ಇರಾನ್‌-ಕತಾರ್‌ ಅನಿಲ ಘಟಕಗಳಿಗೆ ಹತ್ತಿದ ಕಿಚ್ಚು: ಭಾರತಕ್ಕೂ ತಟ್ಟಲಿದೆಯಾ ಬಿಸಿ?

Date:

ಸಿಲಿಂಡರ್‌ ಅಭಾವ ಉಂಟು ಮಾಡಿರುವ ಒತ್ತಡ ಕಡಿಮೆ ಮಾಡಲು ಪಿಎನ್‌ಜಿ ಸಂಪರ್ಕಗಳನ್ನು ಹೊಂದುವಂತೆ ಸರ್ಕಾರ ಜನರಿಗೆ ವಿನಂತಿಸಿದೆ. ಪಿಎನ್‌ಜಿ ಸಂಪರ್ಕ ಪಡೆಯುವುದು ಸರ್ಕಾರ ಸೂಚಸಿದಷ್ಟು ಸುಲಭದ ಪ್ರಕ್ರಿಯೆಯ ಕೇಳಿದರೆ… ಅಲ್ಲ. ನೀವು ಪಿಎನ್‌ಜಿಗೆ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿ ಮೂರು ತಿಂಗಳು ಕಾಯಬೇಕು. ಒಂದು ಸಂಪರ್ಕಕ್ಕೆ 6,000 ದಿಂದ 9,000 ರೂ. ವೆಚ್ಚ ತಗುಲುತ್ತದೆ.

ʼಅಮ್ಮ ಅಪ್ಪ ಜಗಳದಲಿ ಕೂಸು ಬಡವಾಯ್ತುʼ ಎಂಬ ಗಾದೆ ಪ್ರಸ್ತುತ ಅಮೆರಿಕ,ಇಸ್ರೇಲ್‌ ಇರಾನ್  ಸಂಘರ್ಷದಿಂದ ಪೆಟ್ಟು ತಿಂದ ಜಗತ್ತಿನೆಲ್ಲಾ ರಾಷ್ಟ್ರಗಳ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ. ಅಮೆರಿಕ ಮತ್ತು ಇಸ್ರೇಲ್‌ ತಮ್ಮ ಬೇಳೆ ಬೇಯಿಸಿಕೊಳ್ಳಲು ಉರಿಸಿದ ಕಿಚ್ಚು ಈಗ ಭಾರತದ ಪ್ರತಿ ಅಡುಗೆ ಮನೆಗೂ ಆವರಿಸಿದೆ.‌ ಇರಾನಿನ ಬೃಹತ್‌ ತೈಲ ಘಟಕ ಸೌತ್‌ ಪಾರ್ಸ್‌ ಮೇಲೆ ಇಸ್ರೇಲ್‌ ದಾಳಿ ನಡೆಸಿದರ ಪ್ರತಿಕ್ರೆಯೆಯಾಗಿ ಇರಾನ್‌ ಕತಾರ್‌ನ ರಾಸ್‌ ಲಫಾನ್‌ ತೈಲ ಘಟಕದ ಮೇಲೆ ಬಾಂಬ್‌ ದಾಳಿ ಮಾಡಿದೆ. ಗಲ್ಫ್‌ನಲ್ಲಿ ತೈಲ ಘಟಕಗಳು ಹೊತ್ತುರಿದರೆ ಅದರ ಬಿಸಿ ಜಗತ್ತಿನಾದ್ಯಂತ ತಟ್ಟಲಿದೆ.

ಅಮೆರಿಕ ಇರಾನಿನ ಅತಿದೊಡ್ಡ ತೈಲ ಘಟಕ ಸೌತ್‌ ಪಾರ್ಸ್‌ನ ಮೇಲೆ ಇಸ್ರೇಲ್‌ ನಡೆಸಿದ ದಾಳಿಯ ಕುರಿತು ತನ್ನ ಕೈವಾಡವಿಲ್ಲ, ಇದು ಇಸ್ರೇಲ್‌ ತೆಗೆದುಕೊಂಡ ನಿರ್ಧಾರವೆಂದು ಹೇಳಿಕೆ ನೀಡಿದೆ. ಇನ್ನು ಇರಾನ್‌ ತನಗಾದ ನಷ್ಟದ ಪ್ರತೀಕಾರವಾಗಿ ಮಧ್ಯಪ್ರಾಚ್ಯದ ಎಲ್ಲಾ ತೈಲ ಘಟಕಳ ಮೇಲೂ ಭೀಕರ ದಾಳಿ ಮಾಡುವುದಾಗಿ ಬೆದರಿಕೆಯೊಡ್ಡಿದೆ. ಕತಾರ್‌ನ ನೈಸರ್ಗಿಕ ಅನಿಲ ಘಟಕರಾಸ್‌ ಲಫಾನ್‌ನ ಮೇಲೆ ದಾಳಿ ಮಾಡಿದ ಇರಾನಿಗೆ ಅಮೆರಿಕ ಕತಾರ್‌ನ ಅನಿಲ ಸಂಸ್ಕರಣ ಘಟಕದ ಮೇಲೆ ದಾಳಿ ಮಾಡಿದರೆ ಇರಾನ್‌ ಅಮೆರಿಕದ ನೇರ ದಾಳಿಗೆ ತುತ್ತಾಗಬಹುದು ಎಂದು ಎಚ್ಚರಿಕೆ ನೀಡಿದೆ. ಜಗತ್ತಿನ ಅತಿ ದೊಡ್ಡ ತೈಲ ಘಟಕಗಳಿಗೆ ಸಂಭವಿಸಿದ ಈ ಹಾನಿ ವಿಶ್ವಾದ್ಯಂತ ತೈಲ ದರ ಏರಿಕೆಯಾಗಲು ಕಾರಣವಾಗಲಿದೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕತಾರ್‌ನ ನೈಸರ್ಗಿಕ ಅನಿಲ ಘಟಕ ಬಾಂಬ್‌ಗೆ ಆಹುತಿ: ಭಾರತಕ್ಕೇನು ನಷ್ಟ?

ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಆರಂಭಗೊಂಡಾಗಿನಿಂದ ಯುದ್ಧ ನಿರತ ದೇಶಗಳ ಪರ ವಿರೋಧ ಬಣಗಳು, ಭಾರತದ ಮಾಧ್ಯಮಗಳು ಯುದ್ಧವನ್ನು ವೈಭವೀಕರಿಸಿ ಮಾತನಾಡುತ್ತಿವೆ ಆದರೆ, ಕೊಲ್ಲಿಯಲ್ಲಿ ನಡೆಯುವ ಸಂಘರ್ಷಗಳು ಜಗತ್ತಿನ ಮೇಲೆ ಬೀರುವ ಭೀಕರ ಪರಿಣಾಮಗಳನ್ನು ತೆರೆಮರೆ ಮಾಡಿವೆ. ಭಾರತ ಎರಡು ವಾರಗಳಿಗೆ ಮಾತ್ರ ಸಾಕಾಗುವಷ್ಟು ಎಲ್‌ಪಿಜಿ,ಎಲ್‌ಎನ್‌ಜಿ ಅನಿಲ ದಾಸ್ತಾನು ಮಾಡಿಕೊಳ್ಳುತ್ತದೆ. ಮತ್ತು ಬಹುಪಾಲು ತೈಲ ಹಾಗೂ ನೈಸರ್ಗಿಕ ಅನಿಲಗಳಿಗೆ ಕೊಲ್ಲಿ ರಾಷ್ಟ್ರಗಳನ್ನೇ ಆಧರಿಸಿರುವುದರಿಂದ ಈ ಪ್ರದೇಶಗಳಲ್ಲಿ ಉಂಟಾಗುವ ಸಣ್ಣ ಸಂದಿಗ್ದವು ದೇಶದ ಅನಿಲ ಹಾಗೂ ತೈಲ ದಾಸ್ತಾವೇಜಿನ ಮೇಲೆ ನೇರ ಪರಿಣಾಮ ಬೀರಲಿದೆ.

ಭಾರತದ 20% ನೈಸರ್ಗಿಕ ಅನಿಲ ಬೇಡಿಕೆಯನ್ನು ಕತಾರ್‌ ಪೂರೈಸುತ್ತಿದೆ, ಭಾರತ 50% ನೈಸರ್ಗಿಕ ಅನಿಲವನ್ನು ಹೊರಗಿನಿಂದ ತರಿಸಿಕೊಳ್ಳುತ್ತಿದೆ. 40% ಎಲ್‌ಎನ್‌ಜಿಯನ್ನು ಕತಾರ್‌ನಿಂದಲೇ ಖರೀದಿಸುತ್ತಿದೆ. ಗುರುವಾರ ಇರಾನ್‌ ಬಾಂಬಿಗೆ ಭಸ್ಮವಾದ ಕತಾರ್‌ನ ರಾಸ್‌ ಲಫಾನ್‌ ವಿಶ್ವದ ಬೃಹತ್‌ ತೈಲ ಪೂರೈಕಾ ಘಟಕವಾಗಿತ್ತು. ಭಾರತದ ಎಲ್‌ಎನ್‌ಜಿ ಆಮದಿನ ಶೇಕಡ 20ರಷ್ಟು ಕತಾರ್ ಪೂರೈಸುತಿತ್ತು. ಇರಾನ್ ದಾಳಿಯಿಂದ ಕತಾರ್​ಗೆ ವಾರ್ಷಿಕ ಸುಮಾರು 20 ಬಿಲಿಯನ್ ಡಾಲರ್​​ನಷ್ಟು ಆದಾಯ ನಷ್ಟವಾಗುವ ಸಾಧ್ಯತೆ ಇದೆ. ಹಾಗೆಯೇ ವಾರ್ಷಿಕವಾಗಿ ಸುಮಾರು 12.8 ಮಿಲಿಯನ್ ಟನ್ ಎಲ್​ಎನ್​ಜಿ ಪೂರೈಕೆಯಲ್ಲಿ ಮುಂದಿನ ಮೂರರಿಂದ ಐದು ವರ್ಷಗಳವರೆಗೆ ವ್ಯತ್ಯಯಾಗಬಹುದು ಎಂದು ಅಂದಾಜಿಸಲಾಗಿದೆ. ಯುರೋಪ್‌ ಹಾಗೂ ಏಷ್ಯಾದ ಬಹುತೇಕ ರಾಷ್ಟ್ರಗಳು ಈ ದಾಳಿಯ ಪರಿಣಾಮ ಎದುರಿಸಲಿವೆ.

ಭಾರತ ಸರ್ಕಾರ ONGC ಹಾಗೂ OIL INDIA ತೈಲ ಕಂಪನಿಗಳ ಮೇಲೆ ಈ ಮಾರ್ಚ್‌ ಅಂತ್ಯದವರೆಗೂ ತೈಲ ದರ ಬ್ಯಾರೆಲ್‌ಗೆ 100 ಡಾಲರ್‌ಗಿಂತ ಕಡಿಮೆಯಾಗದೆ ಇದ್ದರೆ ವಿಂಡ್‌ಫಾಲ್‌ ಟ್ಯಾಕ್ಸ್‌ ವಿಧಿಸಲಾಗುವುದು ಎಂದು ಹೇಳಿದೆ. ಇದು ದೇಶದ ಪ್ರಜೆಗಳಿಗೆ ಅಡ್ಡೇಟಿನ ಮೇಲೆ ಗಿಡ್ಡೇಟು ಬಿದ್ದಂತಾಗುತ್ತದೆ. ಬೃಹತ್‌ ತೈಲ ಹಾಗೂ ಅನಿಲ  ಘಟಕಗಳ ನೆಲಸಮದ ನಂತರ  ತೈಲ ದರ ಬ್ಯಾರೆಲ್‌ಗೆ 60 ಡಾಲರ್‌  ಇದ್ದ ತೈಲ ದರ 120 ಡಾಲರ್‌ಗೆ ಏರಿಕೆಯಾಗಿದೆ. ಬೃಹತ್ ಅನಿಲ ಘಟಕಗಳ ನೆಲಸಮದ ನಂತರ ಏರುತ್ತಿರವ ಅನಿಲ ದರಗಳನ್ನು ನಿಭಾಯಿಸಲು ಸರ್ಕಾರ ವಿಫಲವಾದಾಗ ಸಹಜವಾಗಿಯೇ ಆ ಹೊರೆಯನ್ನು ಗ್ರಾಹಕರ ಮೇಲೆ ಹೊರಿಸುತ್ತದೆ. ಸಧ್ಯದ ಪರಿಸ್ಥಿತಿಯಲ್ಲಿ ಎಲ್‌ಪಿಜಿ ಸಿಗದೆ ತತ್ತರಿಸಿದ ಜನರ ಮೇಲೆ ಸುಂಕ ಹೆಚ್ಚಿಸಿ  ಬೆಂಕಿಯಿಂದ ಬಾಂಡಲೆಗೆ ದೂಡಲಿದೆ ಸರ್ಕಾರ.

ಅಡುಗೆ ಅನಿಲ ಹಾಗೂ ತೈಲ ಬೆಲೆಗಳು ಮಾಮೂಲಿ ಸ್ಥಿತಿಗೆ ಬರಬಹುದು ಎಂದು ನಿರೀಕ್ಷೆಯಲ್ಲಿದ್ದಾಗಲೇ ಇರಾನ್‌ ನಡೆಸುತ್ತಿರುವ ಪ್ರತೀಕಾರದ ಹೊಸ ದಾಳಿಗಳು ಹಲವು ರಾಷ್ಟ್ರಗಳಿಗೆ ದುಃಸ್ವಪ್ನದಂತೆ ಕಾಡುತ್ತಿದೆ. ಈ ಸರಣಿ ದಾಳಿಗಳನ್ನು ಇರಾನ್‌ ಇಲ್ಲಿಗೆ ಕೈಬಿಡುವ ಲಕ್ಷಣಗಳಿಲ್ಲ. ದಿನಕ್ಕೆ ಶೇಕಡ 88 ಲಕ್ಷಕ್ಕೆ ಏರಿದ್ದ ತರಾತುರಿಯ ಬುಕಿಂಗ್‌ಗಳ ಸಂಖ್ಯೆ ಬುಧವಾರ 57ಕ್ಕೆ ಇಳಿದಿದೆ. ಮಧ್ಯಪ್ರಾಚ್ಯ ಸಂಘರ್ಷ ಆರಂಭವಾಗುವ ಮೊದಲು ದೇಶದಲ್ಲಿ 55.77 ಲಕ್ಷ ಬುಕಿಂಗ್‌ ಆಗುತ್ತಿತ್ತು.

ದೇಶದಲ್ಲಿ 33 ಕೋಟಿ ಕುಟುಂಬಗಳು ಅಡುಗೆಗೆ ಎಲ್‌ಪಿಜಿ ಅವಲಂಬಿಸಿವೆ. ಒಂದೂವರೆ ಕೋಟಿ ಮನೆಗಳು ಕೊಳವೆಗಳ ಮೂಲಕ ಸರಬರಾಜಾಗುವ ಪಿಎನ್‌ಜಿ ಸಂಪರ್ಕ ಹೊಂದಿವೆ. 21 ದಿನಗಳಿಂದ  ತೈಲ ಹಾಗೂ ಅನಿಲ ಘಟಕಗಳ ಮೇಲೆ ನಡೆಯುತ್ತಿರುವ ನಿರಂತರ ದಾಳಿ ಪ್ರತಿದಾಳಿ ತಂದೊಡ್ಡುವ ಬಿಕ್ಕಟ್ಟುಗಳು ಇಂಧನ ಆಮದಿನಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತದಂತಹ ದೇಶ ಸಹಜ ಸ್ಥಿತಿಗೆ ಮರಳಲು ಇನ್ನೂ ಹಲವು ವರುಷಗಳೇ ಹಿಡಿಯುತ್ತವೆ ಎಂಬುದು ತಜ್ಞರ ಅಭಿಪ್ರಾಯ.

ಸಿಲಿಂಡರ್‌ ಅಭಾವ ಉಂಟು ಮಾಡಿರುವ ಒತ್ತಡ ಕಡಿಮೆ ಮಾಡಲು ಪಿಎನ್‌ಜಿ ಸಂಪರ್ಕಗಳನ್ನು ಹೊಂದುವಂತೆ ಸರ್ಕಾರ ಜನರಿಗೆ ವಿನಂತಿಸಿದೆ. ಪಿಎನ್‌ಜಿ ಸಂಪರ್ಕ ಪಡೆಯುವುದು ಸರ್ಕಾರ ಸೂಚಿಸಿದಷ್ಟು ಸುಲಭದ ಪ್ರಕ್ರಿಯೆಯ ಕೇಳಿದರೆ… ಅಲ್ಲ. ನೀವು ಪಿಎನ್‌ಜಿ ಗೆ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿ ಮೂರು ತಿಂಗಳು ಕಾಯಬೇಕು. ಒಂದು ಸಂಪರ್ಕಕ್ಕೆ 6000 ದಿಂದ 9000 ವೆಚ್ಚ ತಗಲುತ್ತದೆ. ಎಲ್‌ಪಿಜಿ ಅಥವಾ ಪಿಎನ್‌ಜಿ ಎರಡರಲ್ಲಿ ಯಾವುದಾದರೂ ಒಂದು ಸಂಪರ್ಕ ಹೊಂದಲು ಮಾತ್ರ ಅವಕಾಶವಿದೆ. ಇನ್ನೂ ಪಿಎನ್‌ಜಿ ಅನಿಲವು ಸಹ ಬಹುಪಾಲು ಬೇರೆ ರಾಷ್ಟ್ರಗಳಿಂದಲೇ ಆಮದು ಮಾಡಿಕೊಳ್ಳಬೇಕಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಎಲ್‌ಪಿಜಿಯ ಜೊತೆಗೆ ಪಿಎನ್‌ಜಿಯ ಕೊರತೆಯು ಭಾರತವನ್ನು ಬಾಧಿಸಲಿದೆ.

WhatsApp Image 2026 03 09 at 18.17.26
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...