ಅತೀವ ಸಂಕಟದಲ್ಲಿ ಸಿಲುಕಿವೆ ದೇಶದ ರಾಜಧಾನಿ ದೆಹಲಿಯ ಶ್ವಾಸಕೋಶಗಳು!

Date:

ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳ ಬಳಕೆ ನಿಷೇಧಿಸಿದ್ದರೂ ಹಲವು ಮಂದಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಸಂಭ್ರಮವು ದೆಹಲಿ ನಗರದ ವಾಯು ಗುಣಮಟ್ಟ ಸೂಚ್ಯಂಕವು ಅತ್ಯಂತ ಕಳಪೆ ಮತ್ತು ಗಂಭೀರ ಹಂತಕ್ಕೆ ತಲುಪುವಂತೆ ಮಾಡಿದೆ. ದೀಪಾವಳಿಯ ರಾತ್ರಿ ಮತ್ತು ನಂತರದ ಕೆಲವು ದಿನಗಳ ಕಾಲ ದೆಹಲಿಯ ಸರಾಸರಿ AQI 350ಕ್ಕಿಂತ ಹೆಚ್ಚಾಗಿತ್ತು. ಕೆಲವು ಪ್ರದೇಶಗಳಲ್ಲಿ 400 ಮತ್ತು 500ರ ಗಡಿಯನ್ನು ದಾಟಿತ್ತು.

ವಾಯುಮಾಲಿನ್ಯವೆಂದಾಗ ಸಾಮಾನ್ಯವಾಗಿಯೇ ನಮ್ಮ ನೆನಪಿಗೆ ಬರುವುದು ದೆಹಲಿ. ರಾಜಧಾನಿಯಲ್ಲಿ ವಾಯುಮಾಲಿನ್ಯ ಪ್ರತಿ ನಿತ್ಯದ ಸಮಸ್ಯೆಯಾದರೆ ಅದು ಅತಿರೇಖಕ್ಕೆ ತಲುಪುವುದು ಚಳಿಗಾಲದಲ್ಲಿ. ಚಳಿಗಾಲದ ಮುಂಜಾನೆಯೇ ದೆಹಲಿಯ ಜನರು ವಿಷಕಾರಿ ಗಾಳಿ ಸೇವಿಸುವ ಮೂಲಕ ಆರಂಭಿಸುತ್ತಾರೆ. ಪ್ರತಿ ವರ್ಷವೂ ನವೆಂಬರ್-ಡಿಸೆಂಬರ್ ದೆಹಲಿಗರ ಕಥೆ ಇದೇ ಆಗಿದೆ. ಈ ವರ್ಷವಂತು ವಾಯುಮಾಲಿನ್ಯ ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ದತ್ತಾಂಶದ ಪ್ರಕಾರ ದೆಹಲಿ ನಗರಗಳಲ್ಲಿ ಸತತ 12ಕ್ಕೂ ಅಧಿಕ ದಿನಗಳಿಂದ ಗಾಳಿಯ ಗುಣಮಟ್ಟವು ತೀವ್ರ ಕಳಪೆ, ಗಂಭೀರ ಮಟ್ಟಕ್ಕೆ ತಲುಪಿದೆ. ಇನ್ನೂ ಹಲವು ದಿನಗಳ ಕಾಲ ಗಾಳಿ ಗುಣಮಟ್ಟ ಇದೇ ರೀತಿ ಕಳಪೆಯಾಗಿರುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಆದರೆ ಸರ್ಕಾರದ ನಿಯಂತ್ರಣ ಕ್ರಮಗಳು ಮಾತ್ರ ಬರೀ ತೋರ್ಪಡಿಕೆಗೆ ಸೀಮಿತವಾಗಿರುವುದು ವಿಷಾದನೀಯ.

ಇದನ್ನು ಓದಿದ್ದೀರಾ? ವಾಯುಮಾಲಿನ್ಯ | ದೆಹಲಿಯಲ್ಲ ದೇಶದ ‘ಟಾಪ್‌ 5’ ಅತಿ ಕಲುಷಿತ ನಗರಗಳಿವು!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಳೆದ ನಾಲ್ಕು ವರ್ಷಗಳ ಸಿಪಿಸಿಬಿಯ ದತ್ತಾಂಶವನ್ನು ಪರಿಶೀಲಿಸಿದಾಗ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ವರ್ಷದಿಂದ ವರ್ಷಕ್ಕೆ ಕಳಪೆಯಾಗುತ್ತಿರುವುದು ಕಂಡುಬರುತ್ತದೆ. AQI 300-400 ಆಗಿದ್ದರೆ ತುಂಬಾ ಕಳಪೆ ಎಂದು ಪರಿಗಣಿಸಲಾಗುತ್ತದೆ. ಪ್ರತಿ ತಿಂಗಳಲ್ಲಿ ಎಷ್ಟು ದಿನಗಳ ಕಾಲ ಗಾಳಿ ಗುಣಮಟ್ಟ ಇಷ್ಟೊಂದು ಕಳಪೆ ಮಟ್ಟಕ್ಕೆ ಇಳಿದಿದೆ ಎಂದು ಲೆಕ್ಕಾಚಾರ ಹಾಕಲಾಗುತ್ತದೆ. ಈ ದಿನಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಷ್ಟು ಮಾತ್ರವಲ್ಲದೆ AQI 400-500 ಅಂದರೆ ಗಂಭೀರ ಸ್ಥಿತಿಗೂ ಗಾಳಿ ಗುಣಮಟ್ಟ ತಲುಪುತ್ತಿವೆ. ಇವೆಲ್ಲವುದರ ನಡುವೆ ದೆಹಲಿಯಲ್ಲಿ ಹಲವು ಸಂಸ್ಥೆಗಳು ವರ್ಕ್ ಫ್ರಮ್ ಹೋಮ್ ನೀಡುತ್ತಿವೆ.

ದೆಹಲಿ ವಾಯುಮಾಲಿನ್ಯ ಕಡಿಮೆಯಾಗದಿರಲು ಕಾರಣ

ದೆಹಲಿಯಲ್ಲಿ ವಾಯುಮಾಲಿನ್ಯ ಕಡಿಮೆಯಾಗದಿರಲು ಸರ್ಕಾರ ಮತ್ತು ಜನರೇ ಕಾರಣ ಎನ್ನುತ್ತಾರೆ ತಜ್ಞರುಗಳು. ದೆಹಲಿ ವಿಶ್ವವಿದ್ಯಾಲಯದ ಪರಿಸರ ತಜ್ಞ ಮತ್ತು ಪ್ರಾಧ್ಯಾಪಕ ಡಾ. ಜಿತೇಂದ್ರ ನಗರ್ ಪ್ರಕಾರ, “ನವೆಂಬರ್‌ನಲ್ಲಿ ಗಾಳಿಯ ಗುಣಮಟ್ಟವು ಇನ್ನಷ್ಟು ಕಳಪೆಯಾಗಲು ಹಲವು ಕಾರಣಗಳಿವೆ. ಪಂಜಾಬ್ ಮತ್ತು ಹರಿಯಾಣದಲ್ಲಿ ಕೃಷಿ ತ್ಯಾಜ್ಯವನ್ನು ಸುಟ್ಟ ಹೊಗೆಯು ಗಾಳಿಯ ಗುಣಮಟ್ಟವನ್ನು ಇನ್ನಷ್ಟು ಕುಗ್ಗಿಸುತ್ತದೆ. ನವೆಂಬರ್‌ನಲ್ಲಿ ಗಾಳಿಯ ವೇಗವೂ ಕಡಿಮೆಯಾಗಿರುತ್ತದೆ. ಇದೂ ಕಲುಷಿತ ಗಾಳಿ ಅಲ್ಲೇ ಉಳಿಯುವಂತೆ ಮಾಡುತ್ತದೆ. ಇನ್ನು ವಾಹನದಿಂದ ಬರುವ ಹೊಗೆ, ವಾಹನಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯೂ ವಾಯುಮಾಲಿನ್ಯ ನಿಯಂತ್ರಣಕ್ಕೆ ಬಾರದಂತೆ ತಡೆಗಟ್ಟುತ್ತಿದೆ”

Delhi 8
ಧೂಳು ನಿಯಂತ್ರಿಸಲು ಮಾರ್ಗಗಳಿಗೆ ನೀರು ಸಿಂಪಡಿಸುತ್ತಿರುವುದು

ಇನ್ನು ಚಳಿಗಾಲಕ್ಕೂ ಮುನ್ನ ಬರುವ ದೀಪಾವಳಿಯೂ ದೆಹಲಿಯಲ್ಲಿನ ಗಾಳಿಯ ಗುಣಮಟ್ಟ ಇನ್ನಷ್ಟು ಕುಸಿಯಲು ಕಾರಣವಾಗಿದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳ ಬಳಕೆ ನಿಷೇಧಿಸಿದ್ದರೂ ಹಲವು ಮಂದಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಸಂಭ್ರಮವು ದೆಹಲಿ ನಗರದ ವಾಯು ಗುಣಮಟ್ಟ ಸೂಚ್ಯಂಕವು ಅತ್ಯಂತ ಕಳಪೆ ಮತ್ತು ಗಂಭೀರ ಹಂತಕ್ಕೆ ತಲುಪುವಂತೆ ಮಾಡಿದೆ. ದೀಪಾವಳಿಯ ರಾತ್ರಿ ಮತ್ತು ನಂತರದ ಕೆಲವು ದಿನಗಳ ಕಾಲ ದೆಹಲಿಯ ಸರಾಸರಿ AQI 350ಕ್ಕಿಂತ ಹೆಚ್ಚಾಗಿತ್ತು. ಕೆಲವು ಪ್ರದೇಶಗಳಲ್ಲಿ 400 ಮತ್ತು 500ರ ಗಡಿಯನ್ನು ದಾಟಿತ್ತು.

ಇವೆಲ್ಲವುದರ ನಡುವೆ ಇಥಿಯೋಪಿಯಾದ ಜ್ವಾಲಾಮುಖಿಯ ಬೂದಿಯು ದೆಹಲಿಯ ಗಾಳಿಯ ಗುಣಮಟ್ಟದ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳ ಬಗ್ಗೆಯೂ ಚರ್ಚೆಯಾಗುತ್ತಿದೆ. ಆದರೆ ಬೂದಿ ಮೋಡಗಳು ಭಾರತದ ಕೆಲವು ಭಾಗಗಳಲ್ಲಿ ತೇಲುತ್ತಿದ್ದರೂ ಅವು ತಕ್ಷಣ ದೆಹಲಿಯ AQI ಮೇಲೆ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಆದರೆ ಈ ಬೂದಿ ತುಂಬಿದ ಮೋಡಗಳ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಪರಿಶೀಲನೆ ನಡೆಸಬೇಕು. ವಿಶೇಷವಾಗಿ ಹಿಮಾಲಯ ಪ್ರದೇಶದಲ್ಲಿ ಇದರ ಪ್ರಭಾವದ ಬಗ್ಗೆ ಅಧ್ಯಯನ ನಡೆಸಬೇಕು ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.

ಇದನ್ನು ಓದಿದ್ದೀರಾ? ದೆಹಲಿ ಸಿಎಂ ರೇಖಾ ಗುಪ್ತಾಗೆ ನೀಡಿದ್ದ ಝಡ್‌ ಕೆಟಗರಿ ಸಿಆರ್‌ಪಿಎಫ್‌ ಭದ್ರತೆ ವಾಪಸ್‌ ಪಡೆದ ಕೇಂದ್ರ ಸರ್ಕಾರ

ಸಂಕಟದಲ್ಲಿವೆ ದೆಹಲಿಯ ಶ್ವಾಸಕೋಶಗಳು!

ಈ ವಾಯುಮಾಲಿನ್ಯದಿಂದಾಗಿ ದೆಹಲಿಯಲ್ಲಿ ವಾಸಿಸುತ್ತಿರುವ ಜನರ ಶ್ವಾಸಕೋಶಗಳು ಸಂಕಟಕ್ಕೆ ಸಿಲುಕಿವೆ! ನಿರಂತವಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಲೇ ಇವೆ. ಸ್ಮಿಟನ್‌ಪಲ್ಸ್ಎಐ ದೆಹಲಿ-ಎನ್‌ಸಿಆರ್‌ನಲ್ಲಿ ಸಮೀಕ್ಷೆ ನಡೆಸಿದ್ದು, ಇದರ ಪ್ರಕಾರ ಶೇ.80ಕ್ಕೂ ಹೆಚ್ಚು ನಿವಾಸಿಗಳು ದೀರ್ಘಕಾಲದ ಕೆಮ್ಮು, ಆಯಾಸ ಮತ್ತು ಉಸಿರಾಟ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಹಾಗೆಯೇ ಕಳೆದ ವರ್ಷ ಶೇ. 68.3ರಷ್ಟು ಜನರು ಮಾಲಿನ್ಯದಿಂದಾಗಿ ಉಂಟಾದ ಆರೋಗ್ಯ ಸಮಸ್ಯೆಗಾಗಿ ಚಿಕಿತ್ಸೆ ಪಡೆದಿದ್ದಾರೆ. ಇನ್ನು ಶೇ. 76.4 ರಷ್ಟು ಮಂದಿ ಮನೆ ಬಿಟ್ಟು ಹೊರಗಡೆ ಓಡಾಟ ಮಾಡುವುದನ್ನೇ ತೀವ್ರವಾಗಿ ಕಡಿಮೆ ಮಾಡಿದ್ದಾರೆ. ದೆಹಲಿಯ ಹಲವರಿಗೆ ಮನೆಯೇ ಪ್ರಪಂಚವಾಗಿದೆ!

ದೆಹಲಿ, ಗುರುಗ್ರಾಮ, ನೋಯ್ಡಾ, ಗಾಜಿಯಾಬಾದ್ ಮತ್ತು ಫರಿದಾಬಾದ್‌ನಾದ್ಯಂತ 4,000 ನಿವಾಸಿಗಳ ಸಮಗ್ರ ಅಧ್ಯಯನ ಮಾಡಲಾಗಿದೆ. ವಾಯುಮಾಲಿನ್ಯದಿಂದಾಗಿ ನಗರ ಎಷ್ಟು ವಿನಾಶಕಾರಿ ಹಂತಕ್ಕೆ ತಲುಪಿದೆ ಎಂಬುದನ್ನು ಈ ಸಮಗ್ರ ಅಧ್ಯಯನ ಬಹಿರಂಗಪಡಿಸಿದೆ. ಶೇ. 79.8ರಷ್ಟು ಜನರು ಸ್ಥಳಾಂತರ ಮಾಡುವ ಚಿಂತನೆಯಲ್ಲಿರುವುದಾಗಿ ಹೇಳಿಕೊಂಡಿದ್ದಾರೆ. ಶೇ. 15.2ರಷ್ಟು ಜನರು ಈಗಾಗಲೇ ಸ್ಥಳಾಂತರಗೊಂಡಿದ್ದಾರೆ.

ಇವೆಲ್ಲವೂ ಬಡ, ಮಧ್ಯಮ ವರ್ಗದ ಜನರ ಮೇಲೆ ಆರ್ಥಿಕ ಹೊರೆಯನ್ನೂ ಹೇರಿದೆ. ವಾಯುಮಾಲಿನ್ಯ ಹೆಚ್ಚಾಗುತ್ತಿದ್ದಂತೆ ಆರೋಗ್ಯ ಸಮಸ್ಯೆ ಉಂಟಾಗಿ ಮನೆಯ ಖರ್ಚೂ ಏರಿಕೆಯಾಗುತ್ತಿದೆ ಎನ್ನುತ್ತಾರೆ ದೆಹಲಿ ಜನರು. ಹಾಗಾಗಿ ಇದು ಬರೀ ಪರಿಸರ ಕಾಳಜಿ ಮಾತ್ರವಲ್ಲದೆ ಜನರ ಬದುಕಿನ ಪ್ರಶ್ನೆಯಾಗಿದೆ.

ಬೆಂಗಳೂರಿಗೆ ಪಾಠವಾಗಬೇಕಾ ದೆಹಲಿ?

ಬೆಂಗಳೂರು ಮಾತ್ರವಲ್ಲದೆ ಇತರೆ ಅತಿ ಶೀಘ್ರವಾಗಿ ಬೆಳವಣಿಗೆ ಹೊಂದುತ್ತಿರುವ ನಗರಗಳಿಗೆ ದೆಹಲಿಯ ವಾಯುಮಾಲಿನ್ಯವೇ ಒಂದು ಪಾಠವಾಗಿದೆ. ವಾಯುಮಾಲಿನ್ಯವು ಕಳಪೆ, ಗಂಭೀರ ಮಟ್ಟಕ್ಕೆ ತಲುಪುವವರೆ ಕಾಯದೆ ಆರಂಭಿಕವಾಗಿಯೇ ಕಠಿಣ ಕ್ರಮಗಳನ್ನು ಜಾರಿಗೊಳಿಸಬೇಕು ಎಂಬ ಪಾಠವನ್ನು ಕಲಿಸುತ್ತದೆ ದೆಹಲಿಯ ಪ್ರಸ್ತುತ ಸ್ಥಿತಿ. ಪ್ರಸ್ತುತ ಬೆಂಗಳೂರಿನ ಎಕ್ಯೂಐ 100-150ರ ಆಸುಪಾಸಿನಲ್ಲಿ ಅಂದರೆ ಕಳಪೆ ಹಂತದಲ್ಲಿದೆ. ಹಾಗಾಗಿ ಈಗಲೇ ಸರ್ಕಾರ ಎಚ್ಚೆತ್ತುಕೊಳ್ಳುವುದು ಉತ್ತಮ. ಪಟಾಕಿ ಬಳಕೆಯನ್ನು ನಿಯಂತ್ರಣಕ್ಕೆ ತರುವುದು ಅಥವಾ ಸಂಪೂರ್ಣವಾಗಿ ನಿಷೇಧಿಸುವುದು ಮತ್ತು ಹಳೆಯ/ಮಾಲಿನ್ಯಕಾರಕ ವಾಹನಗಳ ಬಳಕೆಯನ್ನು ಹಂತ ಹಂತವಾಗಿ ನಿಷೇಧಿಸುವ ಕ್ರಮಗಳನ್ನು ಸರ್ಕಾರ ಈಗಲೇ ಕೈಗೊಳ್ಳಬೇಕಿದೆ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...