ರೌಡಿಗಳ ಪರ ಬಿಜೆಪಿ ಘಟಾನುಘಟಿ ನಾಯಕರ ಪ್ರತಿಭಟನೆ ಎಷ್ಟು ಸರಿ?

Date:

ಕರ್ನಾಟಕದ ರಾಜಕೀಯ ವಲಯದಲ್ಲಿ ಇತ್ತೀಚೆಗೆ ಭಾರೀ ಚರ್ಚೆಗೆ ಗ್ರಾಸವಾಗಿರುವ ಸುಜಾತಾ ಹಂಡಿ ಪ್ರಕರಣವು ಬಿಜೆಪಿಯ ದ್ವಂದ್ವ ನೀತಿಯನ್ನು ಮತ್ತೊಮ್ಮೆ ಬಯಲಿಗೆಳೆದಿದೆ. ಬಿಜೆಪಿ ಕಾರ್ಯಕರ್ತೆಯಾಗಿ ಸುದ್ದಿಯಾಗಿರುವ ಸುಜಾತಾ ಹಂಡಿ, ಇತ್ತೀಚೆಗೆ ಹುಬ್ಬಳ್ಳಿಯ ಅರೆಸ್ಟ್ ಆದಾಗ “ಪೊಲೀಸರು ತನ್ನನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ” ಎಂದು ಆರೋಪಿಸಿದ್ದರು. ಆದರೆ, ಆಕೆಯ ಕ್ರಿಮಿನಲ್ ಚರಿತ್ರೆಯನ್ನು ನೋಡಿದರೆ, ಬಿಜೆಪಿ ಏಕೆ ಇಂತಹ ವ್ಯಕ್ತಿಗಳನ್ನು ಸಮರ್ಥಿಸುತ್ತದೆ ಎಂಬ ಪ್ರಶ್ನೆ ಹುಟ್ಟುತ್ತದೆ. ಇದು ಕೇವಲ ರಾಜಕೀಯ ಲಾಭಕ್ಕಾಗಿ ಮಾಡುತ್ತಿರುವುದೇ? ಅಥವಾ ಬಿಜೆಪಿ ಪಕ್ಷದಲ್ಲಿ ಮೃಗೀಯ ಪ್ರವೃತ್ತಿಯವರನ್ನು ಪೋಷಿಸುತ್ತಿದೆಯೇ ಎಂಬ ಅನುಮಾನ ಬರುತ್ತದೆ.

ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಕುರಿತು ಹೊರಬರುತ್ತಿರುವ ವಿವರಗಳು, ಕೇವಲ ಒಂದು ಅಪರಾಧ ಪ್ರಕರಣವನ್ನ ಮಾತ್ರವಲ್ಲ ರಾಜಕೀಯ ಪಕ್ಷಗಳು ಅಪರಾಧಿಗಳನ್ನು ಹೇಗೆ ‘ರಕ್ಷಿಸುತ್ತವೆ’ ಎಂಬ ಭಯಾನಕ ಸಂಸ್ಕೃತಿಯನ್ನೇ ಬಯಲಿಗೆಳೆಯುತ್ತಿದೆ.

ಕಳೆದ 2023ರ ನವೆಂಬರ್ 12ರಂದು ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಸುಜಾತಾ ಮತ್ತು ಅವರ ಸಹಚರರ ವಿರುದ್ಧ ಗಂಭೀರ ಆರೋಪಗಳ ಪ್ರಕರಣ ದಾಖಲಾಗಿತ್ತು. ತುಕಾರಾಮ್ ಎಂಬ ವ್ಯಕ್ತಿಯನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿ, ಅಪಹರಣ ಮಾಡಿ ನಾಲ್ಕು ದಿನಗಳ ಕಾಲ ಅಕ್ರಮವಾಗಿ ಕೂಡಿಹಾಕಿದ್ದರು. ಈ ಸಂದರ್ಭದಲ್ಲಿ ತುಕಾರಾಮ್‌ನನ್ನು ವಿವಸ್ತ್ರಗೊಳಿಸಿ, ನೈಲಾನ್ ಹಗ್ಗ ಮತ್ತು ಲಾಂಗ್‌ನಂತಹ ವಸ್ತುಗಳಿಂದ ಅಮಾನುಷವಾಗಿ ಹಲ್ಲೆ ಮಾಡಲಾಗಿತ್ತು. ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಸುಜಾತಾಳ ರಾಕ್ಷಸೀ ವರ್ತನೆ ಸ್ಪಷ್ಟವಾಗಿ ಕಾಣುತ್ತದೆ. ‘ಅಮ್ಮಾ, ತಾಯಿ ಬಿಟ್ಟುಬಿಡು’ ಎಂದು ಕಾಲಿಗೆ ಬಿದ್ದು ಕೇಳಿದರೂ ಕಿಂಚಿತ್ತೂ ಕರುಣೆ ತೋರದೆ, ಅವರ ಬಟ್ಟೆಗಳನ್ನು ಬಿಚ್ಚಿಸಿ ಹಿಗ್ಗಾಮುಗ್ಗಾ ಥಳಿಸಿದ್ದರು. ಆತನಿಂದ ಸುಮಾರು 1.84 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಸುಜಾತಾ ಮತ್ತು ಸಹಚರರನ್ನು ಬಂಧಿಸಿದ್ದರೂ, ಅವರು ಜಾಮೀನಿನ ಮೇಲೆ ಹೊರಗಿದ್ದರು. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1 6 1

ಈಗ ಆ ವಿಡಿಯೋದ ಮುಂದುವರಿದ ಭಾಗಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ. ಇಂತಹ ದೃಶ್ಯಗಳನ್ನು ನೋಡಿ ಕೂಡ, ಈಕೆಯ ಪರವಾಗಿ ಮಾತಾಡುವ ರಾಜಕೀಯ ಮುಖಂಡರು ಇದ್ದಾರೆಂದರೆ ಇದು ಅಪರಾಧಕ್ಕಿಂತ ದೊಡ್ಡ ರಾಜಕೀಯ ಪಾತಕವಲ್ಲವೇ?

ಜನವರಿ 7, ರಂದು ಹುಬ್ಬಳ್ಳಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಕೇಶ್ವಾಪುರ ಠಾಣಾ ವ್ಯಾಪ್ತಿಯಲ್ಲಿ ಗಲಾಟೆಯಾಗಿತ್ತು. ಬೂತ್‌ ಅಧಿಕಾರಿಗಳೊಂದಿಗೆ ತೆರಳಿದ್ದ ಬಿಜೆಪಿ ಕಾರ್ಯಕರ್ತೆ ನಮ್ಮ ವೋಟ್‌ ಡಿಲೀಟ್‌ ಮಾಡಿಸಿದ್ದಾರೆ ಅಂತ ಗಲಾಟೆ ಮಾಡಿದ್ದರು. ವೋಟರ್ ಲಿಸ್ಟ್ ರಿವಿಷನ್ ಕೆಲಸದ ಸಂದರ್ಭದಲ್ಲಿ ಸುಜಾತಾ ಅರೆಸ್ಟ್ ಆಗಿದ್ದರು. ಅವರು ಪೊಲೀಸರು ತನ್ನನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಪೊಲೀಸರು ಈ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿಕೆಯಲ್ಲಿ, ಸುಜಾತಾ ಸ್ವತಃ ಬಟ್ಟೆಗಳನ್ನು ಬಿಚ್ಚಿಸಿ ಪೊಲೀಸ್ ಮಹಿಳಾ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದರು. ಅಲ್ಲದೆ, ಅವರ ಮೇಲೆ ಈಗಾಗಲೇ 9 ಕ್ರಿಮಿನಲ್ ಕೇಸ್‌ಗಳು ಇದ್ದು, ಹನಿಟ್ರ್ಯಾಪ್ ಮತ್ತು ಬ್ಲ್ಯಾಕ್‌ಮೇಲ್ ಆರೋಪಗಳು ಸೇರಿವೆ ಎಂದು ಪೊಲೀಸರು ಉಲ್ಲೇಖಿಸಿದ್ದರು.

ಇದರ ಮಧ್ಯೆ ಬಿಜೆಪಿಯ ನಿಲುವು ಆಶ್ಚರ್ಯಕರವಾಗಿದೆ. ಪಕ್ಷದ ನಾಯಕರು ಸುಜಾತಾ ಹಂಡಿಯನ್ನು ಸಮರ್ಥಿಸಿ, ಪೊಲೀಸರ ಮೇಲೆ ದೌರ್ಜನ್ಯದ ಆರೋಪ ಮಾಡಿದ್ದರು. ಬಿಜೆಪಿ ನಾಯಕರು ಪೊಲೀಸರನ್ನು ‘ಕಾಂಗ್ರೆಸ್ ಸರ್ಕಾರದ ಕೈಗೊಂಬೆ’ ಎಂದು ಕರೆದು, ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದರು. ಹುಬ್ಬಳ್ಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ‘ಪೊಲೀಸರ ಅತ್ಯಾಚಾರಕ್ಕೆ ಕಡಿವಾಣ ಹಾಕಿ’ ಎಂದು ಘೋಷಣೆಗಳನ್ನು ಕೂಗಿದ್ದರು. ಪಕ್ಷದ ಸ್ಥಳೀಯ ಮುಖಂಡರು ಸುಜಾತಾಳನ್ನು ‘ಬಿಜೆಪಿ ಕಾರ್ಯಕರ್ತೆ’ ಎಂದು ಹೊಗಳಿ, ಅವರ ಮೇಲಿನ ಆರೋಪಗಳನ್ನು ನಿರಾಕರಿಸುತ್ತಿದ್ದಾರೆ, ಆಕೆಯ ಹಳೆಯ ಕ್ರಿಮಿನಲ್ ರೆಕಾರ್ಡ್‌ನ್ನು ಮರೆಮಾಚುತ್ತಿದ್ದಾರೆ. ಬಿಜೆಪಿಯ ಹಿರಿಯ ನಾಯಕರು ಸುಜಾತಾಳ ಹಿನ್ನೆಲೆಯನ್ನು ಅಡಗಿಸಿ, ಈ ಘಟನೆಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣಿಸತ್ತೆ. 

image 88 3

ಸುಜಾತಾ ಹಂಡಿ ಪರವಾಗಿ ಮಾತನಾಡಿದ ಸಿ ಟಿ ರವಿ, “ಕಾಂಗ್ರೆಸ್‌ ತನ್ನ ರಾಜಕೀಯ ಅಧಿಕಾರವನ್ನ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದು ಮಾನ ಹಕ್ಕುಗಳ ದೌರ್ಜನ್ಯ ಜೊತೆಗೆ ಮಹಿಳಾ ಹಕ್ಕುಗಳ ದೌರ್ಜನ್ಯ ಅನ್ನೋದು ಬಹಳ ಸ್ಪಷ್ಟವಾಗಿ ಕಾಣಿಸತ್ತೆ. ಮಹಿಳೆಗೆ ಯಾರು ದೌರ್ಜನ್ಯ ಎಸಗಿದ್ದಾರೆ ಅಂತಹ ಪೊಲೀಸ್‌ ಅಧಿಕಾರಗಳ ವಿರುದ್ಧ ಕ್ರಮ ಆಗಬೇಕು” ಅಂತ ಆಗ್ರಹಿಸಿದ್ದರು.

ವಿಪಕ್ಷ ನಾಯಕ ಆರ್‌ ಅಶೋಕ್‌, “ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು, ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ ಮತ್ತು ಈ ಘಟನೆಯು “ಕಾನೂನು ಮತ್ತು ಸುವ್ಯವಸ್ಥೆಯ ಕುಸಿತ”ವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. 

ಬಿಜೆಪಿ ರಾಜ್ಯಧ್ಯಕ್ಷ ಬಿ ವೈ ವಿಜಯೇಂದ್ರ, “ಕಾರಣ ಏನೇ ಇರಲಿ, ಈ ನೆಲದ ಸಂಸ್ಕೃತಿಯಲ್ಲಿ ಮಹಿಳೆಯರನ್ನು ಗೌರವಿಸುವುದು ಆದ್ಯತೆಯಾಗಿದೆ. ಸಂದರ್ಭಗಳು ಏನೇ ಇರಲಿ, ಮಹಿಳೆಯ ಘನತೆಗೆ ಕುಂದುಂಟು ಮಾಡುವ ಪರಿಸ್ಥಿತಿಗೆ ಅವಕಾಶ ನೀಡುವುದು ವ್ಯವಸ್ಥೆಯ ವೈಫಲ್ಯ. ಇಂತಹ ಅವಮಾನಕರ ಘಟನೆಗಳು ನಮ್ಮ ಕರ್ನಾಟಕದ ಗೌರವಕ್ಕೆ ತೀವ್ರ ಹೊಡೆತ ನೀಡಿವೆ” ಅಂತ ಹೇಳಿದ್ದಾರೆ.

ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, “ಬಿಜೆಪಿ ಕಾರ್ಯಕರ್ತೆ ಸುಜಾತ ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ, ಧೈರ್ಯ ಹಾಗೂ ಸಾಂತ್ವನ” ಮಾಡಿದ ಸೋಷಿಯಲ್‌ ಮೀಡಿಯಾದಲ್ಲಿ ಕೆಲ ಫೊಟೋಗಳನ್ನ ಹಂಚಿಕೊಂಡಿದ್ದಾರೆ.  ಇವರ ಜೊತೆ ವಿಪಕ್ಷ ನಾಯಕ ಆರ್ ಅಶೋಕ್, ಛಲವಾದಿ ನಾರಾಯಣಸ್ವಾಮಿ ಹಾಗೂ ಶಾಸಕರಾದ ಮಹೇಶ್ ಟೆಂಗಿನಕಾಯಿ, ತಿಪ್ಪಣ್ಣ ಮಜ್ಜಗಿ ಅಧ್ಯಕ್ಷರು ಮಹಾನಗರ ಜಿಲ್ಲಾ ಬಿಜೆಪಿ, ಜ್ಯೋತಿ ಪಾಟೀಲ ಹು-ಧಾ ಮಹಾನಗರ ಪಾಲಿಕೆ ಮೇಯರ್, ಸಂತೋಷ ಚವ್ವಾನ್ ಹು-ಧಾ ಮಹಾನಗರ ಪಾಲಿಕೆ ಉಪಮೇಯರ್, ಮಹೇಶ ಕೌತಾಳ ಕಾರ್ಯದರ್ಶಿ ರಾಜ್ಯ ಬಿಜೆಪಿ ಎಸ್ ಸಿ ಮೋರ್ಚ ಹಾಗೂ ಇತರರು  ಉಪಸ್ಥಿತರಿದ್ದರು.

https://www.facebook.com/share/p/17uYjHsorr

ಇಂತಹ ಹೀನ ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಿರುವ  ವ್ಯಕ್ತಿಯ ಕುರಿತು ಬಿಜೆಪಿ ನಾಯಕರು ಸಾರ್ವಜನಿಕವಾಗಿ ಸಹಾನುಭೂತಿ ತೋರುತ್ತಿದ್ದರೆ, ದೇಶದ ಜನರು ಕೇಳಲೇಬೇಕಾದ ಕೆಲ ಪ್ರಶ್ನೆಗಳಿದೆ. ಹನಿಟ್ರ್ಯಾಪ್, ಅಪಹರಣ, ವಿವಸ್ತ್ರಗೊಳಿಸಿ ಹಲ್ಲೆ ಇವೆಲ್ಲಾ ‘ಸಣ್ಣ ಪ್ರಕರಣ’ಗಳಾ? ಪಕ್ಷದ ಟ್ಯಾಗ್ ಇದ್ದರೆ, ಕಾನೂನು ಬದಲಾಗುತ್ತಾ? ಬಿಜೆಪಿ ಸದಾ “ಕಾನೂನು ಮತ್ತು ಸುವ್ಯವಸ್ಥೆ”, “ಮಹಿಳಾ ಗೌರವ”, “ಸಂಸ್ಕೃತಿ” ಬಗ್ಗೆ ಉಪನ್ಯಾಸ ನೀಡುತ್ತದೆ. ಆದರೆ ಅದೇ ಪಕ್ಷದ ಹಿನ್ನೆಲೆ ಹೊಂದಿರುವವರ ಮೇಲೆ ಇಂತಹ ಮೃಗೀಯ ಆರೋಪಗಳು ಬಂದಾಗ, ಆ ಸುವ್ಯವಸ್ಥೆ ಎಲ್ಲಿಗೆ ಹೋಗುತ್ತದೆ?

ಇಂದು ಸುಜಾತಾ ಹಂಡಿ, ನಾಳೆ ಮತ್ತೊಬ್ಬರು. ಅಪರಾಧ ಎಸಗಿದವರನ್ನು ಪಕ್ಷದ ಬಾವುಟದ ಹಿಂದೆ ನಿಲ್ಲಿಸಿ, “ವಿಡಿಯೋ ಕಟ್ ಮಾಡಲಾಗಿದೆ”, “ಷಡ್ಯಂತ್ರ”, “ರಾಜಕೀಯ ಸೇಡು” ಎಂದು ಹೇಳುತ್ತಾರೆ. ಇಲ್ಲಿ ಅಪರಾಧಿಗಳಿಗೆ ಧೈರ್ಯ ಕೊಡುವವರು ಯಾರು? ಇಂತಹ ಸಂದರ್ಭದಲ್ಲಿ ಬಿಜೆಪಿ ಏನು ಮಾಡಬೇಕಿತ್ತು? “ಕಾನೂನು ತನ್ನ ಕೆಲಸ ಮಾಡಲಿ. ಆರೋಪ ಸಾಬೀತಾದರೆ ಕಠಿಣ ಕ್ರಮವಾಗಲಿ” ಅಂತ ಹೇಳಬೇಕಿತ್ತು. ಬದಲಾಗಿ ಬಿಜೆಪಿ ಏನು ಮಾಡಿತು? ಆರೋಪಿಯ ಪರವಾಗಿ ಮಾತನಾಡಿದರು.  ತನಿಖೆಯ ಬದಲು ‘ಪೊಲೀಸ್ ತಪ್ಪು’ ಎಂಬ ನರೇಟಿವ್ ಮುಂದಿಟ್ಟರು ‘ಮಹಿಳಾ ಗೌರವ’ ಎಂಬ ಪದವನ್ನು ಆರೋಪದಿಂದ ತಪ್ಪಿಸಿಕೊಳ್ಳಲು ಬಳಸಿಕೊಂಡರು. ಇಲ್ಲಿಯೇ ಬಿಜೆಪಿಯ ನೈತಿಕತೆ ಕುಸಿದಿದ್ದು.

ಬಿಜೆಪಿಗೆ ನೈತಿಕತೆ ಇದಿಯಾ? ಏಕೆಂದರೆ ಪಕ್ಷ ತನ್ನ ರಾಜಕೀಯ ಲಾಭಕ್ಕಾಗಿ ಕ್ರಿಮಿನಲ್ ಹಿನ್ನೆಲೆಯವರನ್ನು ಬಳಸಿಕೊಳ್ಳುತ್ತಿದೆ. ಮಹಿಳಾ ಹಕ್ಕುಗಳ ಬಗ್ಗೆ ದೊಡ್ಡ ದೊಡ್ಡ ಮಾತನಾಡುವ ಬಿಜೆಪಿ, ಸುಜಾತಾಳಂತಹವರನ್ನು ಬೆಂಬಲಿಸುವ ಮೂಲಕ ತನ್ನ ಮುಖವಾಡವನ್ನು ಬಯಲು ಮಾಡಿದೆ. ಬಿಜೆಪಿಗೆ ನೇರ ಪ್ರಶ್ನೆ – ಈ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಕಾರ್ಯಕರ್ತೆಯ ವಿರುದ್ಧ ಪಕ್ಷ ಯಾವ ಶಿಸ್ತು ಕ್ರಮ ಕೈಗೊಂಡಿದೆ. ಆಕೆಯನ್ನು ಸಮರ್ಥಿಸುವಂತೆ ಮಾತನಾಡಿದ ನಾಯಕರ ಹೇಳಿಕೆಗಳಿಗೆ ಪಕ್ಷದ ಒಪ್ಪಿಗೆಯಿದೆಯೇ? “ಮಹಿಳಾ ಸುರಕ್ಷತೆ” ಬಗ್ಗೆ ಭಾಷಣ ಮಾಡುವ ಬಿಜೆಪಿ, ಈ ಪ್ರಕರಣದ ಸಂತ್ರಸ್ತನಿಗೆ ನ್ಯಾಯ ಒದಗಿಸಲು ಏನು ಮಾಡುತ್ತಿದೆ?

photo 6271293959388728751 y

ಬಿಜೆಪಿ ಪ್ಲ್ಯಾನ್‌ ಯಾವಾಗಲೂ ಒಂದೇ ಆಗಿರತ್ತದೆ. ಆರೋಪಿ ಬಿಜೆಪಿ ಹಿನ್ನೆಲೆ ಹೊಂದಿದ್ದರೆ, ಅದು “ರಾಜಕೀಯ ಪಿತೂರಿ” ಸಾಕ್ಷ್ಯಗಳು ಸಿಕ್ಕರೆ, “ಆ ವಿಡಿಯೋ ಎಡಿಟ್ ಮಾಡಲಾಗಿದೆ” ಪ್ರಶ್ನೆ ಕೇಳಿದರೆ  “ಕಾಂಗ್ರೆಸ್‌ ಗಂಜಿ ಗಿರಾಕಿ” ಎಂದು ಪ್ರಶ್ನಿಸುವವರ ಬಾಯನ್ನು ಮುಚ್ಚಿಸುವ ಪ್ರಯತ್ನ. ಬಿಜೆಪಿ ಅಪರಾಧಿಗಳ ರಕ್ಷಣಾ ವ್ಯವಸ್ಥೆಯಂತೆ ಕೆಲಸ ಮಾಡುತ್ತಿದೆ. ಇಂತಹ ರಕ್ಷಣೆಯೇ ನಾಳೆ ಮತ್ತೊಂದು ಸುಜಾತಾ ಹಂಡಿಯನ್ನು ಹುಟ್ಟಿಸುತ್ತದೆ. ಅಪರಾಧಕ್ಕೆ ಧರ್ಮವಿಲ್ಲ. ಅಪರಾಧಕ್ಕೆ ಲಿಂಗವಿಲ್ಲ. ಅಪರಾಧಕ್ಕೆ ಪಕ್ಷವಿಲ್ಲ. ಇದು ನೆನಪಿಟ್ಟುಕೊಳ್ಳಲೇಬೇಕು. ಯಾವ ಪಕ್ಷವಾಗಿರಲಿ, ವ್ಯಕ್ತಿ ಯಾರೇ ಆಗಿರಲಿ, ಅಪರಾಧ ನಡೆದಿದ್ದಾಗ, ನೈತಿಕತೆ ಹೊತ್ತು ಆರೋಪಿಯಿಂದ ಅಂತರ ಕಾಯ್ದುಕೊಳ್ಳಬೇಕು. ಅದರ ಬದಲು, ಅಪರಾಧದ ಮೇಲೆ ರಾಜಕೀಯ ಬಾವುಟ ಹೊದಿಸಿದರೆ, ಆ ಪಕ್ಷಕ್ಕೆ ನೈತಿಕತೆ ಪ್ರಶ್ನೆಯೇ ಬರುವುದಿಲ್ಲ. ಅದು ಪತನವಾಗಿದೆ ಅಂತಲೇ ಅರ್ಥ. ಅಪರಾಧಿ ಮಹಿಳೆಯಾದರೂ ಅಪರಾಧ ಅಪರಾಧವೇ. ಅಪರಾಧಿ ಕಾರ್ಯಕರ್ತೆಯಾದರೂ ಅಪರಾಧ ಅಪರಾಧವೇ. ಅಪರಾಧಿ ಪಕ್ಷದವರಾದರೂ, ಅಪರಾಧಕ್ಕೆ ಯಾವುದೇ ಐಡಿಯಾಲಜಿ ರಕ್ಷಣೆ ಕೊಡಬಾರದು. ಇಂತಹ ಮೃಗೀಯ ಕೃತ್ಯಗಳಿಗೆ ರಾಜಕೀಯ ರಕ್ಷಣೆಯೇ ಸಿಕ್ಕರೆ, ನಾಳೆ ಯಾರೂ ಸುರಕ್ಷಿತರಾಗಿರುವುದಿಲ್ಲ.

ಮುಂದೊಂದು ದಿನ ಬಿಜೆಪಿಗೆ  “ಅಪರಾಧದ ಸಮಯದಲ್ಲಿ ನೀನು ಯಾರ ಪಕ್ಕ ನಿಂತೆ?” ಅಂತ ಇತಿಹಾಸ ಕೇಳುತ್ತದೆ. ಏಕೆಂದರೆ ಜನರು ನೋಡುತ್ತಿದ್ದಾರೆ. ವಿಡಿಯೋಗಳು ಮಾತನಾಡುತ್ತಿವೆ. ಇತಿಹಾಸ ನೆನಪಿಟ್ಟುಕೊಳ್ಳುತ್ತದೆ. ಮೃಗಗಳಿಗೆ ಸಪೋರ್ಟ್ ಮಾಡುವ ಪಕ್ಷ, ಜನತೆಯ ಮುಂದೆ ಯಾವ ಮುಖ ತೋರಿಸತ್ತದೆ ? ಸುಜಾತಾಳ ಮೇಲಿನ ಆರೋಪಗಳನ್ನು ತನಿಖೆ ಮಾಡಬೇಕು ಮತ್ತು ಬಿಜೆಪಿ ತನ್ನ ನಿಲುವನ್ನು ಪುನರ್ವಿಚಾರ ಮಾಡಬೇಕು. ಇಲ್ಲದಿದ್ದರೆ, ರಾಜಕೀಯದ ಹೆಸರಲ್ಲಿ ಮೃಗಗಳನ್ನು ಪೋಷಿಸಿದ ಪಾಪ ಅಂಟಲಿದೆ.

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...