ಹಾವೇರಿ ವಿವಿ ಎಡವಟ್ಟು: ತಿಂಗಳಾದರೂ ಕೈಸೇರದ ಪಠ್ಯಪುಸ್ತಕ, ವಿದ್ಯಾರ್ಥಿಗಳ ಆತಂಕ!

Date:

ಕಿರುಪರೀಕ್ಷೆಗಳ ಹೊಸ್ತಿಲಲ್ಲಿರುವ ವಿದ್ಯಾರ್ಥಿಗಳಿಗೆ ದೋಷಮುಕ್ತ ಅಧಿಕೃತ ಪಠ್ಯಪುಸ್ತಕಗಳನ್ನು ಒದಗಿಸುವುದು ವಿವಿಯ ಆದ್ಯತೆಯಾಗಬೇಕಿದೆ. ಸರ್ಕಾರ ಮತ್ತು ಉನ್ನತ ಶಿಕ್ಷಣ ಇಲಾಖೆ ಈ ಕೂಡಲೇ ಹಾವೇರಿ ವಿವಿಯ ಈ ಆಮೆಗತಿಯ ಕಾರ್ಯವೈಖರಿಯನ್ನು ಪ್ರಶ್ನಿಸಿ, ಶೈಕ್ಷಣಿಕ ಶಿಸ್ತು ಕಾಪಾಡಬೇಕಿದೆ.

ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗಳು ಗರಿಗೆದರಿ ತಿಂಗಳೇ ಉರುಳಿದೆ. ಆದರೆ, ಹಾವೇರಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಪದವಿಯ 2ನೇ ಮತ್ತು 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಇದುವರೆಗೂ ʼಬೇಸಿಕ್ ಕನ್ನಡʼ ಪಠ್ಯಪುಸ್ತಕ ಲಭ್ಯವಾಗಿಲ್ಲ. ವಿಶ್ವವಿದ್ಯಾಲಯದ ಆಂತರಿಕ ಗೊಂದಲ ಮತ್ತು ವ್ಯವಸ್ಥೆಯ ವೈಫಲ್ಯದಿಂದಾಗಿ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಹಾವೇರಿ ಪಟ್ಟಣದಿಂದ ಐದಾರು ಕಿಲೋ ದೂರದಲ್ಲಿರುವ ಹಾವೇರಿ ವಿಶ್ವವಿದ್ಯಾಲಯವು ರಾಣೆಬೆನ್ನೂರು, ಹಾನಗಲ್, ಶಿಗ್ಗಾವಿ, ಸವಣೂರು, ಹಿರೇಕೆರೂರು, ರಟ್ಟಿಹಳ್ಳಿ ಹಾಗೂ ಹಾವೇರಿ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ 42 ಸಂಯೋಜಿತ ಪದವಿ ಕಾಲೇಜುಗಳನ್ನು ಹೊಂದಿದ್ದು, ಈ ಪೈಕಿ 13 ಸರ್ಕಾರಿ, 8 ಸರ್ಕಾರಿ ಅನುದಾನಿತ ಹಾಗೂ 21 ಖಾಸಗಿ ಕಾಲೇಜುಗಳನ್ನು ಹೊಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
WhatsApp Image 2026 03 20 at 5.43.28 PM

ಈ ಪದವಿ ಕಾಲೇಜುಗಳಲ್ಲಿ ಬಿಕಾಂ, ಬಿಎಸ್ಸಿ, ಬಿಎ, ಬಿಬಿಎ, ಬಿಸಿಎ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಎರಡನೇ ಹಾಗೂ ನಾಲ್ಕನೇ ಸೆಮಿಸ್ಟರ್ ಬೇಸಿಕ್ ಕನ್ನಡ ಪಠ್ಯಪುಸ್ತಕ ಸಿಗದೇ ಇರುವುದರಿಂದ ಕಲಿಕೆಗೆ ತೊಂದರೆ ಉಂಟಾಗುತ್ತಿದೆ ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು.

ಏನಿದು ವಿವಾದ?: ವಾಸ್ತವದಲ್ಲಿ, ಯಾವುದೇ ಪಠ್ಯಕ್ರಮದ ರಚನೆಯಲ್ಲಿ ಆಯಾ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಪ್ರಾಧ್ಯಾಪಕರಿಗೆ ಮೊದಲ ಆದ್ಯತೆ ನೀಡಬೇಕು. ಏಕೆಂದರೆ ಅವರಿಗೆ ಸ್ಥಳೀಯ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಮತ್ತು ಅಗತ್ಯತೆಗಳ ಅರಿವಿರುತ್ತದೆ. ಆದರೆ, ಹಾವೇರಿ ವಿವಿಯು ತನ್ನದೇ ವ್ಯಾಪ್ತಿಯ ಕಾಲೇಜುಗಳಲ್ಲಿರುವ ನೂರಾರು ದಕ್ಷ ಪ್ರಾಧ್ಯಾಪಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ವಿವಿ ವ್ಯಾಪ್ತಿಗೆ ಬಾರದ ವ್ಯಕ್ತಿಗಳಿಗೆ ಪಠ್ಯಪುಸ್ತಕ ರಚನೆಯ ಹೊಣೆ ವಹಿಸಿರುವುದು ಅಧ್ಯಾಪಕರ ಆಕ್ರೋಶಕ್ಕೆ ಕಾರಣವಾಗಿದೆ. “ನಮ್ಮಲ್ಲೇ ಸಮರ್ಥರಿದ್ದರೂ ಹೊರಗಿನವರಿಗೆ ಅವಕಾಶ ನೀಡುವ ಮೂಲಕ ವಿವಿ ಏನನ್ನು ಸಾಬೀತುಪಡಿಸಲು ಹೊರಟಿದೆ?” ಎಂಬ ಪ್ರಶ್ನೆ ಅಧ್ಯಾಪಕ ವಲಯದಲ್ಲಿ ಎದ್ದಿದೆ.

ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹೆಸರೇಳದ ಅಧ್ಯಾಪಕರು ಈದಿನ.ಕಾಮ್ ಜೊತೆಗೆ ಮಾತನಾಡಿ, “ತರಗತಿಗಳು ಆರಂಭವಾಗಿ ಒಂದು ತಿಂಗಳು ಕಳೆದರೂ ಪಠ್ಯಪುಸ್ತಕ ಕೈಸೇರಿಲ್ಲ. ಇತ್ತೀಚೆಗೆ 2ನೇ ಹಾಗೂ 4ನೇ ಸೇಮಿಸ್ಟರ್ನ ಬೇಸಿಕ್ ಕನ್ನಡ ಪಠ್ಯದ ಮೊದಲ ಘಟಕದ ಪಿಡಿಎಫ್ ಮಾತ್ರ ಕಳಿಸಿದ್ದಾರೆ. ಪಠ್ಯಪುಸ್ತಕ ಯಾವಗ ಕೈ ಸೇರುತ್ತೋ ಗೊತ್ತಿಲ್ಲ. ಈಗ ಕಳಿಸಿರುವ ಪಿಡಿಎಫ್ ಪಠ್ಯದಲ್ಲಿ ಅಕ್ಷರ ದೋಷಗಳು, ಪಾಠಕ್ಕೆ, ಆಶಯಕ್ಕೆ ಸಂಬಂಧವೆ ಇಲ್ಲದ ಹಾಗೆ ಇರುವುದು ಕಂಡು ಬಂದಿದೆ” ಎಂದು ಅಸಮಾಧಾನ ಹೊರಹಾಕಿದರು.

ಹಾವೇರಿ ವಿವಿ ಕುಲಸಚಿವರು ಡಾ. ಎಸ್ ಜಿ ಬಾಗಲಕೋಟಿ ಪ್ರತಿಕ್ರಿಯಿಸಿ, “ಈಗಾಗಲೇ ಪದವಿ ಕಾಲೇಜು ಪ್ರಾಚಾರ್ಯರಿಗೆ ಎರಡನೇ ಹಾಗೂ ನಾಲ್ಕನೇ ಸೇಮಿಸ್ಟರ್ ಬೇಸಿಕ್ ಕನ್ನಡ ಪಠ್ಯದ ಪಿಡಿಎಫ್ ಕಳಿಸಲಾಗಿದೆ. ವಿವಿ ಆಂತರಿಕ ಸಮಸ್ಯೆಯಿಂದ ಪಠ್ಯಪುಸ್ತಕ ವಿದ್ಯಾರ್ಥಿಗಳಿಗೆ ತಲುಪಿಸಲು ಆಗಿಲ್ಲ. ಒಂದು ವಾರದೊಳಗೆ ಸಮಸ್ಯೆ ಕುರಿತು ಚರ್ಚಿಸಿ, ಬಗೆಹರಿಸಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ತಲುಪಿಸಲಾಗುವುದು. ಒಂದು ವೇಳೆ ಸಮಸ್ಯೆ ಬಗೆಹರಿಯದಿದ್ದಲ್ಲಿ ಪಠ್ಯದ ಪಿಡಿಎಫ್ ಕಳಿಸಲಾಗುವುದು” ಎಂದು ಭರವಸೆ ನೀಡಿದ್ದಾರೆ.

ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, “ಪಠ್ಯ ಪುಸ್ತಕದ ವಿಳಂಬದಿಂದ ಉಪನ್ಯಾಸಕರು ಜನರಲ್ ವಿಷಯಗಳ ಬಗ್ಗೆ ಬೋಧನೆ ಮಾಡುತ್ತಿದ್ದಾರೆ. ವಾರ್ಷಿಕ ವೇಳಾಪಟ್ಟಿ ಪ್ರಕಾರವಾಗಿ ಇನ್ನು ಒಂದು ವಾರದ ನಂತರ ಕಿರು ಪರೀಕ್ಷೆ ಪ್ರಾರಂಭವಾಗಬೇಕು. ಆದರೆ ಪಠ್ಯಪುಸ್ತಕದ ಪಿಡಿಎಫ್ ಕೂಡ ಲಭ್ಯವಿಲ್ಲದೆ ಯಾವ ಪಠ್ಯಕ್ರಮ (ಸಿಲೆಬಸ್) ಓದಬೇಕೆಂಬ ಗೊಂದಲದಲ್ಲಿ ವಿದ್ಯಾರ್ಥಿಗಳಿದ್ದಾರೆ. ಇದರಿಂದ ಅಭ್ಯಾಸಕ್ಕೆ ಬಾರಿ ಹೊಡೆತ ಬೀಳುತ್ತಿದೆ. ಕೂಡಲೇ ಎಚ್ಚೆತ್ತುಕೊಂಡು ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು ಅಧಿಕೃತ ಪಠ್ಯಪುಸ್ತಕ (ಸಿಲೆಬೆಸ್) ಬಿಡುಗಡೆ ಮಾಡಿ ಪಠ್ಯಪುಸ್ತಕ ಲಭ್ಯವಾಗುವಂತೆ ನೋಡಿಕೊಳ್ಳಬೇಕು” ಎಂದು ಒತ್ತಾಯಿಸಿದರು.

haveri 6

ಇದನ್ನೂ ಓದಿ: ಹಾವೇರಿ | ಹಿರಿಯ ನಾಗರಿಕರ ಆರೋಗ್ಯ ತಪಾಸಣಾ ಶಿಬಿರ

ಹಾವೇರಿ ವಿಶ್ವವಿದ್ಯಾಲಯದಲ್ಲಿ ಉಂಟಾಗಿರುವ ಈ ಪಠ್ಯಪುಸ್ತಕ ವಿಳಂಬ ಆಡಳಿತಾತ್ಮಕ ವೈಫಲ್ಯ ಎನ್ನುತ್ತಿದ್ದಾರೆ ಹಲವರು. ಕಾಲೇಜುಗಳು ಆರಂಭವಾಗಿ ತಿಂಗಳು ಕಳೆದರೂ ಕನಿಷ್ಠ ಪಠ್ಯಕ್ರಮದ ಸ್ಪಷ್ಟತೆ ನೀಡಲಾಗದ ವಿವಿ ಆಡಳಿತ, ವಿದ್ಯಾರ್ಥಿಗಳ ಅಮೂಲ್ಯ ಶೈಕ್ಷಣಿಕ ಸಮಯದೊಂದಿಗೆ ಚೆಲ್ಲಾಟವಾಡುತ್ತಿದೆ. ಸ್ವಂತ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಮತ್ತು ಗುಣಮಟ್ಟವಿಲ್ಲದ ಪಿಡಿಎಫ್‌ಗಳನ್ನು ಹಂಚುವ ಮೂಲಕ ವಿವಿಯು ತನ್ನ ಘನತೆಯನ್ನು ತಾನೇ ಕುಂದಿಸಿಕೊಳ್ಳುತ್ತಿದೆ.

ಕುಲಸಚಿವರು ಒಂದು ವಾರದೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರೂ, ಈಗಾಗಲೇ ವ್ಯರ್ಥವಾಗಿರುವ ಸಮಯವನ್ನು ಮರಳಿ ತರಲು ಸಾಧ್ಯವಿಲ್ಲ. ಕಿರುಪರೀಕ್ಷೆಗಳ ಹೊಸ್ತಿಲಲ್ಲಿರುವ ವಿದ್ಯಾರ್ಥಿಗಳಿಗೆ ದೋಷಮುಕ್ತ ಅಧಿಕೃತ ಪಠ್ಯಪುಸ್ತಕಗಳನ್ನು ಒದಗಿಸುವುದು ವಿವಿಯ ಆದ್ಯತೆಯಾಗಬೇಕು. ಸರ್ಕಾರ ಮತ್ತು ಉನ್ನತ ಶಿಕ್ಷಣ ಇಲಾಖೆ ಈ ಕೂಡಲೇ ಹಾವೇರಿ ವಿವಿಯ ಈ ಆಮೆಗತಿಯ ಕಾರ್ಯವೈಖರಿಯನ್ನು ಪ್ರಶ್ನಿಸಿ, ಶೈಕ್ಷಣಿಕ ಶಿಸ್ತು ಕಾಪಾಡಬೇಕಿದೆ.

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...