ಬಿಡದಿ | ದೇಶದ ಮೊದಲ AI ನಗರವಾಗಲಿದೆಯೆ?

Date:

ಜಾಗತಿಕ ಮಟ್ಟದಲ್ಲಿ ಸಿಂಗಪೂರ್, ಸಿಯೋಲ್, ಬೀಜಿಂಗ್, ದುಬೈ ಹಾಗೂ ಸಾನ್ ಫ್ರಾನ್ಸಿಸ್ಕೊ ಸೇರಿದಂತೆ ಮುಂತಾದ ನಗರಗಳು ಈಗಾಗಲೇ ಎಐ ಆಧಾರಿತ ಆರ್ಥಿಕತೆ ಮತ್ತು ಜೀವನಶೈಲಿಯನ್ನು ಅಭಿವೃದ್ಧಿಪಡಿಸುತ್ತಿವೆ. 2025ರ ಗ್ಲೋಬಲ್ ಎಐ ಸಿಟಿ ಇಂಡೆಕ್ಸ್ ಪ್ರಕಾರ ಸಿಂಗಪೂರ್ ವಿಶ್ವದ ಪ್ರಮುಖ ಎಐ ನಗರ. ಅಲ್ಲಿ ಕೇವಲ ತಂತ್ರಜ್ಞಾನ ಆಧಾರಿತ ಮೂಲಸೌಕರ್ಯವಷ್ಟೇ ಅಲ್ಲದೆ, ಎಐ ಸಂಶೋಧನೆ, ಉದ್ಯಮ, ಶಿಕ್ಷಣ ಹಾಗೂ ಸಾರ್ವಜನಿಕ ಸೇವೆಗಳನ್ನೂ ಡಿಜಿಟಲ್ ತಂತ್ರಜ್ಞಾನದೊಂದಿಗೆ ಸಮೀಕರಿಸಲಾಗಿದೆ

ಬಿಡದಿ ದೇಶದ ಮೊದಲ ಕೃತಕ ಬುದ್ಧಿಮತ್ತೆ ಆಧಾರಿತ (AI) ನಗರವಾಗಲಿದೆ ಎಂಬ ಘೋಷಣೆ ಕರ್ನಾಟಕದ ರಾಜಕೀಯ ಹಾಗೂ ಅಭಿವೃದ್ಧಿ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಇತ್ತೀಚೆಗೆ ಘೋಷಿಸಿರುವ ”ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್” ಯೋಜನೆ ಕೇವಲ ಉಪನಗರದ ಅಭಿವೃದ್ಧಿ ಯೋಜನೆಯಲ್ಲ, ಅದು ಭಾರತದ ನಗರಾಭಿವೃದ್ಧಿ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಾಯಿಸುವ ಮಹತ್ವಾಕಾಂಕ್ಷೆಯ ಕನಸಾಗಿದೆ. ಸುಮಾರು 9,000 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಈ ನಗರವನ್ನು ಕೆಲಸ, ವಾಸ ಹಾಗೂ ಮನರಂಜನೆ (Work-Live-Play) ಮಾದರಿಯಲ್ಲಿ ವಿನ್ಯಾಸಗೊಳಿಸಲಾಗುತ್ತಿದೆ. ಅರ್ಥಾತ್, ಇಲ್ಲಿ ಉದ್ಯೋಗ, ವಾಸಸ್ಥಳ ಮತ್ತು ಜೀವನ ಶೈಲಿಗೆ ಬೇಕಾದ ಎಲ್ಲ ಮೂಲಸೌಕರ್ಯಗಳನ್ನು ಸಮಗ್ರವಾಗಿ ಒಟ್ಟಿಗೆ ಒದಗಿಸಲಾಗುವುದು.

ಭೂ ಸಂತ್ರಸ್ತ ರೈತರಿಗೆ ಪರಿಹಾರ, ಸಹಭಾಗಿತ್ವ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಯೋಜನೆಯ ಪ್ರಮುಖ ಅಂಶವೆಂದರೆ ರೈತರಿಗೆ ನೀಡಲಾಗುತ್ತಿರುವ ಪರಿಹಾರ. ರೈತರಿಂದ ಭೂಮಿ ಸ್ವಾಧೀನ ಮಾಡುವ ಸಂದರ್ಭಗಳಲ್ಲಿ ಸಾಮಾನ್ಯವಾಗಿ ತೊಂದರೆಗಳು ಉಂಟಾಗುತ್ತವೆ. ಆದರೆ ಇಲ್ಲಿ ಸರ್ಕಾರ ಪ್ರತಿ ಎಕರೆಗೆ ₹1.5 ಕೋಟಿಯಿಂದ ₹2.5 ಕೋಟಿವರೆಗೆ ಪರಿಹಾರ ನೀಡುವುದರ ಜೊತೆಗೆ, ನಗದು ಬದಲಿಗೆ ಅಭಿವೃದ್ಧಿಪಡಿಸಿದ ಭೂಮಿಯನ್ನು 50:50 ಅನುಪಾತದಲ್ಲಿ ಹಂಚುವ ವ್ಯವಸ್ಥೆಯನ್ನು ಒದಗಿಸಿದೆ. ಇದು ದೇಶದ ಯಾವುದೇ ಅಭಿವೃದ್ಧಿ ಪ್ರಾಧಿಕಾರಗಳಲ್ಲಿ ಅಳವಡಿಸದ ಹೊಸ ಮಾದರಿಯಾಗಿದೆ. ರೈತರ ಜೀವನೋಪಾಯ ಕಳೆದುಹೋಗದಂತೆ ವಾರ್ಷಿಕ ಅನುದಾನ ನೀಡುವ ನಿರ್ಧಾರವು ಸಾಮಾಜಿಕ ಹೊಣೆಗಾರಿಕೆಯನ್ನು ತೋರಿಸುತ್ತದೆ. ಖುಷ್ಕಿ ಭೂಮಾಲೀಕರಿಗೆ ವರ್ಷಕ್ಕೆ ₹30,000, ತರಿ ಭೂಮಾಲೀಕರಿಗೆ ₹40,000 ಹಾಗೂ ಭಾಗಾಯ್ತು ಭೂಮಾಲೀಕರಿಗೆ ₹50,000 ಅನುದಾನ ನೀಡಲಾಗುವುದು. ಭೂ ರಹಿತ ಕಾರ್ಮಿಕರಿಗೂ ಪರಿಹಾರದ ರೂಪದಲ್ಲಿ ನಿವೇಶನ ಹಾಗೂ ವಾರ್ಷಿಕ ₹25,000 ಅನುದಾನ ನೀಡಲಾಗುವುದು. ಅಂತಿಮ ಅಧಿಸೂಚನೆಯ ದಿನಾಂಕದಿಂದ ಪರಿಹಾರ ನೀಡುವವರೆಗೆ ರೈತರ ಜೀವನೋಪಾಯಕ್ಕಾಗಿ ವಾರ್ಷಿಕ ಅನುದಾನವನ್ನೂ ನೀಡಲಾಗುವುದು. ಖುಷ್ಕಿ, ತರಿ ಮತ್ತು ಭಾಗಾಯ್ತು ಭೂಮಾಲೀಕರಿಗೆ ಅನುಗುಣವಾಗಿ ವಾರ್ಷಿಕ ಅನುದಾನ ನಿಗದಿಪಡಿಸಲಾಗಿದೆ. ಭೂ ರಹಿತ ಕಾರ್ಮಿಕರು ಮತ್ತು ಭೂಮಿಯ ದಾಖಲೆ ಇಲ್ಲದವರಿಗೆ ಒಂದು ನಿವೇಶನ ಹಾಗೂ ವಾರ್ಷಿಕ ಅನುದಾನ ನೀಡಲಾಗುವುದು. ಆದಾಯ ತೆರಿಗೆ ಮತ್ತು ಮುದ್ರಾಂಕ ಶುಲ್ಕ ವಿನಾಯಿತಿಯನ್ನೂ ನೀಡಲಾಗುವುದು

ಸಿಂಗಾಪುರ ವಿಶ್ವದ ಮೊದಲ ಎಐ ನಗರ

ಬಿಡದಿಯನ್ನು ಎಐ ನಗರವನ್ನಾಗಿ ರೂಪಿಸುವ ಕನಸು ಕೇವಲ ಸ್ಥಳೀಯ ಮಟ್ಟಕ್ಕಷ್ಟೇ ಸೀಮಿತವಲ್ಲ. ಜಾಗತಿಕ ಮಟ್ಟದಲ್ಲಿ ಸಿಂಗಪೂರ್, ಸಿಯೋಲ್, ಬೀಜಿಂಗ್, ದುಬೈ ಹಾಗೂ ಸಾನ್ ಫ್ರಾನ್ಸಿಸ್ಕೊ ಮುಂತಾದ ನಗರಗಳು ಈಗಾಗಲೇ ಎಐ ಆಧಾರಿತ ಆರ್ಥಿಕತೆ ಮತ್ತು ಜೀವನಶೈಲಿಯನ್ನು ಅಭಿವೃದ್ಧಿಪಡಿಸುತ್ತಿವೆ. 2025ರ ಗ್ಲೋಬಲ್ ಎಐ ಸಿಟಿ ಇಂಡೆಕ್ಸ್ ಪ್ರಕಾರ ಸಿಂಗಪೂರ್ ವಿಶ್ವದ ಪ್ರಮುಖ ಎಐ ನಗರ. ಅಲ್ಲಿ ಕೇವಲ ತಂತ್ರಜ್ಞಾನ ಆಧಾರಿತ ಮೂಲಸೌಕರ್ಯವಷ್ಟೇ ಅಲ್ಲದೆ, ಎಐ ಸಂಶೋಧನೆ, ಉದ್ಯಮ, ಶಿಕ್ಷಣ ಹಾಗೂ ಸಾರ್ವಜನಿಕ ಸೇವೆಗಳನ್ನೂ ಡಿಜಿಟಲ್ ತಂತ್ರಜ್ಞಾನದೊಂದಿಗೆ ಜೋಡಿಸಲಾಗಿದೆ. ಸಿಯೋಲ್ ನಗರದಲ್ಲಿ ‘AI Seoul Strategy’ ಹೆಸರಿನಲ್ಲಿ ಸಾರ್ವಜನಿಕ ಸೇವೆಗಳ ಡಿಜಿಟಲೀಕರಣ, ಸ್ಮಾರ್ಟ್ ಗವರ್ನನ್ಸ್ ಹಾಗೂ ಸಾರಿಗೆ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಬಳಕೆಯ ಮೇಲೆ ಒತ್ತು ನೀಡಲಾಗಿದೆ. ಬೀಜಿಂಗ್ ಹಾಗೂ ಶಾಂಘೈ ಚೀನಾದ ಪ್ರಮುಖ ಎಐ ಕೇಂದ್ರಗಳಾಗಿದ್ದು, ಅಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ಹೂಡಿಕೆಗಳು ವಿಶ್ವದ ಪ್ರಮುಖ ಸ್ಟಾರ್ಟ್‌ಅಪ್ ಹಾಗೂ ತಂತ್ರಜ್ಞಾನ ಸಂಸ್ಥೆಗಳನ್ನು ಆಕರ್ಷಿಸುತ್ತಿವೆ. ದುಬೈ ತನ್ನ ‘Smart Dubai 2021’ ದೃಷ್ಟಿಕೋನದಡಿಯಲ್ಲಿ ಆರೋಗ್ಯ, ಶಿಕ್ಷಣ ಹಾಗೂ ನಗರ ನಿರ್ವಹಣೆಯಲ್ಲಿ ಎಐ ಆಧಾರಿತ ವ್ಯವಸ್ಥೆಗಳನ್ನು ಅಳವಡಿಸಿದೆ.

ಈ ಹಿನ್ನಲೆಯಲ್ಲಿ ಬಿಡದಿ ಯೋಜನೆಯು ವಿಶೇಷವಾಗಿ ಗಮನ ಸೆಳೆಯುತ್ತಿದೆ. ಏಕೆಂದರೆ ಇದನ್ನು ಶೂನ್ಯ ಸಂಚಾರ ದಟ್ಟಣೆ ನಗರವಾಗಿ ರೂಪಿಸಲು ಯೋಜಿಸಲಾಗಿದೆ. 300 ಮೀಟರ್ ಅಗಲದ ಬಿಸಿನೆಸ್ ಕಾರಿಡಾರ್ ಮೂಲಕ ಮುಖ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸಿ, 70 ಮೀಟರ್ ಅಗಲದ ವರ್ತುಲ ರಸ್ತೆ ಹಾಗೂ ಎಕ್ಸ್‌ಪ್ರೆಸ್‌ವೇ ಮೂಲಕ ನಗರದ ಎಲ್ಲ ಭಾಗಗಳನ್ನು ಸಂಪರ್ಕಿಸಲಾಗುವುದು. ಮುಂದಿನ ದಿನಗಳಲ್ಲಿ ಮೆಟ್ರೋ ಸಂಪರ್ಕವನ್ನು ವಿಸ್ತರಿಸುವ ಆಲೋಚನೆಯೂ ಇದೆ. ಈ ಎಲ್ಲ ಮೂಲಸೌಕರ್ಯದಿಂದಾಗಿ ಬಿಡದಿ, ಕೇವಲ ಉಪನಗರವಲ್ಲದೆ, ಬೆಂಗಳೂರಿನ ಪರ್ಯಾಯ ಕೇಂದ್ರ ವ್ಯವಹಾರ ಜಿಲ್ಲೆ ಆಗಿ ಬೆಳೆಯುವ ಸಾಧ್ಯತೆಯಿದೆ.

ಭಾರತದಲ್ಲಿ ಇನ್ನೂ ಕೆಲವು ನಗರಗಳನ್ನು ಎಐ ನಗರಗಳಾಗಿ ರೂಪಿಸಲು ಚಿಂತನೆ ನಡೆದಿದೆ. ಹೈದರಾಬಾದ್ ಈಗಾಗಲೇ ‘AI Research Cluster’ ಹಾಗೂ ‘AI Policy’ ರೂಪಿಸಿರುವುದು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ತಲಂಗಾಣ ಸರ್ಕಾರ ಹೈದರಾಬಾದ್ ಅನ್ನು ಭಾರತದ ಎಐ ರಾಜಧಾನಿ ಮಾಡಲು ದೃಷ್ಟಿಕೋನ ಹೊಂದಿದೆ. ಮಹಾರಾಷ್ಟ್ರದ ಪುಣೆ ನಗರವು ಸಹ ಸ್ಮಾರ್ಟ್ ಸಿಟಿ ಯೋಜನೆಗಳೊಂದಿಗೆ ಎಐ ತಂತ್ರಜ್ಞಾನದ ಬಳಕೆಯನ್ನು ಅಳವಡಿಸಿಕೊಳ್ಳಲು ಆರಂಭಿಸಿದೆ. ಬೆಂಗಳೂರು ಭಾರತದ ಐಟಿ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದರಿಂದ, ಬಿಡದಿಯಲ್ಲಿ ನಿರ್ಮಾಣವಾಗುವ ಎಐ ನಗರವು ತಂತ್ರಜ್ಞಾನದ ನೈಸರ್ಗಿಕ ವಿಸ್ತರಣೆ ಎಂಬಂತೆ ಕಾಣುತ್ತದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ದೇಶಪಾಂಡೆ ದುರ್ವರ್ತನೆ: ವಯಸ್ಸಾದರೂ ಬುದ್ಧಿ ಬರಲಿಲ್ಲವೇ?

ಬಿಡದಿ ಯೋಜನೆಯ ಇನ್ನೊಂದು ವಿಶೇಷ ಅಂಶವೆಂದರೆ ಸ್ಥಳೀಯ ಪ್ರಥಮ ಉದ್ಯೋಗ ನೀತಿ. ಅಂದರೆ, ಈ ನಗರದಲ್ಲಿ ರೂಪುಗೊಳ್ಳುವ ಎಐ, ಐಟಿ, ಸ್ಟಾರ್ಟ್‌ಅಪ್ ಹಾಗೂ ಸೇವಾ ಕ್ಷೇತ್ರಗಳಲ್ಲಿ ಸ್ಥಳೀಯ ಯುವಕರಿಗೆ ಆದ್ಯತೆ ನೀಡಲಾಗುವುದು. ಇದಕ್ಕಾಗಿ ವಿಶೇಷ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಸ್ಥಳೀಯ ಯುವಕರು ಜಾಗತಿಕ ಮಟ್ಟದ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳಲು ತರಬೇತಿ ಪಡೆಯುವುದರಿಂದ, ಅವರ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಇದರಿಂದ ವಲಸೆ ಕಡಿಮೆವಾಗಿ, ಸ್ಥಳೀಯ ಆರ್ಥಿಕತೆ ಬಲಗೊಳ್ಳುತ್ತದೆ.

ಈ ನಗರವನ್ನು ಹಸಿರು ಹಾಗೂ ಸುಸ್ಥಿರ ನಗರವನ್ನಾಗಿ ಮಾಡಲು 1,100 ಎಕರೆ ಪ್ರದೇಶವನ್ನು ಉದ್ಯಾನಗಳು ಮತ್ತು ಮೈದಾನಗಳಿಗಾಗಿ ಮೀಸಲಿಡಲಾಗುತ್ತಿದೆ. ಜೊತೆಗೆ 26 ಹಳ್ಳಿಗಳನ್ನು ನಗರ ಮಾದರಿಯಲ್ಲಿ ಅಭಿವೃದ್ಧಿಪಡಿಸಿ, ಅವುಗಳಲ್ಲಿ ಶಾಲೆಗಳು, ಆಸ್ಪತ್ರೆಗಳು, ಆಟದ ಮೈದಾನಗಳು ಹಾಗೂ ಭೂಗತ ವಿದ್ಯುತ್ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ಹಳ್ಳಿಗಳನ್ನು ಸಂಪೂರ್ಣವಾಗಿ ಅಳಿಸುವ ಬದಲು ಅವುಗಳನ್ನು ಸಮಗ್ರ ನಗರ ಯೋಜನೆಯೊಳಗೆ ಅಳವಡಿಸುವ ಕ್ರಮವು ಸ್ಥಳೀಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಸಹಾಯ ಮಾಡುತ್ತದೆ.

ಭೂಸ್ವಾಧೀನದಲ್ಲಿ ಹಲವು ಸವಾಲುಗಳು

ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಐ ನಗರವೆಂದರೆ ಕೇವಲ ತಂತ್ರಜ್ಞಾನ ಕೇಂದ್ರವಲ್ಲ; ಅದು ಮಾನವನ ಜೀವನದ ಎಲ್ಲ ಆಯಾಮಗಳನ್ನು ಕೃತಕ ಬುದ್ಧಿಮತ್ತೆಯ ನೆರವಿನಿಂದ ಸುಧಾರಿಸುವ ಪ್ರಯತ್ನವಾಗಿದೆ. ಆರೋಗ್ಯ ಸೇವೆಯಲ್ಲಿ ರೋಗ ನಿರ್ಧಾರ, ಸಾರಿಗೆ ವ್ಯವಸ್ಥೆಯಲ್ಲಿ ಸಂಚಾರ ನಿರ್ವಹಣೆ, ಶಿಕ್ಷಣದಲ್ಲಿ ಆಧುನಿಕ ಕಲಿಕೆ, ನಗರ ನಿರ್ವಹಣೆಯಲ್ಲಿ ಸ್ಮಾರ್ಟ್ ನೀರಾವರಿ ಹಾಗೂ ತ್ಯಾಜ್ಯ ನಿರ್ವಹಣೆ– ಇವುಗಳೆಲ್ಲ ಎಐ ನಗರದ ಅವಿಭಾಜ್ಯ ಅಂಶಗಳು. ಬಿಡದಿಯನ್ನು ಈ ದೃಷ್ಟಿಕೋನದಿಂದ ರೂಪಿಸಲಾಗುತ್ತಿದೆ ಎಂಬುದು ಗಮನಾರ್ಹ.

ಸಮಗ್ರವಾಗಿ ನೋಡಿದರೆ, ಬಿಡದಿ ಯೋಜನೆ ಕೇವಲ ಉಪನಗರದ ಅಭಿವೃದ್ಧಿಯಲ್ಲ. ಇದು ಭಾರತದ ಭವಿಷ್ಯದ ನಗರಾಭಿವೃದ್ಧಿಯ ಮಾದರಿಯಾಗಿ ಪರಿಣಮಿಸಬಹುದಾದ ಐತಿಹಾಸಿಕ ಯೋಜನೆ. ಸಿಂಗಪೂರ್, ಸಿಯೋಲ್, ದುಬೈ, ಬೀಜಿಂಗ್ ಮುಂತಾದ ಜಾಗತಿಕ ಎಐ ನಗರಗಳಿಗೆ ಸಮಾನವಾಗಿ ನಿಲ್ಲಬಲ್ಲ ಕೇಂದ್ರವಾಗಿ ಬಿಡದಿ ರೂಪುಗೊಳ್ಳುವ ಸಾಧ್ಯತೆ ಇದೆ. ಹೈದರಾಬಾದ್ ಹಾಗೂ ಪುಣೆ ಮುಂತಾದ ಭಾರತೀಯ ನಗರಗಳೂ ಇದೇ ಹಾದಿಯಲ್ಲಿದ್ದರೂ, ಬಿಡದಿಯ ಮಾದರಿ ಸಮಗ್ರತೆ, ರೈತ ಸ್ನೇಹಿ ಪರಿಹಾರ ಹಾಗೂ ಹಸಿರು-ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ವಿಶಿಷ್ಟವಾಗಿದೆ.

ಇದೀಗ ಯೋಜನೆ ಆರಂಭಿಕ ಹಂತದಲ್ಲಿರುವುದರಿಂದ ಅನೇಕ ಸವಾಲುಗಳು ಎದುರಾಗಲಿವೆ. ಭೂಸ್ವಾಧೀನದಲ್ಲಿ ರೈತರ ಅಸಮಾಧಾನ, ಪರಿಸರ ಸಂಬಂಧಿ ಅಂಶಗಳು ಹಾಗೂ ಆರ್ಥಿಕ ಸಂಪನ್ಮೂಲ ಸಂಗ್ರಹಣೆ ಪ್ರಮುಖ ಅಡೆತಡೆಗಳಾಗಬಹುದು. ಆದರೆ ಸರ್ಕಾರ ಘೋಷಿಸಿರುವ ಭರವಸೆಗಳನ್ನು ಪ್ರಾಮಾಣಿಕತೆಯಿಂದ ಜಾರಿಗೆ ತಂದರೆ, ಬಿಡದಿ ನಿಜವಾಗಿಯೂ ದೇಶದ ಮೊದಲ ಸಮಗ್ರ ಎಐ ನಗರವಾಗಿ ಪರಿಣಮಿಸುವ ಸಾಧ್ಯತೆಯಿದೆ. ಒಂದು ಕಾಲದಲ್ಲಿ ಬೆಂಗಳೂರು ಐಟಿ ರಾಜಧಾನಿಯಾಗಿದ್ದಂತೆ, ಮುಂದಿನ ಪೀಳಿಗೆಯಲ್ಲಿ ಬಿಡದಿ ಎಐ ರಾಜಧಾನಿಯಾಗಿ ಬೆಳೆಯಬಹುದಾದ ಭವಿಷ್ಯವನ್ನು ಈ ಯೋಜನೆ ಮುನ್ಸೂಚಿಸುತ್ತಿದೆ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...