ಬೆಂಗಳೂರು – ಮೈಸೂರು ಕಾರಿಡಾರ್ | ಸರ್ಕಾರಕ್ಕೆ ಯೋಜನೆ ರದ್ದುಗೊಳಿಸಲು ಸೂಚಿಸಿದ ಹೈಕೋರ್ಟ್

Date:

ಯೋಜನೆ ರೂಪುಗೊಂಡು 25 ವರ್ಷಗಳಾದರೂ ಯೋಜನೆ ಅನುಷ್ಠಾನಗೊಂಡಿಲ್ಲ. ಆದರೆ, ರಿಂಗ್ ರೋಡ್ ನಿರ್ಮಾಣ ಮಾಡಿ, ದುಬಾರಿ ಟೋಲ್ ಮೂಲಕ ನೈಸ್ ಕಂಪನಿ ಭಾರೀ ಲಾಭ ಮಾಡಿಕೊಳ್ಳುತ್ತಿದೆ. ಬೆಂಗಳೂರು-ಮೈಸೂರು ನಡುವೆ ಎಕ್ಸ್ ಪ್ರೆಸ್ ವೇ ನಿರ್ಮಾಣಗೊಂಡು, ಕಾರ್ಯಾಚರಣೆಯಲ್ಲಿದೆ. ಈ ಸಮಯದಲ್ಲಿ, ಯೋಜನೆಯನ್ನು ಪುನರ್ ಪರಿಶೀಲಿಸಲು ಹೈಕೋರ್ಟ್ ನೀಡಿರುವ ಸಲಹೆ ಮಹತ್ವದಾಗಿದೆ.

ಸುಮಾರು ಮೂರು ದಶಕಗಳಿಂದ ವಿವಾದ ಮತ್ತು ಚರ್ಚೆಯಲ್ಲಿರುವ ‘ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್’ (BMIC) ಅಥವಾ ನೈಸ್ (NICE) ಯೋಜನೆಗೆ ಇತಿಶ್ರೀ ಹಾಡಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. 1995ರಲ್ಲಿ ರೂಪುಗೊಂಡ ಯೋಜನೆಯ ಉದ್ದೇಶಿತ 111 ಕಿಲೋಮೀಟರ್ ಎಕ್ಸ್‌ಪ್ರೆಸ್‌ ವೇ ನಿರ್ಮಾಣದಲ್ಲಿ, ಕೇವಲ 1 ಕಿಲೋಮೀಟರ್ ಮಾತ್ರವೇ ಈವರೆಗೆ ನಿರ್ಮಾಣವಾಗಿದೆ. ಈ ಅಸಲಿ ಸತ್ಯ ಹೊರಬಿದ್ದ ಮೇಲೆ ಯೋಜನೆಯ ಕುರಿತು ಕರ್ನಾಟಕ ಹೈಕೋರ್ಟ್ ಅತ್ಯಂತ ಮಹತ್ವದ ತೀರ್ಪು ನೀಡಿದೆ.

ಸುಮಾರು 25-30 ವರ್ಷಗಳಿಂದ ಯಾವುದೇ ಪ್ರಗತಿ ಕಾಣದ, 111 ಕಿ.ಮೀ ನೈಸ್ ರಸ್ತೆಯ ಪೈಕಿ ಕೇವಲ 1 ಕಿಲೋಮೀಟರ್ ಮಾತ್ರ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಲಯ, ಈ ಯೋಜನೆಯನ್ನು ರದ್ದುಗೊಳಿಸುವ ಕುರಿತು ಪರಿಶೀಲಿಸುವಂತೆ ಮತ್ತು ಹೊಸ ಯೋಜನೆಯನ್ನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ವೆಂಕಟೇಶ್ ನಾಯ್ಕ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಆದೇಶವನ್ನು ಹೊರಡಿಸಿದೆ.

BMIC ಯೋಜನೆ ಎಂದರೇನು?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

BMIC – ಬೆಂಗಳೂರು–ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆ ಎಂಬುದು ಬೆಂಗಳೂರು ಮತ್ತು ಮೈಸೂರು ನಡುವಿನ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗಾಗಿ ರೂಪಿಸಲಾದ ಮಹತ್ವಾಕಾಂಕ್ಷಿ ಯೋಜನೆ. ಈ ಯೋಜನೆಯನ್ನು 1995ರಲ್ಲಿ ಎಚ್.ಡಿ. ದೇವೇಗೌಡ ನೇತೃತ್ವದ ರಾಜ್ಯ ಸರ್ಕಾರ ರೂಪಿಸಿತ್ತು. ಯೋಜನೆಯಡಿ ಬೆಂಗಳೂರು ಕೇಂದ್ರಿತ ಒತ್ತಡವನ್ನು ಕಡಿಮೆ ಮಾಡಲು ಬೆಂಗಳೂರು-ಮೈಸೂರು ನಡುವೆ ಮೂಲಸೌಕರ್ಯ ಕಾರಿಡಾರ್ ರೂಪಿಸಿ, ಉಭಯ ನಗರಗಳ ನಡುವೆ ಸ್ಯಾಟಲೈಟ್ ಟೌನ್‌ಶಿಪ್ ನಿರ್ಮಾಣ ಮಾಡುವುದಾಗಿ ಸರ್ಕಾರ ಹೇಳಿಕೊಂಡಿತ್ತು. ಸರ್ಕಾರವು ಭಾರತೀಯ ಹಾಗೂ ಅಮೆರಿಕನ್ ಕಂಪನಿಗಳ ಒಕ್ಕೂಟದೊಂದಿಗೆ ಒಪ್ಪಂದ ಮಾಡಿಕೊಂಡು, ಯೋಜನೆ ಅನುಷ್ಠಾನಕ್ಕಾಗಿ ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (NICE) ಎಂಬ ವಿಶೇಷ ಉದ್ದೇಶಿತ ಸಂಸ್ಥೆಯನ್ನು ಸ್ಥಾಪಿಸಲಾಗಿತ್ತು.

nice

ಯೋಜನೆಯಡಿಯಲ್ಲಿ ಬೆಂಗಳೂರು–ಮೈಸೂರು ನಡುವೆ 111 ಕಿಲೋಮೀಟರ್ ಉದ್ದದ ನಾಲ್ಕು ಲೇನ್ ಎಕ್ಸ್‌ಪ್ರೆಸ್ ವೇ ನಿರ್ಮಿಸುವುದು, ಅಗತ್ಯವಿದ್ದರೆ ಆರು ಲೇನ್‌ಗಳಿಗೆ ವಿಸ್ತರಿಸುವ ವ್ಯವಸ್ಥೆ ಇತ್ತು. ಎಕ್ಸ್‌ಪ್ರೆಸ್ ವೇ ಹಾಗೂ ರಿಂಗ್ ರೋಡ್ ಜೊತೆಗೆ, ತಲಾ ಒಂದು ಲಕ್ಷ ಜನಸಂಖ್ಯೆ ಹೊಂದುವ ಐದು ಉಪನಗರ ಪಟ್ಟಣಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿತ್ತು.

ಜೊತೆಗೆ, ಕೈಗಾರಿಕಾ ಘಟಕಗಳು, ವಿದ್ಯುತ್ ಸ್ಥಾವರಗಳು ಮತ್ತು ನೀರು ಸಂಸ್ಕರಣಾ ಘಟಕಗಳಂತಹ ಬೃಹತ್ ಸೌಲಭ್ಯಗಳನ್ನು ಒಳಗೊಂಡ ಸಂಯೋಜಿತ ಮೂಲಸೌಕರ್ಯ ಕಾರಿಡಾರ್ ನಿರ್ಮಿಸುವ ಗುರಿ ಹೊಂದಲಾಗಿತ್ತು.

ಆರಂಭದಲ್ಲಿ ಯೋಜನೆ ಅನುಷ್ಠಾನ ಮತ್ತು ಕಾಮಗಾರಿ ಪೂರ್ಣಗೊಳಿಸಲು 10 ವರ್ಷ ಅವಧಿಯ ಗಡುವು ನಿಗದಿ ಮಾಡಲಾಗಿತ್ತು. ಬಳಿಕ, 30 ವರ್ಷಗಳಿಗೆ ವಿಸ್ತರಿಸಲಾಯಿತು. ಜೊತೆಗೆ, 40 ವರ್ಷಗಳ ಕಾಲ ನಿರ್ವಹಣೆ ಮತ್ತು ಟೋಲ್ ಸಂಗ್ರಹಕ್ಕೆ ನೈಸ್ ಕಂಪನಿಗೆ ಹಕ್ಕು ನೀಡಲಾಗಿತ್ತು.

ಅಂದಹಾಗೆ, ಪ್ರಸ್ತುತ ಕಾರ್ಯಾಚರಣೆಯಲ್ಲಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಯೋಜನೆಯೇ ಬೇರೆ, ವಿವಾದದಲ್ಲಿರುವ ಬೆಂಗಳೂರು–ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಯೇ ಬೇರೆ. ಈ ಎರಡರಲ್ಲಿ ಒಂದಕ್ಕೊಂದು ಸಂಬಂಧವಿಲ್ಲ. ಇವು ಪರಸ್ಪರ ವಿಭಿನ್ನ ಯೋಜನೆಗಳು.

ಬೆಂಗಳೂರು–ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಯಡಿ ನೈಸ್ ಕಂಪನಿಗೆ ಬರೋಬ್ಬರಿ 20,000ಕ್ಕೂ ಅಧಿಕ ಎಕರೆಗಳಷ್ಟು ಭೂಮಿ ಬೇಕಿತ್ತು. ಈ ಪ್ರಮಾಣದ ಭೂಮಿಯನ್ನು ಭೂಸ್ವಾಧೀನ ಮಾಡಿಕೊಳ್ಳಬೇಕಿತ್ತು.

ಭೂಸ್ವಾಧೀನಕ್ಕಾಗಿ ಬೆಂಗಳೂರಿನಿಂದ ಮೈಸೂರಿನವರೆಗೆ ಗುರುತ ಮಾಡಲಾದ ಭೂಮಿಯಲ್ಲಿ ಬಹುಪಾಲು ಭೂಮಿಯು ರೈತರ ಫಲವತ್ತಾದ ಕೃಷಿ ಭೂಮಿಯೇ ಆಗಿತ್ತು. ಅನ್ನ ಬೆಳೆವ ಕೃಷಿ ಭೂಮಿಯಲ್ಲಿ ಯೋಜನೆಗಾಗಿ ಬಿಟ್ಟುಕೊಡಲು ಹಲವಾರು ರೈತರು ನಿರಾಕರಿಸಿದರು. ಯೋಜನೆಯನ್ನು ಖಂಡಿಸಿ ಪ್ರತಿಭಟನೆಗಿಳಿದರು. ಭೂಸ್ವಾಧೀನದ ವಿರುದ್ಧ ನ್ಯಾಯಾಲಯಗಳ ಮೊರೆ ಹೋದರು. ಹಾಗೇಯೇ, ಇನ್ನೂ ಕೆಲವು ರೈತರು ಸೂಕ್ತ ಪರಿಹಾರ ನಿಗದಿಯಾಗಿಲ್ಲ. ತೀರಾ ಕಡಿಮೆ ಮೊತ್ತದ ಪರಿಹಾರ ನೀಡಲಾಗುತ್ತಿದೆ ಮತ್ತು ಪರಿಹಾರವೂ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದರು. ನೈಸ್ ಕಂಪನಿ ವಿರುದ್ಧ ಸುಮಾರು 374ಕ್ಕೂ ಹೆಚ್ಚು ಭೂವ್ಯಾಜ್ಯ ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗಿವೆ.

ಕೆಲವು ಪ್ರಕರಣಗಳಲ್ಲಿ ಈಗಾಗಲೇ ತೀರ್ಪು ನೀಡಿರುವ ಕರ್ನಾಟಕ ಹೈಕೋರ್ಟ್, 2025ರ ಜುಲೈನಲ್ಲಿ ಪರಿಹಾರ ವಿತರಣೆಯಲ್ಲಿನ ವಿಳಂಬವನ್ನು ಗಮನಿಸಿ, 300ಕ್ಕೂ ಹೆಚ್ಚು ಎಕರೆಗೆ ಸಂಬಂಧಿಸಿದ ಭೂಸ್ವಾಧೀನದ ಅಧಿಸೂಚನೆಯನ್ನು ರದ್ದಗೊಳಿಸಿದೆ.

ಇದೀಗ, 2026ರ ಜನವರಿಯಲ್ಲಿ ಯೋಜನೆಯನ್ನು ‘ಶೂನ್ಯ ಪ್ರಗತಿ’ ಎಂದು ಟೀಕಿಸಿರುವ ಹೈಕೋರ್ಟ್, ಯೋಜನೆಯನ್ನು ರದ್ದುಗೊಳಿಸಲು ಪರಿಶೀಲನೆ ನಡೆಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಆದರೆ, 2006ರಲ್ಲಿ ಸುಪ್ರೀಂ ಕೋರ್ಟ್, ‘ಯೋಜನೆಯನ್ನು ಅನುಷ್ಠಾನಗೊಳಿಸಲೇಬೇಕು’ ಎಂದು ನೀಡಿದ್ದ ತೀರ್ಪನ್ನು ಉಲ್ಲೇಖಿಸಿರುವ ಸರ್ಕಾರ, ಯೋಜನೆಯನ್ನು ಸಂಪೂರ್ಣ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದೆ.

ಈ ಸುದ್ದಿ ಓದಿದ್ದೀರಾ? ಮುಂಬೈ ಗೆದ್ದ ಬಿಜೆಪಿ: ಕಾಂಗ್ರೆಸ್–ಶಿವಸೇನೆ(ಯುಬಿಟಿ) ಪ್ರತ್ಯೇಕ ಸ್ಪರ್ಧೆ ಕಾರಣವಾಯಿತೇ?

ಇತ್ತೀಚೆಗೆ ಭೂಸ್ವಾಧೀನ ಪರಿಹಾರಕ್ಕೆ ಸಂಬಂಧಿಸಿದ ವಿವಾದವೊಂದನ್ನು ವಿಚಾರಣೆ ಮಾಡುವಾಗ ಕರ್ನಾಟಕ ಹೈಕೋರ್ಟ್ BMIC ಅಥವಾ ನೈಸ್ ಯೋಜನೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಯೋಜನೆ ಬಹುತೇಕ ‘ಕಾಗದಗಳಲ್ಲೇ ಉಳಿದಿದೆ’ ಜತೆಗೆ, ವ್ಯಾಪಕ ನ್ಯಾಯಾಲಯ ಪ್ರಕರಣಗಳಿಗೆ ಕಾರಣವಾಗಿದೆ ಎಂದು ಹೇಳಿದೆ.

“30 ವರ್ಷಗಳ ಹಿಂದೆ ರೂಪಿಸಲಾದ ಈ ಯೋಜನೆ ಕೇವಲ ಕಾಗದದ ಮೇಲೆ ಉಳಿದಿದೆ. ಭ್ರಷ್ಟಾಚಾರ, ರಾಜಕೀಯ ಹಸ್ತಕ್ಷೇಪ ಹಾಗೂ ಅಧಿಕಾರಶಾಹಿ ಅಡೆತಡೆಗಳಿಂದಾಗಿ ಯೋಜನೆ ಹಳ್ಳ ಹಿಡಿದಿದೆ. ಯೋಜನೆಯ ಮೂಲ ಉದ್ದೇಶವಾದ 111 ಕಿ.ಮೀ ಎಕ್ಸ್‌ಪ್ರೆಸ್ ವೇ ನಿರ್ಮಾಣದಲ್ಲಿ ಕೇವಲ 1 ಕಿ.ಮೀ ಮಾತ್ರ ಪೂರ್ಣಗೊಂಡಿರುವುದು ದುರದೃಷ್ಟಕರ. ಆದರೆ, ನೈಸ್ ಕಂಪನಿಯು 47 ಕಿಲೋಮೀಟರ್ ರಿಂಗ್ ರಸ್ತೆಯನ್ನು ನಿರ್ಮಿಸಿ, ಅದರಿಂದ ಟೋಲ್ ಸಂಗ್ರಹಿಸಿ ಲಾಭ ಪಡೆಯುತ್ತಿದೆ. ಆದರೆ ನಗರ ಸಂಚಾರ ದಟ್ಟಣೆ ನಿವಾರಣೆ ಹಾಗೂ ಹೊಸ ಸ್ಯಾಟಲೈಟ್ ಪಟ್ಟಣಗಳ ಅಭಿವೃದ್ಧಿಯಂತಹ ಮಹತ್ವಾಕಾಂಕ್ಷಿ ಸಾರ್ವಜನಿಕ ಹಿತಾಸಕ್ತಿ ಯೋಜನೆಗಳು ಕೇವಲ ಕಾಗದಗಳಲ್ಲೇ ಉಳಿದಿದೆ” ಎಂದು ನ್ಯಾಯಾಲಯ ಹೇಳಿದೆ.

ನಗರವು ಈ ಮಧ್ಯಂತರ ವರ್ಷಗಳಲ್ಲಿ ಎದುರಿಸಿದ ಸಂಚಾರ ದಟ್ಟಣೆ ಹಾಗೂ ಯೋಜನೆ ದೀರ್ಘಕಾಲ ಸ್ಥಗಿತಗೊಂಡಿರುವುದನ್ನು ಪರಿಗಣಿಸಿ, ಹೈಕೋರ್ಟ್ ಈ ಯೋಜನೆಯನ್ನು ರದ್ದುಪಡಿಸಿ ಹೊಸದಾಗಿ ಯೋಜನೆ ರೂಪಿಸುವಂತೆ ಸಲಹೆ ನೀಡಿದೆ.

ಹೌದು, ಬೆಂಗಳೂರಿನ ಜನಸಂಖ್ಯೆ ಈಗ 1.4 ಕೋಟಿ ದಾಟಿದೆ. ಸಂಚಾರ ದಟ್ಟಣೆ ಮತ್ತು ಮೂಲಸೌಕರ್ಯಗಳ ಮೇಲೆ ತೀವ್ರ ಒತ್ತಡವಿದೆ. ಹಳೆಯ ಚೌಕಟ್ಟನ್ನು ಇಟ್ಟುಕೊಂಡು ಕಾಲಹರಣ ಮಾಡುವ ಬದಲು, ನಗರದ ಹಿತದೃಷ್ಟಿಯಿಂದ, ಪರಿಸರ ಮತ್ತು ಭವಿಷ್ಯದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಹೊಸ ಯೋಜನೆಯನ್ನು ರೂಪಿಸುವುದು ಸೂಕ್ತ ಎಂದು ಹೈಕೋರ್ಟ್ ಸಲಹೆ ನೀಡಿದೆ.

nice1

BMICಗೆ ಸಂಬಂಧಿಸಿದಂತೆ ಸುಮಾರು 2,000 ಪ್ರಕರಣಗಳು ಹೈಕೋರ್ಟ್‌ನಲ್ಲಿ ದಾಖಲಾಗಿದ್ದು, ಅವುಗಳಲ್ಲಿ ಆರು ಪ್ರಕರಣಗಳು ಸುಪ್ರೀಂ ಕೋರ್ಟ್‌ವರೆಗೂ ಹೋಗಿವೆ ಎಂದು ನ್ಯಾಯಾಲಯ ತಿಳಿಸಿದೆ.

ಬೆಂಗಳೂರು – ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಗಾಗಿ 17 ವರ್ಷಗಳ ಹಿಂದೆ ತಲಘಟ್ಟಪುರದಲ್ಲಿನ ಒಂದು ಎಕರೆ ಜಮೀನನ್ನು ಸ್ವಾಧಿನಪಡಿಸಿಕೊಳ್ಳಲು ಗುರುತಿಸಲಾಗಿತ್ತು. 17 ವರ್ಷ ಕಳೆದರೂ ಯಾವುದೇ ಭೂಸ್ವಾಧಿನ ಪ್ರಕ್ರಿಯೆ ನಡೆದಿಲ್ಲ. ಪರಿಹಾರವೂ ಕೂಡ ನೀಡಿರಲಿಲ್ಲ. ಈ ಹಿನ್ನೆಲೆ, ಈ ಹಿಂದೆ ನ್ಯಾಯಾಲಯವೂ ದೀರ್ಘಕಾಲದ ವಿಳಂಬ ಎಂದು ಭೂಸ್ವಾಧೀನವನ್ನು ರದ್ದುಪಡಿಸಿತ್ತು.

BMIC ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ಹಿಂದೆಯೂ ಪ್ರಕರಣವನ್ನು ವಿಚಾರಿಸಿತ್ತು. ಈ ಆದೇಶವನ್ನು ಹೈಕೋರ್ಟ್ ಕೂಡ ತನ್ನ ಇತ್ತೀಚಿನ ತೀರ್ಪಿನಲ್ಲಿ ಪರಿಶೀಲಿಸಿದೆ.

ಸುಪ್ರೀಂ ಕೋರ್ಟ್, ಭೂಸ್ವಾಧೀನಗೊಂಡ ಭೂಮಿಯನ್ನು ಕೇವಲ ಈ ಯೋಜನೆ ಜಾರಿಗೊಳಿಸಲು ಮಾತ್ರ ಬಳಸಬೇಕು ಎಂದು ಸ್ಪಷ್ಟಪಡಿಸಿತ್ತು. ಯೋಜನಾ ಪ್ರವರ್ತಕರು ಸಂಬಂಧಿತ ಫ್ರೇಮ್ ವರ್ಕ್ ಒಪ್ಪಂದದಲ್ಲಿ ಉಲ್ಲೇಖಿಸದ ರೀತಿಯಲ್ಲಿ ಭೂಮಿಯನ್ನು ಏಕಪಕ್ಷೀಯವಾಗಿ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ ಎಂದೂ ತಿಳಿಸಿತ್ತು. ಟೌನ್ ಶಿಪ್ ನಿರ್ಮಾಣವೂ ಆ ಒಪ್ಪಂದಕ್ಕೆ ಅನುಗುಣವಾಗಿಯೇ ನಡೆಯಬೇಕು ಎಂದು ಹೇಳಿತ್ತು. ಸದ್ಯಕ್ಕೆ, ಈ ಯೋಜನೆಯನ್ನು ಹೊಸದಾಗಿ ಪ್ರಾರಂಭಿಸುವುದು ಸಾಧ್ಯವೇ ಎಂಬುದರ ಬಗ್ಗ ಸ್ಪಷ್ಟತೆ ಇಲ್ಲ.

ಇನ್ನು, ವಿಧಾನಪರಿಷತ್ತಿನ ಕಲಾಪದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್ ಅವರು, “ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ, ಯೋಜನೆಯನ್ನು ಮೂಲವಾಗಿ ಕಲ್ಪಿಸಿದಂತೆಲೇ ಜಾರಿಗೊಳಿಸಬೇಕು. ಫ್ರೇಮ್ ವರ್ಕ್ ಒಪ್ಪಂದವನ್ನು ಅಕ್ಷರಶಃ ಹಾಗೂ ಆತ್ಮಸ್ಫೂರ್ತಿಯಿಂದ ಅನುಷ್ಠಾನಗೊಳಿಸಬೇಕು” ಎಂದು ಹೇಳಿದ್ದರು.

ಒಟ್ಟಿನಲ್ಲಿ, ಬೆಂಗಳೂರು–ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗೆ ಮಹತ್ವಾಕಾಂಕ್ಷಿ ಯೋಜನೆಯೆಂದು ಹಿಂದಿನ ಸರ್ಕಾರಗಳು ಹೇಳಿದ್ದರೂ, ರೈತರ ವಿರೋಧಿ, ದೀರ್ಘಕಾಲದ ವಿಳಂಬ, ಅಸಮರ್ಪಕ ಅನುಷ್ಠಾನ, ಭೂಸ್ವಾಧೀನ ಸಮಸ್ಯೆಗಳು ಹಾಗೂ ನಿರಂತರ ನ್ಯಾಯಾಲಯ ವ್ಯಾಜ್ಯಗಳ ಕಾರಣದಿಂದ ಯೋಜನೆಯು ಕಾರ್ಯಗತಗೊಳ್ಳುವಲ್ಲಿ ವಿಫಲವಾಗಿದೆ.

ಯೋಜನೆ ರೂಪುಗೊಂಡು 25 ವರ್ಷಗಳಾದರೂ ಯೋಜನೆ ಅನುಷ್ಠಾನಗೊಂಡಿಲ್ಲ. ಆದರೆ, ರಿಂಗ್ ರೋಡ್ ನಿರ್ಮಾಣ ಮಾಡಿ, ದುಬಾರಿ ಟೋಲ್ ಮೂಲಕ ನೈಸ್ ಕಂಪನಿ ಭಾರೀ ಲಾಭ ಮಾಡಿಕೊಳ್ಳುತ್ತಿದೆ. ಜನರ ಮೇಲೆ ಮತ್ತಷ್ಟು ಸುಂಕ ಹೊರೆ ಹೇರುವ ಮೂಲಕ, ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗಿದೆ. ಈಗಾಗಲೇ, ಬೆಂಗಳೂರು-ಮೈಸೂರು ನಡುವೆ ಎಕ್ಸ್ ಪ್ರೆಸ್ ವೇ ನಿರ್ಮಾಣಗೊಂಡು, ಕಾರ್ಯಾಚರಣೆಯಲ್ಲಿದೆ. ಹೀಗಾಗಿ, ಹೊಸದಾಗಿ ಮತ್ತೊಂದು ನೈಸ್ ರಸ್ತೆಯ ಅಗತ್ಯವೂ ಇಲ್ಲ. ಆದ್ದರಿಂದ, ಯೋಜನೆಯನ್ನು ಪುನರ್ ಪರಿಶೀಲಿಸಿ ಹೊಸ ಯೋಜನೆ ರೂಪಿಸಲು ಕರ್ನಾಟಕ ಹೈಕೋರ್ಟ್ ನೀಡಿರುವ ಸಲಹೆ ಮಹತ್ವದಾಗಿದೆ. ಸರ್ಕಾರವು ನೈಸ್ ಯೋಜನೆಯನ್ನು ಕೈಬಿಟ್ಟು, ಈಗಾಗಲೇ ಇರುವ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯನ್ನು ಗಮನದಲ್ಲಿಟ್ಟುಕೊಂಡು ಸ್ಯಾಟಲೈಟ್ ಪಟ್ಟಣಗಳ ಅಭಿವೃದ್ಧಿಗೆ ಒತ್ತುಕೊಡುವುದು, ಬೆಂಗಳೂರು ಕೇಂದ್ರಿತವಾಗಿರುವ ಕೈಗಾರಿಕೆಗಳನ್ನು ಅಂತಹ ಸ್ಯಾಟಲೈಟ್ ಪಟ್ಟಣಗಳಿಗೆ ಸ್ಥಳಾಂತರಿಸುವುದು ಅಥವಾ ವಿಕೇಂದ್ರೀಕರಣಗೊಳಿಸುವುದು ಸೂಕ್ತ.

e057b508e9e1b164fadd3c3edb023f5214f4d0a6d12066a30e302f9e3b0f6f24?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...