ಆಸೆಬುರುಕತೆಯೇ ವಂಚಕರಿಗೆ ಅಸ್ತ್ರ: ಸೈಬರ್ ಸುರಕ್ಷತೆ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ಅಂಶಗಳಿವು!

Date:

ಡಿಜಿಟಲ್‌ ವಂಚನೆ ಎಂಬ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ತಿಳಿದುಕೊಳ್ಳಲೇಬೇಕಾದ ಕೆಲ ಅಂಶಗಳಿವೆ. ಅವುಗಳ ಜತೆಗೆ ನಮ್ಮ ಕಾಮನ್‌ ಸೆನ್ಸ್‌ ಉಪಯೋಗಿಸಿದರೆ ಈ ವಂಚಕರಿಗೇ ತಿರುಗುಬಾಣ ಹೂಡಬಹುದು!

ಹಣ ಯಾರಿಗೆ ಬೇಡ? ಎಲ್ಲರಿಗೂ ಬೇಕು. ಯಾವುದಾದರೊಂದು ಮಾರ್ಗದಲ್ಲಿ ಹಣ ಬಂದರೆ ಸಾಕು ಎನ್ನುವ ಆಸೆಬುರುಕತನವೇ ಮೋಸಗಾರರಿಗೆ ಮತ್ತು ಡಿಜಿಟಲ್ ವಂಚಕರಿಗೆ ವರವಾಗಿದೆ. ಇದರಿಂದ ಪಾರಾಗಲು ದೊಡ್ಡ ಉಪಾಯವೇನೂ ಅಗತ್ಯವಿಲ್ಲ. ಸಾಮಾನ್ಯ ಜ್ಞಾನ ಸಾಕು. ಡಿಜಿಟಲ್‌ ವಂಚನೆ ಎಂಬ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ತಿಳಿದುಕೊಳ್ಳಲೇಬೇಕಾದ ಕೆಲ ಅಂಶಗಳಿವೆ. ಅವುಗಳ ಜತೆಗೆ ನಮ್ಮ ಕಾಮನ್‌ ಸೆನ್ಸ್‌ ಉಪಯೋಗಿಸಿದರೆ ಈ ವಂಚಕರಿಗೇ ತಿರುಗುಬಾಣ ಹೂಡಬಹುದು!

ಹೊಸ ಹೊಸ ವೇಷದಲ್ಲಿ ಈ ಡಿಜಿಟಲ್‌ ಮೋಸದ ಜಾಲಗಳು ಕಾರ್ಯಾಚರಣೆ ನಡೆಸುತ್ತಿವೆ. ಎಸ್‌ಬಿಐ ಎಪಿಕೆ, ಆರ್‌ಟಿಒ ಎಪಿಕೆ, ಮೀಶೋ, ಅಮೇಜಾನ್‌ ಬಹುಮಾನ, ಈ ರೀತಿ ಹಲವಾರು ಲಿಂಕ್‌ಗಳ ರೂಪದಲ್ಲಿ ಕಾರ್ಯಚಟುವಟಿಕೆ ಮಾಡುತ್ತಾ ವಂಚಿಸುತ್ತಿರುವ ಜಾಲಗಳು ಸಕ್ರಿಯವಾಗಿವೆ. ಫೇಕ್‌ ಫೈಲ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೂ ಇದೆ. ಈ ಡಿಜಿಟಿಲ್‌ ಕಳ್ಳರು ಹೊಸದಾರಿಗಳನ್ನು ಹೇಗೆ ಹುಡುಕುತ್ತಾರೆ ಎಂಬುದಕ್ಕೆ ತಾಜಾ ಉದಾಹರಣೆ: ಇತ್ತಿಚೇಗೆ ವಾಟ್ಸ್ ಆಪ್ ಗ್ರೂಪ್ ಗಳಲ್ಲಿ ‘ಮೊದಲಿಗೆ ಇದು ನಕಲಿ ಎಂದು ಭಾವಿಸಿದ್ದೆ, ಆದರೆ ನಿಜವಾಗಿಯೂ ನನಗೆ 50000 ದೊರೆಯಿತು! ನೀವೂ ಪ್ರಯತ್ನಿಸಿ ನೋಡಿ!’ ಎಂದು ಪ್ರಚೋದಿಸುವ ಸಂದೇಶ ಹರಿದಾಡಿತು. ಇದು ಹೊಸದಾಗಿ ವೈರಲ್‌ ಆಗುತ್ತಿರುವ ವಂಚನೆ ಜಾಲದ ಕೊಂಡಿ.

ಡಿಜಿಟಲ್‌ ಲೋಕ ತನ್ನ ವಿಸ್ತಾರವನ್ನು ಕಂಡುಕೊಂಡಷ್ಟು ವೇಗವಾಗಿ ವಂಚಕರು ವಂಚಿಸಲು ಉತ್ತಮ ವೇದಿಕೆಯಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಡಿಜಿಟಲ್‌ ಲೋಕ ಎಂಬುದು ಅಂಕೆ ಸಿಗದ ಮಾಯಲೋಕದಂತೆ ಬೆಳೆಯುತ್ತಿದೆ. ಹೊಸ ಹೊಸ ರೀತಿಯ ಎಐ ತಂತ್ರಜ್ಞಾನಗಳು, ಕೇವಲ ಸಾಮಾನ್ಯ ಜನರನ್ನಷ್ಟೇ ಅಲ್ಲ ಉನ್ನತ ಟೆಕ್‌ ಜ್ಞಾನವಿರುವ ಮೇಧಾವಿಗಳನ್ನು ಸಹ ಹುಬ್ಬೇರಿಸುವಂತೆ ಮಾಡಿವೆ. ಇದೇ ಸಮಯದಲ್ಲಿ ಡಿಜಿಟಲ್‌ ಲೋಕದಲ್ಲಿ ನೈಪುಣ್ಯತೆಯುಳ್ಳವರು ಇದನ್ನು ಮೋಸ ವಂಚನೆ ಮಾಡಲು ಎಗ್ಗಿಲ್ಲದೆ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಚಾತುರ್ಯವನ್ನು ಬಳಸಿ ಲಕ್ಷಾಂತರ, ಕೋಟ್ಯಂತರ ರೂಪಾಯಿಗಳನ್ನು ಎಲ್ಲಿಯೋ ಕುಳಿತುಕೊಂಡು ಎಗರಿಸುತ್ತಿದ್ದಾರೆ. ವ್ಯವಸ್ಥಿತ ಜಾಲದ ನೆಟ್ವರ್ಕ್‌ಗಳು ಕೋಟಿ ಕೋಟಿ ಹಣ ದೋಚುವ ಉದ್ದೇಶಿದಿಂದಲೇ ಸಕ್ರಿಯವಾಗಿವೆ. ಕೆಲವೊಮ್ಮೆ ನೆಟ್ವರ್ಕ್‌ನ ಭಾಗವಲ್ಲದೆಯೂ ಈ ಟ್ರಿಕ್‌ಗಳನ್ನು ಬಲ್ಲ ಆಸಾಮಿಗಳು ಸಹ ಜನಸಾಮಾನ್ಯರನ್ನು ಬಲಿಪಶುಗಳನ್ನಾಗಿ ಮಾಡುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
image 2026 01 21T112456.541

ಇದ್ದಕ್ಕಿದ್ದಂತೆ ನಿಮ್ಮ ಸ್ನೇಹಿತರ ಮೊಬೈಲ್‌ ನಿಂದ ಎಪಿಕೆ ಫೈಲೊಂದು ನಿಮ್ಮ ವಾಟ್ಸಪ್‌ ಗುಂಪಿಗೆ ಅಥವಾ ನಿಮ್ಮ ವೈಯಕ್ತಿಕ ನಂಬರಿಗೆ ಬಂದು ಬೀಳುತ್ತದೆ. ನಿಮ್ಮ ನಂಬಿಕಸ್ಥ ಗೆಳೆಯನೇ ಆದ್ದರಿಂದ ಅದನ್ನು ನೀವು ಮತ್ತೆ ಲಿಂಕ್‌ ಕ್ಲಿಕ್‌ ಮಾಡಿ ನೋಡಲು ಯತ್ನಿಸುತ್ತೀರಿ. ನಂತರ ನಿಮಗೆ ಅರಿವಿಲ್ಲದೆ ನಿಮ್ಮ ಮೊಬೈಲ್‌ನಿಂದ ಎಪಿಕೆ ಫೈಲ್‌ ನಿಮ್ಮ ಸಂಪರ್ಕದಲ್ಲಿರುವ ಎಲ್ಲಾ ನಂಬರ್‌ಗಳಿಗೆ ಹಾಗೂ ವಾಟ್ಸಪ್‌ ಗುಂಪುಗಳಿಗೆ ಸುರಿಯುತ್ತದೆ. ನಿಮಗೆ ಮೇಲಿಂದ ಮೇಲೆ ಕಾಲ್‌ಗಳು ಬರಲು ಶುರುವಾಗುತ್ತವೆ. ನೀವು ಆತಂಕಕೊಳಗಾಗಿ ಭಯಬೀತರಾಗುತ್ತೀರಿ. ಇಂತಹ ಅನುಭವ ಸಾಕಷ್ಟು ಜನಕ್ಕೆ ವಿವಿಧ ರೀತಿಯಲ್ಲಿ ಆಗಿ ವಾಟ್ಸಪ್‌ ಸಹವಾಸ ಸಾಕು ಎನ್ನುವ ಅನುಭವವಾಗಿದೆ.

ಹೀಗೆ ಬರುವ ಎಪಿಕೆ ಫೈಲ್‌ಗಳು ನಮ್ಮ ವಾಟ್ಸಪನ್ನು ಹ್ಯಾಕ್‌ ಮಾಡಿ ನಮ್ಮ ಇಡೀ ಮೊಬೈಲ್‌ ಸಿಸ್ಟಮ್‌ ಅನ್ನು ಹ್ಯಾಕ್‌ ಮಾಡಿ ಹಣ ದೋಚುವ, ಮಾನ ಹರಾಜು ಹಾಕುವ ಪ್ರಯತ್ನ ಮಾಡುತ್ತವೆ. ಕೇವಲ ಎಪಿಕೆ ಫೈಲ್‌ ಕ್ಲಿಕ್‌ ಮಾಡುವುದಷ್ಟೇ ಅಲ್ಲ, ಬೇರೆ ಬೇರೆ ರೂಪದಲ್ಲಿ ನಮ್ಮ ಬ್ಯಾಂಕ್‌ ಖಾತೆಯನ್ನು ಹ್ಯಾಕ್‌ ಮಾಡಲು ಯತ್ನಿಸುತ್ತಿರುತ್ತಾರೆ. ಗೊತ್ತಿಲ್ಲದ ನಂಬರ್‌ ನಿಂದ ವಿಡಿಯೋ ಕರೆ ಮಾಡಿ ನಿಮ್ಮನ್ನು ಡಿಜಿಟಲ್‌ ಬಂಧನ ಮಾಡಿದ್ದೇವೆ, ಇಷ್ಟು ಹಣ ಕೊಟ್ಟರೆ ಬಿಡುತ್ತೇವೆ ಎಂದು ಹಣ ಪೀಕುವುದು. ನಿಮ್ಮವರನ್ನು ಅರೆಸ್ಟ್‌ ಮಾಡಿದ್ದೇವೆ ಎಂದು ಪೊಲೀಸ್‌ ಡ್ರೆಸ್‌ನಲ್ಲಿ ಕಾಣಿಸಿಕೊಂಡು ಲಕ್ಷಗಟ್ಟಲೆ ಹಣ ಪೀಕುವುದು ಇಂತಹದ್ದೆಲ್ಲ ಸರ್ವೆ ಸಾಮಾನ್ಯವಾಗಿದೆ. ಸಾಮಾಜಿಕ ಮಾಧ್ಯಮಗಳನ್ನು ಬಳಸುವಾಗ ಬಹಳ ಎಚ್ಚರಿಕೆಯಿಂದ ಬಳಸುವುದನ್ನು ರೂಢಿಸಿಕೊಳ್ಳಬೇಕಿದೆ.

ವಾಟ್ಸಪ್‌ನಲ್ಲಿ ಬರುವ ಈರೀತಿಯ ಯಾವುದೇ ಸಂದೇಶಗಳು ಸಂಪೂರ್ಣ ಸುಳ್ಳಾಗಿರುತ್ತವೆ ಹಾಗೂ ಮೋಸದ ಜಾಲಕ್ಕೆ ನಿಮ್ಮನ್ನು ಸೆಳೆಯಲು ಗಾಳವಾಗಿರುತ್ತವೆ. ಯಾವುದೇ ಕಂಪನಿ ಅನಗತ್ಯ ಲಿಂಕ್‌ಗಳ ಮೂಲಕ ಹಣ ನೀಡುವುದಿಲ್ಲ. ಪೊಲೀಸ್‌ ಇಲಾಖೆಯೂ ಸಹ ಜನಸಾಮಾನ್ಯರನ್ನು ಡಿಜಿಟಲ್‌ ಅರೆಸ್ಟ್‌ ಮಾಡಲು ಅವಕಾಶ ಇಲ್ಲ. ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ನಡೆದರೆ ನೇರವಾಗಿ ಪೊಲೀಸರು ಕ್ರಮ ತೆಗೆದುಕೊಳ್ಳತಾರೆಯೇ ಹೊರತು ಈ ರೀತಿ ಮಾಡುವುದಿಲ್ಲ. ಪೊಲೀಸ್‌ ಇಲಾಖೆಗೂ ಸಹ ಈ ಪ್ರಕರಣಗಳನ್ನು ಭೇದಿಸುವುದು ಅಷ್ಟು ಸುಲಭವಾಗಿರಲ್ಲ. ಬಹಳ ತಜ್ಞತೆ ಇದ್ದವರು ಮಾತ್ರ ಇದನ್ನು ಕಂಡು ಹಿಡಿಯಬಲ್ಲರು. ಸೈಬರ್‌ ಅಪರಾಧಗಳ ಬಗ್ಗೆ ವಿಶೇಷ ಪರಿಣಿತಿ ಇರುವ ಸಿಬ್ಬಂದಿ ಇದ್ದಾಗ ಒಂದಷ್ಟು ಪ್ರಕರಣಗಳನ್ನು ಇತ್ಯರ್ಥಗೊಳಿಸಬಹುದು. ಸೈಬರ್‌, ಡಿಜಿಟಲ್‌ ಅಪರಾಧಕ್ಕೆ ಎಲ್ಲೆಗಳು ಇಲ್ಲದಂತಾಗಿರುವುದು ಇದಕ್ಕೆ ಕಾರಣವಾಗಿದೆ.

ತುಮಕೂರು ಜಿಲ್ಲಾ ಪೊಲೀಸ್‌ ಇಲಾಖೆ ಒಂದು ವಿಶಿಷ್ಟ ಪ್ರಯತ್ನ ಮಾಡುತ್ತಿದ್ದು, ಪ್ರತಿ ಪೊಲೀಸ್‌ ಅಧಿಕಾರಿಗೂ ಸೈಬರ್‌ ತರಬೇತಿ ನೀಡುತ್ತಿದೆ. ಈಗಾಗಲೇ 1400ಕ್ಕೂ ಅಧಿಕ ಪೊಲೀಸರಿಗೆ ತರಬೇತಿ ನೀಡಲಾಗಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಾರ್ಯಾಲಯದ ಹತ್ತಿರ ʼಸೈಬರ್‌ ತರಬೇತಿ ಕೇಂದ್ರʼವನ್ನು ತೆರೆದು ಹಂತ ಹಂತವಾಗಿ ತರಬೇತಿ ನೀಡಲಾಗುತ್ತಿದೆ. ಈ ಪ್ರಯೋಗ ಯಶಸ್ವಿಯಾಗಿ ಜಿಲ್ಲೆಯಲ್ಲಿ ಸೈಬರ್‌ ಅಪರಾಧಗಳು ಸಹ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆ ಇದೆ. ಮಕ್ಕಳ ಫೀಜು, ಮದುವೆ ಇತರೆ ಕಷ್ಟದ ಕಾಲಕ್ಕೆ ಇಟ್ಟುಕೊಂಡ ಹಣ ಅನಗತ್ಯವಾಗಿ ವಂಚಕರ ಮೋಸಕ್ಕೆ ತುತ್ತಾಗದಂತೆ ಎಚ್ಚರವಹಿಸಬೇಕಿದೆ. ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಸಹ ಸೈಬರ್‌ ಅಪರಾಧಗಳ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವ ಅನಿವಾರ್ಯತೆ ಇದೆ.

image 2026 01 21T112557.423

ಡಿಜಿಟಲ್‌ ವೇದಿಕೆಗಳಲ್ಲಿ ವಂಚನೆಗೊಳಗಾಗದಿರಲು ಅನುಸರಿಸಬೇಕಾದ ಕ್ರಮಗಳು:

  • ನಿಮ್ಮ ಒಟಿಪಿ ಅಥವಾ ಎಟಿಎಂ ಪಿನ್‌ಗಳನ್ನು ಬೇರೆಯವರಿಗೆ ಯಾವುದೇ ಕಾರಣಕ್ಕೂ ನೀಡಕೂಡದು
  • ಯಾವುದೇ ಅನಾಮಿಕ ವಿಡಿಯೋ ಕರೆಗಳನ್ನು ಸ್ವೀಕರಿಸಬೇಡಿ. ಯಾರಾದರೂ ನಿಮ್ಮನ್ನು ಡಿಜಿಟಲ್‌ ಅರೆಸ್ಟ್‌ ಮಾಡಿದ್ದೇವೆ ಎಂದರೆ ಸ್ಥಳೀಯ ಪೊಲೀಸ್‌ ಠಾಣೆಗೆ ಕರೆಮಾಡಿ ತಿಳಿಸಿ
  • ವಾಟ್ಸಪ್‌ ಮೂಲಕ ಯಾವುದೇ ಉಚಿತ ಕೊಡುಗೆಗಳ ಲಿಂಕ್‌ಗಳು ಹಾಗೂ ಎಪಿಕೆ ಫೈಲ್‌ಗಳನ್ನು ಕ್ಲಿಕ್‌ ಮಾಡಬೇಡಿ.
  • ಅನಾಮಿಕರಿಗೆ ವೈಯಕ್ತಿಕ ಮಾಹಿತಿಯನ್ನು ನೀಡಬೇಡಿ
  • ನಿಮ್ಮ ಸಾಮಾಜಿಕ ಜಾಲತಾಣಗಳ ಪ್ರೊಫೈಲ್‌ಗಳಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ.
  • ಕೆವೈಸಿ ಅಪ್ಡೇಟ್‌ ಅನ್ನು ಕೇವಲ ನಿಮ್ಮ ಬ್ಯಾಂಕ್‌ನ ಬ್ರಾಂಚ್‌ಗೆ ಹೋಗಿ ಮಾಡಿ ಅಥವಾ ಅಧಿಕೃತವಾದ ಬ್ಯಾಂಕ್‌ ಆಪ್‌ ಅಲ್ಲಿ ಮಾಡಿ ಹೊರತಾಗಿ ಯಾವುದೇ ಲಿಂಕ್‌ಗಳ ಮೂಲಕ ಮಾಡಬೇಡಿ
  • ಯಾವುದೇ ವೆಬ್ಸೈಟ್‌ ಲಿಂಕನ್ನು ಕ್ಲಿಕ್‌ ಮಾಡುವ ಮುನ್ನ URL ಚೆಕ್‌ ಮಾಡಿ https:// ಎಂದು ಇದ್ದರೆ ಉತ್ತಮ
  • ಯಾವುದೇ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಒಟಿಪಿ ಕೊಡಿ ಅಂದರೆ ಕೊಡಬೇಡಿ
  • ಲಾಟರಿ ಅಥವಾ ಉಡುಗೊರೆ ಬಂದಿದೆ ಎಂಬ ಕರೆಗಳನ್ನು, ಲಿಂಕ್‌ಗಳನ್ನು ನಂಬಬೇಡಿ
  • ಡಿಜಿಟಲ್‌ ಮೀಡಿಯಾ ಹಾಗೂ ಫೋನ್‌ ಕರೆಗಳಿಂದ ಬರುವ ಆಮಿಷಗಳಿಗೆ ಒಳಗಾಗಬೇಡಿ ಅಂತವುಗಳು ಬಹುತೇಕ ನಕಲಿಯಾಗಿರುತ್ತವೆ
  • ಯಾವುದೇ ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಸ್ನೇಹಿತರ ಹೆಸರಿನಲ್ಲಿ, ಮೇಸೇಂಜರ್‌ನಲ್ಲಿ ಹಣ ಕೇಳಿದರೆ ಕಳುಹಿಸಬೇಡಿ. ಆ ಖಾತೆಗಳೂ ನಿಮ್ಮ ಆಪ್ತರ ಹೆಸರಲ್ಲಿ ಮಾಡಿರುವ ನಕಲಿ ಖಾತೆಗಳಾಗಿರುತ್ತವೆ.

ನಿಮಗೆ ವಂಚನೆಯ ಅನುಭವಗಳಾದರೆ ತಕ್ಷಣ 1930ಗೆ ಕರೆ ಮಾಡಿ, cybercrime.gov.in ಗೆ ಭೇಟಿ ನೀಡಿ ದೂರು ದಾಖಲಿಸಿ. ನಿಮ್ಮ ಪಾಸ್‌ವರ್ಡ್‌ಗಳನ್ನು ಬದಲಾಯಿಸಿ. ನಿಮ್ಮ ಬ್ಯಾಂಕ್‌ಗೆ ಕರೆ ಮಾಡಿ ತಕ್ಷಣ ಮಾಹಿತಿ ನೀಡಿ.

ಇದನ್ನೂ ಓದಿ: ತುಮಕೂರು | ಕನ್ನಡ ಸಿನಿಮಾಗಳಿಗೆ ಸರಿಯಾದ ಮನ್ನಣೆ ಸಿಗುತ್ತಿಲ್ಲ: ಬರಗೂರು ರಾಮಚಂದ್ರಪ್ಪ

ಡಿಜಿಟಲ್‌ ಯುಗ ನಮ್ಮ ಜೀವನವನ್ನು ಸುಲಭಗೊಳಿಸಿದಷ್ಟೇ ಸಲೀಸಾಗಿ ಅಪಾಯಗಳ ಬಾಗಿಲನ್ನೂ ತೆರೆದಿದೆ. ತಂತ್ರಜ್ಞಾನವೇನೂ ನಮ್ಮ ಶತ್ರುವಲ್ಲ, ಅದನ್ನು ದುರುಪಯೋಗಪಡಿಸಿಕೊಳ್ಳುವ ಮನಸ್ಥಿತಿ ಅಪಾಯ. ಸುಲಭವಾಗಿ ಹಣ ಮಾಡುವ ಆಸೆ, ಆಮಿಷಕಾರಿ ಸಂದೇಶಗಳ ಹಿಂದೆ ಓಡುವ ಆಸೆಬುರುಕತನವೇ ಡಿಜಿಟಲ್‌ ವಂಚಕರಿಗೆ ದೊಡ್ಡ ಶಕ್ತಿ. ಇದನ್ನು ಸೋಲಿಸಲು ಅತ್ಯಾಧುನಿಕ ತಂತ್ರಜ್ಞಾನಕ್ಕಿಂತಲೂ ಅಗತ್ಯವಿರುವುದು ಎಚ್ಚರಿಕೆ, ತಿಳಿವಳಿಕೆ ಮತ್ತು ನಮ್ಮ ಕಾಮನ್‌ ಸೆನ್ಸ್‌.

ಒಂದು ಕ್ಲಿಕ್‌ ಮಾಡುವ ಮುನ್ನ ಯೋಚನೆ, ಒಂದು ಕರೆ ಸ್ವೀಕರಿಸುವ ಮುನ್ನ ಪರಿಶೀಲನೆ, ಒಂದು ಮಾಹಿತಿ ಹಂಚಿಕೊಳ್ಳುವ ಮುನ್ನ ಸಂಶಯ… ಇವೆಯೇ ಡಿಜಿಟಲ್‌ ವಂಚನೆ ವಿರುದ್ಧದ ಅತ್ಯಂತ ಬಲವಾದ ಆಯುಧಗಳು.

WhatsApp Image 2024 08 09 at 10.52.48 1578a566
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...