರ್ಕಾರವು ಚಿತಾಭಸ್ಮವನ್ನು ಇಟ್ಟಿರುವ ಕಲಶದ ಸುರಕ್ಷತೆ, ಪೂಜೆ ಮತ್ತು ದೇವಾಲಯದ ನಿರ್ವಹಣಾ ವೆಚ್ಚಕ್ಕಾಗಿ ಪ್ರತಿವರ್ಷ ಸುಮಾರು 10 ಲಕ್ಷ ಜಪಾನಿ ಯೆನ್ (Yen) ಹಣವನ್ನು ದೇವಾಲಯಕ್ಕೆ ನೀಡುತ್ತಿದೆ. ಇದು ಭಾರತೀಯ ರೂಪಾಯಿಗಳಲ್ಲಿ ಸರಿಸುಮಾರು 4 ರಿಂದ 5 ಲಕ್ಷ ರೂ.ಗಳಾಗುತ್ತದೆ. 1967ರಿಂದ 2008ರ ವರೆಗಿನ ಅವಧಿಯಲ್ಲಿ ಭಾರತ ಸರ್ಕಾರವು ಈ ಉದ್ದೇಶಕ್ಕಾಗಿ ಒಟ್ಟು ಸುಮಾರು 53 ಲಕ್ಷ ರೂಪಾಯಿಗಳನ್ನು ವ್ಯಯಿಸಿದೆ.

ಈ ವೆಚ್ಚದ ಬಗ್ಗೆ ದೇಶದಲ್ಲಿ ಹಲವು ಬಾರಿ ಕಾನೂನು ಮತ್ತು ರಾಜಕೀಯ ಚರ್ಚೆಗಳು ನಡೆದಿವೆ. ಮುಖರ್ಜಿ ಆಯೋಗವು ಆ ಚಿತಾಭಸ್ಮ ನೇತಾಜಿಯವರದ್ದಲ್ಲ” ಎಂದು ವರದಿ ನೀಡಿದಾಗ, ಈ ಖರ್ಚನ್ನು ನಿಲ್ಲಿಸಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಕೂಡ ಸಲ್ಲಿಕೆಯಾಗಿತ್ತು. ಸರ್ಕಾರ ವರದಿ ತಿರಸ್ಕರಿಸಿ ಚಿತಾಭಸ್ಮದ ನಿರ್ವಹಣೆಯನ್ನು ಮುಂದುವರಿಸಿಕೊಂಡು ಬಂದಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪುದುಚೆರಿ ಚುನಾವಣೆ | ‘ಇಂಡಿಯಾ’ ಗೊಂದಲ ನಿವಾರಣೆ: ಕಾಂಗ್ರೆಸ್ 16, ಡಿಎಂಕೆ 14 ಕ್ಷೇತ್ರಗಳಲ್ಲಿ ಸ್ಪರ್ಧೆ

ಪುದುಚೆರಿಯ 'ಇಂಡಿಯಾ' ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಕಾಂಗ್ರೆಸ್‌ ಪಕ್ಷಗಳ...

ತಮಿಳುನಾಡು ಚುನಾವಣೆ | ಎಐಎಡಿಎಂಕೆ 178, ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧೆ

ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಲೇ ಬೇಕೆಂದು ಪಣ...

ಮಧ್ಯಪ್ರಾಚ್ಯ ಸಂಘರ್ಷ | ಕದನ ವಿರಾಮ ಎಂದ ಟ್ರಂಪ್; ಮಾತುಕತೆ ನಡೆದಿಲ್ಲವೆಂದ ಇರಾನ್

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಾನಾ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...