ಅನಿಲ್ ಅಂಬಾನಿ: ಧೀರೂಭಾಯಿಯ ಮಗ ದಿವಾಳಿತನದ ಆಳಕ್ಕೆ ಕುಸಿದದ್ದು ಹೇಗೆ?

Date:

ಅನಿಲ್ ಅಂಬಾನಿ ಒಮ್ಮೆ 42 ಬಿಲಿಯನ್ ಡಾಲರ್ (ಸುಮಾರು 3 ಲಕ್ಷ ಕೋಟಿ ರೂಪಾಯಿ) ಆಸ್ತಿಯ ಮಾಲೀಕರಾಗಿದ್ದರು. 2008ರಲ್ಲಿ ಫೋರ್ಬ್ಸ್ ಪಟ್ಟಿಯಲ್ಲಿ ಜಗತ್ತಿನ 6ನೇ ಶ್ರೀಮಂತರಾಗಿದ್ದರು. ಆದರೆ ಇಂದು ಅವರ ಗುಂಪಿನ ಕಂಪನಿಗಳು ದಿವಾಳಿಯಾಗಿ, ಸಾವಿರಾರು ಕೋಟಿ ಸಾಲದ ಹೊರೆಯಲ್ಲಿ ಮುಳುಗಿ, ಅನಿಲ್‌ ಅಂಬಾನಿಯೇ ದಿವಾಳಿಯೆಂದು ಸಾರಿಕೊಂಡು ಪಲಾಯನದ ಹಾದಿ ಆರಿಸಿಕೊಂಡಿದ್ದಾರೆ. ಸುಮಾರು ₹17,000 ಕೋಟಿ ರೂ. ಸಾಲ ಪಡೆದು, ಅದನ್ನು ಕಂಪನಿಯ ಕೆಲಸಗಳಿಗೆ ಬಳಸದೆ ವೈಯಕ್ತಿಕ ಖಾತೆಗಳಿಗೆ ಹಾಗೂ ವಿದೇಶಿ ಕಂಪನಿಗಳಿಗೆ ವರ್ಗಾಯಿಸಿರುವ ಆರೋಪ ಹೊತ್ತಿದ್ದಾರೆ.

ಭಾರತದ ಅತ್ಯಂತ ಪ್ರಭಾವಿ ಉದ್ಯಮಿ ಧೀರೂಭಾಯಿ ಅಂಬಾನಿ ಅವರ ಇಬ್ಬರು ಪುತ್ರರಲ್ಲಿ ಮುಕೇಶ್‌ ಅಂಬಾನಿ ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿ ಯಶಸ್ಸಿನ ಶಿಖರದಲ್ಲಿರುವಾಗ, ಮತ್ತೊಬ್ಬ ಪುತ್ರ ಅನಿಲ್‌ ಅಂಬಾನಿ ಉದ್ಯಮದಲ್ಲಿ ಭಾರೀ ನಷ್ಟವುಂಟಾಗಿ, ‘ದಿವಾಳಿ’ಯಾಗಿದ್ದಾರೆ.

ಮುಖೇಶ್ ಅಂಬಾನಿ ತಮ್ಮ ರಿಲಯನ್ಸ್ ಇಂಡಸ್ಟ್ರೀಸ್ ಸಾಮ್ರಾಜ್ಯವನ್ನು ಲಕ್ಷಾಂತರ ಕೋಟಿ ರೂಪಾಯಿಗಳ ಮೌಲ್ಯಕ್ಕೆ ಬೆಳೆಸಿ, ಫೋರ್ಬ್ಸ್ ಪಟ್ಟಿಯಲ್ಲಿ ಏಷ್ಯಾದ ಅತ್ಯಂತ ಶ್ರೀಮಂತರಾಗಿದ್ದಾರೆ. ಅವರ ನಿವ್ವಳ ಆಸ್ತಿ 2025ರ ನವೆಂಬರ್‌ ವೇಳೆಗೆ ಸುಮಾರು 109 ಬಿಲಿಯನ್ ಡಾಲರ್ (ಸುಮಾರು 9 ಲಕ್ಷ ಕೋಟಿ ರೂಪಾಯಿ) ತಲುಪಿದೆ. ಆದರೆ ಅವರ ಸಹೋದರ ಅನಿಲ್ ಅಂಬಾನಿ ಸಂಪೂರ್ಣ ನೆಲ ಕಚ್ಚಿದ್ದಾರೆ. 2020ರಲ್ಲಿ ಲಂಡನ್ ನ್ಯಾಯಾಲಯದಲ್ಲಿ ತಾನು ದಿವಾಳಿಯಾಗಿರುವುದಾಗಿ ಘೋಷಿಸಿಕೊಂಡಿದ್ದರು. ಇದೆಲ್ಲದಕ್ಕೂ ಅನಿಲ್‌ ಅಂಬಾನಿಯ ಅತಿಯಾಸೆ, ತಪ್ಪು ನಿರ್ಧಾರಗಳು, ಅತಿಯಾದ ಋಣಭಾರ ಮತ್ತು ಹಣ ದುರುಪಯೋಗದ ಆರೋಪಗಳು ಪ್ರಮುಖ ಕಾರಣವಾಗಿವೆ ಎನ್ನಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

2025ರ ನವೆಂಬರ್ 6ರಂದು ಜಾರಿ ನಿರ್ದೇಶನಾಲಯ (ಇಡಿ) ಅನಿಲ್ ಅಂಬಾನಿಗೆ ಮತ್ತೊಮ್ಮೆ ಸಮನ್ಸ್ ಜಾರಿಗೊಳಿಸಿ, ನವೆಂಬರ್ 14ರಂದು ಹಾಜರಾಗುವಂತೆ ಆದೇಶಿಸಿದೆ. ಇದು ಅವರ ಮೇಲಿನ ಹಣ ಅಕ್ರಮ ವರ್ಗಾವಣೆ, ಬ್ಯಾಂಕ್ ಸಾಲ ಮೋಸ ಮತ್ತು ಫೆಮಾ ಉಲ್ಲಂಘನೆ ಮುಂತಾದ ಪ್ರಕರಣಗಳಾಗಿವೆ.

anil and mukhesh

ಅನಿಲ್ ಅಂಬಾನಿ ಒಮ್ಮೆ 42 ಬಿಲಿಯನ್ ಡಾಲರ್ (ಸುಮಾರು 3 ಲಕ್ಷ ಕೋಟಿ ರೂಪಾಯಿ) ಆಸ್ತಿಯ ಮಾಲೀಕರಾಗಿದ್ದರು. 2008ರಲ್ಲಿ ಫೋರ್ಬ್ಸ್ ಪಟ್ಟಿಯಲ್ಲಿ ಜಗತ್ತಿನ 6ನೇ ಶ್ರೀಮಂತರಾಗಿದ್ದರು. ಆದರೆ ಇಂದು ಅವರ ಗುಂಪಿನ ಕಂಪನಿಗಳು ದಿವಾಳಿಯಾಗಿ, ಸಾವಿರಾರು ಕೋಟಿ ಸಾಲದ ಹೊರೆಯಲ್ಲಿ ಮುಳುಗಿ, ವೈಯಕ್ತಿಕವಾಗಿ ಅನಿಲ್‌ ಅಂಬಾನಿಯೇ ದಿವಾಳಿಯೆಂದು ಹೇಳಿಕೊಂಡಿದ್ದಾರೆ. ಇದು ಕೇವಲ ವ್ಯಾಪಾರದ ವೈಫಲ್ಯವಲ್ಲ, ಅತಿಯಾದ ಸಾಲ, ಮೋಸ ಮತ್ತು ನೈತಿಕ ಪತನದ ಕಥೆಯಾಗಿದೆ. ಧೀರೂಭಾಯಿ ಅಂಬಾನಿಯವರ ಸಾಮ್ರಾಜ್ಯವನ್ನು ಸಹೋದರರು ಹಂಚಿಕೊಂಡ ನಂತರ ಮುಖೇಶ್ ಆಸ್ತಿ ಆಕಾಶಕ್ಕೇರಿದರೆ, ಅನಿಲ್ ಅಂಬಾನಿ ನಷ್ಟ ಅನುಭವಿಸಿದ್ದೆ ಹೆಚ್ಚು.

ಧೀರೂಭಾಯಿ ಕಟ್ಟಿದ ಸಾಮ್ರಾಜ್ಯ

ಧೀರೂಭಾಯಿ ಅಂಬಾನಿ 2002ರಲ್ಲಿ ಮರಣ ಹೊಂದಿದಾಗ ಅವರ ರಿಲಯನ್ಸ್ ಸಾಮ್ರಾಜ್ಯದ ಮೌಲ್ಯ ಸುಮಾರು 90,000 ಕೋಟಿ ರೂಪಾಯಿಗಳಾಗಿತ್ತು. ವಿಲ್ ಬರೆಯದೇ ಇದ್ದ ಕಾರಣ ಸಹೋದರರ ನಡುವೆ ಜಗಳ ಶುರುವಾಯಿತು. ತಾಯಿ ಕೋಕಿಲಾಬೆನ್ ಮಧ್ಯಪ್ರವೇಶಿಸಿ 2005ರಲ್ಲಿ ಆಸ್ತಿಯನ್ನು ಹಂಚಿದರು. ಮುಖೇಶ್‌ಗೆ ತೈಲ, ಪೆಟ್ರೋಕೆಮಿಕಲ್, ರಿಫೈನರಿ ಉದ್ಯಮಗಳು (ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ – RIL) ಸಿಕ್ಕವು. ಅನಿಲ್‌ಗೆ ಟೆಲಿಕಾಂ (ರಿಲಯನ್ಸ್ ಕಮ್ಯುನಿಕೇಶನ್ಸ್ – RCom), ವಿದ್ಯುತ್ (ರಿಲಯನ್ಸ್ ಪವರ್), ಹಣಕಾಸು ಸೇವೆಗಳು (ರಿಲಯನ್ಸ್ ಕ್ಯಾಪಿಟಲ್), ಮನರಂಜನೆ, ಮೂಲಸೌಕರ್ಯ ಮತ್ತು ರಕ್ಷಣಾ ಉದ್ಯಮಗಳು ಬಂದವು.

Anil and mukhesh 2

ಮುಖೇಶ್ ಅಂಬಾನಿಗೆ ತೈಲ, ಅನಿಲ ಮತ್ತು ಪೆಟ್ರೋಕೆಮಿಕಲ್‌ಗಳಂತಹ ಸ್ಥಿರ ಮತ್ತು ಲಾಭದಾಯಕ ವ್ಯವಹಾರಗಳು ಸಿಕ್ಕವು. ಆದರೆ ಅನಿಲ್ ಅಂಬಾನಿಗೆ ಹೊಸ ತಲೆಮಾರಿನ ಯೋಜನೆಗಳಾದ ಟೆಲಿಕಾಂ, ವಿದ್ಯುತ್, ಮೂಲಸೌಕರ್ಯ ಮುಂತಾದವು ಸಿಕ್ಕರೂ, ಅವುಗಳ ಜೊತೆಗೆ ಅಪಾರ ಸಾಲದ ಹೊರೆ ಕೂಡ ಬಂದಿತ್ತು. ಅನಿಲ್ ತಮ್ಮ ಕಂಪನಿ ಗುಂಪಿನ ಹೆಸರನ್ನು ರಿಲಯನ್ಸ್ ಅನಿಲ್ ಧೀರೂಭಾಯಿ ಅಂಬಾನಿ ಗ್ರೂಪ್ (ADA Group) ಎಂದು ಬದಲಿಸಿದರು. ಕೆಲವು ವರ್ಷಗಳಲ್ಲಿ ಅವರ ಆಸ್ತಿ ಪ್ರಮಾಣ ವೇಗವಾಗಿ ಏರಿತು. 2008ರಲ್ಲಿ ಅವರು ಸುಮಾರು 42 ಬಿಲಿಯನ್ ಡಾಲರ್ (1.68 ಲಕ್ಷ ಕೋಟಿ) ಮೌಲ್ಯದ ಆಸ್ತಿಯುಳ್ಳವರಾದರು, ಅಂದರೆ ಮುಖೇಶ್‌ಗಿಂತಲೂ ಹೆಚ್ಚು ಶ್ರೀಮಂತರಾಗಿದ್ದರು. ಆದರೆ, ಆ ಸಂಪತ್ತು ನಿಜವಾದ ಹಣದ ರೂಪದಲ್ಲಿ ಇರಲಿಲ್ಲ; ಅದು ಕೇವಲ ಷೇರುಗಳ ಮೌಲ್ಯ ಮತ್ತು ಕಾಗದದ ಲೆಕ್ಕಾಚಾರಗಳ ಮೇಲೆ ನಿಂತಿತ್ತು. ಅನಿಲ್ ಅಂಬಾನಿಯವರು ತಮ್ಮ ಕಂಪನಿಗಳನ್ನು ವೇಗವಾಗಿ ವಿಸ್ತರಿಸಲು ಬಹಳಷ್ಟು ಸಾಲ ಪಡೆದಿದ್ದರು. ರಿಲಯನ್ಸ್ ಪವರ್ ಕಂಪನಿಯು ಷೇರು ಮಾರುಕಟ್ಟೆಗೆ ಬಂದಾಗ (IPO) ಅದ್ಭುತವಾಗಿ ಹಣ ಸಂಗ್ರಹಿಸಿತು. ಆದರೆ ನಂತರದ ಯೋಜನೆಗಳು ಸಮಯಕ್ಕೆ ಮುಗಿಯದೆ ವಿಳಂಬವಾದವು, ಖರ್ಚುಗಳು ಹೆಚ್ಚಾದವು ಮತ್ತು ಕಂಪನಿ ನಿರೀಕ್ಷಿತ ಲಾಭ ತರಲಿಲ್ಲ. ಇದರ ಪರಿಣಾಮವಾಗಿ ಅನಿಲ್ ಅವರ ಆರ್ಥಿಕ ಸ್ಥಿತಿ ನಿಧಾನವಾಗಿ ಕುಸಿಯತೊಡಗಿತು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಹರಿಯಾಣದ ‘ಮಹಾ ಮತಗಳ್ಳತನ’ ಮತ್ತು ಚುನಾವಣಾ ಆಯೋಗವೆಂಬ ಮೋದಿ ‘ಪಂಜರದ ಗಿಳಿ’

ಮುಖೇಶ್ ಅಂಬಾನಿ ತಂದೆಯ ಮೂಲ ವ್ಯಾಪಾರವನ್ನೇ ಬೆಳೆಸಿದರು. ಜಾಮ್‌ನಗರ್‌ ರಿಫೈನರಿ ಸಂಸ್ಥೆಯನ್ನು ಜಗತ್ತಿನ ಅತಿದೊಡ್ಡದಾಗಿ ಮಾಡಿದರು. 2016ರಲ್ಲಿ ಜಿಯೋ ಆರಂಭಿಸಿ ಉಚಿತ ಡೇಟಾ ನೀಡಿ ಟೆಲಿಕಾಂ ಕ್ಷೇತ್ರವನ್ನೇ ಬದಲಾಯಿಸಿದರು. ಇಂದು ರಿಲಯನ್ಸ್ ರಿಟೇಲ್, ಜಿಯೋ, ಹೊಸ ಇಂಧನ ಯೋಜನೆಗಳು – ಎಲ್ಲವೂ ಲಾಭದಾಯಕ. ಮುಖೇಶ್ ಋಣವನ್ನು(ಇತರ ಕಡೆಯಿಂದ ಸಾಲವಾಗಿ ಪಡೆದ ಹಣ ಮತ್ತು ನಂತರ ಹಿಂದಿರುಗಿಸಬೇಕಾದದು) ನಿಯಂತ್ರಣದಲ್ಲಿಟ್ಟರು, ದೀರ್ಘಕಾಲೀನ ಯೋಜನೆ ರೂಪಿಸಿದರು, ತಂತ್ರಜ್ಞಾನದಲ್ಲಿ ಹೂಡಿಕೆ ಮಾಡಿದರು. ಬಿಜೆಪಿ ಸರ್ಕಾರದ ನಂಟು ಬೆಳಸಿ ಎಲ್ಲ ತಮ್ಮ ಉದ್ಯಮಗಳನ್ನು ಲಾಭದಾಯಕವಾಗಿಸಿಕೊಂಡರು.

ಆದರೆ ಅನಿಲ್ ಅಂಬಾನಿಯ ಅತಿಯಾಸೆಯೇ ಅವರನ್ನು ನಾಶ ಮಾಡಿತು. ಅತಿಯಾದ ಋಣಭಾರ – ADA ಗ್ರೂಪ್‌ನ ಋಣ 2019ರಲ್ಲಿ ₹94,000 ಕೋಟಿ ತಲುಪಿತು. ರಿಲಯನ್ಸ್ ಕಮ್ಯುನಿಕೇಶನ್ಸ್‌ನಲ್ಲಿ CDMAಯಿಂದ GSMಗೆ ಬದಲಾವಣೆಗೆ ಸಾವಿರಾರು ಕೋಟಿ ಖರ್ಚು ಮಾಡಿದರು. ಆದರೆ, ಮಾರುಕಟ್ಟೆ ಸಿದ್ಧವಿರಲಿಲ್ಲ, ವ್ಯವಹಾರ ನಷ್ಟವುಂಟಾಯಿತು. ದಕ್ಷಿಣ ಆಫ್ರಿಕಾದ MTNನೊಂದಿಗೆ ಮಾಡಿಕೊಂಡಿದ್ದ ವಿಲೀನ ಒಪ್ಪಂದ ವಿಫಲವಾಯಿತು. ವಿದ್ಯುತ್ ಯೋಜನೆಗಳು ವಿಳಂಬ – ಅಲ್ಟ್ರಾ ಮೆಗಾ ಪವರ್ ಪ್ರಾಜೆಕ್ಟ್‌ಗಳು ವರ್ಷಗಳ ಕಾಲ ನಿಂತು ನಷ್ಟ ಉಂಟುಮಾಡಿದವು. ಜಿಯೋ ಬಂದಾಗ ಅನಿಲ್‌ರ RCom ಸಾವಿರಾರು ಕೋಟಿ ಸಾಲದಲ್ಲಿ ಮುಳುಗಿತು. ಇದರಲ್ಲಿ 45,000 ಕೋಟಿ ಸಾಲವಿತ್ತು. ಜೊತೆಗೆ ಹಣ ದುರುಪಯೋಗ ಆರೋಪಗಳು – ಕಂಪನಿ ಹಣವನ್ನು ವೈಯಕ್ತಿಕ ಬಳಕೆಗೆ, ವಿದೇಶಿ ಖಾತೆಗಳಿಗೆ ವರ್ಗಾಯಿಸಿ ಆರೋಪಗಳು ಸೇರಿಕೊಂಡವು. ಮನರಂಜನೆ ಉದ್ಯಮದಲ್ಲಿ (ರಿಲಯನ್ಸ್ ಬಿಗ್ ಎಂಟರ್‌ಟೈನ್‌ಮೆಂಟ್) ಮಾಡಿದ ಹೂಡಿಕೆ ಕೂಡ ವಿಫಲವಾಯಿತು. ರಕ್ಷಣಾ ಕ್ಷೇತ್ರದಲ್ಲಿ ಕೆಲವು ಒಪ್ಪಂದಗಳು ಬಂದರೂ, ಅನಿಲ್ ಅವರ ಕಂಪನಿಗೆ ಇದ್ದ ಭಾರಿ ಸಾಲದ ಕಾರಣದಿಂದ ಲಾಭವಾಗದೆ ನಷ್ಟವಾಯಿತು.

Anil and mukhesh 1

ಇವೆಲ್ಲ ಕಾರಣದಿಂದ ಅನಿಲ್‌ ಅಂಬಾನಿಯ ಕಂಪನಿಗಳು ಒಂದೊಂದೇ ದಿವಾಳಿಯಾದವು: ರಿಲಯನ್ಸ್ ಕಮ್ಯುನಿಕೇಶನ್ಸ್ (2019), ರಿಲಯನ್ಸ್ ಕ್ಯಾಪಿಟಲ್ (2021), ರಿಲಯನ್ಸ್ ಇನ್‌ಫ್ರಾ, ರಿಲಯನ್ಸ್ ನೇವಲ್ ದಿವಾಳಿಯಾದ ಸಂಸ್ಥೆಗಳು. 2020ರಲ್ಲಿ ಅನಿಲ್ ಅಂಬಾನಿ ಲಂಡನ್ ನ್ಯಾಯಾಲಯದಲ್ಲಿ ತಾನು ದಿವಾಳಿಯೆಂದು ಘೋಷಿಸಿಕೊಂಡರು. ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ನಷ್ಟ ಉಂಟುಮಾಡಿ, ದೇಶದ ಹಣಕಾಸು ವ್ಯವಸ್ಥೆಗೆ ಹೊರೆಯಾದರು. ಇದೆಲ್ಲದರ ಜೊತೆ ಅನಿಲ್‌ ಅವರ ಹಲವು ನಿರ್ಧಾರಗಳು ಕೈಹಿಡಿಯಲಿಲ್ಲ. ಕಂಪನಿಗಳ ಅತಿಯಾದ ವಿಸ್ತರಣೆ, ಸಾಲದ ಮೇಲೆ ಸಾಲ ಮಾಡಿದರು. ಮಾರುಕಟ್ಟೆಯ ಬದಲಾವಣೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲ. ಮುಖೇಶ್ ಅಂಬಾನಿ ಜಿಯೋ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಯಶಸ್ಸು ಗಳಿಸಿದಾಗ, ಅನಿಲ್ ಅವರ RCom ಮಾರುಕಟ್ಟೆ ಸ್ಪರ್ಧೆಯಲ್ಲಿ ಸೋತು ಕುಸಿಯಿತು.

ಅನಿಲ್ ಅಂಬಾನಿ ಮೇಲೆ ಈಗ 12ಕ್ಕೂ ಹೆಚ್ಚು ದೊಡ್ಡ ಪ್ರಕರಣಗಳಿವೆ ಮತ್ತು ಇದು ಅವರ ಪತನದ ಮುಖ್ಯ ಕಾರಣವಾಗಿದೆ. ಈ ಪ್ರಕರಣಗಳು ಮುಖ್ಯವಾಗಿ ಇಡಿ (ED), ಸಿಬಿಐ (CBI), ಸೆಬಿ (SEBI), ಆರ್‌ಬಿಐ (RBI) ಮತ್ತು ಎನ್‌ಸಿಎಲ್‌ಟಿ (NCLT) ಸಂಸ್ಥೆಗಳಲ್ಲಿ ನಡೆಯುತ್ತಿವೆ. 2025ರಲ್ಲಿ ಇಡಿಗೆ ಸೇರಿದ ತನಿಖೆಯಲ್ಲಿ, ಸುಮಾರು 7,500 ಕೋಟಿ ರೂಪಾಯಿಯ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಇದರಲ್ಲಿ ನವಿ ಮುಂಬೈನ 132 ಎಕರೆ ಡಿಎಕೆಸಿ (Dhirubhai Ambani Knowledge City) ಭೂಮಿಯೂ ಸೇರಿದೆ, ಇದರ ಮೌಲ್ಯ ₹4,462 ಕೋಟಿ ರೂಪಾಯಿ. ಒಟ್ಟಾರೆ, ಇಡಿಗೆ ಅನಿಲ್ ಅಂಬಾನಿಯವರಿಂದ ಜಪ್ತಿ ಮಾಡಿದ ಆಸ್ತಿಯ ಮೌಲ್ಯ ಸುಮಾರು ₹7,500 ಕೋಟಿ ರೂಪಾಯಿಯಾಗುತ್ತದೆ.

Anil ambani 1 1

ವಿದೇಶಕ್ಕೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದು, ವಿದೇಶಿ ಆಸ್ತಿಗಳನ್ನು ಮರೆಮಾಡುವುದು ಮತ್ತು ಅನಧಿಕೃತ ವಿದೇಶಿ ಹೂಡಿಕೆಗಳನ್ನು ಹೊಂದಿರುವ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು ಅನಿಲ್ ಅಂಬಾನಿಗೆ ನವೆಂಬರ್ 14ರಂದು ಹೊಸ ಸಮನ್ಸ್ ನೀಡಿದೆ. ಇ.ಡಿ ನೋಟಿಸ್‌ನ ಪ್ರಮುಖ ಕಾರಣವೆಂದರೆ — ಅನಿಲ್ ಅಂಬಾನಿಯವರು ಸುಮಾರು ₹17,000 ಕೋಟಿ ರೂ. ಸಾಲ ಪಡೆದು, ಅದನ್ನು ಕಂಪನಿಯ ಕೆಲಸಗಳಿಗೆ ಬಳಸದೆ ವೈಯಕ್ತಿಕ ಖಾತೆಗಳಿಗೆ ಹಾಗೂ ವಿದೇಶಿ ಕಂಪನಿಗಳಿಗೆ ವರ್ಗಾಯಿಸಿದ್ದಾರೆ. ಇದರ ಪರಿಣಾಮವಾಗಿ ಬ್ಯಾಂಕ್‌ಗಳಿಗೆ ಭಾರಿ ನಷ್ಟ ಉಂಟಾಗಿದೆ ಮತ್ತು ದೇಶದ ಹಣಕಾಸು ವ್ಯವಸ್ಥೆಯ ಮೇಲೆಯೂ ಕೆಟ್ಟ ಪರಿಣಾಮ ಬಿದ್ದಿದೆ. ಇದರ ಮುಂಚೆ ಆಗಸ್ಟ್ 2025ರಲ್ಲಿ ಕೂಡ ಇ.ಡಿಯಿಂದ 8 ಗಂಟೆಗಳ ವಿಚಾರಣೆ ನಡೆದಿತ್ತು. ಇದರ ಜೊತೆಗೆ ಹಲವು ಪ್ರಕರಣಗಳು ದಾಖಲಾಗಿವೆ. ಯೆಸ್ ಬ್ಯಾಂಕ್‌ನ ₹2,796 ಕೋಟಿ ಸಾಲ ಮೋಸ (ರಾಣಾ ಕಪೂರ್‌ ಜೊತೆಗಿನ ಸಂಬಂಧ), SBI ಬ್ಯಾಂಕಿನ RCom ಖಾತೆ ವಂಚನೆ, SEBI ನಿಂದ Reliance Home Finance ಕಂಪನಿಯಲ್ಲಿ ಹಣ ದುರುಪಯೋಗ ಆರೋಪದಿಂದ 5 ವರ್ಷಗಳ ಮಾರುಕಟ್ಟೆ ನಿಷೇಧ, 17,000 ಕೋಟಿ ಬ್ಯಾಂಕ್ ಸಾಲ, ಮೋಸದಡಿ PMLA ಪ್ರಕರಣ, ಕೋಬ್ರಾಪೋಸ್ಟ್‌ನ 41,921 ಕೋಟಿ ರೂ. ಹಣ ವರ್ಗಾವಣೆ ಆರೋಪಗಳು ಇದರ ಜೊತೆಗೆ ಹಲವಾರು ದಿವಾಳಿ ಪ್ರಕರಣಗಳು NCLT(ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ)ಯಲ್ಲಿ ನಡೆಯುತ್ತಿವೆ.

ಅನಿಲ್ ಅಂಬಾನಿ, ತಂದೆಯಿಂದ ಬಂದ ಸಾಮ್ರಾಜ್ಯವನ್ನು ಅತಿಯಾದ ಸಾಲ, ತಪ್ಪು ನಿರ್ಧಾರಗಳು ಮತ್ತು ವಂಚನೆಗಳಿಂದ ನಷ್ಟ ಮಾಡಿಕೊಂಡಿದ್ದಾರೆ. ಬ್ಯಾಂಕುಗಳಿಗೆ ಸಾವಿರಾರು ಕೋಟಿ ನಷ್ಟ ಉಂಟುಮಾಡಿ, ಕಾನೂನು ಕಟಕಟಗೆ ಸಿಲುಕಿದ್ದಾರೆ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...