ಬಾಂಗ್ಲಾ ಅಲ್ಪಸಂಖ್ಯಾತರ ಆಕ್ರಂದನ; ಮಧ್ಯಂತರ ಸರ್ಕಾರದ 18 ತಿಂಗಳಲ್ಲಿ 2,900 ದೌರ್ಜನ್ಯ

Date:

1971ರ ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜಾತಿ, ಧರ್ಮ ಭೇದವಿಲ್ಲದೆ ಎಲ್ಲರೂ ಪಾಕಿಸ್ತಾನದ ದಬ್ಬಾಳಿಕೆಯ ವಿರುದ್ಧ ಹೋರಾಡಿದ್ದರು. ರವೀಂದ್ರನಾಥ ಟ್ಯಾಗೋರ್‌ ರಚಿತ “ಅಮರ್ ಶೋನಾರ್‌ ಬಾಂಗ್ಲಾ” ಎಂದು ಹಾಡುವಾಗ ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಭೇದವಿರಲಿಲ್ಲ. ಆದರೆ, ಇಂದು ಆ ಸ್ವಾತಂತ್ರ್ಯದ ಆಶಯಗಳು ಮಣ್ಣು ಪಾಲಾಗುತ್ತಿವೆ

ನೆರೆಯ ರಾಷ್ಟ್ರವೊಂದರಲ್ಲಿ ಆಡಳಿತ ಬದಲಾವಣೆಯೆಂಬುದು ಅಲ್ಲಿನ ಪ್ರಜೆಗಳಿಗೆ ಹೊಸ ಭರವಸೆಯೆಂಬುದು ಅಲ್ಲಿನ ಪ್ರಜೆಗಳಿಗೆ ಹೊಸ ಭರವಸೆಯನ್ನು ತರಬೇಕಿತ್ತು. ಆದರೆ, ಬಾಂಗ್ಲಾದೇಶದ ಪಾಲಿಗೆ, ವಿಶೇಷವಾಗಿ ಅಲ್ಲಿನ ಹಿಂದೂ, ಕ್ರೈಸ್ತ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಈ ಬದಲಾವಣೆಯು ಬದುಕಿನ ಕರಾಳ ಅಧ್ಯಾಯವಾಗಿ ಪರಿಣಮಿಸಿದೆ. ಪ್ರಜಾಪ್ರಭುತ್ವದ ಮರುಸ್ಥಾಪನೆಯ ಹೆಸರಿನಲ್ಲಿ ನಡೆದ ಹೋರಾಟಗಳು, ಇದೀಗ ಮೂಲಭೂತವಾದದ ಆರ್ಭಟಕ್ಕೆ ವೇದಿಕೆಯಾಗಿರುವುದು ದುರಂತ. ಇತ್ತೀಚಿಗೆ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರು ನೀಡಿದ ಮಾಹಿತಿಯ ಪ್ರಕಾರ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಮಿತಿಮೀರಿದ್ದು, ಖಾಸಗಿ ಸಂಸ್ಥೆಗಳು ಸಂಗ್ರಹಿಸಿದ ದತ್ತಾಂಶಗಳೇ ಎದೆಯೊಡೆಯುವಂತಿವೆ.

ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ. ಅಂದರೆ ರಾಜಕೀಯ ಅಸ್ಥಿರತೆ ಉಂಟಾದ ಸಮಯದಿಂದ ಹಿಡಿದು, ಶೇಖ್‌ ಹಸೀನಾ ಅವರ ಪದಚ್ಯುತಿ ಮತ್ತು ನಂತರದ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದವರೆಗಿನ ಕಾಲಘಟ್ಟದಲ್ಲಿ ಬರೋಬ್ಬರಿ 2,900ಕ್ಕೂ ಅಧಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ದೇವಾಲಯಗಳ ಧ್ವಂಸ, ಮನೆಗಳಿಗೆ  ಬೆಂಕಿ ಹಚ್ಚುವುದು, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಆಸ್ತಿ ಕಬಳಿಕೆಯಂತಹ ಹೀನ ಕೃತ್ಯಗಳು ಸೇರಿವೆ. ಮಧ್ಯಂತರ ಸರ್ಕಾರವು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬುದಕ್ಕೆ ಈ ಅಂಕಿ-ಅಂಶಗಳೇ ನೇರ ಸಾಕ್ಷಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಸ್ಥಿತಿ ಹದಗೆಡಲು ಪ್ರಮುಖ ಕಾರಣ ಅಲ್ಲಿನ ಆಡಳಿತ ಯಂತ್ರದಲ್ಲಿ ಬೇರೂರಿರುವ ಕೆಲವು ಮೂಲಭೂತವಾದಿ ಸಂಘಟನೆಗಳ ಪ್ರಭಾವ. ಸರ್ಕಾರ ಬದಲಾದರೂ, ಪೊಲೀಸ್‌ ಮತ್ತು ಆಡಳಿತ ವ್ಯವಸ್ಥೆ ನಿಷ್ಕ್ರಿಯವಾಗಿದೆ. ದೂರು ನೀಡಲು ಹೋದ ಸಂತ್ರಸ್ತರನ್ನೇ ಬೆದರಿಸಿ ಕಳುಹಿಸುವ, ಅಥವಾ ದೂರು ದಾಖಲಿಸಿಕೊಂಡರೂ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿದೆ. “ನಮ್ಮ ದೇಶದಲ್ಲಿ ನಾವೇ ಪರಕೀಯರಾಗಿದ್ದೇವೆ, ನಮ್ಮ ಹಬ್ಬಗಳನ್ನು ಆಚರಿಸಲು ನಮಗೆ ಭಯವಾಗುತ್ತಿದೆ,” ಎಂದು ಹಿಂದೂ ಮತ್ತು ಕ್ರೈಸ್ತ ಮುಖಂಡರು ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ಅರಾಜಕತೆ ಬಾಂಗ್ಲಾದೇಶದ ಜಾತ್ಯತೀತ ತತ್ವಗಳಿಗೆ ಬಲವಾದ ಪೆಟ್ಟು ನೀಡಿದೆ.

Bangla minority 2

ಈ ಸನ್ನಿವೇಶವನ್ನು ಅವಲೋಕಿಸಿದಾಗ, ಬಾಂಗ್ಲಾದೇಶದ ಖ್ಯಾತ ಲೇಖಕಿ ತಸ್ಲಿಮಾ ನಸ್ರೀನ್‌ ನೆನಪಾಗದೇ ಇರಲಾರರು. ಸುಮಾರು ಮೂರು ದಶಕಗಳ ಹಿಂದೆಯೇ ಅವರು ಈ ಅಪಾಯವನ್ನು ಗ್ರಹಿಸಿದ್ದರು. 1993ರಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ಪ್ರತೀಕಾರದ ದಾಳಿಗಳನ್ನು ಆಧರಿಸಿ ಅವರು ‘ಲಜ್ಜಾ’(ನಾಚಿಕೆ) ಎಂಬ ಕಾದಂಬರಿಯನ್ನು ಬರೆದರು. ಆ ಕಾದಂಬರಿಯಲ್ಲಿ ‘ಸುರಂಜನ್‌ ದತ್ತ’ ಎಂಬ ಪಾತ್ರದ ಮೂಲಕ ಅಲ್ಪಸಂಖ್ಯಾತ ಹಿಂದೂ ಕುಟುಂಬವೊಂದು ಅನುಭವಿಸುವ ನರಕಯಾತನೆ, ಅನಮಾನ ಮತ್ತು ಅಸ್ತಿತ್ವದ ಸಂಘರ್ಷವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು.

ಇದನ್ನು ಓದಿದ್ದೀರಾ? ಕಣ್ಣೀರಲ್ಲಿ ಕರಗಿದ ಕುಸ್ತಿಪಟುಗಳ ಕನಸು: ಲೈಂಗಿಕ ಕಿರುಕುಳ ಆರೋಪಿ ಬ್ರಿಜ್‌ಭೂಷಣ್‌ಗೆ ಬಿಜೆಪಿ ‘ರಕ್ಷಾ ಕವಚ’

ಆದರೆ, ಕಟುಸತ್ಯವನ್ನು ಬರೆದ ನಸ್ರೀನ್ ಅವರಿಗೆ ಸಿಕ್ಕಿದ್ದು ಬಹುಮಾನವಲ್ಲ, ಬದಲಿಗೆ ದೇಶಭ್ರಷ್ಟತೆಯ ಶಿಕ್ಷೆ. ಅಂದು ಬಾಂಗ್ಲಾದೇಶದ ಮೂಲಭೂತವಾದಿಗಳು ತಸ್ಲಿಮಾ ಅವರ ತಲೆಗೆ ಬೆಲೆ ಕಟ್ಟಿದ್ದರು, ಅವರ ವಿರುದ್ಧ ಫತ್ವ ಹೊರಡಿಸಿದರು ಮತ್ತು ಅವರನ್ನು ಇಸ್ಲಾಂ ವಿರೋಧಿ ಎಂದು ಜರಿದರು. ಜೀವ ಭಯದಿಂದ ತಸ್ಲಿಮಾ ತಮ್ಮ ತಾಯ್ನಾಡನ್ನು ತೊರೆಯಬೇಕಾಯಿತು. ದೀರ್ಘಕಾಲದಿಂದ ಭಾರತದಲ್ಲಿ ಆಶ್ರಯ ಪಡೆದಿರುವ ಅವರು, ಇಂದಿಗೂ ಮೂಲಭೂತವಾದದ ವಿರುದ್ಧ ತಮ್ಮ ಲೇಖನಿ ಮತ್ತು ಮಾತುಗಳ ಮೂಲಕ ಸಮರ ಸಾರುತ್ತಲೇ ಇದ್ದಾರೆ. ಅಂದು ತಸ್ಲಿಮಾ ಅವರು ‘ಲಜ್ಜಾ’ದಲ್ಲಿ ವ್ಯಕ್ತಪಡಿಸಿದ ಆತಂಕ, ಇಂದು ಬಾಂಗ್ಲಾದೇಶದ ಪ್ರತಿಯೊಂದು ಬೀದಿಯಲ್ಲೂ ನೈಜ ರೂಪ ಪಡೆದುಕೊಂಡಿರುವುದು ಇತಿಹಾಸದ ವ್ಯಂಗ್ಯವೇ ಸರಿ.

ಅಲ್ಪಸಂಖ್ಯಾತರ ಮೇಲಿನ ಈ ದಾಳಿಗಳು ಕೇವಲ ದೈಹಿಕ ಹಲ್ಲೆಗಳಿಗೆ ಸೀಮಿತವಲ್ಲ, ಬದಲಿಗೆ ಸಾಂಸ್ಕೃತಿಕ ಅಸ್ಮಿತೆಯನ್ನು ಅಳಿಸಿಹಾಕುವ ಪ್ರಯತ್ನವೂ ಇದರಲ್ಲಿದೆ. ಅಲ್ಪಸಂಖ್ಯಾತರ ಹಬ್ಬಗಳ ಸಂದರ್ಭದಲ್ಲಿ ದೇವಾಲಯಗಳು ಹಾಗೂ ಚರ್ಚ್‌ಗಳ ಮೇಲೆ ದಾಳಿ ನಡೆಸುವುದು ನಿರಂತರವಾಗಿ ನಡೆಯುತ್ತಿದೆ. ರಂಗಾಪುರ, ಚಿತ್ತಗಾಂಗ್‌, ಢಾಕಾ ಸೇರಿದಂತೆ ಹಲವು ಭಾಗಗಳಲ್ಲಿ ಅಲ್ಪಸಂಖ್ಯಾತರು ಸಾಮೂಹಿಕವಾಗಿ ಪಲಾಯನ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ತಮ್ಮ ಪೂರ್ವಜರ ಆಸ್ತಿಯನ್ನು, ಹುಟ್ಟಿದ ಮಣ್ಣನ್ನು ಬಿಟ್ಟು ಪ್ರಾಣ ಉಳಿಸಿಕೊಳ್ಳಲು ಓಡಿಹೋಗುತ್ತಿರುವ ದೃಶ್ಯಗಳು ಮನ ಕಲಕುವಂತಿವೆ.

ಭಾರತವು ಈ ವಿಷಯದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮತ್ತು ದ್ವಿಪಕ್ಷೀಯ ಮಾತುಕತೆಗಳಲ್ಲಿ ಅಲ್ಪಸಂಖ್ಯಾತರ ರಕ್ಷಣೆ ಬಾಂಗ್ಲಾದೇಶದ ಹೊಣಗಾರಿಕೆ ಎಂದು ಸ್ಪಷ್ಟಪಡಿಸಿದೆ. ಆದರೆ, ಬಾಂಗ್ಲಾದೇಶದ ಪ್ರಸ್ತುತ ಆಡಳಿತವು ಈ ಆರೋಪಗಳನ್ನು ಅಲ್ಲಗಳೆಯುತ್ತಾ, ಇವುಗಳನ್ನು “ರಾಜಕೀಯ ಪ್ರೇರಿತ” ಅಥವಾ “ ಪ್ರತ್ಯೇಕ ಘಟನೆಗಳು” ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ. ಆದರೆ, ಭಾರತದ ವಿದೇಶಾಂಗ ಸಚಿವಾಲಯ ನೀಡಿರುವ 2,900 ಪ್ರಕರಣಗಳ ದತ್ತಾಂಶವು ಬಾಂಗ್ಲಾ ಸರ್ಕಾರದ ವಾದವನ್ನು ಹುಸಿ ಎಂದು ಸಾಬೀತುಪಡಿಸಿದೆ. ಜಾಗತಿಕ ಸಮುದಾಯವೂ ಈ ಬಗ್ಗೆ ಮೌನ ಮುರಿಯಬೇಕಾದ ಅಗತ್ಯವಿದೆ.

Bangla minority 1

1971ರ ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜಾತಿ, ಧರ್ಮ ಭೇದವಿಲ್ಲದೆ ಎಲ್ಲರೂ ಪಾಕಿಸ್ತಾನದ ದಬ್ಬಾಳಿಕೆಯ ವಿರುದ್ಧ ಹೋರಾಡಿದ್ದರು. ರವೀಂದ್ರನಾಥ ಟ್ಯಾಗೋರ್‌ ರಚಿತ “ಅಮರ್ ಶೋನಾರ್‌ ಬಾಂಗ್ಲಾ” ಎಂದು ಹಾಡುವಾಗ ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಭೇದವಿರಲಿಲ್ಲ. ಆದರೆ, ಇಂದು ಆ ಸ್ವಾತಂತ್ರ್ಯದ ಆಶಯಗಳು ಮಣ್ಣು ಪಾಲಾಗುತ್ತಿವೆ. ಅಲ್ಪಸಂಖ್ಯಾತರನ್ನು ದೇಶದ ಶತ್ರುಗಳಂತೆ ಅಥವಾ ಭಾರತದ ಏಜಂಟರಂತೆ ಬಿಂಬಿಸುವ ವ್ಯವಸ್ಥಿತ ಪಿತೂರಿ ಅಲ್ಲಿ ನಡೆಯುತ್ತಿದೆ. ಇದು ಕೇವಲ ಧಾರ್ಮಿಕ ಸಂಘರ್ಷವಲ್ಲ, ಬದಲಿಗೆ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

ಈಗಿನ ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ದಕ್ಷಿಣ ಏಷ್ಯಾದಲ್ಲಿ ಮತ್ತೊಂದು ದೊಡ್ಡ ನಿರಾಶ್ರಿತರ ಸಮಸ್ಯೆ ಉದ್ಬವಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಬಾಂಗ್ಲಾದೇಶದ ಪ್ರಜ್ಞಾವಂತ ನಾಗರಿಗ ಸಮಾಜ, ವಿದ್ಯಾರ್ಥಿ ಸಮುದಾಯ ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳು ಒಗ್ಗೂಡಿ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ. ಮಧ್ಯಂತರ ಸರ್ಕಾರವು ಕೇವಲ ಚುನಾವಣೆಯ ಕಡೆಗೆ ಗಮನಹರಿಸದೆ, ಸಮಾಜದ ಎಲ್ಲ ವರ್ಗದ ಜನರಿಗೂ ಸುರಕ್ಷತೆ ಒದಗಿಸುವ ವಿಶ್ವಾಸವನ್ನು ಮೂಡಿಸಬೇಕಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗದ ಹೊರತು, ಈ ದೌರ್ಜನ್ಯಗಳಿಗೆ ಕಡಿವಾಣ ಬೀಳುವುದಿಲ್ಲ.

ಅಂತಿಮವಾಗಿ, ತಸ್ಲಿಮಾ ನಸ್ರೀನ್ ಅಂದು ಹೇಳಿದ ಮಾತು ಇಂದಿಗೂ ಪ್ರಸ್ತುತ, “ ಮಾನವೀಯತೆಗಿಂತ ದೊಡ್ಡ ಧರ್ಮ ಯಾವುದೂ ಇಲ್ಲ”. 2,900 ಪ್ರಕರಣಗಳು ಕೇವಲ ಕಡತಗಳಲ್ಲಿ ಉಳಿಯಬಾರದು. ಪ್ರತಿಯೊಂದು ಪ್ರಕರಣದ ಹಿಂದೆಯೂ ನೊಂದ ಜೀವವಿದೆ, ಕಳೆದು ಹೋದ ಬದುಕಿದೆ. ನೆರೆಯ ರಾಷ್ಟ್ರವೂ ‘ಲಜ್ಜಾ’ ಪಡುವಂತಹ ಕೃತ್ಯಗಳನ್ನು ನಿಲ್ಲಿಸಿ, ಎಲ್ಲರನ್ನು ಒಳಗೊಳ್ಳುವ ಸೌಹಾರ್ದಯುತ ಬಾಂಗ್ಲಾವನ್ನು ಕಟ್ಟುತ್ತದೆಯೇ ಅಥವಾ ಮೂಲಭೂತವಾದದ ಅಂಧಕಾರದಲ್ಲಿ ಮುಳುಗುತ್ತದೆಯೇ ಎಂಬುದನ್ನು ಕಾಲವೇ ನಿರ್ಧರಿಸಲಿದೆ. ಆದರೆ, ಅಲ್ಲಿಯವರೆಗೂ, ಅಲ್ಲಿನ ಅಲ್ಪಸಂಖ್ಯಾತರ ಪಾಲಿಗೆ ಪ್ರತಿ ಕ್ಷಣವೂ ಅಗ್ನಿಪರೀಕ್ಷೆಯೇ ಆಗಿದೆ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...