ನವೆಂಬರ್ ಕ್ರಾಂತಿ ಎಂದ ಮಾಧ್ಯಮಗಳಿಗೆ ಖಡಕ್‌ಎಚ್ಚರಿಕೆ ಕೊಟ್ಟ ಡಿಕೆಶಿ; ಸಿಎಂ ಬದಲಾವಣೆ ಆಗಬೇಕಿರೋದು ಯಾರಿಗೆ?

Date:

ವೈರಲ್ ಆಗಿರುವ ವಿಡಿಯೋದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, ಪತ್ರಕರ್ತರೊಬ್ಬರಿಗೆ ‘ಕುಮಾರಸ್ವಾಮಿ ಅವರು ಹೇಳದೆ ಇದ್ದರೂ ಯಾಕೆ ಅವರ ಹೆಸರನ್ನು ಹೇಳುತ್ತಿದ್ದೀರಿ, ಒಬ್ಬರಿಗೊಬ್ಬರಿಗೆ ತಂದಾಕಿ ಮನೆಹಾಳು ಕೆಲಸ ಮಾಡುತ್ತಿದ್ದೀರಾ ನೀವು’ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಕರ್ನಾಟಕ ರಾಜಕೀಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ‘ನವೆಂಬರ್ ಕ್ರಾಂತಿ’ ಎಂಬ ಮಾತು ಬಹಳ ಚರ್ಚೆಗೆ ಬಂದಿದೆ. ಕೆಲವು ಮಾಧ್ಯಮಗಳು ಇದನ್ನು ದೊಡ್ಡ ಸುದ್ದಿಯಂತೆ ತೋರಿಸಿ, ನವೆಂಬರ್‌ನಲ್ಲಿ ರಾಜಕೀಯ ಬದಲಾವಣೆ ನಡೆಯಲಿದೆ, ಉಪಮುಖ್ಯಮಂತ್ರಿ ಡಿಕೆಶಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿಯಲಿದ್ದಾರೆ ಎಂಬ ಚರ್ಚೆಯನ್ನು ತಮ್ಮ ಪ್ರೈಮ್ ಟೈಮ್ ಚಾನಲ್‌ಗಳಲ್ಲಿ ಬಿತ್ತರಿಸುತ್ತಿದ್ದವು. ಇದೇ ವಿಷಯದಲ್ಲಿ ಡಿಕೆ ಶಿವಕುಮಾರ್ ಅವರು ಮಾಧ್ಯಮಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೈರಲ್ ಆಗಿರುವ ಒಂದು ವಿಡಿಯೋದಲ್ಲಿ ಅವರ ಆಕ್ರೋಶ ಸ್ಪಷ್ಟವಾಗಿ ಕಂಡುಬಂದಿದೆ.  ಕೆಲ ಮಾಧ್ಯಮಗಳು ತಮ್ಮನ್ನ ತಾವು ಎಷ್ಟು ಮಾರಿಕೊಂಡಿದೆ ಅನ್ನೋದಕ್ಕೆ ಇದು ಸ್ಪಷ್ಟ ಉದಾಹರಣೆ. 

ಕಾಂಗ್ರೆಸ್‌ ನಲ್ಲಿ ನವೆಂಬರ್ ಕ್ರಾಂತಿ ನಡೆಯಲಿದೆ ಅನ್ನೋ ಸುದ್ದಿ ಸದ್ಯ ರಾಜಕೀಯ ಪಡಸಾಲೆಯಲ್ಲಿ ಹರಿದಾಡ್ತಿದೆ. ಸಚಿವ ಸಂಪುಟದಲ್ಲಿ ಯಾರು ಸ್ಥಾನ ಕಳೆದುಕೊಳ್ಳಬಹುದು? ಯಾರು ಹೊಸದಾಗಿ ಸೇರ್ಪಡೆಯಾಗಬಹುದು? ಸಿದ್ದರಾಮಯ್ಯ ಸಿಎಂ ಹುದ್ದೆಯಿಂದ ಇಳಿಯುತ್ತಾರಾ? ಡಿ.ಕೆ.ಶಿವಕುಮಾರ್‌ ಸಿಎಂ ಕನಸು ನನಸಾಗೇ ಬಿಡುತ್ತಾ? ಸತೀಶ್‌ ಜಾರಕಿಹೊಳಿ ಮುಖ್ಯಮಂತ್ರಿಯಾಗಿಬಿಡ್ತಾರಾ? ಅನ್ನೋ ನೂರಾರು ಪ್ರಶ್ನೆಗಳನ್ನ ಮಾಧ್ಯಮಗಳು ತಮ್ಮ ನ್ಯೂಸ್‌ಗಳಲ್ಲಿ ಬಿತ್ತರಿಸಿ ಜನರನ್ನ ಕೆರಳಿಸೋ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಡಿಕೆಶಿ ಖಾರವಾಗೇ ಉತ್ತರ ಕೊಟ್ಟಿದ್ದಾರೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಅವರು ಯಾವುದೋ ಹೇಳಿಕೆ ಕೊಟ್ಟಿದ್ದಾರೆ ಅನ್ನೋ ವಿಚಾರವಾಗಿ ಡಿಕೆ ಶಿವಕುಮಾರ್ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ. ಮಾಧ್ಯಮದವರು ಕೇಳಿದ ಪ್ರಶ್ನೆಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಡಿಕೆ ಅವರ ಬಗ್ಗೆ ಯಾವುದೋ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು. ಆದರೆ ನಂತರ ತಿಳಿದಿದ್ದು, ಕುಮಾರಸ್ವಾಮಿ ಅಂತಹದ್ದೊಂದು ಹೇಳಿಕೆಯನ್ನ ನೀಡಿಯೇ ಇರಲಿಲ್ಲ. ಇದನ್ನು ತಿಳಿದ ಡಿಕೆ ಶಿವಕುಮಾರ್ ಅವರು ತೀವ್ರ ಆಕ್ರೋಶ ಹೊರಹಾಕಿದರು. ಡಿ ಕೆ ಶಿವಕುಮಾರ್ ಅವರು ಕುಮಾರಸ್ವಾಮಿ ಮತ್ತು ನನ್ನ ನಡುವೆ ತಂದಿಡುವ ಕೆಲಸವನ್ನು ಮಾಡಬೇಡಿ ಎಂದು ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ. ಈ ಮನೆಹಾಳು ಕೆಲಸ ಯಾಕೆ ಮಾಡುತ್ತೀರಿ ಎಂದೇ ಖಾರವಾಗಿಯೇ ಡಿ ಕೆ ಶಿವಕುಮಾರ್ ಅವರು ಪ್ರಶ್ನೆ ಮಾಡಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಡಿ.ಕೆ ಶಿವಕುಮಾರ್ ಅವರು, ಪತ್ರಕರ್ತರೊಬ್ಬರಿಗೆ ‘ಕುಮಾರಸ್ವಾಮಿ ಅವರು ಹೇಳದೆ ಇದ್ದರೂ ಯಾಕೆ ಅವರ ಹೆಸರನ್ನು ಹೇಳುತ್ತಿದ್ದೀರಿ, ಒಬ್ಬರಿಗೊಬ್ಬರಿಗೆ ತಂದಾಕಿ ಮನೆಹಾಳು ಕೆಲಸ ಮಾಡುತ್ತಿದ್ದೀರ ನೀವು’ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಕುಮಾರಸ್ವಾಮಿ ಅವರು ಮಹತ್ವದ ಕ್ರಾಂತಿ ಎಂದು ಹೇಳಿರಬಹುದು. ರಾಜಕೀಯವಾಗಿ ಮಾತನಾಡಿರಬಹುದು. ಆದರೆ ಅದೆಲ್ಲಾ ಮುಖ್ಯವಲ್ಲ ಎಂದರು. ಕೇಂದ್ರ ಸಚಿವ ಅಮಿತ್ ಶಾ ಅವರ ಜೊತೆಯಲ್ಲಿ ಡಿ.ಕೆ ಶಿವಕುಮಾರ್ ಅವರು ಟಚ್‌ನಲ್ಲಿ ಇದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ ಎಂದು ಮಾಧ್ಯಮದವರು ಪ್ರಶ್ನೆ ಮಾಡುತ್ತಿದ್ದೀರಿ. ಯಾವ ದಾಖಲೆಯ ಮೇಲೆ ಇದನ್ನು ಹೇಳುತ್ತಿದ್ದೀರಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ. ಈ ರೀತಿಯ ಕೆಲಸ ಮಾಡಿ ನೀವು ನಿಮ್ಮ ಗೌರವ ಕಳೆದುಕೊಳ್ಳಬೇಡಿ. ನಾವು 45 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇವೆ. ಮುಂದೆ ಈ ರೀತಿ ತಪ್ಪುಗಳನ್ನು ಮಾಡಿದರೆ ನಾನು ಸಹಿಸುವುದಿಲ್ಲ ಎಂದು ಮಾಧ್ಯಮಗಳಿಗೆ ಡಿ.ಕೆ ಶಿವಕುಮಾರ್‌ ಅವರು ಖಾರವಾಗಿಯೇ ಹೇಳಿದ್ದಾರೆ.

ಡಿಕೆ ಶಿವಕುಮಾರ್ ಅವರ ಮಾತು ಸರಿಯೇ. ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಹಬ್ಬಿಸಿ ರಾಜಕಾರಣಿಗಳ ನಡುವೆ ಕಂದಕ ಸೃಷ್ಟಿಸುತ್ತಿವೆ. ‘ರಾಜ್ಯದಲ್ಲಿ ನವೆಂಬರ್‌ ಕ್ರಾಂತಿ ಎಂಬುದು ಮಾಧ್ಯಮದ ಸೃಷ್ಟಿ. ಅಂತಹ ಯಾವುದೇ ಕ್ರಾಂತಿ ನಡೆಯಲ್ಲ. ನಾಯಕತ್ವ ಬದಲಾವಣೆ ನಿಟ್ಟಿನಲ್ಲಿ ಯಾವುದೇ ಕೂಗು ಇಲ್ಲ. ಅದೆಲ್ಲವೂ ಊಹಾಪೋಹ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗಳ ವರ್ತನೆಯನ್ನ ಖಂಡಿಸಿ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಆದರೂ ಕೆಲವು ಚಾನಲ್‌ಗಳು ಇದನ್ನು ಬಿಡಲಿಲ್ಲ. ಬಿಜೆಪಿಗಿಂತ ಮಾಧ್ಯಮಗಳಿಗೆ ಸಿಎಂ ಬದಲಾವಣೆ ಬಗ್ಗೆ ಇಂಟ್ರಸ್ಟ್‌ ಜಾಸ್ತಿ ಇದೆ ಅನ್ನೋದಂತು ಸತ್ಯ. 

ನಿಜವಾಗಿಯೂ ಇದು ಬಹಳ ದುರದೃಷ್ಟಕರ ಸಂಗತಿ. ರಾಜ್ಯದಲ್ಲಿ ಜನರಿಗೆ ಎಷ್ಟು ಸಮಸ್ಯೆಗಳಿದೆ? ರೈತರ ಕಷ್ಟ, ಬಡತನ, ಉದ್ಯೋಗ ಕೊರತೆ, ನೀರು-ವಿದ್ಯುತ್ ಸಮಸ್ಯೆಗಳು – ಇವುಗಳನ್ನು ಮಾಧ್ಯಮಗಳು ಸರಿಯಾಗಿ ಚರ್ಚಿಸುತ್ತಿವೆಯೇ? ಇಲ್ಲ! ಬದಲಿಗೆ ಸಿಎಂ-ಡಿಸಿಎಂ ನಡುವಿನ ಕಿತ್ತಾಟ, ನವೆಂಬರ್‌ನಲ್ಲಿ ಯಾರು ಅಧಿಕಾರ ಹಿಡಿಯುತ್ತಾರೆ ಎಂಬ ಸುಳ್ಳು ಚರ್ಚೆಯಲ್ಲೇ ತೊಡಗಿವೆ. ಜನರ ಕಷ್ಟಕಾರ್ಪಣ್ಯಗಳನ್ನು ಸುದ್ದಿ ಮಾಡಬೇಕಿದ್ದ ಮಾಧ್ಯಮಗಳು, ರಾಜಕೀಯ ಗೊಂದಲಗಳನ್ನು ಮಾತ್ರ ಹಬ್ಬಿಸುತ್ತಿವೆ. ಕೆಲವು ಮಾಧ್ಯಮಗಳು ‘ಮಾರಿಕೊಂಡಿವೆ’, ಇದರಲ್ಲಿ ಯಾವುದೇ ಅನುಮಾನ ಇಲ್ಲ. 

image 77

ಮತ್ತೊಂದು ವಿಷಯ, ವಿಪಕ್ಷ ಬಿಜೆಪಿ ಯಾವಾಗಲಾದರೂ ಜನರ ಸಮಸ್ಯೆಗಳ ಬಗ್ಗೆ ಮಾತನಾಡಿದರೆ, ಮಾಧ್ಯಮಗಳು ಆಗ ಜನರ ಕಷ್ಟವನ್ನು ದೊಡ್ಡ ಸುದ್ದಿಯಂತೆ ತೋರಿಸುತ್ತವೆ. ಆದರೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರ ಜೀವನ ಬದಲಾಯಿಸುತ್ತಿರುವಾಗ, ಅದನ್ನು ಚರ್ಚಿಸುವ ಬದಲು ಸುಳ್ಳು ರೂಮರ್‌ಗಳನ್ನು ಬಿತ್ತರಿಸುತ್ತಿವೆ. ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯ ಅವರೊಂದಿಗೆ ಒಗ್ಗೂಡಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರೂ, ಮಾಧ್ಯಮಗಳು ಅದನ್ನು ನಂಬುವುದಿಲ್ಲ. ಮಾಧ್ಯಮಗಳು ಬಯಾಸ್ಡ್‌ ಸುದ್ದಿಗಳನ್ನ ಮಾಡುತ್ತಿದೆ ಅನ್ನೋದಂತೂ ಸ್ಪಷ್ಟ. 

ಈಗ ಸಾಮಾನ್ಯ ಜನರೂ ಇದನ್ನು ಆಡಿಕೊಳ್ಳುತ್ತಿದ್ದಾರೆ. “ಇಂತಹ ಮಾಧ್ಯಮಗಳು ಇದ್ದರೆ ಎಷ್ಟು ಬಿಟ್ಟರೆಷ್ಟು” ಎಂದು ಹೇಳುತ್ತಿದ್ದಾರೆ. ಸೋಷ್ಯಲ್ ಮೀಡಿಯಾದಲ್ಲಿ ಈ ವಿಡಿಯೋಗೆ ಸಾವಿರಾರು ಲೈಕ್‌ಗಳು ಬಂದಿವೆ. ಜನರು ಹೇಳುತ್ತಾರೆ: “ನಾವು ನಿಜವಾದ ಸುದ್ದಿಗಳನ್ನು ಬಯಸುತ್ತೇವೆ, ಸುಳ್ಳು ಕ್ರಾಂತಿಗಳಲ್ಲ!” ಅಂತ ಉಗೀತಾ ಇದ್ದಾರೆ. ಡಿಕೆ ಶಿವಕುಮಾರ್ ಅವರಂತಹ ನಾಯಕರು ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಳ್ಳುವುದು ಸರಿಯೇ. ಏಕೆಂದರೆ, ಮಾಧ್ಯಮಗಳು ಜನರ ಧ್ವನಿಯಾಗಬೇಕು, ರಾಜಕೀಯ ಗೊಂದಲದ ಕಾರ್ಖಾನೆಯಲ್ಲ.

image 77

ಮುಖ್ಯವಾಹಿನಿ ಮಾಧ್ಯಮಗಳು ಎಂದು ಹೇಳಿಕೊಳ್ಳುವ ಸೆಟಲೈಟ್‌ ಮಾಧ್ಯಮಗಳು ಬೆಳಿಗ್ಗೆಯಿಂದ ಸಂಜೆಯವರೆಗೂ ರಾಜಕಾರಣಿಗಳ ಮನೆ ಕಚೇರಿ ಕಾಯುತ್ತಾ, ಅವರ ಬಾಯಿಗೆ ಮೈಕ್‌ ಹಿಡಿಯುವುದನ್ನೇ ಪತ್ರಿಕಾಧರ್ಮ ಎಂದುಕೊಂಡಂತಿದೆ. ಈ ರಾಜ್ಯದಲ್ಲಿ ನೂರಾರು ಸಮಸ್ಯೆಗಳಿಗಾಗಿ ಒಂದಲ್ಲ ಒಂದು ಕಡೆ ನಿತ್ಯವೂ ಪ್ರತಿಭಟನೆಗಳು ನಡೆಯುತ್ತಿವೆ. ಅಲ್ಲೆಲ್ಲ ಮುಖ್ಯವಾಹಿನಿಯ ಮಾಧ್ಯಮ ಪ್ರತಿನಿಧಿಗಳು ಕಾಣಿಸೋದೇ ಇಲ್ಲ. ಇತ್ತೀಚೆಗೆ ಕಬ್ಬು ಬೆಳೆಗಾರರ ಪ್ರತಿಭಟನೆ ವಾರದವರೆಗೆ ನಡೆದಾಗ ಗಂಭೀರವಾಗಿ ವರದಿ ಮಾಡದ ಮಾಧ್ಯಮಗಳಿಗೆ ರೈತ ಮುಖಂಡರು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡಾಗ ಧಾವಿಸಿ ವರದಿ ಮಾಡಿದ್ದವು. ಬಿಜೆಪಿ ಮುಖಂಡರ ಎಂಟ್ರಿ ಆದ ನಂತರ ಮಾಧ್ಯಮಗಳು ರಾಜಕೀಯ ಕಾರಣಕ್ಕೆ ವರದಿ ಮಾಡಿದ್ದವು. ಇದೇ ರೀತಿ ರಾಜ್ಯದಲ್ಲಿ ನೂರಾರು ಸಮಸ್ಯೆಗಳಿವೆ. ಅವೆಲ್ಲವನ್ನೂ ಬಿಟ್ಟು ಮುಖ್ಯಮಂತ್ರಿ ಬದಲಾವಣೆ, ರಾಜಕಾರಣಿಗಳ ಹೇಳಿಕೆಯನ್ನೇ ರಾಜ್ಯದ ಸಮಸ್ಯೆ ಎಂಬಂತೆ ಪ್ರೈಂ ಟೈಮ್‌ನಲ್ಲಿ ಕೂತು ಚರ್ಚೆ ಮಾಡುತ್ತಾ ಪತ್ರಿಕೋದ್ಯಮದ ಮಾನ ಕಳೆಯುತ್ತಿದ್ದಾರೆ. 

ಹಿರಿಯ ಪತ್ರಕರ್ತ ರಾಜಾರಾಮ್‌ ತಲ್ಲೂರು ಅವರೂ ಮಾಧ್ಯಮಗಳ ನಡೆ ಬಗ್ಗೆ ಪ್ರಸ್ತಾಪ ಮಾಡಿ ತಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.

4 28

ನಿಜಕ್ಕೂ ಮುಖ್ಯಮಂತ್ರಿ ಬದಲಾವಣೆ ಮಾಡಬೇಕಿರೋದು ಮಾಧ್ಯಮಗಳಾ? ಮಾಧ್ಯಮಗಳಿಗೆ ಮುಖ್ಯಮಂತ್ರಿ ಬದಲಾವಣೆಯ ವಿಚಾರದಲ್ಲಿ ಯಾಕಷ್ಟು ಆಸಕ್ತಿ? ಜನಸಾಮಾನ್ಯರ ನೋವುಗಳಿಗೆ ಸ್ಪಂದಿಸದ ಮಾಧ್ಯಮಗಳು ಮುಂದೊಂದು ದಿನ ಹೇಳ ಹೆಸರಿಲ್ಲದಂತಾಗುವುದು ಖಂಡಿತಾ. ಡಿ ಕೆ ಶಿವಕುಮಾರ್‌ ಮಾತ್ರವಲ್ಲ ಕಾಂಗ್ರೆಸ್‌ನ ಎಲ್ಲ ನಾಯಕರು ಇಂತಹ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಮಾಧ್ಯಮಗಳಿಗೆ ಝಾಡಿಸುವ ಅಗತ್ಯವಿದೆ. ನವೆಂಬರ್‌ ಕ್ರಾಂತಿಯ ಹುಚ್ಚಾಟಗಳಿಗೆ ಡಿಕೆಶಿ ಅವರ ಮಾತುಗಳು ಬ್ರೇಕ್‌ ಹಾಕಲಿದೆಯಾ ಕಾದು ನೋಡಬೇಕಿದೆ.

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...