ಬಿಹಾರ ಚುನಾವಣೆ | ಸಾಧನೆಗಳೇ ಇಲ್ಲ; ವಿಪಕ್ಷ ನಾಯಕರ ವೈಯಕ್ತಿಕ ಟೀಕೆಗೆ ಜೋತು ಬಿದ್ದ ಬಿಜೆಪಿ

Date:

ಬಿಹಾರ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಮೊದಲ ಹಂತದ ಮತದಾನ ಗುರುವಾರ, ನ.೬ರಂದು ನಡೆಯಲಿದೆ. ಚುನಾವಣೆಯ ಫಲಿತಾಂಶ ನವೆಂಬರ್ 14 ರಂದು ಹೊರಬೀಳತ್ತೆ. ಈ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರವನ್ನು ಉಳಿಸಿಕೊಳ್ಳಲಿದೆಯೇ ಅಥವಾ ಕಾಂಗ್ರೆಸ್‌ ಆರ್‌ಜೆಡಿ ಮೈತ್ರಿಕೂಟ “ಮಹಾಘಟಬಂಧನ್” ಮತದಾರರ ಮನಗೆಲ್ಲಲಿದೆಯೇ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಮತದಾನ ನಡೆಯುವ ಕ್ಷೇತ್ರಗಳಲ್ಲಿ  ನಿನ್ನೆ ಸಂಜೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಚುನಾವಣಾ ಪ್ರಚಾರ ಈಗಾಗಲೇ ಬಿರುಸಿನಿಂದ ಸಾಗುತ್ತಿದೆ. ಎಲ್ಲಾ ಪಕ್ಷಗಳು ತಮ್ಮ ಬಲವನ್ನು ಪ್ರದರ್ಶಿಸಿ, ಜನರನ್ನು ಆಕರ್ಷಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿವೆ. ಆದರೆ, ಬಿಜೆಪಿ ತನ್ನ ಹಳೇ ಚಾಳಿಯನ್ನು ಬಿಟ್ಟಂತೆ ಕಾಣುತ್ತಿಲ್ಲ – ಸಾಧನೆಗಳನ್ನು ಎತ್ತಿ ಹಿಡಿಯುವ ಬದಲು ವೈಯಕ್ತಿಕ ಟೀಕೆಗಳಲ್ಲಿ ಮುಳುಗಿದೆ.

ಕಳೆದ 20 ವರ್ಷಗಳಿಂದ ನಿತೀಶ್‌ ಕುಮಾರ್ ಅವರೇ ಬಿಹಾರದ ಆಡಳಿತ ನಡೆಸಿದ್ದಾರೆ. ಈ ಅವಧಿಯಲ್ಲಿ ಬಹುತೇಕ ಅವರು ಎನ್‌ಡಿಎ ಮೈತ್ರಿಕೂಟದಲ್ಲಿ ಸರ್ಕಾರ ನಡೆಸಿದ್ದಾರೆ. ಈ 

ಈ 20 ವರ್ಷದಲ್ಲಿ  ತಮ್ಮ ಸಾಧನೆ ಏನು? ಜನರಿಗೆ ನಾವು ಏನೆಲ್ಲಾ ಮಾಡಿದೀವಿ? ಅದರಿಂದ ಜನರಿಗೆ ಯಾವುದೆಲ್ಲಾ ರೀತಿಯಲ್ಲಿ ಉಪಯೋಗ ಆಗಿದೆ ಅಂತ ಹೇಳೋದನ್ನ ಬಿಟ್ಟು ಬಿಜೆಪಿ ನಾಯಕರು ವೈಯಕ್ತಿಕ ಟೀಕೆ ಮಾಡುವುದರಲ್ಲೇ ಬ್ಯೂಸಿ ಆಗಿದ್ದಾರೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಿಹಾರದಲ್ಲಿ ನಡೆದ ಚುನಾವಣಾ ರ್ಯಾಲಿಗಳಲ್ಲಿ ಇಂಡಿಯಾ ಮೈತ್ರಿಕೂಟವನ್ನು ತೀವ್ರವಾಗಿ ಟೀಕಿಸಿದ್ದಾರೆ. ವಿಪಕ್ಷ ನಾಯಕರನ್ನು “ಪಪ್ಪು, ಟಪ್ಪು ಮತ್ತು ಅಪ್ಪು” ಎಂದು ವ್ಯಂಗ್ಯವಾಡಿದ ಯೋಗಿ ಆದಿತ್ಯನಾಥ್‌, “ಇವರು ಸತ್ಯವನ್ನು ನೋಡಲು, ಕೇಳಲು ಅಥವಾ ಮಾತನಾಡಲು ನಿರಾಕರಿಸುತ್ತಿದ್ದಾರೆ” ಅಂತ ಹೇಳಿದ್ದಾರೆ.  ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆ ದರ್ಭಾಂಗ, ಮುಜಾಫರ್ ಪುರ, ಸಾರನ್ ಮತ್ತು ಪಾಟ್ನಾದಲ್ಲಿ ನಡೆದ ರ್ಯಾಲಿಗಳಲ್ಲಿ ಭಾಗವಹಿಸಿ ಮಾತನಾಡಿದ ಯೋಗಿ,  “ಮಹಾತ್ಮ ಗಾಂಧಿಯವರಿಗೆ ಮೂರು ಮಂಗಗಳಿದ್ದಂತೆ, ಇಂದು ಭಾರತ ಇಂಡಿಯಾ ಮೈತ್ರಿಕೂಟವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಪ್ಪು, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಟಪ್ಪು, ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅಪ್ಪು  ಹೆಸರಲ್ಲಿ ಮೂರು ಮಂಗಗಳಲ್ಲು ತಂದಿತು,  ಪಪ್ಪು ಸತ್ಯವನ್ನು ಮಾತನಾಡಲು ಅಥವಾ ಒಳ್ಳೆಯದನ್ನು ಹೇಳಲು ಸಾಧ್ಯವಿಲ್ಲ. ಟಪ್ಪು ಯಾವುದೇ ಸತ್ಯವನ್ನು ನೋಡಲು ಸಾಧ್ಯವಿಲ್ಲ, ಮತ್ತು ಅಪ್ಪು ಸತ್ಯವನ್ನು ಕೇಳಲು ಸಾಧ್ಯವಿಲ್ಲ” ಅಂತ ಹೇಳಿದ್ದಾರೆ. 

ಇನ್ನು ಭಾರತದ ರಾಜಕೀಯ ವೇದಿಕೆಯಲ್ಲಿ ವ್ಯಂಗ್ಯ ಮತ್ತು ಟೀಕೆಗಳು ಸಾಮಾನ್ಯವಾದರೂ, ಕೆಲವೊಮ್ಮೆ ಅವು ದೇಶದ ಇತಿಹಾಸದ ಮಹಾನ್ ವ್ಯಕ್ತಿಗಳನ್ನು ತಲುಪಿ ಅವಮಾನಿಸುವ ಮಟ್ಟಕ್ಕೆ ಇಳಿದುಬಿಡುತ್ತವೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರನ್ನು “ಪಪ್ಪು, ಟಪ್ಪು ಮತ್ತು ಅಪ್ಪು” ಎಂದು ಕರೆದು ಟೀಕಿಸಿರೋದು, ಕೇವಲ ರಾಜಕೀಯ ಎದುರಾಳಿಗಳ ವಿರುದ್ಧದ ದಾಳಿಯಲ್ಲ; ಬದಲಿಗೆ ಮಹಾತ್ಮ ಗಾಂಧಿಯವರ ಪವಿತ್ರ “ಮೂರು ಮಂಗಗಳ” ತತ್ವಕ್ಕೆ ನೇರ ಅವಮಾನವಾಗಿದೆ. ಗಾಂಧೀಜಿಯವರ ತತ್ವಗಳನ್ನು ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುವ ಈ ಪ್ರಯತ್ನವು ದೇಶದ ನೈತಿಕತೆಯನ್ನೇ ಪ್ರಶ್ನಿಸುವಂತಿದೆ.

ಮಹಾತ್ಮ ಗಾಂಧಿಯವರು ತಮ್ಮ ಜೀವನದುದ್ದಕ್ಕೂ “ಕೆಟ್ಟದ್ದನ್ನು ನೋಡಬೇಡಿ, ಕೆಟ್ಟದ್ದನ್ನು  ಕೇಳಬೇಡಿ,  ಕೆಟ್ಟದ್ದನ್ನು ಹೇಳಬೇಡಿ ಎಂಬ ಮೂರು ಮಂಗಗಳನ್ನು ಪ್ರತಿಪಾದಿಸಿದರು. ಇದು ಕೇವಲ ಮೂರು ಕೋತಿಗಳ ಪ್ರತೀಕವಲ್ಲ; ಬದಲಿಗೆ ಇದು ಸತ್ಯ, ಅಹಿಂಸೆ ಮತ್ತು ಆತ್ಮಶುದ್ಧಿಯ ಆಳವಾದ ತತ್ವಗಳ ಸಾರಾಂಶ. ಗಾಂಧೀಜಿಯವರು ಈ ಮಂಗಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸ್ವಾತಂತ್ರ್ಯ ಹೋರಾಟವನ್ನು ನಡೆಸಿದ್ದರು. ಇದು ಜಗತ್ತಿನಾದ್ಯಂತ ಶಾಂತಿ ಮತ್ತು ನೈತಿಕತೆಯ ಸಂಕೇತವಾಗಿ ಮಾರ್ಪಟ್ಟಿದೆ. ಆದರೆ ಯೋಗಿ ಆದಿತ್ಯನಾಥ್ ಅವರು ಈ ಪವಿತ್ರ ತತ್ವವನ್ನು ರಾಜಕೀಯ ವ್ಯಂಗ್ಯಕ್ಕಾಗಿ ಬಳಸಿಕೊಂಡಿದ್ದಾರೆ – ಇದು ಗಾಂಧೀಜಿಯವರ ಆದರ್ಶಗಳಿಗೆ ನೇರ ದ್ರೋಹವಾಗಿದೆ. ಮಂಗಗಳು ಸತ್ಯದ ಹಾದಿಯಲ್ಲಿ ನಡೆಯಲು ಪ್ರೇರೇಪಿಸೋದು, ರಾಜಕೀಯ ಎದುರಾಳಿಗಳನ್ನು ಅವಮಾನಿಸಲು ಅಲ್ಲ. ಯೋಗಿ ಆದಿತ್ಯನಾಥ್‌ ಗಾಂಧೀಜಿಯವರ ಹೆಸರನ್ನು ಉಲ್ಲೇಖಿಸಿ ಈ ಟೀಕೆಯನ್ನು ಮಾಡುವ ಮೂಲಕ, ರಾಷ್ಟ್ರಪಿತನ ಆದರ್ಶಗಳನ್ನು ಚುನಾವಣಾ ಆಯುಧವಾಗಿ ಬಳಸಿಕೊಂಡಿದ್ದಾರೆ. ಇದು ಕೇವಲ ವಿಪಕ್ಷ ನಾಯಕರ ವಿರುದ್ಧದ ದಾಳಿಯಲ್ಲ ಬದಲಿಗೆ ಗಾಂಧೀಜಿಯವರ ಸತ್ಯಾಗ್ರಹದ ತತ್ವಕ್ಕೆ ಅಪಮಾನವಾದಂತಾಗಿದೆ. 

ಅಷ್ಟೇ ಅಲ್ಲ ಕಳೆದ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಅರಾರಾದಲ್ಲಿ ರ್ಯಾಲಿ ನಡೆಸಿದ್ದರು. ಈ ವೇಳೆ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸ್ತಾರೆ.  ಆಪರೇಷನ್‌ ಸಿಂಧುರವನ್ನ ಮುನ್ನೆಲೆಗೆ ತಂದ ಮೋದಿ “ಪಾಕಿಸ್ತಾನದ ವಿರುದ್ಧ ನಡೆದ ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ, ಕಾಂಗ್ರೆಸ್‌ ಮತ್ತದರ ಮಿತ್ರಪಕ್ಷಗಳ ನಿದ್ರೆಗೆ ಭಂಗ ತಂದಿತ್ತು ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ. “ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆಯ ಯಶಸ್ಸಿನ ಬಳಿಕ ಇಡೀ ದೇಶ ಹೆಮ್ಮೆಪಡುತ್ತಿದ್ದರೆ, ಕಾಂಗ್ರೆಸ್‌ ಮತ್ತದರ ಮಿತ್ರ ಪಕ್ಷಗಳು ಅದನ್ನು ಇಷ್ಟಪಡಲಿಲ್ಲ. ಪಾಕಿಸ್ತಾನದಲ್ಲಿ ಸಿಡಿದ ನಮ್ಮ ಬಾಂಬ್‌ಗಳ ಶಬ್ಧದಿಂದ ಕಾಂಗ್ರೆಸ್‌ನ ರಾಜಮನೆತನ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದೆ. ವಿಪಕ್ಷ ನಾಯಕರು ಆಪರೇಷನ್‌ ಸಿಂಧೂರ ಆಘಾತದಿಂದ ಇನ್ನೂ ಹೊರಬಂದಿಲ್ಲ” ಎಂದು ಪ್ರಧಾನಿ ಮೋದಿ ಕಿಡಿಕಾರಿದ್ದಾರೆ. 

ಬಿಹಾರದ ಸಮಷ್ಟಿಪುರದಲ್ಲಿ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು, ಸಂವಿಧಾನವನ್ನು ಹೊತ್ತವರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದರು. ಆರ್‌ಜೆಡಿಯ ವಿರುದ್ಧದ ತಮ್ಮ “ಜಂಗಲ್ ರಾಜ್” ಹೇಳಿಕೆಯನ್ನು ಮತ್ತೆ ಪುನರುಚ್ಛರಿಸಿದ ಮೋದಿ, ರಾಜ್ಯವು ಅವರನ್ನು ದೂರವಿಟ್ಟು ಉತ್ತಮ ಆಡಳಿತಕ್ಕಾಗಿ ಎನ್ ಡಿಎ ಮೈತ್ರಿಕೂಟಕ್ಕೆ ಮತ ನೀಡಿ ಎಂದು ಜನತೆಗೆ ಮನವಿ ಮಾಡಿಕೊಂಡಿದ್ದಾರೆ. ಬಿಹಾರದ ಜನರು ಜಂಗಲ್ ರಾಜ್‌ನ ದುಷ್ಕೃತ್ಯಗಳನ್ನು” ಎಂದಿಗೂ ಮರೆಯಲು ಸಾಧ್ಯವಿಲ್ಲ. ಆರ್ ಜೆಡಿಯ ಆಡಳಿತ ಕ್ರಮವೇ ಅಂಥಹದ್ದು ಎಂದ ಪ್ರಧಾನ ಮಂತ್ರಿಗಳು ಬಿಹಾರದಲ್ಲಿ ವಿರೋಧ ಪಕ್ಷಗಳ ಮೈತ್ರಿಯನ್ನು ಲಠ್ ಬಂಧನ್ ಅಂದರೆ ಕ್ರಿಮಿನಲ್ ಗಳ ಮೈತ್ರಿ ಎಂದು ಕರೆದಿದ್ದಾರೆ. 

ಬಹುಷಃ ಮೋದಿ ಮರೆತಿರಬಹುದು, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಸಂಪೂರ್ಣ ನಿರ್ನಾಮ ಮಾಡಿದ್ದೇವೆಂದು ಗೃಹ ಸಚಿವ ಅಮಿತ್ ಶಾ ಅಬ್ಬರದ ಭಾಷಣ ಮಾಡಿದ್ದರು. ಅವರ ಭಾಷಣದ ಆರೇ ತಿಂಗಳ ಅಂತರದಲ್ಲಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭೀಕರ ದಾಳಿ ನಡೆದಿತ್ತು. ಅಷ್ಟೇ ಯಾಕೆ, ದೇಶದ ಜನರನ್ನು ಕೊಂದ ಭಯೋತ್ಪಾದನೆ ಮತ್ತು ಅದರ ನಿಗ್ರಹದಂತಹ ಗಂಭೀರ ವಿಚಾರಗಳ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿತ್ತು. ಭಯೋತ್ಪಾದನೆಯನ್ನು ಎದುರಿಸಲು ಸರ್ಕಾರದ ಜೊತೆಗಿರುತ್ತೇವೆಂದು ಇದೇ ವಿಪಕ್ಷಗಳು ಹೇಳಿದ್ದವು. 

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭೀಕರ ಭಯೋತ್ಪಾದಕ ದಾಳಿ ನಡೆದು ಮೂರು ದಿನಗಳ ನಂತರ ಜಮ್ಮು-ಕಾಶ್ಮೀರದ ಪಕ್ಷಗಳು, ಸಂಘಟನೆಗಳು ಘಟನೆಯನ್ನು ಖಂಡಿಸಿ ಕಾಶ್ಮೀರ ಬಂದ್‌ ನಡೆಸಿತ್ತು. ಪಹಲ್ಗಾಮ್‌ನಲ್ಲಿನ ಭದ್ರತಾ ವ್ಯವಸ್ಥೆ ಮತ್ತು ಲೋಪಗಳ ಬಗ್ಗೆ ಪ್ರಶ್ನೆಗಳನ್ನೂ ಎತ್ತಿತ್ತು.  ಕೇಂದ್ರ ಸರ್ಕಾರವು ಕೂಡ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯಿಸಿರುವ ಬಗ್ಗೆ ಸರ್ವಪಕ್ಷಗಳ ಸಭೆ ನಡೆಸಿತ್ತು. ಆದರೆ, ಗಂಭೀರ ವಿಚಾರವನ್ನು ಚರ್ಚಿಸಬೇಕಿದ್ದ ಇಂತಹ  ತುರ್ತು ಮತ್ತು ಪ್ರಮುಖ ಸಭೆಯಲ್ಲಿ ಪ್ರಧಾನಿ ಮೋದಿ ಅವರೇ ಭಾಗವಹಿಸಿರಲಿಲ್ಲ. ಸಭೆಯಲ್ಲಿ ಅವರ ಗೈರು ಹಾಜರಿಯು ವಿರೋಧ, ಆಕ್ರೋಶ, ಪ್ರಶ್ನೆಗಳಿಗೆ ಗುರಿಯಾಗಿತ್ತು. ಸರ್ವಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಪಕ್ಷಗಳ ನಾಯಕರು ಮೋದಿ ಗೈರು ಹಾಜರಿಯ ಬಗ್ಗೆ ಪ್ರಶ್ನಿಸಿದ್ದರು. ಅಸಮಾಧಾನ ವ್ಯಕ್ತಪಡಿಸಿದ್ದರು.  ಸಭೆಯಲ್ಲಿ ಮುಖ್ಯವಾಗಿ ಭಾಗಿಯಾಗಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಅವರೇ ಭಾಗಿಯಾಗಿರಲಿಲ್ಲ. ಬದಲಾಗಿ, ಮೋದಿ ಅವರು ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿನ ಪೂರ್ವನಿಗದಿತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಿಹಾರ ಸರ್ವಪಕ್ಷಗಳ ಸಭೆಗಿಂತ ಮುಖ್ಯವಾದ ಕಾರ್ಯಕ್ರಮವೇನಲ್ಲ. ಆದರೂ ಮೋದಿ ಭಾಗಿಯಾಗುತ್ತಾರೆಂದರೆ- ಅವರಿಗೆ ದೇಶ, ದೇಶದ ಜನರು, ದೇಶದ ಭದ್ರತೆಗಿಂತ ಚುನಾವಣೆ ಮುಖ್ಯವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತ್ತು. ಈಗ ಮೋದಿ ಬಿಹಾರದ ಚುನಾವಣಾ ರ್ಯಾಲಿಯಲ್ಲಿ ಹೇಳ್ತಾರೆ, ಪಾಕಿಸ್ತಾನದ ಜೊತೆ ನಡೆದ ಸಂಘರ್ಷದಿಂದ ಕಾಂಗ್ರೆಸ್‌ ನಿದ್ದೆಗೆಟ್ಟಿದೆ ಅಂತ. ಎಂತ ವಿಪರ್ಯಾಸ ನೋಡಿ.. 

ಭಯೋತ್ಪಾದನೆಯಂತಹ ಗಂಭೀರ ವಿಚಾರಗಳ ಕುರಿತು ಚರ್ಚಿಸಿ, ಎದುರಿಸಲು ಬೇಕಾದ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಪ್ರಧಾನಿಗೆ ಮಾತ್ರವೇ ಇರುತ್ತದೆ. ಭಯೋತ್ಪಾದಕ ಕೃತ್ಯದ ವಿರುದ್ಧ ಯಾವ ರೀತಿಯಲ್ಲಿ ಕಾರ್ಯಾಚರಣೆ ನಡೆಸಬೇಕು ಎಂಬುದನ್ನು ನಿರ್ಧರಿಸುವುದು ಕೂಡ ಪ್ರಧಾನಿಯೇ ಆಗಿರುತ್ತಾರೆ. ಭದ್ರತಾ ಲೋಪಗಳು ಮತ್ತು ಗುಪ್ತಚರ ವೈಫಲ್ಯದ ಕುರಿತು ಪ್ರಧಾನಿ ಪ್ರತಿಕ್ರಿಯೆಯೂ ಮುಖ್ಯವಾಗಿರುತ್ತದೆ. ಗಂಭೀರ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಲಹೆ, ಅಭಿಪ್ರಾಯಗಳನ್ನು ಪಡೆದುಕೊಳ್ಳುವುದು ಕೂಡ ಅತ್ಯಂತ ಅವಶ್ಯಕ ಅಂತ ಆ ದಿನ ಮೋದಿಗೆ ಅನಿಸಲೇ ಇಲ್ವಾ? 

ಬಿಹಾರದಲ್ಲಿ ನೀವು ಎನನ್ನ ಕಡೆದು ಕಟ್ಟೆ ಹಾಕಿದ್ದೀರಾ ಅದನ್ನ ಹೇಳ್ರಪ್ಪಾ ಅಂತ ಅಂದ್ರೆ ಆಪರೇಷನ್‌ ಸಿಂಧುರ್‌ ಬಗ್ಗೆ ಮಾತಾಡಿದ ಮೋದಿ ತಮ್ಮ ಗುಂಡಿಯನ್ನ ತಾವೇ ತೋಡಿಕೊಂಡ ಹಾಗೇ ಆಗಿದೆ. ಇನ್ನೂ ಜನಾದೇಶ ಯಾವ ಪಾರ್ಟಿಯ ಪರವಾಗಿದ್ದರೂ, ಮುಖ್ಯಮಂತ್ರಿ ಆಗಿ ಮುಂದುವರಿಯಲು ನಿತೀಶ್ ಕುಮಾರ್ ಯಶಸ್ಸನ್ನು ಪಡೆಯುತ್ತಲೇ ಬಂದಿದ್ದಾರೆ.  ನಿತೀಶ್, ಎರಡು ಅವಧಿಯಲ್ಲಿ ಬಿಹಾರದ ಮುಖ್ಯಮಂತ್ರಿ ಆಗಿದ್ದವರು. ಎರಡನೇ ಟರ್ಮ್ ನಲ್ಲಿ ನವೆಂಬರ್ 20, 2015ನಿಂದ ಅಧಿಕಾರದಲ್ಲಿದ್ದಾರೆ. ನಿತೀಶ್‌ ಅವರ ದೀರ್ಘ ಆಡಳಿತದ ಹೊರತಾಗಿಯೂ ಭಾರತದ ಅತ್ಯಂತ ಬಡ ರಾಜ್ಯಗಳ ಪಟ್ಟಿಯಲ್ಲಿ ಬಿಹಾರ ಮೊದಲ ಸಾಲಿನಲ್ಲಿದೆ. ನಿತೀಶ್ ಯುಗದಲ್ಲಿ ಬಿಹಾರದ ಸಾಪೇಕ್ಷ ಆರ್ಥಿಕ ಸ್ಥಿತಿಯು ಹದಗೆಟ್ಟಿದೆ. ಬಡವರು ಮತ್ತಷ್ಟು, ಮಗದಷ್ಟು ಬಡವಾಗಿದ್ದಾರೆ. ಬಿಹಾರದಲ್ಲಿ ಬಿಜೆಪಿ ಬಹುಮತಗಳಿಸದೇ ಇರೋಕೆ ಇದು ಕೂಡ ಒಂದು ಕಾರಣ. 

ಕಳೆದ ಎರಡು ಚುನಾವಣೆಯಲ್ಲಿ ಅಂದರೆ, 2015 ಮತ್ತು 2020ರ ಬಿಹಾರ ವಿಧಾನಸಭಾ ಚುನಾವಣೆಯ ವೋಟಿಂಗ್ ಪ್ಯಾಟರ್ನ್ ಅನ್ನು ಅವಲೋಕಿಸಿದಾಗ, ಬಿಜೆಪಿಯೇ ಇಲ್ಲಿ ಆಡಳಿತ ನಡೆಸಿಕೊಂಡು ಬಂದಿರೋದು. ಅಸಲಿಗೆ ಕಳೆದ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರ ಪಾರ್ಟಿಯು ತೀವ್ರ ಹಿನ್ನಡೆಯನ್ನು ಅನುಭವಿಸಿದ್ದರೂ, ಬಿಜೆಪಿಯ ಬಲದಿಂದ ಮತ್ತೆ ಮುಖ್ಯಮಂತ್ರಿ ಆಗ್ತಾರೆ. 2015ರ ಚುನಾವಣೆಯಲ್ಲಿ RJD ಜೊತೆ ಮೈತ್ರಿ ಮಾಡಿಕೊಂಡಿದ್ದ ನಿತೀಶ್ ಕುಮಾರ್, 2020ರ ಚುನಾವಣೆಯಲ್ಲಿ ಬಿಜೆಪಿ ಜೊತೆಗಿದ್ದರು.  ಬಿಹಾರದಲ್ಲಿ ಎಷ್ಟೇ ಆಡಳಿತ ವಿರೋಧಿ ಅಲೆ ಇದ್ರೂ ಮೈತ್ರಿ ಮುಖಾಂತರ ಆದರೂ ಬಿಜೆಪಿ ಆಡಳಿತ ನಡೆಸುತ್ತಿದೆ ಅಂದ್ರೆ ಅದಕ್ಕೆ ರಾಹುಲ್‌ ಗಾಂಧಿಯ ಮತಗಳ್ಳತನದ ಆರೋಪ ಕಾರಣನಾ ಅನ್ನೋ ಸಣ್ಣ ಅನುಮಾನ ಮೂಡೋದಂತೂ ನಿಜ. 

ಜೊತೆಗೆ ಬಿಹಾರದಲ್ಲಿ ಯಾಕೋ ರಾಜಕೀಯ ವಾತಾವರಣ NDA ಮೈತ್ರಿಕೂಟದ ಪರವಾಗಿಲ್ಲ ಅಥವಾ ಆಡಳಿತ ವಿರೋಧಿ ಅಲೆ ಇದೆ ಅನ್ನೋ ಅನುಮಾನ ಬರಲು ಕಾರಣ, ಇತ್ತೀಚೆಗೆ ವಿವಿಧ ಕಾರ್ಮಿಕ ಸಂಘಟನೆಗಳು ಕರೆನೀಡಿದ್ದ ಭಾರತ್ ಬಂದ್. ದೇಶದ ಹಲವು ಕಡೆ ಬಂದ್ ಇರೋದೇ ಸಾರ್ವಜನಿಕರಿಗೆ ಗೊತ್ತಿಲ್ಲದೇ ಇದ್ದದ್ದು ಒಂದೆಡೆಯಾದರೆ, ಬಿಹಾರದಲ್ಲಿ ಮುಷ್ಕರಕ್ಕೆ ಅಭೂತಪೂರ್ವ ಬೆಂಬಲ ದಕ್ಕಿತ್ತು. ತೇಜಸ್ವಿ ಯಾದವ್ ಮತ್ತು ರಾಹುಲ್ ಗಾಂಧಿ, ಬಂದ್ ಗೆ ಬೆಂಬಲವನ್ನು ನೀಡಿದ್ದರು.
“ಇದೊಂದು ನ್ಯಾಯಕ್ಕಾಗಿ ನಡೆಯುತ್ತಿರುವ ಬಂದ್ ಎಂದು ಸಾರಿದರು. ರೈತರು ಸಕ್ರಿಯರಾಗಿ ಇದರಲ್ಲಿ ಪಾಲ್ಗೊಂಡರು. ಇದಕ್ಕೆ ಸಿಕ್ಕ ಬೆಂಬಲವು ನಿತೀಶ್ ಕುಮಾರ್ ಸರ್ಕಾರದ ಮೇಲೆ ಇರುವ ಸಿಟ್ಟಿನ ಸಂಕೇತ” ಎಂದು ಮಹಾಘಟಬಂಧನ್ ಒಕ್ಕೂಟದ ನಾಯಕರು ಹೇಳಿದ್ದರು.  

photo 6073397422760594507 y

ಬಿಜೆಪಿ ಮೈತ್ರಿ ಕೂಟ ತನ್ನ ಸಾಧನೆಗಳನ್ನು ಜನರ ಮುಂದಿಟ್ಟು ನಾವು ಏನು ಮಾಡಿದ್ದೇವೆ, ಅದರಿಂದ ಜನರಿಗೆ ಏನು ಲಾಭ? ಆಗಿದೆ ಅನ್ನೋ ಬಗ್ಗೆ  ಕೇಳಬೇಕಿತ್ತು. ಬದಲಿಗೆ, ಪ್ರಚಾರದಲ್ಲಿ 70% ಸಮಯವನ್ನ ವೈಯಕ್ತಿಕ ಟೀಕೆಗಳಿಗೆ ಮೀಸಲಿಟ್ಟಂತೆ ಕಾಣುತ್ತಿದೆ. ಬಿಹಾರದಲ್ಲಿ 40% ಕ್ಕೂ ಅಧಿಕ ಇರುವ ಯುವ ಮತದಾರರು ಉದ್ಯೋಗ, ಶಿಕ್ಷಣ, ಆರೋಗ್ಯದ ಬಗ್ಗೆ ಕೇಳುತ್ತಾರೆ – ವೈಯಕ್ತಿಕ ಆರೋಪಗಳ ಬಗ್ಗೆ ಅಲ್ಲವೇ ಅಲ್ಲ.. 

ಬಿಹಾರದ ಮತದಾರರು ಬದಲಾವಣೆಯನ್ನ ಬಯಸುತ್ತಿದ್ದಾರೆ. ನಿರುದ್ಯೋಗ, ಬರಗಾಲ, ವಲಸೆ – ಇವುಗಳು ದೊಡ್ಡ ಸವಾಲುಗಳಾಗಿದೆ. ಬಿಜೆಪಿ ತನ್ನ ಸಾಧನೆಗಳನ್ನು ಡೇಟಾ, ಉದಾಹರಣೆಗಳೊಂದಿಗೆ ಜನರ ಮುಂದಿಟ್ಟರೆ ಮಾತ್ರ ಅಧಿಕಾರ ಉಳಿಸಿಕೊಳ್ಳಬಹುದು. ವೈಯಕ್ತಿಕ ಟೀಕೆಗಳು ತಾತ್ಕಾಲಿಕ ಲಾಭ ನೀಡಬಹುದೇ ವಿನಃ ಜನರು “ನಮಗೇನು ಲಾಭ?” ಎಂದು ಕೇಳಿದಾಗ ಬಿಜೆಪಿ ಬಳಿ ಉತ್ತರ ಇರುವುದಿಲ್ಲ. ಚುನಾವಣೆಯಲ್ಲಿ ಗೆಲುವು ಸಾಧನೆಗಳ ಮೇಲೆ ನಿಂತಿದೆ, ಟೀಕೆಗಳ ಮೇಲಲ್ಲ. ಬಿಜೆಪಿ ಈ ಸತ್ಯವನ್ನು ಅರಿತರೆ, ನವೆಂಬರ್ 14ರ ಫಲಿತಾಂಶ ಎನ್‌ಡಿಎಗೆ ಅನುಕೂಲಕರವಾಗಿ ಇರಬಹುದು. ಇಲ್ಲದಿದ್ದರೆ, ತೇಜಸ್ವಿ ಅವರ ಯುವ ಚೈತನ್ಯಕ್ಕೆ ಮತದಾರರು ಮಣೆ ಹಾಕಬಹುದು. ಚುನಾವಣಾ ಸಭೆಗಳನ್ನು ದುರುಪಯೋಗಪಡಿಸಿಕೊಳ್ಳುವುದು ದೇಶದ ನಾಯಕರಿಗೆ ಶೋಭೆ ಅಲ್ಲ. ರಾಜಕಾರಣಿಗಳು ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯನ್ನು ಅನುಸರಿಸಬೇಕು, ಅವಮಾನಿಸಬಾರದು. ಬಿಹಾರ ಚುನಾವಣೆಯಲ್ಲಿ ಜನರು ಈ ಅವಮಾನವನ್ನು ಗಮನಿಸಿ, ನೈತಿಕ ರಾಜಕಾರಣವನ್ನು ಬೆಂಬಲಿಸಬೇಕು. ಗಾಂಧೀಜಿಯವರ ಮಂಗಗಳು ಸತ್ಯದ ಕಣ್ಣುಗಳಾಗಿರಲಿ – ಕೆಟ್ಟ ರಾಜಕಾರಣವನ್ನು ನೋಡದಂತೆ, ಕೇಳದಂತೆ, ಹೇಳದಂತೆ. ಬಿಹಾರದ ಭವಿಷ್ಯ ಈಗ ಮತದಾರರ ಕೈಯಲ್ಲಿದೆ.

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...