ʼಈ ದಿನʼ ಕವಿತೆ | ಸರಿದಿತ್ತು ನಮ್ಮಯ ಸೆರಗು…

Date:

ಹಸುಗೂಸಿನ ಒಣಗಿದ ಗಂಟಲು
ಎದೆಹಾಲಿಗಾಗಿ ಮೊರೆಯಿಟ್ಟಾಗ;
ಸರಿದಿತ್ತು ನಮ್ಮಯ ಸೆರಗು!

ಬಿದ್ದುಎದ್ದು ಬಂದ ಮಕ್ಕಳು
ಮಡಿಲಲ್ಲಿ ಕಣ್ಣೀರಿಟ್ಟಾಗ;
ಸರಿದಿತ್ತು ನಮ್ಮಯ ಸೆರಗು!

ಹೊಲಗಳಲ್ಲಿ
ಪೈರು ನೆಡುವಾಗ, ಹೊರೆ ಹೊತ್ತಾಗ,
ಕಣಜ ತುಂಬುವಾಗ
ಸರಿದಿತ್ತು ನಮ್ಮಯ ಸೆರಗು!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಸಪೊರಕೆ ಹಿಡಿದು
ರಸ್ತೆ ಬದಿಗಳಲ್ಲಿ, ಹಾದಿ‌ಬೀದಿಗಳಲ್ಲಿ
ಕಸ ಗುಡಿಸುವಾಗ, ಕಸವೆತ್ತುವಾಗ
ಸರಿದಿತ್ತು ನಮ್ಮಯ ಸೆರಗು!

ಮನೆಮಂದಿಗೆಲ್ಲಾ ಬುತ್ತಿಯಕಟ್ಟಿ,
ಮನೆಯಹೊರಗೆ ದುಡಿಯುಲು ನಿಂತಾಗ;
ಆಫೀಸಿಗೆ ಸಮಯಕ್ಕೆ ಸರಿಯಾಗಿ
ತಲುಪಲು ಓಡೋಗಿ ಬಸ್ ಹತ್ತುವಾಗ ;
ಸರಿದಿತ್ತು ನಮ್ಮಯ ಸೆರಗು!

ಆಗೆಲ್ಲಾ ನಮಗರಿವಿಲ್ಲದೆ
ಸರಿದಿತ್ತು ನಮ್ಮಯ ಸೆರಗು!
ಅರಿತೊಡನೆ ಕೈಗಳು ಬಾಗುತ್ತಿದ್ದವು
ಸರಿಪಡಿಸಿಕೊಳ್ಳಲು!

ಇಂದು ಅರಿವಿದ್ದೇ ಸರಿಸುತ್ತೇವೆ!
ಸರಿಸುತ್ತೇವೆ‌ ಸೆರುಗುಗಳ !
ಸರಿದ ಸೆರಗುಗಳ ಅಂಚುಗಳ ಹರಿದು
ಮಾಡುತ್ತೇವೆ ನೇಣಿನ ಕುಣಿಕೆಗಳ!

ಸರಿಸಿದ್ದ ಸೆರಗಿನಲ್ಲಿ ಕೂಡಿಟ್ಟ
ನಮ್ಮಯ ಪ್ರೀತಿ- ವಾತ್ಸಲ್ಯ,
ದುಡಿಮೆ- ಘನತೆಯನ್ನ
ಅರಿಯದ ಮೂರ್ಖರ ಸದೆಬಡೆಯುತ್ತೇವೆ!
ನಮ್ಮನ್ನ ಮಾಂಸದ ಮುದ್ದೇ ಎನ್ನುವ
ಕೊಳೆತು ನಾರುವ ನಾಲಿಗೆಗಳ ಸೀಳುತ್ತೇವೆ!

ಹರಿದ ಅಂಚಿನ ಸೆರಗುಗಳನ್ನೇ ಪತಾಕೆಯನ್ನಾಗಿ
ಬಾನೆತ್ತರಕ್ಕೆ‌ ಹಾರಿಬಿಡುತ್ತೇವೆ!
ಅಂಚರಿದ ಸೆರಗುಗಳೆಲ್ಲಾ ಒಂದು ಗಂಟಾಗಿ
ನಮ್ಮ ಘನತೆಯನ್ನು ಗಾಳಿಗೆ ತೂರಿಬಿಡುವ
ತಂತ್ರಗಳ‌ ಮಣ್ಣುಮುಕ್ಕಿಸುತ್ತೇವೆ!

ಕವಿ : ನಿರ್ಮಲಾ ಎಚ್ ಎಲ್
ಫೋಟೋ: ಪಿ ಸಾಯಿನಾಥ್

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...