ಕಾನ್ಶಿರಾಮ್ ನೆನಪು | ಬಿಎಸ್‌ಪಿ ನೇತಾರ ಹೇಳಿದ್ದ Pen and Cap ಕತೆ ಏನು?

Date:

ಪಂಜಾನ್‌ನಲ್ಲಿ ಹುಟ್ಟಿದ್ದ ಕಾನ್ಸಿರಾಮ್ ಅವರು, ತಮ್ಮದೇ ರಾಜ್ಯವನ್ನು ರಾಜಕೀಯ ಕ್ಷೇತ್ರವಾಗಿ ಆಯ್ಕೆ ಮಾಡಲಿಲ್ಲ. ಅಂಬೇಡ್ಕರ್ ಅವರ ಕರ್ಮಭೂಮಿ ಮಹಾರಾಷ್ಟ್ರದಲ್ಲಿ ರಾಜಕೀಯ ದೀಕ್ಷೆ ಪಡೆದರೂ, ಆ ರಾಜ್ಯವನ್ನೂ ರಾಜಕೀಯ ನೆಲೆ ಮಾಡಿಕೊಳ್ಳಲಿಲ್ಲ. ಉತ್ತರ ಪ್ರದೇಶವನ್ನು ಕಾರ್ಯಕ್ಷೇತ್ರವಾಗಿ ಆರಿಸಿಕೊಂಡರು.

ಎಂಬತ್ತು-ತೊಂಬತ್ತರ ದಶಕದ ರಾಜಕಾರಣದಲ್ಲಿ ಬಹುಜನ ಸಮಾಜದ ಹೊಸ ಅಲೆಯೊಂದನ್ನು ಸೃಷ್ಟಿ ಮಾಡಿದ್ದ ಕಾನ್ಶಿರಾಮ್ ಅವರು ನಮ್ಮನ್ನೆಲ್ಲ ಅಗಲಿ ಇಂದಿಗೆ (ಅಕ್ಟೋಬರ್ 9) 19 ವರ್ಷಗಳು ಕಳೆದಿವೆ. ಕಾನ್ಶಿರಾಮ್ ಅವರು ಪ್ರಖರ ಪ್ರಾಯೋಗಿಕ ಅಂಬೇಡ್ಕರ್ ವಾದಿ ಮತ್ತು ರಾಜಕೀಯ ಮುತ್ಸದ್ದಿಯಾಗಿದ್ದವರು. ಕಾನ್ಶಿರಾಮ್ ಅವರನ್ನು ವಿಶ್ವದ ಕ್ರಾಂತಿಕಾರಿ ಚಿಂತಕರು ಮತ್ತು ಬುದ್ಧಿಜೀವಿಗಳ ಸಾಲಿನಲ್ಲಿಟ್ಟು ಅರ್ಥಮಾಡಿಕೊಳ್ಳುವುದು ಇಂದಿನ ಅಗತ್ಯ. ಅಷ್ಟೇ ಅಲ್ಲ, ಕಾನ್ಶಿರಾಮ್ ಎಂಬ ವಿಶಿಷ್ಟ ವಿದ್ಯಮಾನವನ್ನು ಆಳವಾಗಿ ಅರಿಯುವ ಅಗತ್ಯವಿದೆ.

ಪಂಜಾಬ್‌ನಲ್ಲಿ ಹುಟ್ಟಿದ್ದ ಕಾನ್ಶಿರಾಮ್‌ರ ಪೂರ್ವಿಕರು ಮೂಲತಃ ಚಮ್ಮಾರ ಜಾತಿಯಿಂದ ಸಿಖ್ ಧರ್ಮಕ್ಕೆ ಸೇರಿದ್ದರು. ಹೀಗಾಗಿ, ಕಾನ್ಶಿರಾಮ್ ಅವರಿಗೆ ಅಷ್ಟಾಗಿ ಅಸ್ಪೃಶ್ಯತೆಯ ಭೀಕರ ಅನುಭವವಾಗಲಿಲ್ಲ. ಆದರೂ ಅವರಿಗೆ ಜಾತಿಯ ಕರಿನೆರಳು ಆಗಾಗ ಹಾಯುತ್ತಲೇ ಇತ್ತು.  ಅಂಬೇಡ್ಕರ್ ಪುಸ್ತಕಗಳನ್ನು ಆಳವಾಗಿ ಗ್ರಹಿಸಿ, ಸುತ್ತಣ ಸಮಾಜವನ್ನು ನೋಡಿ ಜಾತಿ ಮೂಲದ ದಮನಗಳನ್ನು ಅರಿಯತೊಡಗಿದರು. 

ಅಂಬೇಡ್ಕರ್ ಚಿಂತನೆಗಳನ್ನು ಅಧಿಕಾರ ರಾಜಕಾರಣದ ನೆಲೆಯಲ್ಲಿ ವಿಸ್ತರಿಸಿದ ಕಾನ್ಶಿರಾಮರನ್ನು ಅಭಿಮಾನಿಗಳು ಪ್ರೀತಿಯಿಂದ ದಾದಾಸಾಹೇಬ್ ಎನ್ನುತ್ತಿದ್ದರು. 3 ವರ್ಷಗಳ ಕಾಲ ‘ಮಿದುಳು ಸ್ಟ್ರೋಕ್‌’ನಿಂದ ಬಳಲಿದ ಮಾನ್ಯವರ್ ಕಾನ್ಶಿರಾಮ್ 2006ರ ಅಕ್ಟೋಬರ್ 9ರಂದು ನಿಧನರಾದರು. ಅಷ್ಟು ಹೊತ್ತಿಗೆ ಭಾರತದ ರಾಜಕಾರಣದಲ್ಲಿ ಕಾನ್ಶಿರಾಮ್ ಹೆಜ್ಜೆಗುರುತುಗಳು ಸ್ಪಷ್ಟವಾಗಿ ಒಡಮೂಡಿದ್ದವು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಾನ್ಶಿರಾಮ್ ಅವರು ಹುಟ್ಟಿದ್ದು ಪಂಜಾಬ್‌ನಲ್ಲಿ, ರಾಜಕೀಯ ದೀಕ್ಷೆ ಪಡೆದದ್ದು ಪುಣೆಯಲ್ಲಿ, ರಾಜಕೀಯ ಕರ್ಮಭೂಮಿಯಾಗಿ ಆರಿಸಿಕೊಂಡು ಕೆಲಸ ಆರಂಭಿಸಿದ್ದು ಉತ್ತರ ಪ್ರದೇಶದಲ್ಲಿ. 30%ರಷ್ಟು ಪರಿಶಿಷ್ಟ ಜಾತಿ ಜನಸಂಖ್ಯೆ ಇರುವ ಪಂಜಾನ್‌ನಲ್ಲಿ ಹುಟ್ಟಿದ್ದ ಕಾನ್ಸಿರಾಮ್ ಅವರು, ತಮ್ಮದೇ ರಾಜ್ಯವನ್ನು ರಾಜಕೀಯ ಕ್ಷೇತ್ರವಾಗಿ ಆಯ್ಕೆ ಮಾಡಲಿಲ್ಲ. ಅಂಬೇಡ್ಕರ್ ಅವರ ಕರ್ಮಭೂಮಿ ಮಹಾರಾಷ್ಟ್ರದಲ್ಲಿ ರಾಜಕೀಯ ದೀಕ್ಷೆ ಪಡೆದರೂ, ಆ ರಾಜ್ಯವನ್ನೂ ರಾಜಕೀಯ ನೆಲೆ ಮಾಡಿಕೊಳ್ಳಲಿಲ್ಲ. ಈ ಬಗ್ಗೆ ಹಲವು ಪ್ರಶ್ನೆಗಳು ಮೂಡಿದ್ದವು. ಈ ಪ್ರಶ್ನೆಗಳಿಗೆ ಅವರ ರಾಜಕೀಯ ಬದುಕಿನ ಘಟನಾವಳಿಗಳಲ್ಲಿಯೇ ಉತ್ತರ ಇದೆ.

ಪಂಜಾಬ್‌ನಲ್ಲಿ ಪರಿಶಿಷ್ಟ ಜಾತಿಯವರು 30% ಇದ್ದರೂ, ಕಾನ್ಸಿರಾಮ್ ಅವರ ಚಮ್ಮಾರ ಜಾತಿ ಜನಸಂಖ್ಯೆ ಕಡಿಮೆ. ಉತ್ತರಪ್ರದೇಶದಲ್ಲಿ 21%ರಷ್ಟು ಮಾತ್ರವೇ ಪರಿಶಿಷ್ಟ ಜಾತಿಯವರಿದ್ದರೂ ಚಮ್ಮಾರ ಜಾತಿ ಜನಸಂಖ್ಯೆ 11% ಇತ್ತು. ತನ್ನ ರಾಜಕೀಯ ಪ್ರಯೋಗಕ್ಕೆ ಉತ್ತರಪ್ರದೇಶವನ್ನೇ ಆಯ್ಕೆ ಮಾಡಿಕೊಳ್ಳಲು ಅವರೊಳಗಿನ ಈ ಜಾತಿ ಗಣಿತವೂ ಒಂದು ಮುಖ್ಯ ಕಾರಣ.

ಕಾನ್ಸಿರಾಮ್ ರಿಪಬ್ಲಿಕನ್ ಪಕ್ಷದ ಜೊತೆ ಗುರುತಿಸಿಕೊಂಡಿದ್ದರು. ಆದರೆ, ಆ ಪಕ್ಷದ ದಲಿತ ಕೇಂದ್ರಿತ ರಾಜಕಾರಣ ಬಹುದೂರ ಸಾಗಲಾರದು ಎಂದು ಅವರಿಗೆ ಅನಿಸಿತ್ತು. ಆಗಲೇ ಅವರೊಳಗೆ ಮೂಡಿದ್ದ ‘ಬಹುಜನರ’ ಚಿತ್ರ ಸ್ಪಷ್ಟವಾಗಿತ್ತು. ಅವರು ಪ್ರಾರಂಭದಲ್ಲಿ ಕಟ್ಟಿದ ‘ಅಖಿಲ ಭಾರತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದ ನೌಕರರ ಒಕ್ಕೂಟ, ಅದರ ನಂತರ ಸ್ಥಾಪಿಸಿದ್ದ ದಲಿತ್ ಶೋಷಿತ್ ಸಮಾಜ ಸಂಘರ್ಷ ಸಮಿತಿ ಮತ್ತು ಕೊನೆಗೆ ಸ್ಥಾಪಿಸಿದ ಬಹುಜನ ಸಮಾಜ ಪಕ್ಷ ಕೇವಲ ದಲಿತ ಕೇಂದ್ರಿತ ಸಂಘಟನೆಗಳಾಗಿರಲಿಲ್ಲ.

ಬಿಎಸ್ ಪಿಯ ಬ್ಯಾನರ್, ಪೋಸ್ಟರ್, ಇಲ್ಲವೇ ಲೆಟರ್ ಹೆಡ್ ಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೊತೆಯಲ್ಲಿ ಜ್ಯೋತಿಬಾ ಪುಲೆ, ಸಾಹುಮಹಾರಾಜ್, ಪೆರಿಯಾರ್ ಮತ್ತು ನಾರಾಯಣ ಗುರುಗಳ ಭಾವಚಿತ್ರ ಅಚ್ಚುಹಾಕಿಸುವುದನ್ನು ಕಡ್ಡಾಯಗೊಳಿಸಿದ್ದರು.

ದೇಶದ ಜಾತಿಗಳ ಗುಣ-ಸ್ವಭಾವಗಳನ್ನು ಅವರಷ್ಟು ಸ್ಪಷ್ಟವಾಗಿ ಅರ್ಥಮಾಡಿಕೊಂಡ ರಾಜಕೀಯ ನಾಯಕರು ಕಡಿಮೆ. ಜಾತಿ ವಿನಾಶವೇ ಅಂಬೇಡ್ಕರ್ ಹೋರಾಟದ ಮೂಲ ಉದ್ದೇಶವಾಗಿದ್ದರೆ, ಕಾನ್ಸಿರಾಮ್ ‘ಜಾತಿ ರಹಿತ ಸಮಾಜ ನಿರ್ಮಾಣವಾಗುವವರೆಗೆ ಜಾತಿಯನ್ನು ದಲಿತ ರಾಜಕಾರಣದ ಅಸ್ತ್ರವಾಗಿ ಬಳಸಿದರೆ ತಪ್ಪಿಲ್ಲ’ ಎಂದು ವಾದಿಸುತ್ತಿದ್ದರು.

ಕಾನ್ಸಿರಾಮ್ ಅವರು ತಮ್ಮ ಚಳುವಳಿಯಲ್ಲಿ ದಲಿತ ಮತ್ತು ಶೋಷಿತ ಸಮುದಾಯಗಳ ಉದ್ಧಾರಕ್ಕಾಗಿ ‘ಪೆನ್‌ v/s ಕ್ಯಾಪ್’ ತತ್ವವನ್ನು ಪ್ರತಿಪಾದಿಸಿದ್ದರು. ಇದು ಅವರ ಚಳುವಳಿಯ ಪ್ರಮುಖ ಅಂಶವೂ ಆಗಿತ್ತು. ಪೆನ್ ಎಂಬುದು ಶಿಕ್ಷಣವನ್ನೂ, ಕ್ಯಾಪ್ ಎಂಬುದು ರಾಜಕೀಯ ಶಕ್ತಿಯನ್ನು ಧ್ವನಿಸುತ್ತಿದ್ದವು.

ಪೆನ್: ಶಿಕ್ಷಣ, ಜ್ಞಾನ ಮತ್ತು ಸರ್ಕಾರಿ ಉದ್ಯೋಗಗಳ ಸೂಚಕವಾಗಿತ್ತು. ಕಾನ್ಶಿರಾಮ್ ಪ್ರಕಾರ, ಶಿಕ್ಷಿತ ದಲಿತರು ಐಎಎಸ್‌, ಐಪಿಎಸ್‌ ರೀತಿಯ ಸರ್ಕಾರಿ ಉದ್ಯೋಗಗಳಲ್ಲಿ ಇದ್ದರೂ, ಅವರು ‘ಪೆನ್’ನ ಶಕ್ತಿಯನ್ನು ಸಂಪೂರ್ಣವಾಗಿ ಹೊಂದಿರುವುದಿಲ್ಲ. ಯಾಕೆಂದರೆ ನಿರ್ಧಾರದ ಅಧಿಕಾರ ಉಚ್ಚವರ್ಣ ಅಂದರೆ, ಬ್ರಾಹ್ಮಣರ ಕೈಯಲ್ಲಿರುತ್ತದೆ. ದಲಿತ ಅಧಿಕಾರಿಗಳು ತಮ್ಮ ಸಮುದಾಯಕ್ಕಾಗಿ ಬದಲಾವಣೆ ತರಲು ಸಾಧ್ಯವಾಗುವುದಿಲ್ಲ. ಅವರು ಬ್ರಾಹ್ಮಣರ ಅಧಿಕಾರಿಗಳು ಮತ್ತು ಆಳುವವರ ಕೈಗೊಂಬೆ ಆಗಿ ಬದಲಾಗುತ್ತಾರೆ.

ಕ್ಯಾಪ್: ರಾಜಕೀಯ ಶಕ್ತಿ, ನಾಯಕತ್ವ ಮತ್ತು ಚುನಾಯಿತ ನಿರ್ಧಾರಗಳನ್ನು ಸೂಚಿಸುತ್ತದೆ. ಇದು ದಲಿತ ಮತ್ತು ಬಹುಜನ್ ಸಮುದಾಯಗಳು ರಾಜಕೀಯ ಶಕ್ತಿಯನ್ನು ಪಡೆಯಬೇಕು. ಉನ್ನತ ಸರ್ಕಾರಿ ಹುದ್ದೆಗಳನ್ನು ತಳ ಸಮುದಾಯದವರು ಹೊಂದಿದ್ದರೂ, ಅವರು ಮೇಲ್ಜಾತಿಯ ನಿಯಂತ್ರಣಕ್ಕೆ ಒಳಪಡುತ್ತಾರೆ. ಆದರೆ, ನಾವು ರಾಜಕೀಯ ಅಧಿಕಾರವನ್ನು ಪಡೆದರೆ, ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂಬುದು ಕಾನ್ಸಿರಾಮ್ ಅವರ ವಾದವಾಗಿತ್ತು.

1995ರಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಯಾದ ಕಾನ್ಶಿರಾಮ್ ಅವರ ಶಿಷ್ಯೆ ಮಾಯಾವತಿ, ತಮ್ಮ ಚೊಚ್ಚಲ ಬಜೆಟ್‌ನಲ್ಲಿ 27%ರಷ್ಟು ಹಣವನ್ನು ಹಿಂದುಳಿದ ಜಾತಿಗಳಿಗೆ ಮೀಸಲಿಟ್ಟಿದ್ದರು. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಎಲ್ಲ ಸೌಲಭ್ಯಗಳನ್ನು ಮುಸ್ಲಿಮ್ ವಿದ್ಯಾರ್ಥಿಗಳಿಗೂ ವಿಸ್ತರಿಸಿದ್ದರು. ಸರ್ಕಾರಿ ನೌಕರಿಗಳಲ್ಲಿ ಮುಸ್ಲಿಮರಿಗೂ ನೀಡಬೇಕೆಂಬ ಉತ್ತರಪ್ರದೇಶದ ಹಿಂದುಳಿದ ಜಾತಿಗಳ ಒಕ್ಕೂಟದ ವರದಿಯನ್ನು ಮಾಯಾವತಿಯವರು ಜಾರಿಗೊಳಿಸಿದ್ದರು. ಹಿಂದುಳಿದ ಜಾತಿಗಳ 27% ಮೀಸಲಾತಿಯಲ್ಲಿ 8%ಅನ್ನು ಮುಸ್ಲಿಮರಲ್ಲಿರುವ ಹಿಂದುಳಿದ ಜಾತಿಗಳಿಗೆ ನೀಡಿದ್ದರು. 1996ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಅಭ್ಯರ್ಥಿಗಳಲ್ಲಿ 29%ರಷ್ಟು ಮಾತ್ರ ಪರಿಶಿಷ್ಟ ಜಾತಿಯವರಿದ್ದರು. ಉಳಿದ 34%ರಷ್ಟು ಹಿಂದುಳಿದ ಜಾತಿಗಳು ಮತ್ತು 18%ರಷ್ಟು ಮುಸ್ಲಿಮರಿದ್ದರು. ಆಂತರಿಕ ಪ್ರಜಾಪ್ರಭುತ್ವವೇ ಇಲ್ಲವೆನ್ನುವಷ್ಟು ಏಕಚಕ್ರಾಧಿಪತ್ಯವಿದ್ದರೂ ಪಕ್ಷದ ಪದಾಧಿಕಾರಿಗಳನ್ನು ಜಾತಿ ಜನಸಂಖ್ಯೆಗೆ ಅನುಗುಣವಾಗಿ ನೀಡಲಾಗಿತ್ತು.

ಈ ಎಲ್ಲ ನೀತಿ ಮತ್ತು ಕಾರ್ಯಕ್ರಮಗಳ ರೂವಾರಿ ಕಾನ್ಸಿರಾಮ್ ಆಗಿದ್ದರು ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ‘ಜಿನ್ ಕಿ ಜಿತಿನಿ ಸಂಖ್ಯಾ ಭಾರೀ, ವುನ್ ಕಿ ವುತನೀ ಹಿಸ್ಸೇದಾರಿ’ (ಯಾರ ಜನಸಂಖ್ಯೆ ಎಷ್ಟೆಷ್ಟಿದೆಯೋ ಅಷ್ಟಷ್ಟು ಅವರ ಪಾಲು) ಎನ್ನುವುದು ಅವರ ಘೋಷಣೆಯಾಗಿತ್ತು.

 ‘ಹೊಸ ರಾಜಕೀಯ ಪಕ್ಷ ಮೊದಲು ಸೋಲುತ್ತದೆ, ಎರಡನೇ ಬಾರಿ ಗಮನ ಸೆಳೆಯುತ್ತದೆ, ಮೂರನೇ ಬಾರಿ ಗೆಲ್ಲುತ್ತದೆ’ ಎಂದು ಹೇಳುತ್ತಿದ್ದ ಕಾನ್ಸಿರಾಮ್ ಛತ್ತೀಸ್‌ಘಡದ ಚಂಪಾ ಲೋಕಸಭಾ ಕ್ಷೇತ್ರದ ಮೊದಲ ಚುನಾವಣೆಯಲ್ಲಿ ಸೋತಿದ್ದರು. 1989ರಲ್ಲಿ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ರಾಜೀವ್ ಗಾಂಧಿ ವಿರುದ್ದ ಸ್ಪರ್ಧಿಸಿ ಇಡೀ ದೇಶದ ಗಮನ ಸೆಳೆದಿದ್ದರು. ಕೊನೆಗೆ 1991ರಲ್ಲಿ ಈಟಾವದಲ್ಲಿ ಗೆದ್ದು ಲೋಕಸಭೆ ಪ್ರವೇಶಿಸಿದ್ದರು.1996ರಲ್ಲಿ ಮತ್ತೆ ಪಂಜಾಬಿನ ಹೋಷಿಯಾರ್ ಪುರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.

ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಆಡಳಿತ ವಿರೋಧಿ ಅಲೆ ದಾಟಿ ದಡ ಸೇರುವರೇ ನಿತೀಶ್-ಮೋದಿ?

1984ರಲ್ಲಿ ಕಾನ್ಶಿರಾಮ್ ಬಿಎಸ್‌ಪಿ ಸ್ಥಾಪಿಸಿದ ಕಾಲದಲ್ಲಿ ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ ಪ್ರಬಲ ಪಕ್ಷವಾಗಿತ್ತು. ಸಹಜವಾಗಿಯೇ ಕಾನ್ಸಿರಾಮ್ ಅವರ ಗುರಿ ಕಾಂಗ್ರೆಸ್‌ಅನ್ನು ಸೋಲಿಸುವುದೇ ಆಗಿತ್ತು. ಆ ಗುರಿಯಲ್ಲಿ ಅವರು ಯಶಸ್ವಿಯೂ ಆಗಿದ್ದರು. 1993ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟ 176 ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬಂತು. ಬಿಜೆಪಿ 177 ಸ್ಥಾನಗಳನ್ನು ಗಳಿಸಿದ್ದರೂ ಬಾಬರಿ ಮಸೀದಿ ಧ್ವಂಸದ ನಂತರ ಬಿಜೆಪಿ ಜೊತೆ ಕೈಜೋಡಿಸಲು ಯಾವುದೇ ಪಕ್ಷವು ಸಿದ್ದವಿರಲಿಲ್ಲ. ಇಂತಹ ಸಂದರ್ಭದಲ್ಲಿ, ಬಿಜೆಪಿಯನ್ನು ‘ಮನುವಾದಿ ಪಕ್ಷ’ ಎಂದು ತುಚ್ಛೀಕರಿಸುತ್ತಿದ್ದ ಕಾನ್ಸಿರಾಮ್, 1995ರಲ್ಲಿ ಎಸ್‌ಪಿ ಜೊತೆಗಿನ ಮೈತ್ರಿ ತೊರೆದು, ಬಿಜೆಪಿ ಜೊತೆ ಕೈಜೋಡಿಸಿ ಸರ್ಕಾರ ರಚಿಸಿದರು. ಇದು ಅವಕಾಶವಾದಿತನದ ರಾಜಕಾರಣ ಎಂಬ ಟೀಕೆಗೆ ಗುರಿಯಾದರು.

ಆದಾಗ್ಯೂ, ‘ನೈತಿಕತೆಯ ಕಾರಣದಿಂದಾಗಿಯೇ ಅಂಬೇಡ್ಕರ್ ಅವರಿಗೆ ರಾಜಕೀಯ ಯಶಸ್ಸು ಮರೀಚಿಕೆಯಾಗಿತ್ತು. ಅಂಬೇಡ್ಕರ್ ಇಟ್ಟುಕೊಂಡಿದ್ದ ಗುರಿಯನ್ನು ಮರೆಯದೆ ದಾರಿಯನ್ನು ಸ್ವಲ್ಪ ಬದಲಿಸಿ, ಗುರಿ ಮುಟ್ಟುತ್ತೇವೆ’ ಎಂಬ ವಾದ ಕಾನ್ಸಿರಾಮ್ ಅವರದ್ದಾಗಿತ್ತು. ಈ ಬದಲಾದ ದಾರಿಯ ಮೂಲಕವೇ ಕಾನ್ಸಿರಾಮ್ ಅವರು ಮಾಯಾವತಿಯವರನ್ನು ಬಿಜೆಪಿ ಜೊತೆಗಿನ ಮೈತ್ರಿಯ ಬಲದಿಂದಲೇ ಮೂರು ಬಾರಿ ಉತ್ತರಪ್ರದೇಶದ ಮುಖ್ಯಮಂತ್ರಿಯನ್ನಾಗಿ ಮಾಡಿದ್ದರು, ಜೊತೆಗೆ ನಾಲ್ಕನೇ ಬಾರಿ ಸ್ವಂತ ಬಲದಿಂದಲೇ ಮಾಯಾವತಿಯವರು ಮುಖ್ಯಮಂತ್ರಿಯಾಗಲು ಭೂಮಿಕೆ ಸಿದ್ದಗೊಳಿಸಿದ್ದರು. ಆದರೆ, ಆ ವೇಳೆಗೆ, ಕಾನ್ಶಿರಾಮ್ ಕಾಲವಾಗಿದ್ದರು.

2006ನೇ ಅಕ್ಟೋಬರ್ 14ರಂದು ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುವುದಾಗಿ 2002ರಲ್ಲಿ ಕಾನ್ಸಿರಾಮ್ ಘೋಷಿಸಿದ್ದರು. ಅಂದಿಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಬೌದ್ಧಧರ್ಮಕ್ಕೆ ಮತಾಂತರಗೊಂಡು ಐವತ್ತು ವರ್ಷಗಳು ಪೂರ್ಣಗೊಳ್ಳುತ್ತಿತ್ತು. ಮತಾಂತರಕ್ಕೆ ನಿಗದಿಯಾಗಿದ್ದ ದಿನಕ್ಕಿಂತ ಐದು ದಿನಗಳ ಮೊದಲೇ ಅವರು ನಿಧನರಾದರು. ಕಾನ್ಶಿರಾಮ್ ಅವರು ಈಗ ಇದ್ದಿದ್ದರೆ ಇಂದು ಇಡೀ ದೇಶದ ತುಂಬಾ ಕ್ರಾಂತಿಯ ಕಹಳೆ ಮೊಳಗಿರುತ್ತಿತ್ತು. ಮನುವಾದಿಗಳು ಬಾಲ ಬಿಚ್ಚುತ್ತಿರಲಿಲ್ಲ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...