ರೈತ ಮಹಿಳೆಯ ಕ್ಷಮೆಗೆ ಕಂಗನಾ ಅರ್ಹರೇ?

Date:

2020ರಲ್ಲಿ ಕೃಷಿಕಾಯ್ದೆಗಳ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ವೇಳೆ ರೈತ ಮಹಿಳೆ ಮಹಿಂದರ್ ಕೌರ್ ಅವರನ್ನು ಉಲ್ಲೇಖಿಸಿ ಕಂಗನಾ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡಿದ್ದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವೃದ್ಧ ಮಹಿಳೆಯೊಬ್ಬರ ಫೋಟೋವನ್ನು ಒಳಗೊಂಡ ಪೋಸ್ಟ್‌ಗೆ ಕಂಗನಾ ಕಾಮೆಂಟ್ ಮಾಡಿದ್ದು, ನೂರು ರೂಪಾಯಿ ಕೊಟ್ಟರೆ ಪ್ರತಿಭಟನೆಗೆ ಬರುತ್ತಾರೆ ಎಂದು ಹೇಳಿದ್ದರು.

ಸಿನಿಮಾಗಳಿಗಿಂತ ಜಾಸ್ತಿ ಕಾಂಟ್ರವರ್ಸಿಗಳಿಂದಲೇ ಸದ್ದು-ಸುದ್ದಿ ಮಾಡುತ್ತಿರುವ ಬಾಲಿವುಡ್ ನಟಿ, ಸಂಸದೆ ಕಂಗನಾ ರನೌತ್‌ಗೆ ಮಾನಹಾನಿ ಪ್ರಕರಣದಲ್ಲಿ ಜಾಮೀನು ಸಿಕ್ಕಿದೆ. ಕಂಗನಾ ರನೌತ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಾಕಿದ ಪೋಸ್ಟ್‌ ಕುರಿತಂತೆ ವಿಷಾದ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ ʼಪ್ರತಿಯೊಬ್ಬರ ತಾಯಿ ಕುರಿತು ಗೌರವ ಹೊಂದಿದ್ದೇನೆʼ ಅಂತ ನ್ಯಾಯಾಲಯದಲ್ಲಿ ಹೇಳಿದ್ದಾರೆ.

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಸಂಸದೆಯಾಗಿರುವ ಕಂಗನಾ ರನೌತ್‌ ವಿಡಿಯೋ ಕಾನ್ಫೆರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಲು ಅವಕಾಶ ನೀಡಬೇಕು ಅಂತ ಕಳೆದ ಸೆಪ್ಟೆಂಬರ್‌ನಲ್ಲಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ಇದಕ್ಕೆ ನ್ಯಾಯಾಲಯ ಅವಕಾಶ ನೀಡಿರಲಿಲ್ಲ. ಹಾಗಾಗಿ ಮಂಗಳವಾರ (ಅ. 28) ನ್ಯಾಯಾಲಯಕ್ಕೆ ಖುದ್ದು ಹಾಜರಾದ ಹಿನ್ನಲೆಯಲ್ಲಿ ನ್ಯಾಯಾಲಯದ ಸುತ್ತಲೂ ಗರಿಷ್ಠ ಭದ್ರತೆಯನ್ನೂ ಕೈಗೊಳ್ಳಲಾಗಿತ್ತು. 2021 -21 ರೈತ ಹೋರಾಟದ ವೇಳೆ ಮಹಿಳಾ ಹೋರಾಟಗಾರರ ಬಗ್ಗೆ ಅವಹೇಳಕಾರಿ ಹೇಳಿಕೆ ನೀಡಿರುವ ಆರೋಪದಲ್ಲಿ ಕಂಗನಾ ವಿರುದ್ಧ ಪ್ರಕರಣ ದಾಖಲಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಕಂಗನಾ ಕ್ಷಮೆ
ಮಹಿಂದರ್ ಕೌರ್

2020ರಲ್ಲಿ ಕೃಷಿಕಾಯ್ದೆಗಳ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಭಟಿಂಡಾದ ಬಹದ್ದೂರ್‌ಗಢ್ ಜಾಂಡಿಯನ್ ಗ್ರಾಮದ ಮಹಿಂದರ್ ಕೌರ್ ಅವರನ್ನು ಉಲ್ಲೇಖಿಸಿ ಕಂಗನಾ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವೃದ್ಧ ಮಹಿಳೆಯೊಬ್ಬರ ಛಾಯಾಚಿತ್ರವನ್ನು ಒಳಗೊಂಡ ಪೋಸ್ಟ್‌ಗೆ ಅವರು ಕಾಮೆಂಟ್ ಮಾಡಿದ್ದು, ನೂರು ರೂಪಾಯಿ ನೀಡಿದರೆ ಪ್ರತಿಭಟನೆಗೆ ಬರುತ್ತಾರೆ ಎಂದು ಹೇಳಿದ್ದರು. ವಯಸ್ಸಾದ ರೈತ ಮಹಿಳೆ ಮಹಿಂದರ್ ಕೌರ್ ಅವರನ್ನು ದಿಲ್ಲಿಯ ಶಾಹೀನ್ ಬಾಗ್ ಸಿಎಎ ವಿರೋಧಿ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಬಿಲ್ಕಿಸ್ ಬಾನೋ ಎಂದು ತಪ್ಪಾಗಿ ಗುರುತಿಸಿ, “ಪ್ರತಿಭಟನೆಗಳಿಗೆ 100 ರೂಪಾಯಿಗೆ ಲಭ್ಯ” ಎಂದು ವ್ಯಂಗ್ಯವಾಗಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಅಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಆ ಪೋಸ್ಟ್‌ ಅನ್ನ ಡಿಲೀಟ್‌ ಮಾಡಿದ್ದರು.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ‘ಕಂಗನಾ ರನೌತ್ ತಮ್ಮನ್ನು ಶಾಹೀನ್ ಬಾಗ್‌ನ ಕಾರ್ಯಕರ್ತೆ ಬಿಲ್ಕಿಸ್ ಬಾನೊ ಎಂದು ತಪ್ಪಾಗಿ ಗುರುತಿಸಿ ಮಾನಹಾನಿ ಮಾಡಿದ್ದಾರೆ,’ ಎಂದು ಮಹಿಂದರ್ ಕೌರ್ ಆರೋಪಿಸಿ, 2021ರ ಜನವರಿಯಲ್ಲಿ ಬಠಿಂಡಾದಲ್ಲಿ ಕಂಗಾನ ರನೌತ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ನಾನು ರೈತರ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದೆ. ಆದರೆ ಕಂಗನಾ ನನ್ನನ್ನು ಶಾಹೀನ್ ಬಾಗ್‌ನಲ್ಲಿ ಭಾಗವಹಿಸಿದ್ದ ‘ದಾದಿ’ ಎಂದು ಗುರುತಿಸಿ ತಪ್ಪು ಮಾಹಿತಿ ಹಂಚಿಕೊಂಡರು ಎಂದು ಮಹಿಂದರ್ ಕೌರ್ ತಮ್ಮ ದೂರಿನಲ್ಲಿ ತಿಳಿಸಿದ್ದರು. ಈಗ ರದ್ದುಗೊಂಡಿರುವ ಕೃಷಿ ಕಾನೂನುಗಳ ವಿರುದ್ಧ ರೈತರು ಹಿಂದೆ ಪ್ರತಿಭಟನೆ ಆರಂಭಿಸಿದಾಗಿನಿಂದಲೂ ನಾನು ಭಾಗಿಯಾಗಿದ್ದೇನೆ. ಮಹಿಂದರ್ ಕೌರ್ ತಮ್ಮ ವಯಸ್ಸಾದರೂ, ದೆಹಲಿಗೆ ತೆರಳಿ ಧರಣಿ ಮಾಡಿದ್ದೇನೆ. ನನಗೂ ಶಾಹೀನ್ ಬಾಗ್‌ನಲ್ಲಿ ಕಾಣಿಸಿಕೊಂಡ ಮಹಿಳೆಯೊಂದಿಗೆ ಯಾವುದೇ ಸಂಬಂಧವಿಲ್ಲ,” ಎಂದು ಮಹಿಂದರ್ ಕೌರ್ ಸ್ಪಷ್ಟಪಡಿಸಿದ್ದರು.

Kangana

ಕಂಗನಾ ರನೌತ್ ಅವರು ಈ ದೂರನ್ನು ರದ್ದುಗೊಳಿಸುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್ ಆಗಸ್ಟ್ 1ರಂದು ಆ ಅರ್ಜಿಯನ್ನು ತಿರಸ್ಕರಿಸಿತ್ತು. ಸುಮಾರು 13 ತಿಂಗಳ ವಿಚಾರಣೆಯ ನಂತರ, ಭಟಿಂಡಾ ನ್ಯಾಯಾಲಯವು ರನೌತ್ ಅವರಿಗೆ ಖುದ್ದಾಗಿ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತು. ತರುವಾಯ, ಪ್ರಕರಣದಲ್ಲಿ ಪರಿಹಾರ ಕೋರಿ ರನೌತ್ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಮೊರೆ ಹೋದರು, ಆದರೆ ನ್ಯಾಯಾಲಯವು ಅದನ್ನು ಸ್ವೀಕರಿಸಲಿಲ್ಲ. ನಂತರ ಅವರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋದರು ಆದರೆ ಅಲ್ಲಿಯೂ ಯಾವುದೇ ಪರಿಹಾರ ಸಿಗಲಿಲ್ಲ. ನ್ಯಾಯಾಲಯದ ನಿರ್ದೇಶನಗಳನ್ನು ಅನುಸರಿಸಿ, ಬಿಜೆಪಿ ಸಂಸದರು ಸೋಮವಾರ ಭಟಿಂಡಾ ನ್ಯಾಯಾಲಯದ ಮುಂದೆ ಹಾಜರಾಗಿದ್ದು, ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ.

ಈ ಮಧ್ಯೆ ಜೂನ್‌ 6ರಂದು, ಶಹೀದ್ ಭಗತ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೈಗಾರಿಕಾ ಭದ್ರತಾ ಪಡೆಯ ಮಹಿಳಾ ಸಿಬ್ಬಂದಿ ಕುಲ್ವಿಂದರ್​ ಕೌರ್ ಕಂಗನಾ ರನೌತ್‌ ಗೆ ಕಪಾಳಮೋಕ್ಷ ಮಾಡಿದ್ದರು. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಎರಡು ದಿನಗಳ ನಂತರ ರನೌತ್ ದೆಹಲಿಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ಎರಡು ವರ್ಷಗಳ ಹಿಂದಿನ ಘಟನೆಯನ್ನು ಆಕೆ ಮರೆತಿರಲಿಲ್ಲ. ಎದುರಿಗೆ ಸಿಕ್ಕಿದ್ದೇ ತಡ ಆಕ್ರೋಶದ ಕಟ್ಟೆ ಒಡೆದಿತ್ತು. ಘಟನೆ ಬಳಿಕ ಕುಲ್ವಿಂದರ್ ಕೌರ್ ಅವರನ್ನು ಸಿಐಎಸ್ಎಫ್ ಅಮಾನತು ಮಾಡಿತ್ತು. ಘಟನೆ ಬಳಿಕ ಕೌರ್ ವಿರುದ್ಧ ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ಕೂಡ ದಾಖಲಾಗಿತ್ತು. ಕೆಲ ವಾರಗಳ ನಂತರ ಸಿಐಎಸ್‌ಎಫ್‌ಗೆ ಕೌರ್‌ ಅವರನ್ನ ಮರಳಿ ಸೇರಿಸಲಾಗಿತ್ತು.

ಕಂಗನಾ ರಣಾವತ್‌ಗೆ ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್‌ ಮಹಿಳಾ ಸಿಬ್ಬಂದಿ ಕುಲ್ವೀಂದರ್‌ ಕೌರ್‌ ಪ್ರತಿಕ್ರಿಯಿಸಿ, “ಕಂಗನಾ ಹಳೆಯ ಹೇಳಿಕೆಯಿಂದಲೇ ನಾನು ಸಿಟ್ಟಿಗೆದ್ದು ಅವರಿಗೆ ಹೊಡೆದಿದ್ದು” ಅಂತ ಹೇಳಿದ್ದರು. ಸದ್ಯ ರದ್ದುಗೊಂಡಿರುವ ಕೃಷಿ ಕಾನೂನುಗಳ ವಿರುದ್ಧ ನಡೆದ ರೈತರ ಪ್ರತಿಭಟನೆಗಳ ಕುರಿತು ರಣಾವತ್ ನೀಡಿದ ಹೇಳಿಕೆಯಿಂದ ಅಸಮಾಧಾನಗೊಂಡು ಕಂಗನಾ ಕೆನ್ನೆಗೆ ಬಾರಿಸಿರುವುದಾಗಿ ಕಾನ್‌ಸ್ಟೆಬಲ್ ಹೇಳಿದ್ದರು. “ನನ್ನ ತಾಯಿ ಕೂಡಾ ಅಲ್ಲಿದ್ದರು. ಕಂಗನಾ ಈ ಹೇಳಿಕೆ ನೀಡಿದಾಗ ನನ್ನ ತಾಯಿ ಪ್ರತಿಭಟನೆ ನಡೆಸುತ್ತಿದ್ದರು” ಎಂದು ಕೌರ್ ತಮ್ಮ ಆಕ್ರೋಶವನ್ನ ಹೊರಹಾಕಿದ್ದರು. ಕಂಗನಾ ನೀಡಿದ ಹೇಳಿಕೆಯಿಂದ ಕೊನೆಗೆ ಅವರೇ ಕಪಾಳಮೋಕ್ಷ ಮಾಡಿಸಿಕೊಳ್ಳುವ ಹಾಗಾಯ್ತು ಅಂತ ಸೋಷಿಯಲ್‌ ಮೀಡಿಯಾಗಳಲ್ಲೂ ಜನರು ಕಾಮೆಂಟ್‌ ಮಾಡಿದ್ದರು.

ಆದ್ರೆ ಕಂಗನಾ ರಣಾವತ್‌ ಮಾಡಿಕೊಂಡಿರುವ ಕಾಂಟ್ರವರ್ಸಿಗಳು ಒಂದೆರಡಲ್ಲ. ಈ ಹಿಂದೆ ಬಾಂಗ್ಲಾದೇಶದ ಹಿಂಸಾಚಾರವನ್ನು ಪಂಜಾಬ್‌ನ ರೈತರ ಆಂದೋಲನಕ್ಕೆ ಜೋಡಿಸುವ ಮೂಲಕ ಕಂಗನಾ ಇಕ್ಕಟ್ಟಿನಲ್ಲಿ ಸಿಲುಕಿಸಿದ್ದರು. ಕೇಂದ್ರ ಸರ್ಕಾರದ ಹೊಗಳಿಕೆಯಲ್ಲಿ ಮುಳುಗಿದ್ದ ಕಂಗನಾ, ರೈತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ದೇಶದ ಅನ್ನದಾತರನ್ನು ಕೆರಳಿಸಿದ್ದರು. ಪಂಜಾಬ್‌ನಲ್ಲಿ ರೈತರ ಹೆಸರಿನಲ್ಲಿ ಗೂಂಡಾಗಳು ಹಿಂಸಾಚಾರವನ್ನು ಹರಡುತ್ತಿದ್ದಾರೆ ಎಂದು ಕಂಗನಾ ರನಾವತ್ ಸಂದರ್ಶನದಲ್ಲಿ ಹೇಳಿದ್ದರು. ಅಲ್ಲಿ ಅತ್ಯಾಚಾರ ಮತ್ತು ಕೊಲೆಗಳು ನಡೆಯುತ್ತಿದ್ದವು. ನಮ್ಮ ನಾಯಕತ್ವ ಬಲವಾಗಿಲ್ಲದಿದ್ದರೆ, ರೈತರ ಆಂದೋಲನದ ಸಮಯದಲ್ಲಿ ಪಂಜಾಬ್ ಅನ್ನು ಬಾಂಗ್ಲಾದೇಶವನ್ನಾಗಿ ಮಾಡಲಾಗುತ್ತಿತ್ತು. ಕೃಷಿ ಮಸೂದೆಯನ್ನು ಹಿಂಪಡೆಯಲಾಯಿತು ಇಲ್ಲದಿದ್ದರೆ ಈ ಗೂಂಡಾಗಳಿಗೆ ಬಹಳ ದೊಡ್ಡ ಯೋಜನೆ ಇತ್ತು. ಅವರು ದೇಶದಲ್ಲಿ ಏನು ಬೇಕಾದರೂ ಮಾಡಬಹುದಿತ್ತು ಅಂತ ಹೇಳಿ ರೈತರ ಆಕ್ರೋಶಕ್ಕೆ ಕಾರಣರಾಗಿದ್ದರು.

ಅಷ್ಟೇ ಅಲ್ಲ ರೈತರ ಹೋರಾಟದ ವೇಳೆ ಕಂಗನಾ ರನೌತ್ ರೈತರನ್ನು ಖಲಿಸ್ತಾನಿಗಳು ಎಂದೂ ಕರೆದಿದ್ದರು. ಹೋರಾಟ ನಡೆಸುತ್ತಿದ್ದ ರೈತರನ್ನು ಖಲಿಸ್ತಾನಿ ಉಗ್ರರು ಎಂದು ಕರೆದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯನ್ನು ಹೊಗಳುತ್ತಾ, 1947ರಲ್ಲಿ ಭಾರತಕ್ಕೆ ಸಿಕ್ಕಿದ ಸ್ವಾತಂತ್ರ್ಯ ‘ಭಿಕ್ಷೆ’ ಎಂದು ಹೇಳಿ ವಿವಾದಕ್ಕೆ ಒಳಗಾಗಿದ್ದರು. 2014 ರಲ್ಲಿ ನರೇಂದ್ರ ಮೋದಿ ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತು ಎಂದು ಅವರು 2021 ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿ ಜನರಿಂದ ಛೀಮಾರಿ ಹಾಕಿಸಿಕೊಂಡಿದ್ದರು.

ಇದನ್ನೂ ಓದಿ ಈ ದಿನ ಸಂಪಾದಕೀಯ | ಟನಲ್ ರೋಡ್ ದೈತ್ಯ ಯೋಜನೆಯನ್ನು ಸಾರ್ವಜನಿಕ ಚರ್ಚೆಗಿಡಲಿ ಸರ್ಕಾರ

2020 ರಲ್ಲಿ ಬಾಲಿವುಡ್ ಮಾಫಿಯಾಗಿಂತ ಮುಂಬೈ ಪೊಲೀಸರು ತನಗೆ ಹೆಚ್ಚು ಕಿರುಕುಳ ನೀಡಿದ್ದಾರೆ ಎಂದು ನಟಿ ಹೇಳಿದ್ದರು. ಅವರು ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದರು. ಈ ನಗರದಲ್ಲಿ ತನಗೆ ಅಸುರಕ್ಷಿತ ಭಾವನೆ ಮೂಡುತ್ತಿದೆ ಎಂದಿದ್ದರು. ಜೆಎನ್‌ಯು ವಿದ್ಯಾರ್ಥಿಗಳು ಮತ್ತು ಬಿಜೆಪಿ ವಿರೋಧಿ ಗುಂಪುಗಳನ್ನು ಕಂಗನಾ ರನೌತ್ ‘ತುಕ್ಡೆ ತುಕ್ಡೆ ಗ್ಯಾಂಗ್’ ಎಂದು ಕರೆದು ಅವರು ದೇಶದ್ರೋಹಿಗಳು ಎಂದು ಹೇಳಿದ್ದರು.

ಇದೀಗ ರೈತ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಕ್ಕಾಗಿ ಕಂಗನಾ ಕ್ಷಮೆಯಾಚಿಸಿದ್ದಾರೆ. ಆದರೆ ಪಂಜಾಬ್‌ನ ಬಹಿಂಡಾ ಜಿಲ್ಲೆಯ ಬಹದ್ದೂರ್‌ಗಢ್ ಜಾಂಡಿಯನ್ ಗ್ರಾಮದ ನಿವಾಸಿ 81 ವರ್ಷದ ಮಹಿಂದರ್ ಕೌರ್ ಸಂಸದೆಯನ್ನು ಕ್ಷಮಿಸಲ್ಲ ಎಂದು ಹೇಳಿದ್ದಾರೆ. ಬಾಲಿವುಡ್ ನಟಿ ಕಂಗನಾ ರಣಾವತ್ ಮಾತಾಡಿದ್ರೆ ವಿವಾದ ಎಂಬಂತಾಗಿದೆ. ಎಲ್ಲಿ ಯಾವ ರೀತಿ ಯಾರ ಪರವಾಗಿ ಹೇಗೆ ಮಾತನಾಡಬೇಕು, ನಾಲಿಗೆಯ ಮೇಲೆ ಹೇಗೆ ಹಿಡಿತ ಇರಬೇಕು ಅಂತ ಅರಿವಿಲ್ಲದವರು ಸಂಸದರ ಸ್ಥಾನದಲ್ಲಿ ಕುಳಿತಾಗ ಅವರಿಂದ ಇನ್ನೇನನ್ನು ನಿರೀಕ್ಷೆ ಮಾಡಲು ಸಾಧ್ಯ ಇದೆ?

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...