ರಕ್ಷಣಾ ಕ್ಷೇತ್ರಕ್ಕೂ ‘ಮೋದಿ ಮಿತ್ರ’ನ ಲಗ್ಗೆ: ದೇಶದ ಗಡಿ ಕಾಯುವ ಹೊಣೆ ಇನ್ನು ‘ಅದಾನಿ’ ಪಾಲು!

Date:

ಈಗ ರಕ್ಷಣಾ ವಲಯದಲ್ಲಿ 1.80 ಲಕ್ಷ ಕೋಟಿ ಹೂಡಿಕೆಯ ಘೋಷಣೆ ಕೇವಲ ಅಂಕಿಅಂಶವಲ್ಲ, ಇದೊಂದು ಎಚ್ಚರಿಕೆ ಗಂಟೆ. ಡ್ರೋನ್‌ ಮತ್ತು ಕ್ಷಿಪಣಿ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸುವುದು ಒಳ್ಳೆಯದೇ ಆದರೂ. ಅದಕ್ಕಾಗಿ ಸರ್ಕಾರಿ ಸ್ವಾಮ್ಯದ ಡಿಆರ್‌ಡಿಒ ಅಥವಾ ಎಚ್‌ಎಎಲ್‌ನಂತಹ ಸಂಸ್ಥೆಗಳನ್ನು ಬಲಪಡಿಸುವ ಬದಲು, ಖಾಸಗಿ ವ್ಯಕ್ತಿಯೊಬ್ಬರಿಗೆ ಮಣೆ ಹಾಕುವುದು ಎಷ್ಟು ಸರಿ?

ದೇಶದಲ್ಲಿ ಈಗಾಗಲೇ ನೆಲ, ಜಲ, ವಾಯು ಹೀಗೆ ಪಂಚಭೂತಗಳ ಮೇಲೂ ಹಿಡಿತ ಸಾಧಿಸಿರುವ ಉದ್ಯಮಿ ಗೌತಮ್‌ ಅದಾನಿ, ಈಗ ನೇರವಾಗಿ ರಕ್ಷಣಾ ವಲಯದ ಅಂಗಳಕ್ಕೆ ಕಾಲಿಟ್ಟಿದ್ದಾರೆ. ‘ಆತ್ಮನಿರ್ಭರ ಭಾರತ’ ಎಂಬ ಘೋಷಣೆ ಅಂತಿಮಬಾಗಿ ‘ ಅದಾನಿ ನಿರ್ಭರ ಭಾರತ’ವಾಗಿ ಬದಲಾಗುತ್ತಿದೆಯೇ ಎಂಬ ಅನುಮಾನ ಮೂಡುವಂತೆ, 2026ರ ವೇಳೆಗೆ ಬರೋಬ್ಬರಿ 1.80 ಲಕ್ಷ ಕೋಟಿ ರೂಪಾಯಿಗಳನ್ನು ರಕ್ಷಣಾ ವಲಯ ಮತ್ತು ಹಸಿರು ಇಂಧನದಲ್ಲಿ ಹೂಡಿಕೆ ಮಾಡಲು ಅದಾನಿ ಸಮೂಹ ಸಜ್ಜಾಗಿದೆ. ವಿಶೇಷವೆಂದರೆ, ಪ್ರಧಾನಿ ನರೇಂದ್ರ ಮೋದಿಯವರು “ಮೇಕ್‌ ಇನ್‌ ಇಂಡಿಯಾ” ಎಂದು ಕರೆ ನೀಡಿದಾಗಲೆಲ್ಲಾ, ಅದರ ಗುತ್ತಿಗೆ ನೇರವಾಗಿ ಗುಜರಾತ್‌ನ ಈ ಮಿತ್ರನಿಗೇ ತಲುಪುವುದು ಕಾಕತಾಳಿಯವೋ ಅಥವಾ ವ್ಯವಸ್ಥಿತ ಯೋಜನೆಯೋ ಎಂಬ ಪ್ರಶ್ನೆ ಎದ್ದಿದೆ.

ಮುಂದಿನ ದಿನಗಳಲ್ಲಿ ಯುದ್ಧಗಳು ಮನುಷ್ಯರಿಗಿಂತ ಹೆಚ್ಚಾಗಿ ತಂತ್ರಜ್ಞಾನದ ಮೂಲಕವೇ ನಡೆಯಲಿವೆ ಎಂಬುದನ್ನು ಅರಿತಿರುವ ಅದಾನಿ, ಎಐ (ಕೃತಕ ಬುದ್ಧಿಮತ್ತೆ) ಚಾಲಿತ ಡ್ರೋನ್‌ ಮತ್ತು ಅತ್ಯಾಧುನಿಕ ಕ್ಷಿಪಣಿ ತಯಾರಿಕೆಗೆ ಒತ್ತು ನೀಡಿದ್ದಾರೆ. ಕಾನ್ಪುರದಲ್ಲಿ ದಕ್ಷಿಣ ಏಷ್ಯಾದಲ್ಲೇ ಅತಿ ದೊಡ್ಡ ಮದ್ದುಗುಂಡು ತಯಾರಿಕಾ ಸಂಕೀರ್ಣವನ್ನು ಈಗಾಗಲೇ ತೆರದಿರುವ ಅದಾನಿ ಡಿಫೆನ್ಸ್ ಅಂಡ್ ಏರೋಸ್ಪೀಸ್ (Adani Defence & Aerospacȩ) ಇಸ್ರೇಲ್ ತಂತ್ರಜ್ಞಾನದ ನೆರವಿನೊಂದಿಗೆ ಭಾರತೀಯ ಸೇನೆಗೆ ಬೇಕಾದ ಶಸ್ತ್ರಾಸ್ತ್ರಗಳನ್ನು ಪೂರೈಸುವ ‘ಗುತ್ತಿಗೆದಾರ’ನಾಗಿ ಬೆಳೆಯುತ್ತಿದೆ. ದೇಶದ ಭದ್ರತೆಯಂತಹ ಸೂಕ್ಷ್ಮ ವಿಷಯದಲ್ಲೂ ಖಾಸಗಿ ಏಕಸ್ವಾಮ್ಯಕ್ಕೆ ಕೆಂಪು ಹಾಸು ಹಾಸಿಕೊಟ್ಟಿರುವುದು ಎಷ್ಟರಮಟ್ಟಿಗೆ ಸರಿ ಎಂಬುದು ಚರ್ಚಾರ್ಹ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಳೆದ ಒಂದು ದಶಕದಲ್ಲಿ ಅದಾನಿ ಸಾಮ್ರಾಜ್ಯದ ವಿಸ್ತರಣೆಯನ್ನು ಗಮನಿಸಿದರೆ, ಮೋದಿ ಸರ್ಕಾರದ ನೀತಿಗಳು ಮತ್ತು ಅದಾನಿಯವರ ಹೂಡಿಕೆಗಳ ನಡುವೆ ನೇರ ಸಂಬಂಧವಿರುವುದು ಸ್ಪಷ್ಟವಾಗುತ್ತದೆ. ಆರಂಭದಲ್ಲಿ ಬಂದರುಗಳ ಮೂಲಕ ಸಾಗರವನ್ನು ಆವರಿಸಿಕೊಂಡ ಅದಾನಿ, ಇಂದು ದೇಶದ ಶೇಕಡ 30ಕ್ಕೂ ಹೆಚ್ಚು ಸರಕು ಸಾಗಣೆಯನ್ನು ನಿಯಂತ್ರಿಸುತ್ತಿದ್ದಾರೆ. ಕೇವಲ ಮುಂದ್ರಾ ಬಂದರು ಮಾತ್ರವಲ್ಲ, ಕಾರವಾರದಿಂದ ಹಿಡಿದು ಕೃಷ್ಣಪಟ್ಟಣಂವರೆಗೂ ಕರಾವಳಿಯ ಬಹುಪಾಲು ಇವರ ತೆಕ್ಕೆಗೆ ಬಿದ್ದಿದೆ. ಬಂದರುಗಳ ಅಭಿವೃದ್ಧಿಗೆ ಸರ್ಕಾರಗಳು ಪೂರಕ ನೀತಿಗಳನ್ನು ರೂಪಿಸುತ್ತಿದ್ದಂತೆಯೇ, ಅಲ್ಲಿ ಅದಾನಿಯವರ ಬೋರ್ಡ್‌ಗಳು ರಾರಾಜಿಸಲು ಶುರುವಾದವು.

adani port

ಬಂದರುಗಳ ನಂತರ ಅದಾನಿ ಕಣ್ಣು ಬಿದ್ದಿದ್ದು ವಿಮಾನ ನಿಲ್ದಾಣಗಳ ನಿಯಮಗಳನ್ನು ಗಾಳಿಗೆ ತೂರಿ, ಅನುಭವವಿಲ್ಲದಿದ್ದರೂ ಏಕಕಾಲಕ್ಕೆ ಮುಂಬೈ, ಅಹಮದಾಬಾದ್‌, ಮಂಗಳೂರು ಸೇರಿದಂತೆ ದೇಶದ ಪ್ರಮುಖ ನಿಲ್ದಾಣಗಳ ನಿರ್ವಹಣೆಯನ್ನು ಅದಾನಿ ಪಾಲಾಗಿಸಿದ್ದು ಇತಿಹಾಸ. ದೇಶದ ಪ್ರಜಾಪ್ರಭುತ್ವದ ದೇಗುಲದಂತಿದ್ದ ಸಾರ್ವಜನಿಕ ಆಸ್ತಿಗಳು, “ಸ್ನೇಗಿತನ ಅಭಿವೃದ್ಧಿಯೇ ದೇಶದ ಅಭಿವೃದ್ಧಿ” ಎಂಬ ತತ್ವದ ಅಡಿಯಲ್ಲಿ ಖಾಸಗೀಕರಣಗೊಂಡವು. 2026ರ ಈ ಹೊಸ ಹೂಡಿಕೆಯ ಯೋಜನೆಯು ವಿಮಾನ ನಿಲ್ದಾಣಗಳಿಂದ ಈಗ ನೇರವಾಗಿ ಯುದ್ಧ ವಿಮಾನಗಳ ಬಿಡಿಭಾಗ ತಯಾರಿಕೆಯತ್ತ ಜಿಗಿದಿರುವುದನ್ನು ಸೂಚಿಸುತ್ತದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | SIR – ಬಿಜೆಪಿಗಾಗಿ ಚುನಾವಣಾ ಆಯೋಗ ನಡೆಸುತ್ತಿರುವ ರಕ್ತರಹಿತ ನರಮೇಧ

ವಿದ್ಯುತ್ ಮತ್ತು ಇಂಧನ ಕ್ಷೇತ್ರದಲ್ಲಂತೂ ಅದಾನಿಯವರದ್ದು ಅಕ್ಷರಶಃ ದರ್ಬಾರ್ ಆಗಿದೆ. ಸಾಂಪ್ರದಾಯಿಕ ಕಲ್ಲಿದ್ದಲು ಗಣಿಗಾರಿಕೆಯಲ್ಲಿ (ಆಸ್ಟ್ರೇಲಿಯಾದ ಕಾರ್ಮೈಕಲ್‌ ಗಣಿಯಿಂದ ಹಿಡಿದು ಛತ್ತೀಸ್‌ಗಢದ ಹಸದೇವ್‌ ಅರಣ್ಯದವರೆಗೆ) ವಿವಾದದ ಸರಮಾಲೆಯನ್ನೇ ಹೊದ್ದುಕೊಂಡಿದ್ದರೂ, ಸರ್ಕಾರದ ಕೃಪಾಕಟಾಕ್ಷದಿಂದ ಯಾವ ತೊಂದರೆಯೂ ಆಗಲಿಲ್ಲ. ಈಗ ಜಗತ್ತು ಹಸಿರು ಇಂಧನದತ್ತ ವಾಲುತ್ತಿದ್ದಂತೆ, ಅದಾನಿ ಕೂಡ ಗುಜರಾತಿನ ಖಾವ್ಡಾದಲ್ಲಿ ವಿಶ್ವದ ಅತಿದೊಡ್ಡ Renewable Energy Park (ನವೀಕರಿಸಬಹುದಾದ ಇಂಧನ ಶಕ್ತಿ ಉದ್ಯಾನ) ನಿರ್ಮಿಸುತ್ತಿದ್ದಾರೆ. Solar Module (ಸೌರ ಘಟಕ) ತಯಾರಿಕೆಯಿಂದ ಹಿಡಿದು ವಿದ್ಯುತ್‌ ಪೂರೈಕೆಯವರೆಗೂ  ಪ್ರತಿಯೊಂದು ಹಂತದಲ್ಲೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದ ಅದಾನಿ ಕಂಪನಿಗಳೇ ಮೇಲುಗೈ ಸಾಧಿಸುತ್ತಿವೆ.

ಸಿಮೆಂಟ್ ಉದ್ಯಮದಲ್ಲೂ ಅದಾನಿ ಹಿಡಿತ ಬಿಗಿಯಾಗಿದೆ. ರಾತ್ರೋರಾತ್ರಿ ಅಂಬುಜಾ ಮತ್ತು ಎಸಿಸಿ ಸಿಮೆಂಟ್ ಕಂಪನಿಗಳನ್ನು ಖರೀದಿಸುವ ಮೂಲಕ ದೇಶದ ಎರಡನೇ ಅತಿದೊಡ್ಡ ಸಿಮೆಂಟ್ ಉತ್ಪಾದಕರಾಗಿ ಹೊರಹೊಮ್ಮಿದರು. ಮೂಲಸೌಕರ್ಯ ಅಭಿವೃದ್ಧಿಗೆ ಮೋದಿ ಸರ್ಕಾರ ಲಕ್ಷಾಂತರ ಕೋಟಿ ಸುರಿಯುತ್ತಿರುವಾಗ, ಅದಕ್ಕೆ ಬೇಕಾದ ಸಿಮೆಂಟ್ ಪೂರೈಸುವವರು ಯಾರೆಂಬುದು ಊಹಿಸುವುದು ಕಷ್ಟವೇನಲ್ಲ. ರಸ್ತೆ ನಿರ್ಮಾಣವಾಗಲಿ, ಸೇತುವೆಯಾಗಲಿ ಅಥವಾ ಈಗ ಚರ್ಚೆಯಲ್ಲಿರುವ ರಕ್ಷಣಾ ವಲಯದ ಬಂಕರ್‌ಗಳೇ ಆಗಲಿ, ಕಚ್ಚಾ ವಸ್ತುಗಳ ಪೂರೈಕೆಯ ಕೀಲಿಕೈ ಈಗ ಅದಾನಿ ಬಳಿಯೇ ಇದೆ.

ಅದಾನಿ ಶ್ರೀಲಂಕಾ

ಮಾಧ್ಯಮರಂಗವನ್ನೂ ಈ ಉದ್ಯಮಿ ಬಿಟ್ಟಿಲ್ಲ. ಆಡಳಿತದ ಲೋಪಗಳನ್ನು ಪ್ರಶ್ನಿಸಬೇಕಿದ್ದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ, ಟೀಕೆಗಳ ಬಾಯಿಯನ್ನು ಮುಚ್ಚಿಸುವ ಅಥವಾ ತಮಗೆ ಬೇಕಾದ ಸುಳ್ಳುಗಳನ್ನು ಸೃಷ್ಟಿಸುವ ತಂತ್ರಗಾರಿಕೆಯನ್ನು ಅದಾನಿ ಕರಗತ ಮಾಡಿಕೊಂಡಿದ್ದಾರೆ. ಇದರ ಜೊತೆಗೆ, ಭವಿಷ್ಯದ ತಂತ್ರಜ್ಞಾನವಾದ ‘ಡೇಟಾ ಸೆಂಟರ್‌’ಗಳ ಮೇಲೂ ಸಾವಿರಾರು ಕೋಟಿ ಹೂಡಿಕೆ ಮಾಡುತ್ತಿದ್ದಾರೆ. ಮಾಹಿತಿಯೇ ಸಂಪತ್ತು ಆಗುತ್ತಿರುವ ಕಾಲದಲ್ಲಿ, ಭಾರತೀಯರ ಡೇಟಾ ಯಾರ ಕೈಯಲ್ಲಿ ಸುರಕ್ಷಿತವಾಗಿರಲಿದೆ ಎಂಬುದು ಯಕ್ಷಪ್ರಶ್ನೆ.

ಇದೊಂದು ಎಚ್ಚರಿಕೆ ಗಂಟೆ. ಡ್ರೋನ್ ಮತ್ತು ಕ್ಷಿಪಣಿ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸುವುದು ಒಳ್ಳೆಯದೇ ಆದರೂ, ಅದಕ್ಕಾಗಿ ಸರ್ಕಾರಿ ಸ್ವಾಮ್ಯದ DRDO ಅಥವಾ HAL ನಂತಹ ಸಂಸ್ಥೆಗಳನ್ನು ಬಲಪಡಿಸುವ ಬದಲು, ಖಾಸಗಿ ವ್ಯಕ್ತಿಯೊಬ್ಬರಿಗೆ ಮಣೆ ಹಾಕುವುದು ಎಷ್ಟು ಸರಿ? ತಂತ್ರಜ್ಞಾನದ ವರ್ಗಾವಣೆ ಮತ್ತು ರಕ್ಷಣಾ ರಹಸ್ಯಗಳು ಕಾರ್ಪೊರೇಟ್ ಕಂಪನಿಯೊಂದರ ಪಾಲಾಗುವ ಅಪಾಯವನ್ನು ಸರ್ಕಾರ ಕಡೆಗಣಿಸಿದಂತಿದೆ. “ಮಿತ್ರನಿಗಾಗಿ ಮಾರ್ಗ” ಎಂಬಂತೆ ರಕ್ಷಣಾ ನೀತಿಗಳನ್ನು ಬದಲಿಸಲಾಗುತ್ತಿದೆಯೇ ಎಂಬ ಗುಮಾನಿ ದೇಶದ ಜನರದ್ದು.

ಈಗ ರಕ್ಷಣಾ ವಲಯದಲ್ಲಿ 1.80 ಲಕ್ಷ ಕೋಟಿ ಹೂಡಿಕೆಯ ಘೋಷಣೆ ಕೇವಲ ಅಂಕಿಅಂಶವಲ್ಲ, ಇದೊಂದು ಎಚ್ಚರಿಕೆ ಗಂಟೆ. ಡ್ರೋನ್‌ ಮತ್ತು ಕ್ಷಿಪಣಿ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸುವುದು ಒಳ್ಳೆಯದೇ ಆದರೂ. ಅದಕ್ಕಾಗಿ ಸರ್ಕಾರಿ ಸ್ವಾಮ್ಯದ ಡಿಆರ್‌ಡಿಒ ಅಥವಾ ಎಚ್‌ಎಎಲ್‌ನಂತಹ ಸಂಸ್ಥೆಗಳನ್ನು ಬಲಪಡಿಸುವ ಬದಲು, ಖಾಸಗಿ ವ್ಯಕ್ತಿಯೊಬ್ಬರಿಗೆ ಮಣೆ ಹಾಕುವುದು ಎಷ್ಟು ಸರಿ? ತಂತ್ರಜ್ಞಾನದ ವರ್ಗಾವಣೆ ಮತ್ತು ರಕ್ಷಣಾ ರಹಸ್ಯಗಳು ಕಾರ್ಪೊರೇಟ್ ಕಂಪನಿಯೊಂದರ ಪಾಲಾಗುವ ಅಪಾಯವನ್ನು ಸರ್ಕಾರ ಕಡೆಗಣಿಸಿದಂತಿದೆ.

​ಒಟ್ಟಾರೆಯಾಗಿ, 2026ರ ವೇಳೆಗೆ ಅದಾನಿ ಸಮೂಹದ ಸಾಮ್ರಾಜ್ಯ ಇನ್ನಷ್ಟು ವಿಸ್ತಾರವಾಗಲಿದೆ. ಪ್ರಧಾನಿ ಮೋದಿಯವರ ‘ವಿಕಸಿತ ಭಾರತ’ದ ಕನಸು, ವಾಸ್ತವದಲ್ಲಿ ‘ಅದಾನಿಯ ವಿಕಸಿತ ಬ್ಯಾಂಕ್ ಬ್ಯಾಲೆನ್ಸ್’ ಆಗಿ ಪರಿವರ್ತನೆಯಾಗುತ್ತಿದೆ. ಜನಸಾಮಾನ್ಯರಿಗೆ ಉಚಿತ ಅಕ್ಕಿ-ಬೇಳೆಯ ಭರವಸೆ ನೀಡುತ್ತಲೇ, ದೇಶದ ಆರ್ಥಿಕತೆಯ ಆಯಕಟ್ಟಿನ ಜಾಗಗಳೆಲ್ಲವನ್ನೂ ಒಬ್ಬರೇ ಉದ್ಯಮಿಯ ಕೈಗಿಡುವುದು ಪ್ರಜಾಪ್ರಭುತ್ವದ ಅಣಕವೇ ಸರಿ. ಈ ‘ಡಬಲ್ ಎಂಜಿನ್’ ಸರ್ಕಾರದಲ್ಲಿ ಒಂದು ಎಂಜಿನ್ ರಾಜಕೀಯ ಅಧಿಕಾರ ನಡೆಸುತ್ತಿದ್ದರೆ, ಮತ್ತೊಂದು ಎಂಜಿನ್ ದೇಶದ ಸಂಪನ್ಮೂಲಗಳನ್ನು ಗುಡಿಸಿ ಹಾಕುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು.

Adani power project
WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...