ಬಿ ಆರ್ ಗವಾಯಿ : ದಮನಿತರ ಧ್ವನಿಯನ್ನು ಉನ್ನತ ಮಟ್ಟಕ್ಕೆ ತಂದ ವ್ಯಕ್ತಿ

Date:

2025ರ ಮೇ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ, ಇಂದು ನವೆಂಬರ್ 23 ರಂದು ನಿವೃತ್ತಿ ಹೊಂದಿದ್ದಾರೆ.

ಭಾರತದ ನ್ಯಾಯಾಂಗ ವ್ಯವಸ್ಥೆಯ ಇತಿಹಾಸದಲ್ಲಿ ಕೆಲವು ನ್ಯಾಯಮೂರ್ತಿಗಳು ಕೇವಲ ತೀರ್ಪುಗಳನ್ನು ನೀಡುವವರಾಗಿ ಉಳಿಯದೆ, ಸಂವಿಧಾನದ ಆತ್ಮಸಾಕ್ಷಿಯಂತೆ ಗೋಚರಿಸುತ್ತಾರೆ. ಅಂತಹ ಅಪರೂಪದ ವ್ಯಕ್ತಿತ್ವಗಳ ಸಾಲಿನಲ್ಲಿ ನಿಲ್ಲುವ ಹೆಸರು ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ (ಬಿ.ಆರ್. ಗವಾಯಿ). 2025ರ ಮೇ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ಅವರು, ಈಗ ನವೆಂಬರ್ 23 ರಂದು ನಿವೃತ್ತಿ ಹೊಂದಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ಅಸಾಧಾರಣ ಕೊಡುಗೆ ನೀಡಿದ್ದಾರೆ. ಕಾರ್ಯಾಂಗ ಅಥವಾ ಕೇಂದ್ರ ಸರ್ಕಾರವು ಸಂವಿಧಾನದ ಗಡಿಗಳನ್ನು ಮೀರಿದಾಗ ನಿರ್ದಾಕ್ಷಿಣ್ಯವಾಗಿ ಪ್ರಶ್ನಿಸಿದ್ದಾರೆ. ಅವರ ತೀರ್ಪುಗಳು ಕೇವಲ ಕಾನೂನು ದಾಖಲೆಗಳಲ್ಲ; ಅವು ಪ್ರಜಾಪ್ರಭುತ್ವದ ಆಧಾರಸ್ತಂಭಗಳನ್ನು ಬಲಪಡಿಸುವ ಸಂದೇಶಗಳು.

ಮಹಾರಾಷ್ಟ್ರದ ನಾಗಪುರದಲ್ಲಿ ಪರಿಶಿಷ್ಟ ಜಾತಿ ಕುಟುಂಬದಲ್ಲಿ ಜನಿಸಿದ ನ್ಯಾಯಮೂರ್ತಿ ಬಿ.ಆರ್. ಗವಾಯಿ, ದಲಿತ ಸಮುದಾಯ ಅನುಭವಿಸುವ ನೋವು–ನಿರ್ಲಕ್ಷ್ಯಗಳನ್ನು ಬಾಲ್ಯದಲ್ಲೇ ನೋಡಿದವರು. ದಲಿತ ಸಮುದಾಯದವರಾಗಿ ಎದುರಿಸಿದ ಕಹಿ ಅನುಭವಗಳೇ ಅವರ ನ್ಯಾಯದರ್ಶನದ ಬುನಾದಿಯಾದವು. ಸಾರ್ವಜನಿಕ ಬಸ್ಸಿನಲ್ಲಿ ಕೂರಲು ಅವಕಾಶ ನೀಡದೇ ಇದ್ದದ್ದು, ಶಾಲೆಯಲ್ಲಿ ತಾರತಮ್ಯ, ಹಳ್ಳಿಯಲ್ಲಿ ಕುಡಿಯಲು ನೀರು ಸಿಗದೇ ಇದ್ದ ಘಟನೆಗಳು, ಜಾತಿಯ ಹೆಸರಿಗೆ ಗೌರವಕ್ಕೆ ಧಕ್ಕೆ ತರುವ ಅವಮಾನಗಳು – ಇವೆಲ್ಲವೂ ಅವರ ಮನಸ್ಸಿನಲ್ಲಿ ಆಳವಾಗಿ ನಾಟಿ, “ಯಾರೂ ಇಂಥ ನೋವು ಅನುಭವಿಸಬಾರದು” ಎಂಬ ದೃಢ ಸಂಕಲ್ಪವನ್ನು ಬೆಳೆಸಿದವು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಹೋರಾಟದ ಕಹಿಯೇ ಅವರ ತೀರ್ಪುಗಳಲ್ಲಿ ಸಾಮಾಜಿಕ ನ್ಯಾಯಕ್ಕೆ ಅತ್ಯಂತ ಆದ್ಯತೆ ನೀಡುವಂತೆ ಮಾಡಿತು. ದಲಿತರ ಮೇಲಿನ ದೌರ್ಜನ್ಯ, ತಾರತಮ್ಯದ ಪ್ರಕರಣಗಳಲ್ಲಿ ಅವರು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿದ್ದಾರೆ; ದುರ್ಬಲರ ಪರವಾಗಿ ಧ್ವನಿಯಾದರು. ತಾನು ಎದುರಿಸಿದ ಅನ್ಯಾಯದ ನೋವು, ನ್ಯಾಯಾಸನದಲ್ಲಿದ್ದಾಗ ಅವರ ಕಣ್ಣುಗಳನ್ನು ಯಾವಾಗಲೂ ದಮನಿತರ ಕಡೆಗೆ ತಿರುಗಿಸಿತು. ನಾಗಪುರ ಬಾರ್‌ನಿಂದ ಸುಪ್ರೀಂ ಕೋರ್ಟ್‌ವರೆಗೆ ಅವರು ನಡೆಸಿದ ಪಯಣ ಸಮಾನತೆ ಮತ್ತು ಅವಕಾಶಗಳ ನ್ಯಾಯಕ್ಕೆ ಜೀವಂತ ಸಾಕ್ಷಿ. ಸುಪ್ರೀಂ ಕೋರ್ಟ್‌ನ ಎರಡನೇ ದಲಿತ ಮುಖ್ಯ ನ್ಯಾಯಮೂರ್ತಿಯಾಗಿ ಅವರು ಇತಿಹಾಸ ನಿರ್ಮಿಸುತ್ತಿದ್ದು, ಸಾಮಾಜಿಕ ನ್ಯಾಯ, ಪರಿಸರ ಸಂರಕ್ಷಣೆ ಮತ್ತು ಒಕ್ಕೂಟ ತತ್ವಗಳು ಅವರ ತೀರ್ಪುಗಳಲ್ಲಿ ನಿರಂತರವಾಗಿ ಸ್ಪಂದಿಸುತ್ತವೆ. ಗವಾಯಿ ಅವರ ಕಾರ್ಯವೈಖರಿ ಸಂವಿಧಾನದ “ಎಲ್ಲರಿಗೂ ನ್ಯಾಯ” ಎಂಬ ಕನಸಿಗೆ ನಿಜವಾದ ರೂಪ ನೀಡುವ ಪ್ರಯತ್ನವಾಗಿದೆ.

CJI Gavayi

ಅಧಿಕಾರಕ್ಕೆ ಅಂಕುಶ: ಕೇಂದ್ರದ ನಡೆಗೆ ‘ಗವಾಯಿ’ ಗುದ್ದು

ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರನ್ನು ವಿಶೇಷವಾಗಿ ಗುರುತಿಸುವುದು ಕೇಂದ್ರ ಸರ್ಕಾರದ ಅತಿರೇಕಕ್ಕೆ ಅಂಕುಶ ಹಾಕಿದ, ನಿಷ್ಪಕ್ಷಪಾತ, ದಿಟ್ಟ ತೀರ್ಪುಗಳು. ಪ್ರಜಾಪ್ರಭುತ್ವದಲ್ಲಿ ಕಾರ್ಯಾಂಗ ಬಲಿಷ್ಠವಾಗಿರಬಹುದು, ಆದರೆ ಸಂವಿಧಾನದ ಮುಂದೆ ಅದು ತಲೆತಗ್ಗಿಸಲೇಬೇಕು ಎಂಬ ಸಂದೇಶವನ್ನು ಅವರು ಅಚಲವಾಗಿ ಸಾರಿದ್ದಾರೆ. ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿ, ಇಡಿ ದೇಶಕ್ಕೆ “ಹಣದ ಬಲದಿಂದ ಚುನಾವಣೆ ಕೊಳ್ಳದಂತೆ” ಆದೇಶಿಸಿದ್ದು ಅವರ ನಿರ್ಭೀತ ನಿಲುವಿಗೆ ದೊಡ್ಡ ಉದಾಹರಣೆ. ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದಾದ ಬಳಿಕವೂ ರಾಜ್ಯ ಸ್ಥಾನಮಾನ ಮರಳಿಸುವಂತೆ ಸಮಯಮಿತಿ ನೀಡಿ ಸರ್ಕಾರಕ್ಕೆ ಕಠಿಣ ಎಚ್ಚರಿಕೆ ನೀಡಿದರು. ಸರ್ಕಾರ ಎಷ್ಟೇ ಶಕ್ತಿಶಾಲಿಯಾದರೂ ಸಂವಿಧಾನದ ಆಳ್ವಿಕೆಗೆ ಒಳಪಟ್ಟೇ ಇರಬೇಕು. ಆ ಧೈರ್ಯವೇ ಗವಾಯಿ ಅವರನ್ನು ಅಪರೂಪದ ನ್ಯಾಯಮೂರ್ತಿಯನ್ನಾಗಿ ಮಾಡಿದೆ.

ಜಾರಿ ನಿರ್ದೇಶನಾಲಯದ (ಇಡಿ) ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿ ವಿಸ್ತರಣೆ ಪ್ರಕರಣವನ್ನು ನೆನಪಿಸಿಕೊಳ್ಳಬಹುದು. ಕೇಂದ್ರ ಸರ್ಕಾರ ಪದೇ ಪದೇ ಅವರ ಅವಧಿಯನ್ನು ವಿಸ್ತರಿಸುತ್ತಿತ್ತು, ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ನ್ಯಾ. ಗವಾಯಿ ನೇತೃತ್ವದ ಪೀಠ ವಿಚಾರಿಸಿತು. ಕೇಂದ್ರವು ದೇಶದ ಹಿತಾಸಕ್ತಿ ಮತ್ತು ಪ್ರಮುಖ ತನಿಖೆಗಳನ್ನು ಕಾರಣವನ್ನಾಗಿ ಹೇಳಿತು. ಆದರೆ ಗವಾಯಿ ಅವರು ಕೇಂದ್ರದ ತಿದ್ದುಪಡಿಯನ್ನು ಎತ್ತಿಹಿಡಿದರೂ, ಮಿಶ್ರಾ ಅವರ ನಿರ್ದಿಷ್ಟ ವಿಸ್ತರಣೆಯನ್ನು ಕಾನೂನುಬಾಹಿರ ಎಂದು ಘೋಷಿಸಿದರು. “ಸುಪ್ರೀಂ ಕೋರ್ಟ್‌ನ ಹಿಂದಿನ ಆದೇಶವನ್ನು ಮೀರಿ ವಿಸ್ತರಣೆ ನೀಡುವುದು ಸರಿಯಲ್ಲ” ಎಂದು ಹೇಳಿ, ಹುದ್ದೆ ತ್ಯಜಿಸುವಂತೆ ಗಡುವು ನೀಡಿದರು. ಇದು ತನಿಖಾ ಸಂಸ್ಥೆಗಳ ನೇಮಕದಲ್ಲಿ ಸರ್ಕಾರದ ಮನಸೋಇಚ್ಛೆಗೆ ಕಡಿವಾಣ ಹಾಕಿತು. ಈ ತೀರ್ಪು ಕೇಂದ್ರದ ಪರೋಕ್ಷ ನಿಯಂತ್ರಣಕ್ಕೆ ದೊಡ್ಡ ಹಿನ್ನಡೆಯಾಗಿತ್ತು

ರಾಜ್ಯಪಾಲರ ವಿರುದ್ಧದ ನಿಲುವು

ಕೇಂದ್ರವು ರಾಜ್ಯಪಾಲರ ಮೂಲಕ ವಿರೋಧ ಪಕ್ಷದ ರಾಜ್ಯ ಸರ್ಕಾರಗಳನ್ನು ನಿಯಂತ್ರಿಸುತ್ತಿದೆ ಎಂಬ ಆರೋಪಗಳ ನಡುವೆ, ಪಂಜಾಬ್ ಮತ್ತು ತಮಿಳುನಾಡು ಪ್ರಕರಣಗಳು ಪ್ರಮುಖವಾಗಿವೆ. ಪಂಜಾಬ್‌ನಲ್ಲಿ ರಾಜ್ಯಪಾಲರು ವಿಧಾನಸಭೆಯ ಮಸೂದೆಗಳಿಗೆ ಸಹಿ ಹಾಕದೆ ವಿಳಂಬ ಮಾಡುತ್ತಿದ್ದರು. ನ್ಯಾ. ಗವಾಯಿ ಅವರು “ನೀವು ಬೆಂಕಿಯೊಂದಿಗೆ ಸರಸವಾಡುತ್ತಿದ್ದೀರಿ” ಎಂದು ಎಚ್ಚರಿಸಿದರು. ತೀರ್ಪಿನಲ್ಲಿ, “ರಾಜ್ಯಪಾಲರು ಚುನಾಯಿತ ಸರ್ಕಾರದ ಮೇಲೆ ಸವಾರಿ ಮಾಡುವಂತಿಲ್ಲ. ಅವರು ಸಾಂವಿಧಾನಿಕ ಮುಖ್ಯಸ್ಥರೇ ಹೊರತು ಆಡಳಿತಾತ್ಮಕ ಮುಖ್ಯಸ್ಥರಲ್ಲ” ಎಂದು ಸ್ಪಷ್ಟಪಡಿಸಿದರು. ಇದು ಒಕ್ಕೂಟ ವ್ಯವಸ್ಥೆಯನ್ನು ರಕ್ಷಿಸಿತು ಮತ್ತು ರಾಜ್ಯ ಸರ್ಕಾರಗಳಿಗೆ ಬಲ ನೀಡಿತು.

ತನಿಖಾ ಸಂಸ್ಥೆಗಳ ದುರ್ಬಳಕೆ ಬಗ್ಗೆ ಎಚ್ಚರಿಕೆ

ಇ.ಡಿ ಮತ್ತು ಸಿಬಿಐಯನ್ನು ರಾಜಕೀಯವಾಗಿ ಬಳಸುವ ಆರೋಪಗಳ ನಡುವೆ, ಛತ್ತೀಸ್‌ಗಢದ ಅಕ್ರಮ ಮದ್ಯ ಹಗರಣದಲ್ಲಿ ಅವರು ಇ.ಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. “ನೀವು ದ್ವೇಷದ ರಾಜಕಾರಣದ ಅಸ್ತ್ರವಾಗಬಾರದು. ನಿಮ್ಮ ವರ್ತನೆ ಅನುಮಾನಕ್ಕೆ ಎಡೆಮಾಡಿಕೊಡುವಂತಿರಬಾರದು” ಎಂದು ಹೇಳಿದರು. ಸಾಕ್ಷ್ಯಗಳಿಲ್ಲದೆ ಜೈಲುವಾಸವನ್ನು ವಿರೋಧಿಸಿ, ಜಾಮೀನು ಪ್ರಕರಣಗಳಲ್ಲಿ ನ್ಯಾಯ ನೀಡಿದ್ದಾರೆ. ಇದು ವಿರೋಧಿಗಳನ್ನು ಹತ್ತಿಕ್ಕುವ ಕೇಂದ್ರದ ಪ್ರಯತ್ನಗಳಿಗೆ ಕಡಿವಾಣ ಹಾಕಿದೆ.

ಪರಿಸರ ನಾಶದ ವಿರುದ್ಧದ ನಿಲುವು

‘ಹಸಿರು ಪೀಠ’ದ ನೇತೃತ್ವದಲ್ಲಿ ಅವರು ಕೇಂದ್ರ ಪರಿಸರ ಸಚಿವಾಲಯದ ನಿಲುವುಗಳನ್ನು ಪ್ರಶ್ನಿಸಿದ್ದಾರೆ. ಹಿಮಾಲಯದ ಸೂಕ್ಷ್ಮ ಪ್ರದೇಶಗಳಲ್ಲಿ ಯೋಜನೆಗಳಿಗೆ ಅನುಮತಿ ನೀಡುವ ಆತುರವನ್ನು ಟೀಕಿಸಿ, “ಪರಿಸರ ಸಂರಕ್ಷಣಾ ಕಾಯ್ದೆಯ ಮೂಲ ಆಶಯವನ್ನು ಬುಡಮೇಲು ಮಾಡುವ ಆದೇಶಗಳನ್ನು ಸರ್ಕಾರ ನೀಡುವಂತಿಲ್ಲ ಎಂದು ತಾಕೀತು ಮಾಡಿದ್ದಾರೆ. ಇದು ಕಾರ್ಪೊರೇಟ್ ಪರ ನಿಯಮ ಬದಲಾವಣೆಗಳಿಗೆ ರಕ್ಷಣೆ ನೀಡಿದೆ.

ಬುಲ್ಡೋಜರ್ ನೀತಿಯ ಬಗ್ಗೆಯೂ ಗವಾಯಿ ನೇತೃತ್ವದ ಪೀಠ ಮಹತ್ವದ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇಡೀ ದೇಶಕ್ಕೆ ಅನ್ವಯವಾಗುವಂತೆ, ಕಾರಣ ಕೇಳಿ ನೋಟಿಸ್ ಕೊಡದೆ ಯಾವ ಆಸ್ತಿಯನ್ನು ಧ್ವಂಸಗೊಳಿಸುವಂತಿಲ್ಲ ಎಂದು ಹೇಳಿತು. ಸಂಬಂಧಪಟ್ಟ ವ್ಯಕ್ತಿಗೆ ಪ್ರತಿಕ್ರಿಯೆ ನೀಡಲು 15 ದಿವಸ ಕಾಲಾವಕಾಶ ಕೊಡಬೇಕು ಎಂದು ಆದೇಶಿಸಿ, ಕಾನೂನು ಪ್ರಕ್ರಿಯೆಯನ್ನು ಬಲಪಡಿಸಿದರು. ಇದು ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಬುಲ್ಡೋಜರ್ ರಾಜಕಾರಣಕ್ಕೆ ಕಡಿವಾಣ ಹಾಕಿತು.

B R gavayi 1

ಅದಿವಾಸಿ ಹಕ್ಕುಗಳು ಮತ್ತು ಪರಿಸರ ಸಂರಕ್ಷಣೆಯಲ್ಲಿ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಕೊಡುಗೆ ಅಪಾರ. ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಪರಿಸರ ಮತ್ತು ಆದಿವಾಸಿ ಹಕ್ಕುಗಳ ಪ್ರಕರಣಗಳಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ನಿಂತಿದ್ದಾರೆ. ಅಭಿವೃದ್ಧಿ ಎಂಬ ಹೆಸರಿನಲ್ಲಿ ಅರಣ್ಯವಾಸಿ ಸಮುದಾಯಗಳ ಜೀವನಾಧಾರವನ್ನು ಕಿತ್ತುಕೊಳ್ಳಬಾರದು, ಪ್ರಕೃತಿಯನ್ನು ಧ್ವಂಸಗೊಳಿಸಬಾರದು” ಎಂಬುದು ಅವರ ದೃಢ ನಿಲುವು. 2006ರ ಅರಣ್ಯ ಹಕ್ಕು ಕಾಯ್ದೆಯನ್ನು (Forest Rights Act) ಅತ್ಯಂತ ಗಂಭೀರವಾಗಿ ಪಾಲಿಸುವಂತೆ ಅವರು ಸರ್ಕಾರಗಳಿಗೆ ಆದೇಶಿಸಿದ್ದಾರೆ.

ಇದನ್ನೂ ಓದಿ Exclusive | ಜನವರಿಯಲ್ಲಿ ಬೆಂಗಳೂರು ಸಿನಿಮೋತ್ಸವ; ಪ್ರಕಾಶ್ ರೈ ರಾಯಭಾರಿ; ಪಿ.ಬಿ. ಮುರಳಿ ಕಲಾತ್ಮಕ ನಿರ್ದೇಶಕ

ಚಪ್ಪಲಿ ಎಸೆತ ಪ್ರಕರಣ; ಗಂಭೀರತೆ ಮೆರೆದ ಗವಾಯಿ

ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ 2025ರ ಅಕ್ಟೋಬರ್ 6ರಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಚಪ್ಪಲಿ ಎಸೆತ ಪ್ರಕರಣವು ನ್ಯಾಯಾಂಗದ ಘನತೆಗೆ ಹಾನಿಯುಂಟು ಮಾಡಿದ ಆಘಾತಕಾರಿ ಘಟನೆ. ವಕೀಲ ರಾಕೇಶ್ ಕಿಶೋರ್ ಎಂಬಾತ ವಿಚಾರಣೆಯ ಸಂದರ್ಭದಲ್ಲಿ ಚಪ್ಪಲಿ ಎಸೆಯಲು ಯತ್ನಿಸಿದರು. ಈ ಪ್ರಕರಣ ಆರೋಪಿ ವಿರುದ್ಧ ಪೊಲೀಸ್ ಬಂಧನ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನಿಂದ ಸದಸ್ಯತ್ವ ನಿರಾಕರಣೆ ಸೇರಿದಂತೆ ಕಠಿಣ ಕ್ರಮಗಳು ತೆಗೆದುಕೊಳ್ಳಲ್ಪಟ್ಟವು. ಗವಾಯಿ ಅವರು ಆರೋಪಿ ವಿರುದ್ಧ ಕ್ಷಮೆಯ ನಿರ್ಧಾರವು ಸಹನಶೀಲತೆಯ ಮಾದರಿಯಾಗಿದೆ. ಟ್ರೋಲ್‌ಗಳಿಗೂ ಅವರು ಹೆಚ್ಚು ಗಮನ ನೀಡದೆ ದೊಡ್ಡತನ ಮೆರೆದರು.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...