ಬಂಗಾಳ ಚುನಾವಣೆ | ಬಿಜೆಪಿ ಕಡೆಗಣಿಸಿದ್ದ ಘೋಷ್‌ಗೆ ಮತ್ತೆ ಜೋಶ್‌!

Date:

ಪಕ್ಷದ ಚಟುವಟಿಕೆ, ಬೆಳವಣಿಗೆ ಹಾಗೂ ಗೆಲುವು ಯಾವಾಗಲೂ ತಂಡದ ಪ್ರಯತ್ನವಾಗಿದ್ದರೂ, ಘೋಷ್ ರಾಜ್ಯ ಅಧ್ಯಕ್ಷರಾಗಿದ್ದಾಗಲೇ ಬಿಜೆಪಿ ಹೆಚ್ಚಾಗಿ ಬೆಳೆದಿದೆ ಎಂಬ ಅಂಶವನ್ನು ಕಡೆಗಣಿಸಲು ಸಾಧ್ಯವಿಲ್ಲ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ನಾಲ್ಕೈದು ತಿಂಗಳುಗಳಷ್ಟೇ ಬಾಕಿ ಇವೆ. ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರ ತೆಕ್ಕೆಯಿಂದ ಬಂಗಾಳವನ್ನು ಕಸಿದುಕೊಳ್ಳಲು ಬಿಜೆಪಿ-ಆರ್‌ಎಸ್‌ಎಸ್‌ ತಂತ್ರ ಹೆಣೆಯುತ್ತಿವೆ. ಬಿಜೆಪಿಯ ಆಕ್ರಮಣ ಎದುರಿಸಲು ಮಮತಾ ಕೂಡ ಪ್ರತಿತಂತ್ರ ಹೆಣೆಯುತ್ತಿದ್ದಾರೆ. ಬಂಗಾಳವನ್ನು ಗೆಲ್ಲಲು ಅಮಿತ್ ಶಾ ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಪಕ್ಷದ ಆಂತರಿಕ ಭಿನ್ನಮತವನ್ನು ಶಮನ ಮಾಡಲು ಮುಂದಾಗಿದ್ದಾರೆ. ಅಂತೆಯೇ, ಕಳೆದ ಏಳೆಂಟು ತಿಂಗಳುಗಳಿಂದ ಪಕ್ಷವು ಕಡೆಗಣಿಸಿದ್ದ, ದೂರವಿಟ್ಟಿದ್ದ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ದಿಲೀಪ್‌ ಘೋಷ್‌ ಅವರಿಗೂ ಬಿಜೆಪಿ ಜೋಶ್‌ ತುಂಬಲು ಮುಂದಾಗಿದೆ.

ಬಂಗಾಳದಲ್ಲಿ ಬಿಜೆಪಿ ಮುಖ್ಯವಾಗಿ ಮೂವರು ನಾಯಕರನ್ನು ಹೆಚ್ಚಾಗಿ ಅವಲಂಬಿಸಿದೆ. ರಾಜ್ಯ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ, ವಿಧಾನಸಭೆ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಹಾಗೂ ಮಾಜಿ ರಾಜ್ಯ ಅಧ್ಯಕ್ಷ ಸುಕಾಂತ ಮಜುಂದಾರ್. ಇವರಲ್ಲದೆ, ಬಿಜೆಪಿಗೆ ತನ್ನ ಪ್ರಾಬಲ್ಯವನ್ನು ವಿಸ್ತರಿಸಲು ಮತ್ತೊಬ್ಬ ನಾಯಕ ದಿಲೀಪ್ ಘೋಷ್‌ ಅವರನ್ನೂ ಧೂಳುಕೊಡವಿ ಮರಳಿ ಮುನ್ನೆಲೆಗೆ ತಂದಿದೆ. ಆದರೆ, ಅವರು ಕಳೆದ ವರ್ಷ, ದಿಘಾದಲ್ಲಿನ ಜಗನ್ನಾಥ ದೇವಾಲಯ ಕಾರ್ಯಕ್ರಮಕ್ಕಾಗಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದರು. ಆ ಕಾರಣಕ್ಕಾಗಿ, ಅವರನ್ನು ಬಿಜೆಪಿ ಬದಿಗಿಟ್ಟಿತ್ತು. ಈಗ, ಅವರನ್ನು ಪಕ್ಷವು ಮತ್ತೆ ಸಕ್ರಿಯಗೊಳಿಸುತ್ತಿದೆ.

ಹೇಳಿಕೇಳಿ, ಬಿಜೆಪಿ ತನ್ನನ್ನು ತಾನು ಶಿಸ್ತಿನ ಪಕ್ಷವೆಂದು ಹೇಳಿಕೊಳ್ಳುತ್ತಲೇ ಬಂದಿದೆ. ಪಕ್ಷದಲ್ಲಿ ಆತ್ಯಾಚಾರ, ಲೈಂಗಿಕ ಆರೋಪಿಗಳಿದ್ದರೂ, ಭ್ರಷ್ಟಾಚಾರದ ಆರೋಪ ಹೊತ್ತ ನಾಯಕರಿದ್ದರೂ, ತಾನು ಅತ್ಯಂತ ನಿಷ್ಠಾವಂತ, ಭ್ರಷ್ಟಾಚಾರ ವಿರೋಧಿ, ಮಹಿಳಾ ರಕ್ಷಕನೆಂದು ಬಿಜೆಪಿ ಬಡಾಯಿ ಕೊಚ್ಚುತ್ತಿದೆ. ಈಗ, ಬಂಗಾಳದಲ್ಲಿ ತನ್ನ ಶಿಸ್ತು- ಒಗ್ಗಟ್ಟನ್ನು ತೋರಿಸಿಕೊಳ್ಳಲು ಮುಂದಾಗಿದೆ. ಚುನಾವಣೆಗಳಲ್ಲಿ ತಳಮಟ್ಟದ ಪ್ರಚಾರ ನಡೆಸುವ ಸ್ಥಳೀಯ ನಾಯಕರನ್ನು ಒಗ್ಗೂಡಿಸುವಲ್ಲಿ ತೊಡಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಡಿಸೆಂಬರ್ 31 ರಂದು, ಈ ನಾಲ್ವರೊಂದಿಗೆ ಅಮಿತ್ ಶಾ ಸಭೆ ನಡೆಸಿದ್ದಾರೆ. ಅವರೆಲ್ಲರಿಗೂ, ‘ಆಂತರಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮುಂಬರುವ ಚುನಾವಣೆಗಾಗಿ ಒಗ್ಗಟ್ಟಿನಿಂದ ಕೆಲಸ ಮತ್ತು ಪ್ರಚಾರ ಮುನ್ನಡೆಸಿ’ ಎಂದು ಸೂಚಿಸಿದ್ದಾರೆ. ಆ ಸಭೆಯು ಘೋಷ್‌ ಅವರಿಗೆ ‘ಎನರ್ಜಿ’ ನೀಡಿದೆ.

ಸಭೆಯ ಬೆನ್ನಲ್ಲೇ, ಜನವರಿ 1ರಂದು ಹಾಲಿ ಬಿಜೆಪಿ ಅಧ್ಯಕ್ಷ ಭಟ್ಟಾಚಾರ್ಯರನ್ನು ಘೋಷ್ ಭೇಟಿ ಮಾಡಿದ್ದಾರೆ. ಚುನಾವಣಾ ಪ್ರಚಾರಕ್ಕೆ ಕಾರ್ಯತಂತ್ರ ರೂಪಿಸುವ ಕುರಿತು ಚರ್ಚಿಸಿದ್ದಾರೆ. ಪಕ್ಷದಲ್ಲಿ ‘ಫಯರ್‌ಬ್ರಾಂಡ್‌’ ಎಂದೇ ಕರೆಸಿಕೊಂಡಿರುವ ಘೋಷ್‌ ಅವರನ್ನು ಮುನ್ನೆಲೆಗೆ ತರುವ ಮೂಲಕ ಬಿಜೆಪಿ ತಮ್ಮ ನಾಯಕರು ಮತ್ತು ಕಾರ್ಯಕರ್ತರಿಗೆ ಒಗ್ಗಟ್ಟಿನ ಸಂದೇಶ ರವಾನಿಸಲು ಪ್ರಯತ್ನದಲ್ಲಿದೆ.

 “ರಾಜಕೀಯ ಏರು-ಪೇರು ಹೊಸತೇನಲ್ಲ. ಅಮಿತ್ ಶಾ ಅವರು ನನಗೆ ಪಕ್ಷಕ್ಕಾಗಿ ಕೆಲಸ ಮಾಡಲು ಕೇಳಿದ್ದಾರೆ. ಅದರಂತೆ ನಾನು ಕೆಲಸ ಆರಂಭಿಸಿದ್ದೇನೆ. ಪಕ್ಷವು ಈ ಹಿಂದೆಯೂ ನನಗೆ ಕೆಲಸ ಮಾಡಲು ಕೇಳಿದಾಗಲೆಲ್ಲಾ, ನಾನು ಕೆಲಸ ಮಾಡಿದ್ದೇನೆ. ಈ ಚುನಾವಣೆಯಲ್ಲಿ ಪಕ್ಷವು ನನ್ನಿಂದ ಏನು ಬಯಸುತ್ತದೆಯೋ, ಅದನ್ನು ನಾನು ಮಾಡುತ್ತೇನೆ” ಎಂದಿದ್ದಾರೆ. ಇಂದಿನಿಂದ (ಜ.6-ಮಂಗಳವಾರ) ಆರಂಭಗೊಂಡಿರುವ ರ್‍ಯಾಲಿಗಳಲ್ಲಿ ಘೋಷ್ ಭಾಗಿಯಾಗಿದ್ದಾರೆ.

ಸದ್ಯ ಮೇಲ್ನೋಟಕ್ಕೆ ಭಟ್ಟಾಚಾರ್ಯ, ಸುವೇಂದು, ಸುಂಕಾತ ಹಾಗೂ ಘೋಷ್ ಒಗ್ಗೂಡಿರುವಂತೆ ಕಾಣುತ್ತಿದೆ. ನಾಲ್ವರೂ ಸಾರ್ವಜನಿಕ ವೇದಿಕೆಗಳಲ್ಲಿ ಒಗ್ಗಟ್ಟಿನ ಮಂತ್ರ ಹೇಳುತ್ತಿದ್ದಾರೆ. ಈ ಒಗ್ಗಟ್ಟು, ಬಂಗಾಳದಲ್ಲಿ ಬಿಜೆಪಿ ತನ್ನ ಬೆಳವಣಿಗೆಗೆ ಅಡ್ಡಿಯಾಗಿರುವ ಬಣ ರಾಜಕಾರಣವನ್ನು ಮೀರಿ, ಪುಟಿದೇಳುವುದೇ, ಟಿಎಂಸಿಗೆ ಭಾರೀ ಸವಾಲೊಡ್ಡಬಹುದೇ ಎಂಬ ಚರ್ಚೆಗಳು ನಡೆಯುತ್ತಿವೆ.

ಅಂದಹಾಗೆ, ಘೋಷ್‌ ಆರ್‌ಎಸ್‌ಎಸ್‌ ಪಾಳಯದಲ್ಲಿ ಬೆಳೆದು, ಪ್ರವರ್ಧಮಾನಕ್ಕೆ ಬಂದವರು. 1984ರಲ್ಲಿ ಆರ್‌ಎಸ್‌ಎಸ್‌ ಪ್ರಚಾರಕರಾಗಿ ಮುನ್ನೆಲೆಗೆ ಬಂದ ಘೋಷ್, 2007ರವರೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಸಂಘದ ಉಸ್ತುವಾರಿ ಹೊಣೆ ಹೊತ್ತಿದ್ದರು. 2014ರಲ್ಲಿ, ಬಂಗಾಳ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. ಒಂದೇ ವರ್ಷದಲ್ಲಿ (2015) ಅಧ್ಯಕ್ಷರೂ ಆದರು.

ಅವರ ನೇತೃತ್ವದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಬಂಗಾಳದ ಒಟ್ಟು 42 ಕ್ಷೇತ್ರಗಳಲ್ಲಿ 18ಅನ್ನೂ, 2021ರ ವಿಧಾನಸಭಾ ಚುನಾವಣೆಯಲ್ಲಿ 294 ಸ್ಥಾನಗಳ ಪೈಕಿ 77 ಕ್ಷೇತ್ರಗಳನ್ನೂ ಬಿಜೆಪಿ ಗೆದ್ದಿತ್ತು.  ಅಲ್ಲದೆ, 2016ರಲ್ಲಿ 10.16% ಇದ್ದ ಮತಹಂಚಿಕೆಯು 2019ರಲ್ಲಿ 40.25%ಗೆ ಏರಿಕೆ ಕಂಡಿತು. ಆದಾಗ್ಯೂ, 2021ರ ಚುನಾವಣೆಯಲ್ಲಿ ಮಮತಾ ಅವರಿಂದ ಅಧಿಕಾರ ಕಸಿದುಕೊಳ್ಳಲು ಸಾಧ್ಯವಾಗಲಿಲ್ಲ. ಇದೆಲ್ಲದರ ನಡುವೆ, ಬಣ ರಾಜಕಾರಣಗಳು ಭುಗಿಲೆದ್ದು, ಘೋಷ್ ಕೆಳಗಿಳಿಯಬೇಕಾಯಿತು. ಮಜುಂದಾರ್ ಪಕ್ಷದ ಅಧ್ಯಕ್ಷರಾದರು.

2024ರ ಲೋಕಸಭಾ ಚುನಾವಣೆಯಲ್ಲಿ ಘೋಷ್‌ಗೆ ಮೇದಿನಿಪುರದ ಕ್ಷೇತ್ರದ ಬದಲಿಗೆ ಬುರ್ದ್ವಾನ್-ದುರ್ಗಾಪುರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ನೀಡಿತು. ಆದರೆ, ಆ ಕ್ಷೇತ್ರದಲ್ಲಿ ಅವರು ಮಾಜಿ ಕ್ರಿಕೆಟಿಗ, ಟಿಎಂಸಿ ನಾಯಕ ಕೀರ್ತಿ ಆಜಾದ್ ವಿರುದ್ಧ ಸೋತರು.

ಈ ಲೇಖನ ಓದಿದ್ದೀರಾ?: ಬಂಗಾಳ ಚುನಾವಣೆ | ಅಧಿಕಾರಕ್ಕಾಗಿ ಬಿಜೆಪಿ ತಂತ್ರ – ಮಮತಾ ಪ್ರತಿತಂತ್ರ

ತರುವಾಯ ಪಕ್ಷದಲ್ಲಿ ಮತ್ತು ಆಡಳಿತದಲ್ಲಿ ಯಾವ ಸ್ಥಾನವೂ ಇಲ್ಲದೆ, ನಿರುದ್ಯೋಗಿಯಾಗಿದ್ದ ಘೋಷ್‌, 2025ರ ಏಪ್ರಿಲ್ 30 ರಂದು ದಿಘಾದ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಮಮತಾ ಅವರನ್ನು ಕಂಡಿದ್ದರು. ಈ ಭೇಟಿಯು ಘೋಷ್ ಮತ್ತು ಬಂಗಾಳ ಬಿಜೆಪಿ ನಡುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸಿತು. ಅಂದಿನಿಂದ, ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ಎಲ್ಲ ರ್‍ಯಾಲಿಗಳಲ್ಲೂ ಘೋಷ್ ಅವರನ್ನು ದೂರವಿಡಲಾಯಿತು.

ಪಕ್ಷದ ಚಟುವಟಿಕೆ, ಬೆಳವಣಿಗೆ ಹಾಗೂ ಗೆಲುವು ಯಾವಾಗಲೂ ತಂಡದ ಪ್ರಯತ್ನವಾಗಿದ್ದರೂ, ಘೋಷ್ ರಾಜ್ಯ ಅಧ್ಯಕ್ಷರಾಗಿದ್ದಾಗಲೇ ಬಿಜೆಪಿ ಹೆಚ್ಚಾಗಿ ಬೆಳೆದಿದೆ ಎಂಬ ಅಂಶವನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂಬುದನ್ನು ಬಿಜೆಪಿ ನಾಯಕರೇ ಒಪ್ಪಿಕೊಳ್ಳುತ್ತಾರೆ.

ಆ ರೀತಿಯಲ್ಲಿ ಘೋಷ್‌ ರಾಜ್ಯಾದ್ಯಂತ ತಳಮಟ್ಟದಿಂದ ಕೆಲಸ ಮಾಡಿದ್ದಾರೆ. ಜನಪ್ರಿಯತೆಯನ್ನೂ ಗಣಿಸಿದ್ದಾರೆ. ಅವರ ಆಕ್ರಮಣಕಾರಿ ಪ್ರಚಾರ ಶೈಲಿಯು ಹಲವು ಸಂದರ್ಭಗಳಲ್ಲಿ ಅವರನ್ನೂ-ಪಕ್ಷವನ್ನೂ ವಿವಾದ ಮತ್ತು ಇಕ್ಕಟ್ಟಿಗೆ ಸಿಲುಕಿಸಿದ್ದರೂ, ಬಂಗಾಳದಲ್ಲಿ ಬಿಜೆಪಿ ಬೇರೂರಲು ಘೋಷ್ ನಿರ್ಣಾಯಕ ಪಾತ್ರವಹಿಸಿದ್ದಾರೆ.

ಆದರೂ, ಘೋಷ್‌ ಅವರ ಮರಳುವಿಕೆಯು ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಮಹತ್ವವೂ ಇಲ್ಲವೆಂದು ಟಿಎಂಸಿ ಮತ್ತು ಎಡಪಕ್ಷಗಳು ಹೇಳುತ್ತವೆ. ಘೋಷ್ ಅವರನ್ನು ಮೂಲೆಗುಂಪು ಮಾಡಿದ್ದವರು, ಅವರದ್ದೇ ಪಕ್ಷದ ನಾಯಕರು. ಆದರೆ, ಈಗ ಅವರಿಲ್ಲದೆ ಪಕ್ಷವು ಹೆಚ್ಚಿನ ಸಾಧನೆ ಮಾಡಲಾಗದು ಎಂಬ ಭಾವ ಬಿಜೆಪಿ ಹೈಕಮಾಂಡ್‌ನಲ್ಲಿದೆ. ಹಾಗಾಗಿ, ಅವರಿಗೆ ಮತ್ತೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಇದರಿಂದ, ಈಗ ಹೆಚ್ಚಿನದ್ದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಟಿಎಂಸಿ ನಾಯಕರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...