ಶಿಕ್ಷಣ ಕ್ಷೇತ್ರದಲ್ಲಿ AI ಕ್ರಾಂತಿ: ಸಾಧ್ಯತೆ ಮತ್ತು ಸವಾಲುಗಳೇನು?

Date:

ಶಿಕ್ಷಣ ಕ್ಷೇತ್ರದಲ್ಲಿನ AI ಕ್ರಾಂತಿಯಿಂದ ಶಿಕ್ಷಕರ ಪಾತ್ರ ಹೊಸ ರೂಪ ಪಡೆದುಕೊಳ್ಳುತ್ತಿದೆ. ಹೊಸ ರೂಪದ ಜತೆ ಜತೆಗೆ ಭವಿಷ್ಯದ ತರಗತಿಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಮಾನವ ಬುದ್ಧಿಮತ್ತೆ ಒಟ್ಟಿಗೆ ನಡೆದಾಗ ಮಾತ್ರ ನಿಜವಾದ ಶಿಕ್ಷಣ ಜೀವಂತವಾಗಿರುತ್ತದೆ.

ಇಂದಿನ ತಂತ್ರಜ್ಞಾನವು ಮಾನವ ಜೀವನದ ಪ್ರತಿಯೊಂದು ಕ್ಷೇತ್ರಕ್ಕೂ ನುಗ್ಗಿದೆ. ಬ್ಯಾಂಕಿಂಗ್‌ನಿಂದ ವೈದ್ಯಕೀಯದವರೆಗೂ; ಸಾರಿಗೆಯಿಂದ ಕಲೆಯವರೆಗೂ ಎಲ್ಲೆಡೆ ಕೃತಕ ಬುದ್ಧಿಮತ್ತೆ(AI)ಯ ಗಾಳಿ ಆವರಿಸಿಕೊಳ್ಳುತ್ತಿದೆ. ಪ್ರತಿಯೊಂದು ಕ್ಷೇತ್ರವೂ ಎಐ ಸ್ಪರ್ಶದಿಂದ ನವೀನ ರೂಪ ಪಡೆಯುತ್ತಿದೆ. ಶಿಕ್ಷಣ ಕ್ಷೇತ್ರವೂ ಅದರಿಂದ ಹೊರತಾಗಿಲ್ಲ. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳೆರಡೂ ಡಿಜಿಟಲ್ ಕಲಿಕೆಯನ್ನು ಉತ್ತೇಜಿಸುತ್ತಿರುವ ಈ ಕಾಲದಲ್ಲಿ, ʼತರಗತಿʼ, ʼಗುರು-ಶಿಷ್ಯʼ ಎಂಬ ಸಾಂಪ್ರದಾಯಿಕ ಪದ್ಧತಿಗಳು ಪುನರ್‌ ವ್ಯಾಖ್ಯಾನಗೊಳ್ಳುವಷ್ಟು ಬದಲಾವಣೆಯ ಹಾದಿಯಲ್ಲಿವೆ. ಬೆರಳತುದಿಯಲ್ಲೇ ಮಾಹಿತಿ ಪಡೆಯಬಹುದಾದಾಗ ಶಿಕ್ಷಕರ ಅಗತ್ಯವಿದೆಯೇ? ಹಾಗಾದರೆ ಶಿಕ್ಷಕನ ಸ್ಥಾನವನ್ನು ಎಐ ತುಂಬಬಹುದೇ? ಅಷ್ಟು ಸಂವೇದನೆ ತಂತ್ರಜ್ಞಾನಕ್ಕಿದೆಯೇ? ಭಾರತದಂತಹ ದೇಶಗಳಲ್ಲಿ ಶಿಕ್ಷಣ ಕ್ಷೇತ್ರದ ತಾಂತ್ರಿಕ ಸವಾಲುಗಳೇನು? ಸಂಪೂರ್ಣ ಎಐ ಅಳವಡಿಕೆಗೂ ಮುನ್ನ ಎಷ್ಟು ತಯಾರಿ ಅಗತ್ಯ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದೂ ಮುಖ್ಯವೇ.

ಶಿಕ್ಷಣ ಪದ್ಧತಿ ಶುರುವಾದ ಆರಂಭಿಕ ದಿನಗಳಲ್ಲಿದ್ದ ಗುರುಕುಲ ವ್ಯವಸ್ಥೆ ಕಾಲಕ್ಕೆ ತಕ್ಕಂತೆ ಮಾರ್ಪಾಡಾಗುತ್ತಾ ಬಂದಿದೆ. ಹಿಂದೆ ಶಿಕ್ಷಕರೇ ಮಾಹಿತಿ, ಮಾರ್ಗದರ್ಶನ ಮತ್ತು ಜ್ಞಾನದ ಮೂಲವೂ ಆಗಿದ್ದರು. ತರಗತಿಯಲ್ಲಿ ಅವರು ಹೇಳುವ ಪ್ರತಿ ಮಾತು ಪುಸ್ತಕದಷ್ಟು ಮಹತ್ವ ಪಡೆದಿರುತ್ತಿತ್ತು. ವಿದ್ಯಾರ್ಥಿಗಳು ಅವರಿಂದಲೇ ಕಲಿಯುತ್ತಿದ್ದರು, ಅವರಿಂದಲೇ ಪ್ರೇರಣೆ ಪಡೆಯುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ. ಗೂಗಲ್‌ ಬಂದ ಬಳಿಕವಂತೂ ವಿಶ್ವದ ಜ್ಞಾನವನ್ನು ಒಂದೇ ಕ್ಲಿಕ್ಕಿನಲ್ಲಿ ಪಡೆಯುವಷ್ಟು ಸಲೀಸು. ಕೊರೋನ ಸಮಯದಲ್ಲಂತೂ ಮೊಬೈಲ್‌, ಇಂಟರ್ನೆಟ್‌ಗಳ ಅತಿಯಾದ ಬಳಕೆಯಿಂದ ತಂತ್ರಜ್ಞಾನದ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಕ್ಕಿತು. ವಿಡಿಯೋ ಕ್ಲಾಸ್‌ಗಳು, ಆನ್‌ಲೈನ್‌ ಕೋರ್ಸ್‌ಗಳು, ವರ್ಚುವಲ್‌ ಕ್ಲಾಸ್‌ರೂಮ್‌ಗಳು, ಇಂಟರಾಕ್ಟೀವ್ ಸಾಫ್ಟ್‌ವೇರ್‌ಗಳು ಎನ್ನುವ ಪರಿಕಲ್ಪನೆಗಳು ಗ್ರಾಮೀಣ ಭಾಗಕ್ಕೂ ಹೊಕ್ಕಿದ್ದು ಆಗಲೇ. ಇವುಗಳಿಂದ ಶಿಕ್ಷಕರಿಗಿಂತ ವಿದ್ಯಾರ್ಥಿಗಳೇ ಹೆಚ್ಚು ತಿಳಿದುಕೊಳ್ಳುತ್ತಿದ್ದಾರೆ, ಮುಂದಿದ್ದಾರೆ ಎಂದು ಹೇಳಬಹುದು.

Gemini Generated Image p0s8kcp0s8kcp0s8

ಚೀನಾ ಈ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿದೆ. ಅಲ್ಲಿನ ಶಾಲೆಗಳಲ್ಲಿ AI ಆಧರಿತ ಕ್ಯಾಮೆರಾಗಳು ಮತ್ತು ವಿಶ್ಲೇಷಕ ಸಾಫ್ಟ್‌ವೇರ್‌ಗಳು ವಿದ್ಯಾರ್ಥಿಗಳ ಮುಖಭಾವ, ಗಮನ ಮತ್ತು ಆಸಕ್ತಿಯನ್ನು ದಾಖಲಿಸುತ್ತವೆ. ಈ ಮಾಹಿತಿ ಶಿಕ್ಷಕರಿಗೆ ಯಾವ ವಿದ್ಯಾರ್ಥಿಗೆ ಹೆಚ್ಚು ಮಾರ್ಗದರ್ಶನದ ಅಗತ್ಯವಿದೆ ಎಂಬುದನ್ನು ತಿಳಿಯಲು ಸಹಾಯ ಮಾಡುತ್ತದೆ. ಜೊತೆಗೆ, AI ಪ್ಲಾಟ್‌ಫಾರ್ಮ್‌ಗಳು ವಿದ್ಯಾರ್ಥಿಯ ಬೋಧನಾ ಶೈಲಿಯನ್ನು ಗುರುತಿಸಿ ಅವರ ಕಲಿಕೆಗೆ ಹೊಂದುವ ಪಠ್ಯ ಸಾಮಗ್ರಿ ಮತ್ತು ಅಭ್ಯಾಸಗಳನ್ನು ತಯಾರಿಸುತ್ತವೆ. ಚೀನಾ ಸರ್ಕಾರ 2025ರೊಳಗೆ ಎಲ್ಲ ಶಾಲೆಗಳಲ್ಲಿ AI ಕಲಿಕೆ ಅಳವಡಿಸುವ ಗುರಿ ಹೊಂದಿದೆ ಎಂದು ವರದಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ದಕ್ಷಿಣ ಕೊರಿಯಾ ಕೂಡ ತಂತ್ರಜ್ಞಾನ ಆಧರಿತ ಶಿಕ್ಷಣದಲ್ಲಿ ಪ್ರಗತಿಯನ್ನು ಸಾಧಿಸುತ್ತಿದೆ. ಅಲ್ಲಿ AI-ಸಹಾಯಿತ ಪಠ್ಯಕ್ರಮಗಳು ಪ್ರಾಥಮಿಕ ಶಿಕ್ಷಣದಿಂದಲೇ ಆರಂಭವಾಗಿವೆ. ಜತೆಗೆ ಸಿಂಗಪುರ್, ಯುರೋಪಿನ ಎಸ್ಟೋನಿಯಾ ದೇಶಗಳು AI ಶಿಕ್ಷಣ ಮಾದರಿಗಳನ್ನ ಈಗಾಗಲೇ ಯಶಸ್ವಿಯಾಗಿ ಅಳವಡಿಸಿಕೊಂಡಿವೆ. ಅಲ್ಲಿನ ಶಾಲಾ ಕಾಲೇಜುಗಳು ಹಾಗೂ ಸಾರ್ವಜನಿಕ ಶಿಕ್ಷಣ ಕೇಂದ್ರಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ನೈಜ ತರಗತಿ ಪ್ರಕ್ರಿಯೆಯೊಂದಿಗೆ ಸಂಯೋಜಿಸಲಾಗಿದೆ. ವಿದ್ಯಾರ್ಥಿಗಳು ಕೇವಲ ಪಾಠವನ್ನೇ ಅಲ್ಲ, AIನ ನೈತಿಕತೆ, ಡೇಟಾ ಸುರಕ್ಷತೆ ಮತ್ತು ಆಲ್ಗರಿದಮ್‌ಗಳ ಕಾರ್ಯವಿಧಾನಗಳನ್ನೂ ಕಲಿಯುತ್ತಾರೆ. ಈ ರೀತಿಯ ಶಿಕ್ಷಣವು ಅವರನ್ನು ಭವಿಷ್ಯದ ಡಿಜಿಟಲ್ ಆರ್ಥಿಕತೆಯಲ್ಲಿ ಭಾಗವಹಿಸಲು ಸಿದ್ಧಗೊಳಿಸುತ್ತದೆ.

ಶಿಕ್ಷಕನ ಶಕ್ತಿಯುತ ಸಹಾಯಕನಾಗಬಹುದು AI: ನೂರಾರು ವಿದ್ಯಾರ್ಥಿಗಳನ್ನೊಳಗೊಂಡ ದೊಡ್ಡ ತರಗತಿಗಳನ್ನು ನಿರ್ವಹಿಸುವ ಶಿಕ್ಷಕರಿಗೆ AI ಸಹಾಯಕನಾಗಬಹುದು ಎನ್ನುತ್ತವೆ ಕೆಲ ವಾದಗಳು. ದಿನನಿತ್ಯದ ಹಾಜರಾತಿ, ಅಂಕಪತ್ರ, ವರದಿಗಳು, ವರ್ಕ್‌ ಶೀಟ್‌ಗಳು… ಇವುಗಳ ನಿರ್ವಹಣೆಯ ಒತ್ತಡದಲ್ಲಿ ಬಹಳಷ್ಟು ಶಿಕ್ಷಕರು ತುಂಬಾ ಸಮಯ ಕಳೆಯುತ್ತಾರೆ. ಇಂತಹ ಸಂದರ್ಭಗಳಲ್ಲಿ ಕೃತಕ ಬುದ್ಧಿಮತ್ತೆ (AI) ಶಿಕ್ಷಕರ ಒತ್ತಡ ಕಡಿಮೆ ಮಾಡಬಹುದು. AI ತಂತ್ರಜ್ಞಾನವು ಪುನರಾವರ್ತಿತ ಆಡಳಿತಾತ್ಮಕ ಕೆಲಸಗಳನ್ನು ಸ್ವಯಂಚಾಲಿತಗೊಳಿಸಬಹುದು. ಉದಾಹರಣೆಗೆ: ಅಂಕಪಟ್ಟಿ ತಯಾರಿಸುವುದು, ಹಾಜರಾತಿ ದಾಖಲಿಸುವುದು, ವರ್ಕ್‌ಶೀಟ್‌ಗಳನ್ನು ಸೃಷ್ಟಿಸುವುದು, ವಿದ್ಯಾರ್ಥಿಗಳ ಕಲಿಕೆಯ ದತ್ತಾಂಶಗಳ ವಿಶ್ಲೇಷಣೆ ಮಾಡುವುದು ಇತ್ಯಾದಿ. ಇದರಿಂದ ಶಿಕ್ಷಕರು ಹೆಚ್ಚು ಗಮನವನ್ನು ನೇರ ಬೋಧನೆಗೆ, ವಿದ್ಯಾರ್ಥಿಗಳೊಂದಿಗೆ ಸಂವಹನಕ್ಕೆ ಮತ್ತು ಅವರ ಮಾನಸಿಕ ಬೆಳವಣಿಗೆಯತ್ತ ನೀಡಬಹುದು.

AI ಎಲ್ಲವನ್ನೂ ಮಾಡುತ್ತದೆ ಎಂದು ನಂಬುವುದು ತಪ್ಪು: ʼತಂತ್ರಜ್ಞಾನ (AI) ತಿಳಿದ ಯಾರಾದರೂ ಬೋಧಿಸಬಹುದು, ಅದಕ್ಕೆ ಶಿಕ್ಷಕರೇ ಬೇಕೆಂದೇನಿಲ್ಲʼ ಎಂಬ ಭ್ರಮೆಗೆ ಇತ್ತೀಚಿನ ಹಲವರು ಒಳಗಾಗುತ್ತಿದ್ದಾರೆ. ಆದರೆ, ಈ ಯೋಚನೆ ಅಪಾಯಕಾರಿ. ಶಿಕ್ಷಕರು ವಿದ್ಯಾರ್ಥಿಗಳ ಒಳಜಗತ್ತನ್ನು ಓದುವ ಸಾಮರ್ಥ್ಯ ಹೊಂದಿರುತ್ತಾರೆ. ಕಣ್ಣಲ್ಲಿ ಕಾಣುವ ಸಂದೇಹ, ಧ್ವನಿಯಲ್ಲಿನ ಆತಂಕ, ಮನಸ್ಸಿನಲ್ಲಿ ಮೂಡುವ ಕುತೂಹಲ… ಇವುಗಳ ಅರ್ಥವನ್ನು ಯಂತ್ರಗಳಿಂದ ಅಳೆಯಲು ಸಾಧ್ಯವಿಲ್ಲ. ತಂತ್ರಜ್ಞಾನವು ಶಿಕ್ಷಕರ ಬುದ್ಧಿವಂತಿಕೆ ಮತ್ತು ಮಾನವೀಯ ಸ್ಪರ್ಶವನ್ನು ಬದಲಾಯಿಸಲು ಎಂದಿಗೂ ಸಾಧ್ಯವಿಲ್ಲ.

WhatsApp Image 2025 10 27 at 6.04.25 PM

ಕಲಿಕೆ ಎಂಬುದು ಕೇವಲ ಮಾಹಿತಿಯ ವಿನಿಮಯವಲ್ಲ; ಅದು ಮೌಲ್ಯಗಳ, ಭಾವನೆಗಳ ಮತ್ತು ಚಿಂತನೆಗಳ ಬೆಳವಣಿಗೆಯ ನಿರಂತರ ಪ್ರಕ್ರಿಯೆ. ಯಂತ್ರಗಳು ತಂತ್ರಜ್ಞಾನ ಬಳಸಿಕೊಂಡು ಅಂಕಣ ಬರೆಯಬಹುದು, ಕೇಳಿದ ಪ್ರಶ್ನೆಗೆ ಕ್ಷಣಾರ್ಧದಲ್ಲಿ ಉತ್ತರ ಕೊಡಬಹುದಷ್ಟೇ. ಆದರೆ, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಕುತೂಹಲವನ್ನು ಹುಟ್ಟುಹಾಕುತ್ತಾರೆ, ಸೃಜನಶೀಲತೆಯ ಬೀಜ ಬಿತ್ತುತ್ತಾರೆ. ಮಾನವನಲ್ಲಿ ಗೋಚರಿಸುವ ಗೊಂದಲವನ್ನು ಅರ್ಥಮಾಡಿಕೊಳ್ಳುವುದು ಇನ್ನೊಬ್ಬ ಮಾನವನಿಂದಷ್ಟೇ ಸಾಧ್ಯ. ಹಾಗೆಯೇ ವಿದ್ಯಾರ್ಥಿಗಳ ತಲೆಯಲ್ಲಿ ಕಲಿಕೆಗೆ ಪೂರಕವಾದ ಪ್ರಶ್ನೆಗಳನ್ನು ಸೃಷ್ಟಿಸಲು ಒಬ್ಬ ಶಿಕ್ಷಕನಿಂದಷ್ಟೇ ಸಾಧ್ಯ. ಹೀಗಾಗಿ, AI ಮತ್ತು ಇತರ ಡಿಜಿಟಲ್ ಸಾಧನಗಳನ್ನು ಶಿಕ್ಷಕರಿಗೆ ಬದಲಿಯಾಗಿ ಅಲ್ಲ, ಸಹಾಯಕನಾಗಿ ಪರಿಗಣಿಸಬೇಕು. ತಂತ್ರಜ್ಞಾನವು ಶಿಕ್ಷಣದ ಪ್ರಕ್ರಿಯೆಗೆ ಚೈತನ್ಯ ನೀಡಬಹುದು, ಆದರೆ ಅದರ ನಡಿಗೆಯನ್ನು ಮಾನವ ಬುದ್ಧಿವಂತಿಕೆಯೇ ನೈತಿಕ ಮೌಲ್ಯಗಳ ಬೆಂಬಲದಿಂದ ಮಾರ್ಗದರ್ಶಿಸಬೇಕು ಎಂಬ ವಾದವೂ ಇದೆ.

ತಂತ್ರಜ್ಞಾನವು ಎಲ್ಲವನ್ನೂ ಮಾಡುವುದಿಲ್ಲ ಎಂದಮಾತ್ರಕ್ಕೆ ಅದನ್ನು ಅವಗಣಿಸುವುದು ಸರಿಯಲ್ಲ. ಪ್ರತಿಕ್ಷಣ ಬದಲಾಗುತ್ತಿರುವ ಈ ಯುಗದಲ್ಲಿ ನಾವು ಸಾಂಪ್ರದಾಯಿಕ ಕ್ರಮಗಳನ್ನೇ ಅನುಸರಿಸುವುದು ಅಪ್ರಸ್ತುತ. ತಂತ್ರಜ್ಞಾನವನ್ನು ಸ್ವೀಕರಿಸಿ, ಅದನ್ನು ಮಾನವೀಯ ಮೌಲ್ಯಗಳೊಡನೆ ಸಂಯೋಜಿಸುವುದು ಮುಂದಿನ ದಿಕ್ಕು. ತಂತ್ರಜ್ಞಾನದೊಂದಿಗೆ ಸಮಾನಾಂತರವಾಗಿ ಚಲಿಸುವುದೇ ಜಾಣತನ.

ಆದರೆ ಈ ಪರಿವರ್ತನೆಗೆ ಚಿಂತನಶೀಲ ಅನುಷ್ಠಾನ ಅಗತ್ಯ. ತಂತ್ರಜ್ಞಾನವನ್ನು ಗೊತ್ತು ಗುರಿಯಿಲ್ಲದೆ ಅಳವಡಿಸಿದರೆ ಕಲಿಕೆ ಯಾಂತ್ರಿಕವಾಗುತ್ತದೆ. ಅಲ್ಲಿ ಸೃಜನಶೀಲತೆ, ಕುತೂಹಲ, ಸಂವಾದ… ಇವು ಕಳೆದುಹೋಗುವ ಸಾಧ್ಯತೆ ಹೆಚ್ಚಿದೆ. ಶಿಕ್ಷಣ ವ್ಯವಸ್ಥೆಯು ತಂತ್ರಜ್ಞಾನ ಮತ್ತು ಮಾನವೀಯತೆ ನಡುವೆ ಸಮತೋಲನ ಸಾಧಿಸಬೇಕು. ವಿದ್ಯಾರ್ಥಿಯು ಕೇವಲ ಅಂಕ ಗಳಿಸುವ ಯಂತ್ರವಾಗದೆ, ಚಿಂತನೆ ಮಾಡುವ ಮಾನವನಾಗುವಂತೆ ಪಾಠಗಳು ರೂಪುಗೊಳ್ಳಬೇಕು.

ಡಿಜಿಟಲ್ ಸಾಧನಗಳ ಅತಿಯಾದ ಅವಲಂಬನೆಯು ಮತ್ತೊಂದು ಅಪಾಯಕ್ಕೆ ದಾರಿಮಾಡಿಕೊಡಬಹುದು. ಅದು ಸೃಜನಶೀಲತೆಯ ನಾಶ. AI ವಿದ್ಯಾರ್ಥಿಗೆ ಉತ್ತರ ನೀಡಬಹುದು, ಆದರೆ ಪ್ರಶ್ನಿಸಲು ಕಲಿಸದು. ತಂತ್ರಜ್ಞಾನ ಎಲ್ಲ ಪ್ರಶ್ನೆಗಳಿಗೆ ಸಿದ್ಧ ಉತ್ತರ ನೀಡುವುದರಿಂದ ವಿದ್ಯಾರ್ಥಿಯ ಕುತೂಹಲ ಮತ್ತು ಚಿಂತನೆಯ ಶಕ್ತಿ ನಿಧಾನವಾಗಿ ಕುಗ್ಗಬಹುದು. ಕಲಿಕೆ ಅರ್ಥಪೂರ್ಣವಾಗಬೇಕಾದರೆ, ಅದು ಪ್ರಶ್ನೆಯೊಂದಿಗೆ ಆರಂಭವಾಗಿ ಅನುಭವದೊಂದಿಗೆ ಮುಕ್ತಾಯಗೊಳ್ಳಬೇಕು. ಇದನ್ನು ಜೀವಂತವಾಗಿಡುವವರು ಶಿಕ್ಷಕರೇ.

image 66
ಸರ್‌ ಕೆನ್‌ ರಾಬಿನ್ಸನ್

ಬ್ರಿಟನ್‌ನ ಶಿಕ್ಷಣ ತಜ್ಞ ಸರ್ ಕೆನ್ ರಾಬಿನ್ಸನ್ ಹೇಳಿದಂತೆ, “ಶಿಕ್ಷಣವು ಕೇವಲ ಬುದ್ಧಿವಂತಿಕೆಯನ್ನು ಹೆಚ್ಚಿಸುವುದಲ್ಲ; ಅದು ಮಾನವೀಯತೆಯನ್ನು ಜೀವಂತವಾಗಿಡುವ ಪ್ರಕ್ರಿಯೆ” ತಂತ್ರಜ್ಞಾನವು ಈ ಮಾನವೀಯತೆಯನ್ನು ಬೆಂಬಲಿಸಬೇಕು, ಬದಲಾಯಿಸಬಾರದು”. ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ಹೇಳಿದ್ದು ಅದನ್ನೇ, “ಶಿಕ್ಷಣವೆಂಬುದು ಜೀವನಕ್ಕೆ ಬೇಕಾದ ಪೂರಕವಲ್ಲ, ಜೀವನವೇ ಶಿಕ್ಷಣ” ಎಂದು. ಅಂದರೆ, ಶಿಕ್ಷಣ ಜೀವನದ ಒಂದು ಭಾಗ, ಕಲಿಕೆ ಎಂಬುದು ನಿರಂತರ, ಅದು ಒಬ್ಬ ವ್ಯಕ್ತಿಯ ಎಲ್ಲಾ ರೀತಿಯ ಬೆಳವಣಿಗೆಗಳ ಒಟ್ಟು ಮೊತ್ತ. ಶಿಕ್ಷಕರು AI ಸಹಾಯದಿಂದ ಹೊಸ ಪಾಠ ವಿಧಾನಗಳನ್ನು ರೂಪಿಸಬಹುದು. ಉದಾಹರಣೆಗೆ: ಪ್ರತಿ ವಿದ್ಯಾರ್ಥಿಯ ಕಲಿಕೆಯ ವೇಗ ಮತ್ತು ಶೈಲಿಯ ಆಧಾರದ ಮೇಲೆ ವೈಯಕ್ತಿಕ ಪಾಠ ರೂಪಿಸುವುದು, ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಬೆಂಬಲ ನೀಡುವುದು, ಮತ್ತು ತರಗತಿಯನ್ನು ಹೆಚ್ಚು ಸಂವಹನಾತ್ಮಕವಾಗಿಸುವುದು. ಆದರೆ ಈ ಎಲ್ಲ ಕ್ರಮಗಳು ಮಾನವ ಮಾರ್ಗದರ್ಶನವಿಲ್ಲದೆ ಪರಿಣಾಮಕಾರಿಯಾಗುವುದಿಲ್ಲ.

ಭಾರತದಂತಹ ದೇಶಗಳಲ್ಲಿ ಈ ಪರಿವರ್ತನೆ ಎಲ್ಲೆಡೆ ಸಮಾನವಾಗಿ ಅಳವಡಿಕೆಯಾಗುವುದು ಅಷ್ಟು ಸುಲಭವಲ್ಲ. ಗ್ರಾಮೀಣ ಶಾಲೆಗಳ ಬಹುಪಾಲು ಭಾಗಗಳಲ್ಲಿ ತಂತ್ರಜ್ಞಾನ ಮೂಲಸೌಕರ್ಯಗಳೇ ಇಲ್ಲ. ಇಂಟರ್ನೆಟ್ ಸಂಪರ್ಕದ ಕೊರತೆ, ಡಿಜಿಟಲ್ ಸಾಧನಗಳ ಕಡಿಮೆ ಲಭ್ಯತೆ ಹಾಗೂ ಶಿಕ್ಷಕರಿಗೆ ತಂತ್ರಜ್ಞಾನ ತರಬೇತಿ ನೀಡದಿರುವುದು… ಇವು ದೊಡ್ಡ ಅಡಚಣೆಗಳು. ತಂತ್ರಜ್ಞಾನವು ಎಲ್ಲರಿಗೂ ಸಮಾನವಾಗಿ ಉಪಯೋಗವಾಗಬೇಕಾದರೆ, ಈ ಅಂತರಗಳನ್ನು ನಿವಾರಿಸುವ ನೀತಿಗಳು ಅಗತ್ಯ. ತಂತ್ರಜ್ಞಾನವನ್ನು ಚಿಂತನಶೀಲವಾಗಿ ಬಳಸುವುದು ಮತ್ತೊಂದು ದೊಡ್ಡ ಸವಾಲು.

ಭಾರತ ಸರ್ಕಾರ ʼಡಿಜಿಟಲ್ ಇಂಡಿಯಾʼದಡಿ PM eVidya ದಂತಹ ಯೋಜನೆಗಳ ಮೂಲಕ ಈ ಬದಲಾವಣೆಗೆ ವೇದಿಕೆ ಕಲ್ಪಿಸಿದೆ. ಖಾಸಗಿ ವಲಯವೂ Byju’s, Unacademy, Coursera ಮುಂತಾದ ವೇದಿಕೆಗಳ ಮೂಲಕ ಡಿಜಿಟಲ್ ಶಿಕ್ಷಣವನ್ನು ಸಾಮಾನ್ಯ ಜನತೆಗೆ ತಲುಪಿಸುವ ಪ್ರಯತ್ನ ಮಾಡುತ್ತಿದೆ. ಆದರೆ ಈ ವೇಗದ ನಡುವೆ ಶಿಕ್ಷಣದ ಮೂಲಭೂತ ಅಂಶವಾದ ಮಾನವೀಯ ಸಂಬಂಧವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳುವುದು ಅಗತ್ಯ. ‌

ಇದನ್ನೂ ಓದಿ: ಈ ದಿನ ಸಂಪಾದಕೀಯ | ಕುರುಡು ದ್ವೇಷದ ಈ ಅಂಧಕಾರಕ್ಕೆ ಅಂತ್ಯವೆಂದು?

ಶಿಕ್ಷಕರು ತಮ್ಮ ಪಾತ್ರವನ್ನು ತಂತ್ರಜ್ಞಾನದ ಜತೆಗೆ ಹೊಸ ಮಗ್ಗುಲಿಗೆ ಹೊರಳಿಸಿದರೆ ಈ ಯಾಂತ್ರಿಕತೆ ನಿಲ್ಲಬಹುದೇನೋ. ಅವರು ತಂತ್ರಜ್ಞಾನವನ್ನು ಉಪಕರಣವಾಗಿ ಬಳಸಿಕೊಂಡು ವಿದ್ಯಾರ್ಥಿಗಳನ್ನು ಚಿಂತನೆಗೆ ಪ್ರೇರೇಪಿಸಬಹುದು. AI ಮೂಲಕ ವಿದ್ಯಾರ್ಥಿಯ ಪ್ರಗತಿ ಅಳೆಯಬಹುದಾದರೂ, ಅವನ ಭಾವನಾತ್ಮಕ ಸ್ಥಿತಿಯನ್ನು ಗುರುತಿಸುವ ಕೆಲಸ ಶಿಕ್ಷಕರದ್ದೇ. ಪಾಠದ ನಂತರ ವಿದ್ಯಾರ್ಥಿಯ ಆಸಕ್ತಿ ಯಾವ ವಿಷಯದಲ್ಲಿ ಹೆಚ್ಚು ಎಂಬುದನ್ನು AI ವಿಶ್ಲೇಷಿಸಬಹುದು, ಆದರೆ ಆ ಆಸಕ್ತಿಯನ್ನು ಮೆಟ್ಟಿಲಾಗಿಸಿ ಸಾಧನೆಯತ್ತ ಕೊಂಡೊಯ್ಯುವುದು ಶಿಕ್ಷಕರ ಪ್ರೇರಣೆಯೇ.

ಮುಂದುವರೆದ ರಾಷ್ಟ್ರಗಳು ಅಲ್ಲಿರುವ ಮೂಲ ಸೌಕರ್ಯಗಳನ್ನು ಬಳಸಿಕೊಂಡು ತಂತ್ರಜ್ಞಾನದ ಕ್ಷಿಪ್ರ ಕ್ರಾಂತಿಯ ಜತೆಗೆ ಸುಲಭವಾಗಿ ಓಡುತ್ತವೆ. ಆದರೆ, ಭಾರತದಂತಹ ರಾಷ್ಟ್ರಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ AI ಕ್ರಾಂತಿ ಅಸಾಧ್ಯವಲ್ಲ, ಆದರೆ ಸುಲಭವೂ ಅಲ್ಲ. ನಗರ ಮತ್ತು ಖಾಸಗಿ ಶಾಲೆಗಳು ದಕ್ಕಿಸಿಕೊಳ್ಳಬಹುದು. ಅಲ್ಲಿ ವೇಗವಾದ ಇಂಟರ್ನೆಟ್, ತರಬೇತುಗೊಂಡ ಶಿಕ್ಷಕರು ಕಲಿಕೆಗೆ ಬೇಕಾದ ಎಲ್ಲವೂ ಲಭ್ಯ. ಆದರೆ ಬಹುಭಾಗ ಗ್ರಾಮೀಣ ಪ್ರದೇಶಗಳಿರುವ ದೇಶ ನಮ್ಮದು. ಇಲ್ಲಿನ ಶಾಲೆಗಳಲ್ಲಿ ವಿದ್ಯುತ್ ಇದ್ದರೆ ಇಂಟರ್ನೆಟ್ ಇಲ್ಲ, ‌ಇಂಟರ್ನೆಟ್‌ ಇದ್ದರೆ ನುರಿತ ಶಿಕ್ಷಕರಿರುವುದಿಲ್ಲ. ಕಾಲ ಇಷ್ಟು ಮುಂದಕ್ಕೆ ಬಂದಿದ್ದರೂ ಹಲವು ಹಳ್ಳಿಯ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಣದ ಕೊರತೆ, ಕಲಿಕೆಯ ಕುರಿತ ತಿಳಿವಳಿಕೆ ಇಲ್ಲದಿರುವುದನ್ನು ಇಂದಿಗೂ ನೋಡುತ್ತಿದ್ದೇವೆ. ಈ ಅಂತರದಿಂದ ನಗರ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ನಡುವೆ ಹೊಸ ಶೈಕ್ಷಣಿಕ ಅಸಮಾನತೆ ಉಂಟಾಗುವ ಅಪಾಯವಿದೆ. ಗ್ರಾಮೀಣ ಭಾಗಕ್ಕೆ ಎಲ್ಲ ಸೌಕರ್ಯಗಳನ್ನು ಕೊಟ್ಟು ಕಲಿಯಿರಿ ಎನ್ನುವುದೂ ಸರಿಯಲ್ಲ. ಆ ಪರಿಸರಕ್ಕೆ ಒಗ್ಗಿಕೊಳ್ಳಲು ಸಾಕಷ್ಟು ಸಮಯ ತಗಲುತ್ತದೆ. AI ಕ್ರಾಂತಿಯ ಯಶಸ್ಸು ತಂತ್ರಜ್ಞಾನದಲ್ಲಲ್ಲ, ಅದು ಯಾರನ್ನು ಎಷ್ಟು ಒಳಗೊಳ್ಳುತ್ತದೆ ಎಂಬುದರಲ್ಲಿದೆ ಎನ್ನುವುದನ್ನು ಮನಗಂಡು ಈ ಕ್ರಾಂತಿಯ ಹೊಸ ರೂಪದ ಜತೆ ಜತೆಗೆ ಭವಿಷ್ಯದ ತರಗತಿಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಮಾನವ ಬುದ್ಧಿಮತ್ತೆ ಒಟ್ಟಿಗೆ ನಡೆದಾಗ ಮಾತ್ರ ನಿಜವಾದ ಶಿಕ್ಷಣ ಜೀವಂತವಾಗಿರುತ್ತದೆ. ಶಿಕ್ಷಕರು ಮಾರ್ಗದರ್ಶಕರಾಗಲಿ, ತಂತ್ರಜ್ಞಾನ ಸಾಧನವಾಗಲಿ ಇಬ್ಬರ ಸಹಯೋಗದಿಂದಲೇ ನಾಳಿನ ವಿದ್ಯಾರ್ಥಿಯ ಜ್ಞಾನ, ವ್ಯಕ್ತಿತ್ವ ರೂಪುಗೊಳ್ಳಲಿ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...