ಸಾಯಿಬಾಬಾ ನಮನ | ಮನಸ್ಸು ಬೇಸರ, ದುಃಖ, ಮೆಚ್ಚುಗೆ, ಮಹಾಬೆರಗುಗಳ ಮುದ್ದೆ: ಸ್ತಂಭೀಭೂತ

Date:

ಸ್ನೇಹಿತರೇ,

ನಮಸ್ಕಾರ. ನಿನ್ನೆ, 2024, ಅಕ್ಟೋಬರ್ 20ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಜಿ.ಎನ್. ಸಾಯಿಬಾಬಾ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ನಡೆದ ಸಭೆಯ ವಿಡಿಯೋಗಳು ಇವು: ಭಾಗ ಒಂದು, ಭಾಗ ಎರಡು.

ಸಭೆಯನ್ನು ಉದ್ದೇಶಿಸಿ ಎಸ್ ಬಾಲನ್, ರಾಧಿಕಾ ಚಿತ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಕಾರ್ ಹಾಗೂ ಶಿವಸುಂದರ್ ಅವರು ಮನಮುಟ್ಟುವಂತೆ, ಮನತಲ್ಲಣಿಸುವಂತೆ ಮಾತನಾಡಿದರು. ಯುಎಪಿಎ ಕಾಯಿದೆ ಎಂಬ ಮಹಾ ಕೇಡಿನ ಬಗ್ಗೆ, ಅದರ ಅಡಿ ಬಂಧನಕ್ಕೆ ಒಳಗಾಗಿ ಸೆರೆಮನೆ ಎಂಬ ನರಕಕೂಪದಲ್ಲಿರುವ ಆದಿವಾಸಿಗಳು, ಕಾರ್ಮಿಕರು, ನ್ಯಾಯನಿಷ್ಠುರ ಕಾರ್ಯಕರ್ತರು ಹಾಗೂ ಧೀಮಂತರ ಬವಣೆಯ ಬಗ್ಗೆ ಸಾಕಷ್ಟು ತಿಳಿದಿರುವವರ ಎದೆಗಳು ಕೂಡ ನಡುಗುವಂತಿತ್ತು ಅವರು ಒಬ್ಬೊಬ್ಬರ ಮಾತೂ.
ಮೇಲಿನ ಆ ಮಾತಲ್ಲಿ ಅತಿಶಯೋಕ್ತಿ ಇಲ್ಲ. ದಯವಿಟ್ಟು ಬಿಡುವು ಮಾಡಿಕೊಂಡು, ಈ ವಿಡಿಯೋಗಳನ್ನು ನೋಡಿ. ಸಾವಧಾನವಾಗಿ ನೋಡಿ. ನೋಡಿದಮೇಲೆ ಆದಷ್ಟು ಜನರಿಗೆ ಹಂಚಿ. ಸ್ನೇಹಿತರೊಡನೆ ಚರ್ಚಿಸಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಿಮ್ಮ ಅನುಕೂಲಕ್ಕಾಗಿ, ಈ ವಿಡಿಯೋಗಳಲ್ಲಿ ಯಾರ ಮಾತು ಎಲ್ಲಿಂದ ಎಲ್ಲಿಯವರೆಗೆ ಇದೆ ಎನ್ನುವುದರ ವಿವರವನ್ನು ಈ ಕೆಳಗೆ ಕೊಟ್ಟಿದೆ:

ವಿಡಿಯೋ ಒಂದು: https://www.youtube.com/watch?v=Vy11CicjQsM

0:00 – 18:16 – ಪ್ರಸ್ತಾವನೆ: ನಗರಗೆರೆ ರಮೇಶ್, ಜನಶಕ್ತಿ ಸಂಘಟನೆಯ ಗೌರವಾಧ್ಯಕ್ಷರು

18:16 – 39:35 – ಎಸ್ ಬಾಲನ್, ಕಾರ್ಮಿಕ ಹಾಗೂ ಮಾನವಹಕ್ಕುಗಳ ಧೀಮಂತ ನ್ಯಾಯವಾದಿ

39: 35 – 58:43 – ರಾಧಿಕಾ ಚಿತ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಕಾರ್, ಅಪರಾಧ ಮತ್ತು ಮಾನವಹಕ್ಕುಗಳ ಪ್ರಾಧ್ಯಾಪಕಿ, ನ್ಯಾಷನಲ್ ಸ್ಕೂಲ್ ಆಫ್ ಲಾ ಯೂನಿವರ್ಸಿಟಿ, ಬೆಂಗಳೂರು ಹಾಗೂ ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರೆಟಿಕ್ ರೈಟ್ಸ್ ಸಂಘಟನೆಯ ಕಾರ್ಯಕರ್ತೆ

58:43 – ಕಡೆಯವರೆಗೆ – ಶಿವಸುಂದರ್, ಕನ್ನಡದ ಅತಿಧೀಮಂತ ಪತ್ರಕರ್ತ, ಲೇಖಕ. ವಾರ್ತಾಭಾರತಿ ಪತ್ರಿಕೆಯ ಜಾಲತಾಣ ಹಾಗೂ ಯೂಟ್ಯೂಬ್ ವಾಹಿನಿಯಲ್ಲಿ ಇವರ ನೂರಾರು ವಿಡಿಯೋ ಹಾಗೂ ಲೇಖನಗಳು ಲಭ್ಯ. ಸಾಯಿಬಾಬಾ ಅವರೊಂದಿಗೆ ಹಲವು ವರ್ಷ ಕೆಲಸ ಮಾಡಿದವರು; ಅವರನ್ನು ಹತ್ತಿರದಿಂದ ಬಲ್ಲವರು. ಶಿವಸುಂದರ್ ಅವರು ಸಾಯಿಬಾಬಾ ಅವರ ಬಗ್ಗೆ ನೀಡಿದ ಹಲವು ವಿವರ ಕೇಳಿದರೆ, ಮನಸ್ಸು ಬೇಸರ, ದುಃಖ, ಮೆಚ್ಚುಗೆ, ಬೆರಗುಗಳ ಮುದ್ದೆಯಾಗಿ, ಸ್ತಂಭೀಭೂತವಾಗುತ್ತದೆ. ಮಾತು ಎರಡನೇ ವಿಡಿಯೋದಲ್ಲಿ ಮುಂದುವರಿಯುತ್ತದೆ.

ವಿಡಿಯೋ ಎರಡು: https://www.youtube.com/watch?v=_kt7UVSQsV4

0.00 – 16.00 – ಶಿವಸುಂದರ್ ಅವರ ಮಾತು ಮುಂದುವರಿದಿದೆ.

ಸಭೆಯ ಕಡೆಯಲ್ಲಿ, ಅತಿ ಆರ್ದ್ರ ಮನಸ್ಸಿನ ದು. ಸರಸ್ವತಿ ಅವರು ಮಾತನಾಡಿದರು. ಕಳೆದ ಮಾರ್ಚ್ ತಿಂಗಳು, ಸಾಯಿಬಾಬಾ ಅವರು ಎಲ್ಲ ಆರೋಪಗಳಿಂದ ಸಂಪೂರ್ಣ ಖುಲಾಸೆಗೊಂಡು ಸೆರೆಮನೆಯಿಂದ ಹೊರಬಂದಮೇಲೆ, ಸರಸ್ವತಿ ಅವರು ಹೈದರಾಬಾದಿನಲ್ಲಿ ಅವರನ್ನು ಕಂಡು, ಅವರ ಕೈಹಿಡಿದು ಅವರ ಜೊತೆ ಮತ್ತು ಅವರ ಮಡದಿ ಶ್ರೀಮತಿ ವಸಂತಾ ಅವರ ಜೊತೆ ಕಳೆದ ಕೆಲವು ಗಂಟೆಗಳನ್ನು ನೆನೆಸಿಕೊಂಡರು; ಆ ಅನುಭವವನ್ನು ಕಥಿಸಿದರು.

ದುರದೃಷ್ಟದಿಂದ, ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಅವರ ಮಾತು ಮುದ್ರಣಗೊಳ್ಳಲಿಲ್ಲ. ಸರಸ್ವತಿಯವರು ಮಾತನಾಡಿದ ಮೇಲೆ ಸಭೆಯ ಅಧ್ಯಕ್ಷ ಭಾಷಣ ಮಾಡಿದ ಅರವಿಂದ ನಾರಾಯಣ, ಅಧ್ಯಕ್ಷ, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ – ಇವರ ಮಾತು ಕೂಡ ಮುದ್ರಣಗೊಳ್ಳಲಿಲ್ಲ. ದೊಡ್ಡ ನಷ್ಟವಾಗಿದೆ.

ವಿಡಿಯೋಗಳನ್ನು ತಪ್ಪದೆ ನೋಡಿ. ಭಾರತವಾಸಿಗಳಾಗಿ, ನಾಗರಿಕರಾಗಿ, ಪ್ರಪಂಚದ ನಾಗರಿಕರಾಗಿ ನಮ್ಮ ನಮ್ಮ ಸಂವೇದನೆಯನ್ನು, ನಮ್ಮ ಸುತ್ತಲಿನವರ ಸಂವೇದನೆಯನ್ನು ಹೇಗೆ ರೂಪಿಸಿಕೊಳ್ಳಬೇಕಿದೆ, ಹಾಗೆ ಮಾಡುತ್ತ ಏನು ಮಾಡಬೇಕಿದೆ, ದಯವಿಟ್ಟು ಯೋಚಿಸಿ; ಸ್ನೇಹಿತರು ಮತ್ತು ಇಷ್ಟರೊಡನೆ ಚರ್ಚಿಸಿ.

-ರಘುನಂದನ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...