ಮನರೇಗಾ | ಕಾರ್ಮಿಕರು ದುಡಿಯಲು ಸಿದ್ಧರಿದ್ದಾರೆ; ಕೊಡಲು ಮೋದಿ ಸರ್ಕಾರಕ್ಕೆ ಮನಸ್ಸಿಲ್ಲ

Date:

ಮನರೇಗಾ ಕೆಲಸದ ಬೇಡಿಕೆಯೇ ಕುಸಿದಿದೆ ಎಂಬುದು ಸತ್ಯವಲ್ಲ, ಬೇಡಿಕೆ ಇನ್ನೂ ಬಲವಾಗಿದೆ. ಆದರೆ ಪೂರೈಕೆಯಲ್ಲಿ ತೊಡಕುಗಳಿವೆ ಎಂಬುದು ಸರ್ಕಾರದ ಅಧಿಕೃತ ಡೇಟಾ ಮತ್ತು ಸ್ವತಂತ್ರ ವರದಿಗಳಿಂದಲೇ ಬಹಿರಂಗವಾಗಿದೆ.

ಗ್ರಾಮೀಣ ಜನರಿಗೆ ಜೀವನಾಡಿಯಾಗಿರುವ ಮನರೇಗಾ(ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ) ಕಾಯ್ದೆಯನ್ನು ಮೋದಿ ಸರ್ಕಾರ ಹಲವು ವರ್ಷಗಳಿಂದಲೂ ನಿರ್ಲಕ್ಷಿಸುತ್ತಲೇ ಬಂದಿದೆ. ಉದ್ಯೋಗಗಳ ಬಿಕ್ಕಟ್ಟು, ನಿರಂತರವಾಗಿ ವಿಸ್ತರಿಸುತ್ತಿರುವ ಯುವ ಕಾರ್ಯಪಡೆ ಮತ್ತು ಕೃಷಿ ಕೆಲಸವು ಈಗಾಗಲೇ ಸ್ಯಾಚುರೇಶನ್ ಮಟ್ಟವನ್ನು ಮೀರಿರುವುದರಿಂದ, ವೇತನಗಳು ಅಲ್ಪವಾಗಿದ್ದರೂ, ಕೆಲಸಗಳು ತುಂಬಾ ಕಷ್ಟಕರವಾಗಿದ್ದರೂ ಹಲವು ಕುಟುಂಬಗಳು ಮನರೇಗಾ ಕೆಲಸ ನೀಡುವಂತೆ ಒತ್ತಾಯಿಸುತ್ತಿವೆ. ಹೀಗಿರುವಾಗ ಕೆಲಸದ ಬೇಡಿಕೆ ಮತ್ತು ಕಾರ್ಮಿಕರು ನಿಜವಾಗಿಯೂ ಕಡಿಮೆಯಾಗುತ್ತಿದ್ದಾರೆಯೇ? ಎಂಬುದನ್ನು ನೋಡಿದರೆ, ಕುಸಿತ ಕಂಡಿರುವುದು ಕೆಲಸದ ಪೂರೈಕೆಯಲ್ಲಿ ಎಂಬುದು ಕಂಡುಬರುತ್ತದೆ.

ಕೋವಿಡ್ ವರ್ಷಗಳಲ್ಲಿ ಕೆಲಸದ ಹೆಚ್ಚಳದ ನಂತರ, ಕಾರ್ಮಿಕರ ಕುಸಿತ ಕಂಡುಬಂದಿದೆ. 2020-21ರಲ್ಲಿ, 11.2 ಕೋಟಿ ಜನರು ಈ ಯೋಜನೆಯಡಿ ಕೆಲಸ ಮಾಡಿದರು. ನಂತರ 2021-22ರಲ್ಲಿ 10.6 ಕೋಟಿ ಜನರು ಕೆಲಸ ಮಾಡಿದರು. ಈ ಎರಡು ಪ್ರಮುಖ ಸಾಂಕ್ರಾಮಿಕ ವರ್ಷಗಳ ನಂತರ, ಮೋದಿ ಸರ್ಕಾರವು ಹಣವನ್ನು ಹಿಂಪಡೆಯಲು ಪ್ರಾರಂಭಿಸಿತು. ಇದರಿಂದಾಗಿ ಕೆಲಸದಲ್ಲಿ ಇಳಿಕೆ ಕಂಡುಬಂದಿತು.

ಹೀಗಾಗಿ, 2022-23ರಲ್ಲಿ ಕೆಲಸ ಮಾಡುತ್ತಿದ್ದ 8.7 ಕೋಟಿ ಜನರ ಸಂಖ್ಯೆ 2023-24ರಲ್ಲಿ 8.3 ಕೋಟಿಗೆ ಇಳಿಯಿತು. 2024-25ರಲ್ಲಿ ಇನ್ನೂ ಕಡಿಮೆ ಅಂದರೆ 7.9 ಕೋಟಿ ಜನರು ಕೆಲಸ ಮಾಡುತ್ತಿದ್ದರು. ಈ ದತ್ತಾಂಶವು ನಿಜವಾದ ಕೆಲಸ ಮಾಡಿದ ವ್ಯಕ್ತಿಗಳ ಸಂಖ್ಯೆಗೆ ಸಂಬಂಧಿಸಿದೆ ಎಂಬುದನ್ನು ನೆನಪಿನಲ್ಲಿಡಬೇಕು. ಕೆಲಸಕ್ಕಾಗಿ ಅರ್ಜಿಗಳಾಗಿ ದಾಖಲಿಸಲಾಗಿರುವುದನ್ನು ನೋಡಿದರೆ ಮನರೇಗಾಕ್ಕೆ ಬೇಡಿಕೆ ಯಾವಾಗಲೂ ಹೆಚ್ಚಾಗಿರುತ್ತದೆ. ಆದರೆ ಕಳೆದ ಎರಡು ವರ್ಷಗಳಲ್ಲಿ, ಪ್ರತಿ ವರ್ಷವೂ ಸುಮಾರು 1 ಕೋಟಿ ಜನರಿಗೆ ಕೆಲಸ ನೀಡಲು ನಿರಾಕರಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆದರೆ ಬೇಡಿಕೆ ಕಡಿಮೆಯಾಗುತ್ತಿರುವುದರಿಂದ ಕೆಲಸದ ಇಳಿಕೆ ಕಡಿಮೆಯಾಗುತ್ತಿದೆಯೆಂದು ಸರ್ಕಾರಿ ಅಧಿಕಾರಿಗಳು ಬಿಂಬಿಸುತ್ತಿರುವುದು ಕಾರ್ಮಿಕರನ್ನು ದಾರಿತಪ್ಪಿಸುವಂತಿವೆ.

ಪಶ್ಚಿಮ ಬಂಗಾಳವು MGNREGA ಯೋಜನೆಯಿಂದ ಹೊರಗುಳಿದಿರುವುದರಿಂದ MGNREGA ಕಾರ್ಮಿಕರ ಸಂಖ್ಯೆಯಲ್ಲಿನ ಇಳಿಕೆಯನ್ನು ಗಣನೀಯವಾಗಿ ವಿವರಿಸಬಹುದು. ಪಶ್ಚಿಮ ಬಂಗಾಳವು ಯೋಜನೆಯ ಭಾಗವಾಗಿದ್ದ ಕೊನೆಯ ವರ್ಷ 2021-22ರಲ್ಲಿ, ರಾಜ್ಯದಿಂದ 1.1 ಕೋಟಿಗೂ ಹೆಚ್ಚು ಜನರು ಈ ಯೋಜನೆಯಲ್ಲಿ ಕೆಲಸ ಮಾಡಿದ್ದರು. ಇದು ದೇಶಾದ್ಯಂತ ಕಾರ್ಮಿಕರ ಸಂಖ್ಯೆಯ ಸುಮಾರು 10 ಪ್ರತಿಶತದಷ್ಟಿತ್ತು, ನಂತರ ಕಡಿತಗೊಳಿಸಲಾಯಿತು. ಅಲ್ಲದೆ 2022-23ರಲ್ಲಿ ಬಂಗಾಳಕ್ಕೆ ಯಾವುದೇ ಹಣವನ್ನು ನೀಡಲಾಗಿಲ್ಲ. ಇದರ ಪರಿಣಾಮವಾಗಿ ರಾಜ್ಯದಲ್ಲಿ ಈ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿತು. ಇದರಿಂದ 16.3 ಲಕ್ಷಕ್ಕೆ ಇಳಿಯಿತು. ಅದರ ಮುಂದಿನ ವರ್ಷದಲ್ಲಿ(2023-24) ಈ ಸಂಖ್ಯೆ 9,415ಕ್ಕೆ ಇಳಿಯಿತು. ಹೀಗೆ ಮನರೇಗಾ ಕೆಲಸದ ಕಾರ್ಮಿಕರ ಸಂಖ್ಯೆಗಳು ಕಡಿಮೆಯಾಗುತ್ತಿವೆಯೇ ಹೊರತು ಕೆಲಸದ ಬೇಡಿಕೆ ಕಡಿಮೆಯಾಗುತ್ತಿರುವುದರಿಂದಲ್ಲ.

ಮೋದಿ ತವರು ನೆಲವಾದ ಗುಜರಾತ್‌ನಲ್ಲಿಯೂ ಮನರೇಗಾ ಅಡಿಯಲ್ಲಿ ಕೆಲಸ ಮಾಡುತ್ತಿರುವ ಬರೋಬ್ಬರಿ 22.68 ಲಕ್ಷ ಕಾರ್ಮಿಕರನ್ನು ಮನರೇಗಾದಿಂದ ಕೈಬಿಡಲಾಗಿದೆ.

ಸಿಪಿಐಎಂ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಅವರು ಈ ದಿ.ಕಾಮ್‌ನೊಂದಿಗೆ ಮಾತನಾಡಿ, “ಉದ್ಯೋಗ ಖಾತ್ರಿ ಕಾಯ್ದೆ ಎನ್ನುವುದೇ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಅಪಾಯದ ಅಸ್ತ್ರವಾಗಿ ಕಾಣುತ್ತಿತ್ತು. ಏಕೆಂದರೆ ಸಾಮಾನ್ಯ ದುಡಿಯುವ ಜನರ ಕೈಯಲ್ಲಿ ಹಣ ಬರಬಾರದು, ಅವರ ತಲಾ ಆದಾಯ ಹೆಚ್ಚಾಗಬಾರದು, ಇವರಿಗೆ ಉದ್ಯೋಗ ಎನ್ನುವ ಯಾವುದೇ ಖಾತರಿ ಇರಬಾರದು ಎನ್ನುವುದೇ ಬಿಜೆಪಿ ಉದ್ದೇಶ. ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಕಾಯಿದೆಯನ್ನು ಜಾರಿಗೊಳಿದಾಗ ಮೋದಿಯವರು ಈ ಕಾಯಿದೆಯನ್ನೂ ಜರಿದದ್ದೂ ಇದೆ” ಎಂದು ಹೇಳಿದರು.

“ಸಂವಿಧಾನದಲ್ಲಿ ʼಉದ್ಯೋಗʼ ಮೂಲಭೂತ ಹಕ್ಕು ಎಂಬುದಾಗಿ ಆಗಿಲ್ಲ. ಈಗ ಉದ್ಯೋಗ ಮೂಲಭೂತ ಹಕ್ಕು ಆಗದಿದ್ದರೂ ಕೂಡ ಗ್ರಾಮೀಣ ಪ್ರದೇಶದ ದುಡಿಯುವ ವರ್ಗದವರಿಗೆ ಒಂದು ಉದ್ಯೋಗ ಖಾತ್ರಿ ಎಂಬುದಾದರೂ ಇತ್ತು. ಜನಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಗ್ರಾಮೀಣ ಭಾಗದ ಜನರಿಗೆ ಕೆಲಸಕ್ಕಾಗಿ ಬೃಹತ್‌ ಹೋರಾಟ ಮಾಡಿದಂತಹ ಸಂದರ್ಭದಲ್ಲಿ ಎಡಪಕ್ಷಗಳ ಒತ್ತಾಯದಿಂದ ಯುಪಿಎ ಸರ್ಕಾರ ನರೇಗಾ ಎಂಬುದನ್ನು ಜಾರಿಗೊಳಿಸಿತು” ಎಂದು ಹೇಳಿದರು.

“ಮೊದಲು ಮನರೇಗಾ ಅಡಿ ಅನೇಕ ಕಾಮಗಾರಿಗಳನ್ನು ತೆಗೆದುಕೊಳ್ಳಬಹುದಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ʼಮನರೇಗಾ ಕ್ರಿಯಾ ಯೋಜನೆಯಲ್ಲಿ 20ಕ್ಕಿಂತ ಹೆಚ್ಚು ಕಾಮಗಾರಿಗಳನ್ನು ತೆಗೆದುಕೊಳ್ಳುವಂತಿಲ್ಲʼ ಎಂಬ ಅಂಶವನ್ನು ಸೇರಿಸಿತು. ಅದರಲ್ಲಿ ಒಂದು ಬಾರಿ ಮುಗಿಸಿದ ಕಾಮಗಾರಿಗೆ ಮತ್ತೆ ಹೋಗುವಂತಿಲ್ಲ. ಅಲ್ಲಿ ಮುಂದಿನ ವರ್ಷವೇ ಕೆಲಸ ಕೊಡಬೇಕು. ಹಾಗಾಗಿ 100 ದಿನಗಳ ಉದ್ಯೋಗ ನೀಡುವುದೂ ಕಷ್ಟವಾಗುತ್ತಿತ್ತು.‌ ಆದರೆ ಈಗ ಪ್ರಧಾನಿ ನರೇಂದ್ರ ಮೋದಿಯವರು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಮನರೇಗಾ ಕಾಯಿದೆಯನ್ನೇ ಬುಡಮೇಲು ಮಾಡಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.

“125 ದಿನಗಳ ಕೆಲಸ ಕೊಡುವುದಾಗಿ ಹೇಳಿರುವುದು ಕೇವಲ ತುಟಿಗೆ ತುಪ್ಪ ಹಚ್ಚುವ ತಂತ್ರ. ಆದರೆ ಹೊಸದಾಗಿ ಮಂಡಿಸಿರುವ ವಿಬಿ ಜಿ ರಾಮ್‌ ಜಿ ಮಸೂದೆಯಲ್ಲಿ ಕೇವಲ ನಾಲ್ಕು ವಿಭಾಗಗಳಿಂದ ಮಾತ್ರ ಕೆಲಸ ಮಾಡಬೇಕು ಎಂಬುದಾಗಿ ಉಲ್ಲೇಖಿಸಲಾಗಿದೆ. ಮನರೇಗಾ ಅಡಿ 100 ದಿನ ಕೆಲಸ ಒದಗಿಸುವುದಕ್ಕಾಗಿಯೇ ಅಧಿಕಾರಿಗಳು ಮತ್ತು ತಾಂತ್ರಿಕ ಸಮಸ್ಯೆಗಳ ನಡುವೆ ಒಂದು ಸಂಘರ್ಷ ನಡೆಯುತ್ತಿದೆ. ಉದ್ಯೋಗ ಖಾತ್ರಿ ಕಾಯ್ದೆಯಲ್ಲಿರುವ ಕರ್ತವ್ಯ ಏನೆಂದರೆ, ʼಜನರು ಫಾರಂ ನಂಬರ್‌ 6ರಲ್ಲಿ ಅರ್ಜಿ ಹಾಕಿದರೆ, 15 ದಿನಗಳೊಳಗೆ ಅವರಿಗೆ ಕೆಲಸ ನೀಡಬೇಕು. ಜಾಬ್‌ ಕಾರ್ಡ್‌ ಇಲ್ಲ ಅಂದ್ರೆ ಫಾರಂ ನಂಬರ್‌ 1ರಲ್ಲಿ ಅರ್ಜಿ ಸಲ್ಲಿಸಿದರೆ ಅವರಿಗೆ ಕಾರ್ಡ್‌ ನೀಡಿ ಉದ್ಯೋಗ ಒದಗಿಸಬೇಕು. ಇಲ್ಲದಿದ್ದರೆ ಪಿಡಿಒಗಳ ವೇತನದಲ್ಲಿಯೇ ನಿರುದ್ಯೋಗ ಭತ್ಯೆ ನೀಡಬೇಕುʼ ಎಂಬ ಷರತ್ತುಗಳು ಕಾಯಿದೆಯಲ್ಲಿವೆ. ಕೇಂದ್ರ ಸರ್ಕಾರದ ಪ್ರಕಾರ ಈಗ 20 ಕಾಮಗಾರಿಗಳು ಇರುತ್ತವೆ. ಹೆಚ್ಚಿನ ಕಾಮಗಾರಿ ತೆಗೆದುಕೊಳ್ಳುವಂತಿಲ್ಲ. ಅದರ ಜತೆಗೆ ಹೊಸದಾಗಿ ಜನರು ಕೆಲಸಕ್ಕಾಗಿ ಅರ್ಜಿ ಹಾಕಿದರೆ ಅವುಗಳನ್ನು ಸ್ವೀಕರಿಸಬೇಕು, ಕೆಲಸ ಕೊಡಬೇಕು. ಆದರೆ 20 ಕಾಮಗಾರಿಗಿಂತ ಹೆಚ್ಚು ತೆಗೆದುಕೊಳ್ಳುವಂತಿಲ್ಲ. ಹೀಗಿರುವಾಗ ಅಧಿಕಾರಿಗಳು ಏನ್ಮಾಡ್ತಾರೆ ಅಂದರೆ, ಅರ್ಜಿಗಳನ್ನೇ ತೆಗೆದುಕೊಳ್ಳುವುದಿಲ್ಲ, ತೆಗೆದುಕೊಂಡರೂ ಅದರ ಪ್ರೋಸೆಸ್‌ ನಡೆಸುವುದಿಲ್ಲ” ಎಂದರು.

“ಯಾಕೆಂದರೆ ಬಜೆಟ್‌ ಕಡಿಮೆ ಕೊಡುತ್ತಾರೆ. ಇದರಿಂದ ಅಧಿಕಾರಿಗಳು ಹೊಸ ಅರ್ಜಿಗಳನ್ನು ತೆಗೆದುಕೊಂಡು ನಾವು ಏಕೆ ಬಲಿಯಾಗಬೇಕು, ನಮ್ಮ ಸಂಬಳದಲ್ಲಿ ಯಾಕೆ ನಿರುದ್ಯೋಗ ಭತ್ಯೆ ನೀಡಬೇಕು ಅಂತ ಕೆಲಸವನ್ನೇ ಕೊಡದಿರುವಂತಹ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದರು. ಈಗ ಕೇಂದ್ರ ಹೇಳಿದ ಕಡೆ ಕೆಲಸ ಮಾಡಬೇಕು, ಅದರಲ್ಲೂ ನಾಲ್ಕು ವಿಭಾಗಗಳಲ್ಲಿ ಕೆಲಸ ಮಾಡಬೇಕು ಅಂದಾಗ ಹೇಗೆ 125 ದಿನ ಕೆಲಸ ಕೊಡುವುದಕ್ಕೆ ಸಾಧ್ಯ? ಎಷ್ಟು ಮಂದಿ ಕಾರ್ಮಿಕರಿಗೆ ಉದ್ಯೋಗ ಕೊಡುವುದಕ್ಕೆ ಸಾಧ್ಯ? ಇಂತಹ ಹೇರಿಕೆಗಳಿಂದ ಕಾರ್ಮಿಕರ ಅನ್ನದ ತಟ್ಟೆ ಕಿತ್ತುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಅಲ್ಲದೆ ಈ ಹಿಂದೆ ತಾಂತ್ರಿಕ ದೋಷಗಳನ್ನು ಸರಿಪಡಿಸುವಂತಹ ಕೆಲಸಗಳನ್ನು ಮೊದಲೆಲ್ಲ ಸ್ಥಳೀಯ ಜಿಲ್ಲಾ ಪಂಚಾಯತ್‌ನಲ್ಲಿಯೇ ಮಾಡಲಾಗುತ್ತಿತ್ತು. ಈಗ ಸ್ಟೇಟ್‌ ಇಲಾಖೆಯಿಂದಲೇ ಸರಿಪಡಿಸಬೇಕು. ಹೀಗೆ ಒಬ್ಬರಿಂದ ಇನ್ನೊಬ್ಬರಿಗೆ ತಾಗಿಸುತ್ತ ಒಟ್ಟಾರೆ ಕಾರ್ಮಿಕರನ್ನು ಕೆಲಸದಿಂದ ವಂಚಿತರನ್ನಾಗಿ ಮಾಡುವ ಹುನ್ನಾರ ಅಷ್ಟೆ” ಎಂದರು.

“125 ದಿನಗಳ ಕೆಲಸ ಅಲ್ಲ, 200 ದಿನ ಕೆಲಸ ನೀಡಿದರೂ ಕಾರ್ಮಿಕರು ದುಡಿಯಲು ರೆಡಿ ಇದ್ದಾರೆ. ಆದರೆ ಇಲ್ಲಿ ಕೊಟ್ಟಂಗೆ ಮಾಡಿ ಅಲ್ಲಿ ಕುತಂತ್ರಗಳನ್ನು ನಡೆಸಲಾಗುತ್ತದೆ. ಬಿಜೆಪಿಯವರ ಉದ್ದೇಶವೇ ಈ ಕಾಯ್ದೆಯನ್ನು ಕಿತ್ತುಹಾಕಿ ಇದನ್ನು ಕೇವಲ ಯೋಜನೆಯನ್ನಾಗಿ ಮಾಡಿ, ಕಾರ್ಮಿಕರ ಹಕ್ಕು ಕಿತ್ತುಕೊಂಡು ಅವರನ್ನು ಗೊಂಬೆಗಳಂತೆ ಆಡಿಸುವ ಹುನ್ನಾರ” ಎಂದು ದೂರಿದರು.

ಒಂದು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ಯುವಜನತೆಗೆ ದ್ರೋಹವೆಸಗಿದೆ. ಈಗ ಅನಕ್ಷರಸ್ಥ ಗ್ರಾಮೀಣ ಕಾರ್ಮಿಕರ ಕೂಲಿಯನ್ನೂ ಕಸಿಯಲು ಮುಂದಾಗಿದೆ. ಕಾಂಗ್ರೆಸ್‌ ಸರ್ಕಾರವೇನೂ ಅದಕ್ಕೆ ಹೊರತಾಗಿಲ್ಲ. ಮನರೇಗಾ ಉದ್ಯೋಗವನ್ನು ಅವರೇನು ಪ್ರೀತಿಯಿಂದ ಗ್ರಾಮೀಣ ಜನರ ಮೇಲಿನ ಜವಾಬ್ದಾರಿಯಿಂದ ಜಾರಿ ಮಾಡಲಿಲ್ಲ. ಅವರಿಗೆ ಅಧಿಕಾರ ಬೇಕಾಗಿತ್ತು. ಅದಕ್ಕಾಗಿ ಎಡಪಕ್ಷಗಳ ಬೆಂಬಲ ಬೇಕಾಗಿತ್ತು. ಹಾಗಾಗಿ ಎಡಪಕ್ಷಗಳ ಒತ್ತಡದಿಂದ ಮಾಡಿರುವುದೇ ಹೊರತು ಉದ್ಯೋಗ ಸೃಷ್ಟಿಸುವ ಯಾವುದೇ ಬದ್ಧತೆಯಿಂದಲ್ಲ. ಬಿಜೆಪಿಗಂತೂ ಕಿಂಚಿತ್ತೂ ಬದ್ಧತೆ ಇಲ್ಲ. ಜನರ ಹೆಣಗಳ ಮೇಲೆ ರಾಜಕೀಯ ನಡೆಸುವಂತಹ ಅಜೆಂಡಾ ಅವರದ್ದು. ಹಾಗಾಗಿ ಜನರಿಗೆ ಉದ್ಯೋಗ ಸಿಗಬೇಕೆಂಬ ಯಾವುದೇ ಕಾಳಜಿಯೂ ಅವರಿಗಿಲ್ಲ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ದಿನದಿಂದಲೂ ಅವರ ಉದ್ದೇಶವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಆರಂಭದಲ್ಲಿ ಅವರು ಉದ್ಯೋಗ ಖಾತ್ರಿ ಯಾರಿಗೂ ಉಪಯೋಗವಾಗುತ್ತಿಲ್ಲ. ಅದರಲ್ಲಿ ಭ್ರಷ್ಟಾಚಾರವಾಗುತ್ತಿದೆ. ಇದನ್ನು ತೆಗೆದುಹಾಕಬೇಕೆಂದೇ ಶುರು ಮಾಡಿದರು. ಕೊನೆಗೂ ಮನರೇಗಾ ಕೇವಲ ಹೆಸರು ಬದಲಾವಣೆಯಲ್ಲ ಆ ಕಾಯ್ದೆಯನ್ನೇ ಬುಡಮೇಲು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

“ನಮ್ಮ ಮೂಲ ಉದ್ದೇಶವೇನೆಂದರೆ ಸಂವಿಧಾನದಲ್ಲಿಯೇ ʼಉದ್ಯೋಗʼವೆಂಬುದು ನಮ್ಮ ಮೂಲಭೂತ ಹಕ್ಕು ಎಂದಾದರೆ ಆಡಳಿತದ ಚುಕ್ಕಾಣಿ ಹಿಡಿದ ಯಾವುದೇ ಸರ್ಕಾರಗಳಾದರೂ ಉದ್ಯೋಗವನ್ನು ಒದಗಿಸಲೇಬೇಕಾದ ಜವಾಬ್ದಾರಿ ಹೆಚ್ಚಾಗಿರುತ್ತದೆ. ಇದರಿಂದಾಗಿ ಜನತೆ ಕಟ್ಟಿರುವ ತೆರಿಗೆ ಹಣವನ್ನು ಉದ್ಯೋಗ ಸೃಷ್ಟಿಗೆ ಬಳಸಿಕೊಳ್ಳಬಹುದು. ಈಗ ಆ ಜವಾಬ್ದಾರಿ ಯಾವುದೇ ಸರ್ಕಾರಗಳಿಗೆ ಇಲ್ಲ. ಅವರು ಏನೇ ಕೊಟ್ಟರೂ ಭಿಕ್ಷೆ ಅಂತ ಪರಿಗಣಿಸುತ್ತಿದ್ದಾರೆ. ಜನತೆಗೆ ನಾವು ಏನೋ ಉಪಕಾರ ಮಾಡುತ್ತಿದ್ದೇವೆಂದು ಹೊಗಳಿಕೊಳ್ಳುತ್ತಾರೆ” ಎಂದು ಕುಟುಕಿದರು.

ಬಜೆಟ್ ಸೀಮಿತಗೊಳಿಸುವಿಕೆ (2024-25 ಮತ್ತು 2025-26ರಲ್ಲಿ ₹86,000 ಕೋಟಿ ನಿಲ್ಲಿಸಿ), ವೇತನ ವಿಳಂಬ, ಆಧಾರ್-ಲಿಂಕ್ ಸಮಸ್ಯೆಗಳು ಮತ್ತು ಜಾಬ್ ಕಾರ್ಡ್ ಡಿಲೀಷನ್‌ಗಳಿಂದಾಗಿ ನೋಂದಣಿ ಹೆಚ್ಚಾದರೂ(2024-25ರಲ್ಲಿ 8.6% ಏರಿಕೆ) ನಿಜವಾದ ಕೆಲಸ ನೀಡಿಕೆ ಕಡಿಮೆಯಾಗಿದ್ದು, ಶೇ.7.1ಕ್ಕೆ ಕುಸಿತ ಕಂಡಿದೆ.

ಇದನ್ನೂ ಓದಿದ್ದೀರಾ? ಮನರೇಗಾ ಬದಲಿಗೆ ವಿಬಿ-ಜಿ ರಾಮ್‌ ಜಿ ಮಸೂದೆ: ಉದ್ಯೋಗ ಖಾತ್ರಿ ಯೋಜನೆಯ ಬದಲಾವಣೆಗಳೇನು?

100 ದಿನಗಳ ಗ್ಯಾರಂಟಿ ಇದ್ದರೂ ಕೂಡ ಸರಾಸರಿ ಕುಟುಂಬಕ್ಕೆ ಕೇವಲ 50 ದಿನಗಳ ಕೆಲಸಗಳು ದೊರೆತಿದ್ದು, ಶೇ.7ರಷ್ಟು ಕುಟುಂಬಗಳು ಮಾತ್ರ 100 ದಿನಗಳ ಕೆಲಸವನ್ನು ಪೂರ್ಣಗೊಳಿಸಿವೆ. ಕೆಲವು ತಿಂಗಳುಗಳಲ್ಲಿ ಬೇಡಿಕೆ ಹೆಚ್ಚಾದರೂ(ಉದಾ: 2024 ಡಿಸೆಂಬರ್‌ನಲ್ಲಿ 8.3% ಹೆಚ್ಚು), ಒಟ್ಟಾರೆಯಾಗಿ ಪೂರೈಕೆಯ ಕೊರತೆಯಿಂದಾಗಿ ಗ್ರಾಮೀಣ ಕುಟುಂಬಗಳು ಸಂಕಷ್ಟದಲ್ಲಿವೆ. ಈ ನಡುವೆ ಮೋದಿ ಸರ್ಕಾರದ ನೀತಿಗಳು(ಬಜೆಟ್ ನಿರ್ಬಂಧ, ತಾಂತ್ರಿಕ ಅಡೆತಡೆಗಳು) ಯೋಜನೆಯನ್ನು ದುರ್ಬಲಗೊಳಿಸುತ್ತಿವೆ ಎಂಬ ಆರೋಪಗಳಿವೆ. ಆದರೆ ಮನರೇಗಾ ಕೆಲಸದ ಬೇಡಿಕೆಯೇ ಕುಸಿದಿದೆ ಎಂಬುದು ಸತ್ಯವಲ್ಲ, ಬೇಡಿಕೆ ಇನ್ನೂ ಬಲವಾಗಿದೆ. ಆದರೆ ಪೂರೈಕೆಯಲ್ಲಿ ತೊಡಕುಗಳಿವೆ ಎಂಬುದು ಸರ್ಕಾರದ ಅಧಿಕೃತ ಡೇಟಾ ಮತ್ತು ಸ್ವತಂತ್ರ ವರದಿಗಳಿಂದಲೇ ಬಹಿರಂಗವಾಗಿದೆ.

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...