ಬಂಗಾಳ ಚುನಾವಣೆ | ಮಮತಾ ಬ್ಯಾನರ್ಜಿ vs ಸುವೇಂದು ಅಧಿಕಾರಿ: ಭಂಟನಿಂದ ಎದುರಾಳಿವರೆಗೆ

Date:

ದಶಕಗಳ ಕಾಲ ಬಂಗಾಳದಲ್ಲಿ ಬಲವಾದ ಶಕ್ತಿ ಪಡೆಯುವಲ್ಲಿ ವಿಫಲವಾಗಿದ್ದ ಬಿಜೆಪಿಗೆ ವರದಾನವಾಗಿ ಸುವೇಂದು ಕಂಡರು. 2020ರ ಡಿಸೆಂಬರ್ 19ರಂದು ಅಮಿತ್ ಶಾ ಸಮ್ಮುಖದಲ್ಲಿ ಸುವೇಂದು ಬಿಜೆಪಿ ಸೇರಿದರು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ವಿಪಕ್ಷ ನಾಯಕ ಸುವೇಂದು ಅಧಿಕಾರಿ – ಇಬ್ಬರೂ ಒಂದು ಕಾಲದಲ್ಲಿ ಭಾರೀ ಆಪ್ತರು. ಮಮತಾಗೆ ಸುವೇಂದು ಬಲಗೈ ಭಂಟನಾಗಿದ್ದರು. ಟಿಎಂಸಿಯ ಹುರಿಯಾಳುಗಳಲ್ಲಿ ಕೂಡ ಒಬ್ಬರಾಗಿದ್ದರು. ಆದರೆ, 2021ರ ವೇಳೆಗೆ ಎಲ್ಲವೂ ಬದಲಾದವು. ಸುವೇಂದು ಟಿಎಂಸಿ ತೊರೆದು ಬಿಜೆಪಿ ಸೇರಿದರು. ವಿಶ್ವಾಸಘಾತ ಮಾಡಿದ ಸುವೇಂದು ವಿರುದ್ಧ ಅವರ ಭದ್ರಕೋಟೆ ನಂದಿಗ್ರಾಮದಲ್ಲಿ ಮಮತಾ ಸ್ಪರ್ಧಿಸಿ ಸೋತರು. ಈ ಬಾರಿ, ಇಬ್ಬರ ನಡುವಿನ ಕದನ ಮಮತಾ ಬ್ಯಾನರ್ಜಿ ಅವರ ಭದ್ರಕೋಟೆ ಭವಾನಿಪುರಕ್ಕೆ ಸ್ಥಳಾಂತರಗೊಂಡಿದೆ. ಭವಾನಿಪುರದಲ್ಲಿ ಮಮತಾ ವಿರುದ್ಧ ಸುವೇಂದು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದಾರೆ. ನಂದಿಗ್ರಾಮದಲ್ಲಿಯೂ ಅವರೇ ಅಭ್ಯರ್ಥಿಯಾಗಿದ್ದಾರೆ.

ಇದು ಅಕ್ಷರಶಃ, ಒಂದು ಕಾಲದಲ್ಲಿ ತನ್ನ ನಾಯಕಿಗಾಗಿ ಬೆಟ್ಟವನ್ನೇ ಅಲುಗಾಡಿಸಲು ಸಿದ್ದಗಿದ್ದ ಭಂಟನೊಬ್ಬ ಬಿಜೆಪಿಯ ಕೆಡ್ಡಕ್ಕೆ ಸಿಲುಕಿ, ಪಕ್ಷಾಂತರಗೊಂಡು ತನ್ನ ನಾಯಕಿಗೇ ಕಡು ವೈರಿಯಾದ ರಾಜಕೀಯ ಕಥೆ. ಮಮತಾ ಮತ್ತು ಸುವೇಂದು ಅವರ ಹೋರಾಟವು ದಶಕಗಳ ಹಿಂದೆ ಕಮ್ಯುನಿಸ್ಟ್‌ ಆಡಳಿತವನ್ನೇ ಕಿತ್ತೆದಿತ್ತು. ಜನ ಹೋರಾಟದಿಂದ ಸರ್ಕಾರದ ರಚನೆಯವರೆಗೆ ಬೆಳೆದುಬಂದಿತು. ಆದರೆ, ಬಿಜೆಪಿಯ ಒಡೆದ ಆಳುವ ನೀತಿಯಿಂದಾಗಿ, ಹೋರಾಟ-ರಾಜಕೀಯ-ಆಡಳಿತದ ಈ ಇಬ್ಬರೂ ಪರಸ್ಪರ ಎದುರಾಳಿಗಳಾಗಿದ್ದಾರೆ. ಈಗ, ಸುವೇಂದು ಉತ್ಸಾಹಿಯಾಗಿದ್ದರೆ, ಮಮತಾ ಈಗಲೂ ಹೋರಾಟಗಾರ್ತಿಯಾಗಿ ಮುಂದುವರೆದಿದ್ದಾರೆ. ಮುಖ್ಯಮಂತ್ರಿಯಾಗಿ ಸರ್ಕಾರವನ್ನು ಮಾತ್ರವಲ್ಲದೆ, ಹೋರಾಟದಲ್ಲಿಯೂ ಮುಂಚೂಣಿಯಲ್ಲಿ ನಿಂತು ಬಂಗಾಳವನ್ನು ಮುನ್ನಡೆಸುತ್ತಿದ್ದಾರೆ.

ಮಮತಾ-ಸುವೇಂದು ಸ್ನೇಹ-ಒಡಕು-ಕಾದಾಟ-ಬದ್ಧ ವೈರತ್ವ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅದು 2006. ಆ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಸಿಪಿಐಎಂ ಮೈತ್ರಿಕೂಟವು 294 ಸದಸ್ಯ ಬಲದ ವಿಧಾನಸಭೆಯಲ್ಲಿ 235 ಸ್ಥಾನಗಳನ್ನು ಗೆದ್ದಿತ್ತು. ಬಂಗಾಳದಲ್ಲಿ ಸತತ 7ನೇ ಬಾರಿಗೆ ಅಧಿಕಾರಕ್ಕೇರಿತ್ತು. ಆಗ ದಿ. ಬುದ್ಧದೇವ ಭಟ್ಟಾಚಾರ್ಯ ಮುಖ್ಯಮಂತ್ರಿಯಾಗಿದ್ದರು. ತೃಣಮೂಲ ಕೇವಲ 30 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿತ್ತು. ಆ ಸಮಯದಲ್ಲಿ, ಮುಂದಿನ ಚುನಾವಣೆಯಲ್ಲಿ (2011) ಎಡಪಕ್ಷಗಳು ಸೋಲುತ್ತವೆ ಎಂದು ಯಾರಾದರೂ ಹೇಳಿದರೆ, ಬಂಗಾಳಿಗರು ನಗುತ್ತಿದ್ದ ಕಾಲವದು.

ಆದರೆ, ಕೋಲ್ಕತ್ತಾದಿಂದ ಸುಮಾರು 130 ಕಿ.ಮೀ ದೂರದಲ್ಲಿ ಹೊತ್ತಿಕೊಂಡ ಪ್ರತಿಭಟನೆಯ ಕಿಚ್ಚು, ಇಡೀ ಬಂಗಾಳದ ರಾಜಕೀಯ ಚಹರೆಯನ್ನೇ ಬದಲಿಸಿತು. ಈ ಆಂದೋಲನವೇ ಎಡಪಕ್ಷಗಳ ಪತನಕ್ಕೂ ಕಾರಣವಾಯಿತು.

ಬಂಗಾಳಕ್ಕೆ ಹೆಚ್ಚಿನ ಕೈಗಾರಿಕೆಗಳನ್ನು ತರಲು ನಿರ್ಧರಿಸಿದ್ದ ಬುದ್ಧದೇವ ಭಟ್ಟಾಚಾರ್ಯ ನೇತೃತ್ವದ ಸರ್ಕಾರವು ನಂದಿಗ್ರಾಮ ಪ್ರದೇಶವನ್ನು ‘ಕೆಮಿಕಲ್ ಹಬ್’ ನಿರ್ಮಾಣಕ್ಕೆ ಯೋಜಿಸಿತ್ತು. ಆದರೆ, ಭೂಸ್ವಾಧೀನದ ವಿರುದ್ಧ ಸ್ಥಳೀಯ ರೈತರು ಪ್ರತಿಭಟನೆ ನಡೆಸಿದರು. ‘ಭೂಸ್ವಾಧೀನ ಪ್ರತಿರೋಧ ಸಮಿತಿ’ ಎಂಬ ವೇದಿಕೆ ರಚನೆಯಾಯಿತು. ಈ ಸಮತಿಯಲ್ಲಿ ತೀವ್ರಗಾಮಿ ಎಡ ಸಂಘಟನೆಗಳು, ಬಿಜೆಪಿ ಹಾಗೂ ಟಿಎಂಸಿ ಬೆಂಬಲಿತ ಗುಂಪುಗಳು ಒಗ್ಗೂಡಿದವು. ಮಾಜಿ ಕೇಂದ್ರ ಸಚಿವ ಮತ್ತು ಸುವೇಂದು ಅಧಿಕಾರಿಯವರ ತಂದೆ ಶಿಶಿರ್ ಅಧಿಕಾರಿ ಈ ಸಮಿತಿಯ ಸಂಚಾಲಕರಾಗಿದ್ದರು. ಪ್ರತಿಭಟನೆಗಳು ತೀವ್ರಗೊಂಡವು. ಪ್ರತಿಭಟನಾಕಾರರ ವಿರುದ್ಧ 2007ರ ಮಾರ್ಚ್ 14 ರಂದು ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ 14 ಪ್ರತಿಭಟನಾನಿರತ ರೈತರು ಸಾವನ್ನಪ್ಪಿದರು. ಇದು ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಯಿತು.

ಈ ಹೋರಾಟಕ್ಕೆ ಮಮತಾ ಬ್ಯಾನರ್ಜಿ ಮುಂದಾಳತ್ವ ನೀಡಿದರು. ಹೋರಾಟದ ಅಲೆಯು ಮಮತಾಗೆ ರಾಜಕೀಯ ಬಲ ನೀಡಿತು. ಆಗ ಅವರ ಪಕ್ಕದಲ್ಲೇ 37 ವರ್ಷದ ಮೊದಲ ಬಾರಿಯ ಶಾಸಕ ಸುವೇಂದು ಅಧಿಕಾರಿ ನಿಂತಿದ್ದರು. 2011ರ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ 184 ಸ್ಥಾನಗಳನ್ನು ಗೆದ್ದು, ಎಡಪಕ್ಷಗಳ 34 ವರ್ಷಗಳ ಆಡಳಿತವನ್ನು ಕೊನೆಗಾಣಿಸಿತು. ಹೋರಾಟದ ಹಾದಿಯಲ್ಲಿ ತನ್ನ ಬೆನ್ನಿಗೆ ನಿಂತ ಸುವೇಂದು ಅಧಿಕಾರಿಯಂತಹ ನಿಷ್ಠರನ್ನು ಮಮತಾ ಬ್ಯಾನರ್ಜಿ ಮರೆಯಲಿಲ್ಲ. ಪಕ್ಷ ಸಂಘಟನೆಯಲ್ಲಿ ಪಶ್ಚಿಮ ಮೇದಿನಿಪುರ, ಪುರುಲಿಯಾ ಮತ್ತು ಬಂಕುರಾ ಜಿಲ್ಲೆಗಳ ಜವಾಬ್ದಾರಿಯನ್ನು ಸುವೇಂದು ಅವರ ಹೆಗಲಿಗೆ ವಹಿಸಿದರು.

ಕಾಂಗ್ರೆಸ್‌ ಜೊತೆಗೆ 1995ರಲ್ಲಿ ರಾಜಕೀಯ ಆರಂಭಿಸಿದ್ದ ಸುವೇಂದು ಅಧಿಕಾರಿ, 1998ರಲ್ಲಿ ಟಿಎಂಸಿ ಸೇರಿದ್ದರು. 2006ರ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಆದಾಗ್ಯೂ, 2009ರಲ್ಲಿ ಶಾಸಕತ್ವ ತೊರೆದು, ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ತಮ್ಲುಕ್ ಕ್ಷೇತ್ರದ ಸಂಸರಾಗಿ ಗೆದಿದ್ದರು. 2014ರ ಲೋಕಸಭಾ ಚುನಾವಣೆಯಲ್ಲೂ ಗೆದ್ದರು. ಆದರೆ, 2016ರ ವಿಧಾನಸಭಾ ಚುನಾವಣೆಯಲ್ಲಿ ಸಂಸದ ಸ್ಥಾನ ತೊರೆದು, ನಂದಿಗ್ರಾಮದಲ್ಲಿ ಸ್ಪರ್ಧಿಸಿ ಸುವೇಂದು ಗೆದ್ದರು. ಮಮತಾ ಸರ್ಕಾರದಲ್ಲಿ ಸಾರಿಗೆ ಸಚಿವರಾದರು. ಮಾತ್ರವಲ್ಲ, ಟಿಎಂಸಿಯಲ್ಲಿ ಮಮತಾ ನಂತರದ ಎರಡನೇ ಶಕ್ತಿಶಾಲಿ ನಾಯಕನೆಂದೂ ಪರಿಗಣಿಸಲ್ಪಟ್ಟಿದ್ದರು.

ಆದರೆ, ಎಲ್ಲವೂ ಚೆನ್ನಾಗಿಯೇ ಇದೆ ಎನ್ನುವಾಗಲೇ, ಟಿಎಂಸಿಗೆ ಆಘಾತ ಬಂದೊದಗಿತು. ಸಚಿವರಾಗಿ ನಾಲ್ಕು ವರ್ಷಗಳ ನಂತರ, ಕೋವಿಡ್ ಸಾಂಕ್ರಾಮಿಕದ ನಡುವೆಯೇ ಸುವೇಂದು ಅಧಿಕಾರಿ ಶಾಸಕ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ, ಟಿಎಂಸಿಯನ್ನೂ ತೊರೆದರು. ಪಕ್ಷದೊಳಗೆ ಮಮತಾರ ಸೋದರಳಿಯ ಅಭಿಷೇಕ್ ಬ್ಯಾನರ್ಜಿಗೆ ದೊರೆಯುತ್ತಿದ್ದ ಪ್ರಾಮುಖ್ಯತೆ ಮತ್ತು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಹಸ್ತಕ್ಷೇಪ ಸುವೇಂದು ಅವರ ಅಸಮಾಧಾನಕ್ಕೆ ಕಾರಣವಾಗಿತ್ತು ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಅವರನ್ನು ಟಿಎಂಸಿಯಿಂದ ಬಿಜೆಪಿಗೆ ಅಪಹರಿಸಿತು ಎಂಬ ಆರೋಪಗಳೂ ಇವೆ.

ಈ ಲೇಖನ ಓದಿದ್ದೀರಾ?: ಪಶ್ಚಿಮ ಬಂಗಾಳ | ರಾಜಕೀಯ ಷಡ್ಯಂತ್ರವಿಲ್ಲದೆ ಗೆಲ್ಲುವುದೇ ಬಿಜೆಪಿ!?

ದಶಕಗಳ ಕಾಲ ಬಂಗಾಳದಲ್ಲಿ ಬಲವಾದ ಶಕ್ತಿ ಪಡೆಯುವಲ್ಲಿ ವಿಫಲವಾಗಿದ್ದ ಬಿಜೆಪಿಗೆ ವರದಾನವಾಗಿ ಸುವೇಂದು ಕಂಡರು. 2020ರ ಡಿಸೆಂಬರ್ 19ರಂದು ಅಮಿತ್ ಶಾ ಸಮ್ಮುಖದಲ್ಲಿ ಸುವೇಂದು ಬಿಜೆಪಿ ಸೇರಿದರು. “10 ವರ್ಷಗಳ ಕಾಲ ಪಕ್ಷದಿಂದ ಲಾಭ ಪಡೆದು ಈಗ ಬೇರೆ ಪಕ್ಷಗಳೊಂದಿಗೆ ಕೈಜೋಡಿಸುವ ಇಂತಹ ಜನರನ್ನು ನಾನು ಸಹಿಸುವುದಿಲ್ಲ” ಎಂದು ಮಮತಾ ಕಿಡಿಕಾರಿದರು. 2021ರ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಸುವೇಂದು ವಿರುದ್ಧ ಕಣಕ್ಕಿಳಿದರು. ಆದರೆ, ಆ ಭಾಗವನ್ನು ತಾವೇ ಸುವೇಂದು ಅವರ ಚಕ್ರಾಧಿಪತ್ಯಕ್ಕೆ ನೀಡಿದ್ದ ಮಮತಾ, ಅಲ್ಲಿ ಜಯಶಾಲಿಯಾಗಲು ಸಾಧ್ಯವಾಗಲಿಲ್ಲ. 2,000ಕ್ಕಿಂತ ಕಡಿಮೆ ಮತಗಳ ಅಂತದಲ್ಲಿ ಅವರು ಸೋತರು. ಆದಾಗ್ಯು, ಈ ಫಲಿತಾಂಶದ ವಿರುದ್ಧ ನ್ಯಾಯಾಲಯದಲ್ಲಿ ಮಮತಾ ಪ್ರಶ್ನಿಸಿದ್ದು, ಇನ್ನೂ ಕಾನೂನು ಸಮರ ನಡೆಯುತ್ತಲೇ ಇದೆ.

ಟಿಎಂಸಿ ತೊರೆದಾಗಿನಿಂದ ಸುವೇಂದು ಅಧಿಕಾರಿ ಮತ್ತು ಮಮತಾ ಬ್ಯಾನರ್ಜಿ ಪರಸ್ಪರರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಮಮತಾ ಅಲ್ಪಸಂಖ್ಯಾತರ ಓಲೈಕೆ ಮತ್ತು ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಸುವೇಂದು ಅಧಿಕಾರಿ ಆರೋಪಿಸಿದರೆ, ಸುವೇಂದು ಕೋಮು ರಾಜಕೀಯ ಮಾಡುತ್ತಿದ್ದಾರೆ ಮತ್ತು ಬಂಗಾಳಕ್ಕೆ ‘ಹೊರಗಿನ’ ಶಕ್ತಿ ತಂದಿದ್ದಾರೆ ಎಂದು ಮಮತಾ ಹೀಯಾಳಿಸಿದ್ದಾರೆ.

ಈಗ, ನಂದಿಗ್ರಾಮ ಮತ್ತು ಭವಾನಿಪುರ ಎರಡೂ ಕ್ಷೇತ್ರಗಳಲ್ಲಿ ಸುವೇಂದು ಅಧಿಕಾರಿಯನ್ನು ಬಿಜೆಪಿ ಕಣಕ್ಕಿಸಿದೆ. ಬಿಜೆಪಿ ಅಧಿಕೃತವಾಗಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದಿದ್ದರೂ, ಎರಡು ಕ್ಷೇತ್ರಗಳ ಟಿಕೆಟ್‌ ನೀಡಿರುವುದು ಸುವೇಂದು ಅವರ ನಾಯಕತ್ವಕ್ಕೆ ನೀಡಿದ ಮಾನ್ಯತೆಯೆಂದು ಹೇಳಲಾಗುತ್ತಿದೆ. ಭವಾನಿಪುರದಲ್ಲಿ ಸುವೇಂದು ಸ್ಪರ್ಧೆಯು ಮಮತಾರನ್ನು ಕ್ಷೇತ್ರದಲ್ಲಿಯೇ ಕಟ್ಟಿಹಾಕುವ ತಂತ್ರವೆಂದು ಹೇಳಲಾಗುತ್ತಿದೆ.

ದಶಕಗಳಿಂದ ದಕ್ಷಿಣ ಕೋಲ್ಕತ್ತಾವನ್ನು (ಭವಾನಿಪುರ) ಆಳುತ್ತಿರುವ ಮಮತಾ ಬ್ಯಾನರ್ಜಿಗೆ ಇದು ನೇರ ಸವಾಲಾಗಿದೆ. ಮುಖ್ಯಮಂತ್ರಿಯಾಗುವ ಮೊದಲು ಅವರು ದಕ್ಷಿಣ ಕೋಲ್ಕತ್ತಾ ಲೋಕಸಭಾ ಕ್ಷೇತ್ರವನ್ನು ಸತತ ಆರು ಬಾರಿ ಗೆದ್ದಿದ್ದರು. ಈ ಬಾರಿ ಭವಾನಿಪುರದಲ್ಲಿ ಸುವೇಂದು ಸ್ಪರ್ಧಿಸುತ್ತಿರುವುದು ಈ ಚುನಾವಣೆಗೆ ರೋಚಕತೆಯನ್ನು ತಂದುಕೊಟ್ಟಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪುದುಚೆರಿ ಚುನಾವಣೆ | ‘ಇಂಡಿಯಾ’ ಗೊಂದಲ ನಿವಾರಣೆ: ಕಾಂಗ್ರೆಸ್ 16, ಡಿಎಂಕೆ 14 ಕ್ಷೇತ್ರಗಳಲ್ಲಿ ಸ್ಪರ್ಧೆ

ಪುದುಚೆರಿಯ 'ಇಂಡಿಯಾ' ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಕಾಂಗ್ರೆಸ್‌ ಪಕ್ಷಗಳ...

ತಮಿಳುನಾಡು ಚುನಾವಣೆ | ಎಐಎಡಿಎಂಕೆ 178, ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧೆ

ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಲೇ ಬೇಕೆಂದು ಪಣ...

ಮಧ್ಯಪ್ರಾಚ್ಯ ಸಂಘರ್ಷ | ಕದನ ವಿರಾಮ ಎಂದ ಟ್ರಂಪ್; ಮಾತುಕತೆ ನಡೆದಿಲ್ಲವೆಂದ ಇರಾನ್

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಾನಾ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...