ದ್ವೇಷ ಭಾಷಣ ನಿಷೇಧ ವಿಧೇಯಕ | ಕರ್ನಾಟಕದ ಸೌಹಾರ್ದ ಪರಂಪರೆಗೆ ರಕ್ಷಾ ಕವಚವಾಗಬಲ್ಲದೇ?

Date:

ರಾಜ್ಯ ಸರ್ಕಾರ ಅಂಗೀಕರಿಸಿರುವ ‘ದ್ವೇಷ ಭಾಷಣ ನಿಯಂತ್ರಣ ಮಸೂದೆ-2025’ ಸಮಾಜದ ಶಾಂತಿ ಕದಡುವವರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಇದು ಅಂಗೀಕಾರವಾಗಿ ಕಾಯ್ದೆಯ ರೂಪ ಪಡೆದಾಗ, ರಾಜ್ಯದಲ್ಲಿ ಸಾರ್ವಜನಿಕ ಭಾಷಣಗಳ ಗುಣಮಟ್ಟ ಸುಧಾರಿಸಬಹುದು ಎಂಬ ನಿರೀಕ್ಷೆ ಹುಟ್ಟಿದೆ. “ನುಡಿದರೆ ಮುತ್ತಿನ ಹಾರದಂತಿರಬೇಕು” ಎಂಬ ಬಸವಣ್ಣನವರ ನಾಡಿನಲ್ಲಿ, ಕೆಟ್ಟ ಮಾತು  ನುಡಿದರೆ ಈ ಕಾನೂನು ತಕ್ಕ ಪಾಠ ಕಲಿಸಲಿದೆ

ಕರ್ನಾಟಕವು ಶತಮಾನಗಳಿಂದಲೂ “ಸರ್ವ ಜನಾಂಗದ ಶಾಂತಿಯ ತೋಟ” ಎಂದು ಹೆಸರಾಗಿದೆ. ಆದರೆ ಇತ್ತೀಚಿನ ದಶಕದಲ್ಲಿ ರಾಜ್ಯದಾದ್ಯಂತ ಕೇಳಿಬರುತ್ತಿರುವ ಧರ್ಮ ಮತ್ತು ಜಾತಿಯ ಆಧಾರಿತ ಪ್ರಚೋದನಕಾರಿ ಮಾತುಗಳು ಈ ಸೌಹಾರ್ದತೆಯ ಪರಂಪರೆಗೆ ದೊಡ್ಡ ಕಂಟಕವಾಗಿ ಪರಿಣಮಿಸಿವೆ. ಸಮಾಜದಲ್ಲಿ ದ್ವೇಷದ ವಿಷಬೀಜ ಬಿತ್ತುವ ಮೂಲಕ ರಾಜಕೀಯ ಲಾಭ ಪಡೆಯುವ ತಂತ್ರಗಾರಿಕೆಗಳು ಮಿತಿಮೀರಿದಾಗ, ಅದನ್ನು ನಿಯಂತ್ರಿಸಲು ಅಷ್ಟೇ ಪ್ರಬಲವಾದ ಕಾನೂನಿನ ಅಗತ್ಯವಿರುತ್ತದೆ ಎಂಬುದನ್ನು ಮನಗಂಡ ರಾಜ್ಯ ಸರ್ಕಾರವು ಇದೀಗ ಮಹತ್ವದ ಮತ್ತು ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರವು ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ (ಪ್ರತಿಬಂಧಕ) ಮಸೂದೆ– 2025’ಕ್ಕೆ ಅಧಿಕೃತ ಅನುಮೋದನೆ ನೀಡುವ ಮೂಲಕ, ದ್ವೇಷ ಹರಡುವ ಶಕ್ತಿಗಳಿಗೆ ಖಡಕ್ ಎಚ್ಚರಿಕೆ ನೀಡಿದೆ. ಬೆಳಗಾವಿಯಲ್ಲಿ ಡಿ. 8 ರಿಂದ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗಲಿರುವ ಈ ಮಸೂದೆಯು, ರಾಜ್ಯದ ಕಾನೂನು ಇತಿಹಾಸದಲ್ಲಿಯೇ ಒಂದು ನಿರ್ಣಾಯಕ ತಿರುವು ಹೇಳಲಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಿಧೇಯಕದ ಪ್ರಮುಖ ಅಂಶಗಳು ಮತ್ತು ಶಿಕ್ಷೆ

ಯಾವುದೇ ಭಾವನಾತ್ಮಕ, ಮಾನಸಿಕ, ದೈಹಿಕ, ಸಾಮಾಜಿಕ ಅಥವಾ ಆರ್ಥಿಕ ಹಾನಿ

ಸಾಮರಸ್ಯ, ವ್ಯಕ್ತಿತ್ವ, ಸಮಾಜಕ್ಕೆ ಧಕ್ಕೆ ತರುವ ದತ್ತಾಂಶ ಸಂದೇಶ, ಪಠ್ಯ, ಚಿತ್ರಗಳು, ಧ್ವನಿ, ಧ್ವನಿ ಸಂಕೇತಗಳು

ಕಂಪ್ಯೂಟರ್‌ ಪ್ರೋಗ್ರಾಂಗಳು, ಸಾಫ್ಟ್‌ವೇರ್ ಮತ್ತು ಡಾಟಾಬೇಸ್‌ಗಳು ಅಥವಾ ಮೈಕ್ರೋಫೀಲ್ಮ್‌ ಅಥವಾ ಕಂಪ್ಯೂಟರ್‌ ರಚಿತ ಮೈಕ್ರೊಫೀಚರ್‌ಗಳು

ಈ ಮೇಲಿನ ಅಪರಾಧಗಳ ಮೇಲೆ ಡಿವೈಎಸ್‌ಪಿ ಶ್ರೇಣಿಯ ಅಧಿಕಾರಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬಹುದು

ಈ ನೂತನ ಮಸೂದೆಯು ದ್ವೇಷ ಭಾಷಣ ಮಾಡುವವರ ವಿರುದ್ಧ ಅತ್ಯಂತ ಕಠಿಣ ಕ್ರಮಗಳನ್ನು ಪ್ರಸ್ತಾಪಿಸಿದೆ, ಇದುವರೆಗಿನ ಐಪಿಸಿ ಸೆಕ್ಷನ್‌ಗಳಲ್ಲಿ ಇದ್ದ ಸಡಿಲಿಕೆಗಳನ್ನು ಇದು ಸಂಪೂರ್ಣವಾಗಿ ತೆಗೆದುಹಾಕಿದೆ. ಮಸೂದೆಯ ಅನ್ವಯ, ಧರ್ಮ, ಜನಾಂಗ, ಭಾಷೆ, ಜನ್ಮಸ್ಥಳ, ಜಾತಿ, ಲಿಂಗ ಅಥವಾ ಲೈಂಗಿಕ ದೃಷ್ಟಿಕೋನದ ಆಧಾರದ ಮೇಲೆ ದ್ವೇಷದ ಮಾತುಗಳನ್ನು ಆಡುವುದು ಅಥವಾ ಪ್ರಚೋದನೆ ನೀಡುವುದು ಸಾಬೀತಾದರೆ, ಅಂತಹ ವ್ಯಕ್ತಿಗೆ ಮೊದಲನೇ ಬಾರಿಯ ಅಪರಾಧಕ್ಕೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಐವತ್ತು ಸಾವಿರ ರೂಪಾಯಿ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ ಕಾನೂನು ಸಚಿವ ಎಚ್‌ ಕೆ ಪಾಟೀಲ್‌ ತಿಳಿಸಿದ್ದಾರೆ.

Vidhanasouda 3

ಇಷ್ಟೇ ಅಲ್ಲದೆ, ಒಂದು ವೇಳೆ ಅದೇ ವ್ಯಕ್ತಿ ಎರಡನೇ ಬಾರಿ ಇಂತಹದ್ದೇ ಕೃತ್ಯವೆಸಗಿದರೆ, ಆತನಿಗೆ ಕನಿಷ್ಠ ಎರಡು ವರ್ಷದಿಂದ ಗರಿಷ್ಠ ಹತ್ತು ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವಿಧಿಸುವ ಪ್ರಬಲ ಅವಕಾಶವನ್ನು ಈ ಕಾಯ್ದೆ ಒಳಗೊಂಡಿದೆ. ಸಮಾಜದ ಸಾಮರಸ್ಯವನ್ನು ಹಾಳುಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದೇ ಈ ಮಸೂದೆಯ ಮೂಲ ಉದ್ದೇಶವಾಗಿದೆ.

ಈ ಮಸೂದೆಯ ಮತ್ತೊಂದು ಪ್ರಮುಖ ಮತ್ತು ಗಂಭೀರವಾದ ಅಂಶವೆಂದರೆ ‘ದ್ವೇಷಾಪರಾಧ’ದ ವ್ಯಾಖ್ಯಾನವನ್ನು ವಿಸ್ತರಿಸಿರುವುದು. ಕೇವಲ ಬಾಯಿಯ ಮಾತಿನಿಂದ ನಿಂದಿಸುವುದು ಮಾತ್ರವಲ್ಲದೆ, ಯಾವುದೇ ವ್ಯಕ್ತಿ ಅಥವಾ ಸಮುದಾಯಕ್ಕೆ ಭಾವನಾತ್ಮಕ, ಮಾನಸಿಕ, ದೈಹಿಕ ಅಥವಾ ಆರ್ಥಿಕ ಹಾನಿ ಉಂಟುಮಾಡುವುದನ್ನೂ ಈ ಕಾಯ್ದೆ ಅಪರಾಧ ಎಂದು ಪರಿಗಣಿಸುತ್ತದೆ.

ಸಾಮರಸ್ಯಕ್ಕೆ ಧಕ್ಕೆ ತರುವಂತಹ ವ್ಯಕ್ತಿತ್ವ ನಿಂದನೆ, ಸಮಾಜದ ಶಾಂತಿ ಕದಡುವ ಕೃತ್ಯಗಳು ಇದರ ವ್ಯಾಪ್ತಿಗೆ ಬರುತ್ತವೆ. ಅತೀ ಮುಖ್ಯವಾಗಿ, ಈ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳನ್ನು ‘ಜಾಮೀನು ರಹಿತ’  ಅಪರಾಧ ಎಂದು ಪರಿಗಣಿಸಲಾಗುತ್ತದೆ. ಅಂದರೆ, ದ್ವೇಷ ಭಾಷಣ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದರೆ, ಪೊಲೀಸ್ ಠಾಣೆಯಲ್ಲಿ ಜಾಮೀನು ಪಡೆಯಲು ಸಾಧ್ಯವಿಲ್ಲ, ಬದಲಿಗೆ ಆರೋಪಿಗಳು ನೇರವಾಗಿ ಜೈಲು ಸೇರಬೇಕಾಗುತ್ತದೆ. ಜೆಎಂಎಫ್‌ಸಿ (JMFC) ನ್ಯಾಯಾಲಯಗಳು ಇವುಗಳ ವಿಚಾರಣೆ ನಡೆಸಲಿದ್ದು, ಸಂತ್ರಸ್ತರಿಗೆ ಪರಿಹಾರ ನೀಡುವ ಅಧಿಕಾರವನ್ನೂ ನ್ಯಾಯಾಲಯಕ್ಕೆ ನೀಡಲಾಗಿದೆ. ತನಿಖೆಯನ್ನು ಡಿವೈಎಸ್‌ಪಿ (DySP) ಶ್ರೇಣಿಗಿಂತ ಮೇಲ್ಪಟ್ಟ ಅಧಿಕಾರಿಗಳೇ ನಡೆಸಬೇಕೆಂಬ ನಿಯಮವು ಪ್ರಕರಣದ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕ್ರಿಕೆಟ್ ‘ದೇವರ’ ದಾಖಲೆ ಮುರಿದು ಮುನ್ನುಗ್ಗುತ್ತಿರುವ ಕೊಹ್ಲಿ

ಇಂದಿನ ಡಿಜಿಟಲ್ ಯುಗದಲ್ಲಿ ದ್ವೇಷವು ವೇದಿಕೆಗಳಿಗಿಂತ ವೇಗವಾಗಿ ಮೊಬೈಲ್ ಫೋನ್‌ಗಳ ಮೂಲಕ ಹರಡುತ್ತದೆ ಎಂಬುದನ್ನು ಸರ್ಕಾರ ಮನಗಂಡಿದೆ. ಆದ್ದರಿಂದಲೇ, ಈ ಮಸೂದೆಯು ತಂತ್ರಜ್ಞಾನದ ದುರ್ಬಳಕೆಯನ್ನೂ ತನ್ನ ವ್ಯಾಪ್ತಿಗೆ ತೆಗೆದುಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ, ಅಂದರೆ ವಾಟ್ಸಾಪ್, ಫೇಸ್‌ಬುಕ್, ಎಕ್ಸ್ (ಟ್ವಿಟರ್) ಮುಂತಾದ ಕಡೆಗಳಲ್ಲಿ ಹಂಚಿಕೊಳ್ಳಲಾಗುವ ಪ್ರಚೋದನಕಾರಿ ಪಠ್ಯ (Text), ಚಿತ್ರಗಳು, ವಿಡಿಯೋಗಳು, ದತ್ತಾಂಶ ಸಂದೇಶಗಳು, ಧ್ವನಿ ಸಂಕೇತಗಳು ಅಥವಾ ಕಂಪ್ಯೂಟರ್ ನಿರ್ಮಿತ ಮೈಕ್ರೋಫಿಲ್ಮ್‌ಗಳ ಮೂಲಕ ದ್ವೇಷ ಹರಡುವುದೂ ಇನ್ನು ಮುಂದೆ ಏಳು ವರ್ಷ ಜೈಲು ಶಿಕ್ಷೆಗೆ ಅರ್ಹವಾದ ಅಪರಾಧವಾಗಲಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಸಮಾಜ ಒಡೆಯುವ ‘ಕಿಡಿಗೇಡಿಗಳಿಗೆ’ ಮತ್ತು ‘ಫಾರ್ವರ್ಡ್ ವೀರರಿಗೆ’ ಇದೊಂದು ಬಲವಾದ ಕಡಿವಾಣವಾಗಲಿದೆ.

ಬೆಂಕಿ ಭಾಷಣಕ್ಕೆ ಇನ್ಮುಂದೆ ತಡೆ

ಸರ್ಕಾರ ಇಷ್ಟೊಂದು ಕಠಿಣವಾದ ಕಾನೂನನ್ನು ರೂಪಿಸಲು ಪ್ರಮುಖ ಕಾರಣ, ಕಳೆದ ಐದು ವರ್ಷಗಳಲ್ಲಿ, ವಿಶೇಷವಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯ ಕಂಡ ರಾಜಕೀಯ ನಾಯಕರ ಮಿತಿಮೀರಿದ ವರ್ತನೆ ಮತ್ತು ಪ್ರಚೋದನಕಾರಿ ಭಾಷಣಗಳ ಸರಣಿ. “ದ್ವೇಷ ಭಾಷಣ” ಎಂಬುದು ಕೇವಲ ಸೈದ್ಧಾಂತಿಕ ಭಿನ್ನಾಭಿಪ್ರಾಯವಾಗಿ ಉಳಿಯದೆ, ಅದೊಂದು ರಾಜಕೀಯ ಅಸ್ತ್ರವಾಗಿ ಬಳಕೆಯಾಗಿದೆ. ಈ ಹಿನ್ನೆಲೆಯಲ್ಲಿ, ಪ್ರಸ್ತುತ ಸರ್ಕಾರದ ಈ ನಿರ್ಧಾರಕ್ಕೆ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಕಾರಣೀಭೂತರಾದವರು ಕಲ್ಲಡ್ಕ ಪ್ರಭಾಕರ್ ಭಟ್, ಸಿ.ಟಿ. ರವಿ, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅನಂತಕುಮಾರ್ ಹೆಗಡೆ ಅವರಂತಹ ನಾಯಕರು ಎಂದರೆ ತಪ್ಪಾಗಲಾರದು. ಇವರುಗಳು ವಿವಿಧ ಸಂದರ್ಭಗಳಲ್ಲಿ ಆಡಿದ ಮಾತುಗಳು, ಸೃಷ್ಟಿಸಿದ ವಿವಾದಗಳು ಮತ್ತು ಅದರಿಂದ ಉಂಟಾದ ಸಾಮಾಜಿಕ ಆತಂಕವೇ ಇಂದು ಇಂತಹದೊಂದು ‘ಜಾಮೀನು ರಹಿತ’ ಕಾನೂನು ಹುಟ್ಟಲು ಪ್ರೇರಣೆಯಾಗಿದೆ.

Hate speech 1 1

ಕರಾವಳಿಯ ಪ್ರಬಲ ಸಂಘ ಪರಿವಾರದ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣಗಳು ಈ ಮಸೂದೆಯ ಅಗತ್ಯತೆಯನ್ನು ಸಾರಿ ಹೇಳುತ್ತವೆ. ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಹನುಮಾನ್ ಸಂಕಿರ್ತನಾ ಯಾತ್ರೆಯ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರ ಬಗ್ಗೆ ಆಡಿದ ಅವಹೇಳನಕಾರಿ ಮಾತುಗಳು ಸಭ್ಯ ಸಮಾಜ ತಲೆತಗ್ಗಿಸುವಂತಿದ್ದವು. ಅಷ್ಟೇ ಅಲ್ಲದೆ, ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಸಾವಿನ ವಿಷಯವನ್ನು ಪ್ರಸ್ತಾಪಿಸುವ ಭರದಲ್ಲಿ, ಇತಿಹಾಸದಲ್ಲಿ ಇಲ್ಲದ ‘ಉರಿ ಗೌಡ ಮತ್ತು ನಂಜೇ ಗೌಡ’ ಎಂಬ ಕಾಲ್ಪನಿಕ ಒಕ್ಕಲಿಗ ವೀರರನ್ನು ಸೃಷ್ಟಿಸಿ, “ಟಿಪ್ಪುವನ್ನು ಇವರು ಕೊಂದಂತೆ, ವಿರೋಧಿಗಳನ್ನು ಮುಗಿಸಿ” ಎಂದು ಕರೆ ನೀಡಿದ್ದು ಎರಡು ಪ್ರಬಲ ಸಮುದಾಯಗಳ ನಡುವೆ ದ್ವೇಷದ ಬೆಂಕಿ ಹಚ್ಚುವ ಪ್ರಯತ್ನವಾಗಿತ್ತು. ಇಂತಹ ಇತಿಹಾಸ ತಿರುಚುವಿಕೆ ಮತ್ತು ಕೋಮು ಪ್ರಚೋದನೆಗಳು ನಡೆದಾಗ ಅಂದಿನ ಕಾನೂನುಗಳು ಅಸಹಾಯಕವಾಗಿದ್ದವು, ಆದರೆ ಹೊಸ ಮಸೂದೆಯು ಇಂತಹ ಕೃತ್ಯಗಳಿಗೆ ಕಠಿಣ ಶಿಕ್ಷೆಯನ್ನು ಖಾತ್ರಿಪಡಿಸುತ್ತದೆ.

ಅದೇ ರೀತಿಯಲ್ಲಿ, ಚಿಕ್ಕಮಗಳೂರಿನ ಬಿಜೆಪಿ ನಾಯಕ ಸಿ.ಟಿ. ರವಿ ಅವರು ರಾಜ್ಯಾದ್ಯಂತ ನಡೆಸಿದ ‘ಹಲಾಲ್ ವಿರೋಧಿ’ ಅಭಿಯಾನವು ಈ ಹೊಸ ಕಾನೂನಿನ ಅಡಿಯಲ್ಲಿ ಗಂಭೀರ ಅಪರಾಧವಾಗುವ ಸಾಧ್ಯತೆಯಿದೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು “ಹಲಾಲ್ ಮಾಂಸವನ್ನು ಬಹಿಷ್ಕರಿಸಿ, ಇದು ಆರ್ಥಿಕ ಜಿಹಾದ್” ಎಂದು ಅವರು ನೀಡಿದ ಕರೆ, ಒಂದು ನಿರ್ದಿಷ್ಟ ಸಮುದಾಯದ ಜೀವನದ ಮೇಲೆ ಹೊಡೆಯುವ ತಂತ್ರವಾಗಿತ್ತು. ಹೊಸ ಮಸೂದೆಯು “ಆರ್ಥಿಕ ಹಾನಿ”  ಉಂಟುಮಾಡುವುದನ್ನೂ ದ್ವೇಷಾಪರಾಧ ಎಂದು ಸ್ಪಷ್ಟವಾಗಿ ವ್ಯಾಖ್ಯಾನಿಸಿರುವುದರಿಂದ, ಇನ್ನು ಮುಂದೆ ಯಾರಾದರೂ ರಾಜಕೀಯ ಲಾಭಕ್ಕಾಗಿ ಒಂದು ಸಮುದಾಯದ ವ್ಯಾಪಾರಕ್ಕೆ ಬಹಿಷ್ಕಾರ ಹಾಕುವಂತೆ ಕರೆ ನೀಡಿದರೆ, ಅವರು ಹತ್ತು ವರ್ಷಗಳ ಕಾಲ ಜೈಲು ಕಂಬಿ ಎಣಿಸಬೇಕಾಗಬಹುದು. ಸಿ.ಟಿ. ರವಿ ಅವರಂತಹ ನಾಯಕರು ಸೃಷ್ಟಿಸಿದ ಆರ್ಥಿಕ ಅಸುರಕ್ಷತೆ ಮತ್ತು ಸಾಮಾಜಿಕ ಒಡಕು ಈ ಕಾಯ್ದೆಯ ರಚನೆಗೆ ಬಲವಾದ ತಳಹದಿಯಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮಾತುಗಳು ಹಲವು ಬಾರಿ ಪ್ರಜಾಪ್ರಭುತ್ವದ ಮಿತಿಯನ್ನು ಮೀರಿವೆ. ಬಹಿರಂಗ ಸಭೆಯಲ್ಲಿ ನಿಂತು “ಟಿಪ್ಪು ಸುಲ್ತಾನ್ ಸಂತತಿಯವರು ಯಾರಾದರೂ ಇದ್ದರೆ ಅವರನ್ನು ಊರಿಂದಾಚೆ ಕಳುಹಿಸಿ” ಎಂದು ಹೇಳುವುದು ಮತ್ತು “ಟಿಪ್ಪುವನ್ನು ಮುಗಿಸಿದಂತೆ ಇವರನ್ನೂ ಹೊಡೆದು ಹಾಕಿ” ಎಂದು ನೇರವಾಗಿ ಹಿಂಸಾಚಾರಕ್ಕೆ  ಕರೆ ನೀಡುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿತ್ತು. ಅಷ್ಟೇ ಅಲ್ಲದೆ, ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಎಚ್.ಎಸ್. ದೊರೆಸ್ವಾಮಿ ಅವರಂತಹ ಹಿರಿಯರನ್ನೇ ‘ಪಾಕಿಸ್ತಾನದ ಏಜೆಂಟ್’ ಎಂದು ಜರೆದಿದ್ದು ಅವರ ಮನಸ್ಥಿತಿಯನ್ನು ತೋರಿಸುತ್ತಿತ್ತು.

ಪ್ರಜಾಪ್ರತಿನಿಧಿಯೊಬ್ಬರು ಸಂವಿಧಾನದ ಮೇಲೆ ಪ್ರಮಾಣ ಮಾಡಿ, ನಂತರ ಅದೇ ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿ ಒಂದು ಸಮುದಾಯದ ಜನರ ಮಾರಣಹೋಮಕ್ಕೆ ಕರೆ ನೀಡುವುದನ್ನು ತಡೆಯಲು, ಯತ್ನಾಳ್ ಅವರಂತಹವರ ನಾಲಿಗೆಗೆ ಕಡಿವಾಣ ಹಾಕಲು ಈ ಮಸೂದೆ ಅನಿವಾರ್ಯವಾಗಿತ್ತು.

ಮತ್ತೊಬ್ಬ ನಾಯಕ, ಉತ್ತರ ಕನ್ನಡದ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಅವರ ಹೇಳಿಕೆಗಳೂ ಕೂಡ ಈ ಕಾಯ್ದೆಯ ವ್ಯಾಪ್ತಿಗೆ ಬರುವಂತಹವು. “ನಾವು ಅಧಿಕಾರಕ್ಕೆ ಬಂದಿದ್ದೇ ಸಂವಿಧಾನವನ್ನು ಬದಲಾಯಿಸಲು” ಎಂದು ಹೇಳುವ ಮೂಲಕ ಅವರು ಬಾಬಾಸಾಹೇಬ್ ಅಂಬೇಡ್ಕರ್ ಅವರ ಆಶಯಗಳಿಗೆ ಅಪಮಾನ ಮಾಡಿದ್ದರು. ಅಲ್ಲದೆ, “ಭಟ್ಕಳದ ಮಸೀದಿಯನ್ನು ಬಾಬರಿ ಮಸೀದಿಯಂತೆ ಧ್ವಂಸ ಮಾಡಬೇಕು” ಎಂಬ ಅವರ ಪ್ರಚೋದನಕಾರಿ ಹೇಳಿಕೆಗಳು ಸಮಾಜದಲ್ಲಿ ಭೀತಿ ಹುಟ್ಟಿಸಿದ್ದವು. ಇಂತಹ ಹೇಳಿಕೆಗಳನ್ನು ನೀಡಿದಾಗಲೆಲ್ಲ, ಈ ನಾಯಕರು ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಸುಲಭವಾಗಿ ಜಾಮೀನು ಪಡೆದು ಹೊರಬರುತ್ತಿದ್ದರು ಮತ್ತು ಅದನ್ನೇ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದರು. ಆದರೆ ಹೊಸ ಮಸೂದೆಯು ಇಂತಹ ಅಪರಾಧಗಳನ್ನು ‘ಗಂಭೀರ ಸ್ವರೂಪದ’ ಅಪರಾಧಗಳ ಪಟ್ಟಿಗೆ ಸೇರಿಸಿರುವುದರಿಂದ, ರಾಜಕೀಯ ನಾಯಕರಿಗೆ ಸಿಗುತ್ತಿದ್ದ ‘ಕಾನೂನಿನ ರಕ್ಷಣೆ’ ಇನ್ನು ಮುಂದೆ ಸಿಗುವುದಿಲ್ಲ.

ಈ ಹೊಸ ಮಸೂದೆಯು ಕೇವಲ ಶಿಕ್ಷೆಯ ಬಗ್ಗೆ ಮಾತ್ರ ಮಾತನಾಡುವುದಿಲ್ಲ, ಅದು ಸಂತ್ರಸ್ತರ ಪರವಾಗಿಯೂ ನಿಲ್ಲುತ್ತದೆ. ದ್ವೇಷ ಭಾಷಣದಿಂದಾಗಿ ನೊಂದ ವ್ಯಕ್ತಿಗಳಿಗೆ ಅಥವಾ ಸಮುದಾಯಗಳಿಗೆ ಪರಿಹಾರ ನೀಡುವ ವ್ಯವಸ್ಥೆಯನ್ನು ಇದು ಒಳಗೊಂಡಿದೆ.

ರಾಜ್ಯ ಸರ್ಕಾರ ಅಂಗೀಕರಿಸಿರುವ ‘ದ್ವೇಷ ಭಾಷಣ ನಿಯಂತ್ರಣ ಮಸೂದೆ-2025’ ಸಮಾಜದ ಶಾಂತಿ ಕದಡುವವರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಇದು ಅಂಗೀಕಾರವಾಗಿ ಕಾಯ್ದೆಯ ರೂಪ ಪಡೆದಾಗ, ರಾಜ್ಯದಲ್ಲಿ ಸಾರ್ವಜನಿಕ ಭಾಷಣಗಳ ಗುಣಮಟ್ಟ ಸುಧಾರಿಸಬಹುದು ಎಂಬ ನಿರೀಕ್ಷೆ ಹುಟ್ಟಿದೆ. “ನುಡಿದರೆ ಮುತ್ತಿನ ಹಾರದಂತಿರಬೇಕು” ಎಂಬ ಬಸವಣ್ಣನವರ ನಾಡಿನಲ್ಲಿ, ಕೆಟ್ಟ ಮಾತು  ನುಡಿದರೆ ಈ ಕಾನೂನು ತಕ್ಕ ಪಾಠ ಕಲಿಸಲಿದೆ. ಮುಂದಿನ ದಿನಗಳಲ್ಲಿ ರಾಜಕೀಯ ನಾಯಕರು ಮೈಕ್ ಮುಂದೆ ನಿಂತಾಗ, ತಮ್ಮ ನಾಲಿಗೆಯ ಮೇಲೆ ಹಿಡಿತ ಸಾಧಿಸಲು, ಸಂವಿಧಾನದ ಮೌಲ್ಯಗಳನ್ನು ಗೌರವಿಸಲು ಮತ್ತು ಸಹಬಾಳ್ವೆಯ ತತ್ವವನ್ನು ಪಾಲಿಸಲು ಈ ಕಾಯ್ದೆ ಒತ್ತಾಯಿಸಲಿದೆ ಎಂಬುದೇ ರಾಜ್ಯದ ಪ್ರಜ್ಞಾವಂತ ನಾಗರಿಕರ ಆಶಯವಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...