ಮರ್ಯಾದೆಗೇಡು ಹತ್ಯೆ- ಅಪ್ಪನೆಂಬ ಸಂಬಂಧ ಅರ್ಥ ಕಳೆದುಕೊಂಡಿತೇ?

Date:

ಹೆಣ್ಣುಮಕ್ಕಳಿಗೆ ಅಪಾಯ ಹೊರಗಿನಿಂದ ಮಾತ್ರವಲ್ಲ, ಕೆಲವೊಮ್ಮೆ ಮನೆಯೊಳಗೇ ಹುಟ್ಟುತ್ತದೆ ಎಂಬುದು ಅತ್ಯಂತ ಭಯಾನಕ ಸತ್ಯ. ಅಪ್ಪ ಎಂಬ ನಂಬಿಕೆ, ಭದ್ರತೆಯ ಭಾವ ನಾನಾ ಕಾರಣಗಳಿಂದಾಗಿ ಪರೀಕ್ಷೆಗೆ ಒಳಗಾಗುತ್ತಿದೆ. ಅನ್ಯ ಜಾತಿ/ಧರ್ಮದ ಯುವಕನನ್ನು ಪ್ರೀತಿಸಿ ಮದುವೆಯಾದ ಮಗಳನ್ನು ಯಾವುದೇ ಕನಿಕರವಿಲ್ಲದೇ ಕೊಚ್ಚಿ ಹಾಕುತ್ತಿದೆ ಅದೇ ಆಡಿಸಿದ ಕೈಗಳು.

ಜನ್ಮದಾತ ತಂದೆಯೇ ತನ್ನ ಮಗಳನ್ನು ಕೊಲೆ ಮಾಡಿದ ಘಟನೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ‘ತಂದೆ’ ಎನ್ನುವುದು ಮಕ್ಕಳಿಗೆ ಮೊದಲ ಭದ್ರತಾ ಭಾವ, ನಂಬಿಕೆ ಮತ್ತು ರಕ್ಷಣೆಯ ಪ್ರತೀಕ. ಆದರೆ, ಆ ಸಂಬಂಧವೇ ಭಯದ ಮೂಲವಾದಾಗ, ಹೆಣ್ಣುಮಕ್ಕಳಿಗೆ ಭದ್ರತೆ ಒದಗಿಸುವವರು ಯಾರು ಎಂಬ ಪ್ರಶ್ನೆ ಉಂಟಾಗಿದೆ. ಸ್ವಂತ ಮಕ್ಕಳ ಮೇಲೆ ತಂದೆಯಿಂದ ಲೈಂಗಿಕ ದೌರ್ಜನ್ಯ, ತಂದೆಯಿಂದ ಮಗಳು ಗರ್ಭವತಿಯಾಗಿರುವುದು, ಮಗಳ ಪ್ರೀತಿಗೆ ವಿರೋಧಿಸಿ ಆಕೆಯನ್ನು ತನ್ನ ಕೈಯ್ಯಾರೆ ಕೊಲೆ ಮಾಡುವ ಘಟನೆಗಳು ʼತಂದೆʼ ಎಂಬ ಪವಿತ್ರ ಸಂಬಂಧದ ಅರ್ಥ ಕಳೆಯುವಂತೆ ಮಾಡಿವೆ.

ದೇಶದ ನಾನಾ ಭಾಗಗಳಲ್ಲಿ ತಂದೆಯೇ ಮಗಳ ಮೇಲೆ ಅಮಾನುಷ ಕೃತ್ಯ ಎಸಗಿರುವ ಪ್ರಕರಣಗಳು ವರದಿಯಾಗಿವೆ. ಕೆಲವು ಪ್ರಕರಣಗಳಲ್ಲಿ ಆಸ್ತಿ ವಿವಾದ, ಕೆಲವೊಂದರಲ್ಲಿ ಮಾನಸಿಕ ಅಸ್ವಸ್ಥತೆ, ಇನ್ನೂ ಕೆಲವೆಡೆ ಕುಟುಂಬದ ಗೌರವ, ಬಹುತೇಕ ಮರ್ಯಾದಾಗೇಡು ಹತ್ಯೆಗಳೇ ಕಾಣಿಸಿಕೊಂಡಿವೆ. ಎಲ್ಲ ಪ್ರಕರಣಗಳಲ್ಲೂ ಅನ್ಯ ಧರ್ಮ/ ಜಾತಿಯ ಯುವಕನನ್ನು ಮದುವೆಯಾದ ಕಾರಣಕ್ಕೆ ಕೊಲೆ ಮಾಡಲಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ಮಗಳನ್ನು ಮದುವೆಯಾದ ಕಾರಣಕ್ಕೆ ಯುವನನ್ನು ಕೊಂದು ಮುಗಿಸಲಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮದಲ್ಲಿ ಕಳೆದ ವಾರ ನಡೆದ ಮರ್ಯಾದೆಗೇಡು ಹತ್ಯೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ಯಾಕೆಂದರೆ ಆತ ಕೊಂದಿದ್ದು ಗರ್ಭಿಣಿ ಮಗಳನ್ನು. ಆತನ ದ್ವೇಷಕ್ಕೆ ಎತ್ತಿ ಆಡಿಸಿದ ಮಗಳು ಮತ್ತು ಇನ್ನೂ ಜಗತ್ತನ್ನೇ ಕಾಣದ ಜೀವವೊಂದು ಬಲಿಯಾಗಿದೆ. 19-20 ವರ್ಷದ ಗರ್ಭಿಣಿ ಯುವತಿ ಮಾನ್ಯಾ ಪಾಟೀಲ್ ಅವರನ್ನು ಆಕೆಯ ತಂದೆ ಪ್ರಕಾಶ್ ಗೌಡ ಪಾಟೀಲ್ ಮತ್ತು ಸಂಬಂಧಿಕರು ಬರ್ಬರವಾಗಿ ಕೊಂದಿದ್ದಾರೆ. ಇದು ಸಾಮಾನ್ಯ ಕೊಲೆಯಲ್ಲ. ಮರ್ಯಾದಾಗೇಡು ಹತ್ಯೆ.

photo 6221852555029973898 y

ಪ್ರಬಲ ಜಾತಿಗೆ ಸೇರಿದ ಮಾನ್ಯಾ, ದಲಿತ ಸಮುದಾಯದ ವಿವೇಕಾನಂದ ಡೊಡ್ಡಮನಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಆಕೆ 7 ತಿಂಗಳ ಗರ್ಭಿಣಿಯೂ ಆಗಿದ್ದಳು. ಹಾವೇರಿಯಲ್ಲಿ ವಾಸಿಸುತ್ತಿದ್ದರು. ಡಿಸೆಂಬರ್ 8ರಂದು ಗ್ರಾಮಕ್ಕೆ ಮರಳಿದ ಅವರ ಮೇಲೆ ಮಾನ್ಯಾ ಅವರ ಕುಟುಂಬಸ್ಥರು ಡಿಸೆಂಬರ್ 21ರಂದು ದಾಳಿ ನಡೆಸಿದ್ದಾರೆ. ಅನ್ಯಜಾತಿಯ ಯುವಕನನ್ನು ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ ಹೆತ್ತ ತಂದೆಯೇ ಏಳು ತಿಂಗಳ ಗರ್ಭಿಣಿಯೆಂದು ಲೆಕ್ಕಿಸದೇ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ದಾಳಿಯಲ್ಲಿ ಪತಿ ಮತ್ತು ಆತನ ಕುಟುಂಬಸ್ಥರಿಗೂ ಗಂಭೀರ ಗಾಯಗಳಾಗಿವೆ.

ಹೆಣ್ಣು ಮಕ್ಕಳನ್ನು ಸಾಕುವುದು ಕಷ್ಟವೆಂದು ಹೆತ್ತ ಅಪ್ಪನೇ ಮಕ್ಕಳನ್ನ ಕಾಲುವೆಗೆ ತಳ್ಳಿ ಸಾಯಿಸಿದ ದಾರುಣ ಘಟನೆ ಬಳ್ಳಾರಿ ಜಿಲ್ಲೆಯ ಸೀಮಾಂಧ್ರದ ಬೊಮ್ಮನ ಹಾಳ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆರೋಪಿ ತಂದೆ ಕಲ್ಲಪ್ಪ, ನೇಮಕಲ್ ಗ್ರಾಮದ ನಿವಾಸಿ. ಈತನಿಗೆ ಅನುಸೂಯ (12) ಹಾಗೂ ಸಿಂಧು (12) ಎಂಬ ಇಬ್ಬರು ಹೆಣ್ಣುಮಕ್ಕಳಿದ್ದರು. ಇವರಿಬ್ಬರು 5 ಮತ್ತು 6ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.

ಯಾವುದೋ ಕಾರಣ ನೀಡಿ ತನ್ನಿಬ್ಬರು ಹೆಣ್ಣುಮಕ್ಕಳನ್ನ ಮನೆಯಿಂದ ಕರೆದುಕೊಂಡು ಹೋದ ಪಾಪಿ ತಂದೆ ಮಕ್ಕಳ ಜತೆಗೆ ಮಾತನಾಡುತ್ತಾ ಮೊದಲಿಗೆ ಅನುಸೂಯಾಳನ್ನ ಕಾಲುವೆಗೆ ತಳ್ಳಿದ್ದಾನೆ. ಇದನ್ನ ಕಂಡು ಗಾಬರಿಗೊಂಡ ಸಿಂಧೂ ಗಾಬರಿಯಿಂದ ಓಡಲು ಪ್ರಾರಂಭಿಸಿದ್ದಾಳೆ. ಆದರೂ, ಅವಳನ್ನ ಬಿಡದ ದುರುಳ ಆಕೆಯನ್ನ ಹಿಡಿದು ಕಾಲುವೆಗೆ ತಳ್ಳಿದ್ದಾನೆ. ಹೆಣ್ಣುಮಕ್ಕಳನ್ನ ಸಾಕಲು ಆಗಲ್ಲ ಎಂಬ ಕಾರಣಕ್ಕೆ ಪಾಪಿ ತಂದೆ ಈ ಕೃತ್ಯ ಎಸಗಿರುವುದು ದುರಂತ.

ಇಂತಹ ಘಟನೆಗಳು ಇದೇ ಮೊದಲಲ್ಲ. ಕೊನೆಯೂ ಆಗುವಂತೆಯೂ ಕಾಣುತ್ತಿಲ್ಲ. ಭಾರತದಲ್ಲಿ ಮರ್ಯಾದೆಗೇಡು ಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಹೆಣ್ಣುಮಕ್ಕಳನ್ನು ಭ್ರೂಣದಲ್ಲೇ ಹಿಸುಕಿ ಹಾಕುವ ಈ ಸಮಾಜದಲ್ಲಿ ಮರ್ಯಾದೆಗೇಡು ಹತ್ಯೆಗಳಿಗೂ ಹೆಣ್ಣು ಮಕ್ಕಳೇ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಕುಟುಂಬದ ‘ಮರ್ಯಾದೆ’ ಎಂಬ ಹೆಸರಿನಲ್ಲಿ ಕುಟುಂಬದ ಸದಸ್ಯರು, ಅದರಲ್ಲೂ ತಂದೆಯರು ತಮ್ಮ ಹೆಣ್ಣುಮಕ್ಕಳನ್ನು ಕೊಲ್ಲುವ ಈ ದುಷ್ಟ ಕೃತ್ಯ ಸಮಾಜದಲ್ಲಿ ಆಳವಾಗಿ ಬೇರೂರಿದೆ. ಇದು ಕೇವಲ ಕೊಲೆಯಲ್ಲ, ಬದಲಿಗೆ ಜಾತಿ, ಧರ್ಮ ಅಥವಾ ಸಾಮಾಜಿಕ ಕಟ್ಟುಪಾಡಿನ ಹೇರಿಕೆಗಳನ್ನು ಮೀರಿದ್ದಕ್ಕಾಗಿ ನಡೆಯುತ್ತಿರುವ, ಸಮಾಜವೂ ಪರೋಕ್ಷವಾಗಿ ಬೆಂಬಲಿಸುವ ಕ್ರೌರ್ಯ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಮರ್ಯಾದೆಗೇಡು ಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಇದು ಸಮಾಜದಲ್ಲಿ ಮಹಿಳೆಯರ ಸುರಕ್ಷತೆಗೆ ಗಂಭೀರ ಪೆಟ್ಟು ಕೊಟ್ಟಿವೆ.

ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಅಂಬೇಹ್ಟಾ ಗ್ರಾಮದಲ್ಲಿಯೂ ಮರ್ಯಾದಾಗೇಡು ಹತ್ಯೆ ಪ್ರಕರಣ ವರದಿಯಾಗಿದೆ. 17 ವರ್ಷದ ಬಾಲಕಿ (ಕ್ಲಾಸ್ 12 ವಿದ್ಯಾರ್ಥಿನಿ)ಯನ್ನು ಅವಳ ತಂದೆ ಜುಲ್ಫಾಮ್ ಮತ್ತು 15 ವರ್ಷದ ಸಹೋದರ ಗುಂಡಿಕ್ಕಿ ಕೊಂದಿದ್ದಾರೆ. ಬಾಲಕಿಯು ಸ್ಥಳೀಯ ಹುಡುಗನನ್ನು ಪ್ರೀತಿಸುತ್ತಿದ್ದರು ಎಂಬ ಕಾರಣಕ್ಕೆ ಆಕೆಯನ್ನು ದಾರುಣವಾಗಿ ಕೊಂದಿದ್ದಾರೆ.

ಅದೇ ಉತ್ತರ ಪ್ರದೇಶದ ಶಾಹಜಹಾನ್‌ಪುರದಲ್ಲಿಯೂ ಮತ್ತೊಂದು ಪ್ರಕರಣ ದಾಖಲಾಗಿದೆ. ಸುಖ್ ಲಾಲ್ ಎಂಬ ರೈತ ತನ್ನ 16 ವರ್ಷದ ಮಗಳನ್ನು ಕೊಂದು, ಶವವನ್ನು ನಿರ್ಜನ ಪ್ರದೇಶದಲ್ಲಿ ಬಿಸಾಡಿದ್ದ. ಆಕೆ ಬೇರೊಂದು ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದರು ಎಂಬ ಕಾರಣಕ್ಕೆ ಆಕೆಯನ್ನು ಹೆತ್ತ ತಂದೆಯೇ ಅಮಾನುಷವಾಗಿ ಹತ್ಯೆಗೈದಿದ್ದಾರೆ. ಆರೋಪಿ ತಂದೆಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ, ಜೈಲಿಗಟ್ಟಿದೆ.

ಆಂಧ್ರಪ್ರದೇಶದ ತಿರುಪತಿಯ ಅಲಮೂರು ಗ್ರಾಮದಲ್ಲಿ, ಪ್ರಸನ್ನಾ ರೆಡ್ಡಿ ಎಂಬ 21 ವರ್ಷದ ಯುವತಿಯನ್ನು ಆಕೆಯ ತಂದೆಯೇ ಕೊಂದು, ತಲೆ ಕತ್ತರಿಸಿ ದೇಹವನ್ನು ಕಾಡಿನಲ್ಲಿ ಬಿಸಾಡಿದ್ದ.

ಈ ಸುದ್ದಿ ಓದಿದ್ದೀರಾ? ಅಸ್ಸಾಂ ಚುನಾವಣೆ ಸಮೀಪಿಸುತ್ತಿದ್ದಂತೆ ಸುಳ್ಳಿನ ಮೊರೆ ಹೋದ ಮೋದಿ; ಮತ್ತೆ ನೆಹರು ನಾಮ ಜಪ

ನಮ್ಮದೇ ರಾಜ್ಯದ ತುಮಕೂರಿನಲ್ಲಿ ಪರಶುರಾಮ್ ಎಂಬಾತ ತನ್ನ 17 ವರ್ಷದ ಮಗಳು ನೇತ್ರಾವತಿ ಮತ್ತೊಂದು ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕಾಗಿ, ಆಕೆಯನ್ನು ಕತ್ತು ಹಿಸುಕಿ ಕೊಲೆಗೈದಿದ್ದಾನೆ. ತಂದೆಯ ಕೃತ್ಯದಲ್ಲಿ ಆತನ ಮಗ ಮತ್ತು ಸಹೋದರನೂ ಭಾಗಿಯಾಗಿದ್ದಾರೆ.

ಇವಷ್ಟೇ ಅಲ್ಲ, ಕರ್ನಾಟಕದಲ್ಲಿ 2022ರಿಂದ ಈವರೆಗೆ ಸುಮಾರು 9 ಮರ್ಯಾದಾಗೇಡು ಹತ್ಯೆ ಪ್ರಕರಣಗಳು ವರದಿಯಾಗಿವೆ. ದೇಶಾದ್ಯಂತ 2023ರಲ್ಲಿಯೇ 38 ಪ್ರಕರಣಗಳು ವರದಿಯಾಗಿವೆ. ವರದಿಯಾಗದ ಪ್ರಕರಣಗಳೂ ಇರಬಹುದು. ಈ ಹತ್ಯೆಗಳು ಹೇಗೆ ಜಾತಿ ವ್ಯವಸ್ಥೆ ಮತ್ತು ಪಿತೃಪ್ರಧಾನ ಸಮಾಜದಲ್ಲಿ ತಪ್ಪಿಲ್ಲ ಎಂಬಂತಹ ಹೀನ ಮನಸ್ಥಿತಿಯನ್ನೂ ಸೃಷ್ಟಿಸಿವೆ. ಹೆಣ್ಣುಮಕ್ಕಳ ಜೀವನ, ಹಕ್ಕು ಮತ್ತು ಸ್ವಾತಂತ್ರ್ಯದ ಮೇಲೆ ಆಕ್ರಮಣ ನಡೆಸಿವೆ.

ಭಾರತೀಯ ನ್ಯಾಯ ಸಂಹಿತೆಯಲ್ಲಿ ಮರ್ಯಾದೆಗೇಡು ಹತ್ಯೆಯನ್ನು ನಿರ್ದಿಷ್ಟ ಅಪರಾಧವೆಂದು ಹೆಸರಿಸಿಲ್ಲ. ಬದಲಿಗೆ, ಸಾಮಾನ್ಯ ಕೊಲೆ ನಿಬಂಧನೆಗಳ ಅಡಿಯಲ್ಲಿ ಪರಿಗಣಿಸಲಾಗುತ್ತದೆ. ಇದರಿಂದಾಗಿ, ಕೊಲೆಗೆ ಶಿಕ್ಷೆಯಾದರೂ, ಮರ್ಯದಾಗೇಡು ಕೃತ್ಯಕ್ಕೆ ಶಿಕ್ಷೆ ಇಲ್ಲ. ಹೀಗಾಗಿ, ಸರ್ಕಾರ ಮತ್ತು ಸಮಾಜವು ಇದನ್ನು ತಡೆಗಟ್ಟಲು ಕಠಿಣ ಕಾನೂನುಗಳು, ಶಿಕ್ಷಣ ಮತ್ತು ಜಾಗೃತಿ ಅಭಿಯಾನಗಳನ್ನು ಜಾರಿಗೊಳಿಸಬೇಕು. ಮರ್ಯಾದೆ ಹತ್ಯೆಯು ಸಮಾಜದ ಕಳಂಕವಾಗಿದ್ದು, ಇದನ್ನು ನಿರ್ಮೂಲನೆ ಮಾಡಬೇಕಿದೆ.

prajavani 2025 03 12 gifu5y68 file7zqg3m6wzll133123386

ಹೆಣ್ಣುಮಕ್ಕಳಿಗೆ ಅಪಾಯ ಹೊರಗಿನಿಂದ ಮಾತ್ರವಲ್ಲ, ಕೆಲವೊಮ್ಮೆ ಮನೆಯೊಳಗೇ ಹುಟ್ಟುತ್ತದೆ ಎಂಬುದು ಅತ್ಯಂತ ಭಯಾನಕ ಸತ್ಯ. ಕೆಲವೊಂದು ಪ್ರಕರಣಗಳಲ್ಲಿ ‘ತಂದೆಯೇ ಹಾಗೇ ಮಾಡುವುದಿಲ್ಲ’ ಎಂಬ ಸಮಾಜದ ಅಂಧ ನಂಬಿಕೆ, ಹಲವು ಬಾರಿ ಅಪರಾಧಗಳನ್ನು ಮುಚ್ಚಿಡುತ್ತದೆ. ಮಗಳು ಅನುಭವಿಸುವ ಭಯ, ಒತ್ತಡ ಅಥವಾ ಬೆದರಿಕೆಗಳು ಕುಟುಂಬದ ನಾಲ್ಕು ಗೋಡೆಗಳಲ್ಲೇ ಸಮಾಧಿಯಾಗುತ್ತವೆ.

ಮಕ್ಕಳ ರಕ್ಷಣೆಗಾಗಿ ಕಠಿಣ ಕಾನೂನುಗಳು, ಮಹಿಳಾ ಮತ್ತು ಮಕ್ಕಳ ಸಹಾಯವಾಣಿ, ಪೋಕ್ಸೋ ಕಾಯ್ದೆ ಸೇರಿದಂತೆ ಹಲವು ವ್ಯವಸ್ಥೆಗಳು ಇವೆ. ಆದರೆ, ಸಮಸ್ಯೆ ಕಾನೂನಿನ ಕೊರತೆಯಲ್ಲ. ದೂರು ನೀಡುವ ಧೈರ್ಯ, ಕುಟುಂಬ ಮತ್ತು ಸಮಾಜದ ಬೆಂಬಲದ ಕೊರತೆಯಲ್ಲಿದೆ.

ತಂದೆಯೇ ಮಗಳ ಪಾಲಿಗೆ ರಾಕ್ಷಸನಾದಾಗ, ಮೌನವೇ ಅತಿದೊಡ್ಡ ಶತ್ರುವಾಗುತ್ತದೆ. ಹೆಣ್ಣುಮಕ್ಕಳು ಭಯವಿಲ್ಲದೆ ಮಾತನಾಡುವ, ಕೇಳಿಸಿಕೊಳ್ಳುವ, ರಕ್ಷಿಸಲ್ಪಡುವ ವಾತಾವರಣ ನಿರ್ಮಾಣವಾಗದಿದ್ದರೆ, ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಲೇ ಇರುತ್ತವೆ.

ಕರ್ನಾಟಕದಲ್ಲಿ ಇತ್ತೀಚೆಗೆ ಮರ್ಯಾದೆಗೇಡು ಹತ್ಯೆಗಳು ಸಾಮಾನ್ಯ ಎಂಬಂತಾಗಿವೆ. ಹಾಗಾಗಿ ಕಠಿಣ ಕಾನೂನು ತರಬೇಕು ಎಂದು ಹಲವು ಪ್ರಗತಿಪರರು ಸರ್ಕಾರವನ್ನು ಒತ್ತಾಯಿಸಿ ಸಹಿ ಸಂಗ್ರಹ ಅಭಿಯಾನ ನಡೆಸುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಗಂಭೀರ ಹೆಜ್ಜೆ ಇಡಬೇಕಿದೆ.

e057b508e9e1b164fadd3c3edb023f5214f4d0a6d12066a30e302f9e3b0f6f24?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...