ದಯಾಮರಣ |ಬದುಕುವ ಹಕ್ಕು ವೇದನೆಯಾದಾಗ ವಿದಾಯ ದಯೆಯಾದೀತೆ?

Date:

ಗತ್ತಿನ ಹಲವು ರಾಷ್ಟ್ರಗಳಲ್ಲಿ ದಯಾಮರಣ ಕಾನೂನು ಸನ್ನದ್ಧು ಮಾಡಲಾಗಿದೆ. ನೇರ ದಯಾಮರಣಕ್ಕೆ ಅವಕಾಶವಿದೆ. ಆದರೆ, ಭಾರತದಲ್ಲಿ ನೇರ ದಯಾಮರಣಕ್ಕೆ ಅವಕಾಶ ನೀಡಲಾಗಿಲ್ಲ, ಪರೋಕ್ಷ ದಯಾಮರಣ ಕರುಣಿಸಲು ಸುಪ್ರೀಂ ಅಸ್ತು ಎಂದಿದೆ. ಭಾರತವು ದಯಾಮರಣದ ಕುರಿತು ಜಠಿಲ ಕಾನೂನು ಅನುಸರಿಸಿಕೊಂಡು ಬಂದಿದೆ. 2018ರಲ್ಲಿ ಪರೋಕ್ಷ ದಯಾಮರಣಕ್ಕೆ ಸುಪ್ರೀಂ ಅಸ್ತು ಎಂದಿದ್ದರೂ, ಅದಕ್ಕೂ ಹಲವಾರು ಷರತ್ತಗಳಿವೆ. 2018ರ ಕಾಮನ್‌ಕಾಸ್‌ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಘನತೆಯಿಂದ ಸಾಯುವ ಹಕ್ಕನ್ನು ಸಂವಿಧಾನದ 21ನೇ ವಿಧಿ ಭಾರತದ ಪ್ರಜೆಗಳಿಗೆ ನೀಡಿದೆ. ಆದರೆ, ನಿರ್ದಿಷ್ಟ ವ್ಯಕ್ತಿಗೆ ದಯಾಮರಣ ಕರುಣಿಸುವುದಕ್ಕೂ ಮೊದಲು ನ್ಯಾಯಾಲಯದ ಒಪ್ಪಿಗೆ ಬೇಕು ಎಂದಿತು.

ಏನಿದು ದಯಾಮರಣ:

ವ್ಯಕ್ತಿಯು ಗಂಭೀರ ಖಾಯಿಲೆಗಳಿಂದ ನರಳುತ್ತಿದ್ದಾಗ, ಪ್ರಜ್ಞಾಹೀನಗೊಂಡು ಜೀವನ್ಮರಣ ಪರಿಸ್ಥಿತಿಗೆ ತಲುಪಿದಾಗ ಆ ವ್ಯಕ್ಥಿಯ ಕುಟುಂಬಸ್ಥರು ಘನತೆಯ ಸಾವು ಕರುಣಿಸುವಂತೆ ನ್ಯಾಯಾಲಯದ ಮೊರೆ ಹೋಗಬಹುದು. ನೇರ ದಯಾಮರಣ ಎಂದರೆ ವಿಷಪೂರಿತ ಇಂಜೆಕ್ಷನ್‌ ಅಥವಾ ಔಷಧಿಗಳಿಂದ ಮರಣ ಕರುಣಿಸುವುದು. ಕೆನಡಾ, ಸ್ಪೇನ್‌, ಕೊಲಂಬಿಯಾ ಮುಂತಾದ ದೇಶಗಳಲ್ಲಿ ಈ ಪ್ರಕ್ರಿಯೆಯನ್ನು ಕಾನೂನು ಬದ್ಧಗೊಳಿಸಲಾಗಿದೆ. ಭಾರತವು ಪ್ರಸ್ತುತ ಪರೋಕ್ಷ ದಯಾಮರಣಕ್ಕೆ ಮಾತ್ರ ಅನುಮತಿ ನೀಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ? ‘ಮರಣ ಇಚ್ಛೆಯ ಉಯಿಲು’ ರಾಜ್ಯದಲ್ಲಿ ಕಾರ್ಯಗತ, ದಯಾಮರಣ ಹಕ್ಕು ನೀಡಿ ಸರ್ಕಾರ ಆದೇಶ

ಭಾರತದ ಪ್ರಮುಖ ದಯಾಮರಣ ಪ್ರಕರಣಗಳು:
ಅರುಣ ಶಾನುಭಾಗ್‌ ಪ್ರಕರಣ: ಭಾರತದಲ್ಲಿ ದೀರ್ಘಕಾಲ ಚರ್ಚೆಯಲ್ಲಿದ್ದ ದಯಾಮರಣ ಪ್ರಕರಣ. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹಳದೀ ಪುರದ ಅರುಣ ಶಾನುಭಾಗ್‌ ವೃತ್ತಿಯಲ್ಲಿ ನರ್ಸ್‌, ಮುಂಬೈನ ಆಸ್ಪತ್ರೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದ ಅರುಣಾ ಆಸ್ಪತ್ರೆಯ  ಸಿಬ್ಬಂದಿ ವಾಲ್ಮೀಕಿ ಎಂಬುವವನಿಂದ ಅತ್ಯಾಚಾರಕ್ಕೆ ಒಳಗಾದರು. ತಮ್ಮ ಮೇಲೆ ನಡೆದ ಹಲ್ಲೆಗಳಿಂದ ತೀವ್ರ ಆಘಾತಕ್ಕೊಳಗಾಗಿ  ಸಂಪೂರ್ಣ ಪ್ರಜ್ಞಾಹೀನ ತಲುಪಿದರು.ಮತ್ತೆಂದು ಸಹಜ ಸ್ಥಿತಿಗೆ ಮರಳಲಾಗದ ಅರುಣಾ ಮುಂಬೈಗೆ ಕಾಲಿಡುವಾಗ ಹದಿನೆಂಟರ ಹರೆಯದ ಸಾವಿರ ಕನಸುಗಳ ಒಡತಿ. ಬದುಕಿನ ಸುಧೀರ್ಘ 37 ವರ್ಷಗಳನ್ನು ಯಾವುದೇ ಎಚ್ಚರವಿಲ್ಲದೆ ಅಪ್ರಜ್ಞಾವಸ್ಥೆಯ ನರಳುವಿಕೆಯಲ್ಲೇ ಕಳೆದರು.ಪಿಂಕಿ ಇರಾನಿ ಎಂಬ ಪತ್ರಕರ್ತೆ ಅರುಣಾಳ ಈ ದುರಂತ ಬದುಕನ್ನು ಕಂಡು ಅರುಣಾ  ಶಾನುಭಾಗ್‌ಗೆ ದಯಾಮರಣ ದಯಪಾಲಿಸುವಂತೆ ಸುಪ್ರೀಂ ಮೆಟ್ಟಿಲೇರಿದರು. 2011  ರಲ್ಲಿ ಪಿಂಕಿ ಇರಾನಿ ಸಲ್ಲಿಸಿದ ಅರ್ಜಿಯನ್ನು ಕೋರ್ಟ್‌ ತಳ್ಳಿಹಾಕಿತು. 42 ವರ್ಷ ಹಾಸಿಗೆಯಿಂದ ಅಲುಗಾಡದ ಅರುಣಾ ತಮ್ಮ 67 ನೇ ವಯಸ್ಸಿನಲ್ಲಿ ನ್ಯುಮೋನಿಯಾ ಹೆಚ್ಚಾಗಿ ಮರಣಿಸಿದರು.

ಹರೀಶ್‌ ರಾಣ ಪ್ರಕರಣ: ಗಾಜಿಯಾಬಾದ್‌ನ ಹರೀಶ್‌ ರಾಣ ಎಂಬ ಯುವಕ 2013 ರಲ್ಲಿ ತಾನು ವಾಸವಿದ್ದ ಪಿಜಿಯ ಮೇಲ್ಮಹಡಿಯಿಂದ ಕಾಲುಜಾರಿ ಬಿದ್ದ ಪರಿಣಾಮ ತಲೆಗೆ ಗಂಭೀರ ಗಾಯಗಳಾಗಿ ಕೋಮಾ ಸೇರಿದ್ದರು . 2024 ರಲ್ಲಿ ರಾಣಾ ಪೋಷಕರು ತಮ್ಮ ಮಗನಿಗೆ ದಯಾಮರಣ ಕರುನಿಸುವಂತೆ ದೆಹಲಿ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ್ದರು, ಈ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ತಿರಸ್ಕರಿಸಿದ ಬೆನ್ನಲ್ಲೇ 2025 ರಲ್ಲಿ ಸುಪ್ರೀಂ ಕೋರ್ಟ್‌ ಮೊರೆ ಹೋದ ರಾಣಾ ತಂದೆ ತಾಯಿ ಮಗನ ಚಿಕಿತ್ಸೆಗೆ ಬೇಕಾದ ಆರ್ಥಿಕ ವೆಚ್ಚ ಬರಿಸಲು ತಮ್ಮಿಂದ ಸಾಧ್ಯವಿಲ್ಲ. ಹಾಗೂ, ಮಗನ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು ಚೇತರಿಕೆಯಾಗುವ ಲಕ್ಷಣಗಳಿಲ್ಲ ಎಂಬುದನ್ನು ಕೋರ್ಟ್‌ಗೆ ಮನನ ಮಾಡಿಸಿದ ತರುವಾಯ  2026 ಮಾರ್ಚ್‌11  ರಂದು  ದಯಾಮರಣಕ್ಕೆ ಅನುಮತಿ ನೀಡಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಭಾರತದಲ್ಲಿ ದಯಾಮರಣ ಕೋರಿಕೆಗೆ ಸಿಕ್ಕ ಮೊದಲ ಕಾನೂನಾತ್ಮಕ ಒಪ್ಪಿಗೆ ಇದಾಗಿದೆ.

ನ್ಯಾಯಮೂರ್ತಿ ಪಾರ್ದಿವಾಲಾ ಅವರು ತೀರ್ಪು ನೀಡುವ ಸಂದರ್ಭದಲ್ಲಿ ಅಮೆರಿಕದ ಧರ್ಮಗುರು ಹೆನ್ರಿ ವಾರ್ಡ್ ಬೀಚರ್ ಅವರ ವ್ಯಾಖ್ಯವನ್ನು ನಿದರ್ಶನವಾಗಿ ನುಡಿದರು, ‘ದೇವರು ಮನುಷ್ಯನನ್ನು ಅವನು ಜೀವನವನ್ನು ಸ್ವೀಕರಿಸುತ್ತಾನೋ ಇಲ್ಲವೋ ಎಂದು ಕೇಳುವುದಿಲ್ಲ, ಅವನು ಜೀವನವನ್ನು ಸ್ವೀಕರಿಸಲೇಬೇಕು’ ಎಂದರು. ಜತೆಗೆ, ವಿಲಿಯಂ ಶೇಕ್ಸ್​ಪಿಯರ್​ನ ಪ್ರಸಿದ್ಧ ನಾಟಕ ‘ಹ್ಯಾಮ್ಲೆಟ್’ನ ಸಾಲಾದ ಟು ಬಿ ಓರ್‌ ನಾಟ್‌ ಟು ಬಿ(ಇರಬೇಕೇ ಅಥವಾ ಬೇಡವೇ) ಎಂಬುದನ್ನು ಪ್ರಸ್ತಾಪಿಸುತ್ತ, ನ್ಯಾಯಾಲಯಗಳು ಹಲವು ಬಾರಿ ಇಂತಹ ಸಂದರ್ಭಗಳಲ್ಲಿ ಸಾಯುವ ಹಕ್ಕಿನ ಕುರಿತಾದ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.

ದಯಾಮರಣಕ್ಕೆ ಉಯಿಲು: 2018ರ ಸುಪ್ರೀಂ ಕೋರ್ಟ್‌ ಆದೇಶದಲ್ಲಿ ವ್ಯಕ್ತಿಯು ಜೀವನ್ಮರಣದ ಸ್ಥಿಯಲ್ಲಿದ್ದಾಗ ತನಗೆ ಚಿಕಿತ್ಸೆ ಬೇಕೇ ಬೇಡವೇ ಎಂಬುದನ್ನು ಬದುಕ್ಕಿದ್ದಾಗಲೇ ಉಯಿಲು ಬರೆಯಬಹುದು. ವ್ಯಕ್ತಿಗೆ ಬದುಕಲು ಹಕ್ಕಿರುವ ಹಾಗೆ  ಘನತೆಯ ಸಾವು ಹೊಂದಲು  ಹಕ್ಕು ಇದೆ ಎಂಬುದನ್ನು ಸುಪ್ರೀಂ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಕರ್ನಾಟಕ ಮೊದಲ ರಾಜ್ಯ: ದಯಾಮರಣಕ್ಕೆ ಸಂಬಂಧಿಸಿದ ಕಾನೂನು ರಚನೆ ಮಾಡಿದ ಮೊದಲ ರಾಜ್ಯ ಕರ್ನಾಟಕ. ರಾಜ್ಯದ ಆಯ್ದ ಆಸ್ಪತ್ರೆಗಳಲ್ಲಿ ದಯಾಮರಣ ಜಾರಿಯಲ್ಲಿದ್ದು ಹಲವರು ಪರೋಕ್ಷ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕರ್ನಾಟಕದಲ್ಲಿ ನೇರ ದಯಾಮರಣವನ್ನು ಕರುಣಿಸುವಂತೆ ಹೆಚ್ಚು ಮನವಿಗಳು ಸಲ್ಲಿಕೆಯಾಗಿದೆ ಆದರೆ ಕಾನೂನಿನಲ್ಲಿ ಪರೋಕ್ಷ ದಯಾಮರಣಕ್ಕೆ ಮಾತ್ರ ಆದ್ಯತೆ ಇರುವುದರಿಂದ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 2010 ರಲ್ಲಿ ದಾವಣಗೆರೆಯ ನಿವೃತ್ತ ಶಿಕ್ಷಕಿ ಕರಿಬಸಮ್ಮ ಅವರು ಬಹುಕಾಲದಿಂದ ಕಾಡುತ್ತಿರುವ ಅನಾರೋಗ್ಯದಿಂದ ಬೇಸತ್ತು , ರಾಷ್ಟ್ರಪತಿ ಹಾಗೂ ಸುಪ್ರೀಂ ಕೋರ್ಟಿಗೆ ಇಚ್ಛಾಮರಣ ದಯಪಾಲಿಸುವಂತೆ ಅರ್ಜಿ ಸಲ್ಲಿಸಿದರು. ಸರ್ಕಾರ ದಯಾಮರಣದ ಕಾನೂನು ರಚಿಸಿದ ನಂತರ ಜೀವಂತ ಉಯಿಲು ಮಾಡುವ ಮೊದಲ ದಯಾಮರಣ ಕೋರಿಕೆದಾರರು ಇವರಾಗಲಿದ್ದಾರೆ.

ದಯಾಮರಣ ಹಿನ್ನೆಲೆ: ದಯಾಮರಣವು ಬಹಳ ಆಳವಾದ ಹಿನ್ನೆಲೆಯನ್ನು ಹೊಂದಿದ್ದು. ಗ್ರೀಕ್ ಚರಿತೆಯಲ್ಲಿ ದಯಾಮರಣವನ್ನು ಶಾಂತಿಯುತ ಸಾವು, ಕರುಣಾ ಮರಣ ಎಂದು ಕರೆಯಲಾಗಿದೆ.ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ರೋಗಿಯು ಚೇತರಿಸುತ್ತಾನೆ ಎಂದು ವೈದ್ಯರು ಭರವಸೆ ಕಳೆದುಕೊಂಡರೆ ರೋಗಿಯ ಅಪ್ಪಣೆ ಇಲ್ಲದೆ ಅವನನ್ನು ಸಾಯಿಸುತ್ತಿದ್ದರು. ಕಾಲ ಬದಲಾದಂತೆ ದಯಾಮರಣದ ಕಲ್ಪನೆಯು ಬದಲಾಗುತ್ತಾ ಹೋಯಿತು. ಸಾವು ಬದುಕಿನ ನಡುವೆ ಹೋರಾಡುವ ಜೀವಗಳ ಪರೋಕ್ಷವಾಗಿ ಇಲ್ಲ ನೇರವಾಗಿ ಸಾವಿಗೆ ಅನುವು ಮಾಡುವುದು ವೈದ್ಯಕೀಯ ದೃಷ್ಟಿಯಲ್ಲಿ ಪರಮಾರ್ಶಿಸಿದರೆ ಸರಿಯಾಗಿ ಕಂಡರೆ, ತಾತ್ವಿಕ ಹಾಗೂ ನೈತಿಕ ಒಳನೋಟಗಳು  ಇದು ತಪ್ಪೆಂದು ವಾದಿಸಿತು.ಆಧುನಿಕ ಕಾಲದಲ್ಲಿ ನೆದರ್‌ಲ್ಯಾಂಡ್‌ ನಂತಹ ದೇಶಗಳು 20 ನೇ ಶತಮಾನದ ಆರಂಭದಲ್ಲಿಯೇ ದಯಾಮರಣವನ್ನು ಕಾನೂನಾತ್ಮಕಗೊಳಿಸಿತು. ತೀವ್ರತರನಾದ ಖಾಯಿಲೆಗಳಿಂದ ನರಳಾಡುವವರಿಗೆ ಸಾಯುವ ಹಕ್ಕು ಇದೆ ಎಂದು ಪ್ರತಿಪಾದಿಸಿತು. ಕೆಲವು ದೇಶಗಳು ನೇರ ದಯಾಮರಣಕ್ಕೂ ಅನುಮತಿ ನೀಡಿದವು.

ದಯೆ ಮತ್ತು ಮರಣವನ್ನು ಒಟ್ಟೊಟ್ಟಿಗೆ ಇಟ್ಟು ನೋಡುವಾಗ ಚರ್ಚಿಸುವಾಗ ದಯೆ ಇದ್ದಲ್ಲಿ ಮರಣವೆಂಬುದನ್ನು ಕರುಣಿಸಲಾದೀತೆ ಎಂಬುದು ಸಹಜ ಪ್ರಶ್ನೆ, ಸಾವಿನಂಚಿನಲ್ಲಿದ್ದವನನ್ನು ಕಾಯಬೇಕಾಗಿರುವುದು ದಯೆ, ಆದರೆ ಮರಣವೇ ದಯೆಯಾದೀತೆಂದರೆ  ಮನುಷ್ಯತ್ವವನ್ನು ಹೇಗೆ ಎಲ್ಲಿ ಯಾವ ರೂಪದಲ್ಲಿ ಹುಡುಕುವುದೋ ಅಸ್ಪಷ್ಟ.ಚಿಕಿತ್ಸೆಯ ವೆಚ್ಚ ಬರಿಸಲಾಗದು ಎಂದು ದಯಾಮರಣಕ್ಕೆ ಮನವಿ ಮಾಡುವವರಿಗೆ ನ್ಯಾಯಾಲಯ ಬದುಕಿಸಲು ಬೇಕಾದ ಅನುಕೂಲ ಒದಗಿಸುವ ಬದಲು ಜೀವಹತ್ಯೆಗೆ ಮುಂದಾಗುವುದನ್ನು ವಿರೋಧಿಸಬೇಕೋ ಅಥವಾ, ಎಂದು ಹಿಂದಿನ ಸ್ಥಿತಿಗೆ ಮರಳರಾರು ಎಂಬುದು ಮನವರಿಕೆಯಾದ ಮೇಲೆ ಒದಗಿಸಿರುವ ಕೃತಕ ಉಸಿರಾಟದ  ವ್ಯವಸ್ಥೆಯ ಹಿಂಪಡೆದು ಮರಣವನ್ನೇ ಕರುಣೆಯಾಗಿ ದಯಪಾಲಿಸುವುದ ಎಂಬ ತರ್ಕ ಬಗೆಹರಿಯುವುದು ಸುಲಭವಿಲ್ಲ.


WhatsApp Image 2026 03 09 at 18.17.26
ಸರಿತ ಎನ್‌
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...