ಭಾರತದ ಪ್ರಮುಖ ಕಂಪನಿಗಳಲ್ಲಿ ಒಂದಾದ ಪತಂಜಲಿ ಆಯುರ್ವೇದ ಲಿಮಿಟೆಡ್ ಮತ್ತೆ ಸುದ್ದಿಯಲ್ಲಿದೆ. ಸದಾ ವಿವಾದಾತ್ಮಕ ವಿಚಾರಗಳಿಂದಲೇ ಸುದ್ದಿಯಲ್ಲಿರುವ ಪತಂಜಲಿ, ಇದೀಗ ತಾನೂ ತಯಾರಿ ಮಾಡಿದ ತುಪ್ಪ ಗುಣಮಟ್ಟದಲ್ಲಿ ಕಳಪೆಯಾಗಿದೆ, ಕಲಬೆರಕೆಯಾಗಿದೆ ಎಂಬ ಗಂಭೀರ ಆರೋಪ ಹೊತ್ತುಕೊಂಡಿದೆ. ಉತ್ತರಾಖಂಡ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ನಿರ್ಧರಿಸಿದೆ. ಉತ್ತರಾಖಂಡದ ಸ್ಥಳೀಯ ನ್ಯಾಯಾಲಯವು 1 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಪತಂಜಲಿ ತಯಾರಿಸಿದ ತುಪ್ಪದ ಮಾದರಿಯು ಗುಣಮಟ್ಟ ನಿಯಂತ್ರಣ ಪರೀಕ್ಷೆಗಳಲ್ಲಿ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ರಾಜ್ಯ ಮತ್ತು ರಾಷ್ಟ್ರೀಯ ಪ್ರಯೋಗಾಲಯಗಳು ಪತಂಜಲಿ ತುಪ್ಪವು ಕಲಬೆರಕೆಯಾಗಿದೆ ಎಂದು ದೃಢಪಡಿಸಿವೆ. ಆ ಬಳಿಕ, ಉತ್ಪಾದಕ, ವಿತರಕ ಹಾಗೂ ಚಿಲ್ಲರೆ ವ್ಯಾಪಾರಿಗಳ ವಿರುದ್ಧ ಒಟ್ಟು 1.40 ಲಕ್ಷ ರೂಪಾಯಿ ದಂಡ ವಿಧಿಸಿದೆ. ಜತೆಗೆ, ಪಿಥೋರಗಢದ ಧಾರ್ಚುಲಾ ರಸ್ತೆಯ ವಿತರಕ ಬ್ರಹ್ಮ ಆಕ್ಸೆಸರೀಸ್‌ಗೆ 25 ಸಾವಿರ ರೂ. ದಂಡ ಹಾಗೂ ಚಿಲ್ಲರೆ ವ್ಯಾಪಾರಿ ಕರಣ್ ಜನರಲ್ ಸ್ಟೋರ್‌ಗೆ 15 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
2020ರ ಪತಂಜಲಿಯ ಹಸುವಿನ ತುಪ್ಪದ ಮಾದರಿ ಈ ಪ್ರಕರಣಕ್ಕೆ ಸಂಬಂಧಿಸದ್ದಾಗಿದ್ದು, ಉತ್ತರಾಖಂಡ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಈ ನಿರ್ಧಾರವನ್ನು ಹೊರಡಿಸಿದೆ.
ಮೊದಲಿಗೆ, ನಿಯಮಿತ ತಪಾಸಣೆಗಾಗಿ ಪಿಥೋರಗಢದ ಕಶ್ನಿಯಲ್ಲಿರುವ ಕರಣ್ ಜನರಲ್ ಸ್ಟೋರ್‌ನಿಂದ ಪತಂಜಲಿ ತುಪ್ಪದ ಮಾದರಿಯನ್ನು ಹಿರಿಯ ಆಹಾರ ಸುರಕ್ಷತಾ ಅಧಿಕಾರಿ ದಿಲೀಪ್ ಜೈನ್ ಅವರು ಸಂಗ್ರಹಿಸುತ್ತಾರೆ. ಆರಂಭದಲ್ಲಿ ಉತ್ತರಾಖಂಡ ಪ್ರಯೋಗಾಲಯಕ್ಕೆ ಈ ತುಪ್ಪದ ಮಾದರಿಯನ್ನು ಕಳುಹಿಸಲಾಗುತ್ತದೆ.
ವರದಿಯಲ್ಲಿ ಪತಂಜಲಿ ತುಪ್ಪವೂ ಕಲಬೆರಕೆಯಾಗಿದ್ದು, ಸುರಕ್ಷತಾ ಮಾನದಂಡಗಳನ್ನು ಪೂರೈಸಿಲ್ಲ ಎಂದು ಹೇಳಿದೆ. ಈ ತುಪ್ಪ ಸೇವನೆಯೂ ಆರೋಗ್ಯಕ್ಕೆ ಮಾರಕ ಎಂಬ ವಿಚಾರವನ್ನು ಬಹಿರಂಗಪಡಿಸಿತ್ತು.
ಅಷ್ಟೇ ಅಲ್ಲದೇ, ಈ ವಿಚಾರದ ಕುರಿತಂತೆ ಪತಂಜಲಿಗೆ ನೋಟಿಸ್ ಅನ್ನು ಕೂಡ ಕಳುಹಿಸಲಾಗಿತ್ತು. ಈ ನೋಟಿಸ್‌ಗೆ ಪತಂಜಲಿ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಬದಲಾಗಿ, ಪತಂಜಲಿ ಆಯುರ್ವೇದ ಲಿಮಿಟೆಡ್ ಈ ಪರೀಕ್ಷೆಯ ಫಲಿತಾಂಶವನ್ನು ಪ್ರಶ್ನೆ ಮಾಡಿತ್ತು. ನಿರ್ಣಾಯಕ ಪರೀಕ್ಷೆಗಾಗಿ ತುಪ್ಪದ ಮಾದರಿಯನ್ನು ಗಾಝಿಯಾಬಾದ್‌ನಲ್ಲಿರುವ ರಾಷ್ಟ್ರೀಯ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು.
2021ರ ನವೆಂಬರ್ 26ರಂದು ರಾಷ್ಟ್ರೀಯ ಆಹಾರ ಪ್ರಯೋಗಾಲಯವು ತನ್ನ ವರದಿಯನ್ನ ಸಲ್ಲಿಕೆ ಮಾಡಿತ್ತು. ಈ ಪರೀಕ್ಷೆಯಲ್ಲಿಯೂ ಕೂಡ ತುಪ್ಪದ ಮಾದರಿಗಳು ಆಹಾರ ಸುರಕ್ಷತಾ ಪರೀಕ್ಷೆಯಲ್ಲಿ ವಿಫಲವಾಗಿವೆ ಎಂದು ತಿಳಿಸಿತ್ತು. ರಾಷ್ಟ್ರೀಯ ಪ್ರಯೋಗಾಲಯದ ಈ ವರದಿಯೂ ಉತ್ಪಾದಕರು ಹಾಗೂ ಮಾರಾಟಗಾರರ ವಿರುದ್ಧದ ಪ್ರಕರಣವನ್ನು ಬಲಪಡಿಸಿತು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | 7ನೇ ತರಗತಿ ವಿದ್ಯಾರ್ಥಿನಿ ಮೇಲೆ ಕಾಮುಕರಿಂದ ಸಾಮೂಹಿಕ ಅತ್ಯಾಚಾರ
ಆ ಬಳಿಕ ಪತಂಜಲಿ ತುಪ್ಪದ ಕುರಿತು ಆಹಾರ ಸುರಕ್ಷತಾ ಅಧಿಕಾರಿ ಪಿಥೋರಗಢದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿದ್ದರು. ಈ ಪ್ರಕಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು ವಾದ ಆಲಿಸಿ ತೀರ್ಪು ನೀಡಿದೆ.
ನ್ಯಾಯಾಲಯದ ಈ ತೀರ್ಪಿನಲ್ಲಿ ಪತಂಜಲಿ ಕಂಪನಿ ವಿರುದ್ಧ ಬರೋಬ್ಬರಿ 1 ಲಕ್ಷ ರೂ. ದಂಡ ವಿಧಿಸಲಾಗಿದೆ. ಜೊತೆಗೆ, ಪಿಥೋರಗಢದ ಧಾರ್ಚುಲಾ ರಸ್ತೆಯ ವಿತರಕ ಬ್ರಹ್ಮ ಆಕ್ಸೆಸರೀಸ್‌ಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ. ಜತೆಗೆ ಚಿಲ್ಲರೆ ವ್ಯಾಪಾರಿ ಕರಣ್ ಜನರಲ್ ಸ್ಟೋರ್‌ಗೆ 15 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
“ನ್ಯಾಯಾಲಯದ ಈ ತೀರ್ಪು ಆಹಾರ ಉತ್ಪನ್ನಗಳ ಸಮಗ್ರತೆಗೆ ಅತ್ಯಂತ ಮುಖ್ಯ. ಈ ತೀರ್ಪು ಉನ್ನತ ಮಟ್ಟದ ಬ್ರ್ಯಾಂಡ್‌ಗಳು ಸಹ ಗ್ರಾಹಕರ ಸುರಕ್ಷತೆಗಾಗಿ ನಿಗದಿಪಡಿಸಿದ ಸ್ಥಾಪಿತ ಗುಣಮಟ್ಟದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಸ್ಪಷ್ಟ ಸಂದೇಶ ರವಾನಿಸುತ್ತದೆ” ಎಂದು ಆಹಾರ ಸುರಕ್ಷತಾ ಅಧಿಕಾರಿ ದಿಲೀಪ್ ಜೈನ್ ಹೇಳಿದ್ದಾರೆ.
ಈಗಷ್ಟೇ ಅಲ್ಲ, ಈ ಹಿಂದಿನಿಂದಲೂ ಕೂಡ ಪತಂಜಲಿ ಕಂಪನಿಯ ಆಹಾರ ಸಾಮಾಗ್ರಿಗಳು ಕಳಪೆಯಾಗಿವೆ. ಆದರೆ, ಸ್ವಯಂಘೋಷಿತ ಯೋಗಗುರು ಬಾಬಾ ರಾಮದೇವ್ ಅವರು ಹಮ್ದರ್ದ್ ಸಂಸ್ಥೆಯ ಶರಬತ್ ಉತ್ಪನ್ನದ ಬಗ್ಗೆ ಆಕ್ಷೆಪಾರ್ಹ ಟೀಕೆ ಮಾಡಿದ್ದರು. ಅಷ್ಟೇ ಅಲ್ಲ, ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ನೀಡಿದ್ದಕ್ಕಾಗಿ ರಾಮದೇವ್ ವಿರುದ್ಧ ಕ್ರಿಮಿನಲ್ ಪ್ರಕರಣ ಕೂಡ ದಾಖಲಾಗಿದೆ.
ಮುಟ್ಟಿನ ರಜೆಗೆ ಬೆಂಗಳೂರು ಹೋಟೆಲ್‌ಗಳ ಸಂಘ ವಿರೋಧ; ಹೋರಾಟಗಾರ್ತಿಯರ ಖಂಡನೆ
ಸ್ವದೇಶಿ ಉತ್ಪನ್ನಗಳ ಹೆಸರಿನಲ್ಲಿ ಭಾರತೀಯ ಮಾರುಕಟ್ಟೆಗೆ ಬಂದಾಗ ಬಾಬಾ ರಾಮದೇವ್ ಅವರ ಪತಂಜಲಿ ಬ್ರ್ಯಾಂಡ್ ಆಹಾರ ಉತ್ಪನ್ನಗಳು ಆಹಾರ ಸುರಕ್ಷತಾ ಮಾನದಂಡಗಳನ್ನು ಪಾಲಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಈ ಹಿಂದೆ ಪತಂಜಲಿ ಫುಡ್ಸ್ ಲಿಮಿಟೆಡ್ ಉತ್ಪಾದಿಸಿದ್ದ ಕೆಂಪು ಮೆಣಸಿನಕಾಯಿ ಪುಡಿಯನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಆಹಾರ ನಿಯಂತ್ರಣ ಪ್ರಾಧಿಕಾರ (ಎಫ್‌ಎಸ್‌ಎಸ್) ನಿರ್ದೇಶನ ನೀಡಿತ್ತು. ಅಷ್ಟೇ ಅಲ್ಲದೆ, 4 ಟನ್ ಮೆಣಸಿನಕಾಯಿ ಪುಡಿಯನ್ನು ಮಾರುಕಟ್ಟೆಯಿಂದ ಪಡೆದಿತ್ತು. ಪತಂಜಲಿಯ ಎಲೈಚಿ (ಏಲಕ್ಕಿ), ಸೋನ್ ಪಾಪ್ಡಿ ತಯಾರಿಕೆಯಲ್ಲಿ ಆಹಾರ ಸುರಕ್ಷತಾ ಮಾನದಂಡಗಳನ್ನ ಉಲ್ಲಂಘಿಸಿದ ಆರೋಪವೂ ಕೂಡ ಇತ್ತು. ಇಷ್ಟೇ ಯಾಕೆ, ತಾವು ಬೆಂಬಸಿಸುತ್ತಿರುವ ಬಿಜೆಪಿ ಆಡಳಿತದಲ್ಲಿರುವ ಉತ್ತರಾಖಂಡದಲ್ಲಿಯೇ 14 ಪತಂಜಲಿ ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಲಾಗಿತ್ತು.
ಶರಬತ್ ಜಿಹಾದ್ ಮಾಡುವುದಕ್ಕೆ ಹೊರಟಿದ್ದ ಬಾಬಾ ರಾಮದೇವ್ ಅವರು ತಮ್ಮ ಪತಂಜಲಿ ಉತ್ಪನ್ನವನ್ನೂ ಆರೋಗ್ಯಕ್ಕೆ ಉಪಯುಕ್ತ ಎಂದು ಜನರನ್ನು ಯಾಮಾರಿಸುತ್ತಿದ್ದಾರೆ. ಆದ್ರೆ, ನಿಜಕ್ಕೂ ಪತಂಜಲಿ ಉತ್ಪನ್ನಗಳು ಆಯೋಗ್ಯಕ್ಕೆ ಮಾರಕ ಎಂದು ಪ್ರಯೋಗಾಲಯಗಳೇ ಹೇಳುತ್ತಿವೆ. ಇಂತಹ ಮೋಸದ ಕೆಲಸ ಮಾಡಿದ, ಜನರ ಆರೋಗ್ಯದ ಜೊತೆಗೆ ಚೆಲ್ಲಾಟವಾಡಿದ ಬಾಬಾ ರಾಮದೇವ್‌ಗೆ ದಂಡ ಹಾಕಿದರೆ ಸಾಕೇ? ಶಿಕ್ಷೆ ವಿಧಿಸುವುದು ಬೇಡವೇ?




