ಜಾಗತಿಕ ಆರ್ಥಿಕ ಬಿಕ್ಕಟ್ಟು; ಭದ್ರ ನೆಲೆ ಕಂಡುಕೊಂಡ ಬಂಗಾರ, ಬಡವರ ಕನಸು ಭಗ್ನ

Date:

ಕಳೆದ ಎರಡು ದಶಕಗಳಲ್ಲಿ ವಿಶ್ವ ಆರ್ಥಿಕತೆಯ ಅಸ್ಥಿರತೆ, ಜಿಯೋಪಾಲಿಟಿಕಲ್‌ ಸಂಘರ್ಷಗಳು ಮತ್ತು ಮಾರುಕಟ್ಟೆಯ ಏರಿಳಿತದ ಭಯದ ನಡುವೆಯೂ ಚಿನ್ನ ತನ್ನ ಹೊಳಪು ಕಾಪಾಡಿಕೊಂಡಿದೆ. ಆದರೆ ಬಡ ಹೆಣ್ಣುಮಕ್ಕಳ ಚಿನ್ನ ಕೊಳ್ಳುವ ಆಸೆ ಭಗ್ನಗೊಂಡಿದೆ


ಭಾರತವೂ ಸೇರಿದಂತೆ ವಿಶ್ವದಾದ್ಯಂತ 2025ರ ಮೊದಲ ತ್ರೈಮಾಸಿಕದಿಂದಲೇ ಬಂಗಾರದ ಮಾರುಕಟ್ಟೆ ಮತ್ತೊಮ್ಮೆ ಚರ್ಚೆಯ ಕೇಂದ್ರಬಿಂದುವಾಗಿದೆ. ಗ್ರಾಹಕರಿಂದ ಹೂಡಿಕೆದಾರರವರೆಗೆ ಎಲ್ಲರ ನೋಟವೂ ಈಗ ಚಿನ್ನದತ್ತ ತಿರುಗಿದೆ. ಕಳೆದ ಎರಡು ದಶಕಗಳಲ್ಲಿ ವಿಶ್ವ ಆರ್ಥಿಕತೆಯ ಅಸ್ಥಿರತೆ, ಜಿಯೋಪಾಲಿಟಿಕಲ್‌ ಸಂಘರ್ಷಗಳು ಮತ್ತು ಮಾರುಕಟ್ಟೆಯ ಏರಿಳಿತದ ಭಯದ ನಡುವೆಯೂ ಚಿನ್ನ ತನ್ನ ಹೊಳಪು ಕಾಪಾಡಿಕೊಂಡಿದೆ. ಆದರೆ ಬಡ ಹೆಣ್ಣುಮಕ್ಕಳ ಚಿನ್ನ ಕೊಳ್ಳುವ ಆಸೆ ಭಗ್ನಗೊಂಡಿದೆ.

2025ರಲ್ಲಿ ಚಿನ್ನದ ಬೆಲೆಯಲ್ಲಿ ಸಾರ್ವಕಾಲಿಕ ಏರಿಕೆ ಕಂಡಿದೆ. ಬಂಗಾರದ ಬೆಲೆಯನ್ನು ತೂಗುತ್ತಿರುವ ಶಕ್ತಿಗಳು ಭಾರತೀಯ ಮಾರುಕಟ್ಟೆಯೊಳಗಿನ ಕಾರಣಗಳಿಗಿಂತಲೂ ಜಾಗತಿಕ ವೇದಿಕೆ ಮೇಲಿನ ಅಸ್ಪಷ್ಟ ಚಲನೆಗಳನ್ನು ಅವಲಂಬಿಸಿವೆ. ಅಷ್ಟಕ್ಕೂ ಚಿನ್ನದ ಬೆಲೆ ಏರಿಳಿತಕ್ಕೆ ಕಾರಣವೇನು? ಹೂಡಿಕೆದಾರರ ಮುಂದಿನ ನಡೆಯೇನು? ತಜ್ಞರು ಹೇಳುವುದೇನು?

ಚಿನ್ನದ ದರ ಏರಿಳಿತವು, ಮುಖ್ಯವಾಗಿ ಜಾಗತಿಕ ಆರ್ಥಿಕತೆ, ರಾಜಕೀಯ ಪರಿಸ್ಥಿತಿ ಮತ್ತು ಹೂಡಿಕೆದಾರರ ಮನೋಭಾವಗಳ ಮೇಲೆ ಅವಲಂಬಿತವಾಗಿದೆ. ಭಾರತ ಹೆಚ್ಚಿನ ಚಿನ್ನವನ್ನು ಆಮದು ಮಾಡಿಕೊಳ್ಳುವುದರಿಂದ ಭಾರತದಲ್ಲಿ ಚಿನ್ನದ ಬೆಲೆಗಳು ಜಾಗತಿಕ ಮಾರುಕಟ್ಟೆಗಳಿಂದ ಹೆಚ್ಚು ಪ್ರಭಾವಿತವಾಗಿರುತ್ತವೆ. ಕರೆನ್ಸಿ ವಿನಿಮಯ ದರ, ಯುಎಸ್‌ ಹಣಕಾಸು ನೀತಿ ಮತ್ತು ದೇಶೀಯ ತೆರಿಗೆ ನಿಯಮಗಳಂತಹ ಪ್ರಮುಖ ಅಂಶಗಳು ಭಾರತೀಯ ಗ್ರಾಹಕರು ಪಾವತಿಸುವ ಅಂತಿಮ ಬೆಲೆಯ ಮೇಲೆ ನೇರ ಪರಿಣಾಮ ಬೀರುತ್ತವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ದರ ಏರಿಳಿತಕ್ಕೆ ಮುಖ್ಯ ಕಾರಣಗಳು

1.ಅಮೆರಿಕನ್‌ ಡಾಲರ್‌ VS INR ಇಂಪ್ಯಾಕ್ಟ್

‌ಜಾಗತಿಕವಾಗಿ ಚಿನ್ನವನ್ನು US ಡಾಲರ್‌ಗಳಲ್ಲಿ ವ್ಯಾಪಾರ ಮಾಡಲಾಗುತ್ತದೆ. ಡಾಲರ್‌ ವಿರುದ್ಧ ಭಾರತೀಯ ರೂಪಾಯಿ (INR) ದುರ್ಬಲಗೊಂಡಾಗ, ಅಂತಾರಾಷ್ಟ್ರೀಯ ಬೆಲೆಗಳು ಸ್ಥಿರವಾಗಿದ್ದರೂ ಸಹ, ಚಿನ್ನದ ಆಮದು ವೆಚ್ಚ ಹೆಚ್ಚಾಗುತ್ತದೆ. ಉದಾಹರಣೆಗೆ: 1 ಡಾಲರ್‌ ₹80ರಿಂದ ₹85ರವರೆಗೆ ಬಲಗೊಂಡರೆ, ಅದೇ ಔನ್ಸ್‌ ಚಿನ್ನವು ಭಾರತೀಯ ಖರೀದಿದಾರರಿಗೆ ತುಸು ಹೆಚ್ಚು ದುಬಾರಿಯಾಗುತ್ತದೆ. ಈ ಕರೆನ್ಸಿ ಏರಿಳಿತವು ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಾಗಲು ಅತ್ಯಂತ ತಕ್ಷಣದ ಮತ್ತು ಸರಳವಾಗಿ ಅಳೆಯಬಹುದಾದ ಕಾರಣಗಳಲ್ಲಿ ಒಂದು. ವಿಶೇಷವಾಗಿ ವ್ಯಾಪಾರ ಕೊರತೆ, ಹಣದುಬ್ಬರ ಅಥವಾ ವಿದೇಶಿ ನಿಧಿಯ ಹೊರಹರಿವುಗಳಿಂದಾಗಿ ರೂಪಾಯಿ ಅಪಮೌಲ್ಯಗೊಂಡಾಗ ಇದು ಸ್ಪಷ್ಟವಾಗುತ್ತದೆ.

Gemini Generated Image ct7wy1ct7wy1ct7w
AI generated

2. US ಫೆಡ್‌ ಬಡ್ಡಿದರಗಳ ಪಾತ್ರ: ಯುಎಸ್‌ ಫೆಡರಲ್‌ ರಿಸರ್ವ್‌ನ ಬಡ್ಡಿದರದ ನಿರ್ಧಾರಗಳು ವಿಶ್ವಾದ್ಯಂತ ಚಿನ್ನದ ಬೆಲೆಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ಫೆಡ್‌ ಬಡ್ಡಿದರಗಳನ್ನು ಹೆಚ್ಚಿಸಿದಾಗ, ಯುಎಸ್‌ ಬಾಂಡ್ಗಳು ಮತ್ತು ಉಳಿತಾಯ ಖಾತೆಗಳು ಹೆಚ್ಚು ಆಕರ್ಷಿತವಾಗುತ್ತವೆ. ಆಗ ಚಿನ್ನದಿಂದ ಹಣವನ್ನು ಹೊರಪಡೆಯುತ್ತವೆ. ಇದು ಜಾಗತಿಕವಾಗಿ ಚಿನ್ನದ ಬೆಲೆಗಳಲ್ಲಿ ತಾತ್ಕಾಲಿಕ ಇಳಿಕೆಗೆ ಕಾರಣವಾಗಬಹುದು.

3. ಚಿನ್ನದ ಮೇಲಿನ ಆಮದು ಸುಂಕ ಮತ್ತು GST: ಭಾರತವು ಚಿನ್ನದ ಆಮದುಗಳ ಮೇಲೆ ಶೇ.15ರಷ್ಟು ಕಸ್ಟಮ್ಸ್‌  ಸುಂಕವನ್ನು (2024ರ ಹೊತ್ತಿಗೆ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್‌ ಸೇರಿದಂತೆ) ವಿಧಿಸುತ್ತದೆ. ಜೊತೆಗೆ ಚಿನ್ನದ ಮಾರಾಟದ ಮೇಲೆ ಶೇ.3ರಷ್ಟು ಸರಕು ಮತ್ತು ಸೇವಾ ತೆರಿಗೆ (GST) ವಿಧಿಸುತ್ತದೆ. ಈ ಶುಲ್ಕಗಳನ್ನು ಶೇಕಡಾವಾರು ಪರಿಭಾಷೆಯಲ್ಲಿ ನಿಗದಿಪಡಿಸಲಾಗುತ್ತದೆ. ಹಾಗಾಗಿ ಜಾಗತಿಕವಾಗಿ ಚಿನ್ನದ ಮೂಲ ಬೆಲೆ ಹೆಚ್ಚಾದಂತೆ, ತೆರಿಗೆ ಮೊತ್ತವು ಪ್ರಮಾಣಾನುಗುಣವಾಗಿ ಹೆಚ್ಚಾಗುತ್ತದೆ. ಈ ಬಹು ಹಂತದ ತೆರಿಗೆ ರಚನೆಯು ಭಾರತೀಯ ಗ್ರಾಹಕರ ಮೇಲೆ ಬೆಲೆಯ ಪರಿಣಾವನ್ನು ಹೆಚ್ಚಿಸುತ್ತದೆ. ಅಂತಾರಾಷ್ಟ್ರೀಯ ಬೆಲೆ ಏರಿಕೆ ಸಾಧಾರಣವಾಗಿದ್ದರೂ ಸಹ, ಭಾರತದಲ್ಲಿ ಚಿನ್ನದ ದರ ಹೆಚ್ಚಾಗುತ್ತಿರುವುದಕ್ಕೆ ಇದು ಪ್ರಮುಖ ಕಾರಣವಾಗಿದೆ. ಸುಂಕ ಅಥವಾ ಜಿಎಸ್‌ಟಿಯಲ್ಲಿ ಭವಿಷ್ಯದ ಯಾವುದೇ ಪರಿಷ್ಕರಣೆಯು ದೇಶೀಯವಾಗಿ ಬೆಲೆ ಪ್ರವೃತ್ತಿಯನ್ನು ತಣ್ಣಗಾಗಿಸಬಹುದು ಅಥವಾ ವೇಗಗೊಳಿಸಬಹುದು.

image 71

ಆದಾಗ್ಯೂ ದರ ಏರಿಕೆಯು ಆರ್ಥಿಕ ಹಿಂಜರಿತದ ಭಯ ಅಥವಾ ಮಾರುಕಟ್ಟೆ ಅಸ್ಥಿರತೆಯನ್ನು ಉಂಟು ಮಾಡಿದರೆ, ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಆಸ್ತಿಯಾಗಿ ಬಳಸುವುದರಿಂದ ಬೆಲೆಗಳು ಸಹಜವಾಗಿ ಹೆಚ್ಚಾಗುತ್ತವೆ. ಹೆಚ್ಚುವರಿ ಬಡ್ಡಿದರಗಳು ಡಾಲರನ್ನು ಬಲಪಡಿಸಬಹುದು, ಇದು ರೂಪಾಯಿಗಳಲ್ಲಿ ಚಿನ್ನವನ್ನು ದುಬಾರಿಯಾಗಿ ಮಾಡುತ್ತದೆ. ಇದರಿಂದ ದೇಶೀಯ ಬೆಲೆಗಳು ಇನ್ನಷ್ಟು ಹೆಚ್ಚಾಗುತ್ತವೆ.

ಉತ್ತರ ಕನ್ನಡದ ಚಿನ್ನದಂಗಡಿ ಮಾಲೀಕ ವಿಶಾಲ್‌ ಶೇಟ್‌ ಪ್ರತಿಕ್ರಿಯಿಸಿ, “ರಷ್ಯಾ-ಉಕ್ರೇನ್‌ ಯುದ್ಧದಿಂದ ಜಾಗತಿಕ ವ್ಯಾಪಾರ ಮಾರ್ಗಗಳು, ಇಂಧನ ಸರಬರಾಜು ಮತ್ತು ಅಂತಾರಾಷ್ಟ್ರೀಯ ಬಾಂಡ್‌ ಮಾರುಕಟ್ಟೆಗಳು ಅಸ್ಥಿರಗೊಂಡಿವೆ. ಇದರಿಂದ ರಿಸ್ಕ್‌ ಆಫ್‌ ಮನೋಭಾವ ಹೆಚ್ಚಾಗಿ, ಹೂಡಿಕೆದಾರರು ಎಲ್ಲಾ ಕಾಲಕ್ಕೂ ಸುರಕ್ಷಿತ ಅಸೆಟ್‌ ಎಂದೇ ಪರಿಗಣಿಸುವ ಚಿನ್ನದತ್ತ ತಿರುಗಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಇಸ್ರೇಸ್-ಹಮಾಸ್‌ ಸಂಘರ್ಷ, ಇರಾನ್-ಅಮೆರಿಕ ನಡುವಿನ ಉದ್ವಿಗ್ನತೆಗಳು ಇತರೆ ಎಲ್ಲಾ ರಾಷ್ಟ್ರಗಳಲ್ಲೂ ಭವಿಷ್ಯದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿವೆ. ಅಮೆರಿಕ ಹಣಕಾಸು ನೀತಿ, ವಿಶೇಷವಾಗಿ ಬಡ್ಡಿದರ ಏರಿಕೆ-ಇಳಿಕೆ ಕುರಿತ ಗೊಂದಲ, ಬ್ಯಾಂಕಿಂಗ್‌ ಕ್ಷೇತ್ರದ ಒತ್ತಡ ಹಾಗೂ ಅಮೆರಿಕದ ಸಾಲ ಮಿತಿ ವಿವಾದ.. ಇವು ಡಾಲರ್‌ ಮತ್ತು ಬಾಂಡ್‌ ಮಾರುಕಟ್ಟೆಯಲ್ಲಿ ಅಸ್ಥಿರತೆ ತಂದಿವೆ. ಅಲ್ಲದೆ ಚೀನಾ-ಯೂರೋಪ್‌ಗಳ ಕಂಪನಿಗಳ ಲಾಭದಲ್ಲಿ ಕಂಡುಬರುವ ಕುಸಿತದಿಂದ ಸ್ಟಾಕ್‌ ಮಾರ್ಕೆಟ್‌ಗಳು ತೀವ್ರ ಏರಿಳಿತ ಅನುಭವಿಸುತ್ತಿವೆ. ರಷ್ಯಾ, ಚೀನಾ, ಟರ್ಕಿ ಹಾಗೂ ಜಪಾನ್‌ನಂತಹ ದೇಶಗಳು ಸುರಕ್ಷತೆಯ ದೃಷ್ಟಿಯಿಂದ ತಮ್ಮ ರಿಸರ್ವ್‌ಗಳಲ್ಲಿ ಚಿನ್ನದ ಪಾಲನ್ನು ಹೆಚ್ಚಿಸಿಕೊಂಡಿವೆ. ಅರ್ಥಾತ್‌ ಹೂಡಿಕೆ ಹೆಚ್ಚಾಗಿದೆ. ಭಾರತದಲ್ಲಿ ಸಾಂಪ್ರದಾಯಿಕ ಆಪತ್ಬಾಂಧವ ಎಂದೇ ಭಾವಿಸಲಾಗುತ್ತದೆ. ಇದೂ ಕೂಡ ಚಿನ್ನದ ದರದ ಭಾರೀ ಏರಿಕೆಗೆ ಕಾರಣವಾಗಿರಬಹುದು. ಸಾಮಾನ್ಯವಾಗಿ ವಾರ್ಷಿಕವಾಗಿ ಶೇ.8-10 ರಷ್ಟು ಮಾತ್ರ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆ, ಜಿಯೋಪೊಲಿಟಿಕಲ್‌, ದುಪ್ಪಟ್ಟಾದ ಹೂಡಿಕೆದಾರರ ಕಾರಣದಿಂದ ಬೇಡಿಕೆ ಹೆಚ್ಚಾಗಿದೆ. ಇದು ಈ ವರ್ಷ ಏಕಾಏಕಿ ಶೇ.40ರಷ್ಟು ದರ ಏರಿಕೆಗೆ ಕಾರಣವಾಗಿದೆ. ಬೇಡಿಕೆ ಸಾಮನ್ಯ ಮಟ್ಟಕ್ಕಿಂತ ಬಹಳ ಹೆಚ್ಚು ವೇಗದಲ್ಲಿ ಏರಿದ ಕಾರಣ ದರದಲ್ಲೂ ಅಸಾಮಾನ್ಯ ಜಿಗಿತ ಕಂಡಿದೆ” ಎಂದರು.

ಇದನ್ನೂ ಓದಿ: ಮಹಿಳೆಯರಿಗೆ ಆನ್‌ಲೈನ್‌ ಕಿರುಕುಳ; ಇದು ಡಿಜಿಟಲ್‌ ಭೂತಗಳ ಬೆನ್ನಟ್ಟುವ ಕಾಲ!

ಬ್ಯಾಂಕ್ ಬಡ್ಡಿದರಗಳು ಕಡಿಮೆಯಾದಾಗ, ಬ್ಯಾಂಕ್‌ಗಳಲ್ಲಿಡುವ ಹಣಕ್ಕೆ ಬರುವ ಲಾಭವೂ ಕಡಿಮೆಯಾಗುತ್ತದೆ. ಹೀಗಾಗಿ, ಹೂಡಿಕೆದಾರರು ಬಂಗಾರದಂತಹ ಸುರಕ್ಷಿತ ಹೂಡಿಕೆಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಬಂಗಾರ ಯಾವುದೇ ಬಡ್ಡಿ ನೀಡುವುದಿಲ್ಲ. ಆದರೆ, ಕಾಲ ಕಾಲಕ್ಕೆ ಅದರ ಬೆಲೆ ಏರಿಕೆಯಾಗುವ ನಿರೀಕ್ಷೆಯಂತೂ ಇರುತ್ತದೆ. ಜಾಗತಿಕವಾಗಿ ಆರ್ಥಿಕತೆಯ ಹೊಯ್ದಾಟದ ಆತಂಕದಿಂದ ಜನರು ತಮ್ಮ ಹಣವನ್ನು ಸುರಕ್ಷಿತವಾಗಿಡಲು ಯೋಜಿಸಿ ಬಂಗಾರದಲ್ಲಿ ಹೂಡಿಕೆ ಮಾಡುತ್ತಾರೆ ಎನ್ನುತ್ತಾರೆ ತಜ್ಞರು.

2025ರ ಮೊದಲ ತ್ರೈಮಾಸಿಕದಲ್ಲಿ ಕಂಡುಬಂದ ದರ ಜಿಗಿತ ವರ್ಷದ ಕೊನೆವರೆಗೂ ಮುಂದುವರೆದಿದೆ. ಇಂದು ಕೂಡ (ಡಿ.3) ಅಪರಂಜಿ (24K) 1 ಗ್ರಾಂ ಚಿನ್ನದ ಬೆಲೆ ₹13,058, 22 K-₹11,970 ಹಾಗೂ 18K-₹9,794 ಇದೆ. ಭಾರತದಲ್ಲಿ ಚಿನ್ನದ ಮೇಲಿನ ಸಾಂಸ್ಕೃತಿಕ ಭರವಸೆ ಹಾಗೂ ಹೂಡಿಕೆ ಮಾದರಿಯು, ಗ್ರಾಹಕರು ಮತ್ತು ವ್ಯಾಪಾರಿಗಳು ಮಾರುಕಟ್ಟೆಯನ್ನು ಹೆಚ್ಚು ಎಚ್ಚರಿಕೆಯಿಂದ ಗಮನಿಸಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಿದೆ. ಮುಂದಿನ ದಿನಗಳಲ್ಲಿ ಜಾಗತಿಕ ಒತ್ತಡಗಳು ಕಡಿಮೆಯಾಗದಿದ್ದರೆ, ಚಿನ್ನದ ಬೆಲೆ ಇನ್ನೂ ಏರುವ ನಿರೀಕ್ಷೆಯಿದೆ.


WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...