ಹಾಸನ ಮಣ್ಣಿನ ಹೆಣ್ಣು ದನಿಗಳು | ಉದ್ದಿಮೆ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

Date:

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…

ಹಾಸನ ಜಿಲ್ಲೆಯ ಮಹಿಳಾ ಉದ್ದಿಮೆದಾರರ ಬಗ್ಗೆ ಲೇಖನ ಬರೆಯಲು ಒಪ್ಪಿದ ನಂತರ, ಕೈಗಾರಿಕಾ ಇಲಾಖೆಯ ಅಧಿಕಾರಿಗಳಿಂದ ನೋಂದಾಯಿತ ಮಹಿಳಾ ಉದ್ದಿಮೆದಾರರ ಮಾಹಿತಿ ಪಡೆದಾಗ ಕೇವಲ ನಾಲ್ಕು ಮಹಿಳೆಯರ ಸಂಪರ್ಕ ಲಭ್ಯವಾಯಿತು. ಹಾಗೆಂದು ಜಿಲ್ಲೆಯಲ್ಲಿ ಇವರಷ್ಟೇ ಮಹಿಳಾ ಉದ್ದಿಮೆದಾರರಲ್ಲ! ಸರ್ಕಾರಿ ದಾಖಲೆಯಲ್ಲಿ ನಮೂದಾಗದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆ ಕ್ಷೇತ್ರಗಳಲ್ಲಿ ತೊಡಗಿಕೊಂಡ ಅನೇಕ ಮಹಿಳೆಯರು ಇದ್ದೇ ಇರುತ್ತಾರೆ. ಅವರನ್ನು ಸಂಪರ್ಕಿಸಿ ಉದ್ಯಮ ರಂಗದಲ್ಲಿನ ಅವರ ಅನುಭವಗಳನ್ನು ದಾಖಲಿಸುವ ಕೆಲಸ ಮುಂದಿನ ದಿನಗಳಲ್ಲಿ ಸಾಧ್ಯವಾದರೆ ಖಂಡಿತ ಅದು ಹೊಸದಾಗಿ ಉದ್ದಿಮೆ ಸ್ಥಾಪಿಸಬಯಸುವ ಮಹಿಳೆಯರಿಗೆ ಮಾರ್ಗದರ್ಶಕವೂ ಸ್ಪೂರ್ತಿದಾಯಕವೂ ಆಗುತ್ತದೆ. ಹಾಗೇ ಸಮಾಜವು ಮಹಿಳೆಯರ ಒಳಗೊಳ್ಳುವಿಕೆಯನ್ನು ಹೇಗೆ ಸ್ವೀಕರಿಸಿದೆ ಎಂಬುದನ್ನು ಸಾಕ್ಷೀಕರಿಸಿದಂತಾಗುತ್ತದೆ. ಈ ಅಂಶಗಳ ಹಿನ್ನೆಲೆಯಲ್ಲಿ ನನಗೆ ಲಭ್ಯವಾದ ಮಾಹಿತಿ ಆಧರಿಸಿ ಕೆಲವು ಮಹಿಳಾ ಉದ್ದಿಮೆದಾರರ ಅನುಭವಗಳನ್ನು ದಾಖಲಿಸುತ್ತಿರುವೆ.

ಇದನ್ನು ಓದಿದ್ದೀರಾ?: ಸ್ತ್ರೀ ಲೋಕದ ಅಸ್ಮಿತೆ- ಪದ್ಮಾ ಶ್ರೀರಾಮ್

ನಾಗರತ್ನ ಹುಚ್ಚವೀರಯ್ಯ ಅವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಪುಟ್ಟ ಗ್ರಾಮ ಅಗ್ಗುಂದದ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಹಿಳೆ. 2001ರಲ್ಲಿ ಅರಸೀಕೆರೆ ತಾಲೂಕಿನ ಅಗ್ಗುಂದದಲ್ಲಿ ಸ್ತ್ರೀಶಕ್ತಿ ಯೋಜನೆಯಲ್ಲಿ 15 ಮಹಿಳೆಯರೊಂದಿಗೆ ಶ್ರೀಉಡಸಲಮ್ಮ ಸ್ತ್ರೀಶಕ್ತಿ ಸ್ವಸಹಾಯ ಸಂಘವನ್ನು ಸ್ಥಾಪಿಸಿದರು. ಸಂಘದ ಸದಸ್ಯರಿಗೆ ಗುಣಾತ್ಮಕ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ, ಆದಾಯವನ್ನು ತರುವಂತಹ ಚಟುವಟಿಕೆಗಳಲ್ಲಿ ಅವರು ತೊಡಗುವಂತೆ ಮಾಡಿದ್ದಾರೆ. ಈ ಹಿಂದೆ ನಮ್ಮ ಮನೆಗಳಲ್ಲಿ ಅಜ್ಜಿ-ಅಮ್ಮಂದಿರು ಮಾಡುತ್ತಿದ್ದ ಶುಚಿ-ರುಚಿಯಾದ ತಿಂಡಿ-ತಿನಿಸುಗಳು, ಹಪ್ಪಳ-ಸಂಡಿಗೆ, ವಿವಿಧ ಮಸಾಲೆ ಪುಡಿಗಳನ್ನು ಆರೋಗ್ಯಕರವಾಗಿ, ಶಿಸ್ತುಬದ್ಧವಾಗಿ ತಯಾರಿಸುವ ನಿಟ್ಟಿನಲ್ಲಿ 2003ರಲ್ಲಿ ‘ಜೇನುಕಲ್ ಫುಡ್ ಪ್ರಾಡೆಕ್ಟ್ಸ್’ ಘಟಕವನ್ನು ಸ್ಥಾಪಿಸಿ, 13 ಮಂದಿ ಮಹಿಳೆಯರಿಗೆ ಉದ್ಯೋಗವನ್ನೂ ಸಹ ನೀಡಿದ್ದಾರೆ. ಲಾಭದಾಯಕವಾಗಿ ಉದ್ದಿಮೆ ನಡೆಸುತ್ತಾ ಉತ್ತಮ ಸ್ತ್ರೀಶಕ್ತಿ ಸಂಘಕ್ಕೆ ನೀಡಲಾಗುವ ರಾಷ್ಟ್ರಮಟ್ಟದ ಗೌರವ ಪುರಸ್ಕಾರ ಕೂಡ ಪಡೆದಿದ್ದಾರೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ.ಆರ್. ಶ್ವೇತಾ ಮಂಜುನಾಥ ಅವರು ಹೊಳೆನರಸೀಪುರ ತಾಲೂಕಿನ ಆನೆಕಲ್ ಊರಿನವರು. ಮೂಲತಃ ಕೃಷಿ ಕುಟುಂಬದವರು. ಇವರಿಗೆ ಕೃಷಿ ಮತ್ತು ಅಡಿಗೆ ಮಾಡುವುದರಲ್ಲಿ ವಿಶೇಷ ಆಸಕ್ತಿ. ಓದಿದ್ದು ಜರ್ನಲಿಸಂ. ಬೆಂಗಳೂರಿನ ಪ್ರತಿಷ್ಠಿತ ಟಿ.ವಿ. ಚಾನಲ್‌ನಲ್ಲಿ ಜರ್ನಲಿಸ್ಟ್ ಆಗಿ ವೃತ್ತಿಜೀವನವನ್ನು ಆರಂಭಿಸಿದರು. ನಂತರ ನಷ್ಟದಲ್ಲಿದ್ದ ತಮ್ಮ ಕೃಷಿ ಜಮೀನಿನಲ್ಲಿ ಸಹೋದರನೊಂದಿಗೆ ಸಮಾಲೋಚಿಸಿ ಬಹು ಬೆಳೆಗಳನ್ನು ಬೆಳೆದು, ಜಮೀನನ್ನು ಸಮೃದ್ಧಗೊಳಿಸಿ ಕೃಷಿಯಲ್ಲಿ ಯಶಸ್ಸನ್ನು ಸಾಧಿಸಿದರು. ನಂತರ ‘ನಾವು ಸೇವಿಸುವ ಆಹಾರದಿಂದಲೇ ನಮ್ಮ ಆರೋಗ್ಯ’ ಎಂದು ನಂಬಿದ್ದರಿಂದ- ದೇಸಿ ಆಹಾರ ಪದಾರ್ಥಗಳ ತಯಾರಿಕೆ/ಸಾಂಪ್ರದಾಯಿಕ ಆಹಾರ ತಯಾರಿಕಾ ಘಟಕ ‘ಅಕ್ಷಮಾಲ ಫುಡ್ ಅಂಡ್ ಬೆವರೇಜಸ್’  ಉದ್ಯಮವನ್ನು ಆರಂಭಿಸಿದರು. ಹಲವು ಅಧ್ಯಯನ, ತರಬೇತಿಗಳ ನಂತರ ದೇಸಿ ಆಹಾರೋತ್ಪನ್ನಗಳಾದ ಹಪ್ಪಳ, ಸಂಡಿಗೆ, ಉಪ್ಪಿನಕಾಯಿಗಳನ್ನು ತಯಾರಿಸುತ್ತಿದ್ದಾರೆ. ಅಲ್ಲದೇ ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳಿಗೆ ಬೇಡಿಕೆ ಇದ್ದದ್ದನ್ನು ಮನಗಂಡು ಹಲಸಿನ ಹಪ್ಪಳ, ಚೆಟಪಟ್, ಚೀಪ್ಸ್ ಹೀಗೆ 35ಕ್ಕಿಂತ ಹೆಚ್ಚು ಬಗೆಯ ಆಹಾರಗಳನ್ನು ತಯಾರಿಸುತ್ತಿದ್ದಾರೆ. ‘ಅವೇಕ್– ಕರ್ನಾಟಕ ರಾಜ್ಯ ಮಹಿಳಾ ಉದ್ಯಮಿಗಳ ಸಂಸ್ಥೆ’ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ‘ಅವೇಕ್ ರೈಸಿಂಗ್ ಸ್ಟಾರ್ ಅವಾರ್ಡ’ ಪಡೆದಿದ್ದಾರೆ. ‘ಇಚ್ಛಾಶಕ್ತಿ, ಬದ್ಧತೆ ಮತ್ತು ಮಾರುಕಟ್ಟೆ ಚಾಣಾಕ್ಷತೆ ಇದ್ದರೆ ಖಂಡಿತಾ ಮಹಿಳೆ ಯಾವ ರಂಗದಲ್ಲಾದರೂ ಪ್ರಗತಿಯನ್ನು ಸಾಧಿಸಬಹುದು’ ಎನ್ನುವುದು ಶ್ವೇತಾ ಮಂಜುನಾಥ ಅವರ ನಿಲುವಾಗಿದೆ.

ಇದನ್ನು ಓದಿದ್ದೀರಾ?: ಐತಿಹಾಸಿಕ ಮಹಿಳೆಯರು ಮತ್ತು ಹಾಸನ ಜಿಲ್ಲೆ

ಲತಾ ಡಿ. ಅವರು ಹಾಸನ ಜಿಲ್ಲೆಯ ಶಾಂತಿಗ್ರಾಮದವರು. ತಮ್ಮ 18ನೆಯ ವಯಸ್ಸಿನಲ್ಲಿಯೇ ಕುಮಾರಸ್ವಾಮಿ ಅವರೊಂದಿಗೆ ವಿವಾಹವಾದರೂ ಮುಕ್ತ ವಿಶ್ವವಿದ್ಯಾಲಯದ ಮೂಲಕ ಓದಿ ಪದವಿಯನ್ನು ಪಡೆದರು. ನಂತರ ಶಿಕ್ಷಕಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. 2020ರ ಕರೋನಾ ಮಹಾಮಾರಿಯ ನಂತರ ಸ್ವಂತ ಗ್ರಾಮದಲ್ಲೇ ಪರಿಸರಸ್ನೇಹಿ ಅಡಿಕೆ ಎಲೆ, ತಟ್ಟೆ ತಯಾರಿಕಾ ಘಟಕ ‘ಸನ ಇಂಡಸ್ಟ್ರೀಸ್’ ಆರಂಭಿಸಿದರು. ನಂತರ ಕರ್ನಾಟಕ ಸರ್ಕಾರದ ಪ್ರಧಾನಮಂತ್ರಿ ಉದ್ಯೋಗ ಸೃಜನೆ ಯೋಜನೆಯಲ್ಲಿ ಅಗತ್ಯ ತರಬೇತಿ ಹಾಗೂ ಸಾಲ ಸೌಲಭ್ಯ ಪಡೆದದ್ದು ಉದ್ಯಮದ ಬೆಳವಣಿಗೆಗೆ ಸಹಾಯವಾಯಿತು. ಆರಂಭದಲ್ಲಿ ಅನೇಕ ಸವಾಲುಗಳನ್ನು ಎರುರಿಸಿದರೂ ಕೂಡ, ತಾವು ಮಧ್ಯಮ ವರ್ಗದಲ್ಲಿ ಬೆಳೆದಿದ್ದರಿಂದ ಶ್ರಮ, ಸಹನೆ, ಹೊಣೆಗಾರಿಕೆಯಿಂದ ಎಲ್ಲವನ್ನೂ ಎದುರಿಸಲು ಅವರಿಗೆ ಸಾಧ್ಯವಾಯಿತು. ‘ಸವಾಲುಗಳು ಬರುತ್ತವೆ. ಆದರೆ ಧೈರ್ಯ, ಸಹನೆ ಮತ್ತು ನಂಬಿಕೆ ಇದ್ದರೆ ಗುರಿಯನ್ನು ಸಾಧಿಸುವುದು ಖಂಡಿತ ಸಾಧ್ಯ’ ಎನ್ನುವುದು ಲತಾ ಡಿ. ಅವರ ಅಭಿಪ್ರಾಯ.

ಶೃತಿ ಪ್ರಸಾದ್ ಅವರು ತುಮಕೂರು ಜಿಲ್ಲೆಯ ತುರುವೆಕೆರೆ ತಾಲೂಕು ಅರಳೀಕೆರೆ ಗ್ರಾಮದಲ್ಲಿ ಜನಿಸಿದರು. ದ್ವಿತೀಯ ಪಿಯುಸಿ ಮತ್ತು ಐಟಿಐ ವಿದ್ಯಾಭ್ಯಾಸ ಪಡೆದಿದ್ದಾರೆ. ಪತಿ ಜಯಪ್ರಸಾದ ಅವರ ರೈತರೊಂದಿಗಿನ ಒಡನಾಟ ಮತ್ತು ಗ್ರಾಮೀಣಾಭಿವೃದ್ಧಿ ಕೆಲಸಗಳಿಂದ ಪ್ರೇರಿತರಾಗಿ ತಾನು ಅದೇ ಕ್ಷೇತ್ರದಲ್ಲೇ ಏನನ್ನಾದರೂ ಮಾಡಬೇಕೆಂದು ತೀರ್ಮಾನಿಸಿದರು. ಅದರಂತೆ 2014ರಲ್ಲಿ ಸಾವಯವ ಕೃಷಿಕರ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಸದುದ್ದೇಶದಿಂದ ‘ಅವನಿ ಆರ್ಗ್ಯಾನಿಕ್’ ಸಂಸ್ಥೆಯನ್ನು ಪ್ರಾರಂಭಿಸಿದರು. 10 ವರ್ಷಗಳಲ್ಲಿ ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ 3,000ಕ್ಕೂ ಹೆಚ್ಚು ರೈತರಿಗೆ ಸಾವಯವ ಕೃಷಿ ತಂತ್ರಜ್ಞಾನ ಹಾಗೂ ಮಾರುಕಟ್ಟೆಯನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂಸ್ಥೆಯ ಕೆಲಸಗಳನ್ನು ಗುರುತಿಸಿ 2021ರಲ್ಲಿ ಕೇಂದ್ರ ಸರ್ಕಾರವು ಸಸ್ಯ ತಳಿ ಪ್ರಭೇದಗಳ ಸಂರಕ್ಷಣೆಗಾಗಿ ‘ರಾಷ್ಟ್ರೀಯ ಪುರಸ್ಕಾರ’ವನ್ನು ಮತ್ತು 2023ರಲ್ಲಿ ‘ಜೈವಿಕ ಇಂಡಿಯಾ’ ಪುರಸ್ಕಾರ ನೀಡಿ ಗೌರವಿಸಿದೆ. ರಾಜ್ಯ ಸರ್ಕಾರವು- ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ವತಿಯಿಂದ 2025ರಲ್ಲಿ ‘ವಿಶಿಷ್ಟ ಸೇವಾ’ ಪ್ರಶಸ್ತಿ ನೀಡಿ ಗೌರವಿಸಿದೆ. 

ಇದನ್ನು ಓದಿದ್ದೀರಾ?: ಜಿಲ್ಲೆಯ ಫಲವತ್ತತೆಗೆ ಆಶಾ ತಾಯಂದಿರ ಕೊಡುಗೆ

ಯಶೋಧ ತಾರಾನಾಥಾರವರು ಎಂಬಿಎ ಪದವಿ ಪಡೆದಿದ್ದು, ಮೊದಲು ಬೇರೆಯವರ ಬಳಿ ಕೆಲಸ ಮಾಡುತ್ತಿದ್ದರು.  ಉದ್ಯೋಗಿನಿ ಯೋಜನೆಯಡಿ ಬಟ್ಟೆ ವ್ಯಾಪಾರಕ್ಕೆ ಸಾಲ ಪಡೆದು, ವ್ಯಾಪಾರದಲ್ಲಿ ತೊಡಗಿಸಿಕೊಂಡು 15 ಮಂದಿ ಮಹಿಳೆಯರಿಗೆ ಕೆಲಸ ನೀಡಿ ಈಗ ಸ್ವತಃ ಬಟ್ಟೆ ಡಿಸೈನ್ ಮಾಡುತ್ತಿದ್ದಾರೆ. ಯಶೋಧರವರು ಕುಟುಂಬದವರ ಸಹಾಯದಿಂದ ಚಿಕ್ಕದಾಗಿ ಗಾರ್ಮೆಂಟ್ಸ್ ಫ್ಯಾಕ್ಟರಿ ಮಾಡಿ, ಬಟ್ಟೆ ಹೊಲಿಸಿ ವ್ಯಾಪಾರ ಮಾಡುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿರುವ ಅವರ ಸ್ನೇಹಿತರ ಪರಿಚಯದಿಂದ, ಹಾಸನದಲ್ಲಿ ಬಟ್ಟೆ ಹೊಲಿಸಿ, ಸಿದ್ಧಗೊಳಿಸಿ ಆ ದೇಶಕ್ಕೆ ಮಾರಾಟ ಮಾಡಿ ವ್ಯಾಪಾರ ವೃದ್ಧಿಸುವ ಯೋಜನೆ ಕೂಡ ಕೈಗೊಂಡಿದ್ದಾರೆ. ಸದ್ಯ ಮದುವೆ ಮತ್ತು ಇತರೆ ಬೇಡಿಕೆಗಳಿಗೆ ತಕ್ಕಂತೆ ಬಟ್ಟೆಗಳನ್ನು ಡಿಸೈನ್ ಮಾಡಿ ಹೊಲಿಸಿ ಯಶಸ್ವಿಯಾಗಿ ಮಾರಾಟ ಮಾಡುತ್ತಿದ್ದಾರೆ.

ನವ್ಯ ಮತ್ತು ಅವರ ತಾಯಿ ರಾಜೇಶ್ವರಿಯವರು ಯಾವುದೇ ರಾಸಾಯನಿಕ ಗೊಬ್ಬರ ಅಥವಾ ಕೀಟನಾಶಕಗಳನ್ನು ಬಳಸದೆ ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಕಷ್ಟಪಟ್ಟು ಬೆಳೆದ ಕಾಫಿ ಮತ್ತು ಕಾಫಿ ಉತ್ಪನ್ನಗಳನ್ನು ಯಾವುದೇ ದಲ್ಲಾಳಿಗೆ ನೀಡುವ ಬದಲು ನಮ್ಮದೇ ಸ್ವಂತ ಬ್ರಾಂಡ್‌ನಲ್ಲಿ ಗ್ರಾಹಕರಿಗೆ ತಲುಪಿಸಬೇಕೆಂದು, ಕಾಫಿಬೆಳೆಯನ್ನು ಮೌಲ್ಯವರ್ಧನೆ ಮಾಡಿ ತಮ್ಮ ಊರಿನ ಹೆಸರಿನಲ್ಲಿ ‘ಕಾರ್ಗೋಡ್ಸ್ ವೈಲ್ಡ್ ಫಾರೆಸ್ಟ್’ ಎನ್ನುವ ಬ್ರಾಂಡ್ ಮೂಲಕ ಕಳೆದ ನಾಲ್ಕು ವರ್ಷದಿಂದ ಮಾರುಕಟ್ಟೆ ನಿರ್ಮಾಣ ಮಾಡಿಕೊಂಡಿದ್ದಾರೆ. ನವ್ಯ ಎಂಬಿಎ ಫೈನಾನ್ಸ್ ಆದ್ದರಿಂದ ಹಣಕಾಸು ಮತ್ತು ವ್ಯವಹಾರ ಜ್ಞಾನ ಚೆನ್ನಾಗಿಯೇ ಇದೆ. ತಮ್ಮದೇ ಆದ ವೆಬ್‌ಸೈಟ್ ಹೊಂದಿದ್ದಾರೆ. ಎಲ್ಲವೂ ಆನ್‌ಲೈನ್‌ನಲ್ಲಿ ನಡೆಯುತ್ತದೆ. ಪ್ರಚಾರ ಕೂಡ ಫೇಸ್ಬುಕ್, ಇನ್ಸ್ಟಾ ಗ್ರಾಮ್‌ನಲ್ಲಿ ನಡೆಯುತ್ತದೆ. ವೆಬ್‌ಸೈಟ್, ವಾಟ್ಸಾಪ್‌ನಲ್ಲಿ ಆರ್ಡರ್ ಮಾಡಿದರೆ, ಗ್ರಾಹಕರಿಗೆ ಶೀಘ್ರ ತಲುಪುವಂತೆ ಕೊರಿಯರ್ ಮಾಡಲಾಗುತ್ತದೆ. ವರ್ಷಕ್ಕೆ ಸುಮಾರು 600 ಕೆಜಿ ಮಾರಾಟವಾಗುತ್ತದೆ, ಆದಾಯ ಚೆನ್ನಾಗಿಯೇ ಇದೆ. ತಮ್ಮದೇ ಸ್ವಂತ ಕಾಫಿಬೀಜ ಆದ್ದರಿಂದ ಬಂಡವಾಳ ಹೆಚ್ಚೇನಿಲ್ಲ. ರೋಸ್ಟಿಂಗ್ ಹೊರಗಡೆ ಮಾಡಲಾಗುತ್ತದೆ. ಪ್ಯಾಕಿಂಗ್ ಎಲ್ಲಾ ಕುಟುಂಬದೊಂದಿಗೆ ಮನೆಯಲ್ಲಿಯೇ ಆಗುತ್ತದೆ.

ಇದನ್ನು ಓದಿದ್ದೀರಾ?: ಮಹಿಳಾ ಸಬಲೀಕರಣದ ಆಶಾಕಿರಣಗಳು 

2000ನೆಯ ಇಸವಿ, ಮಾರುಕಟ್ಟೆಯಲ್ಲಿ ಕಾಫಿ ಬೆಲೆ ತೀವ್ರ ಕುಸಿತಕ್ಕೊಳಗಾದಾಗ, ಮನೆಯ ಒಳಗಿದ್ದ ಸಕಲೇಶಪುರ ತಾಲ್ಲೂಕಿನ ಸಮಾನಮನಸ್ಕ ಮಹಿಳಾ ಬೆಳೆಗಾರರು, ಕಾಫಿ ಉದ್ದಿಮೆಯ ಮಟ್ಟ ಹೆಚ್ಚಿಸಲು ನಿರ್ಧರಿಸಿ, ಒಂದೆಡೆ ಸೇರಿ ಹುಟ್ಟು ಹಾಕಿದ ಸಂಸ್ಥೆಯೇ ‘ವುಮೆನ್ ಕಾಫಿ ಪ್ರಮೋಷನ್ ಕೌನ್ಸಿಲ್(ರಿ)’ ಕಾಫಿಯ ಆಂತರಿಕ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಮುಖ ಬೆಳೆಗಾರರು ತಜ್ಞರೊಂದಿಗೆ ಸಮಲೋಚಿಸಿ ದಿಟ್ಟ ಹೆಜ್ಜೆ ಇಟ್ಟರು. ದೊಡ್ಡ ಮೇಳಗಳಲ್ಲಿ ಮಳಿಗೆ ತೆರೆದು, ಸ್ವಚ್ಛ ಕಾಫಿಪುಡಿ, ಕಾಫಿ ಆಧರಿತ ಇತರೆ ಸಾಮಗ್ರಿಗಳ ಮಾರಾಟ ಮಾಡುವುದಲ್ಲದೆ, ಕಾಫಿ ಫಿಲ್ಟರ್ ಬಳಸಿ ಪಾರಂಪರಿಕ ರೀತಿಯಲ್ಲಿ ಕಾಫಿ ಮಾಡುವ ವಿಧಾನವನ್ನು ಸಾರ್ವಜನಿಕರಿಗೆ ತಿಳಿಸುವ ಕಾರ್ಯದಿಂದ ಶುರುವಾದ ಇವರ ಪಯಣಕ್ಕೆ ಕೇಂದ್ರ ಕಾಫಿ ಮಂಡಳಿಯ ಸಹಕಾರ ಕೂಡ ದೊರೆಯಿತು. ಸರ್ಕಾರದೊಂದಿಗೆ ಕಾಫಿ ಬೀಜವನ್ನು ಹುರಿದು ಪುಡಿ ಮಾಡುವ ಘಟಕವನ್ನು ಪ್ರಾರಂಭಿಸಿ ‘7ಟು7’ ಎಂಬ ಹೆಸರಿನ ಕಾಫಿಪುಡಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ದೇಶದ ನಾನಾ ಭಾಗಗಳಲ್ಲಿ, ಪ್ರತಿಷ್ಠಿತ ಮೇಳಗಳಲ್ಲಿ ಕಾಫಿ ತಯಾರಿಕೆ ಪ್ರಾತ್ಯಕ್ಷಿಕೆ ನಡೆಸಿ, ಮಾರಾಟ ಮಾಡಿ ಕಾಫಿ ಉದ್ದಿಮೆಗೆ ಸಹಕಾರ ನೀಡಿದೆ ಮತ್ತು ನೀಡುತ್ತಿದೆ. ಮಹಿಳೆಯರ ಉದ್ದಿಮೆಯಾಗಿ ಹೆಸರು ಪಡೆದಿದೆ. 50 ಸದಸ್ಯರಿಂದ ಆರಂಭವಾದ ‘ವುಮೆನ್ ಕಾಫಿ ಪ್ರಮೋಷನ್ ಕೌನ್ಸಿಲ್(ರಿ)’ ಇದೀಗ 200ಕ್ಕೂ ಹೆಚ್ಚಿನ ಸದಸ್ಯರನ್ನು ಹೊಂದಿದೆ. ಈ ಸಂಸ್ಥೆ ತನ್ನದೇ ಕಚೇರಿ ಹೊಂದಿದ್ದು ಈಗ 25 ವರ್ಷ ಪೂರೈಸಿದೆ.

ಹಾಸನ ನಗರದ ಹೊಸಲೈನ್ ರಸ್ತೆಯ ನೆಲಮಾಳಿಗೆಯಲ್ಲಿ ಆರಂಭಗೊಂಡ ‘ಪ್ರೇರಣಾ ಖಾನಾವಳಿ’ ಸ್ವಾವಲಂಬಿ ಜೀವನದ ಕನಸು ಕಂಡ ವಿವಿಧ ಜಾತಿ-ಮತಗಳ ಸಮಾನಮನಸ್ಕ ಹೆಣ್ಣುಮಕ್ಕಳ ಒಂದು ಸಾರ್ಥಕ ಮಾದರಿ. ಜೀವನದ ಕಷ್ಟ-ನಷ್ಟಗಳನ್ನು ಮೆಟ್ಟಿ ನಿಂತು ಸ್ವಾವಲಂಬಿ ಬದುಕನ್ನು ಸಾಗಿಸಬೇಕು ಎಂದು ತೀರ್ಮಾನಿಸಿದ- ಧರಣಿ, ಅಸ್ಮಾ, ಶೋಭಾ, ಸಾವಿತ್ರಿ… ಮುಂತಾದ ಹೆಣ್ಣುಮಕ್ಕಳು ‘ಪ್ರೇರಣಾ ವಿಕಾಸ ವೇದಿಕೆ’ ಅಧ್ಯಕ್ಷೆಯಾದ ರೂಪ ಹಾಸನ ಅವರನ್ನು ಸಂಪರ್ಕಿಸಿದ್ದರು. ರೂಪ ಮತ್ತವರ ಸ್ನೇಹಿತರ ಬಳಗ ಐದು ಲಕ್ಷದಷ್ಟು ಹಣ ಒಗ್ಗೂಡಿಸಿ, ಹೂಡಿಕೆ ಮಾಡಿ, ಗ್ರಾಮೀಣ ಮಹಿಳೆಯರು ಸಮರ್ಥವಾಗಿ ತಯಾರಿಸಬಲ್ಲ ಮುದ್ದೆ, ರೊಟ್ಟಿ, ಹಳ್ಳಿಗಾಡಿನ ಊಟ-ತಿಂಡಿಯನ್ನು ಒದಗಿಸುವ ಹೋಟೆಲ್ ಪ್ರಾರಂಭಿಸಿಕೊಟ್ಟರು. ಹೀಗೆ ‘ಪ್ರೇರಣಾ ಖಾನಾವಳಿ’ 2021ರಲ್ಲಿ ಸಣ್ಣ ಪ್ರಮಾಣದಲ್ಲಿ ಆ ಹೆಣ್ಣುಮಕ್ಕಳಿಂದ ಆರಂಭವಾಯಿತು. ನಂತರದ ದಿನಗಳಲ್ಲಿ ಹೆಣ್ಣುಮಕ್ಕಳು ಮನೆಯಲ್ಲೇ ಕುಳಿತು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಕೆಲಸವೂ ಆಯ್ತು.

ಇದನ್ನು ಓದಿದ್ದೀರಾ?: ಹಾಸನ ಮಹಿಳಾ ದಿನಾಚರಣೆ | ಹೆಣ್ಣಿನ ಆತ್ಮಗೌರವದ ದಾಖಲೀಕರಣದ ಅನನ್ಯತೆ

ಹಾಸನದ ಸಂಗಮೇಶ್ವರ ಬಡಾವಣೆಯ ಜೀವನಧಾರಾ ಕೇಂದ್ರದ ವತಿಯಿಂದ ಬ್ಯಾಗ್ ತಯಾರಿಕಾ ಘಟಕ ಮತ್ತು ಯೂನಿಫಾರಂ ತಯಾರಿಕಾ ಘಟಕ 1991ರಿಂದ ಅಸ್ತಿತ್ವದಲ್ಲಿದೆ. ಇಲ್ಲಿಗೆ ನೆರವು ಕೋರಿ ಬಂದ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಲಿನೆಟ್ ಸಿಸ್ಟರ್ ಎಂಬುವ ಮೇಲ್ವಿಚಾರಕರು ಮೊದಲಿಗೆ ಇಲ್ಲಿ ಹೊಲಿಗೆ ತರಬೇತಿ ನೀಡಲಾರಂಭಿಸಿದರು. ನಂತರ ಶಾಲಾ ಮಕ್ಕಳಿಗೆ ಬ್ಯಾಗ್ ಹೊಲಿದು ಕೊಡಲು ನಾಲ್ವರು ಸಿಬ್ಬಂದಿಯೊಂದಿಗೆ ಆರಂಭಿಸಿದ ಘಟಕ ಇಂದಿಗೂ ಕಾರ್ಯ ನಿರ್ವಹಿಸುತ್ತಿದೆ. ಉತ್ತಮ ಗುಣಮಟ್ಟದ ಚಿಕ್ಕ ಪರ್ಸ್‌ಗಳು, ಲೇಡೀಸ್ ಹ್ಯಾಂಡ್ ಬ್ಯಾಗ್, ಟ್ರಾವೆಲ್ ಬ್ಯಾಗ್, ಲ್ಯಾಪ್‌ಟಾಪ್ ಬ್ಯಾಗ್ ಅಲ್ಲದೆ ಕಚೇರಿ ಫೈಲ್‌ಗಳಿಗಾಗಿ ಪ್ರತ್ಯೇಕ ವಿನ್ಯಾಸದ ಬ್ಯಾಗ್‌ಗಳನ್ನು ತಯಾರಿಸುತ್ತಿದ್ದಾರೆ. ಇಲ್ಲಿ 12 ವರ್ಷಗಳ ಸೇವಾನುಭವ ಹೊಂದಿರುವ ಕಲಾರವರು ಈಗ ಈ ಘಟಕವನ್ನು ನಿರ್ವಹಿಸುತ್ತಿದ್ದಾರೆ. ಗ್ರಾಹಕರ ಬೇಡಿಕೆಗನುಸಾರವಾಗಿ ಬ್ಯಾಗ್‌ಗಳನ್ನು ತಯಾರಿಸಿಕೊಡುತ್ತಾರೆ. ಹಾಗೆಯೇ ಶಾಲೆಗಳಿಂದ ಬರುವ ಆರ್ಡರ್‌ಗಳಿಗೆ ತಕ್ಕಂತೆ ಶಾಲಾ ಯೂನಿಫಾರ್ಮ್‌ಗಳನ್ನು ಕೂಡ ಇಲ್ಲಿನ ಹೊಲಿಗೆ ತರಬೇತಿ ಕೇಂದ್ರದಲ್ಲಿ ಸಿದ್ಧಪಡಿಸಿ ಪೂರೈಸಲಾಗುತ್ತಿದೆ. ಆರ್ಥಿಕ ಸಂಕಷ್ಟದಲ್ಲಿರುವ ಬಹಳಷ್ಟು ಮಹಿಳೆಯರು ಇಲ್ಲಿ ತರಬೇತಿ ಪಡೆದುಕೊಂಡ ಬಳಿಕ ಸ್ವ ಉದ್ಯೋಗದ ಮೂಲಕ ಸ್ವಾವಲಂಬನೆ ಬದುಕು ನಡೆಸುತ್ತಿರುವುದು ಇದರ ಹೆಗ್ಗಳಿಕೆಯಾಗಿದೆ. ಆ ಮೂಲಕ ನೂರಾರು ಮಹಿಳೆಯರ ಪಾಲಿನ ಆಶಾಕಿರಣವಾಗಿರುವ ಜೀವನಧಾರ ಕೇಂದ್ರ ತನ್ನ ಈ ಕಾರ್ಯಯೋಜನೆಯನ್ನು ಇನ್ನಷ್ಟು ಸದೃಢಗೊಳಿಸಬೇಕಿದೆ.

Hassan women entrepreneurs 1

ಜೊತೆಗೆ ಹಾಸನದ ಕೆಲ ಮುಸ್ಲಿಂ ಕುಟುಂಬಗಳ ಮಹಿಳೆಯರು ಒಟ್ಟಾಗಿ ಸೇರಿ ಬಟ್ಟೆಗಳ ಮೇಲೆ ಕಸೂತಿ ಹಾಕುವ ಘಟಕವನ್ನು ಪ್ರಾರಂಭಿಸಿ ಹಲವಾರು ಹೆಣ್ಣುಮಕ್ಕಳಿಗೆ ಉದ್ಯೋಗವನ್ನು ನೀಡಿದ್ದಾರೆ. ಹಾಸನದ ಗೌರಿಪುರದಲ್ಲಿ ಅನೇಕ ಪ್ರಯೋಗಗಳನ್ನು ಮಾಡುತ್ತಾ ಬಂದ ರೈತ ಮಹಿಳೆ ಹೇಮಾ ಅನಂತ್ ಅವರು ಗುಲಾಬಿ ಪಕಳೆಗಳಿಂದ ಗುಲ್ಕನ್ ಹಾಗೂ ರೋಸ್ ಪೌಡರ್ ಎಂಬ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಘಟಕವನ್ನು ಪ್ರಾರಂಭಿಸಿದ್ದಾರೆ. ನಂತರದಲ್ಲಿ ವರ್ಜಿನ್ ಕೋಕೋನಟ್ ಎಣ್ಣೆಯ ಉದ್ಯಮವನ್ನೂ ಸಹ ಪ್ರಾರಂಭಿಸಿದ್ದು ಹಲವಾರು ಮಹಿಳೆಯರಿಗೆ ಉದ್ಯೋಗ ನೀಡಿದ್ದಾರೆ. ಜೊತೆಗೆ ಲಾಭವನ್ನೂ ಮಾಡುತ್ತಿದ್ದಾರೆ.

ಇದಲ್ಲದೇ ಹಾಸನ ಜಿಲ್ಲೆಯಲ್ಲಿ ಮಹಿಳಾ ಅಭಿವೃದ್ಧಿ ನಿಗಮದಿಂದ ಇದುವರೆಗೆ 3,223 ಮಹಿಳೆಯರಿಗೆ ಉದ್ಯೋಗಿನಿ ಯೋಜನೆಯಡಿ ಸಾಲ ಮತ್ತು ಸಹಾಯಧನ ನೀಡಲಾಗಿದೆ. ಇವರೆಲ್ಲರೂ ತರಬೇತಿ ಪಡೆದು, ಸಣ್ಣಪ್ರಮಾಣದ ಸ್ವಯಂ ಉದ್ಯೋಗ, ಉದ್ದಿಮೆ ಪ್ರಾರಂಭಿಸಿ ಜೀವನ ನಿರ್ವಹಿಸುತ್ತಿದ್ದಾರೆ. ಕೆಲವರು ಇತರರಿಗೆ ಕೆಲಸವನ್ನೂ ಕೊಟ್ಟಿದ್ದಾರೆ. ಇದಲ್ಲದೇ 3,000 ಮಹಿಳೆಯರು ಹೈನುಗಾರಿಕೆ, ಕುರಿ ಸಾಕಾಣಿಕೆ, ನರ್ಸರಿ, ಮರ-ಬುಟ್ಟಿ ಹೆಣೆಯುವುದನ್ನು ಮಾಡುತ್ತಿದ್ದಾರಲ್ಲದೇ ಕೃಷಿಗೆ ಸಂಬಂಧಿಸಿದ ಪೂರಕ ಸಾಮಗ್ರಿ ಒದಗಿಸುವ ಇತರೆ ಚಟುವಟಿಕೆಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತಾವು ಸ್ವಾವಲಂಬಿಗಳಾಗುವ ಜೊತೆಗೆ ಇತರ ಹೆಣ್ಣುಮಕ್ಕಳಿಗೂ ಕೈಗೆ ಕೆಲಸ ನೀಡಿದ್ದಾರೆ.

ಇದನ್ನು ಓದಿದ್ದೀರಾ?: ಹಾಸನ ಮಣ್ಣಿನ ‘ಹೆಣ್ಣು ಕಥೆ’ಗಳ ಆಲಿಸುತ್ತಾ… ದಾಖಲಿಸುತ್ತಾ…

ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ, ಇಂದಿನ ದಿನಗಳಲ್ಲಿ ಮಹಿಳೆಯರು ಕೈಯಾಡಿಸದ ಕ್ಷೇತ್ರವಿಲ್ಲ ಎಂದು ಆತ್ಮವಿಶ್ವಾಸದಿಂದ ಹೇಳಬಹುದಾದರೂ ದೊಡ್ಡ ಉದ್ದಿಮೆಯ ರಂಗದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದು ವಾಸ್ತವ ಸತ್ಯ. ಅದಕ್ಕೆ ಮುಖ್ಯವಾಗಿ- ಅಪಾರ ಪ್ರಮಾಣದ ಹಣ ಹೂಡಿಕೆ ಮಾಡಲು ಸಾಧ್ಯವಿಲ್ಲದಿರುವುದು, ಮಾರುಕಟ್ಟೆ ತಂತ್ರಗಳು ತಿಳಿಯದಿರುವುದು, ವ್ಯವಹಾರ ಜಾಣ್ಮೆ ಇಲ್ಲದಿರುವುದು, ಕುಟುಂಬದ ಪ್ರೋತ್ಸಾಹ/ಬೆಂಬಲದ ಕೊರತೆ… ಇಂತಹ ಹಲವು ಕಾರಣಗಳಿವೆ. ಕುಟುಂಬ, ಸಂಘ/ಸಂಸ್ಥೆ, ಸರ್ಕಾರ ಮತ್ತು ಬ್ಯಾಕಿಂಗ್ ಕ್ಷೇತ್ರಗಳು ಮಹಿಳೆಯರು ಉದ್ದಿಮೆದಾರರಾಗಲು ಉತ್ತೇಜನ ನೀಡುವುದರ ಜೊತೆಗೆ ಉದ್ದಿಮೆ ಆರಂಭಿಸುವ ಮಹಿಳೆಯರಿಗೆ ಸಾಲ ಸೌಲಭ್ಯ, ಪ್ರೋತ್ಸಾಹ, ವಿನಾಯಿತಿಗಳನ್ನು ನೀಡಬೇಕು. ಅವರ ಉತ್ಪನ್ನಗಳಿಗೆ ಸಮರ್ಥ ಮಾರುಕಟ್ಟೆ ವ್ಯವಸ್ಥೆಯನ್ನೂ ಮಾಡಬೇಕು. ಹಾಗಾದಾಗ ನಮ್ಮ ಮಹಿಳೆಯರು ಉದ್ದಿಮೆರಂಗದಲ್ಲಿ ತಮ್ಮ ಪ್ರಾಬಲ್ಯವನ್ನು ಮೆರೆಯುವುದರಲ್ಲಿ ಸಂದೇಹವಿಲ್ಲ. ಅದರ ಹೊರತಾಗಿಯೂ ಈ ಮಹಿಳೆಯರು ತಮ್ಮ ಜ್ಞಾನ ಮತ್ತು ಶ್ರಮದ ಬಲದಿಂದ ತಮ್ಮ ಆಹಾರೋದ್ಯಮಗಳನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಆಹಾರೋದ್ಯಮದ ಹೊರತಾಗಿ, ಗಾರ್ಮೆಂಟ್ಸ್ ಕ್ಷೇತ್ರದಲ್ಲಿಯೂ ಸಣ್ಣಪುಟ್ಟ ಪ್ರಯತ್ನಗಳನ್ನು ಜಿಲ್ಲೆಯ ಮಹಿಳೆಯರು ಮಾಡುತ್ತಿದ್ದಾರೆ. ಉಳಿದ ಕೈಗಾರಿಕಾ ಕ್ಷೇತ್ರಗಳಲ್ಲಿ ಜಿಲ್ಲೆಯ ಮಹಿಳೆಯರು ಮುಂದಡಿಯಿಡಬೇಕಾಗಿದೆ. ಇದಕ್ಕಾಗಿ ಅವರಿಗೆ ಗಟ್ಟಿಯಾದ ಬೆಂಬಲ ವ್ಯವಸ್ಥೆ ಅಗತ್ಯವಿದ್ದು, ಅದು ಸಕಾಲದಲ್ಲಿ ದೊರೆತಲ್ಲಿ ಖಂಡಿತ ಜಿಲ್ಲೆಯ ಮಹಿಳೆಯರು ಕೈಗಾರಿಕಾ ರಂಗದಲ್ಲಿ ತಮ್ಮ ಮಹತ್ವದ ಛಾಪನ್ನು ಮೂಡಿಸುತ್ತಾರೆಂಬ ವಿಶ್ವಾಸ ನನ್ನದು.

-ಕೆ.ಎಂ. ಜಾನಕಿ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಹೆಚ್ಚಳ

ಹಣದುಬ್ಬರಕ್ಕೆ ಅನುಗುಣವಾಗಿ ನಡೆಯುವ ವಾರ್ಷಿಕ ದರ ಪರಿಷ್ಕರಣೆಯ ಭಾಗವಾಗಿ ಏಪ್ರಿಲ್ 1ರಿಂದ...

ಮಧ್ಯಪ್ರಾಚ್ಯ ಸಂಘರ್ಷ | ಕದನ ವಿರಾಮ ಎಂದ ಟ್ರಂಪ್; ಮಾತುಕತೆ ನಡೆದಿಲ್ಲವೆಂದ ಇರಾನ್

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಾನಾ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...