ಯಾವ ಅಬಕಾರಿ ನೀತಿಗಾಗಿ ಕೇಜ್ರೀವಾಲರನ್ನು ಜೈಲಿಗೆ ತಳ್ಳಿತೋ, ಅದೇ ನೀತಿಯನ್ನು ಮುಂದುವರೆಸಿದೆ ಬಿಜೆಪಿ ಸರ್ಕಾರ!

Date:

ದೆಹಲಿಯ ಬಿಜೆಪಿ ಸರ್ಕಾರವು ತನ್ನ ಅಸ್ತಿತ್ವದಲ್ಲಿರುವ ಈ ವರ್ಷ ಮಾರ್ಚ್‌ 31ರಂದು ಮುಕ್ತಾಯಗೊಳ್ಳಬೇಕಿದ್ದ 2020 -21ರ ಅಬಕಾರಿ ನೀತಿಯನ್ನು 2027ರ ಮಾರ್ಚ್‌ 31ರವರೆಗೆ ವಿಸ್ತರಿಸಿದೆ. ಹೊಸ ಅಬಕಾರಿ ನೀತಿಯ ಅನುಮೋದನೆ ಬಾಕಿ ಇರುವ ಕಾರಣ, ಮದ್ಯ ಪೂರೈಕೆಯಲ್ಲಿ ಯಾವುದೇ ಅಡಚಣೆಯಾಗದಂತೆ ತಡೆಯಲು ದೆಹಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಇದು ಹಳೆಯ ಅಬಕಾರಿ ನೀತಿಯ ಅತ್ಯಂತ ದೀರ್ಘ ವಿಸ್ತರಣೆಯಾಗಿದೆ.

ದೆಹಲಿ ಅಬಕಾರಿ ನೀತಿ ಪ್ರಕರಣವು ದೇಶದ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಇದೇ ನೀತಿಗೆ ಸಂಬಂಧಿಸಿದ ಆರೋಪಗಳ ಹಿನ್ನೆಲೆ, ಅರವಿಂದ್ ಕೇಜ್ರಿವಾಲ್ ಹಾಗೂ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಲಾಗಿತ್ತು. ಆದರೀಗ, ಇವರೊಂದಿಗೆ ಇತರೆ 21 ಮಂದಿ ಆಪಾದಿತರನ್ನು ದೆಹಲಿಯ ನ್ಯಾಯಾಲಯ ದೋಷಮುಕ್ತರೆಂದು ಸಾರಿದೆ. ಅಬಕಾರಿ ನೀತಿ ಹಗರಣ ಸಂಬಂಧ ಇವರ ಮೇಲೆ ಹೂಡಲಾಗಿರುವ ಮೊಕದ್ದಮೆಗಳಿಗೆ ಪುರಾವೆಗಳೇ ಇಲ್ಲವೆಂದು ನ್ಯಾಯಾಲಯ ಹೇಳಿದೆ. ಇದೀಗ ಈ ಪ್ರಕರಣ ಭಾರತೀಯ ರಾಜಕೀಯ ಇತಿಹಾಸದಲ್ಲಿ ಒಂದು ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ.

ಹೌದು, ಯಾವ ನೀತಿಯನ್ನು ಅತ್ಯಂತ ‘ಭೀಕರ ಹಗರಣ’ ಎಂದು ಬಿಂಬಿಸಿ, ಆಮ್ ಆದ್ಮಿ ಪಕ್ಷದ ಉನ್ನತ ನಾಯಕರಾದ ಅರವಿಂದ್ ಕೇಜ್ರಿವಾಲ್ ಒಂದು ತಿಂಗಳು ಮತ್ತು ಮನೀಶ್ ಸಿಸೋಡಿಯಾ ಅವರನ್ನು ಒಂದೂವರೆ ವರ್ಷ ಕಾಲ ಜೈಲಿಗೆ ಅಟ್ಟಲಾಯಿತೋ, ಈಗ ಅದೇ ನೀತಿಯನ್ನು ಬಿಜೆಪಿ ನೇತೃತ್ವದ ಸರ್ಕಾರವು ಮತ್ತೊಂದು ವರ್ಷಕ್ಕೆ ವಿಸ್ತರಿಸಿದೆ. ಇದು ಬಿಜೆಪಿ ರಾಜಕೀಯ ನೀತಿಯನ್ನು ಸೂಚಿಸುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ದೆಹಲಿಯ ಬಿಜೆಪಿ ಸರ್ಕಾರವು ತನ್ನ ಅಸ್ತಿತ್ವದಲ್ಲಿರುವ ಈ ವರ್ಷ ಮಾರ್ಚ್‌ 31ರಂದು ಮುಕ್ತಾಯಗೊಳ್ಳಬೇಕಿದ್ದ 2020 -21ರ ಅಬಕಾರಿ ನೀತಿಯನ್ನು 2027ರ ಮಾರ್ಚ್‌ 31ರವರೆಗೆ ವಿಸ್ತರಿಸಿದೆ. ಹೊಸ ಅಬಕಾರಿ ನೀತಿಯ ಅನುಮೋದನೆ ಬಾಕಿ ಇರುವ ಕಾರಣ, ಮದ್ಯ ಪೂರೈಕೆಯಲ್ಲಿ ಯಾವುದೇ ಅಡಚಣೆಯಾಗದಂತೆ ತಡೆಯಲು ದೆಹಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಇದು ಹಳೆಯ ಅಬಕಾರಿ ನೀತಿಯ ಅತ್ಯಂತ ದೀರ್ಘ ವಿಸ್ತರಣೆಯಾಗಿದೆ.

2021ರ ನವೆಂಬರ್‌ನಲ್ಲಿ ದೆಹಲಿ ಅಬಕಾರಿ ನೀತಿಯನ್ನು ಹಿಂದಿನ ಎಎಪಿ ಸರ್ಕಾರ ಜಾರಿಗೆ ತಂದಿತ್ತು. ಮದ್ಯ ಮಾರಾಟ ಮತ್ತು ಖರೀದಿಯನ್ನು ನಿಯಂತ್ರಿಸುವ 2020-21ರ ಅಬಕಾರಿ ನೀತಿಯು, ದೆಹಲಿಯಲ್ಲಿ ಸೆಪ್ಟೆಂಬರ್ 2022ರಲ್ಲಿ ಜಾರಿಯಲ್ಲಿತ್ತು. ಆಗಿನ ಎಎಪಿ ಸರ್ಕಾರವು ರಚಿಸಿ ಜಾರಿಗೆ ತಂದ 2021–22ರ ಅಬಕಾರಿ ನೀತಿಯನ್ನು ಅಕ್ರಮಗಳ ಆರೋಪದ ಹಿನ್ನೆಲೆ 2022ರ ಜುಲೈನಲ್ಲಿ ರದ್ದುಪಡಿಸಲಾಯಿತು. ಸಿಬಿಐ ತನಿಖೆ ಆರಂಭಿಸಿದ ನಂತರ, ಸರ್ಕಾರವು ಸೆಪ್ಟೆಂಬರ್ 2022ರಲ್ಲಿ 2020–21ರ ನೀತಿಗೆ ಮರಳಿತು. ಹೊಸ ನೀತಿಯನ್ನು ರಚಿಸಲಾಗಿದ್ದರೂ, ಸರ್ಕಾರ ಇನ್ನೂ ಅನುಮೋದನೆ ನೀಡಿಲ್ಲ.

ದೆಹಲಿಯಲ್ಲಿ ಮದ್ಯ ಮಾರಾಟ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸುವುದು ಈ ನೀತಿಯ ಪ್ರಮುಖ ಉದ್ದೇಶವಾಗಿತ್ತು. ದೆಹಲಿ ಅಬಕಾರಿ ನೀತಿ ಮದ್ಯ ಮಾರಾಟ ವ್ಯವಸ್ಥೆಯನ್ನು ಖಾಸಗೀಕರಣದ ಮೂಲಕ ಸುಧಾರಿಸಲು ಮತ್ತು ಆದಾಯ ಹೆಚ್ಚಿಸಲು ತರಲಾಗಿತ್ತು. ಆದರೆ, ಅನುಷ್ಠಾನದಲ್ಲಿ ದೋಷಗಳಿವೆ ಎಂಬ ಆರೋಪಗಳಿಂದ ಇದು ದೊಡ್ಡ ರಾಜಕೀಯ–ಕಾನೂನು ವಿವಾದಕ್ಕೆ ಕಾರಣವಾಯಿತು.

ಮೂರು ವರ್ಷಗಳಿಗೂ ಹೆಚ್ಚು ಕಾಲ ಹೊಸ ಅಬಕಾರಿ ನೀತಿ ರಚನೆ ಹಂತದಲ್ಲಿರುವುದರಿಂದ, ದೆಹಲಿ ಸರ್ಕಾರವು ತನ್ನ ಅಸ್ತಿತ್ವದಲ್ಲಿರುವ ಮದ್ಯ ನೀತಿಯನ್ನು ಮತ್ತೊಮ್ಮೆ ವಿಸ್ತರಿಸಿದೆ. ಆಗಸ್ಟ್ 2025ರಲ್ಲಿ ಒಂಬತ್ತು ತಿಂಗಳವರೆಗೆ ವಿಸ್ತರಿಸಲಾದ ಪ್ರಸ್ತುತ ನೀತಿಯು ಮಾರ್ಚ್ 31 ರಂದು ಮುಕ್ತಾಯಗೊಳ್ಳಲಿದೆ. ಮಾರ್ಚ್ ಮಧ್ಯದ ಮೊದಲು ಇದನ್ನು ವಿಸ್ತರಿಸದಿದ್ದರೆ, ರಾಜಧಾನಿಯಲ್ಲಿ ಮದ್ಯ ಪೂರೈಕೆಯಲ್ಲಿ ಅಡ್ಡಿ ಉಂಟಾಗಬಹುದು ಎಂದು ದೆಹಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.

ಈ ನೀತಿಯಲ್ಲಿ ಅಕ್ರಮಗಳಿವೆ ಎಂಬ ಆರೋಪದ ಮೇಲೆಯೂ ದೂಷಿಸಿದ್ದ ಬಿಜೆಪಿಯೇ ಇದೀಗ ಎಎಪಿ ಸರ್ಕಾರ ರೂಪಿಸಿದ್ದ 2021-22ರ ಅಬಕಾರಿ ನೀತಿಯನ್ನು ರದ್ದುಗೊಳಿಸಿದ ನಂತರ ಸೆಪ್ಟೆಂಬರ್ 2022 ರಿಂದ ಪ್ರಸ್ತುತದವರೆಗೂ ಅದೇ ನೀತಿಯನ್ನು ಬಳಸುತ್ತಿದೆ. ಸಿಬಿಐ ತನಿಖೆ ಮತ್ತು ಆಗಿನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವಾರು ಎಎಪಿ ನಾಯಕರ ಬಂಧನದ ನಂತರವೂ, ಬಿಜೆಪಿ ಸರ್ಕಾರವು ಹಳೆಯ ನೀತಿಗೆ ಮರಳಿದೆ. ಇದು ಹೇಗೆ ಸಾಧ್ಯ?

ಈ ಸುದ್ದಿ ಓದಿದ್ದೀರಾ? ಅನ್ಯ ರಾಷ್ಟ್ರಗಳಲ್ಲಿ ಮೂಗು ತೂರಿಸಿದ ಅಮೆರಿಕ ಸೃಷ್ಟಿಸಿದ ಘೋರತೆ ಇದು!

ಇದು ಕೇವಲ ಆಡಳಿತಾತ್ಮಕ ನಿರ್ಧಾರವಾಗಿ ಉಳಿಯದೆ, ಅಧಿಕಾರದ ಹಪಹಪಿಯಲ್ಲಿ ತತ್ವಗಳು ಹೇಗೆ ಬದಲಾಗುತ್ತವೆ ಎಂಬುದಕ್ಕೆ ಕನ್ನಡಿ ಹಿಡಿದಂತಿದೆ.

ಕೇಜ್ರಿವಾಲ್ ಸರ್ಕಾರ ಜಾರಿಗೆ ತಂದಿದ್ದ 2021-22ರ ಹೊಸ ಅಬಕಾರಿ ನೀತಿಯು ಮದ್ಯದ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸಿ, ಸರ್ಕಾರದ ಆದಾಯವನ್ನು ಹೆಚ್ಚಿಸುವ ಉದ್ದೇಶ ಹೊಂದಿತ್ತು. ಆದರೆ, ಇದರಲ್ಲಿ ಭಾರೀ ಪ್ರಮಾಣದ ಕಿಕ್‌ ಬ್ಯಾಕ್‌ ಪಡೆದ ಆರೋಪ ಹೊರಿಸಿ ತನಿಖಾ ಸಂಸ್ಥೆಗಳು ದಾಳಿ ನಡೆಸಿದವು. ಈ ಬೆನ್ನಲ್ಲೇ ಆ ನೀತಿಯನ್ನು ರದ್ದುಗೊಳಿಸಿ, ಮತ್ತೆ 2020-21ರ ಹಳೆಯ ನೀತಿಗೆ ಮರಳಲಾಯಿತು. ವಿಪರ್ಯಾಸವೆಂದರೆ, ಇತ್ತೀಚೆಗೆ ದೆಹಲಿ ನ್ಯಾಯಾಲಯ ಅರವಿಂದ್ ಕೇಜ್ರಿವಾಲ್ ಮತ್ತು ಸಿಸೋಡಿಯಾ ಅವರನ್ನು ಈ ಹಗರಣದ ಆರೋಪದಿಂದ ಸಾಕ್ಷ್ಯಾಧಾರಗಳ ಕೊರತೆ ಎಂಬ ಕಾರಣ ನೀಡಿ ಬಿಡುಗಡೆಗೊಳಿಸಿದೆ. ಒಂದೆಡೆ ನ್ಯಾಯಾಲಯದಲ್ಲಿ ಈ ಆರೋಪಗಳು ಸಾಬೀತಾಗದೆ ಇರುವುದು, ಇನ್ನೊಂದೆಡೆ ದೆಹಲಿಯಲ್ಲಿ ಅಧಿಕಾರ ಹಿಡಿದ ಬಿಜೆಪಿ ಸರ್ಕಾರವು ಅದೇ ವ್ಯವಸ್ಥೆಯನ್ನು 2026-27ನೇ ಸಾಲಿಗೂ ಮುಂದುವರಿಸುತ್ತಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಬಿಜೆಪಿ ಸರ್ಕಾರವು ಹೋಟೆಲ್‌ಗಳು, ಕ್ಲಬ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಹಳೆಯ ನಿಯಮಗಳ ಅಡಿಯಲ್ಲೇ ಪರವಾನಗಿ ನವೀಕರಣಕ್ಕೆ ಅನುಮತಿ ನೀಡಿದೆ. ಮಾತ್ರವಲ್ಲದೆ, ಶುಲ್ಕವನ್ನು ಶೇಕಡಾ 10ರಷ್ಟು ಹೆಚ್ಚಿಸಿದೆ. ‘ಹಗರಣದ ನೀತಿ’ ಎಂದು ತಾವು ಯಾವುದನ್ನು ಕರೆದಿದ್ದರೋ, ಅದರ ಆಧಾರದ ಮೇಲೆ ಸರ್ಕಾರಿ ಬೊಕ್ಕಸಕ್ಕೆ ಹಣ ತುಂಬಿಸಿಕೊಳ್ಳುತ್ತಿರುವುದು ನೈತಿಕತೆಯ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ. ದೆಹಲಿ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಹೊಸ ಮತ್ತು ದೋಷಮುಕ್ತ ನೀತಿಯನ್ನು ರೂಪಿಸುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರೂ, ಪದೇಪದೆ ಹಳೆಯ ವ್ಯವಸ್ಥೆಯನ್ನೇ ವಿಸ್ತರಿಸುತ್ತಿರುವುದು ಆಡಳಿತಾತ್ಮಕ ವೈಫಲ್ಯವೋ ಅಥವಾ ಅದೇ ವ್ಯವಸ್ಥೆಯ ಲಾಭ ಪಡೆಯುವ ತಂತ್ರವೋ?.

ಈ ಇಡೀ ಪ್ರಕ್ರಿಯೆಯನ್ನು ಗಮನಿಸಿದರೆ, ರಾಜಕೀಯ ಪಕ್ಷಗಳು ವಿರೋಧ ಪಕ್ಷದಲ್ಲಿದ್ದಾಗ ಒಂದು ನೀತಿಯನ್ನು ದೇಶದ್ರೋಹ ಅಥವಾ ಭ್ರಷ್ಟಾಚಾರ ಎಂದು ಕರೆಯುತ್ತವೆ. ಆದರೆ, ಅಧಿಕಾರಕ್ಕೆ ಬಂದಾಗ ಅದೇ ನೀತಿಯನ್ನು ಆಡಳಿತಾತ್ಮಕ ಅನಿವಾರ್ಯತೆ ಎಂಬ ಹಣೆಪಟ್ಟಿಯಡಿ ಮುಂದುವರಿಸುತ್ತವೆ. ಕೇಜ್ರಿವಾಲ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಮತ್ತು ಪಕ್ಷದ ವರ್ಚಸ್ಸನ್ನು ಕುಗ್ಗಿಸಲು ಅಬಕಾರಿ ಹಗರಣವನ್ನು ಒಂದು ಅಸ್ತ್ರವಾಗಿ ಬಳಸಿಕೊಂಡ ಬಿಜೆಪಿ, ಈಗ ಅದೇ ಇಲಾಖೆಯಿಂದ ಬರುವ ಸಾವಿರಾರು ಕೋಟಿ ರೂಪಾಯಿ ಆದಾಯವನ್ನು ಕಳೆದುಕೊಳ್ಳಲು ಸಿದ್ಧವಿಲ್ಲದಂತೆ ತೋರುತ್ತಿದೆ. ಇದು ಪ್ರಜಾಪ್ರಭುತ್ವದಲ್ಲಿ ಮತದಾರರಿಗೆ ನೀಡುವ ಭರವಸೆಗಳಿಗೂ ಮತ್ತು ಅಧಿಕಾರಕ್ಕೆ ಬಂದ ಮೇಲೆ ಮಾಡುವ ಕೃತ್ಯಗಳಿಗೂ ಇರುವ ಅಜಗಜಾಂತರ ವ್ಯತ್ಯಾಸ.

ಅಂತಿಮವಾಗಿ, ದೆಹಲಿ ಅಬಕಾರಿ ನೀತಿಯ ಈ ಬೆಳವಣಿಗೆಗಳು ರಾಜಕೀಯದಲ್ಲಿ ಸರಿ-ತಪ್ಪು ಎನ್ನುವುದು ಕೇವಲ ಅಧಿಕಾರ ಯಾರು ಹೊಂದಿದ್ದಾರೆ ಎಂಬುದರ ಮೇಲೆ ನಿರ್ಧರಿಸಲ್ಪಡುತ್ತದೆ ಎಂಬ ಕಹಿ ಸತ್ಯವನ್ನು ಎತ್ತಿ ತೋರಿಸುತ್ತದೆ. ಯಾವ ನೀತಿ ಜನವಿರೋಧಿ ಎಂದು ಪ್ರಚಾರ ಮಾಡಲಾಗಿತ್ತೋ, ಇಂದು ಅದೇ ನೀತಿ ಸರ್ಕಾರದ ಜೀವನಾಡಿಯಾಗಿ ಮುಂದುವರಿಯುತ್ತಿರುವುದು ರಾಜಕೀಯ ವಿಡಂಬನೆಯ ಪರಮಾವಧಿಯಾಗಿದೆ.

ಬಿಜೆಪಿ ಹೊರಗಿದ್ದಾಗ ಆಪ್‌ನ ನೀತಿಯನ್ನು ಹಗರಣ ಎಂದು ಆರೋಪಿಸಿ ಕೇಜ್ರಿವಾಲ್‌ರನ್ನು ಜೈಲಿಗೆ ತಳ್ಳಿತು. ಆದರೆ, ಅಧಿಕಾರಕ್ಕೆ ಬಂದ ನಂತರ, ಹೊಸ ನೀತಿ ತರುವಲ್ಲಿ ವಿಳಂಬವಾಗುತ್ತಿರುವುದರಿಂದ ಅದೇ ಹಳೆಯ ವ್ಯವಸ್ಥೆಯನ್ನು (2020-21 ಮಾದರಿ) ಒಂದು ವರ್ಷಕ್ಕೂ ಹೆಚ್ಚು ಕಾಲ ಮುಂದುವರಿಸುತ್ತಿದೆ. ಇದು ರಾಜಕೀಯದಲ್ಲಿ ಸಾಮಾನ್ಯವಾಗಿ ಕಾಣುವ ದ್ವಂದ್ವ. ಅಧಿಕಾರದ ಹೊರಗೆ ಒಂದು ನಿಲುವು, ಒಳಗೆ ಮತ್ತೊಂದು. ಪ್ರಾಯೋಗಿಕವಾಗಿ ನೀತಿ ಬದಲಾವಣೆ ಸುಲಭವಲ್ಲ ಎಂಬುದು ಸತ್ಯವಾದರೂ, ಇದು ಆರೋಪಗಳು ರಾಜಕೀಯ ಪ್ರೇರಿತವಾಗಿದ್ದವು ಎಂಬ ಭಾವನೆಯನ್ನು ಬಲಪಡಿಸುತ್ತದೆ. ಇದು ಭಾರತೀಯ ರಾಜಕೀಯದ ಒಂದು ಸಾಮಾನ್ಯ ಚಿತ್ರಣವಾಗಿದೆ.

e057b508e9e1b164fadd3c3edb023f5214f4d0a6d12066a30e302f9e3b0f6f24?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...