ಪ್ರಜಾಪ್ರಭುತ್ವಕ್ಕೆ ಗ್ರಹಣ ಹಿಡಿಸಿರುವ ‘ಪಕ್ಷಾಂತರ’ಪಿಡುಗು: ಕಾಯಿದೆ ತಿದ್ದುಪಡಿಗೆ ಸಂಸತ್ತಿನಲ್ಲಿ ಆಗ್ರಹ

Date:

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವಂತೆ ಬೆಳೆದು ನಿಂತಿರುವ ‘ಪಕ್ಷಾಂತರ’ ಎಂಬ ಪಿಡುಗನ್ನು ನಿಯಂತ್ರಿಸಲು ಹಾಲಿ ಇರುವ ಕಾನೂನು ಸಂಪೂರ್ಣ ವಿಫಲವಾಗಿದೆ ಎಂಬ ಕಟು ಸತ್ಯ ಸೋಮವಾರ(ಡಿ.16) ರಾಜ್ಯಸಭೆಯ ಕಲಾಪದಲ್ಲಿ ಪ್ರತಿಧ್ವನಿಸಿತು. ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸುವ ಮತ್ತು ಜನಾದೇಶವನ್ನು ಹೈಜಾಕ್ ಮಾಡುವ ಅಸ್ತ್ರವಾಗಿ ಪಕ್ಷಾಂತರ ಬಳಕೆಯಾಗುತ್ತಿದ್ದು, ಸಂವಿಧಾನದ 10ನೇ ಅನುಸೂಚಿಗೆ (ಪಕ್ಷಾಂತರ ವಿರೋಧಿ ಕಾಯಿದೆ) ತುರ್ತಾಗಿ ತಿದ್ದುಪಡಿ ತರಬೇಕೆಂಬ ಆಗ್ರಹ ಸಂಸತ್ತಿನ ಉಭಯ ಸದನಗಳಲ್ಲಿಯೂ ಬಲವಾಗಿ ಕೇಳಿಬಂದಿದೆ.

​ಸೋಮವಾರ ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಿಪಿಎಂ ಸದಸ್ಯ ಜಾನ್ ಬ್ರಿಟ್ಟಾಸ್ ಮತ್ತು ವೈಎಸ್‌ಆರ್‌ಸಿಪಿ ಸದಸ್ಯ ಸುರೇಶ್ ರೆಡ್ಡಿ ಅವರು, ಪಕ್ಷಾಂತರ ವಿರೋಧಿ ಕಾಯಿದೆಯ ಲೋಪದೋಷಗಳನ್ನು ಎತ್ತಿ ತೋರಿಸುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದರು.

​ಬ್ರಿಟ್ಟಾಸ್ ಮತ್ತು ರೆಡ್ಡಿ ವಾದವೇನು?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರಾಜ್ಯಸಭೆಯಲ್ಲಿ ಮಾತನಾಡಿದ ಜಾನ್ ಬ್ರಿಟ್ಟಾಸ್, “ಈಗ ಜಾರಿಯಲ್ಲಿರುವ ಪಕ್ಷಾಂತರ ವಿರೋಧಿ ಕಾಯಿದೆಯು ಪಕ್ಷಾಂತರವನ್ನು ತಡೆಯುವ ಬದಲು, ಅದಕ್ಕೆ ಸಾಮೂಹಿಕ ರೂಪ ನೀಡಲು ಸಹಾಯ ಮಾಡುತ್ತಿದೆ,” ಎಂದು ಗಂಭೀರ ಆರೋಪ ಮಾಡಿದರು. ಸಂವಿಧಾನದ 10ನೇ ಶೆಡ್ಯೂಲ್‌ನ ಪ್ಯಾರಾ 4ರ ಪ್ರಕಾರ, ಒಂದು ಪಕ್ಷದ ಮೂರನೇ ಎರಡರಷ್ಟು ಶಾಸಕರು/ಸಂಸದರು ಬೇರೆ ಪಕ್ಷದೊಂದಿಗೆ ವಿಲೀನಗೊಂಡರೆ ಅವರು ಅನರ್ಹತೆಯಿಂದ ಪಾರಾಗುತ್ತಾರೆ. ಈ ಕಾನೂನಿನ ರಕ್ಷಣೆ ಪಡೆದು ಇತ್ತೀಚಿನ ವರ್ಷಗಳಲ್ಲಿ ಮಹಾರಾಷ್ಟ್ರ, ಗೋವಾ, ಮೇಘಾಲಯ ಸೇರಿದಂತೆ ಹಲವು ರಾಜ್ಯಗಳಲ್ಲಿ ಸರ್ಕಾರಗಳನ್ನೇ ಉರುಳಿಸಲಾಗಿದೆ ಎಂದು ಬ್ರಿಟ್ಟಾಸ್ ಸದನದ ಗಮನ ಸೆಳೆದರು.

​ಇದಕ್ಕೆ ದನಿಗೂಡಿಸಿದ ಸುರೇಶ್ ರೆಡ್ಡಿ, “ಪಕ್ಷಾಂತರದ ದೂರುಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಸಭಾಧ್ಯಕ್ಷರಿಗೆ (ಸ್ಪೀಕರ್) ನಿರ್ದಿಷ್ಟ ಕಾಲಮಿತಿ ಇಲ್ಲದಿರುವುದು ಕಾಯಿದೆಯ ಅತಿದೊಡ್ಡ ದುರಂತ,” ಎಂದರು. ಪಕ್ಷಾಂತರಿಗಳು ಮಂತ್ರಿಗಿರಿ ಅನುಭವಿಸಿ, ಅಧಿಕಾರಾವಧಿ ಮುಗಿಯುವವರೆಗೂ ಸ್ಪೀಕರ್ ನಿರ್ಧಾರ ಪ್ರಕಟಿಸದೆ ಇರುವ ಎಷ್ಟೋ ಉದಾಹರಣೆಗಳಿವೆ. ಆದ್ದರಿಂದ, ಈ ಕಾಯಿದೆಗೆ ತಿದ್ದುಪಡಿ ತಂದು ಸ್ಪೀಕರ್ ನಿರ್ಧಾರಕ್ಕೆ ಕಾಲಮಿತಿ ನಿಗದಿಪಡಿಸಬೇಕು ಅಥವಾ ಸ್ವತಂತ್ರ ಆಯೋಗಕ್ಕೆ ಈ ಅಧಿಕಾರ ನೀಡಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿತ್ತು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಂಡ್ಯದ ಹೆಣ್ಣು ಭ್ರೂಣ ಹತ್ಯೆ ಮತ್ತು ಹೆಣ್ಣು ಸಿಗದ ಯುವಕರ ಹತಾಶೆ

ಲೋಕಸಭೆಯಲ್ಲಿ ಮನೀಶ್ ತಿವಾರಿ ಎತ್ತಿದ್ದ ಪ್ರಶ್ನೆ

ಇದೇ ವಿಷಯವಾಗಿ ಕೆಲ ದಿನಗಳ ಹಿಂದಷ್ಟೇ ಲೋಕಸಭೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮನೀಶ್ ತಿವಾರಿ ಅವರು ಮಾಡಿದ್ದ ಭಾಷಣವೂ ಪ್ರಸ್ತುತ ಚರ್ಚೆಗೆ ಪೂರಕವಾಗಿದೆ. “1985ರಲ್ಲಿ ರಚನೆಯಾದ ಈ ಕಾಯಿದೆ ಅಂದಿನ ಕಾಲಕ್ಕೆ ಸರಿಯಿದ್ದಿರಬಹುದು. ಆದರೆ, ಇಂದಿನ ರಾಜಕೀಯ ಸನ್ನಿವೇಶದಲ್ಲಿ ಇದು ಸಂಪೂರ್ಣ ನಿಷ್ಕ್ರಿಯವಾಗಿದೆ,” ಎಂದು ತಿವಾರಿ ಪ್ರತಿಪಾದಿಸಿದ್ದರು.

​ಮುಖ್ಯವಾಗಿ, ಪಕ್ಷಾಂತರದ ದೂರುಗಳನ್ನು ಇತ್ಯರ್ಥಪಡಿಸುವ ಅಧಿಕಾರವನ್ನು ಸ್ಪೀಕರ್ ಅವರಿಗೆ ನೀಡಿರುವುದರ ಬಗ್ಗೆ ತಿವಾರಿ ಆಕ್ಷೇಪ ವ್ಯಕ್ತಪಡಿಸಿದ್ದರು. “ಸ್ಪೀಕರ್ ಎಷ್ಟೇ ನಿಷ್ಪಕ್ಷಪಾತಿಯಾಗಿದ್ದರೂ, ಅವರು ಒಂದು ನಿರ್ದಿಷ್ಟ ಪಕ್ಷದಿಂದಲೇ ಬಂದಿರುತ್ತಾರೆ. ಹೀಗಾಗಿ ಪಕ್ಷಾಂತರದಂತಹ ಸೂಕ್ಷ್ಮ ವಿಷಯಗಳಲ್ಲಿ ಅವರು ರಾಜಕೀಯ ಹಿತಾಸಕ್ತಿ ಮರೆತು ತೀರ್ಪು ನೀಡುವುದು ಕಷ್ಟಸಾಧ್ಯ. ಈ ಅಧಿಕಾರವನ್ನು ರಾಷ್ಟ್ರಪತಿ ಅಥವಾ ರಾಜ್ಯಪಾಲರಿಗೆ ವರ್ಗಾಯಿಸಿ, ಅವರು ಚುನಾವಣಾ ಆಯೋಗದ ಸಲಹೆಯಂತೆ ಕ್ರಮ ಕೈಗೊಳ್ಳುವ ವ್ಯವಸ್ಥೆ ಜಾರಿಗೆ ಬರಬೇಕು,” ಎಂದು ತಿವಾರಿ ಸಲಹೆ ನೀಡಿದ್ದರು.

ಕಾನೂನಿನ ಆಶಯವೇ ಬುಡಮೇಲು

‘ಆಯಾರಾಮ್ ಗಯಾರಾಮ್’ ಸಂಸ್ಕೃತಿಗೆ ಕಡಿವಾಣ ಹಾಕಲು ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ತಂದ ಈ ಕಾಯಿದೆ, ನಂತರ 91ನೇ ತಿದ್ದುಪಡಿಯ ಮೂಲಕ ಇನ್ನಷ್ಟು ಬಿಗಿಯಾಯಿತು ಎಂದು ಭಾವಿಸಲಾಗಿತ್ತು. ಆದರೆ, ವಾಸ್ತವದಲ್ಲಿ ‘ಸಣ್ಣಪುಟ್ಟ ಪಕ್ಷಾಂತರ’ದ ಬದಲಿಗೆ ‘ಸಾಮೂಹಿಕ ಪಕ್ಷಾಂತರ’ಕ್ಕೆ ಇದು ಹಾದಿ ಮಾಡಿಕೊಟ್ಟಿದೆ. ಕರ್ನಾಟಕ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ನಾಟಕಗಳೇ ಇದಕ್ಕೆ ಸಾಕ್ಷಿ.

​ಜನರು ಒಂದು ಸಿದ್ಧಾಂತ ಅಥವಾ ಪಕ್ಷವನ್ನು ನೋಡಿ ಮತ ನೀಡಿರುತ್ತಾರೆ. ಆದರೆ, ಆಯ್ಕೆಯಾದ ಪ್ರತಿನಿಧಿಗಳು ಆಮಿಷಗಳಿಗೆ ಬಲಿಯಾಗಿ ಅಥವಾ ಅಧಿಕಾರದ ಆಸೆಗೆ ಪಕ್ಷ ಬದಲಿಸುವುದು ಮತದಾರರಿಗೆ ಮಾಡುವ ದ್ರೋಹವಾಗಿದೆ. ಒಟ್ಟಾರೆಯಾಗಿ, ಜಾನ್ ಬ್ರಿಟ್ಟಾಸ್, ಸುರೇಶ್ ರೆಡ್ಡಿ ಮತ್ತು ಮನೀಷ್ ತಿವಾರಿ ಅವರ ಮಾತುಗಳು ಕೇವಲ ರಾಜಕೀಯ ಹೇಳಿಕೆಗಳಲ್ಲ; ಅವು ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಬೇಕಿರುವ ತುರ್ತು ಚಿಕಿತ್ಸೆಯ ಅಗತ್ಯತೆಯನ್ನು ಸಾರಿ ಹೇಳುತ್ತಿವೆ. ಸಂಸತ್ತು ಈ ಬಗ್ಗೆ ಗಂಭೀರವಾಗಿ ಚಿಂತಿಸಿ, ಕಾಯಿದೆಗೆ ಸಮಗ್ರ ತಿದ್ದುಪಡಿ ತರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...