ಗುಜರಾತ್ ಸಂಪುಟದಲ್ಲಿ ಪಟೇಲರದ್ದೆ ಮೇಲುಗೈ; 2027ರ ಚುನಾವಣೆಗೂ ಮುನ್ನ ಬಿಜೆಪಿಯ ಜಾತಿ ಲೆಕ್ಕಾಚಾರ

Date:

1981ರಲ್ಲಿ ನಡೆದ ಮೀಸಲಾತಿ ವಿರೋಧಿ ಆಂದೋಲನವೂ ಹೆಚ್ಚಾಗಿ ಬಿಜೆಪಿ ಬೆಂಬಲಿತವಾಗಿತ್ತು. ಈ ಹೋರಾಟದಲ್ಲಿ ಪಟೇಲ ಸಮುದಾಯದ ಯುವಕರು ಮುಂಚೂಣಿಯಲ್ಲಿದ್ದರು. ಬಿಜೆಪಿ ಗುಜರಾತ್‌ನಲ್ಲಿ ಸರಿಯಾದ ನೆಲೆಯನ್ನು ಪಡೆಯಲು ಪ್ರಾರಂಭಿಸಿದ್ದು ಇದೇ ಸಮಯದಲ್ಲಿ.

2027ರ ಚುನಾವಣೆಗೆ ಎರಡು ವರ್ಷ ಮುನ್ನವೇ ಗುಜರಾತ್‌ನಲ್ಲಿ ಜಾತಿಯಾಟ ಶುರುವಾಗಿದೆ. ಬಿಜೆಪಿ ಮುಂದಿನ ಚುನಾವಣೆಗೆ ಹೊಂದುವಂತೆ ಜಾತಿ ಲೆಕ್ಕಾಚಾರ ಹಾಕಿಕೊಂಡು ಸಂಪುಟ ಪುನಾರಚನೆ ಮಾಡಿದೆ. ಎಂದಿನಂತೆ ಬಿಜೆಪಿ ತನ್ನ ಮತ ಬ್ಯಾಂಕ್ ಆಗಿರುವ ಪಟೇಲ್ ಸಮುದಾಯಕ್ಕೆ ಆದ್ಯತೆ ನೀಡಿದೆ. ಅದಾದ ಬಳಿಕ ಒಬಿಸಿ ಸಮುದಾಯವನ್ನು ತನ್ನ ಎರಡನೇ ಆಯ್ಕೆ ಮಾಡಿಕೊಂಡಿದೆ. ಈ ಮೂಲಕ ಬಿಜೆಪಿ ಮುಂದಿನ ಚುನಾವಣೆಗೆ ತಯಾರಿ ಈಗಲೇ ಆರಂಭಿಸಿಕೊಂಡಿದೆ.

2022ರಲ್ಲಿ ಭೂಪೇಂದ್ರ ಪಟೇಲ್ ಸಂಪುಟದಲ್ಲಿ ಒಟ್ಟು 18 ಮಂದಿ ಸಚಿವರಿದ್ದರು. ಈ ಪೈಕಿ ಮುಖ್ಯಮಂತ್ರಿ ಸೇರಿ ಒಟ್ಟು ಐವರು ಪಟೇಲರಾಗಿದ್ದರು. ಅಂದರೆ ಸಚಿವ ಸಂಪುಟದಲ್ಲಿ ಸರಿಸುಮಾರು ಶೇಕಡ 28ರಷ್ಟು ಪಟೇಲರಾಗಿದ್ದರು. ಇದಕ್ಕೂ ಹಿಂದೆ 1995ರಿಂದ ಗುಜರಾತ್‌ನಲ್ಲಿ ಬಿಜೆಪಿ ಆಳ್ವಿಕೆ ಆರಂಭವಾದಾಗಿನಿಂದ ತಮ್ಮ ಮತ ಬ್ಯಾಂಕ್ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಿರಂತರವಾಗಿ ಜಾತಿ ಲೆಕ್ಕಾಚಾರ ಮಾಡುತ್ತಾ ಬಂದಿದೆ. ಪಟೇಲರಿಗೆ ಮೀಸಲಾತಿ ನೀಡಬೇಕು ಎಂಬ ಹಾರ್ದಿಕ್ ಪಟೇಲ್ ಬಂಡಾಯ ಹೋರಾಟದ ಬಳಿಕ ಬಿಜೆಪಿ ಪಟೇಲರಿಗೆ ಕೊಂಚ ಹೆಚ್ಚೇ ಪ್ರಾಮುಖ್ಯತೆಯನ್ನು ನೀಡುತ್ತಿರುವಂತಿದೆ. ಆದರೆ ಈ ಸಂಪುಟ ಪುನಾರಚನೆ ವೇಳೆ ಮಾತ್ರ ಹಾರ್ದಿಕ್ ಪಟೇಲ್‌ಗೆ ಮಂತ್ರಿಗಿರಿ ಒಲಿದಿಲ್ಲ.

ಇದನ್ನು ಓದಿದ್ದೀರಾ? ಗುಜರಾತ್ ಸಂಪುಟ ಪುನಾರಚನೆ | ಕ್ರಿಕೆಟಿಗ ಜಡೇಜಾ ಪತ್ನಿ ಸೇರಿ 19 ಮಂದಿ ಹೊಸಬರಿಗೆ ಸಚಿವಗಿರಿ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದೀಗ 2026ರಲ್ಲಿ ನಡೆಯುವ ಸ್ಥಳೀಯ ಚುನಾವಣೆ ಮತ್ತು 2027ರ ವಿಧಾನಸಭೆ ಚುನಾವಣೆಯನ್ನೇ ಗಮನದಲ್ಲಿಟ್ಟುಕೊಂಡು 2025ರಲ್ಲಿ ಸಂಪುಟ ಪುನಾರಚನೆ ಮಾಡಲಾಗಿದೆ, ಮತ್ತೆ ಪಟೇಲರನ್ನು ಒಂದು ದರ್ಜೆ ಮೇಲೆ ಏರಿಸಿ ಕೂರಿಸಲಾಗಿದೆ. ನೂತನ ಸಂಪುಟದಲ್ಲಿ ಒಟ್ಟು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸೇರಿದಂತೆ ಒಟ್ಟು 26 ಸಚಿವರಿದ್ದಾರೆ. ಈ ಪೈಕಿ ಎಂಟು ಮಂದಿ ಪಟೇಲರು ಅಂದರೆ ಒಟ್ಟು ಸಚಿವ ಸಂಪುಟದ ಸರಿಸುಮಾರು ಶೇಕಡ 30ರಷ್ಟು ಪಟೇಲರು. ಸಿಎಂ ಭೂಪೇಂದ್ರ ಪಟೇಲ್, ರುಶಿಕೇಶ್ ಪಟೇಲ್, ಕಾಂತಿಲಾಲ್ ಅಮೃತೀಯ, ಕೌಶಿಕ್ ವೆಕಾರಿಯಾ, ಜಿತು ವಘಾನಿ, ಕಮಲೇಶ್ ಪಟೇಲ್, ಈಶ್ವರ್‌ಸಿನ್ಹ್ ಠಾಕೂರ್‌ಬಾಯ್ ಪಟೇಲ್, ಪ್ರಫುಲ್ ಪನ್ಸೆರಿಯಾ- ಈ ಎಂಟು ಮಂದಿ.

ಗುಜರಾತ್‌ನಲ್ಲಿ ಸುಮಾರು ಶೇಕಡ 49ರಷ್ಟು ಒಬಿಸಿ ಸಮುದಾಯಕ್ಕೆ ಸೇರಿದವರು. ಆದರೆ ಬಿಜೆಪಿ ಸಚಿವ ಸಂಪುಟದಲ್ಲಿ ಗುಜರಾತ್‌ನ ಒಟ್ಟು ಜನಸಂಖ್ಯೆಯ ಶೇಕಡ 15ರಷ್ಟಿರುವ ಪಟೇಲರು ಪ್ರಾತಿನಿಧ್ಯವನ್ನು ಹೊಂದಿದ್ದಾರೆ. ಅದಕ್ಕೆ ಮುಖ್ಯ ಕಾರಣ ಹಣ ಬಲ, ಜಾತಿ ಬಲ. ಒಟ್ಟಾರೆಯಾಗಿ ಗುಜರಾತ್ ನೂತನ ಸಚಿವ ಸಂಪುಟದಲ್ಲಿ ಎಂಟು ಮಂದಿ ಪಟೇಲರು, ಏಳು ಮಂದಿ ಒಬಿಸಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅದನ್ನು ಹೊರತುಪಡಿಸಿ ಕ್ರಮವಾಗಿ ಶೇ.7, ಶೇ. 14.7 ಜನಸಂಖ್ಯೆಯನ್ನು ಹೊಂದಿರುವ ಎಸ್‌ಸಿ, ಎಸ್‌ಟಿ ಸಮುದಾಯದ 7 ಮಂದಿ ಸಚಿವಗಿರಿಯನ್ನು ಪಡೆದಿದ್ದಾರೆ. ಪಟೇಲರನ್ನು ಹೊರತುಪಡಿಸಿ ಗುಜರಾತ್‌ನಲ್ಲಿ ಶೇ.13.2ರಷ್ಟು ಜನಸಂಖ್ಯೆಯನ್ನು ಹೊಂದಿರುವ, ಆರ್ಥಿಕವಾಗಿ ಪ್ರಬಲ ಎನಿಸಿಕೊಂಡಿರುವ ಜೈನ ಸಮುದಾಯದ ಓಲೈಕೆಗಾಗಿ ಉಪ ಮುಖ್ಯಮಂತ್ರಿ ಸ್ಥಾನವನ್ನು ಜೈನ ಸಮುದಾಯದ ಹರ್ಷ ಸಂಘವಿಗೆ ನೀಡಿದೆ.

ಗುಜರಾತ್‌ನಲ್ಲಿ ಪಟೇಲರ ಪ್ರಾಬಲ್ಯ

ಗುಜರಾತ್‌ನಲ್ಲಿ ಪಟೇಲರು ಸಾಂಪ್ರಾದಾಯಿಕವಾಗಿ ಕೃಷಿ ಮಾಡುವ ಭೂಮಾಲೀಕ ರೈತರು ಮತ್ತು ಪ್ರಸ್ತುತ ಆರ್ಥಿಕವಾಗಿ ಪ್ರಬಲರು. ಈ ಸಮುದಾಯಕ್ಕೆ ಸೇರಿದವರು ಔಷಧ, ಬಂದರು ಅಭಿವೃದ್ಧಿ, ಉಕ್ಕು ಉದ್ಯಮ, ಆಹಾರೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಾಬಲ್ಯವನ್ನು ಹೊಂದಿದ್ದಾರೆ. ಪಟೇಲರಲ್ಲಿ ಎರಡು ಉಪ ಜಾತಿಗಳಿವೆ. ಒಂದು ಲೇವಾ ಮತ್ತೊಂದು ಕಡ್ವಾ. ಲೇವಾ ಪಟೇಲರು ಸೌರಾಷ್ಟ್ರ ಮತ್ತು ಮಧ್ಯ ಗುಜರಾತ್‌ನಲ್ಲಿ, ಕಡ್ವಾ ಪಟೇಲರು ಉತ್ತರ ಗುಜರಾತ್‌ನಲ್ಲಿ ಹೆಚ್ಚಾಗಿ ನೆಲೆಸಿದ್ದಾರೆ. ಆರ್ಥಿಕವಾಗಿ ಪ್ರಬಲವಾಗಿರುವ ಈ ಸಮುದಾಯವನ್ನು ತಮ್ಮ ಬೆಂಬಲದಲ್ಲಿ ಉಳಿಸಿಕೊಳ್ಳುವುದೇ ಬಿಜೆಪಿಯ ಉದ್ದೇಶ.

ಇದನ್ನು ಓದಿದ್ದೀರಾ? ಗುಜರಾತ್ | ಕಾಂಗ್ರೆಸ್ ಕುಟುಂಬದ ರಿವಾಬಾಗೆ ಬಿಜೆಪಿ ಸರ್ಕಾರದಲ್ಲಿ ಮಂತ್ರಿಗಿರಿ

ಅಹಮದಾಬಾದ್ ಮೂಲದ ಸಂಶೋದಕಿ ಮಹಾಶ್ವೇತಾ ಜಾನಿ ಹೇಳುವಂತೆ, “1980ರ ದಶಕದಲ್ಲಿ ಗುಜರಾತ್‌ನಲ್ಲಿ ಸೌರಾಷ್ಟ್ರ ಭಾಗದ ಪಟೇಲ್‌ ಸಮುದಾಯದ ಬೆಂಬಲದೊಂದಿಗೆ ಬಿಜೆಪಿ ಬೆಳೆದಿದೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ಭೂಮಾಲೀಕರಾಗಿದ್ದ ರಜಪೂತರ ಬೆಂಬಲಿಸಿ ಕೆಎಚ್‌ಎಎಂ (ಕ್ಷತ್ರಿಯ, ಹರಿಜನ, ಆದಿವಾಸಿ, ಮುಸ್ಲಿಂ) ಮೈತ್ರಿಕೂಟವನ್ನು ರಚಿಸಿತು. ಈ ವೇಳೆ ಮೂಲೆಗುಂಪಾದ ಭಾವನೆಯಲ್ಲಿದ್ದ ಪಟೇಲರನ್ನು ಅದರಲ್ಲೂ ಮುಖ್ಯವಾಗಿ ಸೌರಾಷ್ಟ್ರ ಪ್ರದೇಶದವರು ಬಿಜೆಪಿ ತನ್ನ ಬೆಂಬಲಕ್ಕೆ ಪಡೆದುಕೊಂಡಿತು”

1981ರಲ್ಲಿ ನಡೆದ ಮೀಸಲಾತಿ ವಿರೋಧಿ ಆಂದೋಲನವೂ ಹೆಚ್ಚಾಗಿ ಬಿಜೆಪಿ ಬೆಂಬಲಿತವಾಗಿತ್ತು. ಈ ಹೋರಾಟದಲ್ಲಿ ಪಟೇಲ ಸಮುದಾಯದ ಯುವಕರು ಮುಂಚೂಣಿಯಲ್ಲಿದ್ದರು. ಬಿಜೆಪಿ ರಾಜ್ಯದಲ್ಲಿ ಸರಿಯಾದ ನೆಲೆಯನ್ನು ಪಡೆಯಲು ಪ್ರಾರಂಭಿಸಿದ್ದು ಇದೇ ಸಮಯದಲ್ಲಿ. 1990ರಲ್ಲಿ ಜನತಾದಳ ಅಭ್ಯರ್ಥಿ ಚಿಮನ್‌ಭಾಯ್ ಪಟೇಲ್ ಮುಖ್ಯಮಂತ್ರಿಯಾಗಿದ್ದು ಪಟೇಲರ ಪ್ರಾಬಲ್ಯ ಹೆಚ್ಚುತ್ತಿರುವುದಕ್ಕೆ ಒಂದು ಸಾಕ್ಷಿ ಎಂದರೆ ತಪ್ಪಾಗದು.

ತಜ್ಞರುಗಳು ಹೇಳುವಂತೆ ಗುಜರಾತ್‌ನಲ್ಲಿ ಪಟೇಲರು ಕಡಿಮೆ ಜನಸಂಖ್ಯೆಯನ್ನು ಹೊಂದಿದ್ದರೂ ಹೂಡಿಕೆ ಮಾಡುತ್ತಾ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಾ ಹೋದ ಸಮುದಾಯವಿದು. ದೇಶದ ಕೆಲವು ದೊಡ್ಡ ಕೈಗಾರಿಕೆಗಳ ಮಾಲೀಕರು ಪಟೇಲರು. ಬಹುತೇಕ ಎಲ್ಲಾ ವಲಯದಲ್ಲೂ ತಮ್ಮ ಗುರುತನ್ನು ಬಿಟ್ಟಿರುವವರು ಪಟೇಲರು. ಈ ಆರ್ಥಿಕ ಪ್ರಾಬಲ್ಯದೆಡೆ ಬಿಜೆಪಿ ವಾಲಿಕೊಂಡಿದೆ.

ಗುಜರಾತ್‌ ರಾಜಕೀಯದಲ್ಲಿ ಇಂದಿಗೂ ಸದ್ದು ಮಾಡಿರುವುದು 2015ರ ಪಟೇಲ್ ಆಂದೋಲನ.
ಹಾರ್ದಿಕ್ ಪಟೇಲ್ ನೇತೃತ್ವದ ಪಾಟಿದಾರ್ ಅನಾಮತ್ ಸಂಘರ್ಷ ಸಮಿತಿಯು ಸರ್ಕಾರಿ ಉದ್ಯೋಗಗಳು ಮತ್ತು ಕಾಲೇಜುಗಳಲ್ಲಿ ಪ್ರಬಲ ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿತು. “ಪಾಟಿದಾರ್ ಯುವಕರು ಮೋದಿ ಆಡಳಿತದಲ್ಲಿ ಉದ್ಯೋಗ, ಶಿಕ್ಷಣದಲ್ಲಿ ಅಧಿಕ ಅವಕಾಶದ ನಿರೀಕ್ಷೆ ಹೊಂದಿದ್ದರು. ಆದರೆ ಒಂದು ದಶಕವಾದರೂ ನಮಗೆ ಮೀಸಲಾತಿ ಸಿಕ್ಕಿಲ್ಲ” ಎಂದು ಹೇಳಿ ಯುವಕರು ಬೀದಿಗಳಿದು ಹೋರಾಡಿದರು.

ಸಾಮಾನ್ಯವಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಲಾಗುತ್ತದೆ. ಆದರೆ ಇವೆರಡರಲ್ಲೂ ಪ್ರಬಲವಾಗಿರುವ ಪಟೇಲ್ ಯುವಕರು ಮೀಸಲಾತಿ ಹೋರಾಟ ನಡೆಸಿದರು. ಈ ಹೋರಾಟ ಗುಜರಾತ್‌ ಹೈಕೋರ್ಟ್‌ನ ಮೆಟ್ಟಿಲ್ಲನ್ನೂ ಏರಿತ್ತು, ಆದರೆ 2016ರಲ್ಲಿ ನ್ಯಾಯಾಲಯವು ಮೀಸಲಾತಿ ಬೇಡಿಕೆಯನ್ನು ರದ್ದುಗೊಳಿಸಿದೆ. ಹಾಗೆಯೇ ಬಿಜೆಪಿಯ ಹಾರ್ದಿಕ್ ಪಟೇಲ್ ಗಲಭೆ ಸೃಷ್ಟಿಗೆ ಕಾರಣ ಎಂದು ಘೋಷಿಸಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು. 2019ರಲ್ಲಿ ರೂಪಾಯಿ ಸರ್ಕಾರವು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇಕಡ 10ರಷ್ಟು ಮೀಸಲಾತಿಯನ್ನು ನೀಡಿದ್ದು, ಈ ವೇಳೆ ಮೀಸಲಾತಿ ಪಟೇಲರಿಗೆ ಸಮಾನ ಅವಕಾಶವನ್ನು ನೀಡಿದೆ ಎಂದು ಹೇಳುವ ಮೂಲಕ ಹಾರ್ದಿಕ ರಾಜಕೀಯ ಸಂಚಲನಕ್ಕೆ ಕಾರಣರಾಗಿದ್ದರು. ಇವೆಲ್ಲವುದರ ಬೆನ್ನಲ್ಲೇ ಹಾರ್ದಿಕ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.

ಯಾವುದೇ ರಾಜ್ಯವಾದರೂ ತನ್ನ ಜಾತಿ ರಾಜಕೀಯವನ್ನು ಬಿಡದ ಬಿಜೆಪಿ ಗುಜರಾತ್‌ನಲ್ಲಿಯೂ ಇದೇ ರಾಜಕೀಯದಾಟ ಆಡುತ್ತಿದೆ. ಆರ್ಥಿಕ, ಸಾಮಾಜಿಕವಾಗಿ ಪ್ರಬಲರಾಗಿರುವ ಪಟೇಲ, ಜೈನರ ಮತವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದೆ. ಜತೆಗೆ ಒಬಿಸಿ ವರ್ಗವನ್ನೂ ಕೈಬಿಟ್ಟಿಲ್ಲ ಎಂಬ ಮನೋಭಾವನೆಯನ್ನು ಸೃಷ್ಟಿಸಲು ಸಚಿವ ಸಂಪುಟದಲ್ಲಿ ಒಬಿಸಿ ವರ್ಗಕ್ಕೂ ಸ್ಥಾನಮಾನವನ್ನು ನೀಡಿದೆ. ಇವೆಲ್ಲವುದರ ಹಿಂದೆ ಮುಂದಿನ ಚುನಾವಣೆಯ ಯೋಜನೆ ಇರುವುದನ್ನು ಅಲ್ಲಗಳೆಯಲಾಗದು.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...