ʼಈ ದಿನʼ ವಿಶೇಷ | ಎಪ್‍ಸ್ಟೀನ್ ಸಂದೇಶಗಳಿಂದ ಬಹಿರಂಗ: ಟ್ರಂಪ್‍ ಮುಂದೆ ಮೋದಿ ಅಜೆಂಡಾ ತರಲು ಅನಿಲ್ ಅಂಬಾನಿಯಿಂದ ಲೈಂಗಿಕ ಅಪರಾಧಿಯ ಬಳಕೆ!

Date:

ಅನಿಲ್ ಅಂಬಾನಿ ಮೇ 2019ರಲ್ಲಿ ನ್ಯೂಯಾರ್ಕ್ ನಲ್ಲಿ ನಡೆದಿರುವ ಸಭೆಯಲ್ಲಿ ಭಾಗವಹಿಸಿದ್ದಾರೆ ಎನ್ನುವುದನ್ನು ಯುಎಸ್ ನ್ಯಾಯ ಇಲಾಖೆ (ಯುಎಸ್‍ಡಿಒಜೆ)ಯು ಜೆಫ್ರಿ ಎಪ್‍ಸ್ಟೀನ್‍ನ ಡಿವೈಸ್‌ಗಳಿಂದ ಪಡೆದಿರುವ ದಾಖಲೆಗಳು ಬಹಿರಂಗಪಡಿಸಿವೆ. ಈ ಸಭೆಯನ್ನು ಜೆಫ್ರಿ ಎಪ್‍ಸ್ಟೀನ್ ’ಮೋದಿಯ ಓರ್ವ ಪ್ರತಿನಿಧಿಯನ್ನು ಒಳಗೊಂಡಿರುವಂತಹದು’ ಎಂದು ವರ್ಣಿಸಿದ್ದಾನೆ. ಜೊತೆಗೆ ಯುಎಸ್ ರಾಜಕೀಯ ಅವಕಾಶ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಆದ್ಯತೆಗಳ ಮೇಲಿನ ವಿಚಾರವಾಗಿ ಅನಿಲ್‌ ಅಂಬಾನಿ 2017ರಿಂದ 2019ರವರೆಗೆ ಎಪ್‍ಸ್ಟೀನ್ ಜೊತೆಗೆ ಸಂಪರ್ಕದಲ್ಲಿದ್ದರು ಎಂದು ಹೇಳಿದ್ದಾನೆ.

ನವ ದೆಹಲಿ: 2019ರಲ್ಲಿ ಅಪ್ರಾಪ್ತ ವಯಸ್ಕರ ಕಳ್ಳಸಾಗಣೆಯ ವಿಚಾರಣೆಗಾಗಿ ಕಾಯುತ್ತಿದ್ದ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಜೆಫ್ರಿ ಎಪ್‍ಸ್ಟೀನ್ ನಿಂದ ವಶಪಡಿಸಿಕೊಳ್ಳಲಾದ ಸಾಧನಗಳಿಂದ ಪಡೆದ ದಾಖಲೆಗಳು, 2017ರಿಂದ 2019ರವರೆಗಿನ ಅವಧಿಯಲ್ಲಿ ಭಾರತೀಯ ಉದ್ಯಮಿ ಅನಿಲ್ ಅಂಬಾನಿ ಅವರೊಂದಿಗಿನ ಸಂವಹನಗಳನ್ನು ಬಹಿರಂಗಪಡಿಸುತ್ತವೆ. ಇದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಬಗೆಗಿನ ಚರ್ಚೆಗಳು ಮತ್ತು ಎಪ್‍ಸ್ಟೀನ್ ಭಾರತದ ಚುನಾವಣೆಯ ಅವಧಿಯಲ್ಲಿ ’ಮೋದಿಯಿಂದ ಕಳುಹಿಸಲ್ಪಟ್ಟ ಪ್ರತಿನಿಧಿ’ ಎಂದು ವರ್ಣಿಸಿದವರೊಂದಿಗಿನ ಮೇ 2019ರ ಸಭೆಯೂ ಸೇರಿದೆ.

ಎಪ್‍ಸ್ಟೀನ್‍ನ ಐಫೋನ್‍ನಿಂದ ಬಂದ ಪಠ್ಯ ಸಂದೇಶಗಳು ಮತ್ತು ಇಮೇಲ್‍ಗಳನ್ನು ಒಳಗೊಂಡಿರುವ ದಾಖಲೆಗಳು ಮೋದಿಯ ರಾಜತಾಂತ್ರಿಕ ಭೇಟಿಗಳ ಬಗ್ಗೆ ಅನಿಲ್ ಅಂಬಾನಿ ಎಪ್‍ಸ್ಟೀನ್ ಅವರಿಂದ ಮಾಹಿತಿಯನ್ನು ಕೇಳುವುದನ್ನು ಮತ್ತು ಭಾರತೀಯ ಆಸಕ್ತಿಗಳು ಮತ್ತು ಅಮೆರಿಕದ ರಾಜಕೀಯ ವ್ಯಕ್ತಿಗಳ ನಡುವೆ ಸಂಪರ್ಕ ಸಾಧಿಸುವವನಾಗಿ ಎಪ್‍ಸ್ಟೀನ್ ತನ್ನನ್ನು ಸ್ಥಾಪಿಸಿಕೊಳ್ಳುವುದನ್ನು ತೋರಿಸುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅತ್ಯಂತ ಗಮನಾರ್ಹ ಸಂವಹನೆಗಳು ನಡೆದಿರುವುದು ಮೇ 2019ರಲ್ಲಿ – ಭಾರತದಲ್ಲಿ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದ ಸಂದರ್ಭದಲ್ಲಿ- ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಕಳ್ಳಸಾಗಾಣಿಕೆ ಮಾಡಿದ ಸರಕಾರದ ಆರೋಪದಡಿಯಲ್ಲಿ ಎಪ್‍ಸ್ಟೀನ್ ಬಂಧನವಾಗುವ 6 ವಾರಗಳಿಗೆ ಮೊದಲು.

ಮೇ 14 ಮತ್ತು ಮೇ 20ರ Epstein and Ambani coordinated ನಡುವೆ, ಎಪ್‍ಸ್ಟೀನ್ ಮತ್ತು ಅಂಬಾನಿ ಮೇ 23ಕ್ಕೆ ಒಂದು ಸಭೆಯನ್ನು ಸಂಯೋಜಿಸಿದರು. ಅದೇ ದಿನ ಮೋದಿಯ ಮರುಚುನಾವಣೆಯಲ್ಲಿನ ನಿರ್ಧಾರಕ ವಿಜಯವನ್ನು ಘೋಷಿಸಲಾಗಿತ್ತು.

ಮೇ 20ರಂದು, Epstein sent a message to Steve Bannon ಎಪ್‍ಸ್ಟೀನ್ ಟ್ರಂಪ್‍ನ ಮಾಜಿ ಪ್ರಧಾನ ಯೋಜನಾಚತುರನಾದ ಸ್ಟೀವ್ ಬ್ಯಾನನ್‍ಗೆ ಒಂದು ಸಂದೇಶ ಕಳುಹಿಸಿದ್ದಾನೆ, ಅದರಲ್ಲಿ ಆತ ಮೇ 23ನ್ನು ಉಲ್ಲೇಖಿಸುತ್ತಾ ಹೇಳಿರುವುದು, “ಮೋದಿ ನನ್ನನ್ನು ಕಾಣಲು ಗುರುವಾರ ಯಾರನ್ನೋ ಕಳುಹಿಸುತ್ತಿದ್ದಾರೆ”.

may 20

ಅಂಬಾನಿಯ ಕಾರ್ಯದರ್ಶಿಯ ಕಚೇರಿಯ ಇಮೇಲ್ ದೃಢಪಡಿಸಿರುವಂತೆ, ಆ ಗುರುವಾರ ಅಪರಾಹ್ನ, 4:30ಕ್ಕೆ, Ambani arrived ಅಂಬಾನಿಯು 9 ಪೂರ್ವ, 71ನೇ ರಸ್ತೆಯಲ್ಲಿರುವ, ಮ್ಯಾನ್‍ಹಟಾನಿನ ಮನೆಗೆ ತಲುಪಿದ್ದಾರೆ. Mr Anil Ambani is here! ಆ ಸಂಜೆ, ಸರಿಸುಮಾರು ರಾತ್ರಿ 9.05 ಕ್ಕೆ (ಪೂರ್ವ ಭಾಗದ ಕಾಲಮಾನದಲ್ಲಿ; ಅಂದರೆ ಭಾರತೀಯ ಕಾಲಮಾನದಲ್ಲಿ ಮರುದಿನ ಮುಂಜಾನೆ 6:35) ಎಪ್‍ಸ್ಟೀನ್ ಅಂಬಾನಿಗೆ ಒಂದು ಸಂದೇಶ ಕಳುಹಿಸಿದ್ದಾನೆ, Epstein sent Ambani a message, “ಇವತ್ತು ಬಹಳ ವಿಶೇಷವಾಗಿತ್ತು, ಭೇಟಿ ಮಾಡಿ ಸಂತೋಷವಾಯಿತು”.

Ambani

ಒಂದು ಗಂಟೆಯಾಗುವುದಕ್ಕಿಂತಲೂ ಮೊದಲೇ, ಎಪ್‍ಸ್ಟೀನ್ ಬ್ಯಾನನ್‍ಗೆ ತಾನು “ನಿಜವಾಗಿಯೂ ಆಸಕ್ತಿದಾಯಕ ಭೇಟಿ” ಎಂದಿರುವುದರ ಮೇಲೆ ವರದಿ ಮಾಡಿ ಸಂದೇಶ ಕಳುಹಿಸಿದ್ದಾನೆ. really interesting modi meeting ಮೋದಿ ನಿಜವಾಗಿಯೂ ಎಪ್‍ಸ್ಟೀನ್ ನ ಸಂದೇಶ ಹೇಳುವಂತೆ ’ನನ್ನನ್ನು ಕಾಣಲು ಯಾರನ್ನೋ ಕಳುಹಿಸಿದ್ದಾರೆಯೇ’ ಮತ್ತು ಹಾಗಿದ್ದರೂ, ಆ ವ್ಯಕ್ತಿ ಅನಿಲ್ ಅಂಬಾನಿಯೇ ಅಥವಾ ಇನ್ನೂ ಗುರುತಿಸಲಾಗದಿರುವ ಮೂರನೆಯ ವ್ಯಕ್ತಿಯೇ, ಎನ್ನುವುದನ್ನು ಖಚಿತಪಡಿಸಿಕೊಳ್ಳಲು ದಿ ವೈರ್‌ಗೆ ಆಗಿಲ್ಲ.

anil

ಸಂದೇಶಕ್ಕೆ ಅನುಗುಣವಾಗಿ message, ಮೋದಿಯ ಪ್ರತಿನಿಧಿ –“ಅವನ ವ್ಯಕ್ತಿ” ಎನ್ನುವವನೊಂದಿಗೆ ಎಪ್‍ಸ್ಟೀನ್ ಭೇಟಿಯಾಗಿದ್ದಾನೆ. ಈ ಸಂದೇಶದಲ್ಲಿ ಎಪ್‍ಸ್ಟೀನ್ ಮೋದಿಯನ್ನು ಉಲ್ಲೇಖಿಸಿ, ಈ ವ್ಯಕ್ತಿ “ವಾಷ್‍ನಲ್ಲಿ ಯಾರೂ ಅವನೊಂದಿಗೆ ಮಾತನಾಡುವುದಿಲ್ಲ” ಎಂದು ಹೇಳಿದ, ಎಂದಿದ್ದಾನೆ. ಜೊತೆಗೆ ಮೋದಿಯ ಪ್ರಮುಖ ಶತ್ರು ಚೀನಾ ಮತ್ತು ಆ ಪ್ರದೇಶದಲ್ಲಿ ಅದರ ಅಧಿಕೃತ ಪ್ರತಿನಿಧಿ ಪಾಕಿಸ್ತಾನ” ಎಂದಿದ್ದಾನೆ. “ಮೋದಿಗೆ ನಿಮ್ಮ ದೂರದೃಷ್ಟಿಯಲ್ಲಿ ಸಂಪೂರ್ಣ ವಿಶ್ವಾಸವಿದೆ” ಎಂದು ಪ್ರತಿನಿಧಿ ಹೇಳಿದ್ದಾರೆ ಎಂದು ಆ ಸಂದೇಶ ಮುಕ್ತಾಯಗೊಂಡಿದೆ. ಆದರೆ, ಅದರಲ್ಲಿ ಯಾರ ದೂರದೃಷ್ಟಿಯೆಂದಾಗಲಿ, ಅದು ಏನನ್ನು ಒಳಗೊಂಡಿದೆಯೆಂದಾಗಲೀ ಸ್ಪಷ್ಟಪಡಿಸಿಲ್ಲ.

ಆ ಸಮಯದಲ್ಲಿ, ಬ್ಯಾನನ್, ಆಗಸ್ಟ್ 2017ರಿಂದಲೂ ಶ್ವೇತ ಭವನದಿಂದ ಹೊರಗಿದ್ದರೂ, ಸಾಂಪ್ರದಾಯಿಕ ರಾಜಕೀಯ ವರ್ತುಲಗಳಲ್ಲಿ ಚೀನಾ –ವಿರೋಧಿ ವಕೀಲಿ ಧ್ವನಿಯಾಗಿ ಪ್ರಭಾವಿಯಾಗಿಯೇ ಉಳಿದಿದ್ದರು.

ನಂತರ, ಎಪ್‍ಸ್ಟೀನ್ “ಅವನ ಗಮನ ಚೀನಾವನ್ನು ತಡೆಯುವುದರಲ್ಲಿದೆ” his focus wants to be stopping china ಮತ್ತು “ನಾನದನ್ನು ನಿಗದಿಮಾಡಬಲ್ಲೆ”, ಎಂದು ಬರೆದಿದ್ದಾನೆ. ಆ ಮೂಲಕ ಇನ್ನಷ್ಟು ಏರ್ಪಾಡುಗಳನ್ನು ಮಾಡಲಾಗುತ್ತಿದೆ ಎನ್ನುವುದನ್ನು ಸೂಚಿಸಿದ್ದಾನೆ.

ಮೇ 24 ರ ಬೆಳಗಿನ ಜಾವದಲ್ಲಿ, ಸುಮಾರು 2:06 ಕ್ಕೆ (EDT), ಬ್ಯಾನನ್ ಎಪ್‍ಸ್ಟೀನ್‍ಗೆ “ನಾನು ಮೋದಿ ಇಲ್ಲಿರುವಾಗ ಭಾರತೀಯರನ್ನು ನಮ್ಮೊಂದಿಗೆ ಕರೆತಂದು ಭಾರತಕ್ಕಾಗಿ ಒಂದು ಗಂಟೆಯ ಪ್ರದರ್ಶನ ಮಾಡಲಿದ್ದೇನೆ” one hour show ಎಂದು ಸಂದೇಶ ಕಳುಹಿಸಿದ್ದಾನೆ.

ಅದೇ ಸರಣಿಯಲ್ಲಿ ಎಪ್‍ಸ್ಟೀನ್, “ಮೋದಿಯ ಉದ್ಘಾಟನೆ ರವಿವಾರ ಇದೆ” ಎಂದು ಬ್ಯಾನನ್‍ಗೆ ಸಂದೇಶ ಕಳುಹಿಸಿದ್ದಾನೆ.

ಇದರ ನಂತರ ಎಪ್‍ಸ್ಟೀನ್ ಅಪರಾಹ್ನ ಸ್ಥಳೀಯ ನ್ಯೂಯಾರ್ಕ್ ಕಾಲಮಾನದಲ್ಲಿ “ಮೋದಿ ಆನ್ ಬೋರ್ಡ್” “modi on board” ಎನ್ನುವ ನಿಗೂಢ ಘೋಷಣೆ ಮಾಡಿದ್ದಾನೆ ಹಾಗೂ ಮೋದಿ ಹಾಗೂ ಸ್ಟೀವ್ ಬ್ಯಾನನ್ ಅವರಿಬ್ಬರನ್ನು ಅವರ ಸಮಾನ ಕಾಳಜಿಯ ಚೀನಾ ವಿಚಾರದಲ್ಲಿ ಒಗ್ಗೂಡಿಸುವ ಪ್ರಸ್ತಾಪನೆ ಇಟ್ಟಿದ್ದಾನೆ. ಯುಎಸ್‍ನಲ್ಲಿರುವ ಸಂಸ್ಥೆಯಾದ ಡ್ರಾಪ್‍ಸೈಟ್ ನ್ಯೂಸ್ Dropsite News ಎಪ್‍ಸ್ಟೀನ್ ಮತ್ತು ಬ್ಯಾನನ್ ನಡುವಿನ ಈ ಪಠ್ಯ ಸಂದೇಶದ ಬಗ್ಗೆ ಮೊದಲ ಬಾರಿಗೆ ವರದಿ ಮಾಡಿತ್ತು.

Modi

ಅದೇ ಮುಂಜಾನೆ That same morning,, ಎಪ್‍ಸ್ಟೀನ್ ಅಂಬಾನಿಗೆ ಪ್ರಸ್ತಾಪಿಸಿದ್ದಾನೆ, “ಶ್ರೀಯುತ ಮೋದಿ ಸ್ಟೀವ್ ಅವರನ್ನು ಭೇಟಿಯಾಗುವುದನ್ನು ಆನಂದಿಸಬಹುದು. ನೀವೆಲ್ಲರೂ ಒಂದೇ ಚೀನಾ ಸಮಸ್ಯೆಯನ್ನು ಎದುರಿಸುತ್ತಿದ್ದೀರಿ.” ಅಂಬಾನಿ, “ಖಂಡಿತ” ಎಂದು ಉತ್ತರಿಸಿದ್ದಾರೆ. ಆದರೆ ಅಂತಹ ಸಭೆ ನಡೆಯಿತೇ ಎನ್ನುವುದಕ್ಕೆ ದಾಖಲೆಗಳಲ್ಲಿ ಯಾವುದೇ ಸೂಚನೆಗಳಿಲ್ಲ.

2008ರಲ್ಲಿ ಅಪ್ರಾಪ್ತೆಯನ್ನು ವೇಶ್ಯಾವಾಟಿಕೆಗೆ ಕರೆಸಿಕೊಂಡ ಆರೋಪದಲ್ಲಿ ಎಪ್‍ಸ್ಟೀನ್ ತಪ್ಪಿತಸ್ಥನೆಂದು ಸಾಬೀತಾಗಿ 18 ತಿಂಗಳು ಜೈಲು ಶಿಕ್ಷೆ ಅನುಭವಿಸಿದ. ಆದರೂ, 2017 ಮತ್ತು 2018ರ ಹೊತ್ತಿಗೆ, overwhelming evidence had emerged ಶಿಶುಕಾಮ ಮತ್ತು ಯುವತಿಯರ ಕಳ್ಳಸಾಗಣೆಯಲ್ಲಿ ಅವನ ಪಾತ್ರದ ಬಗ್ಗೆ ಅಗಾಧವಾದ ಪುರಾವೆಗಳು ಹೊರಬಂದವು.

ಯುಎಸ್‍ಡಿಒಜೆಯ “ಎಪ್‍ಸ್ಟೀನ್ ಲೈಬ್ರೆರಿ”ಯಲ್ಲಿರುವ ಮಾಹಿತಿಗೆ ಪ್ರತಿಕ್ರಿಯೆಯನ್ನು ಕೋರಿ ದಿ ವೈರ್ ವಾಟ್ಸಾಪ್ ಮತ್ತು ಐಮೆಸೇಜ್ ಮತ್ತು ಕಾರ್ಪೊರೇಟ್ ಸಂವಹನೆಯ ತಂಡವನ್ನು ಸಂಪರ್ಕಿಸಿದೆ. ‘Epstein Library’. ಅವರು ಉತ್ತರಿಸಿದಾಗ ಈ ಕಥೆಯನ್ನು ನವೀಕರಿಸಲಾಗುವುದು.

2005ರಲ್ಲಿ ಅಣ್ಣ ಮುಕೇಶ್ ಅಂಬಾನಿಯಿಂದ ಪ್ರತ್ಯೇಕವಾದ ನಂತರ ಅನಿಲ್ ಅಂಬಾನಿ ರಿಲಯೆನ್ಸ್ ಎಡಿಎ ಗುಂಪಿನ ಅಧ್ಯಕ್ಷರಾಗಿದ್ದಾರೆ. ಅವರ ಐಶ್ವರ್ಯ 2008ರಲ್ಲಿ ಗಗನಕ್ಕೇರಿತ್ತು ಮತ್ತು ಅಂದಾಜು 42 ಬಿಲಿಯ ಐಶ್ವರ್ಯವಿರುವ ಅವರನ್ನು ಜಗತ್ತಿನ ಆರನೆಯ ಅತ್ಯಂತ ಶೀಮಂತ ವ್ಯಕ್ತಿಯೆಂದು ಫೋರ್ಬ್ಸ್ ಘೋಷಿಸಿತು.

ನರೇಂದ್ರ ಮೋದಿಯ ಅಧಿಕಾರಾವಧಿಯಲ್ಲಿ, 2016ರ ರಫೇಲ್ ಫೈಟರ್ ಜೆಟ್ ಒಪ್ಪಂದದಲ್ಲಿ ರಿಲಯೆನ್ಸ್ ಡಿಫೆನ್ಸ್ ಅಫ್‍ಸೆಟ್ ಪಾಲುದಾರ ಸಂಸ್ಥೆಯಾಯಿತು. ಮಾಜಿ ಫ್ರೆಂಚ್ ಅಧ್ಯಕ್ಷ ಫ್ರಾಂಕೋಯ್ಸ್ ಹೊಲಾಂಡೆ ಭಾರತವು ಪಾಲುದಾರಿಕೆಯನ್ನು ಮುಂದಕ್ಕೆ ತಳ್ಳಿದೆ ಎನ್ನುವುದರೊಂದಿಗೆ ಇದು ಭಾರೀ ವಿವಾದಕ್ಕೆ ಕಾರಣವಾಯಿತು. former French president François Hollande said ಈ ಹೇಳಿಕೆಯನ್ನು ಭಾರತವು ಅಲ್ಲಗಳೆದಿದೆ. ರಿಲಯೆನ್ಸ್ ಇನ್ಫ್ರಾಸ್ಟ್ರಕ್ಚರ್ Reliance Infrastructure said it became debt-free in FY25 ತಾನು 2025ರ ಹಣಕಾಸು ವರ್ಷದಲ್ಲಿ ರೂ.3300 ಕೋಟಿ ಮರುಪಾವತಿ ಮಾಡುವುದರ ಮೂಲಕ ಋಣಮುಕ್ತನಾಗಿದ್ದೇನೆಂದು ಘೋಷಿಸಿತು. ಅಂಬಾನಿ ನಿಯಂತ್ರಣಾ ಕ್ರಮಗಳನ್ನು ಎದುರಿಸಿದ್ದಾರೆ. ಆಗಸ್ಟ್ 2024ರಲ್ಲಿ, ಸೆಕ್ಯೂರಿಟೀಸ್ ಎಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಅಂಬಾನಿಯನ್ನು Securities and Exchange Board of India barred him ಐದು ವರ್ಷಗಳ ಕಾಲಕ್ಕೆ ಸೆಕ್ಯೂರಿಟೀಸ್ ಮಾರುಕಟ್ಟೆಯಿಂದ ನಿರ್ಬಂಧಿಸಿತು.

2025ರ ಅಂತ್ಯಕ್ಕೆ, ಜಾರಿ ನಿರ್ದೇಶನಾಲಯವು ಸಾಲ ವಂಚನೆಯ ಪ್ರಕರಣಗಳಲ್ಲಿ attached assets worth about Rs 1,120 crore ಸುಮಾರು ರೂ. 1120 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತು, ಪರಿಶೀಲನೆಯಲ್ಲಿರುವ ಒಟ್ಟು ಆಸ್ತಿಗಳನ್ನು ಸರಿಸುಮಾರು ರೂ.10,117 ಕೋಟಿ ಎಂದು ಪರಿಗಣಿಸಿತು. ಜನವರಿ 2026ರಲ್ಲಿ, ಸಂಸ್ಥೆಯು ಇನ್ನೂ ರೂ.1,885 ಕೋಟಿಗಳನ್ನು ಮುಟ್ಟುಗೋಲು ಹಾಕಿಕೊಂಡಿತು ಮತ್ತು ರಿಲಯೆನ್ಸ್‌ನ ಮಾಜಿ ಸಂವಹನಾ ನಿರ್ದೇಶಕರನ್ನು ಬಂಧಿಸಿತು. attached a further Rs 1,885 crore and arrested a former Reliance Communications director.

2017: ಅಂಬಾನಿ ಹಾಗೂ ಎಪ್‍ಸ್ಟೀನ್ ನಡುವಿನ ಸಂಬಂಧ ಫೆಬ್ರವರಿ 2017ರಲ್ಲಿ ಆರಂಭವಾದಂತಿದೆ. ಆಗ ದುಬೈ ಪೋರ್ಟ್ಸ್ ವರ್ಲ್ಡ್‌ನ shared ಅಧ್ಯಕ್ಷರಾದ ಸುಲ್ತಾನ್ ಅಹ್ಮದ್ ಬಿನ್ ಸುಲಾಯೆಮ್ ಭಾರತದ ವ್ಯಾಪಾರಿಯ ಸಂಪರ್ಕ ವಿವರಗಳನ್ನು ಹಂಚಿಕೊಂಡರು.

ಮರುದಿನ, ಫೆಬ್ರವರಿ 23, 2017ರಂದು, Epstein and Ambani’s messages ಎಪ್‍ಸ್ಟೀನ್ ಮತ್ತು ಅಂಬಾನಿಯ ಸಂದೇಶಗಳು ಅವರು ಈಗಾಗಲೇ ಭೇಟಿಯಾಗಿರುವುದನ್ನು ಸೂಚಿಸಿವೆ. “ತಾನು ಸುಲ್ತಾನ ಕುಟುಂಬದ ಇನ್ನೋರ್ವ ಸದಸ್ಯನನ್ನು ಭೇಟಿಯಾಗಿರುವುದು ಸಂತೋಷ ತಂದಿದೆ” ಎಂದು ಎಪ್‍ಸ್ಟೀನ್ ಸಂದೇಶ ಕಳುಹಿಸಿದ್ದಾನೆ. ಅಂಬಾನಿ ಉತ್ತರಿಸಿದ್ದಾರೆ: “ಧನ್ಯವಾದ, ನಿಮ್ಮನ್ನು ಭೇಟಿಯಾಗಿರುವುದು ಖುಷಿಯಾಗಿದೆ. ನಿಮ್ಮಿಂದ ಬಹಳಷ್ಟು ಕಲಿಯುತ್ತೇನೆ”. ಅದೇ ವಿನಿಮಯದಲ್ಲಿ ಎಪ್‍ಸ್ಟೀನ್ ಅಂಬಾನಿಗೆ, ಎಹೂದ್ ಬರಾಕ್‍ರವರ ಸಂಪರ್ಕ ವಿವರಗಳನ್ನು ಕಳುಹಿಸುವೆ, ಎಂದು ಹೇಳಿದ್ದಾನೆ. ಅವರ ಬಗ್ಗೆ, “ಆತ ಎಲ್ಲರಿಗಿಂತ ಒಂದು ಹಂತ ಮೇಲಿದ್ದಾರೆ” ಎಂದು ಹೇಳಿದ್ದಾನೆ. ಆದರೂ, ’ನಾನು ವೈಯಕ್ತಿಕವಾಗಿ ಯಾವುದೇ ರೀತಿಯಲ್ಲಿ ರಕ್ಷಣಾ ವ್ಯವಹಾರವನ್ನು ಸಮೀಪಿಸುವುದಿಲ್ಲ’, ಎಂದಿದ್ದಾನೆ.

Anil chat

ಒಂದು ವಾರದ ನಂತರ, ಮಾರ್ಚ್ 2ನೇ ದಿನಾಂಕದಂದು, ಅಂಬಾನಿ ತನ್ನ ಮೊದಲ ಗಣನೀಯ ಕೋರಿಕೆಯನ್ನು ಕಳುಹಿಸಿದ್ದಾರೆ, “ಭಾರತ ಸಂಬಂಧ ಹಾಗೂ ಭದ್ರತಾ ಸಹಕಾರಕ್ಕಾಗಿ ಶ್ವೇತ ಭವನದೊಂದಿಗೆ ವ್ಯವಹರಿಸುವುದಕ್ಕೆ ನಿಮ್ಮ ನೆರವು ಬೇಕು’. ಇದಕ್ಕೆ ಪ್ರತಿಕೆಯೆ ನೀಡುತ್ತಾ ಅಂಬಾನಿ ಏನು ಕೊಡಲು ಸಿದ್ಧರಿದ್ದಾರೆ ಎಂದು ಎಪ್‍ಸ್ಟೀನ್ ಕೇಳಿದ್ದಾನೆ. ಯಾವುದೇ ಸಿದ್ದಾಂತದ ಅಗತ್ಯವಿಲ್ಲ. ಏಟಿಗೆ ಪ್ರತಿಯೇಟು’ ಎಂದು ಅವರು ಬರೆದಿದ್ದಾರೆ. ಅಂಬಾನಿ ಉತ್ತರಿಸುತ್ತಾರೆ, “ಭಾರತೀಯ ಮಾರುಕಟ್ಟೆ, ಏನು ಕೆಲಸ ಮಾಡುತ್ತದೆಯೋ ಅದು!”

ಮರುದಿನ “ನಾನು ನಿಮಗಾಗಿ ಒಳಗಿನ ವಿಷಯಗಳನ್ನು ತರುತ್ತೇನೆ”, ಎಂದು ಮಾತುಕೊಡುತ್ತಾ, ಸುರಕ್ಷಿತ ಸಂವಹನಕ್ಕಾಗಿ ಸಿಗ್ನಲ್ ಮೆಸೆಂಜರ್ ಡೌನ್ಲೋಡ್ ಮಾಡುವಂತೆ ಎಪ್‍ಸ್ಟೀನ್ ಅಂಬಾನಿಗೆ ಹೇಳಿದ್ದಾನೆ.

ಮಾರ್ಚ್ 16ರಂದು, Ambani sent a message from Delhi ತನ್ನ ಕೋರಿಕೆಯ ವ್ಯಾಪ್ತಿಯನ್ನು ಬಹಿರಂಗಪಡಿಸುವಂತಹ ಒಂದು ಸಂದೇಶವನ್ನು ಅಂಬಾನಿ ದೆಹಲಿಯಿಂದ ಕಳುಹಿಸಿದ್ದಾರೆ. “ಜೇರೆಡ್ ಮತ್ತು ಬ್ಯಾನನ್ ಅವರನ್ನು ಆದಷ್ಟು ಬೇಗ ನಾನು ಭೇಟಿ ಮಾಡಲು ನಾಯಕತ್ವವವು ನಿಮ್ಮ ಸಹಾಯ ಬಯಸುತ್ತದೆ”. ಇದು ಜೇರೆಡ್ ಕುಶ್ನರ್ ಮತ್ತು ಸ್ಟೀವ್ ಬ್ಯಾನನ್ ಕುರಿತಾದ ಉಲ್ಲೇಖವಾಗಿದೆ. ಡೊನಾಲ್ಡ್ ಅವರನ್ನು ಭೇಟಿ ಮಾಡಲು ಪಿಎಂ ಮೇ ತಿಂಗಳಿನಲ್ಲಿ ಡಿಸಿಗೆ ಬರುವ ಸಾಧ್ಯತೆಯಿದೆ. ಅದಕ್ಕೂ ನಿಮ್ಮ ಸಹಾಯ ಬೇಕು, ಟ್ರಂಪ್‍ನ ಅಳಿಯ ಕುಶ್ನರ್, ಅಧ್ಯಕ್ಷ ಟ್ರಂಪ್ ಅವರ ಹಿರಿಯ ಸಲಹೆಗಾರರಾಗಿಯೂ ಸೇವೆ ಸಲ್ಲಿಸುತ್ತಿದ್ದರು.

dinner

ಮರುದಿನ, ಮಾರ್ಚ್ 17ರಂದು, Epstein sent an email to Tom Barrack, ರಿಯಲ್ ಎಸ್ಟೇಟ್ ಹೂಡಿಕೆದಾರನಾಗಿದ್ದ ಮತ್ತು ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಮಿತ್ರರಲ್ಲೊಬ್ಬರಾಗಿದ್ದ, ಟಾಮ್ ಬರಾಕ್‍ಗೆ ಇಮೇಲ್ ಕಳುಹಿಸುತ್ತಾನೆ, “ಭಾರತದಿಂದ ಅನಿಲ್ ಅಂಬಾನಿ, ಎಪ್ರಿಲಿನ ಮೊದಲ ವಾರದಲ್ಲಿ ನ್ಯೂಯಾರ್ಕಿಗೆ ಬರಲಿದ್ದಾರೆ, ನೀವು ಆನಂದಿಸಬಹುದೆಂದುಕೊಂಡೆ. ಮೋದಿ ಮೇಯಲ್ಲಿ ಬರಲಿದ್ದಾರೆ.” ಬರಾಕ್ ಟ್ರಂಪ್ ಅವರ ಉದ್ಘಾಟನಾ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಆ ತಿಂಗಳ ಕೊನೆಗೆ, ಮಾರ್ಚ್ 29ರಂದು Ambani texted Epstein asking about Modi’s planned Washington visit. ಅಂಬಾನಿ ಎಪ್‍ಸ್ಟೀನ್‍ಗೆ ಮೋದಿಯ ಯೋಜಿತ ವಾಷಿಂಗ್ಟನ್ ಭೇಟಿಯ ಕುರಿತು ಸಂದೇಶ ಕಳುಹಿಸಿದ್ದಾರೆ. “ಶ್ವೇತಭವನ ನಿನ್ನೆ ಪಿಎಂ ಮೋದಿಯ ಭೇಟಿಯ ಬಗ್ಗೆ ಘೋಷಿಸಿದೆ.” ಯಾವಾಗ ಮತ್ತು ದಿನಾಂಕಗಳ ಬಗ್ಗೆ ನೀವು ನನಗೆ ಹೇಳಬಹುದೇ?”

ಎರಡು ದಿನಗಳ ನಂತರ, ಅಂಬಾನಿ ಮರಳಿ ಕೇಳಿದ್ದಾರೆ, “ನಮ್ಮ ಪಿಎಂನ ಡಿಸಿ ಭೇಟಿಯ ಬಗ್ಗೆ ಏನಾದರೂ ಕಾಣುತ್ತಿದೆಯೇ?” ಜೊತೆಗೆ “ಟ್ರ್ಯಾಕ್ 2” ಸಂಪರ್ಕಗಳ ಬಗ್ಗೆಯೂ ಕೇಳಿದ್ದಾರೆ, ಈ ಪದವನ್ನು ಅನಧಿಕೃತ ರಾಜತಾಂತ್ರಿಕ ಕಾಲುವೆಗಳ ಬಗ್ಗೆ ಬಳಸಲಾಗುತ್ತದೆ.

By April 12, Ambani was updating Epstein ಎಪ್ರಿಲ್ 12ರ ಹೊತ್ತಿಗೆ, ಅಂಬಾನಿ ಎಪ್‍ಸ್ಟೀನ್‍ಗೆ ದೆಹಲಿಯಲ್ಲಾಗುತ್ತಿರುವ ಬೆಳವಣಿಗೆಯ ಬಗ್ಗೆ ತಾಜಾ ಸುದ್ದಿಯನ್ನು ತಲುಪಿಸಿದ್ದಾರೆ. ಅವರು ಎಪ್‍ಸ್ಟೀನ್‍ಗೆ, “ರಾಷ್ಟ್ರೀಯ ಸಲಹೆಗಾರರಾಗಿರುವ ಹೆಚ್. ಆರ್. ಮ್ಯಕ್‍ಮಾಸ್ಟರ್ ಟ್ರಂಪ್ ಆಡಳಿತದಲ್ಲಿ ಉನ್ನತ ಸ್ಥಾನದ ಅಧಿಕಾರಿಯಾಗಿ ಭೇಟಿ ಮಾಡುತ್ತಿದ್ದಾರೆ” ಎಂದು ಮತ್ತು ಪಿಎಂ ಜೂನ್‍ನಲ್ಲಿ ಡಿಸಿಗೆ ಭೇಟಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಅವರ ಆದ್ಯತೆಯ ಬಗ್ಗೆ ಎಪ್‍ಸ್ಟೀನ್ ಕೇಳಿದಾಗ, ಅಂಬಾನಿ ಉತ್ತರಿಸಿದ್ದಾರೆ: “ಭಾರತ ಪಾಕಿಸ್ಥಾನ ರಕ್ಷಣೆ”.

ನಂತರ ಅಂಬಾನಿಗೆ ವಾಷಿಂಗ್ಟನ್ ವಕೀಲನಿದ್ದಾನೆಯೇ ಎಂದು ಎಪ್‍ಸ್ಟೀನ್ ಕೇಳುತ್ತಾನೆ, “ಅವರು ಮಾರ್ಗಗಳು ಮತ್ತು ಅಗತ್ಯ” ಅವನು ಬರೆಯುತ್ತಾನೆ, “ಯುಎಸ್ ನಿಯಮಗಳು ಬಹಳ ದಬ್ಬಾಳಿಕೆಯಿಂದ ಕೂಡಿವೆ.”

ಮೋದಿಯ ಭೇಟಿಯ ಆಯೋಜನೆಯ ಕುರಿತಾದ ಅವರುಗಳ ನಡುವಿನ ವಿನಿಮಯಗಳಲ್ಲಿ, ಎಪ್‍ಸ್ಟೀನ್ ಭಾರತದ ಮೇಲೆ ಯುಎಸ್ ನೀತಿಯ ನಿರ್ಬಂಧಗಳ ಮೇಲಿನ ಒಳಗಿನ ಮಾಹಿತಿ ಎಂದು ಪ್ರಸ್ತುತಪಡಿಸಿರುವುದನ್ನು ರವಾನಿಸಿದ್ದಾನೆ. “ಭಾರತದ ಸಿದ್ಧವಸ್ತುಗಳನ್ನು ಕೊಳ್ಳಿ ಎನ್ನುವುದು ವಾಸ್ತವವಾಗಿ ಕೆಲವು ವರ್ಗದ ವಸ್ತುಗಳಿಗೆ ಮಾತ್ರ ಸೀಮಿತವಾಗಿದೆ ಎಂದು ನನಗೆ ಹೇಳಲಾಗಿದೆ”. “ಹಲವು ವಸ್ತುಗಳು ನಿಜವಾಗಿ ಅಮೆರಿಕದಲ್ಲಿ ಮಾತ್ರ ಸಿದ್ಧಪಡಿಸಬಹುದಾದಂಥದ್ದಾಗಿವೆ (ಅವುಗಳ ಹಿಂಬಾಗಿಲಿನ ಅಪಾಯಗಳೊಂದಿಗೆ). ಐಟಿ –ಹೌದು, ಜೆಟ್ ಇಂಜಿನ್ನುಗಳು- ಇಲ್ಲ”. ಆದರೆ ಖಾಸಗಿ ವ್ಯವಹಾರವನ್ನು ಸೇರಿಸುವಲ್ಲಿ, “ಬಹಳ ಉತ್ಸಾಹವಿದೆ”. ಏಕೆಂದರೆ ಅದು “ಸರಕಾರಕ್ಕಿಂತ ಕಡಿಮೆ ಭ್ರಷ್ಠವಾಗಿದೆ ಎಂದು ಕಂಡುಬರುತ್ತದೆ”, ಎಂದು ಅವನು ಸೇರಿಸಿದ್ದಾನೆ.

Epstein also told Ambani ಎಪ್‍ಸ್ಟೀನ್ ಅಂಬಾನಿಗೆ ಹೀಗೂ ಹೇಳಿದ್ದಾನೆ, “ ಇಸ್ರೇಲ್ ಕಾರ್ಯತಂತ್ರದ ಕುರಿತಾದ ಚರ್ಚೆಗಳು ಮೋದಿಯ ದಿನಾಂಕದ ಮೇಲೆ ಪ್ರಾಬಲ್ಯ ಸಾಧಿಸುತ್ತಿವೆ ಆದರೆ, ಹಲವು ಆಂತರಿಕ ಸಂಘರ್ಷಗಳು ಆದ್ಯತೆ ಪಡೆಯುತ್ತಿವೆ.”

ಎಪ್ರಿಲ್ 27ರಂದು, ಶ್ವೇತ ಭವನ ಚರ್ಚೆಯೆಂದು ಹೇಳಲಾದ ವರ್ಣನೆಯಿಂದ ಎಪ್‍ಸ್ಟೀನ್ ಮರಳಿ ವರದಿ ಮಾಡುತ್ತಾನೆ, “ಶ್ವೇತಭವನ, ನಿನ್ನೆ, ಗಮನ ಇಸ್ರೇಲ್ ಮೇಲೆ, ನಾನು ಹೇಳಿದಂತೆ.”

April 27

ಜೂನ್ 7, Epstein wrote ಎಪ್‍ಸ್ಟೀನ್ ಬರೆದಿದ್ದಾನೆ, “ಮೋದಿ ಸೇಂಟ್ ಪೀಟರ್ಸ್‌ ಬರ್ಗ್‌ನಲ್ಲಿ ಚೆನ್ನಾಗಿ ನಿರ್ವಹಿಸಿದರು. ದೊಡ್ಡ ಪಾತ್ರವಹಿಸಬಹುದು,” ಅದು ಜೂನ್ 1-2ರಂದು ಮೋದಿ ಭಾಗವಹಿಸಿದ್ದ ಸೇಂಟ್ ಪೀಟರ್ಸ್‌ಬರ್ಗ್ ಅಂತರರಾಷ್ಟ್ರೀಯ ಆರ್ಥಿಕ ವೇದಿಕೆಯ ಕುರಿತಾದ ಉಲ್ಲೇಖವಾಗಿತ್ತು. ಅದೇ ಸಂದೇಶದಲ್ಲಿ, ಟ್ರಂಪ್ ಆಡಳಿತ ನೀತಿಗೆ ಸಂಬಂಧಿಸಿದಂತೆ “ಭಾರತವನ್ನು ಇನ್ನೂ ಖಚಿತಪಡಿಸಿಲ್ಲ”, ಎಂದೂ ಬರೆದಿದ್ದಾನೆ.

ಒಂದು ತಿಂಗಳ ನಂತರ, ಜುಲೈ 6ಕ್ಕೆ Epstein sent an email to a contact in Qatar ಎಪ್‍ಸ್ಟೀನ್ ಕತಾರಿನ ಒಬ್ಬ ಸಂಪರ್ಕ ವ್ಯಕ್ತಿಗೆ ಇಮೇಲ್ ಕಳುಹಿಸಿ ಇಸ್ರೇಲಿಗೆ ಮೋದಿಯ ಭೇಟಿಯ ಬಗ್ಗೆ ವರ್ಣಿಸಿದ್ದಾನೆ. ”ಭಾರತದ ಪ್ರಧಾನ ಮಂತ್ರಿ ಸಲಹೆಯನ್ನು ತೆಗೆದುಕೊಂಡು ಅಮೆರಿಕದ ಅಧ್ಯಕ್ಷರ ಸಂತಸಕ್ಕಾಗಿ ಇಸ್ರೇಲಿನಲ್ಲಿ ಹಾಡಿ ಕುಣಿದರು. ಅವರು ಕೆಲವು ವಾರಗಳ ಹಿಂದೆ ಭೇಟಿಯಾಗಿದ್ದರು. ಅದು ಕೆಲಸ ಮಾಡಿತು!”

In a statement on January 31, ಜನವರಿ 31ರ ಒಂದು ಹೇಳಿಕೆಯಲ್ಲಿ, “ಜುಲಾಯ್ 2017ರಲ್ಲಿ ಪ್ರಧಾನ ಮಂತ್ರಿಯ ಇಸ್ರೇಲಿನ ಅಧಿಕೃತ ಭೇಟಿಯನ್ನು ಹೊರತುಪಡಿಸಿ, ಇಮೇಲಿನಲ್ಲಿರುವ ಉಳಿದ ಪ್ರಸ್ತಾಪಗಳು ಶಿಕ್ಷೆಗೊಳಗಾದ ಅಪರಾಧಿಯೊಬ್ಬನ ಕೆಲಸಕ್ಕೆ ಬಾರದ ಆಲೋಚನೆಗಳಷ್ಟೇ ಆಗಿವೆ. ಇದನ್ನು ಅತ್ಯಂತ ತಿರಸ್ಕಾರದಿಂದ ತಳ್ಳಿಹಾಕಬೇಕು” ಎಂದು ಎಂಇಎ ಹೇಳಿದೆ.

ಮಾರ್ಚ್ 2018ರಲ್ಲಿ, ಎಪ್‍ಸ್ಟೀನ್ ಅಂಬಾನಿಗೆ ಹೇಳಿದ, “ಸ್ಟೀವ್ ಬ್ಯಾನನ್ ನನ್ನೊಂದಿಗೆ ಪ್ಯಾರಿಸ್ಸಿನಲ್ಲಿದ್ದಾರೆ.“Steve bannon with me in Paris. ಬಂದು ಭೇಟಿ ಮಾಡಿ.” ಮೂರು ವಾರಗಳ ನಂತರ, ಮಾರ್ಚ್ 29ರಂದು ಅವನು ನೇರವಾಗಿ ಕೇಳಿದ್ದಾನೆ: “ನೀವು ಸ್ಟೀವ್ ಬ್ಯಾನನ್ ಅವರನ್ನು ಭೇಟಿಯಾಗಬಯಸುತ್ತೀರಾ?”

ಮುಂದಿನ ಸಂದೇಶ ಎಪ್ರಿಲ್ 2019ರಲ್ಲಿ ಕಳುಹಿಸಲಾಗಿದೆ. ಆಗ ಅಂಬಾನಿ ತಮ್ಮ ವೈಯಕ್ತಿಕ ಹಣಕಾಸು ವಿಚಾರದಲ್ಲಿ ಎಪ್‍ಸ್ಟೀನ್ ಸಹಾಯ ಕೇಳುತ್ತಿದ್ದರು. seeking Epstein’s “ಕಾರ್ಪೊರೇಟ್ ಮಟ್ಟದಲ್ಲಿ ಹಣಕಾಸು ವ್ಯವಸ್ಥೆ ಮಾಡಲು ನೀವು ಹೇಗೆ ಸಹಾಯ ಮಾಡಬಹುದು?” ಅಂಬಾನಿ ಎಪ್ರಿಲ್ 21ರಂದು ಕೇಳಿದ್ದಾರೆ. ಅದೇ ವಿನಿಮಯದಲ್ಲಿ, ಅಂಬಾನಿ ತಾನು ಯಾರನ್ನು ಭೇಟಿಯಾಗಬೇಕೆಂದು ಶಿಫಾರಸು ಮಾಡುತ್ತೀರೆಂದು ಎಪ್‍ಸ್ಟೀನ್‌ನನ್ನು ಕೇಳಿದ್ದಾರೆ. ಅದೇ ಸಮಯದಲ್ಲಿ ಮೇ 23ರಂದು ಭಾರತದ ಚುನಾವಣಾ ಮತ ಎಣಿಕೆ ನಡೆಯುತ್ತಿರುವಾಗ ತಾನು ನ್ಯೂಯಾರ್ಕ್‍ನಲ್ಲಿದ್ದೇನೆ ಎಂದಿದ್ದಾರೆ. ಎಪ್‍ಸ್ಟೀನ್ ಸಲಹೆ ನೀಡುತ್ತಾನೆ, “ಬ್ಯಾನನ್? ರಂಬ್ಲರ್” ಮತ್ತು ರೂಮ್ಲರ್, ಶ್ವೇತಭವನದ ಮಾಜಿ ವಕೀಲ, ಹೂದ್ ಬರಾಕ್, ಇತ್ಯಾದಿ”.

ಕೃಪೆ- The wire: ಫೋಟೋ- ಎಪಿ ಮತ್ತು ಪಿಟಿಐ

ದಿ ವೈರ್‌ ಲೇಖನದ ಮೂಲ ಲಿಂಕ್‌ https://thewire.in/world/epstein-messages-anil-ambani-sex-offenders-access-modi-agenda-trump

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...